ಜಾಹೀರಾತುಗಳಿಗೆ ಲಗಾಮು ಅಗತ್ಯ


Team Udayavani, Oct 27, 2017, 10:18 AM IST

27-23.jpg

ಮಾರುಕಟ್ಟೆ ರಣರಂಗವಾದರೆ ಜಾಹೀರಾತುಗಳು ಶಸ್ತ್ರಾಸ್ತ್ರ ಎನ್ನುವುದು ಜಾಹೀರಾತಿಗೆ ಸಂಬಂಧಪಟ್ಟಂತೆ ಇರುವ ಒಂದು ನಾಣ್ಣುಡಿ. ತೀವ್ರ ಸ್ಪರ್ಧೆಯ ಇಂದಿನ ವಾಣಿಜ್ಯ ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಮಾರಲು ಜಾಹೀರಾತುಗಳು ಅನಿವಾರ್ಯ. ಗುಂಡುಸೂಜಿಯಿಂದ ಹಿಡಿದು ವಿಮಾನದ ತನಕ ಪ್ರತಿ ಉತ್ಪನ್ನವನ್ನು ಜಾಹೀರಾತು ಮೂಲಕವೇ ಪ್ರಸಿದ್ಧಿಗೆ ತರಬೇಕಾಗುತ್ತದೆ. ಹೀಗಾಗಿಯೇ ಮಾರುಕಟ್ಟೆಯೆಂಬ ರಣರಂಗದಲ್ಲಿ ಸೆಣಸಲು ಕಂಪೆನಿಗಳು ನಾನಾ ರೀತಿಯ ಜಾಹೀರಾತುಗಳೆಂಬ ಅಸ್ತ್ರಗಳನ್ನು ಬಳಸುತ್ತವೆ. ಜಾಹೀರಾತುಗಳ ಹಿಂದಿರುವ ಸೃಜನಶೀಲತೆಯನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ಉತ್ಪನ್ನಗಳನ್ನು ಹಾಡಿ ಹೊಗಳಿ ಅವುಗಳಿಗೆ ಗ್ರಾಹಕರನ್ನು ಸೃಷ್ಟಿಸುವುದು ಜಾಹೀರಾತುಗಳ ಮುಖ್ಯ ಉದ್ದೇಶ. ಆದರೆ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಉತ್ಪನ್ನದಲ್ಲಿ ಇಲ್ಲದ ಗುಣವಿಶೇಷಗಳನ್ನು ಜಾಹೀರಾತುಗಳಲ್ಲಿ ಉತ್ಪ್ರೇಕ್ಷಿತವಾಗಿ ವರ್ಣಿಸುವ ಪ್ರವೃತ್ತಿ ಅಪಾಯಕಾರಿಯಾಗಿ ಹೆಚ್ಚುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಗ್ರಾಹಕರ ಹಿತರಕ್ಷಣೆಗಾಗಿ ಜಾಹೀರಾತುಗಳಿಗೆ ಲಗಾಮು ಹಾಕುವ ಸಲುವಾಗಿ ಕಠಿನ ಕಾನೂನು ರಚಿಸಲು ಮುಂದಾಗಿರುವುದು ಅಪೇಕ್ಷಣೀಯ ನಡೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಜನರಿಗೆ ಮಂಕುಬೂದಿ ಎರಚುವ ಜಾಹೀರಾತುಗಳ ಬಗ್ಗೆ ಕಳವಳ ಹೊಂದಿದ್ದು, ಇದನ್ನು ತಡೆಯುವ ಸಲುವಾಗಿ ಕಟ್ಟುನಿಟ್ಟಿನ ಕಾನೂನು ರಚಿಸಲಾಗುವುದು ಎಂದಿದ್ದಾರೆ. 

ಜಾಹೀರಾತುಗಳು ಜನರ ಮೇಲೆ ಬೀರುವ ಪ್ರಭಾವ ಅಪಾರ. ಅದರಲ್ಲೂ ಮಕ್ಕಳ ಮೇಲೆ ಜಾಹೀರಾತುಗಳು ಅತಿಯಾದ ಪರಿಣಾಮ ಬೀರುತ್ತದೆ ಎನ್ನುತ್ತದೆ ಅಧ್ಯಯನ. ಸಿನೆಮಾ ನಟರು, ಸೆಲೆಬ್ರಿಟಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳನ್ನು ರೂಪದರ್ಶಿಗಳಾಗಿ ಉಪಯೋಗಿಸಿಕೊಂಡು ಜಾಹೀರಾತು ನೀಡುವುದು ಇನ್ನೊಂದು ತಂತ್ರ. ಎಲ್ಲ ಜಾಹೀರಾತುಗಳಲ್ಲಿ ಅಗತ್ಯವಿಲ್ಲದಿದ್ದರೂ ಅರೆನಗ್ನ ಮಹಿಳೆಯರನ್ನು ತೋರಿಸುವುದು ಈಗಿನ ಟ್ರೆಂಡ್‌. ಟಿವಿ ಮತ್ತು ಅಂತರ್‌ಜಾಲ ಮಾಧ್ಯಮ ಜನಪ್ರಿಯಗೊಂಡ ಬಳಿಕ ಜಾಹೀರಾತುಗಳು ಬೀರುವ ಪ್ರಭಾವ ಇನ್ನಷ್ಟು ಹೆಚ್ಚಾಗಿದೆ. ಈಗೀಗ ಜನರು ಔಷಧಗಳನ್ನು ಕೂಡ ಜಾಹೀರಾತುಗಳನ್ನು ನೋಡಿ ಖರೀದಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಅದರಲ್ಲೂ ಹೊಸ ಹೊಸ ಔಷಧಿಗಳು ಅಣಬೆಗಳು ಹುಟ್ಟಿಕೊಳ್ಳುವಂತೆ ಹುಟ್ಟಿಕೊಂಡಿದ್ದು, ಇವುಗಳ ಜಾಹೀರಾತು ನೋಡಿ ಜನರು ಕುರುಡಾಗಿ ಖರೀದಿಸುತ್ತಿದ್ದಾರೆ. ದಾರಿ ತಪ್ಪಿಸುವ ಮತ್ತು ಸುಳ್ಳು ಜಾಹೀರಾತುಗಳು ವ್ಯಾಪಾರ ನೀತಿಗೆ ವಿರುದ್ಧ ಮಾತ್ರವಲ್ಲದೆ ಉತ್ಪನ್ನಗಳು ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳುವ, ಆಯ್ಕೆಯ, ಅಸುರಕ್ಷಿತ ವಸ್ತುಗಳ ವಿರುದ್ಧವಿರುವ ರಕ್ಷಣೆಯಂತಹ ಕೆಲವು ಮೂಲಭೂತ ಹಕ್ಕುಗಳನ್ನು ಉಲ್ಲಂ ಸುತ್ತಿವೆ. ಜಾಹೀರಾತಿಗೂ ಕೆಲವೊಂದು ನೀತಿ ನಿಯಮಗಳು ಮತ್ತು ಹೊಣೆಗಾರಿಕೆಗಳು ಇವೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಉತ್ಪನ್ನದ ಕುರಿತು ಸಮರ್ಪಕವಾದ ಮಾಹಿತಿ ನೀಡುವುದು ಜಾಹೀರಾತಿನ ಮೂಲ ಉದ್ದೇಶ. ಆದರೆ ಈಗ ಜಾಹೀರಾತುಗಳಲ್ಲಿ ಮೊದಲು ಉಲ್ಲಂಘನೆಯಾಗುತ್ತಿರುವುದೇ ಇದು. 

ಉತ್ಪ್ರೇಕ್ಷಿತ ವರ್ಣನೆ, ಅವಾಸ್ತವಿಕ ಪರಿಣಾಮ, ಇನ್ನಷ್ಟು ಚೆನ್ನಾಗಿ ಕಾಣಲು ವೃತ್ತಿಪರ ಪರಿಕಲ್ಪನೆಗಳನ್ನು ಅನ್ವಯಿಸುವುದು, ನಕಲಿ ಲೈಸೆನ್ಸ್‌, ನಕಲಿ ವಾರಂಟಿಗಳು, ಸಿನಿಮೀಯ ಗಿಮಿಕ್‌ಗಳ ಬಳಕೆ, ಅವಾಸ್ತವಿಕ ರಿಯಾಯಿತಿ ಮತ್ತು ಉಡುಗೊರೆಯ ಕೊಡುಗೆ ಇವೆಲ್ಲ ದಾರಿ ತಪ್ಪಿಸುವ ಜಾಹೀರಾತುಗಳ ಲಕ್ಷಣ ಎನ್ನುತ್ತದೆ ಕಾನೂನು. ಆರೋಗ್ಯಕ್ಕೆ ಹಾನಿಯುಂಟು ಮಾಡುವ ತಂಬಾಕು, ಶರಾಬು, ಪಾನ್‌ ಮಸಾಲದಂತಹ ಉತ್ಪನ್ನಗಳ ಜಾಹೀರಾತುಗಳನ್ನು ನಿಷೇಧಿಸಿದ್ದರೂ ಇದು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಅನೇಕ ಸಂದರ್ಭದಲ್ಲಿ ಉತ್ಪಾದಕರು ಅಡ್ಡದಾರಿಯಲ್ಲಿ ಇಂತಹ ಉತ್ಪನ್ನಗಳು ಜಾಹೀರು ಮಾಡಿ ಜನರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಗ್ರಾಹಕರ ಹಿತರಕ್ಷಣೆಗಾಗಿ ಗ್ರಾಹಕ ಸಂರಕ್ಷಣಾ ಕಾಯಿದೆ ಇದ್ದರೂ, ಆಧುನಿಕ ಮಾರುಕಟ್ಟೆ ತಂತ್ರದ ಎದುರು 1986ರಲ್ಲಿ ರಚಿಸಿರುವ ಈ ಕಾಯಿದೆ ವಿಫ‌ಲಗೊಳ್ಳುತ್ತಿದೆ. ಹೀಗಾಗಿ ಮೋದಿ 2015ರಲ್ಲಿ ವಿಶ್ವಸಂಸ್ಥೆ ರಚಿಸಿದ ಗ್ರಾಹಕರ ಮಾರ್ಗಸೂಚಿಯಲ್ಲಿರುವ ಹಲವು ಅಂಶಗಳನ್ನು ಸೇರಿಸಿಕೊಂಡು ಹೊಸ ಕಾನೂನು ರಚಿಸಲು ಮುಂದಾಗಿದ್ದಾರೆ. ಜತೆಗೆ ಕ್ಷಿಪ್ರವಾಗಿ ಪರಿಹಾರ ನೀಡುವ ಸಲುವಾಗಿ ಗ್ರಾಹಕ ಸಂರಕ್ಷಣೆ ಪ್ರಾಧಿಕಾರವೂ ರಚನೆಯಾಗಲಿದೆ. ಜಾಹೀರಾತುಗಳ ಹಾವಳಿಯಿಂದ ಜನರನ್ನು ಕಾಪಾಡಲು ಕಠಿನ ಕಾನೂನಿನ ಅಗತ್ಯವಿದೆ ಎನ್ನುವುದರಲ್ಲಿ ಯಾವುದೇ ತಕಾರರು ಇಲ್ಲ. ಆದರೆ ಇದರಲ್ಲಿ ಸರಕಾರಗಳು ನೀಡುವ ಪುಟಗಟ್ಟಲೆ ಸಾಧನೆಯ ಜಾಹೀರಾತುಗಳು ಹಾಗೂ ಚುನಾವಣೆ ಸಂದರ್ಭದಲ್ಲಿ ಪಕ್ಷಗಳು ನೀಡುವ ಉದ್ದುದ್ದ ಆಶ್ವಾಸನೆಗಳು ಒಳಗೊಳ್ಳಲಿ ಎನ್ನುವುದು ಜನರ ಅಭಿಮತ.

ಟಾಪ್ ನ್ಯೂಸ್

BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ

BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ

GTD

JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್‌

Kapil-Mishra

Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

Indi-Alliaince

Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?

1-reee

T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

puttige-7-

Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ

BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ

BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ

GTD

JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್‌

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

Kapil-Mishra

Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.