ಮಾಲಿನ್ಯದ ಬಗ್ಗೆ ಚರ್ಚೆಯಾಗಲಿ ದಿಲ್ಲಿ ಚುನಾವಣೆ


Team Udayavani, Jan 10, 2020, 5:17 AM IST

42

ರಾಷ್ಟ್ರ ರಾಜಧಾನಿ ದಿಲ್ಲಿಯ ವಿಧಾನಸಭೆಗೆ ಫೆ.8ರಂದು ಚುನಾವಣೆ ನಡೆಯಲಿದೆ. ಹಲವು ಕಾರಣಗಳಿಗಾಗಿ ದಿಲ್ಲಿಯ ಚುನಾವಣೆ ಗಮನಾರ್ಹವಾಗಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ ಪಾಲಿಗೆ ಇದು ಅಕ್ಷರಶಃ ಅಗ್ನಿಪರೀಕ್ಷೆಯಂಥ ಚುನಾವಣೆ. 2015ರಲ್ಲಿ 70ರ ಪೈಕಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದ ಆಪ್‌ ತಾನು “ಒನ್‌ ಎಲೆಕ್ಷನ್‌ ವಂಡರ್‌’ ಅಲ್ಲ ಎಂಬುದನ್ನು ಸಾಬೀತುಪಡಿಸಬೇಕಾಗಿದೆ. ಇದೇ ವೇಳೆ ಬಿಜೆಪಿಯೂ ದಿಲ್ಲಿಯಲ್ಲಿ ಕಠಿನ ಸವಾಲನ್ನು ಎದುರಿಸುತ್ತಿದೆ.

ಬಿಜೆಪಿ ದಿಲ್ಲಿಯ ಅಧಿಕಾರ ಗದ್ದುಗೆಯಿಂದ ದೂರವಾಗಿ ಎರಡು ದಶಕವೇ ಕಳೆಯಿತು. ಮೋದಿಯ ಪ್ರಖರ ಅಲೆಯ ಹೊರತಾಗಿಯೂ ರಾಜಧಾನಿಯಿರುವ ರಾಜ್ಯದಲ್ಲೇ ಅಧಿಕಾರ ಹಿಡಿಯಲು ಸಾಧ್ಯವಾಗುತ್ತಿಲ್ಲ ಎನ್ನುವುದು ಬಿಜೆಪಿ ಪಾಲಿಗೆ ಬಹಳ ಮುಜುಗರ ತರುವ ವಿಚಾರ. ಕಾಂಗ್ರೆಸ್‌ ಕೂಡ ಚುನಾವಣಾ ಕಣದಲ್ಲಿದೆ. ಆದರೆ ಅದರ ಉಪಸ್ಥಿತಿ ಭಾರೀ ಪ್ರಮಾಣದ ಪರಿಣಾಮ ಉಂಟು ಮಾಡಬಹುದು ಎಂಬ ವಿಶ್ವಾಸ ಸ್ವತಹ ಕಾಂಗ್ರೆಸಿಗರಿಗೇ ಇಲ್ಲ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಆಪ್‌ನ್ನು ಮೂರನೇ ಸ್ಥಾನಕ್ಕೆ ತಳ್ಳಿತ್ತು. ಈ ಒಂದು ಅಂಶ ಕಾಂಗ್ರೆಸಿಗರಲ್ಲಿ ಚುನಾವಣೆ ಬಗ್ಗೆ ಕೆಲವು ನಿರೀಕ್ಷೆಗಳನ್ನು ಮೂಡಿಸಿದೆ. ಆದರೂ ಇನ್ನೂ ಇಲ್ಲಿ ಕಾಂಗ್ರೆಸಿನ ಒಳಜಗಳವೇ ಮುಗಿದಿಲ್ಲ. ಅಲ್ಲದೆ ಪಕ್ಷವನ್ನು ಚುನಾವಣೆಯಲ್ಲಿ ಮುನ್ನಡೆಸುವುದು ಯಾರ ಎನ್ನುವುದು ಕೂಡ ಇತ್ಯರ್ಥವಾಗಿಲ್ಲ. ಈ ಎಲ್ಲ ಇಲ್ಲಗಳ ನಡುವೆಯೂ ಕಾಂಗ್ರೆಸ್‌ ಚುನಾವಣೆಯಲ್ಲಿ ಏನಾದರೂ ಪರಿಣಾಮ ಬೀರಲು ಶಕ್ತವಾದರೆ ಅದರಿಂದ ಹಾನಿಯಾಗುವುದು ಆಪ್‌ಗೆ. ಏಕೆಂದರೆ ಈ ಎರಡೂ ಪಕ್ಷಗಳು ವೋಟ್‌ಬ್ಯಾಂಕ್‌ ಒಂದೇ.

ದಿಲ್ಲಿ ಚುನಾವಣೆ ಉಳಿದ ರಾಜ್ಯಗಳಿಗಿಂತ ಭಿನ್ನವಾಗಿದೆ. ಇದು ಸಂಪೂರ್ಣವಾಗಿ ನಗರ ಪ್ರದೇಶ. ಒಂದು ರೀತಿಯಲ್ಲಿ ನಗರಪಾಲಿಕೆಯ ಚುನಾವಣೆ ನಡೆದಂತೆ. ಉಳಿದ ರಾಜ್ಯಗಳಂತೆ ಇಲ್ಲಿ ರೈತರ ಸಮಸ್ಯೆ, ಗ್ರಾಮೀಣ ಭಾಗದ ಅಭಿವೃದ್ಧಿ ಇತ್ಯಾದಿ ವಿಚಾರಗಳು ಮುಖ್ಯವಾಗುವುದಿಲ್ಲ. ಹಾಗೆಂದು ದಿಲ್ಲಿಯಲ್ಲಿ ಸಮಸ್ಯೆಗಳು ಇಲ್ಲ ಎಂದಲ್ಲ. ಮೈಲುದ್ದದ ಟ್ರಾಫಿಕ್‌, ಮಹಿಳೆಯರ ಸುರಕ್ಷತೆ, ತ್ಯಾಜ್ಯ ನಿರ್ವಹಣೆ ಹೀಗೆ ನಗರಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ದಿಲ್ಲಿಯಲ್ಲೂ ಇವೆ.

ಇವೆಲ್ಲಕ್ಕಿಂತ ಮುಖ್ಯವಾಗಿರುವುದು ದಿಲ್ಲಿಯ ವಾಯುಮಾಲಿನ್ಯ ಸಮಸ್ಯೆ. ಪ್ರತಿ ವರ್ಷ ಮಳೆಗಾಲ ಮುಗಿದು ಚಳಿಗಾಲ ಕಾಲಿಡಲು ಸನ್ನಾಹವಾಗುತ್ತಿರುವ ಹೊತ್ತಿನಲ್ಲಿ ದಿಲ್ಲಿ ಅಕ್ಷರಶಃ ಗ್ಯಾಸ್‌ ಚೇಂಬರ್‌ ಆಗಿ ಬದಲಾಗುತ್ತದೆ. ವಾಯುಮಾಲಿನ್ಯ ತಾರಕಕ್ಕೇರಿ ಜನರು ಉಸಿರಾಡಲು ಕಷ್ಟಪಡಬೇಕಾಗುತ್ತದೆ. ಶುದ್ಧ ಗಾಳಿ ಎನ್ನುವುದು ದಿಲ್ಲಿ ನಿವಾಸಿಗಳ ಪಾಲಿಗೆ ಮರೀಚಿಕೆಯಾಗಿ ಬಹಳ ಸಮಯವಾಯಿತು. ಪಂಜಾಬ್‌ ಮತ್ತು ಹರ್ಯಾಣದ ರೈತರು ಕೊಯ್ಲು ಮುಗಿದ ಬಳಿಕ ಹೊಲಕ್ಕೆ ಬೆಂಕಿ ಹಾಕಿ ಹುಲ್ಲು ಸುಡುವುದರಿಂದ ದಿಲ್ಲಿಯ ವಾತಾವರಣ ಹದಗೆಡುತ್ತದೆ ಎನ್ನುವ ಆರೋಪ ಸರಿಯಾಗಿದ್ದರೂ ಇದರ ಜೊತೆಗೆ ವಾಯುಮಾಲಿನ್ಯ ಹೆಚ್ಚಳಕ್ಕೆ ದಿಲ್ಲಿಯ ಜನರ ಕೊಡುಗೆಯೂ ಇದೆ ಎನ್ನುವುದು ವಾಸ್ತವ.

ಮುಖ್ಯವಾಗಿ ದಿಲ್ಲಿಯ ನಿಯಂತ್ರಣಕ್ಕೆ ಸಿಗದ ವಾಹನಗಳ ಸಂಖ್ಯೆ, ಮಾಲಿನ್ಯದ ಎಲ್ಲ ಮಾನದಂಡಗಳನ್ನು ದಾಟಿರುವ ನರ್ಮದಾ ನದಿ ಈ ಎಲ್ಲ ಸಮಸ್ಯೆಗಳತ್ತವೂ ರಾಜಕೀಯ ಪಕ್ಷಗಳು ಗಮನ ಹರಿಸಬೇಕಾದ ಅಗತ್ಯವಿದೆ. ಉಚಿತ ವಿದ್ಯುತ್‌, ನೀರು, ಪ್ರಯಾಣ ಸೌಲಭ್ಯ ಇವೆಲ್ಲ ತತ್‌ಕ್ಷಣಕ್ಕೆ ಒಂದಿಷ್ಟು ಮತಗಳನ್ನು ಗಳಿಸಿಕೊಡುವ ಮಾರ್ಗಗಳೇ ಹೊರತು ಒಂದು ರಾಜ್ಯವನ್ನು ದೂರಗಾಮಿ ನೆಲೆಯಲ್ಲಿ ಸುಸ್ಥಿರವಾಗಿ ಕಟ್ಟುವ ಕ್ರಮವಲ್ಲ. ದುರದೃಷ್ಟವೆಂದರೆ ಮೂರೂ ಪಕ್ಷಗಳು ಇಷ್ಟರ ತನಕ ವಾಯುಮಾಲಿನ್ಯವಾಗಲಿ, ವಾಹನಗಳ ಸಂಖ್ಯೆಯನ್ನು ನಿಯಂತ್ರಿಸುವ ಬಗ್ಗೆಯಾಗಲಿ ಗಂಭೀರವಾದ ಮಾತುಗಳನ್ನು ಆಡುತ್ತಿಲ್ಲ. ಎಲ್ಲ ಪಕ್ಷಗಳು ಇನ್ನೂ ಅದೇ ಪುಕ್ಕಟೆ ಕೊಡುಗೆಗಳ ಗುಂಗಿನಲ್ಲೇ ಇವೆ. ಚುನಾವಣೆಯಲ್ಲಿ ನಿಜವಾಗಿ ಚರ್ಚೆಯಾಗಬೇಕಿರುವುದು ಜನರ ಭವಿಷ್ಯವನ್ನು ಉಜ್ವಲಗೊಳಿಸುವ ವಿಚಾರಗಳ ಕುರಿತಾಗಿಯೇ ಹೊರತು ತತ್‌ಕ್ಷಣಕ್ಕೆ ಸಿಗುವ ಸೌಲಭ್ಯಗಳ ಕುರಿತಾಗಿ ಅಲ್ಲ.

ಟಾಪ್ ನ್ಯೂಸ್

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.