ಇಲ್ಲಿ ಬೋಧನೆಗಿಂತ ನಿಯಮ ಪಾಲನೆಯೇ ಮುಖ್ಯ
Team Udayavani, Nov 5, 2021, 6:00 AM IST
ಒಂದರಿಂದ 10ನೇ ತರಗತಿಗೆ ಪೂರ್ಣಪ್ರಮಾಣದಲ್ಲಿ ಭೌತಿಕ ತರಗತಿ ಆರಂಭಿಸಿರುವ ರಾಜ್ಯ ಸರ ಕಾ ರ ಈಗ ಸರ ಕಾ ರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ನ.8ರಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್‌ಕೆಜಿ, ಯುಕೆಜಿ) ನಡೆಸಲು ಅನುಮತಿ ನೀಡಿದೆ.
ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳು ಈಗಾಗಲೇ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪೌಷ್ಟಿಕ ಆಹಾರ ವಿತರಣೆ ಜತೆಗೆ ಮಕ್ಕಳಿಗೆ ದಿನ ಬಿಟ್ಟುದಿನ, ವಾರದಲ್ಲಿ ಎರಡು ದಿನ ಹೀಗೆ ತರಗತಿಗಳನ್ನು ನಡೆಸುತ್ತಿವೆ. ನ.8ರಂದು ಪೂರ್ವ ಪ್ರಾಥಮಿಕ ತರಗತಿಯೂ ಆರಂಭ ವಾಗು ವುದರಿಂದ 2021-22ನೇ ಸಾಲಿನ ಶೈಕ್ಷಣಿಕ ಪ್ರಕ್ರಿಯೆಗಳು ಪೂರ್ಣ ಪ್ರಮಾಣದಲ್ಲಿ ಶುರುವಾದಂತಾಗಲಿದೆ.
ಕೊರೊನಾ 3ನೇ ಅಲೆಯ ಆತಂಕ ಸ್ವಲ್ಪ ಮಟ್ಟಿಗೆ ದೂರವಾಗಿದ್ದರೂ ಸಂಪೂರ್ಣ ನಿರ್ನಾಮವಾಗಿಲ್ಲ. ಹೀಗಾಗಿ ಎಚ್ಚರವಂತೂ ಇರಲೇ ಬೇಕಾಗುತ್ತದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳನ್ನು ಹೇಗೆ ಬೇಕಾದರೂ ನಿಭಾಯಿಸಬಹುದು. ಆದರೆ, ಪೂರ್ವ ಪ್ರಾಥಮಿಕ ಮಕ್ಕಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಈ ಮಕ್ಕಳ ತರಗತಿ ವಿಚಾರದಲ್ಲಿ ಮಕ್ಕಳು ಕೊರೊನಾ ನಿಯಮ ಪಾಲನೆ ಮಾಡುವುದಕ್ಕಿಂತಲೂ ಹೆಚ್ಚಾಗಿ ಮತ್ತು ಕಡ್ಡಾಯವಾಗಿ ಬೋಧಕ ಹಾಗೂ ಬೋಧಕೇತರ ಸಿಬಂದಿ ಕೊರೊನಾ ನಿಯಮ ಪಾಲಿಸಲೇ ಬೇಕಾಗುತ್ತದೆ. ಈ ಮಕ್ಕಳಿಗೆ ನಿರಂತರವಾಗಿ ಮಾಸ್ಕ್ ಧರಿಸುವುದು, ಆಗಾಗ್ಗೆ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗಬಹುದು. ಆದರೆ, ಸಿಬಂದಿ ವರ್ಗ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಲ್ಲ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಲೇ ಬೇಕಾಗುತ್ತದೆ. ಇವೆಲ್ಲಕ್ಕಿಂತ ಮಿಗಿಲಾಗಿ ಪೂರ್ವಪ್ರಾಥಮಿಕ ತರಗತಿ ಮಕ್ಕಳ ಕೈಗೆ ಸ್ಯಾನಿಟೈಸರ್ ಬಾಟಲಿ, ಕೊರೊನಾ ನಿಯಂತ್ರಣ ದ್ರಾವಕಗಳು ಸಿಗದಂತೆ ದೂರ ಇಡಬೇಕು. ಮಕ್ಕಳಿಗೆ ಕುಡಿಯಲು ಹಾಗೂ ಬಳಕೆಗೆ ಅಗತ್ಯವಿರುವಷ್ಟು ಬಿಸಿನೀರನ್ನು ಶಾಲೆಯಲ್ಲಿ ವ್ಯವಸ್ಥೆ ಮಾಡಬೇಕು.
ಸರ ಕಾ ರ ಪೂರ್ವ ಪ್ರಾಥಮಿಕ ತರಗತಿ ಪೂರ್ಣ ಪ್ರಮಾಣದಲ್ಲಿ ತೆರೆ ಯಲು ಅನುಮತಿ ನೀಡಿರುವುದರಿಂದ ಬಹುತೇಕ ಹೆತ್ತ ವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಾಗಿದ್ದಾರೆ. ಅದರಂತೆ, ಶಾಲೆ ಗಳು ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡಿವೆ. ಶಾಲೆಗಳಲ್ಲಿ ತೆಗೆದುಕೊಳ್ಳುವ ಮುನ್ನೆಚ್ಚರಿಕೆಯ ಜತೆಗೆ ಹೆತ್ತ ವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಸಂದರ್ಭದಲ್ಲಿ ವಿಶೇಷ ಜಾಗೃತಿ ಹೊಂದಿರಬೇಕು. ಮಕ್ಕಳಿಗೆ ಮನೆಯಿಂದಲೇ ತಿಂಡಿ ಹಾಗೂ ಬಿಸಿ ನೀರನ್ನು ಕಳುಹಿಸುವುದು, ಮಕ್ಕಳಿಗೆ ಧರಿಸಲು ಸುಲಭ ಎನಿಸುವ ಮಾಸ್ಕ್ಗಳನ್ನೇ ಹಾಕಿ ಕಳುಹಿಸುವುದು. ಸ್ಯಾನಿಟೈಸರ್ ಬಾಟಲಿಯನ್ನು ನೀಡದೇ ಇರುವುದು, ಆಗಿಂದಾಗ್ಗೆ ಕೈ ತೊಳೆಯಲು ಅಭ್ಯಾಸ ಮಾಡಿಸುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಮನೆಯಿಂದಲೇ ಆಗಬೇಕು. ಸರಕಾರ, ಶಾಲಾಡಳಿತ ಮಂಡಳಿ, ಸಮಾಜ ಹಾಗೂ ಹೆತ್ತ ವರ ಸಮನ್ವಯದಿಂದ ಮಾತ್ರ ಪೂರ್ವ ಪ್ರಾಥಮಿಕ ಮಕ್ಕಳ ಭೌತಿಕ ತರಗತಿ ಯಶಸ್ಸುಗೊಳಿಸಲು ಸಾಧ್ಯ. ಬಹುತೇಕ ಮಕ್ಕಳ ದಾಖಲಾತಿಯೇ ಇನ್ನೂ ಆಗಿಲ್ಲ. ಆದಷ್ಟು ಬೇಗ ದಾಖಲಾತಿ ಪ್ರಕ್ರಿಯೆಯನ್ನು ಮುಗಿಸಬೇಕು. ಮಕ್ಕಳು ಉತ್ಸಾಹದಿಂದ ತರಗತಿಯಲ್ಲಿ ಪಾಲ್ಗೊಂಡು, ಯಾವುದೇ ರೀತಿಯಲ್ಲೂ ಸೋಂಕು ಹರಡದಂತೆ ಎಚ್ಚರ ವಹಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ವಿಶೇಷವಾಗಿ ಶಾಲಾ ಸಿಬಂದಿ ವರ್ಗ ಈ ಬಗ್ಗೆ ಅತಿಯಾದ ಎಚ್ಚರಿಕೆ ವಹಿಸಲೇಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.