ದಲಾೖ ಲಾಮಾ ಆಯ್ಕೆ ಹಕ್ಕು ಅಮೆರಿಕದ ಮಹತ್ವದ ಹೆಜ್ಜೆ
Team Udayavani, Dec 29, 2020, 5:42 AM IST
ತನಗೆ ಬೇಕಿರುವವರನ್ನು ನವ ದಲಾೖ ಲಾಮಾ ಆಗಿಸಬೇಕೆಂಬ ಚೀನದ ಪ್ರಯತ್ನಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಈಗ ಅಮೆರಿಕದ ಸೆನೆಟ್ ಹೊಸ ದಲಾೖ ಲಾಮಾರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಟಿಬೆಟಿಯನ್ನರ ಅಧಿಕಾರಕ್ಕೆ ಬೆಂಬಲ ನೀಡುವಂಥ ಬಿಲ್ ಪಾಸ್ ಮಾಡಿದೆ. ಅಮೆರಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಸಹಿ ಬೀಳುತ್ತಿದ್ದಂತೆಯೇ, ಈ ಕಾನೂನು ಅಮೆರಿಕದ ನೀತಿಯ ಪ್ರಮುಖ ಭಾಗವಾಗಲಿದೆ. ಮುಂದಿನ ದಿನಗಳಲ್ಲಿ ಅನ್ಯ ದೇಶಗಳೂ ಇದೇ ರೀತಿ ಮಾಡಿದರೆ, ಬೌದ್ಧ ಧರ್ಮಗುರುಗಳ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿರುವ ಚೀನಕ್ಕೆ ಬಹಳ ತೊಂದರೆ ಉಂಟಾಗಲಿದೆ.
ಸಹಜವಾಗಿಯೇ, ಚೀನ ಈಗ ಅಮೆರಿಕದ ನಡೆಯನ್ನು ತನ್ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ಎಂದು ಕಟುವಾಗಿಯೇ ಟೀಕಿಸುತ್ತಿದೆ. ಆದರೆ ಜಗತ್ತಿನಾದ್ಯಂತ ಹರಡಿರುವ ಟಿಬೆಟ್ ಸಮುದಾಯ ಹಾಗೂ ಬೌದ್ಧ ಧರ್ಮೀಯರಿಗೆ ಅಮೆರಿಕದ ನಿರ್ಧಾರ ಬಹಳ ಬಲ ತುಂಬಿದೆ. ಹಿರಿಯ ದಲಾೖ ಲಾಮಾರಿಗೆ 85 ವರ್ಷಗಳು ತುಂಬುತ್ತಿರುವಂತೆಯೇ, ಮುಂದೆ ಅವರ ಜಾಗದಲ್ಲಿ ಯಾರು ಬರುತ್ತಾರೆ ಎನ್ನುವ ಕುತೂಹಲ ಜಗತ್ತಿಗೆ ಇದೆ. ಸಹಜವಾಗಿಯೇ, ಈ ಅಧಿಕಾರವಿರುವುದು ಟಿಬೆಟ್‌ನ ಬೌದ್ಧ ಧರ್ಮೀಯರಿಗೆ. ಆದರೆ ಟಿಬೆಟ್ ಅನ್ನು ಆಕ್ರಮಿಸಿರುವ ಚೀನ ಅಲ್ಲಿನ ಜನರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಲೇ ಬಂದಿದ್ದು, ದಲಾೖ ಲಾಮಾ ಪದವಿಗೆ ತನಗೆ ಬೇಕಿರುವವರನ್ನೇ ಹುಡುಕಾಡಲಾರಂಭಿಸಿತ್ತು.
ಚೀನ ದಲಾೖ ಲಾಮಾ ಸ್ಥಾನವನ್ನು ಕೇವಲ ರಾಜಕೀಯ ಆಯಾಮದಿಂದಷ್ಟೇ ನೋಡಲು ಪ್ರಯತ್ನಿಸುತ್ತಾ ಬಂದಿರುವುದೇ ಸಮಸ್ಯೆಗೆ ಕಾರಣ. ಟಿಬೆಟಿಯನ್ ಜನರಿಗೆ ಹಾಗೂ ಮುಖ್ಯವಾಗಿ ಬೌದ್ಧ ಧರ್ಮೀಯರಿಗೆ ಇದೊಂದು ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಸ್ಥಾನ. ದಲಾೖ ಲಾಮಾರ ರೂಪದಲ್ಲಿ ಬೋಧಿಸತ್ವನು ಕಾಣಿಸಿಕೊಳ್ಳುತ್ತಾನೆ ಎಂದು ಬೌದ್ಧ ಪರಂಪರೆಯು ಬಲವಾಗಿ ನಂಬುತ್ತದೆ.
ಹೀಗಿರುವಾಗ, ಜನರ ಧರ್ಮ, ಧಾರ್ಮಿಕ ನಂಬಿಕೆಗಳನ್ನೆಲ್ಲ ಕೊನೆಗೊಳಿಸಿ, ನಾಸ್ತಿಕತೆಯನ್ನೇ ಪಸರಿಸಲು ಪ್ರಯತ್ನಿಸುವ ಚೀನದ “ಕಮ್ಯುನಿಸ್ಟ್ ಸರಕಾರ’ ದಲಾೖ ಲಾಮಾರ ಸ್ಥಾನದ ಬಗ್ಗೆ ಅನಗತ್ಯ ಅತೀವ ಆಸಕ್ತಿ ತೋರಿಸುತ್ತಿರುವುದು ಅದರ ರಾಜಕೀಯ ಷಡ್ಯಂತ್ರದ ಭಾಗವೇ ಆಗಿದೆ ಎನ್ನುವುದನ್ನು ಸ್ಪಷ್ಟಗೊಳಿಸುತ್ತದೆ. ಇದು ಟಿಬೆಟ್ ಜನರ ನಂಬಿಕೆ ಹಾಗೂ ಸಂಸ್ಕೃತಿಯ ಮೇಲೆ ಚೀನ ನಡೆಸುತ್ತಿರುವ ದಾಳಿಯೂ ಹೌದು.
ದುರಂತವೆಂದರೆ, ಟಿಬೆಟ್‌ನ ವಿಚಾರದಲ್ಲಿ ಚೀನದ ದುರ್ನಡತೆಯನ್ನು ದಶಕಗಳಿಂದಲೂ ಜಾಗತಿಕ ಸಮುದಾಯ ಸುಮ್ಮನೇ ನೋಡುತ್ತಾ ಬಂದಿರುವುದು. ಆದಾಗ್ಯೂ ಭಾರತ ಈ ವಿಚಾರದಲ್ಲಿ ಕಾಲಕಾಲಕ್ಕೆ ಧ್ವನಿಯೆತ್ತುತ್ತಲೇ ಬಂದಿದೆ ಹಾಗೂ ಹಿರಿಯದಲಾೖಲಾಮಾರಿಗೆ ಆಶ್ರಯವನ್ನೂ ಕೊಟ್ಟಿದೆಯಾದರೂ, ಚೀನದ ವಿರುದ್ಧ ಹಾಗೂ ಟಿಬೆಟ್‌ನ ಪರವಾಗಿ ಎಲ್ಲ ರಾಷ್ಟ್ರಗಳೂ ಪ್ರಬಲ ಧ್ವನಿ ಎತ್ತಲೇ ಬೇಕಿದೆ. ಈ ಹಿನ್ನೆಲೆಯಲ್ಲಿಯೇ ಟ್ರಂಪ್ ಸರಕಾರ ಈಗ ಜಾರಿ ಮಾಡಿರುವ “ಟಿಬೆಟನ್ ಪಾಲಿಸಿ ಆ್ಯಂಡ್ ಸಪೋರ್ಟ್ ಆ್ಯಕ್ಟ್ 2020′ ನಿಜಕ್ಕೂ ಶ್ಲಾಘನೀಯವಾದದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.