ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Team Udayavani, Dec 26, 2024, 6:00 AM IST

Bangla–Pak

ಭಾರತದ ಪರಮಾಪ್ತ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ನೆರೆಯ ಬಾಂಗ್ಲಾದೇಶದಲ್ಲಿನ ಕಳೆದ ಕೆಲವು ತಿಂಗಳುಗಳಿಂದೀಚಿನ ಬೆಳವಣಿಗೆಗಳು, ಅದು ಭಾರತದ ವಿರುದ್ಧವೇ ತಿರುಗಿಬಿದ್ದಿರುವುದನ್ನು ಪುಷ್ಟೀಕರಿಸುತ್ತಿವೆ. ಯಾವ ದೇಶದ ಸ್ವಾತಂತ್ರ್ಯಕ್ಕಾಗಿ ಭಾರತ ಇಡೀ ವಿಶ್ವ ಸಮುದಾಯವನ್ನು ಎದುರು ಹಾಕಿಕೊಂಡು ಯುದ್ಧವನ್ನು ಸಾರಿ ಬಾಂಗ್ಲಾವನ್ನು ಪಾಕ್‌ನ ಕಪಿಮುಷ್ಟಿಯಿಂದ ಬಂಧಮುಕ್ತಗೊಳಿಸಿತ್ತೋ ಅದೇ ರಾಷ್ಟ್ರವೀಗ ಭಾರತದ ವಿರುದ್ಧ ಕತ್ತಿ ಮಸೆಯಲಾರಂಭಿಸಿರುವುದು ವಿಪರ್ಯಾಸವಲ್ಲದೆ ಇನ್ನೇನಲ್ಲ.

ಬಾಂಗ್ಲಾದಲ್ಲಿನ ಮೂಲಭೂತವಾದಿ ಸಂಘಟನೆಗಳು ಮತ್ತು ವಿಪಕ್ಷ ಜತೆ ಗೂಡಿ ರಾಜಕೀಯ ದಂಗೆ ನಡೆಸಿ, ಅರಾಜಕತೆಯ ವಾತಾವರಣ ಸೃಷ್ಟಿಸಿ ಚುನಾಯಿತ ಪ್ರಧಾನಿ ಶೇಖ್‌ ಹಸೀನಾರನ್ನು ಪದಚ್ಯುತಿಗೊಳಿಸಿದಾಗಿನಿಂದ ಅಲ್ಲಿ ರುವ ಹಿಂದೂ ಸಮುದಾಯ, ಹಿಂದೂಗಳ ಆರಾಧನ ಕೇಂದ್ರಗಳನ್ನು ಗುರಿ ಯಾಗಿಸಿ ನಿರಂತರವಾಗಿ ದಾಳಿಗಳನ್ನು ನಡೆಸುತ್ತಲೇ ಬರಲಾಗಿದೆ. ಮೊಹ ಮ್ಮದ್‌ ಯೂನಸ್‌ ನೇತೃತ್ವದಲ್ಲಿ ಮಧ್ಯಾಂತರ ಸರಕಾರ ರಚನೆಯಾದ ಬಳಿಕ ಈ ಎಲ್ಲ ದೌರ್ಜನ್ಯ, ದಬ್ಟಾಳಿಕೆಗಳಿಗೆ ಕಡಿವಾಣ ಬಿದ್ದೀತು ಎಂಬ ಭಾರತೀಯರ ನಿರೀಕ್ಷೆ ಹುಸಿಯಾದದ್ದೇ ಅಲ್ಲದೆ ಬಾಂಗ್ಲಾದ ಭಾರತ ವಿರೋಧಿ ಮನಃಸ್ಥಿತಿ ಅತಿರೇಕಕ್ಕೆ ತಲುಪಿರುವುದು ಕೇವಲ ಭಾರತದ ಭದ್ರತೆಗೆ ಸವಾಲಾಗಿ ಪರಿ ಣಮಿಸಿ ರುವುದೇ ಅಲ್ಲದೆ ಸ್ವತಃ ಬಾಂಗ್ಲಾದೇಶದ ಭವಿಷ್ಯವನ್ನೇ ಮಸುಕಾಗಿಸಿದೆ.

ಬಾಂಗ್ಲಾ ವಿಮೋಚನ ಸಮರದ ವೇಳೆಯೂ ಪಾಕ್‌ ಪರವಾಗಿದ್ದ ಅಲ್ಲಿನ ಮೂಲಭೂತವಾದಿ ಸಂಘಟನೆಗಳು ಮತ್ತು ಬೆಂಬಲಿತ ಪಕ್ಷದ ಪ್ರಭಾವ ಈಗ ಅಲ್ಲಿನ ಮಧ್ಯಾಂತರ ಸರಕಾರದ ಮೇಲೆ ಹೆಚ್ಚಾಗಿದ್ದು, ಅವುಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಪಾಕಿಸ್ಥಾನದೊಂದಿಗೆ ಕೈಜೋಡಿಸಿರುವ ಬಾಂಗ್ಲಾ ಸರಕಾರ ಅಲ್ಲಿಂದ ಸರಕುಗಳನ್ನು ಆಮದು ಮಾಡಿಕೊಳ್ಳತೊಡಗಿದೆ. ಭಾರತದಲ್ಲಿ ಉಗ್ರಗಾಮಿ ಕೃತ್ಯಗಳನ್ನು ಎಸಗಿದ್ದ, ಉಗ್ರರಿಗೆ ನೆರವು ಒದಗಿಸಿದ್ದವರನ್ನು ಜೈಲಿನಿಂದ ಬಿಡುಗಡೆ ಮಾಡುವ ಧಾಷ್ಟéìತನ ತೋರಿದೆ. ಇವೆಲ್ಲವೂ ಭಾರತದ ಶತ್ರು ರಾಷ್ಟ್ರಗಳಾದ ಪಾಕಿಸ್ಥಾನ ಮತ್ತು ಚೀನದ ಚಿತಾವಣೆಯ ಪರಿಣಾಮ ಎಂಬುದಕ್ಕೆ ಬೇರೆ ಸಾಕ್ಷ್ಯಾಧಾರಗಳ ಅಗತ್ಯವಿಲ್ಲ.

ಜಾಗತಿಕವಾಗಿ ಪ್ರಗತಿ ಪಥದಲ್ಲಿ ಹೆಜ್ಜೆ ಇರಿಸಿರುವ ಭಾರತದ ನಾಗಾಲೋಟಕ್ಕೆ ಕಡಿವಾಣ ಹಾಕಿ, ಈ ಪ್ರದೇಶದಲ್ಲಿ ತನ್ನ ಪಾರಮ್ಯ ಮೆರೆಯಲು ಹರಸಾಹಸ ಪಡುತ್ತಿರುವ ಚೀನ, ಪಾಕಿಸ್ಥಾನದ ಜತೆಗೂಡಿ ಬಾಂಗ್ಲಾದೇಶವನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಷಡ್ಯಂತ್ರದಲ್ಲಿ ನಿರತವಾಗಿದೆ. ತನ್ನ ಅಧಿಕಾರವನ್ನು ಉಳಿಸಿ ಕೊಳ್ಳುವ ಇರಾದೆಯಿಂದ ಬಾಂಗ್ಲಾದ ಮಧ್ಯಾಂತರ ಸರಕಾರದ ನೇತೃತ್ವ ವಹಿಸಿರುವ ಮೊಹಮ್ಮದ್‌ ಯೂನಸ್‌ ಈ ರಾಷ್ಟ್ರಗಳ ಮುಂದೆ ಮಂಡಿಯೂರಿದ್ದಾರೆ.
ತನ್ನ ಕಾಲ ಮೇಲೆ ಕಲ್ಲು ಹಾಕಿಕೊಳ್ಳುತ್ತಿರುವ ಬಾಂಗ್ಲಾ ತನ್ನ ತಪ್ಪುಗಳನ್ನು ತಿದ್ದಿಕೊಳ್ಳದೇ ಹೋದಲ್ಲಿ ಮತ್ತೂಮ್ಮೆ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ.

ಈಗಾಗಲೇ 50,000 ಟನ್‌ ಅಕ್ಕಿಗಾಗಿ ಭಾರತದ ಮುಂದೆ ಕೈಚಾಚಿರುವ ಬಾಂಗ್ಲಾ, ವ್ಯಾವಹಾರಿಕ ಮತ್ತು ಆರ್ಥಿಕವಾಗಿಯೂ ಭಾರತದ ನೆರವನ್ನೇ ಆಶ್ರಯಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಂಗ್ಲಾ ಸರಕಾರದ ನಡೆಗಳು ತೀರಾ ಬಾಲಿಶ ಮತ್ತು ಸಮಯಸಾಧಕತನವಲ್ಲದೆ ಇನ್ನೇನಲ್ಲ. ಇನ್ನಾದರೂ ಭಾರತ ವಿರೋಧಿ ಧೋರಣೆಯನ್ನು ಕೈಬಿಡದೇ ಹೋದಲ್ಲಿ ಸದ್ಯೋಭವಿಷ್ಯದಲ್ಲಿ ಬಾಂಗ್ಲಾದ ಪರಿಸ್ಥಿತಿ ಸಂಪೂರ್ಣ ಅಯೋಮಯವಾಗಲಿರುವುದು ನಿಶ್ಚಿತ.

ಇದೇ ವೇಳೆ ಭಾರತ ಕೂಡ ತನ್ನ ಭದ್ರತೆ ಹಾಗೂ ಪ್ರಾದೇಶಿಕ ಶಾಂತಿಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಬಾಂಗ್ಲಾದಲ್ಲಿನ ಸದ್ಯದ ಬೆಳವಣಿಗೆಗಳು ಮತ್ತು ಅಲ್ಲಿನ ಮಧ್ಯಾಂತರ ಸರಕಾರದ ದೂರದೃಷ್ಟಿ ರಹಿತ ಆಡಳಿತ, ನೀತಿನಿರೂಪಣೆಗಳ ಮೇಲೆ ನಿಗಾ ಇರಿಸಬೇಕಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಈಗಾಗಲೇ ಬಾಂಗ್ಲಾದೇಶ ಭಾಗಶಃ ಮೂಲಭೂತವಾದಿಗಳ ಹಿಡಿತಕ್ಕೆ ಸಿಲುಕಿರುವುದರಿಂದ ಬಾಂಗ್ಲಾದ ಕುರಿತಾಗಿನ ತನ್ನ ನಿಲುವನ್ನು ಭಾರತ ಒಂದಿಷ್ಟು ಕಠಿನಗೊಳಿಸುವುದು ಅನಿವಾರ್ಯ.

ಟಾಪ್ ನ್ಯೂಸ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMW ಕಾರು, 4BHK ಫ್ಲಾಟ್ ಗಿಫ್ಟ್

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.