ಜಲಮೂಲಗಳನ್ನು ಸಂರಕ್ಷಿಸಿ


Team Udayavani, May 2, 2019, 6:10 AM IST

jalamoola

ಕೇಂದ್ರ ಜಲ ಆಯೋಗ ತಯಾರಿಸಿರುವ ವರದಿಯೊಂದರಲ್ಲಿ ಭವಿಷ್ಯದಲ್ಲಿ ಬತ್ತಿ ಹೋಗಲಿರುವ ನದಿಗಳನ್ನು ಪಟ್ಟಿ ಮಾಡಲಾಗಿದೆ. ಕರ್ನಾಟಕದ ಜೀವನದಿ ಕಾವೇರಿಯ ಹೆಸರೂ ಇದೆ. ಕಛ…, ತಾಪಿ, ಸಬರ್ಮತಿ, ಗೋದಾವರಿ, ಕೃಷ್ಣಾ, ಮಹಾನದಿ ಸೇರಿ ಒಟ್ಟು 12 ನದಿಗಳು ಮುಂದೊಂದು ದಿನ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಈ ವರದಿ ಹೇಳಿದೆ. ನಿಜಕ್ಕೂ ಇದು ನಮ್ಮ ಕಣ್ಣು ತೆರೆಸಬೇಕಾದ ವರದಿ. ನಮ್ಮೊಳಗೊಂದು ಕಳವಳವನ್ನು ಈ ವರದಿ ಹುಟ್ಟುಹಾಕಬೇಕಿತ್ತು. ನಮ್ಮನ್ನಾಳುವವರನ್ನು ಗಂಭೀರ ಚಿಂತನೆಗೆ ಈಡು ಮಾಡಬೇಕಿತ್ತು. ವರದಿಯ ಬಗ್ಗೆ ಚರ್ಚೆಗಳಾಗಬೇಕಿತ್ತು. ನದಿಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಕುರಿತು ಚಿಂತನ ಮಂಥನಗಳಿಗೆ ಈ ವರದಿ ನಾಂದಿಯಾಗಬೇಕಿತ್ತು. ಆದರೆ ಇದ್ಯಾವುದೂ ಆಗಿಲ್ಲ, ಯಾರೂ ಈ ವರದಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎನ್ನುವುದು ಬೇಸರದ ಸಂಗತಿ.

ನದಿಗಳನ್ನು ಯಾವೆಲ್ಲ ರೀತಿಯಲ್ಲಿ ಕೆಡಿಸಬಹುದು ಎಂದು ತಿಳಿಯಬೇಕಾದರೆ ನಮ್ಮ ದೇಶದ ನದಿಗಳನ್ನೊಮ್ಮೆ ನೋಡಬೇಕು. ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕುಮಾರಧಾರ ನದಿಯನ್ನು ಯುವ ಸಂಘಟನೆಯೊಂದು ಸ್ವತ್ಛಗೊಳಿಸಿದಾಗ ಸಿಕ್ಕಿದ ಲೋಡುಗಟ್ಟಲೆ ತ್ಯಾಜ್ಯದ ರಾಶಿಯೊಂದೇ ಸಾಕು ನದಿ ಹಾಗೂ ಇತರ ಜಲಮೂಲಗಳನ್ನು ನಾವು ಎಷ್ಟು ಕಡೆಗಣಿಸಿದ್ದೇವೆ ಎಂದು ಅರಿತುಕೊಳ್ಳಲು. ಒಳ ಉಡುಪಿನಿಂದ ಹಿಡಿದು ಮದ್ಯದ ಬಾಟಲಿ ತನಕ ಎಲ್ಲ ತ್ಯಾಜ್ಯ ವಸ್ತುಗಳು ನದಿಯ ಒಡಲಲ್ಲಿದ್ದವು.

ನದಿಯೆಂದರೆ ತ್ಯಾಜ್ಯವನ್ನು ಸುರಿಯುವ ಗುಂಡಿ ಎಂಬ ನಮ್ಮ ಮನೋಧರ್ಮವೇ ನದಿಗಳು ಕೊಳಕಾಗಲು ಮುಖ್ಯ ಕಾರಣ.

ತಾಪಮಾನ ಏರಿಕೆ, ಮಳೆ ಕೊರತೆ ಇತ್ಯಾದಿ ಕಾರಣಗಳಿಂದ ನದಿ ಹಾಗೂ ಇನ್ನಿತರ ಜಲ ಮೂಲಗಳಲ್ಲಿ ನೀರಿನ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಕಳೆದೊಂದು ದಶಕದಲ್ಲಿ ನಮ್ಮ ನದಿಗಳ ನೀರಿನ ಮಟ್ಟದಲ್ಲಿ ಶೇ. 27 ಕುಸಿತವಾಗಿದೆ. ಭವಿಷ್ಯದಲ್ಲಿ ನೀರು ನಾವು ಎದುರಿಸಲಿರುವ ಬಹುದೊಡ್ಡ ಸಮಸ್ಯೆ ಎಂಬುದನ್ನು ಈ ಮಾದರಿಯ ಹಲವು ವರದಿಗಳು ಸೂಚಿಸುತ್ತಿವೆ. ದೇಶದ ಅರ್ಧಕ್ಕರ್ಧ ನದಿಗಳು ಮಲಿನಗೊಂಡಿವೆ ಎನ್ನುವುದು ಸರಕಾರವೇ ಒಪ್ಪಿಕೊಂಡಿರುವ ಸತ್ಯ. ನದಿ ಮಾಲಿನ್ಯದ ವಿಚಾರ ಬಂದಾಗಲೆಲ್ಲ ಗಂಗಾ ನದಿ ಸ್ವತ್ಛತೆ ವಿಷಯ ಪ್ರಸ್ತಾವಕ್ಕೆ ಬರುತ್ತದೆ. ಆರು ರಾಜ್ಯಗಳ ಜೀವನಾಧಾರ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಮಹತ್ವವನ್ನು ಹೊಂದಿರುವ ಗಂಗಾ ನದಿಯನ್ನು ಸ್ವತ್ಛಗೊಳಿಸಲು ಕೇಂದ್ರ ಸರಕಾರ ಅವಿರತ ಪ್ರಯತ್ನಗಳನ್ನು ಮಾಡುತ್ತಿದ್ದರೂ ಅದರ ಫ‌ಲಿತಾಂಶ ನಿರೀಕ್ಷಿತ ಮಟ್ಟದಲ್ಲಿಲ್ಲ. ಅನೇಕ ಸಲ ಸರ್ವೋತ್ಛ ನ್ಯಾಯಾಲಯವೇ ಗಂಗಾ ನದಿಯ ಒಂದು ಹನಿ ನೀರು ಕೂಡಾ ಸ್ವತ್ಛವಾಗಿಲ್ಲ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡದ್ದಿದೆ.

ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ಹೊಸ ಬೆಳವಣಿಗೆಯಲ್ಲ. ಹಲವು ವರ್ಷಗಳ ಹಿಂದೆಯೇ ಈ ಕುರಿತು ಅಧ್ಯಯನ ನಡೆಸಿ ಸಂಬಂಧಪಟ್ಟವರ ಗಮನ ಸೆಳೆಯಲಾಗಿತ್ತು. ನದಿಗಳ ಜಲಮೂಲದ ಅತಿಯಾದ ಶೋಷಣೆಯೇ ನೀರಿನ ಮಟ್ಟ ಕಡಿಮೆಯಾಗಲು ಕಾರಣ. ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ನಗರೀಕರಣದ ಮೊದಲ ಬಲಿಪಶುವೇ ನದಿ ಎನ್ನುವುದು ತಿಳಿಯದ ಸಂಗತಿಯಲ್ಲ. ಆದರೆ ಅಭಿವೃದ್ಧಿಯ ನಾಗಾಲೋಟದಿಂದ ಪರಿಸರದ ಮೇಲಾಗುತ್ತಿರುವ ಹಾನಿಯ ಬಗ್ಗೆ ಗಮನ ಹರಿಸುವಷ್ಟು ವ್ಯವಧಾನವಾಗಲಿ, ಇಚ್ಛಾಶಕ್ತಿಯಾಗಲಿ ನಮ್ಮನ್ನಾಳುವವರಿಗೆ ಇಲ್ಲ.

ಜಲ ಆಯೋಗದ ವರದಿ ಪ್ರಮುಖ 12 ನದಿಗಳ ಹೆಸರನ್ನಷ್ಟೇ ಪಟ್ಟಿ ಮಾಡಿದೆ. ವಾಸ್ತವ ವಿಚಾರ ಏನೆಂದರೆ ಈಗಾಗಲೇ ಸಾವಿರಾರು ಚಿಕ್ಕಪುಟ್ಟ ನದಿಗಳು ಬತ್ತಿ ಹೋಗಿ ಅಸ್ತಿತ್ವ ಕಳೆದುಕೊಂಡಿವೆ. ಒಂದು ಕಾಲದಲ್ಲಿ ವರ್ಷದ 365 ದಿನವೂ ಸಮೃದ್ಧವಾಗಿ ಹರಿಯುತ್ತಿದ್ದ ನಮ್ಮ ನೇತ್ರಾವತಿ ನದಿಯ ಈಗಿನ ಪರಿಸ್ಥಿತಿಯೇ ಇದಕ್ಕೊಂದು ಉದಾಹರಣೆ. ನದಿಯಲ್ಲಿ ನೀರೇ ಇಲ್ಲದಿದ್ದರೂ ಈ ನದಿಯನ್ನು ತಿರುಗಿಸುವ ಬೃಹತ್‌ ಯೋಜನೆಯೊಂದು ಎಲ್ಲ ವಿರೋಧಗಳನ್ನು ಮೆಟ್ಟಿನಿಂತು ಜಾರಿಯಾಗುತ್ತಿದೆ. ಈ ಯೋಜನೆ ಯಾರ ಲಾಭಕ್ಕಾಗಿ ಎನ್ನುವುದು ಕೂಡಾ ಈಗ ರಹಸ್ಯವಾಗಿ ಉಳಿದಿಲ್ಲ.

ನೀರು ದೀರ್ಘಾವಧಿಯಲ್ಲಿ ನಮ್ಮನ್ನು ಬಹಳವಾಗಿ ಕಾಡಲಿರುವ ಒಂದು ಸಮಸ್ಯೆ. ಆದರೆ ಪ್ರಸ್ತುತ ಚುನಾವಣೆಯಲ್ಲಿ ಯಾವ ಪಕ್ಷವೂ ನೀರಿನ ಬಗ್ಗೆ ಮಾತನಾಡುತ್ತಿಲ್ಲ. ಶೇ.75 ಮನೆಗಳ ಆವರಣದಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲ ಎಂದು ನೀತಿ ಆಯೋಗವೇ ಹೇಳಿದ್ದರೂ ಯಾವ ನಾಯಕನೂ ಈ ಬಗ್ಗೆ ಯಾವುದೇ ವಾಗ್ಧಾನ ನೀಡುತ್ತಿಲ್ಲ. ರೈತರ ಎಲ್ಲ ಸಮಸ್ಯೆಗಳ ಮೂಲವೇ ನೀರು. ಆದರೆ ರಾಜಕೀಯ ಪಕ್ಷಗಳೆಲ್ಲ ಸಾಲಮನ್ನಾ, ನಗದು ವರ್ಗಾವಣೆಯಂಥ ಪುಕ್ಕಟೆ ಯೋಜನೆಗಳ ಮೂಲಕ ರೈತನನ್ನು ಖುಷಿಪಡಿಸಲು ಪ್ರಯತ್ನಿಸುತ್ತಿವೆಯೇ ಹೊರತು ಮೂಲ ಸಮಸ್ಯೆಯನ್ನು ಬಗೆಹರಿಸುವ ಕಾರ್ಯಯೋಜನೆಯನ್ನು ಹಾಕಿಕೊಳ್ಳುತ್ತಿಲ್ಲ. ನದಿಗಳೂ ಸೇರಿದಂತೆ ಎಲ್ಲ ಜಲಮೂಲಗಳನ್ನು ಸಂರಕ್ಷಿಸುವುದು ಈಗಿನ ತುರ್ತು ಅಗತ್ಯ.

ಟಾಪ್ ನ್ಯೂಸ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

naa ninna bidalaare movie releasing on Nov 29

Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್‌ ಬಂತು: ನ.29ಕ್ಕೆ ಸಿನಿಮಾ ತೆರೆಗೆ

police-ban

Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

7

Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.