ಗ್ರಾಮೀಣ ಶೈಕ್ಷಣಿಕ ಸ್ಥಿತಿಗತಿ ಸುಧಾರಣೆಗೆ ಆದ್ಯತೆ ಅಗತ್ಯ


Team Udayavani, Jan 20, 2019, 6:44 PM IST

education.jpg

ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ತಿಳಿಸಿರುವ ವಾರ್ಷಿಕ ಗ್ರಾಮೀಣ ಸ್ಥಿತಿಗತಿ ವರದಿ (ಎಎಸ್‌ಇಆರ್‌) ಒಂದೆಡೆ ತುಸು ತೃಪ್ತಿಗೂ ಇದೇ ವೇಳೆ ಇನ್ನೂ ಪ್ರಾಥಮಿಕ ಶಿಕ್ಷಣವನ್ನೇ ನಿರೀಕ್ಷಿತ ಮಟ್ಟಕ್ಕೆ ತಲುಪಿಸಲು ಸಾಧ್ಯವಾಗಿಲ್ಲ ಎಂಬ ಬೇಸರಕ್ಕೂ ಕಾರಣವಾಗಿದೆ. ತೃಪ್ತಿ ಏಕೆಂದರೆ ಒಟ್ಟಾರೆಯಾಗಿ ಗ್ರಾಮೀಣ ಭಾಗಗಳಲ್ಲಿ ಪ್ರಾಥಮಿಕ ಶಿಕ್ಷಣ ಒಂದಷ್ಟು ಸುಧಾರಣೆಗೆ ಒಳಗಾಗಿದೆ ಎನ್ನುವುದಕ್ಕೆ. ಪ್ರಾಥಮಿಕ ವಿಭಾಗದ ಮಕ್ಕಳ ಕಲಿಕಾ ಮಟ್ಟದಲ್ಲಿ ಪ್ರಗತಿಯಾಗುತ್ತಿದೆ ಎಂದು ರಾಷ್ಟ್ರವ್ಯಾಪಿಯಾಗಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಇದೇ ವೇಳೆ ಗ್ರಾಮೀಣ ಭಾರತದ ಶಾಲೆಗಳು ಇನ್ನೂ ಮೂಲಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ, ಮಕ್ಕಳ ಕಲಿಕೆ ಸಾಮರ್ಥ್ಯ ನಿರೀಕ್ಷಿತ ಮಟ್ಟಕ್ಕೇರುತ್ತಿಲ್ಲ ಎನ್ನುವುದು ಬೇಸರ ತರುವ ಅಂಶ. 

ಶಿಕ್ಷಣದಲ್ಲಿ ಸುಧಾರಣೆ ಎನ್ನುವುದನ್ನು ಎರಡು ಆಯಾಮಗಳಲ್ಲಿ ಗಮನಿಸಬೇಕು. ಒಂದು ತರಗತಿ ಕೊಠಡಿ, ಶೌಚಾಲಯ, ಕುಡಿಯುವ ನೀರು, ಮಧ್ಯಾಹ್ನದೂಟ, ಕಲಿಕಾ ಸಾಮಗ್ರಿಗಳ ಪೂರೈಕೆ ಈ ಮುಂತಾದ ಮೂಲಸೌಕರ್ಯಗಳು. ಇನ್ನೊಂದು ಕಲಿಕೆಯ ಗುಣಮಟ್ಟ, ಪಠ್ಯಗಳ ಗುಣಮಟ್ಟ, ಅಂಕಗಳಿಕೆ ಈ ಮುಂತಾದ ಮಗುವಿನ ನೈಜ ಸಾಮರ್ಥ್ಯವನ್ನು ಗುರುತಿಸುವ ಅಂಶ. ಮೂಲಸೌಲಭ್ಯಗಳ ವಿಚಾರಕ್ಕೆ ಬರುವುದಾದರೆ ಕೇರಳ, ಕರ್ನಾಟಕ, ಹರ್ಯಾಣ, ತಮಿಳುನಾಡಿನಂಥ ರಾಜ್ಯಗಳು ಸಾಕಷ್ಟು ಪ್ರಗತಿ ಸಾಧಿಸಿವೆ. ಅದೇ ರೀತಿ ಮಕ್ಕಳ ಕಲಿಕಾ ಮಟ್ಟದಲ್ಲೂ ಈ ಮುಂದುವರಿದ ರಾಜ್ಯಗಳಲ್ಲಿ ಪ್ರಗತಿ ಕಂಡು ಬಂದಿದೆ. ಮೂಲಸೌಕರ್ಯ ಮತ್ತು ಕಲಿಕೆಯ ಗುಣಮಟ್ಟ ಪರಸ್ಪರ ಪೂರಕವಾಗಿರುವ ಅಂಶಗಳು ಎನ್ನುವುದು ಈ ಅಧ್ಯಯನದಿಂದ ವ್ಯಕ್ತವಾಗಿರುವ ಒಂದು ಪ್ರಮುಖ ವಿಚಾರ. ಹಾಗೆಂದು ಇದೇನೂ ಹೊಸತಲ್ಲ. ಆದರೆ ನಮ್ಮ ವ್ಯವಸ್ಥೆ ಅನೇಕ ವರ್ಷಗಳಿಂದ ಈ ಅಂಶವನ್ನು ಕಡೆಗಣಿಸಿದ ಪರಿಣಾಮವಾಗಿ ಶೈಕ್ಷಣಿಕವಾಗಿ ದೇಶ ಹಿಂದುಳಿಯುವಂತಾಗಿತ್ತು. 

596 ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ 5.4 ಲಕ್ಷ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಈ ವರದಿಯನ್ನು ತಯಾರಿಸಲಾಗಿದೆ. 2008ರಲ್ಲಿ 5ನೇ ತರಗತಿ ವಿದ್ಯಾರ್ಥಿಗಳಿಗೆ 2 ತರಗತಿಯ ಪಠ್ಯ ಪುಸ್ತಕವನ್ನು ಓದಲು ಗೊತ್ತಿಲ್ಲ ಎನ್ನುವ ಆಘಾತಕಾರಿ ವರದಿಯನ್ನು ಇದೇ ವರದಿ ಕೆಲ ವರ್ಷಗಳ ಹಿಂದೆ ತಿಳಿಸಿತ್ತು. ಇದೀಗ 2018ರಲ್ಲಿ ಶೇ. 44.2 ಮಕ್ಕಳು ಪಠ್ಯ ಪುಸ್ತಕವನ್ನು ಓದಬಲ್ಲರು ಎನ್ನುವುದು ಆಶಾದಾಯಕವಾದ ಪ್ರಗತಿಯೇ. ಗಣಿತದಲ್ಲೂ ಖಾಸಗಿ ಮತ್ತು ಸರಕಾರಿ ಶಾಲೆಗಳ ಮಕ್ಕಳು ತುಸು ಪ್ರಗತಿಯನ್ನು ತೋರಿಸಿದ್ದಾರೆ. ಹಿಮಾಚಲ ಪ್ರದೇಶ, ಕೇರಳ, ಪಂಜಾಬ್‌ ಮತ್ತು ಹರ್ಯಾಣ ರಾಜ್ಯದ ಮಕ್ಕಳು ಗಣಿತದಲ್ಲಿ ಇತರ ರಾಜ್ಯದವರಿಗಿಂತ ಮುಂದಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನದ ಜತೆಗೆ ಕರ್ನಾಟಕವೂ ಅರಿಥಮೆಟಿಕ್‌ನಲ್ಲಿ ಹಿಂದುಳಿದಿದೆ ಎನ್ನುವುದು ಕಳವಳ ವ್ಯಕ್ತಪಡಿಸಬೇಕಾದ ಅಂಶ. ಶೇ. 20 ಮಕ್ಕಳಿಗೆ ತಮ್ಮದೇ ತರಗತಿಯ ಪಠ್ಯ ಪುಸ್ತಕಗಳನ್ನು ಓದಲು ಗೊತ್ತಿಲ್ಲ ಎನ್ನುವ ಅಂಶವನ್ನು ಶಿಕ್ಷಣ ತಜ್ಞರು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಈಗಲೂ ಗ್ರಾಮೀಣ ಭಾಗದಲ್ಲಿ ಶೇ. 70 ಮಕ್ಕಳು ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ ಎನ್ನುವ ಅಂಶ ಸರಕಾರಿ ಶಾಲೆಗಳ ಸರ್ವತೋಮುಖವಾದ ಸುಧಾರಣೆಗೆ ನಾವು ಇನ್ನಷ್ಟು ಪ್ರಾಮುಖ್ಯತೆಯನ್ನು ನೀಡಬೇಕು ಎನ್ನುವುದನ್ನು ತಿಳಿಸುತ್ತಿದೆ. 

ಒಟ್ಟಾರೆಯಾಗಿ ಹತ್ತು ವರ್ಷಗಳ ಅಂಕಿಅಂಶವನ್ನು ಗಮನಿಸಿದಾಗ ಪ್ರಾಥಮಿಕ ಶಿಕ್ಷಣ ವಿಭಾಗದಲ್ಲಿ ಸುಧಾರಣೆಯಾಗುತ್ತಿರುವುದು ಸ್ಪಷ್ಟವಾಗಿದೆ. ಶಿಕ್ಷಣ ಹಕ್ಕು ಕಾಯಿದೆಯ ಪಾಲು ಕೂಡಾ ಇದರಲ್ಲಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಹಕ್ಕು ಕಾಯಿದೆಯನ್ನು ಇನ್ನಷ್ಟು ಬಲಪಡಿಸಬೇಕಾದ ಅಗತ್ಯವಿದೆ. ಈ ಕಾಯಿದೆಯಲ್ಲಿ ಇನ್ನೂ ಬಗೆಹರಿಯದ ಹಲವು ಗೊಂದಲಗಳಿದ್ದು, ಇವುಗಳನ್ನು ಸರಿಪಡಿಸಿದರೆ ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚು ಪ್ರಯೋಜನವಾಗಲಿದೆ. ಇದೇ ವೇಳೆ ಮಕ್ಕಳ ಮತ್ತು ಶಿಕ್ಷಕರ ಅನುಪಾತದತ್ತಲೂ ವರದಿ ಗಮನ ಹರಿಸಿದೆ. ಈ ವಿಚಾರದಲ್ಲಿ ಬಹುತೇಕ ಸರಕಾರಿ ಶಾಲೆಗಳು ಒಂದೇ ರೀತಿ ಇವೆ. ಅನೇಕ ಹಳ್ಳಿಗಳಲ್ಲಿ ಈಗಲೂ ಏಕೋಪಾಧ್ಯಾಯ ಶಾಲೆಗಳು ಇವೆ, ಅನೇಕ ಶಾಲೆಗಳಿಗೆ ದೈಹಿಕ ಶಿಕ್ಷಕರು ಇಲ್ಲ ಎಂಬಂಥ ಇಲ್ಲಗಳ ಪಟ್ಟಿಯನ್ನೂ ಈ ವರದಿ ನೀಡಿದೆ. ಸರಕಾರ ಬದಲಾದಾಗಲೆಲ್ಲ ಹೊಸ ಶಿಕ್ಷಣ ನೀತಿಯನ್ನು ತರುವ ಬಗ್ಗೆ, ಶಾಲಾರಂಭದ ಸಂದರ್ಭದಲ್ಲಿ ಪುಸ್ತಕ, ಬ್ಯಾಗ್‌ , ಶೂ ,ಪಠ್ಯ ಪುಸ್ತಕಗಳ ವಿತರಣೆಗಳ ಬಗ್ಗೆ ಅದೇ ಮಾಮೂಲು ಚರ್ಚೆಗಳನ್ನು ನಡೆಸುವವರು ಈ ಇಲ್ಲಗಳ ಪಟ್ಟಿಯನ್ನೊಮ್ಮೆ ಗಮನಿಸುವ ಅಗತ್ಯವಿದೆ. ಶಿಕ್ಷಕರನ್ನು ನೇಮಿಸುವುದಲ್ಲದೆ ಅವರಿಗೆ ಪಾಠ ಮಾಡುವ ವಾತಾವರಣವನ್ನು ಕಲ್ಪಿಸಿಕೊಡುವುದು ಒಟ್ಟಾರೆಯಾಗಿ ಪ್ರಾಥಮಿಕ ಶಿಕ್ಷಣವನ್ನು ಇನ್ನಷ್ಟು ಸುಧಾರಿಸಲು ಇಡುವ ಮೊದಲ ಹೆಜ್ಜೆಯಾಗಬಹುದು. 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.