ಕುಸಿದಿದ್ದ ನೇತಾಜಿಯ ಕೈಹಿಡಿದಿದ್ದೇ ಕರುನಾಡು!


Team Udayavani, Jan 23, 2022, 6:00 AM IST

HOSAMANI1

ಹಾವೇರಿಗೆ ಬಂದಾಗ ನೇತಾಜಿಯನ್ನು ಮುತ್ತಿಕ್ಕಿದ ಜನಸ್ತೋಮ..

ಸಿಡಿಲ ಮರಿ, ಕ್ರಾಂತಿಯ ಕಿಡಿ, ಕೋಲ್ಮಿಂಚು. ಹೀಗೆ ನೂರಾರು ಹೆಸರು ಈ ಮಹಾನಾಯಕನಿಗೆ. ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಎಂದರೇನೆ‌, ಇಡೀ ರಾಷ್ಟ್ರಕ್ಕೆ ಅದೇನೋ ಅಚಲ ನಂಬಿಕೆ. ಬ್ರಿಟಿಷರ ವಿರುದ್ಧದ ಸಶಸ್ತ್ರ ಹೋರಾಟದಲ್ಲಿ ರಷ್ಯಾ, ಜಪಾನ್‌, ಜರ್ಮನಿಯಂಥ ಬಲಿಷ್ಠ ರಾಷ್ಟ್ರಗಳನ್ನೂ ಜತೆಗೂಡಿಸಿಕೊಂಡಿದ್ದ ಈ ಮಹಾತ್ಮನ ಜನ್ಮದಿನವಿಂದು. ಕರುನಾಡಿನಲ್ಲಿ ನೇತಾಜಿ ನೆರಳನ್ನು ಹುಡುಕಿ ಹೊರಟಾಗ ಕಂಡ ಕನ್ನಡಿಗ ಕಲಿಗಳು ಇವರು.

“ಕ್ರಾಂತಿಯ ಕಿಡಿ’ ಖ್ಯಾತಿಯ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಎಂಬ ಬಂಗಾಲದ ಮನುಷ್ಯನಿಗೂ ಕರುನಾ ಡಿಗೂ ಒಂದು ವಿಸ್ಮಯಕಾರಿ ನಂಟಿದೆ. ಅದು ಕೇವಲ ನಂಟಲ್ಲ; ಚಾರಿತ್ರಿಕ ಮೈಲಿಗಲ್ಲು. ಇಂದು ನೇತಾಜಿ ಜಗತ್ತಿನ ಮುಂದೆ ಮೇರುವ್ಯಕ್ತಿಯಂತೆ ತೋರುತ್ತಿ ದ್ದರೆ, ಇದಕ್ಕೆ ಕರುನಾಡು ಅಂದು ತೋರಿದ ಪ್ರೀತಿ, ಬೆಂಬಲವೂ ಮುಖ್ಯ ಕಾರಣ. ಒಂದು ವೇಳೆ ಕರ್ನಾಟಕ ಅಂದು ಸುಭಾಷ್‌ಚಂದ್ರ ಬೋಸರ ಜತೆ ನಿಲ್ಲದೆ ಇರುತ್ತಿದ್ದರೆ, ನೇತಾಜಿಯ ರಾಜಕೀಯ ಭವಿಷ್ಯವೇ ಮಸುಕಾಗುತ್ತಿತ್ತೇನೋ!

ಹೌದು. ನೇತಾಜಿಗೆ ರಾಜಕೀಯ ಮರುಜನ್ಮ ನೀಡಿದ್ದೇ ನಮ್ಮ ಕರ್ನಾಟಕ. ಅದರಲ್ಲೂ ಹಾವೇರಿಯ ಸರ್‌ ಸಿದ್ದಪ್ಪ ಹೊಸಮನಿ ಅವರ ಪಾತ್ರ ಸ್ಮರಣೀಯ. ಅದು 1938. ಸುಭಾಷ್‌ಚಂದ್ರ ಬೋಸರು ಗುಜರಾತಿನ ಹರಿಪುರದಲ್ಲಿ ಜರಗಿದ 51ನೇ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಇಡೀ ರಾಷ್ಟ್ರದ ಗಮನ ಸೆಳೆದು ಯುವ ನಾಯಕ ಎನ್ನಿಸಿಕೊಂಡಿದ್ದರು. 1939ರಲ್ಲಿ ಮತ್ತೆ ತ್ರಿಪುರಾ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಪುನರಾಯ್ಕೆ ಬಯಸಿದರು. ಆದರೆ ಆಗ ಕಾಂಗ್ರೆಸ್‌ನಲ್ಲಿ 1920ರಿಂದ 1938ರ ವರೆಗೆ ಮಹಾತ್ಮಾ ಗಾಂಧೀಜಿ ಸೂಚಿಸಿದ ವ್ಯಕ್ತಿಯೇ ಅಧ್ಯಕ್ಷರಾಗುವ ಸಂಪ್ರದಾಯ ಬೆಳೆದುಬಂದಿತ್ತು. ಸುಭಾಷರು ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ಪುನಃ ಆಯ್ಕೆ ಬಯಸಿದಾಗ ಗಾಂಧೀಜಿ ಸಮ್ಮತಿಸಲಿಲ್ಲ. ಬೋಸ್‌ರ ವಿರುದ್ಧ ಮಹಾತ್ಮಾ ಗಾಂಧೀಜಿಯವರು ಪಟ್ಟಾಭಿ ಸೀತಾರಾಮಯ್ಯನ ವರನ್ನು ಕಣಕ್ಕಿಳಿಸಿದರು.

ಆಗ ಆತಂಕದಿಂದಲೇ ಸುಭಾಷರು ನಾಮಪತ್ರ ಸಲ್ಲಿಸಬೇಕಾಯಿತು. ಕಾರಣ, ಇವರಿಗೆ ತಮ್ಮ ಗೆಲುವಿನ ಕುರಿತು ಯಾವುದೇ ಖಾತ್ರಿ ಇರಲಿಲ್ಲ. ಗಾಂಧೀಜಿ, ಜವಾಹರಲಾಲ್‌ ನೆಹರೂ, ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಹಾಗೂ ದೇಶದ ಇತರ ಗಣ್ಯ ನಾಯಕರೆಲ್ಲರೂ ಪಟ್ಟಾಭಿ ಸೀತಾರಾಮಯ್ಯನವರ ಬೆನ್ನಿಗೆ ನಿಂತರು.

ಅಲ್ಲದೆ ದೇಶದ ಎಲ್ಲ ಪ್ರಾದೇಶಿಕ ಕಾಂಗ್ರೆಸ್‌ ಸಮಿತಿಗಳೂ ಗಾಂಧೀಜಿ ಸೂಚಿಸಿದ ಅಭ್ಯರ್ಥಿಯಾದ ಪಟ್ಟಾಭಿ ಅವರ ಪರವಾಗಿಯೇ ಕೆಲಸ ಪ್ರಾರಂಭಿಸಿದವು. ಇದನ್ನೆಲ್ಲ ಕಂಡು ಸುಭಾಷರಿಗೆ ದಿಕ್ಕೇ ತೋಚದಾಯಿತು. ಇಂಥ ಸಂದಿಗ್ಧ ಸಂದರ್ಭದಲ್ಲಿ ಅಂದು ನೇತಾಜಿ ಬಂದಿದ್ದು ಕರ್ನಾಟಕದ ಹಾವೇರಿಗೆ! ಹಾವೇರಿಯ ಸಿದ್ದಪ್ಪ ಹೊಸಮನಿ ಅವರು ಇಲ್ಲದೆ ಹೋಗಿದ್ದಿದ್ದರೆ, ಸುಭಾಷರ ರಾಜಕೀಯ 1939ರಲ್ಲಿ ಮುಗಿದು ಹೋಗು ತ್ತಿತ್ತು. ಸಿದ್ದಪ್ಪ ಹೂಸಮನಿ ಅವರು ಆಗ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರು. ಇವರನ್ನು ಹುಡುಕಿಕೂಂಡು ನೇತಾಜಿ ಹಾವೇರಿಯಲ್ಲಿನ ಮನೆಗೆ ಆಗಮಿಸಿ, ಸಿದ್ದಪ್ಪನವರ ಪಾದಕ್ಕೆ ದೀರ್ಘ‌ದಂಡ ನಮಸ್ಕರಿಸಿ (ವಯಸ್ಸಿನಲ್ಲಿ ಹೊಸಮನಿಯವರು ಹಿರಿಯರಾದ ಕಾರಣ) ಆಶೀರ್ವಾದ ಪಡೆದಿದ್ದರು. ವರ್ತಮಾನದ ರಾಜಕೀಯ ವಿದ್ಯಮಾನಗಳ‌ ಕುರಿತು ಗಂಟೆಗಟ್ಟಲೆ ಚರ್ಚಿಸಿದ್ದರು.

ಭಾರತಕ್ಕೆ ಬದಲಾದ ನಾಯಕತ್ವದ ಆವಶ್ಯಕತೆ ಮನಗಂಡ ಹೊಸಮನಿ ಅವರು ನೇತಾಜಿಯ ಪರವಾಗಿ ಪ್ರಚಾರ ಆರಂಭಿಸಿದರು. ಆದರೆ, ಇನ್ನೊಂದು ದಿಕ್ಕಿನಲ್ಲಿ ಮಹಾತ್ಮಾಗಾಂಧೀಜಿ ಅವರಿಂದ ಪ್ರಚಾರ ಬಿರುಸಾಗಿತ್ತು. ಗಾಂಧೀಜಿಯವರ, “ಪಟ್ಟಾಭಿಯ ಗೆಲುವು ನನ್ನ ಗೆಲುವು. ಪಟ್ಟಾಭಿಯ ಸೋಲು, ಅದು ಗಾಂಧೀಜಿಯ ಸೋಲು’ ಎಂಬ ಹೇಳಿಕೆ ಭಾರೀ ಸಂಚಲನ ಮೂಡಿಸಿತು. ಗಾಂಧೀಜಿಯ ಬಳಗದಲ್ಲಿ ಚುನಾ ವಣೆಗೂ ಮುನ್ನವೇ ಸಂಭ್ರಮ ಮನೆಮಾಡಿತ್ತು.

ಕೊನೆಗೂ ಆ ಚುನಾವಣೆ, ಗಾಂಧೀಜಿ ಅವರಿಗೆ ಆಘಾತ ತಂದಿತ್ತು. ಬೋಸ್‌ ಅವರು 1580 ಮತಗಳನ್ನು ಮತ್ತು ಪಟ್ಟಾಭಿ ಸೀತಾರಾಮಯ್ಯನವರು 1377 ಮತಗಳನ್ನು ಪಡೆದಿದ್ದರು. ನೇತಾಜಿ 203 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆ ವೇಳೆ ಇಡೀ ದೇಶದಲ್ಲಿಯೇ ಸುಭಾಷರಿಗೆ ಹೆಚ್ಚು ಮತಗಳನ್ನು ನೀಡಿದ್ದು ಕರ್ನಾಟಕದ ಜನತೆ. ಇದಕ್ಕೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದವರು ಹಾವೇರಿಯ ಸರ್‌ ಸಿದ್ದಪ್ಪ ಹೊಸಮನಿ! ಮುಂದೆ ಸುಭಾಷ್‌ ಚಂದ್ರ ಬೋಸರು ಮಧ್ಯಾಂತರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಫಾರ್ವರ್ಡ್‌ ಬ್ಲಾಕ್‌ ಪಕ್ಷ ಸ್ಥಾಪಿಸಿದರು. ಫಾರ್ವರ್ಡ್‌ ಬ್ಲಾಕ್‌ನ ಮುಖವಾಣಿ ಪತ್ರಿಕೆಯಲ್ಲಿ ಅಂದು ಸುಭಾಷರು ಹೀಗೆ ಬರೆದಿದ್ದರು: “ನಾನು ಸರ್‌ ಸಿದ್ದಪ್ಪ ಹೊಸಮನಿ ಅವರಿಂದ ಪ್ರೇರಿತಗೊಂಡವನು. ಅವರ ನಿಷ್ಕಲ್ಮಷ, ನಿಷ್ಠುರವಾದಿತನ ನನಗೆ ಆದರ್ಶ. ನಾನು ಕಂಡ ಅಪರೂಪದ ವ್ಯಕ್ತಿಗಳಲ್ಲಿ ಹೊಸಮನಿ ಕೂಡ ಒಬ್ಬರು’ ಎಂದು ಬಣ್ಣಿಸಿದ್ದರು.

ಇಂದು ಹಾವೇರಿ ಜಿಲ್ಲೆಯ ಬಸ್‌ ನಿಲ್ದಾಣದಲ್ಲಿ ಒಂದು ಹೊಂಬಣ್ಣದ ಪ್ರತಿಮೆ ಕಾಣಸಿಗುತ್ತದೆ. ಅದೇ ಸರ್‌ ಸಿದ್ದಪ್ಪ ಹೊಸಮನಿ ಅವರ ಪ್ರತಿಮೆ. ಆದರೆ, ಸಿದ್ದಪ್ಪ ಹೊಸಮನಿಯವರ ಮೇರು ವ್ಯಕ್ತಿತ್ವದ ಮುಂದೆ ಆ ಮೂರ್ತಿ ಬಹಳ ಕುಬjವಾದಂತೆ ತೋರುತ್ತಿದೆ.

ಹಿಟ್ಲರನ ನೆಲದಲ್ಲಿ ಕನ್ನಡಿಗ
ಶಿಂಧೆ ತಾಲೀಮು
1936ರ ಸುಮಾರು. ಬೆಳಗಾವಿಯ ಮೈದಾನದಲ್ಲಿ ತರುಣ ರಾಮಚಂದ್ರ ಭಿಕಾಜಿ ಶಿಂಧೆ ಹಾಕಿ ಸ್ಟಿಕ್‌ ಹಿಡಿದು ಮಿಂಚಿನ ವೇಗದಲ್ಲಿ ಗೋಲ್‌ ಬಾರಿಸುತ್ತಿದ್ದ. ಶಿಂಧೆಯ ಆಟ, ಚುರುಕುತನ ಕಂಡ ಬ್ರಿಟಿಷ್‌ ಅಧಿಕಾರಿಯೊಬ್ಬ ಈತನನ್ನು ಬ್ರಿಟಿಷ್‌ ಸೈನ್ಯಕ್ಕೆ ಸೇರಿಸಿದ. ಸೆಕೆಂಡ್‌ ಮರಾಠಾ ಲೈಟ್‌ ಇನ್‌ಫೆಂಟ್ರಿ ಸೇರಿಕೊಂಡ ಶಿಂಧೆ ಕೆಲವೇ ವರ್ಷಗಳಲ್ಲಿ 2ನೇ ಮಹಾಯುದ್ಧದ ದಿನಗಳನ್ನು ಕಂಡರು. ಬ್ರಿಟಿಷರ ಪರವಾಗಿ ಬಂದೂಕು ಹಿಡಿದರು.
ಅದು 1942ರ ಜೂನ್‌ 20. ಶಿಂಧೆ ಇದ್ದ ಸೇನಾ ತುಕಡಿ ಸಾಕಷ್ಟು ಪರಾಕ್ರಮ ನಡೆಸಿಯೂ, ಜರ್ಮನ್‌ ಸೈನ್ಯದ ಮುಂದೆ ಸೋಲೊಪ್ಪಬೇಕಾಯಿತು. ಹಿಟ್ಲರ್‌ ಕಡೆಯವರು ಇವರೆಲ್ಲರನ್ನು ಸೆರೆಹಿಡಿದು, ಯುದ್ಧ ಕೈದಿಯಾಗಿ ಹ್ಯಾಂಬರ್ಗ್‌ ರೆಡ್‌ ಕ್ಯಾಂಪ್‌ನ ಕಾರಾಗೃಹಕ್ಕೆ ತಳ್ಳಿದರು. ಅದೇ ವೇಳೆ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಲು ಶ್ರಮಿಸುತ್ತಿದ್ದ ಸುಭಾಷ್‌ ಚಂದ್ರ ಬೋಸ್‌, ಜರ್ಮನಿಯಲ್ಲಿದ್ದರು. ಹಿಟ್ಲರ್‌ನನ್ನು ಭೇಟಿ ಮಾಡಿ, ಬ್ರಿಟಿಷರ ವಿರುದ್ಧ ಹೋರಾಟಕ್ಕೆ ರಣತಂತ್ರ ರೂಪಿಸುತ್ತಿದ್ದರು.

1944ರ ಒಂದು ದಿನ.. ನೇತಾಜಿ, ಶಿಂಧೆ ಇದ್ದ ಕ್ಯಾಂಪ್‌ಗ್ೂ ಬಂದರು. “ಬ್ರಿಟಿಷರಿಗಾಗಿ ಹೋರಾಡುವುದನ್ನು ನಿಲ್ಲಿಸಿ, ಇಂಡಿಯನ್‌ ನ್ಯಾಶನಲ್‌ ಆರ್ಮಿಗೆ (ಐಎನ್‌ಎ) ಹೆಗಲುಕೊಡಿ. ನೀವು ನನಗೆ ರಕ್ತ ಕೊಟ್ಟರೆ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದು ಕರೆಕೊಟ್ಟರು. ನೇತಾಜಿಯ ಮಾತು ಗಳು ಶಿಂಧೆಗೆ ರೋಮಾಂಚನ ಹುಟ್ಟಿಸಿದವು. ರಣರಂಗದಲ್ಲಿ ಶಿಂಧೆಯ ಸಾಮರ್ಥ್ಯ ಅರಿತಿದ್ದ ನೇತಾಜಿ, ಯುನೈಟೆಡ್‌ ಆಫೀಸರ್‌ ಹುದ್ದೆ ನೀಡಿದ್ದರು. ಶಿಂಧೆ ಸೇರಿದಂತೆ 2,500 ಭಾರತೀಯ ಸೈನಿಕರು ಜರ್ಮನಿಯಲ್ಲಿ ಹಗಲುರಾತ್ರಿ ಕಠಿನ ತರಬೇತಿ ನಡೆಸುತ್ತಿದ್ದರು. ನೇತಾಜಿ ಮುಂದಿನ ಕಾರ್ಯತಂತ್ರಕ್ಕಾಗಿ ಜಪಾನ್‌ನತ್ತ ಸಾಗಿದರು. ನೇತಾಜಿ ಅವರ ಒಂದೇ ಒಂದು ಕರೆಗೆ ಇವರೆಲ್ಲ ಕಾಯುತ್ತಿದ್ದರು.

ಅಷ್ಟರಲ್ಲೇ ಇತ್ತ ಹಿಟ್ಲರ್‌ ಮಡಿದ. ಜರ್ಮನಿಯಲ್ಲಿದ್ದ ಭಾರತೀಯ ಸೈನಿಕರನ್ನು ಅಮೆರಿಕನ್‌ ಪಡೆಗಳು ಕೊಲ್ಲತೊಡಗಿದವು. ಐಎನ್‌ಎಯ ಇತರ ಸೈನಿಕರು ದಿಕ್ಕಾಪಾಲಾದರು. ದೇವರು ದೊಡ್ಡವನು.. ಶಿಂಧೆ ಮತ್ತು ಕೆಲವರು ಹೇಗೋ ಕಣ್ತಪ್ಪಿಸಿಕೊಂಡು ಹಡಗನ್ನೇರಿ ಮುಂಬಯಿಗೆ ಬಂದರು. ಶಿಂಧೆ ಬೆಳಗಾವಿ ಮನೆಗೆ ಸೇರಿದ ಕೆಲವೇ ತಿಂಗಳಲ್ಲಿ “ವಿಮಾನ ಅಪಘಾತದಿಂದ ಸುಭಾಷ್‌ ಚಂದ್ರ ಬೋಸ್‌ ಇನ್ನಿಲ್ಲ’ ಎಂಬ ಸುದ್ದಿ ಬೆನ್ನ ಹಿಂದೆಯೇ ಬಂದಪ್ಪಳಿಸಿತ್ತು.

-ಮಹೇಶ ನೀ. ಚನ್ನಂಗಿ

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

school

Karnataka; ಶಾಲಾ ಆಸ್ತಿ ಸಂರಕ್ಷಣೆ ಅಭಿಯಾನ ಎಲ್ಲ ಇಲಾಖೆಗಳಿಗೂ ಮಾದರಿ

Forest

Forest: ಅರಣ್ಯದಲ್ಲಿ ನಿರಂತರ ಗಣಿಗಾರಿಕೆ: ಸರಕಾರ ಚರ್ಚಿಸಿ ನಿರ್ಧರಿಸಲಿ

School-Chikki

PM Poshan: ಶಾಲಾ ಮಕ್ಕಳ ಮೊಟ್ಟೆಗೂ ಕನ್ನ ತಪ್ಪಿತಸ್ಥರ ವಿರುದ್ಧ ಕ್ರಮ ಅಗತ್ಯ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.