ಅನಗತ್ಯ ವರ್ಗಾವಣೆಗೆ ಕಡಿವಾಣ ಶ್ಲಾಘ್ಯ:ಸರಕಾರಿ ಅಧಿಕಾರಿಗಳಿಗೆ ನೆಮ್ಮದಿ

Team Udayavani, Apr 7, 2017, 11:53 AM IST

07-ANKANA-3.jpg

ಸರ್ಕಾರಿ ಅಧಿಕಾರಿಗಳನ್ನು ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡುವುದಕ್ಕೆ ಕಡಿವಾಣ ತೊಡಿಸಿರುವ ರಾಜ್ಯ ಸರ್ಕಾರದ ಕ್ರಮ ಶ್ಲಾಘನೀಯ. ಇದು ಪ್ರಾಮಾಣಿಕ ಅಧಿಕಾರಿಗಳು ನಿಶ್ಚಿಂತೆಯಿಂದ ತಮ್ಮ ಕರ್ತವ್ಯ ನೆರವೇರಿಸುವಂತಹ ಕಾರ್ಯ ಪರಿಸರವನ್ನು ಸೃಷ್ಟಿಸಬಲ್ಲದು.

ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳದ ಅಧಿಕಾರಿಗಳನ್ನು ವಿನಾಕಾರಣ ವರ್ಗಾವಣೆ ಮಾಡುವ ಮಂತ್ರಿಗಳ ಮತ್ತು ಮೇಲಧಿಕಾರಿಗಳ ಚಾಳಿಗೆ ಕಡಿವಾಣ ಹಾಕುವ ಆದೇಶವನ್ನು ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿದೆ. ರಾಜಕೀಯ ಒತ್ತಡ, ಮೇಲಧಿಕಾರಿಗಳ ಅವಕೃಪೆ ಅಥವಾ ವಶೀಲಿಬಾಜಿಗೆ ಮಣಿದು ಕಾರಣ ಇಲ್ಲದೆ ವರ್ಗಾಯಿಸುವುದು ಅಥವಾ ಕೆಲಸ ಕೊಡದೆ ಸುಮ್ಮನೆ ಕೂರಿಸಿ ಸತಾಯಿಸುವ ಪ್ರವೃತ್ತಿಗೆ ಈ ನಿಯಮ ಲಗಾಮು ಹಾಕಲಿದೆ. ಹೈಕೋರ್ಟ್‌ ಕೆಲ ಸಮಯದ ಹಿಂದೆಯೇ ಸರ್ಕಾರಿ ನೌಕರರನ್ನು ವಿನಾಕಾರಣ ವರ್ಗಾಯಿಸುವುದನ್ನು ತಡೆಯಲು ನಿಯಮ ರೂಪಿಸುವಂತೆ ಸರ್ಕಾರಕ್ಕೆ ಹೇಳಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈಗ ಈ ಆದೇಶವನ್ನು ಜಾರಿಗೊಳಿಸಿದೆ. ಸಹಜವಾಗಿಯೇ ಸ‌ರ್ಕಾರಿ ನೌಕರರಿಗೆ ಇದು ಖುಷಿ ತರುವ ಸುದ್ದಿ. 

ಯಾವುದೇ ಅಧಿಕಾರಿಯನ್ನು ವರ್ಗಾಧಿವಣೆಗೊಳಿಸಿ ಹುದ್ದೆಗಾಗಿ ಕಾಯುವಂತೆ ಮಾಡಬಾರದು ಎನ್ನುತ್ತದೆ  ಆದೇಶ. ಭಾರೀ ಪ್ರಮಾಣದ ಮಾನವ ಶಕ್ತಿ ಪೋಲಾಗುವುದನ್ನು ತಡೆಯುವ ನಿಯಮವಿದು. ಎಷ್ಟೋ ಇಲಾಖೆಗಳಲ್ಲಿ ಸಿಬ್ಬಂದಿ ಖಾಯಂ ಹುದ್ದೆಯಿಲ್ಲದೆ ವಿಭಾಗದಿಂದ ವಿಭಾಗಕ್ಕೆ ಅಲೆಯುತ್ತಿರುತ್ತಾರೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಭಾರೀ  ನಷ್ಟವಾಗುತ್ತದೆ. ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತಾರದೆ ಕೆಳಹಂತದ ಅಧಿಕಾರಿಗಳು ತಮ್ಮ ಕೈಕೆಳಗಿನ ನೌಕರರನ್ನು ಎತ್ತಂಗಡಿ ಮಾಡುವುದನ್ನೂ ನಿಯಮ ತಡೆದಿದೆ. ಇನ್ನು ಮುಂದೆ ಹೀಗೆ ಅನಗತ್ಯವಾಗಿ ವರ್ಗಾವಣೆ ಮಾಡಿದರೆ ಆ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿದೆ. 

ನಮ್ಮ ಸರ್ಕಾರಿ ವ್ಯವಸ್ಥೆಯಲ್ಲಿ ವರ್ಗಾವಣೆಯೂ ಒಂದು ಬೃಹತ್‌ ದಂಧೆ. ಹುದ್ದೆಗೆ, ಸ್ಥಳಕ್ಕೆ ದರ ನಿಗದಿ ಮಾಡಿ ವರ್ಗಾಯಿಸುವಷ್ಟು ವ್ಯವಸ್ಥಿತವಾಗಿ ಈ ದಂಧೆ ಬೆಳೆದಿದೆ. ದಂಧೆ ಎಂದ ಮೇಲೆ ಅದರಲ್ಲಿ ದಲ್ಲಾಳಿಗಳು ಇರಲೇಬೇಕು. ಸಾಮಾನ್ಯವಾಗಿ ಈ ದಲ್ಲಾಳಿಗಳು ಮಂತ್ರಿಗಳ ಅಥವಾ ರಾಜಕೀಯವಾಗಿ ಪ್ರಭಾವಿಗಳಾಗಿರುವ ವ್ಯಕ್ತಿಗಳ ಚಮಚಾಗಳೇ ಆಗಿರುತ್ತಾರೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ಅಥವಾ ಹೊಸ ಸಚಿವರು ನೇಮಕವಾದ ಕೂಡಲೇ ಅಧಿಕಾರಿಗಳ ವರ್ಗ ರೂಢಿಗತ ಕ್ರಮವೇ ಆಗಿದೆ. ಎಲ್ಲ ಸಚಿವರಿಗೂ ಆಯಕಟ್ಟಿನ ಜಾಗದಲ್ಲಿ ತಮ್ಮವರು ಮತ್ತು ತಮ್ಮ ಮಾತು ಕೇಳುವ ಅಧಿಕಾರಿಗಳೇ ಇರಬೇಕೆಂಬ ಅಪೇಕ್ಷೆಯೇ ಇದಕ್ಕೆ ಕಾರಣ. ಜಾತಿಯ ಕಾರಣಕ್ಕೆ, ಸ್ನೇಹದ ಕಾರಣಕ್ಕೆ, ರಾಜಕೀಯ ಒಲವಿನ ಕಾರಣಕ್ಕೆಲ್ಲ ವರ್ಗಾವಣೆಯಾಗುವ ವ್ಯವಸ್ಥೆ ನಮ್ಮದು. ಇದರಿಂದಾಗಿ ಎಷ್ಟೋ ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಕಷ್ಟನಷ್ಟ ಅನುಭವಿಸಿದ್ದಾರೆ. ಅಧಿಕಾರಿ ಪ್ರಾಮಾಣಿಕನಾಗಿದ್ದಷ್ಟೂ ವರ್ಗಾವಣೆ ಶಿಕ್ಷೆ ಹೆಚ್ಚು. ಹೆಚ್ಚು ಸಲ ವರ್ಗವಾದ ಅಧಿಕಾರಿ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ ಎನ್ನುವುದು ಜನರ ನಂಬಿಕೆ. ಸರ್ಕಾರಿ ಅಧಿಕಾರಿಗಳ ಪ್ರಾಮಾಣಿಕತೆಯನ್ನು ಅವರಿಗಾದ ವರ್ಗಾವಣೆಯ ಲೆಕ್ಕದಲ್ಲಿ ಅಳೆಯುವಂಥ ದಯನೀಯ ಸ್ಥಿತಿಗೆ ವ್ಯವಸ್ಥೆಯನ್ನು ತಲುಪಿಸಿದ್ದಾರೆ ನಮ್ಮನ್ನಾಳುವವರು. 

ಈ ಮಟ್ಟಿಗೆ ಹೇಳುವುದಾದರೆ ಸಿದ್ದರಾಮಯ್ಯ ಸ‌ರ್ಕಾರ ಅವಧಿಯಲ್ಲಿ ವರ್ಗಾವಣೆ ದಂಧೆಗೆ ಸ್ವಲ್ಪವಾದರೂ ಕಡಿವಾಣ ಬಿದ್ದಿದೆ. ಅಧಿಕಾರಕ್ಕೆ ಬಂದ ಆರಂಭದಲ್ಲೇ ಹೊಸ ವರ್ಗಾವಣೆ ನೀತಿಯನ್ನು ರಚಿಸಲಾಗಿತ್ತು. ಮೇ ಮತ್ತು ಜೂನ್‌ ತಿಂಗಳಲ್ಲಿ ಮಾತ್ರ ವರ್ಗಾವಣೆ ಮಾಡಬೇಕು, ಪ್ರತೀ ಇಲಾಖೆಯಲ್ಲಿ ಶೇ. 6 ನೌಕರರನ್ನು ಮಾತ್ರ ವರ್ಗಾವಣೆ ಮಾಡಬಹುದು, ಐಪಿಎಸ್‌, ಐಎಎಸ್‌ ಅಧಿಕಾರಿಗಳನ್ನು ಮೂರು ವರ್ಷ ಸೇವೆ ಪೂರೈಸಿದ ಬಳಿಕ ಮಾತ್ರ ವರ್ಗಾಯಿಸಬೇಕೆಂಬ ಉತ್ತಮ ಅಂಶಗಳು ಈ ವರ್ಗಾವಣೆ ನೀತಿಯಲ್ಲಿವೆ. ಇದಕ್ಕೆ ಪೂರಕವಾಗಿಯೇ ಈಗ ಹೊಸ ನಿಯಮಗಳನ್ನು ರಚಿಸಲಾಗಿದೆ. ಸಮರ್ಪಕವಾಗಿ ಜಾರಿಯಾದರೆ ನೌಕರರಿಗೆ ಮಾತ್ರವಲ್ಲ, ಸ‌ರ್ಕಾರಕ್ಕೂ ಪ್ರಯೋಜನಕಾರಿಯಾಗುವ ನಿಯಮವಿದು. ಪದೇ ಪದೆ ವರ್ಗಾವಣೆ ಮಾಡುವುದರಿಂದ ಸರ್ಕಾರಿ ಕೆಲಸಗಳಿಗೆ ಅಡ್ಡಿಯಾಗಿ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ನೌಕರರ ಕಾರ್ಯದಕ್ಷತೆ ಹೆಚ್ಚಿಸಲು ಇಂತಹ ಕಠಿಣ ನಿಯಮಗಳ ಅಗತ್ಯವಿತ್ತು. ಪ್ರಾಮಾಣಿಕ ಅಧಿಕಾರಿಗಳು ಇನ್ನು ನಿರ್ಭೀತಿಯಿಂದ ನೆಮ್ಮದಿಯಾಗಿ ತಮ್ಮ ಕೆಲಸಗಳನ್ನು ಮಾಡಬಹುದು. ಆದರೆ ಇದೇ ವೇಳೆ ಒಂದೇ ಸ್ಥಳದಲ್ಲಿ ಝಂಡಾ ಊರಿಕೊಳ್ಳಲು ಈ ನಿಯಮ ಸಹಕಾರಿಯಾಗಬಾರದು. ಪಕ್ಕದ ಕೇರಳದಲ್ಲಿ ಎಲ್ಲ ವರ್ಗಾವಣೆಗಳು ಆನ್‌ಲೈನ್‌ ಮೂಲಕವೇ ಆಗಬೇಕೆಂಬ ನಿಯಮವನ್ನು ಇತ್ತೀಚೆಗೆ ಜಾರಿಗೆ ತರಲಾಗಿದೆ. ವರ್ಗಾವಣೆಯಲ್ಲಿ ಪಾರದರ್ಶಕತೆಯನ್ನು ತರುವ ಈ ಉತ್ತಮ ನಿಯಮವನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬಹುದು.

ಟಾಪ್ ನ್ಯೂಸ್

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.