ಅಫ್ಘಾನಿಸ್ಥಾನದ ಉಗ್ರರಿಗೆ ಪಾಕಿಸ್ಥಾನದ ನಾಯಕತ್ವ ಖಂಡನೀಯ


Team Udayavani, Sep 8, 2021, 6:00 AM IST

ಅಫ್ಘಾನಿಸ್ಥಾನದ ಉಗ್ರರಿಗೆ ಪಾಕಿಸ್ಥಾನದ ನಾಯಕತ್ವ ಖಂಡನೀಯ

ಅಮೆರಿಕ ಸೇನೆ ಅಫ್ಘಾನಿಸ್ಥಾನದಿಂದ ವಾಪಸ್‌ ಹೋಗುವ ಸಂದರ್ಭದಲ್ಲಿ ಜಗತ್ತನ್ನೇ ಮೆಚ್ಚಿಸುವ ರೀತಿಯಲ್ಲಿ ಮಾತುಗಳನ್ನಾಡುತ್ತಿದ್ದ ತಾಲಿಬಾನ್‌ ಮತ್ತು ಹಕ್ಕಾನಿ ಉಗ್ರರು ಈಗ ಎಲ್ಲ ಮರೆತವರಂತೆ ವರ್ತಿಸುತ್ತಿದ್ದಾರೆ.  ತಮ್ಮ ಆಂತರಿಕ ವಿಚಾರದಲ್ಲಿ ಬೇರೊಂದು ದೇಶ ತಲೆಹಾಕುವುದಕ್ಕೆ ಬಿಡುವುದಿಲ್ಲವೆಂದೇ ಹೇಳಿಕೊಂಡು ಬಂದಿದ್ದ ಈ ಉಗ್ರರು, ಈಗ ನಿಧಾನಕ್ಕೆ ಪಾಕಿಸ್ಥಾನವನ್ನು ತಮ್ಮೆಲ್ಲ ಚಟುವಟಿಕೆಗಳಲ್ಲಿ ಭಾಗೀದಾರರನ್ನಾಗಿ ಮಾಡುತ್ತಿದ್ದಾರೆ. ಅಫ್ಘಾನ್‌ ಸರಕಾರ ರಚನೆ ವಿಚಾರದಲ್ಲೂ ತಡವಾಗುತ್ತಿರುವುದಕ್ಕೆ ಇದೇ ಕಾರಣ.

ಈಗಾಗಲೇ ನಿರ್ಧಾರವಾದಂತೆ ತಾಲಿಬಾನ್‌ ನಾಯಕ ಮುಲ್ಲಾ ಮೊಹಮ್ಮದ್‌ ಹಸನ್‌ ಅಖುಂದ್‌ ಅಧ್ಯಕ್ಷನಾಗುವ ಸಾಧ್ಯತೆ ಇದೆ. ಮುಲ್ಲಾ ಬರಾದರ್‌ ಅಖುಂದ್‌ ಮತ್ತು ಮುಲ್ಲಾ ಅಬ್ದುಸ್‌ ಸಲೇಮ್‌ ಈತನ ಉಪನಾಯಕರಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ವಿಚಿತ್ರವೆಂದರೆ, ಮೊದಲಿನಿಂದಲೂ ದೋಹಾ ಟೀಂನ ಮುಲ್ಲಾ ಬರಾದರ್‌ ಅಫ್ಘಾನ್‌ನ ಹೊಸ ಅಧ್ಯಕ್ಷನಾಗಲಿದ್ದಾನೆ ಎಂದೇ ಹೇಳಲಾಗುತ್ತಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿ­ಯ­ಲ್ಲಿ­ರುವವರನ್ನು ಅಧ್ಯಕ್ಷ ಸ್ಥಾನಕ್ಕೆ ಆರಿಸಲಾಗುತ್ತಿದೆ ಎಂಬ ವರದಿಗಳು ಬಂದಿವೆ.

ಈ ಎಲ್ಲ ಬೆಳವಣಿಗೆಗಳು ಪಾಕಿಸ್ಥಾನದ ಐಎಸ್‌ಐ ಮುಖ್ಯಸ್ಥ ಜ| ಫೈಜ್‌ ಹಮೀದ್‌ ಕಾಬೂಲ್‌ಗೆ ತೆರಳಿದ ಬಳಿಕ ಆಗಿವೆ. ಹೀಗಾಗಿ, ದಿಢೀರ್‌ ಬದಲಾವಣೆಯ ಹಿಂದೆ ಪಾಕಿಸ್ಥಾನದ ಕೈವಾಡವಿದೆ ಎನ್ನುವುದು ಸ್ಪಷ್ಟ. ಸರಕಾರ ರಚನೆ ವಿಚಾರದಲ್ಲಿ ತಾಲಿಬಾನ್‌ ಮತ್ತು ಹಕ್ಕಾನಿ ನೆಟ್‌ವರ್ಕ್‌ ನಡುವೆ ಘರ್ಷಣೆಗಳಾಗಿವೆ. ಇದರ ಮಧ್ಯಸ್ಥಿಕೆ ವಹಿಸಿ ಐಎಸ್‌ಐ ಮುಖ್ಯಸ್ಥ ಬಂದಿದ್ದಾನೆ ಎಂದು ಹೇಳಲಾಗಿದ್ದು, ಈತನೇ ಹೊಸ ಸರಕಾರದಲ್ಲಿ ಮುಲ್ಲಾ ಮೊಹಮ್ಮದ್‌ ಅಖುಂದ್‌ ಇರಲಿ ಎಂದು ಪ್ರಸ್ತಾವಿಸಿದ್ದಾನೆ.

ಇದರ ನಡುವೆಯೇ ಮಂಗಳವಾರ ಕಾಬೂಲ್‌ ಸೇರಿದಂತೆ ಆಫ್ಘಾನ್‌ನ  ವಿವಿಧೆಡೆ ಪಾಕಿಸ್ಥಾನ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳಾಗಿವೆ. ಪಾಕಿಸ್ಥಾನ ಸಾಯಲಿ ಎಂಬ ಘೋಷಣೆಯೊಂದಿಗೆ ಮಹಿಳೆಯರೇ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡು ಹೋರಾಟ ನಡೆಸಿದ್ದಾರೆ. ಈ ಹೋರಾಟ ಹತ್ತಿಕ್ಕಲು ತಾಲಿಬಾನ್‌ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.  ಆದರೆ ಈ ಮಹಿಳೆಯರ ಸಿಟ್ಟಿಗೆ ಪ್ರಮುಖ ಕಾರಣವೇ, ಪಾಕಿಸ್ಥಾನ ಅಫ್ಘಾ­ನ್‌ನ ಆಂತರಿಕ ವಿಚಾರದಲ್ಲಿ ಕೈಯಾಡಿಸುತ್ತಿರುವುದು ಆಗಿದೆ. ಪಂಜ್‌

ಶೀರ್‌ನಲ್ಲಿ ಪಾಕಿಸ್ಥಾನದ ವಾಯುಪಡೆ ವಿಮಾನಗಳು ದಾಳಿ ನಡೆಸಿ, ತಾಲಿಬಾನ್‌ಗೆ ಸಹಕಾರ ನೀಡಿವೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ.

ಒಂದು ಲೆಕ್ಕಾಚಾರದಲ್ಲಿ ಅಫ್ಘಾನ್‌ ಜನತೆಯ ಸಿಟ್ಟು ಒಪ್ಪುವಂಥದ್ದೇ. ಇದುವರೆಗೆ ತಾಲಿಬಾನ್‌ ಉಗ್ರರು ಎಷ್ಟೇ ಹಿಂಸೆ ಕೊಟ್ಟಿದ್ದರೂ ಸಹಿಸಿಕೊಂಡೇ ಬಂದಿದ್ದ ಅವರು, ಪಾಕಿಸ್ಥಾನದ ಕೈವಾಡ ಹೆಚ್ಚಾಗುತ್ತಿದ್ದಂತೆ ಸಿಡಿದೆದ್ದಿದ್ದಾರೆ. ಈ ಮೂಲಕ ಆ ದೇಶ ತಮ್ಮ ನೆಲದಲ್ಲಿ ರಾಜಕೀಯ ಮಾಡಲು ಬಂದರೆ ಸುಮ್ಮನೆ ಇರುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.  ಆದರೂ, ಒಂದು ರೀತಿಯಲ್ಲಿ ನೋಡಿದರೆ ತಾಲಿಬಾನ್‌ ಉಗ್ರರು ಈಗಾಗಲೇ ಪಾಕಿಸ್ಥಾನದ ಐಎಸ್‌ಐಗೆ ತಲೆಬಾಗಿರುವುದು ಸ್ಪಷ್ಟ. ತನ್ನದೇ ಜನತೆ ಪಾಕಿಸ್ಥಾನದ ವಿರುದ್ಧ ಪ್ರತಿಭಟನೆ ನಡೆಸುವಾಗ, ಅವರ ವಿರುದ್ಧವೇ ಗುಂಡು ಹಾರಿಸಿದ್ದು ಇದರ ಸಂಕೇತ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಲಿಬಾನ್‌ ನೇತೃತ್ವದ ಸರಕಾರವನ್ನು ನಂಬಬೇಕು ಎಂದಾದರೆ ಪಾಕಿಸ್ಥಾನವನ್ನು ಅಫ್ಘಾನಿಸ್ಥಾನ ದೂರವಿಡಲೇ ಬೇಕು.

ಟಾಪ್ ನ್ಯೂಸ್

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thane; Businessman, key witness in criminal case,

Thane; ಕ್ರಿಮಿನಲ್‌ ಕೇಸ್‌ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ

13-bng

Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್‌ ಡೇಂಜರ್‌ ಸ್ಪಾಟ್‌

12-chowta

Brijesh Chowta: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-editorial

Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ

8

Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

2025; May the mantra of peace and coexistence resonate throughout the world

Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ

Exam

ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bellary; BJP protests demanding Priyank Kharge’s resignation

Bellary; ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

20-water-price

Water Price Hike: ಬಸ್‌ ದರ ಏರಿಕೆ ಬೆನ್ನಲ್ಲೇ ನೀರಿನ ಬೆಲೆ ಹೆಚ್ಚಳ ಬಿಸಿ?

19-bng

Cyber ಕೈಚಳಕ: 2.47 ಕೋಟಿ ರೂ. ವಂಚನೆ

18-bng

Bengaluru: ಪೊಲೀಸ್‌ ಮೇಲೆ ಹಲ್ಲೆ ನಡೆಸಿದ್ದ ವಿದೇಶಿ ಪ್ರಜೆ ಸೆರೆ

17-bng

Bengaluru: ಅನಧಿಕೃತ ಕಾಲ್‌ಸೆಂಟರ್‌ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.