ಮಾತುಕತೆಗಳ ಅನಂತರ ತಕ್ಕ ಪಾಠ ಕಲಿಸಿ
Team Udayavani, Aug 18, 2020, 5:22 AM IST
ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಸೃಷ್ಟಿಯಾದ ಬಿಕ್ಕಟ್ಟನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ ಒಂದು ವಿಷಯವನ್ನಂತೂ ಸ್ಪಷ್ಟಪಡಿಸಿದೆ. ಒಂದು ವೇಳೆ ಚೀನ ಏನಾದರೂ ತನ್ನ ಸೈನಿಕರನ್ನು ಹಿಂದೆ ಸರಿಯಲು ಹೇಳದಿದ್ದರೆ, ಇದರ ಪರಿಣಾಮವು ದ್ವಿಪಕ್ಷೀಯ ಸಂಬಂಧಗಳ ಮೇಲೂ ಆಗಲಿದೆ ಎಂದು ಎಚ್ಚರಿಸಿದೆ ಭಾರತ. ಮೊದಲು ವಿದೇಶಾಂಗ ಸಚಿವರು ಈ ಎಚ್ಚರಿಕೆಯನ್ನು ನೀಡಿದ್ದರು, ಈಗ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಯವರೂ ಸಹ ಚೀನ ದ ಹೆಸರು ಹೇಳದೆಯೇ ಅದಕ್ಕೆ ಪ್ರಬಲ ಸಂದೇಶ ನೀಡಿದ್ದಾರೆ.
ಈ ಬಾರಿಯಂತೂ ಭಾರತವು ಚೀನ ಕ್ಕೆ ಅದರದ್ದೇ ಧಾಟಿಯಲ್ಲೇ ಪ್ರತ್ಯುತ್ತರ ನೀಡುತ್ತಲೇ ಬಂದಿದೆ. ಗಡಿ ಭಾಗದಲ್ಲಿ ಭಾರತ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಗಳನ್ನು ತಡೆಯಲೇಬೇಕೆಂಬ ಕಾರಣಕ್ಕಾಗಿ ಚೀನಿ ಸೈನಿಕರು ಈ ರೀತಿ ದುರ್ವರ್ತನೆ ತೋರುತ್ತಿದ್ದಾರೆ ಎನ್ನುವ ಅಂಶ ರಹಸ್ಯವಾಗಿಯೇನೂ ಉಳಿದಿಲ್ಲ.
ಎರಡೂ ದೇಶಗಳ ಸೈನ್ಯಾಧಿಕಾರಿಗಳ ನಡುವೆ ಅನೇಕ ಬಾರಿ ಮಾತುಕತೆಯೂ ನಡೆದಿದೆ. ಆದರೆ ಗಾಲ್ವಾನ್, ಪ್ಯಾಂಗಾಂಗ್ ತ್ಸೋ, ಗೋಗರಾ ಮತ್ತು ದೇಪ್ಸಾಂಗ್ ಪ್ರದೇಶಗಳಿಂದ ಚೀನಿ ಸೈನಿಕರು ಪೂರ್ಣವಾಗಿ ಹಿಂದೆ ಸರಿದಿಲ್ಲ. ಗಾಲ್ವಾನ್ ಕಣಿವೆ ಯಲ್ಲಿ ಭಾರತದ ತೀವ್ರ ಪ್ರತಿರೋಧದ ನಂತರ ಚೀನಿ ಪಡೆಗಳು ಹಿಂದೆ ಸರಿದವಾ ದರೂ, ಅವು ತಮ್ಮ ನೆಲೆಗೆ ಪೂರ್ಣ ಹಿಂದಿರುಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಎರಡೂ ದೇಶಗಳ ರಾಜತಾಂತ್ರಿಕರು ಮತ್ತು ಸೇನಾಧಿಕಾರಿಗಳ ನಡುವೆ ಮತ್ತೂಂದು ಚರಣದ ಮಾತುಕತೆ ನಡೆಯಲಿದ್ದು, ಭಾರತ ಈ ಬಾರಿ ಚೀನ ಕ್ಕೆ ಪ್ರಬಲವಾಗಿಯೇ ಪ್ರತ್ಯುತ್ತರಿಸಲು ಸಿದ್ಧವಾಗಿದೆ. ಈಗಾಗಲೇ ಭಾರತವು ವಿದೇಶಿ ಬಂಡವಾಳ ಹೂಡಿಕೆ ನಿಯಮಗಳಲ್ಲಿ ಬದ ಲಾವಣೆ ತಂದು, ಚೀನಿ ಕಂಪೆನಿಗಳಿಗೆ ಪೆಟ್ಟು ನೀಡಿದೆ. ಅಲ್ಲದೇ ಆತ್ಮನಿರ್ಭರ ಭಾರತದ ಕಲ್ಪನೆಯ ಹಿನ್ನೆಲೆಯಲ್ಲಿ ಚೀನಿ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕೆಂಬ ಧ್ವನಿಯೂ ನಮ್ಮಲ್ಲಿ ಜೋರಾಗಿ ಕೇಳಿಬರಲಾರಂಭಿಸಿದೆ.
ದ್ವಿಪಕ್ಷೀಯ ಸಂಬಂಧಗಳ ವಿಚಾರದಲ್ಲಿ ಭಾರತ ತನ್ನ ನಿಲುವಲ್ಲಿ ಕಾಠಿಣ್ಯ ತೋರುತ್ತಿರುವುದು ಚೀನ ಕ್ಕೆ ನಿಜವಾಗಲೂ ನುಂಗಲಾರದ ತುತ್ತಾಗಿ ಪರಿ ಣಮಿಸುತ್ತಿದೆ. ಭಾರತವು ಚೀನ ದ ಪಾಲಿಗೆ ದೊಡ್ಡ ಮಾರುಕಟ್ಟೆ. ಹೀಗಾಗಿ ಚೀನ ಯಾವುದೇ ರೀತಿಯಲ್ಲೂ ತನ್ನ ವ್ಯಾಪಾರಿಕ ಹಿತಗಳಿಗೆ ಧಕ್ಕೆ ಒದಗದಂತೆ ಎಚ್ಚರಿಕೆ ವಹಿಸುತ್ತದೆ. ಕೋವಿಡ್ ಸಮಯದಲ್ಲಿ ಈಗಾಗಲೇ ಅನೇಕ ದೊಡ್ಡ ಕಂಪೆನಿಗಳು ಚೀನ ದಿಂದ ಕಲ್ತೆಗೆದು ಅನ್ಯ ದೇಶಗಳತ್ತ ನೆಲೆ ಹುಡುಕ ಲಾರಂಭಿಸಿವೆ. ಅವುಗಳಿಗೆ ಭಾರತದಲ್ಲೇ ಅಧಿಕ ಸಾಧ್ಯತೆಗಳು ಗೋಚರಿಸುತ್ತಿವೆ. ಈ ಎಲ್ಲಾ ಸಂಗತಿಗಳನ್ನೂ ಪರಿಗಣಿಸಿದಾಗ, ನಿಸ್ಸಂಶಯವಾಗಿಯೂ ಭಾರತ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡು ತ್ತಿದ್ದು, ಚೀನಕ್ಕೆ ಅದರದ್ದೇ ಆದ ರೀತಿಯಲ್ಲಿ ಪೆಟ್ಟು ನೀಡುವುದರಲ್ಲಿ, ಒತ್ತಡ ತರುವುದರಲ್ಲಿ ಜಾಣತನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.