ಮತಯಂತ್ರಗಳ ಮೇಲೆ ಮತ್ತೆ ದೂಷಣೆ: ಅನುಮಾನಗಳು ನಿವಾರಣೆಯಾಗಲಿ


Team Udayavani, Dec 4, 2017, 12:58 PM IST

04-35.jpg

ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬಳಿಕ ವಿದ್ಯುನ್ಮಾನ ಮತಯಂತ್ರ ಮತ್ತೆ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಈ ಸಲವೂ ಬಹುಜನ ಸಮಾಜ ಪಾರ್ಟಿಯ ಮುಖ್ಯಸ್ಥೆ ಬಿಜೆಪಿ ಗೆಲುವಿಗೆ ಮತಯಂತ್ರಗಳನ್ನು ತಿರುಚಿದ್ದು ಕಾರಣ ಎಂದು ಆರೋಪಿಸುತ್ತಿರುವ ವಿಪಕ್ಷ ಗಢಣದ ಮುಂಚೂಣಿಯಲ್ಲಿದ್ದಾರೆ. ಸಮಾಜವಾದಿ ಪಾರ್ಟಿ, ಕಾಂಗ್ರೆಸ್‌, ಸಮಾಜವಾದಿ ಪಾರ್ಟಿ ಮತ್ತಿತರ ಪಕ್ಷಗಳು ಅವರನ್ನು ಬೆಂಬಲಿಸುತ್ತಿವೆ. ಫ‌ಲಿತಾಂಶ ಪ್ರಕಟವಾದ ಕ್ಷಣದಲ್ಲಿಯೇ ಮತಯಂತ್ರಗಳನ್ನು ತಿರುಚಿ ಎಲ್ಲ ಮತಗಳು ತನಗೆ ಬೀಳುವಂತೆ ಮಾಡಿ ಬಿಜೆಪಿ ಗೆದ್ದಿದೆ ಎಂದು ಯಾವುದೇ ಪರಿಶೀಲನೆಯೂ ನಡೆಸದೆ ಮಾಯಾವತಿ ಆರೋಪಿಸಿದ್ದಾರೆ. ಉಳಿದವರೂ ಈ ಆರೋಪಕ್ಕೆ ತಮ್ಮ ಧ್ವನಿಯನ್ನು ಸೇರಿಸಿ ಮತಯಂತ್ರಗಳ ವಿಶ್ವಾಸಾರ್ಹತೆಯನ್ನೇ  ಅನುಮಾನದಿಂದ ನೋಡುವಂತೆ ಮಾಡುತ್ತಿದ್ದಾರೆ. ಮಾಯಾವತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತಪತ್ರಗಳ ಮೂಲಕ ಚುನಾವಣೆ ನಡೆಸಿ ನೋಡಿ ಎಂಬ ಸವಾಲನ್ನೂ ಹಾಕಿದ್ದಾರೆ. ಉತ್ತರ ಪ್ರದೇಶದ ಸ್ಥಳೀಯಾಡಳಿತ ಚುನಾವಣೆಯಲ್ಲಿ ನಗರಪಾಲಿಕೆಗಳ ಮತದಾನಕ್ಕೆ ಮಾತ್ರ ಮತಯಂತ್ರಗಳನ್ನು ಬಳಸಿಕೊಳ್ಳಲಾಗಿದೆ. ನಗರಸಭೆ ಮತ್ತು ನಗರ ಪಂಚಾಯತ್‌ಗಳಲ್ಲಿ ಮತಪತ್ರಗಳ ಮೂಲಕ ಮತದಾನ ನಡೆದಿದೆ. 16 ನಗರಪಾಲಿಕೆಗಳ ಪೈಕಿ 14ರಲ್ಲಿ ಬಿಜೆಪಿ ಗೆದ್ದಿದೆ. ನಗರಸಭೆ ಮತ್ತು ನಗರ ಪಂಚಾಯತು ಚುನಾವಣೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ.ಬಿಜೆಪಿ  ನಗರಪಾಲಿಕೆಗಳಲ್ಲಿ ಶೇ. 18 ಮತ್ತು ನಗರಸಭೆಗಳಲ್ಲಿ ಶೇ. 12 ಮತಗಳನ್ನು ಪಡೆದುಕೊಂಡಿದೆ. ಮಾಯಾವತಿ ಹಾಗೂ ಇತರರ ಆರೋಪಕ್ಕೆ ಬಲತಂದಿರುವುದೇ ಈ ಮತಗಳಿಕೆ ಪ್ರಮಾಣ. ಫ‌ಲಿತಾಂಶದಲ್ಲಾಗಿರುವ ಈ ಭಾರೀ ವ್ಯತ್ಯಾಸ ಪರಿಶೀಲನಾ ಯೋಗ್ಯವೇ ಆಗಿದ್ದರೂ ಅದಕ್ಕೆ ಮತಯಂತ್ರವನ್ನು ಮಾತ್ರ ದೂರುವುದು ಸಾಧುವಲ್ಲ. 

ಕಳೆದ ಮಾರ್ಚ್‌ನಲ್ಲಿ ಉತ್ತರ ಪ್ರದೇಶವೂ ಸೇರಿದಂತೆ ಐದು ರಾಜ್ಯಗಳಿಗೆ ನಡೆದ ವಿಧಾನಸಭೆ ಫ‌ಲಿತಾಂಶದ ಸಂದರ್ಭದಲ್ಲೂ ವಿಪಕ್ಷಗಳು ಮತಯಂತ್ರದ ಮೇಲೆ ಇದೇ ಮಾದಿರಯ ಆರೋಪವನ್ನು ಮಾಡಿದ್ದವು. ವಿಪಕ್ಷಗಳ ಪ್ರತಿಭಟನೆ ತಾರಕಕ್ಕೇರಿದಾಗ ಚುನಾವಣಾ ಆಯೋಗ ಮತಯಂತ್ರವನ್ನು ತಿರುಚುವ ಬಹಿರಂಗ ಪ್ರದರ್ಶನ ಏರ್ಪಡಿಸಿ ಇದಕ್ಕೆ ಎಲ್ಲ ಪಕ್ಷವನ್ನು ಆಹ್ವಾನಿಸಿತು. ಯಾವುದೇ ಪಕ್ಷ ಮತಯಂತ್ರವನ್ನು ತಿರುಚಿ ತೋರಿಸಿದರೆ ಆರೋಪವನ್ನು ಒಪ್ಪಿಕೊಳ್ಳುತ್ತೇನೆ ಎಂದು ಆಯೋಗ ಸವಾಲು ಕೂಡ ಹಾಕಿತು. ಆದರೆ ಈ ಸವಾಲು ಸ್ವೀಕರಿಸಿದ್ದು ಕಮ್ಯುನಿಸ್ಟ್‌ ಸೇರಿ ಎರಡು ಪಕ್ಷಗಳು ಮಾತ್ರ. ಈ ಪಕ್ಷಗಳೂ ಮತಯಂತ್ರ ತಿರುಚುವ ಯಾವ ಪ್ರಯತ್ನವನ್ನೂ ಮಾಡದೆ ಆಯೋಗ ತೋರಿಸಿದ ಪ್ರಾತ್ಯಕ್ಷಿಕೆಗೆ  ತೃಪ್ತಿ ವ್ಯಕ್ತಪಡಿಸಿದ್ದವು. ಆಗ ದೊಡ್ಡ ದೊಡ್ಡ ಆರೋಪಗಳನ್ನು ಮಾಡಿದ ಬಿಎಸ್‌ಪಿಯಾಗಲಿ, ಕಾಂಗ್ರೆಸ್‌ ಆಗಲಿ ಅಥವಾ ಎಸ್‌ಪಿಯಾಗಲಿ ಸವಾಲನ್ನು ಸ್ವೀಕರಿಸದೆ ಪಲಾಯನ ಮಾಡಿ  ಈಗ ಮತ್ತೆ ಅದೇ ಆರೋಪವನ್ನು ಮಾಡುತ್ತಿರುವುದು ಈ ಪಕ್ಷಗಳ ಹೊಣೆಗೇಡಿತನವನ್ನು ತೋರಿಸುತ್ತದೆ.  

ಮತಯಂತ್ರ ವ್ಯವಸ್ಥೆ ಬಂದ ಬಳಿಕ ಚುನಾವಣೆಗಳು ಹೆಚ್ಚು ಪಾರದರ್ಶಕವೂ, ಕ್ಷಿಪ್ರವೂ ಆಗಿರುವುದು ಅನುಭವಕ್ಕೆ ಬರುತ್ತಿದೆ. ಮುಖ್ಯವಾಗಿ ಅಸಿಂಧುವಾಗುವ ಮತಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹಿಂದಿನ ಮತಪತ್ರಗಳ ಕಾಲದಲ್ಲಿ ಗೆಲುವಿನ ಅಂತರಕ್ಕಿಂತಲೂ ಹೆಚ್ಚು ಮತಗಳು ಅಸಿಂಧುಗೊಂಡಿರುವ ಅನೇಕ ನಿದರ್ಶನಗಳಿವೆ. ಸಾಗಾಟ ಸುಲಭ, ಮತ ಎಣಿಕೆ ತ್ವರಿತವಾಗುತ್ತದೆ, ಖರ್ಚುವೆಚ್ಚಗಳು ಕಡಿಮೆ  ಎಂಬಂತಹ ಹಲವು ಧನಾತ್ಮಕ ಅಂಶಗಳು ಮತಯಂತ್ರದಲ್ಲಿವೆ. 2000ನೇ ಇಸವಿಯಿಂದೀಚೆಗೆ ಮತಯಂತ್ರಗಳು ಹಲವು ನ್ಯಾಯಾಲಯಗಳ ಮತ್ತು ಪ್ರಯೋಗಗಳ ಅಗ್ನಿಪರೀಕ್ಷೆಯನ್ನು ದಾಟಿ ಬಂದು ತಿರುಚಲು ಅಸಾಧ್ಯ ಎಂದು ಸಾಬೀತಾಗಿವೆ. ಹಲವು ರಾಜ್ಯಗಳ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ ಕೂಡ ಮತಯಂತ್ರ ಅತ್ಯಂತ ಪ್ರಯೋಜನಕಾರಿಯಾದ ಆವಿಷ್ಕಾರ ಎಂದು ಮನಗಂಡಿವೆ. ಅದರಲ್ಲೂ   ಬೇರೆ ದೇಶಗಳ ಮತಯಂತ್ರಗಳಲ್ಲಿ ಇಲ್ಲದ ಅನೇಕ ಸುರಕ್ಷಾ ಅಂಶಗಳು ನಮ್ಮ ಮತಯಂತ್ರಗಳಲ್ಲಿವೆ. ಹೀಗಾಗಿ ಅಮೆರಿಕ ಸೇರಿ ಹಲವು ದೇಶಗಳಲ್ಲಿ ಮತಯಂತ್ರಗಳ ಬಳಕೆ ಇಲ್ಲ ಎನ್ನುವ ಸಮರ್ಥನೆಗೆ ಅರ್ಥವಿಲ್ಲ.

ಪ್ರಜಾತಂತ್ರಕ್ಕೆ ಮೂಲಾಧಾರವಾಗಿರುವ ಚುನಾವಣೆ ಪ್ರಕ್ರಿಯೆ  ವಿಶ್ವಾಸಾರ್ಹವಾಗಿ ನಡೆಯಬೇಕಿ ರುವುದರಿಂದ ಮತಯಂತ್ರದ ಮೇಲಿನ ಅನುಮಾನಗಳು ನಿವಾರಣೆಯಾಗಲೇಬೇಕು.ಯಾರಿಗೆ ಮತ ಬಿದ್ದಿದೆ ಎಂದು ತಿಳಿಸುವ ರಸೀದಿ ಕೊಡುವ ವಿವಿಪ್ಯಾಟ್‌ ಸೌಲಭ್ಯವನ್ನು ಪ್ರತಿ ಮತಯಂತ್ರಕ್ಕೂ ಅಳವಡಿಸುವ ಮೂಲಕ ಚುನಾವಣಾ ಆಯೋಗ  ಇಂತಹ ಆರೋಪಗಳಿಗೆ ಅವಕಾಶವಿಲ್ಲದಂತೆ ಮಾಡಬೇಕು. ಅಂತೆಯೇ ಮತಯಂತ್ರಗಳನ್ನು ಇನ್ನಷ್ಟು ಸುಧಾರಿಸುವ ಅಗತ್ಯವೂ ಇದೆ. 

ಟಾಪ್ ನ್ಯೂಸ್

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

2025; May the mantra of peace and coexistence resonate throughout the world

Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ

Exam

ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ

JAmmu

Jammu-Kashmir: ಉಗ್ರರನ್ನು ಮಟ್ಟ ಹಾಕಿದ‌ ಭದ್ರತಾ ಪಡೆಗಳು

6-national-emblem

National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

6

Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫ‌ಲ

5

Mangaluru: ಮುಂದಿನ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಮುಲ್ಲೈ ಮುಗಿಲನ್‌

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

4

Mangaluru: ಮತ್ತೆ ಫ್ಲೆಕ್ಸ್‌ , ಬ್ಯಾನರ್‌ಗಳ ಉಪಟಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.