ಸಾಮಾಜಿಕ ಮಾಧ್ಯಮಗಳು ದುರುಪಯೋಗವಾಗದಿರಲಿ
Team Udayavani, Apr 2, 2019, 6:00 AM IST
ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳು ಯಾವ ರೀತಿಯಲ್ಲಿ ದುರುಪಯೋಗವಾಗುತ್ತಿವೆ ಎನ್ನುವುದಕ್ಕೆ ಫೇಸ್‌ಬುಕ್ ಸೋಮವಾರ ಕೈಗೊಂಡಿರುವ ಕ್ರಮವೇ ಸಾಕ್ಷಿ. ಪಕ್ಷವೊಂದರ ಐಟಿ ಸೆಲ್‌ಗೆ ಸೇರಿದ ಫೇಸ್‌ಬುಕ್ ಖಾತೆಯ 687 ಪುಟಗಳನ್ನು ಕಿತ್ತು ಹಾಕಲಾಗಿದೆ. ಜತೆಗೆ ಪಾಕಿಸ್ತಾನ ಮೂಲದಿಂದ ಕಾರ್ಯಾಚರಿಸುತ್ತಿದ್ದ 108 ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನೂ ಕಿತ್ತು ಹಾಕಿದೆ. ಇದು ಬರೀ ಒಂದು ಪಕ್ಷಕ್ಕೆ ಸೇರಿದ ಸಾಮಾಜಿಕ ಮಾಧ್ಯಮದ ಕತೆ. ಈ ರೀತಿ ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸುವುದರಲ್ಲಿ ಯಾವ ಪಕ್ಷವೂ ಹಿಂದೆ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಫೇಸ್‌ಬುಕ್ ಈ ಮಾದರಿಯ ಇನ್ನಷ್ಟು ಕ್ರಮಗಳನ್ನು ಕೈಗೊಂಡರೆ ಆಶ್ಚರ್ಯ ಪಡಬೇಕಿಲ್ಲ. ಮುಂದಿನ ಚುನಾವಣೆಗಳ ಹೋರಾಟ ನಡೆಯು ವುದು ಸಾಮಾಜಿಕ ಮಾಧ್ಯಮಗಳಲ್ಲಿ ಎಂದು ಹಿಂದೆಯೇ ಹೇಳಲಾಗಿತ್ತು.
ದೇಶದಲ್ಲಿ 90 ಕೋಟಿ ಮತದಾರರಿದ್ದಾರೆ. ಈ ಪೈಕಿ ಸುಮಾರು 50 ಕೋಟಿ ಮಂದಿ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುತ್ತಿದ್ದಾರೆ. ಹೀಗಾಗಿ ಎಲ್ಲ ಪಕ್ಷಗಳಿಗೂ ಅದುವೇ ನೆಚ್ಚಿನ ತಾಣ. ಚುನಾವಣಾ ಕಾಲದಲ್ಲಿ ಕಾರ್ಯನಿರ್ವಹಿಸಲೆಂದೇ ಸೋಷಿಯಲ್ ಮೀಡಿಯಾ ವಾರ್‌ರೂಮ್‌ಗಳನ್ನು ಅವುಗಳು ಸ್ಥಾಪಿಸಿಕೊಂಡಿವೆ. ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಮಾಧ್ಯಮವನ್ನು ಬಳಸುವುದರಲ್ಲಿ ತಪ್ಪಿಲ್ಲ. ಮತದಾರರನ್ನು ತಲುಪುವ ಅತಿ ಸುಲಭದ ಮತ್ತು ಅತ್ಯಂತ ಪರಿಣಾಮಕಾರಿಯಾದ ವಿಧಾನವಿದು. ಆದರೆ ಈಗೀಗ ಈ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳುವುದೇ ಹೆಚ್ಚಾಗಿದೆ. ಸುಳ್ಳು ಸುದ್ದಿಗಳನ್ನು ಹರಡಲು, ಎದುರಾಳಿಗಳ ತೇಜೋವಧೆ ಮಾಡಲು, ತಿರುಚಿದ, ತಿದ್ದಿದ ಸಂದೇಶಗಳನ್ನು ಹರಡಲು ಮತ್ತು ಹಿಂಸೆಯನ್ನು ಪ್ರಚೋದಿಸಲು ಸಾಮಾಜಿಕ ಮಾಧ್ಯಮಗಳು ವ್ಯಾಪಕವಾಗಿ ಬಳಕೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ಚುನಾವಣ ಆಯೋಗ ಭಾರತದಲ್ಲಿ ಜನಪ್ರಿಯವಾಗಿರುವ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ, ಯೂಟ್ಯೂಬ್, ಟ್ವಿಟರ್ ಸೇರಿ ಕೆಲವು ಸಾಮಾಜಿಕ ಮಾಧ್ಯಮಗಳಿಗೆ ಚುನಾವಣೆ ಘೋಷಣೆಯಾಗುವ ಮೊದಲೇ ನಕಲಿ ಖಾತೆಗಳ ಮೇಲೆ ಕಣ್ಣಿಡಲು ಸೂಚಿಸಿತ್ತು.
ಸಂಯೋಜಿತ ಅಸಹಜ ಚಟುವಟಿಕೆಗಳ ಕಾರಣಕ್ಕೆ ಈ ಪುಟಗಳನ್ನು ಕಿತ್ತು ಹಾಕಲಾಗಿದೆ ಎಂದು ಫೇಸ್‌ಬುಕ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಅಂದರೆ ತಮ್ಮ ಗುರುತನ್ನು ಬಚ್ಚಿಟ್ಟುಕೊಂಡು ನಕಲಿ ಖಾತೆಗಳ ಮೂಲಕ ಜನರನ್ನು ದಾರಿ ತಪ್ಪಿಸುವಂಥ ಸಂದೇಶಗಳನ್ನು ಹರಡುವ ಉದ್ದೇಶಕ್ಕೆ ಈ ಈ ಪುಟಗಳನ್ನು ಪ್ರಾರಂಭಿಸಲಾಗಿತ್ತು. ಇದು ನೇರವಾಗಿ ಆ ಪಕ್ಷದ ಐಟಿ ಸೆಲ್‌ನ ಫೇಸ್‌ಬುಕ್ ಖಾತೆಗೆ ಸೇರಿದ ಪುಟಗಳಾಗಿರುವುದರಿಂದ ಈ ರೀತಿ ನಕಲಿ ಖಾತೆಗಳನ್ನು ತೆರೆದಿರುವ ಉದ್ದೇಶ ಏನೆಂಬುದನ್ನು ತಿಳಿಸುವ ಬಾಧ್ಯತೆ ಆ ಪಕ್ಷಕ್ಕಿದೆ.
ಸಾಮಾಜಿಕ ಮಾಧ್ಯಮಗಳಿಗೆ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವಿದೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳು ವಹಿಸಿದ ಸಂದೇಹಾಸ್ಪದ ಪಾತ್ರದ ಕುರಿತಾದ ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅನಪೇಕ್ಷಿತ ರೀತಿಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವುದೇ ನಕಲಿ ಖಾತೆಗಳನ್ನು ತೆರೆದು ಸುಳ್ಳು ಸುದ್ದಿಯನ್ನು ಹರಡುವುದರ ಹಿಂದಿನ ಮುಖ್ಯ ಉದ್ದೇಶ. ಕೆಲವು ಐಟಿ ಸಂಸ್ಥೆಗಳೇ ಅಪಪ್ರಚಾರದ ಗುತ್ತಿಗೆಯನ್ನು ವಹಿಸಿಕೊಳ್ಳುತ್ತವೆ.
ನಾಯಕರಿಗೆ ಲಕ್ಷಗಟ್ಟಲೆ ಅನುಯಾಯಿಗಳನ್ನು ಒದಗಿಸಿಕೊಡುವುದು, ಕೃತಕ ಪ್ರಭಾವಲಯವನ್ನು ಸೃಷ್ಟಿಸಿಕೊಡುವುದು, ಒಂದು ಪಕ್ಷದ ಪರವಾದ ಅಲೆ ಇದೆ ಎಂದು ನಂಬಿಸುವಂಥ ಸಂದೇಶಗಳನ್ನು ನಿರಂತರವಾಗಿ ಪಸರಿಸುವುದೆಲ್ಲ ಸಾಮಾಜಿಕಕ ಮಾಧ್ಯಮಗಳಲ್ಲಿ ಸಾಧ್ಯವಾಗುತ್ತಿದೆ. ಫೊಟೋ ಎಡಿಟಿಂಗ್‌ನಂಥ ಹಾವಳಿ ಹಿಂದಿನಿಂದಲೂ ಇದೆ. ಇಂಥ ನಕಲಿ ಮತ್ತು ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ಕಠಿನ ಶಾಸನ ಇಲ್ಲದಿರುವುದು ಕಿಡಿಗೇಡಿಗಳಿಗೆ ವರದಾನವಾಗಿದೆ. ಅಲ್ಲದೆ ಸದ್ಯ ಪ್ರಚಲಿತದಲ್ಲಿರುವ ಸಾಮಾಜಿಕ ಮಾಧ್ಯಮಗಳ ಸರ್ವರ್‌ಗಳು ಇರುವುದು ವಿದೇಶಗಳಲ್ಲಿ. ಹೀಗಾಗಿ ಈ ಮಾಧ್ಯಮಗಳ ಮೇಲೆ ಯಾವುದೇ ನಿಯಂತ್ರಣ ಹೇರಬೇಕಿದ್ದರೆ ಆಯಾ ಕಂಪೆನಿಗಳ ಸಹಕಾರ ಅನಿವಾರ್ಯ. ವಿದೇಶಗಳಲ್ಲಿರುವ ಈ ಮುಖ್ಯಸ್ಥರ ಮರ್ಜಿಗನುಗುಣವಾಗಿ ಸಾಮಾಜಿಕ ಮಾಧ್ಯಮಗಳು ನಿಯಂತ್ರಣಕ್ಕೊಳಪಡುತ್ತವೆ. ಅದಾಗ್ಯೂ ಸರಕಾರ ಚುನಾವಣೆಗೂ ಮೊದಲೇ ಎಲ್ಲ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥರನ್ನು ಕರೆಸಿ ಚುನಾವಣಾ ಕಾಲದಲ್ಲಿ ದುರಪಯೋಗವಾಗದಂತೆ ಮುನ್ನೆಚ್ಚರಿಕೆ ಎಚ್ಚರಿಸಲು ಸೂಚಿಸಿರುವುದು ಒಂದು ಸಕಾರಾತ್ಮಕ ನಡೆ ಎಂದು ಹೇಳಬಹುದು. ಸುದೀರ್ಘವಾಗಿ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾಜಿಕ ಮಾಧ್ಯಮಗಳು ಇನ್ನಷ್ಟು ದುರುಪಯೋಗವಾಗದಂತೆ ತಡೆಯುವಲ್ಲಿ ಫೇಸ್‌ಬುಕ್ ಕೈಗೊಂಡಿರುವ ಕ್ರಮ ಒಂದು ಎಚ್ಚರಿಕೆಯಾಗಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
MRPL ನಲ್ಲಿ ಉದ್ಯೋಗ ಆಮಿಷ: ಯುವಕನಿಗೆ 1 ಲಕ್ಷ ರೂ.ವಂಚನೆ
Karkala; ಕೋರ್ಟ್‌ಗೆ ಹಾಜರಾದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.