ಬಡತನದ ವಿರುದ್ಧ ದಿಟ್ಟ ಹೋರಾಟ: ಆಶಯ ಈಡೇರಲಿ


Team Udayavani, Jul 17, 2019, 5:00 AM IST

n-33

ಬಡತನದ ವಿರುದ್ಧದ ಭಾರತದ ಸಮರ ಈಗಿನದ್ದಲ್ಲ. ಗಮನಾರ್ಹ ಸಂಗತಿಯೆಂದರೆ ಕಳೆದ ಕೆಲವು ವರ್ಷಗಳಿಂದ ಈ ಹೋರಾಟದಲ್ಲಿ ಭಾರತ ಉಲ್ಲೇಖಾರ್ಹ ಸಾಧನೆ ಮಾಡುತ್ತಿದೆ ಎನ್ನುವುದು. ದೇಶ-ವಿದೇಶದ ಸಂಸ್ಥೆಗಳು, ಸರ್ಕಾರಿ ವರದಿಗಳು, ವಿಶ್ವಬ್ಯಾಂಕ್‌ ಇತ್ಯಾದಿ ಅಂತಾರಾಷ್ಟ್ರೀಯ ಸಂಸ್ಥೆಗಳ ಅಧ್ಯಯನ ವರದಿಗಳನ್ನು ನೋಡಿದಾಗ ನಮ್ಮ ಸರ್ಕಾರಗಳು ಬಡತನ ನಿರ್ಮೂಲನೆಯ ಹಾದಿಯಲ್ಲಿ ಸದೃಢ ಹೆಜ್ಜೆಯಿಡುತ್ತಾ ಸಾಗುತ್ತಿವೆ ಎನ್ನುವ ಸಕಾರಾತ್ಮಕ ಸಂದೇಶ ಸಿಗುತ್ತದೆ. ಆದರೆ ವರದಿಗಳಿಗೂ ವಾಸ್ತವಕ್ಕೂ ಬಹಳ ಅಂತರವಿದೆ ಎನ್ನುವ ಟೀಕೆಯೂ ಇಲ್ಲದಿಲ್ಲ. ಆ ಟೀಕೆಗಳನ್ನು ಕಡೆಗಣಿಸುವುದಕ್ಕೂ ಸಾಧ್ಯವಿಲ್ಲ.

ಇದೇನೇ ಇದ್ದರೂ, ಇತ್ತೀಚೆಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಾಲಯ ಮತ್ತು ಆಕ್ಸ್‌ಫ‌ರ್ಡ್‌ ಪಾವರ್ಟಿ ಆ್ಯಂಡ್‌ ಹ್ಯೂಮನ್‌ ಇನೀಶಿಯೇಟಿವ್‌ ಜಂಟಿಯಾಗಿ ನಡೆಸಿದ ಅಧ್ಯಯನವು, ಭಾರತದ ಬಡತನದ ವಿರುದ್ಧದ ಹೋರಾಟಕ್ಕೆ ಬೆನ್ನುತಟ್ಟುತ್ತಿವೆೆ. ನೂರಾ ಒಂದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲನೇ ನಂಬರ್‌ನಲ್ಲಿರುವುದು ವಿಶೇಷ. ಸತ್ಯವೇನೆಂದರೆ, ಹಸಿವು, ಕುಪೋಷಣೆ, ಸ್ವಾಸ್ಥ್ಯ, ಶಿಕ್ಷಣ ಮತ್ತು ಭ್ರಷ್ಟಾಚಾರದ ಕುರಿತು ಸಮಯ ಸಮಯಕ್ಕೆ ಬರುವ ವಿಶ್ವ ಸೂಚ್ಯಂಕಗಳೆಲ್ಲ ನಿರಾಶಾದಾಯಕ ಚಿತ್ರಣವನ್ನೇ ಎದುರಿಡುತ್ತಿದ್ದವು. ಹೀಗಾಗಿ, ಈಗ ಬಡತನ ನಿವಾರಣೆಯಲ್ಲಿನ ಭಾರತದ ಪ್ರಯತ್ನ ಸಫ‌ಲವಾಗುತ್ತಿದೆ ಎಂದರೆ, ಈ ವಲಯಗಳಲ್ಲೂ ಭಾರತದ ಸಾಧನೆ ಉತ್ತಮವಾಗಿದೆ ಎಂದೇ ಅರ್ಥ ಬರುತ್ತದೆ.

ಭಾರತದ ರಾಜಕೀಯ ಪಕ್ಷಗಳಿಗೆ ಬಡತನವು ಮೊದಲಿನಿಂದಲೂ ಚುನಾವಣಾ ವಿಷಯವಾಗಿದೆ. ಪ್ರತಿ ಚುನಾವಣೆಯಲ್ಲೂ ಗರೀಬಿ ಹಠಾವೋ ಭರವಸೆಗಳು ಭರಪೂರ ಹರಿದುಬರುತ್ತವೆ. ಪರಿಸ್ಥಿತಿ ಮಾತ್ರ ಬದಲಾಗಿರಲಿಲ್ಲ. ಆದರೆ, ಕಳೆದ ಎರಡು ದಶಕಗಳಲ್ಲಿ ಬಡತನ ನಿರ್ಮೂಲನೆಯ ವಿಷಯದಲ್ಲಿ ಬಲಿಷ್ಠ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದ್ದನ್ನು ಗಮನಿಸುವುದು ಮುಖ್ಯ. ಈಗಿನ ವರದಿಯ ಪ್ರಕಾರ 2006-2016ರ ನಡುವೆ, 27 ಕೋಟಿ ಭಾರತೀಯರು ಬಡತನ ರೇಖೆಯನ್ನು ದಾಟಿ ಮುಂದೆ ಬಂದಿದ್ದಾರೆ. ಕೆಲ ವರ್ಷಗಳ ಹಿಂದಿನ ವಿಶ್ವಬ್ಯಾಂಕ್‌ನ ವರದಿ ಕೂಡ 2004ರಿಂದ 2011ರಲ್ಲಿ ಭಾರತದಲ್ಲಿ ಬಡವರ ಸಂಖ್ಯೆ 38.9 ಪ್ರತಿಶತದಿಂದ 21.2 ಪ್ರತಿಶತಕ್ಕೆ ಕುಸಿದಿದೆ ಎಂದಿತ್ತು. ಅಮೆರಿಕದ ಸಾಮಾಜಿಕ ಅಧ್ಯಯನ ಸಂಸ್ಥೆಯೊಂದು ಭಾರತದಲ್ಲಿ ಪ್ರತಿ ನಿಮಿಷಕ್ಕೆ 44 ಜನ ಬಡತನದಿಂದ ಮುಕ್ತರಾಗುತ್ತಿದ್ದಾರೆ ಎಂದಿತ್ತು.

ಇಲ್ಲಿ ಉದ್ಭವವಾಗುವ ಮತ್ತೂಂದು ಗಂಭೀರ ವಿಷಯವೆಂದರೆ, ಬಡತನವನ್ನು ಹೇಗೆ ಮಾಪಿಸುವುದು ಎನ್ನುವುದು. ಊಟ ಮತ್ತು ವಸತಿಯಂಥ ಮೂಲಭೂತ ಸೌಲಭ್ಯ ಇಲ್ಲದವರು ಬಡವರೇ? ಅಥವಾ ನಿರ್ದಿಷ್ಟ ಆದಾಯದ ಕೆಳಗೆ ಬರುವವರು ಬಡವರೇ? ಬಡತನದ ಕುರಿತ ಅಂತಾರಾಷ್ಟ್ರೀಯ ಮಾಪನಗಳಲ್ಲಿ ಸ್ವಾಸ್ಥ್ಯ, ಶಿಕ್ಷಣ, ಕೆಲಸದ ವಾತಾವರಣದಂಥ ಅಂಶಗಳನ್ನೂ ಪರಿಗಣಿಸಲಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ನೀತಿ ಆಯೋಗದ ಉಪಾಧ್ಯಕ್ಷರ ನೇತೃತ್ವದಲ್ಲಿ ಬಡತನ ನಿರ್ಮೂಲನೆ ಕಾರ್ಯದಳವನ್ನು ರಚಿಸಲಾಯಿತು. ಆಗಲೂ, ಬಡತನದ ವ್ಯಾವಹಾರಿಕ ಪರಿಭಾಷೆಯನ್ನು ನಿಶ್ಚಯಿಸುವುದೂ ಕೂಡ ಈ ತಂಡದ ಕೆಲಸವಾಗಿತ್ತು. ಬಡತನದ ಮಾಪನವೇ ನಿಶ್ಚಯವಾಗಿಲ್ಲ ಎಂದರೆ, ಯಾರನ್ನು ಬಡವರೆಂದು ಕರೆಯುವುದು. ಹೇಳಿಕೊಳ್ಳುವುದಕ್ಕೇನೋ ಭಾರತವಿಂದು ಪ್ರಪಂಚದ ಅತಿ ವೇಗದ ಅರ್ಥ್ಯವ್ಯವಸ್ಥೆಯಾಗಿ ಬದಲಾಗಿದೆ, ಆದರೆ ಇಂದಿಗೂ ದೇಶದ ಬಹುದೊಡ್ಡ ಜನವರ್ಗವೊಂದು ಆರೋಗ್ಯ, ಶಿಕ್ಷಣ, ವಸತಿ, ಶುದ್ಧ ಕುಡಿಯುವ ನೀರಿನಂಥ ಮೂಲ ಅವಶ್ಯಕತೆಗಳಿಂದ ವಂಚಿತವಾಗಿದೆ. ಬಿಹಾರ, ಉತ್ತರಪ್ರದೇಶದಂಥ ರಾಜ್ಯಗಳಲ್ಲಿ ಈಗಲೂ ಮಿದುಳು ಜ್ವರದಿಂದ ನೂರಾರು ಮಕ್ಕಳು ಸಾಯುತ್ತಲೇ ಇದ್ದಾರೆ. ಇಷ್ಟು ದಶಕಗಳಾದರೂ ಆ ರಾಜ್ಯಗಳಲ್ಲಿ ಪರಿಸ್ಥಿತಿ ಸುಧಾರಿಸಿಯೇ ಇಲ್ಲ.

ಆದರೂ, ಇವೆಲ್ಲದರ ನಡುವೆಯೇ ಮೋದಿ ಸರ್ಕಾರ ಬಡತನ ನಿರ್ಮೂಲನೆಗೆ ಪಣತೊಟ್ಟು, ಆ ನಿಟ್ಟಿನಲ್ಲಿ ಹೆಜ್ಜೆಹಾಕುತ್ತಿರುವುದು ಶ್ಲಾಘನೀಯ ಸಂಗತಿಯೇ. ಉದ್ಯೋಗ ಸೃಷ್ಟಿ, ಸರ್ವರಿಗೂ ಶಿಕ್ಷಣ, ಸರ್ವರಿಗೂ ಆರೋಗ್ಯ ಸೇವೆ, ಎಲ್ಲರಿಗೂ ಪೌಷ್ಠಿಕ ಆಹಾರ ಸಿಗುವಂತಾದಾಗ ಬಡತನ ನಿರ್ಮೂಲನೆಯಾಗುತ್ತದೆ. ಈ ನಿಟ್ಟಿನಲ್ಲಿ ಜಾರಿಗೆ ಬಂದಿರುವ ಯೋಜನೆಗಳೆಲ್ಲ ಯಶಸ್ವಿಯಾಗಿ ಅನುಷ್ಠಾನವಾಗಲಿ, ಭಾರತ ಇನ್ನೊಂದು ದಶಕದೊಳಗೆ ಬಡತನ ಮುಕ್ತವಾಗಲಿ ಎಂಬುದಷ್ಟೇ ಆಶಯ.

ಟಾಪ್ ನ್ಯೂಸ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Canada

Canada Temple Attack: ಕೆನಡಾ ದೇಗುಲ ದಾಳಿ: ಜಾಗತಿಕ ವಿರೋಧ ಪ್ರತಿಧ್ವನಿಸಲಿ

Flight

Hoax Call: ಹುಸಿ ಬಾಂಬ್‌ ಬೆದರಿಕೆ ಮರುಕಳಿಸದಿರಲಿ

kannadiga

Editorial: ಕನ್ನಡಿಗರ ನಿಂದನೆಗೆ ಕಠಿನ ಕ್ರಮ: ಸ್ತುತ್ಯರ್ಹ ನಿಲುವು

4-editorial

Editorial: ಸುವರ್ಣ ಕರ್ನಾಟಕ: ವಿಕಾಸಕ್ಕೆ ಕಾರ್ಯಸೂಚಿ ಅಗತ್ಯ

cyber crime

Cyber ​​crime ತಡೆ: ವಿವೇಚನೆಯೇ ಕೀಲಿಕೈ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

9

Bunts Hostel, ಕರಂಗಲ್ಪಾಡಿ ಜಂಕ್ಷನ್‌: ಶಾಶ್ವತ ಡಿವೈಡರ್‌ ನಿರ್ಮಾಣ ಕಾಮಗಾರಿ

8

Mangaluru: ರಾತ್ರಿ ಪ್ರಿಪೇಯ್ಡ್  ಆಟೋ ಇಲ್ಲದೆ ಪ್ರಯಾಣಿಕರ ಪರದಾಟ

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

7

Urwa: ಬಾಯ್ದೆರೆದ ಕಾಂಕ್ರೀಟ್‌ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.