ಎಲ್ಲ ಕಾರುಗಳಲ್ಲಿ ಆರು ಏರ್‌ಬ್ಯಾಗ್ ಉತ್ತಮ ನಿರ್ಧಾರ
Team Udayavani, Aug 6, 2022, 6:00 AM IST
ದಿನ ಕಳೆದಂತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತಿವೆ. 90ರ ದಶಕದಲ್ಲಿ ಸಾಮಾನ್ಯ ಜನರ ಕೈಗೆಟಕುವುದೇ ಕಷ್ಟ ಎಂಬಂತಿದ್ದ ಕಾರುಗಳು, ಈಗ ಎಲ್ಲರ ಮನೆಗಳ ಮುಂದೆಯೂ ಕಾಣಿಸಿಕೊಳ್ಳುತ್ತಿವೆ. ಸಾಮಾನ್ಯವಾಗಿ ವಾಹನಗಳ ಸಂಖ್ಯೆ ಹೆಚ್ಚಾದಷ್ಟೂ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಇದಕ್ಕೆ ರಸ್ತೆಗಳಲ್ಲಿ ವಾಹನಗಳ ಸಂದಣಿ ಹೆಚ್ಚಾಗಿರುವುದೇ ಕಾರಣ ಎಂದು ಮತ್ತೆ ಹೇಳಬೇಕಾಗಿಲ್ಲ.
ಸದ್ಯ ಕಾರುಗಳ ವಿಚಾರಕ್ಕೆ ಬಂದರೆ, ಆರಂಭದಲ್ಲಿ ಸುರಕ್ಷೆ ನಿಯಮ ಗಳು ಕಡಿಮೆಯೇ ಇದ್ದವು. ಅಂದರೆ ಏರ್‌ಬ್ಯಾಗ್‌ನಂಥ ಅತ್ಯಂತ ಭದ್ರತಾ ಸೌಲಭ್ಯಗಳು ಉನ್ನತ ದರ್ಜೆಯ ಕಾರುಗಳಲ್ಲಿ ಅಥವಾ ದುಬಾರಿ ಕಾರುಗಳಲ್ಲಿ ಮಾತ್ರ ನೋಡಬಹುದಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಕೇಂದ್ರ ಸರಕಾರ, ಚಾಲಕ ಮತ್ತು ಚಾಲಕನ ಪಕ್ಕದ ಪ್ರಯಾಣಿಕನ ಸೀಟಿನ ಮುಂದೆ ಕಡ್ಡಾಯವಾಗಿ ಏರ್‌ಬ್ಯಾಗ್ ಇರಲೇಬೇಕು ಎಂಬ ನಿಯಮ ಮಾಡಿತು. ಈ ಕಾರಣದಿಂದಾಗಿ ಈಗ ಎಲ್ಲ ಕಾರುಗಳ ಮುಂದಿನ ಎರಡು ಸೀಟುಗಳಲ್ಲಿ ಏರ್‌ಬ್ಯಾಗ್ ಅನ್ನು ಕಾಣುತ್ತಿದ್ದೇವೆ.
ಕೇಂದ್ರ ಹೆದ್ದಾರಿ ಮತ್ತು ರಸ್ತೆ ಇಲಾಖೆಯ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಸಂಸತ್‌ನಲ್ಲೊಂದು ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉತ್ಪಾದನೆಯಾಗುವ ಎಲ್ಲ ಕಾರುಗಳಲ್ಲಿಯೂ ಕಡ್ಡಾಯವಾಗಿ 6 ಏರ್‌ಬ್ಯಾಗ್‌ಗಳನ್ನು ಅಳವಡಿಸಬೇಕು ಎಂಬ ನಿಯಮ ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರ ನಿರ್ಧಾರ ಮಾಡಿಯಾಗಿದ್ದು, ಸದ್ಯದಲ್ಲೇ ಅಧಿಸೂಚನೆ ಹೊರಡಲಿದೆ. ಅಲ್ಲದೆ ಕಾರು ಉತ್ಪಾದನ ಮಾಲಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದೂ ತಿಳಿಸಿದ್ದಾರೆ.
ಸದ್ಯ ಭಾರತದಲ್ಲಿ ಪ್ರತೀ ವರ್ಷ ರಸ್ತೆ ಅಪಘಾತಗಳಲ್ಲಿ ಒಂದು ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಎಲ್ಲೆಲ್ಲಿ ಹೆಚ್ಚು ಅಪಘಾತಗಳಾಗುತ್ತಿವೆಯೋ ಅಂಥ ಸ್ಥಳಗಳನ್ನು ಗುರುತಿಸಿ, ಅಲ್ಲಿನ ಸಮಸ್ಯೆಗಳ ನಿವಾರಣೆ ಮಾಡುವ ಬಗ್ಗೆಯೂ ಭರವಸೆ ನೀಡಿದ್ದಾರೆ. ಒಟ್ಟಾರೆಯಾಗಿ 2024ರ ವೇಳೆಗೆ ಭಾರೀ ಪ್ರಮಾಣದಲ್ಲಿ ಅಪಘಾತ ತಪ್ಪಿಸಬೇಕು ಎಂಬುವುದು ಕೇಂದ್ರ ಸರಕಾರದ ಗುರಿಯಾಗಿದೆ. ಅಷ್ಟೇ ಅಲ್ಲ, ಜಗತ್ತಿನ ಒಟ್ಟಾರೆ ವಾಹನಗಳಲ್ಲಿ ಭಾರತ ಹೊಂದಿರುವುದು ಶೇ. 1ರಷ್ಟು ಮಾತ್ರ. ಆದರೆ ಜಗತ್ತಿನ ಶೇ. 11ರಷ್ಟು ಅಪಘಾತಗಳು ಭಾರತದಲ್ಲೇ ಸಂಭವಿಸುತ್ತವೆ ಎಂಬುದು ಆತಂಕದ ವಿಚಾರ. ಹೀಗಾಗಿಯೇ ಅಪಘಾತಗಳನ್ನು ಇಳಿಸಲೇಬೇಕಿದೆ.
ಗಡ್ಕರಿ ಅವರೇ ಹೇಳಿದ ಪ್ರಕಾರ, ಕಾರಿನಲ್ಲಿ ಒಂದು ಏರ್‌ಬ್ಯಾಗ್ ಅಳವಡಿಸಲು ತಗಲುವ ವೆಚ್ಚ ಕೇವಲ 800 ರೂ. ಅಂದರೆ, ಆರು ಏರ್‌ಬ್ಯಾಗ್‌ಗಳನ್ನು ಅಳವಡಿಸಲು 4,800 ರೂ.ಗಳಷ್ಟೇ ಹೆಚ್ಚುವರಿಯಾಗಿ ಬೇಕಾಗುತ್ತದೆ. ಆದರೆ ಇಂದಿಗೂ ಕಾರುಗಳ ಉತ್ಪಾದಕ ಕಂಪೆನಿಗಳು, ಕೇಂದ್ರ ಸರಕಾರದ ಈ ಕಡ್ಡಾಯ ಆರು ಏರ್‌ಬ್ಯಾಗ್‌ಗಳನ್ನು ಅಳವಡಿಸಲು ಒಪ್ಪುತ್ತಿಲ್ಲ. ಇದರಿಂದ ವೆಚ್ಚ ಹೆಚ್ಚಾಗುತ್ತದೆ, ಬೇಡ ಎಂದೇ ಹೇಳುತ್ತಿದ್ದಾರೆ. ಹೀಗಾಗಿಯೇ ಗಡ್ಕರಿ ಅವರು, ಪ್ರತೀ ಏರ್‌ಬ್ಯಾಗ್‌ಗೆ ಆಗುವ ವೆಚ್ಚ ಹೇಳಿರುವುದು ಎಂದೇ ವಿಶ್ಲೇಷಿಸಲಾಗುತ್ತಿದೆ.
ಏನೇ ಆಗಲಿ, ಕೇಂದ್ರ ಸರಕಾರ ಈಗ ಜಾರಿಗೆ ತರಲು ಹೊರಟಿರುವ ನಿರ್ಧಾರ ಸಮಂಜಸವಾಗಿಯೇ ಇದೆ. ಗ್ರಾಹಕರಲ್ಲೂ ಕಾರು ಮಾರಾಟ ಗಾರರು ಈ ಆರು ಏರ್‌ಬ್ಯಾಗ್‌ಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಕಾರುಗಳು ಹೆಚ್ಚು ಸುರಕ್ಷಿತವಾದಷ್ಟು, ಪ್ರಯಾಣಿಕರ ಸಾವು ನೋವುಗಳನ್ನು ತಪ್ಪಿಸಲು ಸಾಧ್ಯವಿದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಂಡು ಜಾರಿಗೆ ತರಲಿ ಎಂಬುದೇ ಜನರ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.