Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ


Team Udayavani, Nov 21, 2024, 6:15 AM IST

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

ರಾಜ್ಯದಲ್ಲಿ ಕಳೆದೆರಡು ವಾರಗಳಿಂದೀಚೆಗೆ ಎಪಿಎಲ್‌-ಬಿಪಿಎಲ್‌ ಕಾರ್ಡ್‌ ಬಗೆಗಿನ ಗೊಂದಲ ತೀವ್ರ ವಿವಾದಕ್ಕೀಡಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅನರ್ಹರಿಗೆ ನೀಡಲಾಗಿರುವ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಿ ಅವರಿಗೆ ಎಪಿಎಲ್‌ ಕಾರ್ಡ್‌ಗಳನ್ನು ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಜತೆಯಲ್ಲಿ ಸರಕಾರಿ ಮಾನದಂಡಗಳನ್ನು ಉಲ್ಲಂಘಿ ಸಿ ಅಕ್ರಮವಾಗಿ ಬಿಪಿಎಲ್‌ ಕಾರ್ಡ್‌ ಪಡೆದು ಕೊಂಡಿರುವ ಕುಟುಂಬಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ. ರಾಜ್ಯ ಸರಕಾರದ ಉದ್ದೇಶ ಸಮರ್ಥನೀಯವಾದುದಾದರೂ ದಿಢೀರನೇ ಇಂತಹ ಪ್ರಕ್ರಿಯೆ ಕೈಗೆತ್ತಿ ಕೊಂಡಿ ರುವುದು ಸರಕಾರದ ನೈಜ ಆಶಯವನ್ನೇ ಬುಡಮೇಲು­ಗೊಳಿಸಿದೆ. ಸರಕಾರ ಈ ವಿಷಯದಲ್ಲಿ ಸಾಕಷ್ಟು ಪರಾಮರ್ಶೆ ನಡೆಸಿ ವಿವೇಚಾನಾತ್ಮಕ ನಡೆಯನ್ನು ತನ್ನದಾಗಿಸಿಕೊಂಡಿದ್ದರೆ ಸದ್ಯ ಎದ್ದಿರುವ ಗೊಂದಲ, ಇಕ್ಕಟ್ಟು, ವಿವಾದದ ಪರಿಸ್ಥಿತಿಗಳಾವುವೂ ಎದುರಾಗುತ್ತಿರಲಿಲ್ಲ.

ರಾಜ್ಯ ಸರಕಾರದ ಈ ಏಕಾಏಕಿ ಕ್ರಮದಿಂದಾಗಿ ಸಹಸ್ರಾರು ಸಂಖ್ಯೆಯ ಅರ್ಹ ಫ‌ಲಾನುಭವಿಗಳ ಬಿಪಿಎಲ್‌ ಕಾರ್ಡ್‌ಗಳು ರದ್ದಾಗಿದ್ದು ಬಡವರನ್ನು ತೀವ್ರ ಆತಂಕಕ್ಕೀಡುಮಾಡಿದೆ. ಅಷ್ಟು ಮಾತ್ರವಲ್ಲದೆ ಕುಟುಂಬಗಳು ಬಿಪಿಎಲ್‌ ಕಾರ್ಡ್‌ ಪಡೆದ ದಿನದಿಂದ ಅನ್ವಯವಾಗುವಂತೆ ದಂಡ ವಿಧಿಸುತ್ತಿರುವುದು ಕೂಡ ಭಾರೀ ರಾದ್ಧಾಂತಕ್ಕೆ ಕಾರಣವಾಗಿದೆ. ಈ ವಿಷಯವನ್ನು ಮುಂದಿಟ್ಟು ಪಕ್ಷಗಳು ರಾಜಕೀಯ ಕೆಸರೆರಚಾಟದಲ್ಲಿ ನಿರತವಾಗಿದ್ದರೆ, ಮುಖ್ಯಮಂತ್ರಿ ಹಾಗೂ ಮತ್ತವರ ಸಂಪುಟದ ಹಲವು ಸಚಿವರು ದಿನಕ್ಕೊಂದು ಹೇಳಿಕೆಯನ್ನು ನೀಡುವ ಮೂಲಕ ವಿವಾದವನ್ನು ಮತ್ತಷ್ಟು ಗೋಜಲನ್ನಾಗಿಸುತ್ತಿದ್ದಾರೆ.

ಇನ್ನು ಬಿಪಿಎಲ್‌ ಕಾರ್ಡ್‌ ರದ್ದುಗೊಂಡು ಸರಕಾರದಿಂದ ಉಚಿತ ಯಾ ಸಬ್ಸಿಡಿ ಬೆಲೆಯಲ್ಲಿ ಲಭಿಸುತ್ತಿದ್ದ ಪಡಿತರಕ್ಕೂ ಕತ್ತರಿ ಬಿದ್ದಿದ್ದು ಬಡವರು ಸರಕಾರಕ್ಕೆ ಹಿಡಿಶಾಪ ಹಾಕತೊಡಗಿದ್ದಾರೆ. ಈಗ ಮಹಿಳೆಯರೇ ಬೀದಿಗಿಳಿದು ಸರಕಾರದ ವಿರುದ್ಧ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಎಪಿಎಲ್‌-ಬಿಪಿಎಲ್‌ ಕಾರ್ಡ್‌ ಫ‌ಲಾನುಭವಿಗಳ ಗುರುತಿಸುವಿಕೆಯ ಮಾನ ದಂಡವೇ ಪ್ರಶ್ನಾರ್ಹವಾಗಿದ್ದು ಈ ವಿಷಯವಾಗಿ ಕಳೆದ ಕೆಲವು ದಶಕಗಳಿಂದ ಚರ್ಚೆ ಗ ‌ಳು ನಡೆಯುತ್ತಲೇ ಬಂದಿವೆ. ವಿವಿಧ ಸರಕಾರಗಳ ಅವಧಿಯಲ್ಲಿ ಈ ಮಾನ ದಂಡವನ್ನು ಪರಿಷ್ಕರಿಸುತ್ತ ಬರಲಾಗಿದ್ದರೂ ಯಾವೊಂದು ಮಾನದಂಡವೂ ಆಯಾಯ ಕಾಲದ ವಾಸ್ತವ ಪರಿಸ್ಥಿತಿಗನುಗುಣವಾಗಿರದೇ ಬರೀ ಅಂಕಿಅಂಶಗಳನ್ನು ಆಧರಿಸಿ ನಿಗದಿಪಡಿಸುತ್ತ ಬರಲಾಗಿದೆ. ಹೀಗಾಗಿ ಬಿಪಿಎಲ್‌ ಕಾರ್ಡ್‌ ಫ‌ಲಾನು ಭವಿಯಾಗಲು ಯೋಗ್ಯವಾದ ಕುಟುಂಬಗಳೂ ಅದರಿಂದ ವಂಚಿತವಾಗು ವಂತಾಗಿದೆ. ಇನ್ನು ಸರಕಾರದ ಈ ಬೇಕಾಬಿಟ್ಟಿ ಮಾನದಂಡದ ದುರ್ಲಾಭ ಪಡೆದು ಲಕ್ಷಾಂತರ ಸಂಖ್ಯೆಯಲ್ಲಿ ಅನರ್ಹ ಕುಟುಂಬಗಳು ಕೂಡ ಬಿಪಿಎಲ್‌ ಕಾರ್ಡ್‌ನ ಫ‌ಲಾ ನುಭವಿಗಳಾಗಿ ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯು ತ್ತಿರುವುದಂತೂ ಸುಳ್ಳಲ್ಲ. ಇದರ ಹಿಂದೆ ರಾಜಕೀಯ ಹಿತಾಸಕ್ತಿ, ಅಧಿಕಾರಶಾಹಿಯ ಭ್ರಷ್ಟತೆ, ವಶೀಲಿಬಾಜಿಗಳು ಕೆಲಸ ಮಾಡಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ರಾಜ್ಯ ಸರಕಾರ ಸದ್ಯ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಪಡಿತರ ಚೀಟಿ ವ್ಯವಸ್ಥೆಯಲ್ಲಿನ ಎಲ್ಲ ಅಪಸವ್ಯಗಳನ್ನು ಮೊದಲು ನಿವಾರಿಸಬೇಕು. ಇಂದಿನ ಕಾಲಕ್ಕನುಗುಣವಾಗಿ ಕುಟುಂಬಗಳ ಆದಾಯ ಮತ್ತು ಜೀವನವೆಚ್ಚ ಇವೆರಡನ್ನೂ ಗಣನೆಗೆ ತೆಗೆದುಕೊಂಡು ಪಡಿತರ ಚೀಟಿ ನೀಡಿಕೆಯ ಮಾನದಂಡವನ್ನು ಆಮೂ ಲಾಗ್ರ ವಾಗಿ ಪರಿಷ್ಕರಿಸಬೇಕು. ಈ ಮಾನದಂಡವನ್ನು ನಿರ್ದಿಷ್ಟ ಅವಧಿಗೊಮ್ಮೆ ಕಡ್ಡಾಯ ವಾಗಿ ಪರಿಷ್ಕರಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಪಡಿತರ ಚೀಟಿ ನೀಡಿಕೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕ, ನ್ಯಾಯಯುತವಾಗಿ ನಡೆಸದೇ ಹೋದಲ್ಲಿ ಸರಕಾರ ಜಾರಿಗೆ ತರುವ ಯಾವ ಸುಧಾರಣ ವ್ಯವಸ್ಥೆಯೂ ನಿರೀಕ್ಷಿತ ಫ‌ಲ ತಂದುಕೊಡಲಾರದು. ಹೀಗಾಗಿ ಸರಕಾರ ಬರಿಯ ಹೇಳಿಕೆ, ಭರವಸೆಗಳಿಗೆ ಸೀಮಿತವಾಗದೆ ಎಪಿಎಲ್‌-ಬಿಪಿಎಲ್‌ ಕಾರ್ಡ್‌ ಹಂಚಿಕೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಈಗ ಈ ವಿಷಯವಾಗಿ ಎದ್ದಿರುವ ಗೊಂದಲದಿಂದಲಾದರೂ ಸರಕಾರ ಎಚ್ಚೆತ್ತುಕೊಂಡು ಇತ್ತ ಲಕ್ಷ್ಯ ಹರಿಸಬೇಕು.

ಟಾಪ್ ನ್ಯೂಸ್

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

R Ashwin: ಅಶ್ವಿ‌ನ್‌ಗೆ ಖೇಲ್‌ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ

R Ashwin: ಅಶ್ವಿ‌ನ್‌ಗೆ ಖೇಲ್‌ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ

Virat Kohli: ಬಾಕ್ಸಿಂಗ್‌ ಡೇ ಟೆಸ್ಟ್‌ಗೂ ಮುನ್ನ ವಿರಾಟ್‌ ನೂತನ ಕೇಶ ವಿನ್ಯಾಸ

Virat Kohli: ಬಾಕ್ಸಿಂಗ್‌ ಡೇ ಟೆಸ್ಟ್‌ಗೂ ಮುನ್ನ ವಿರಾಟ್‌ ನೂತನ ಕೇಶ ವಿನ್ಯಾಸ

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.