ದೂರಗಾಮಿ ಪರಿಣಾಮದ ಹೆಜ್ಜೆ ಹೊಸವರ್ಷಕ್ಕೆಮೋದಿ ಪ್ರಕಟಿಸಿದ ಹೊಸ ಕ್ರಮಗಳು


Team Udayavani, Jan 2, 2017, 4:57 PM IST

modi-800.jpg

ಅಪನಗದೀಕರಣದಿಂದ ಆಗಿರುವ ಅಥವಾ ಆಗುತ್ತಿರುವ ತೊಂದರೆಯನ್ನಷ್ಟೇ ಜಪ ಮಾಡುತ್ತ ಕುಳಿತಿರುವ ಅಗತ್ಯವಿಲ್ಲ, ಅದರ ಬದಲಿಗೆ ಹೊಸ ಉಪಕ್ರಮಗಳ ಮೂಲಕ ಪರೋಕ್ಷವಾಗಿ ಆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಿದೆ ಎಂಬ ಸಂದೇಶ ಕೂಡ ಈ ಕೊಡುಗೆಗಳಲ್ಲಿದೆ.

ನೋಟು ನಿಷೇಧದಿಂದಾದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹೊಸ ಕ್ರಮಗಳನ್ನು ಪ್ರಕಟಿಸುತ್ತಾರೆ ಅಥವಾ ಭ್ರಷ್ಟ ಮತ್ತು ಬೇನಾಮಿ ಆಸ್ತಿ ಹೊರಗೆಳೆಯುವ ನಿರ್ಧಾರವನ್ನು ಘೋಷಿಸುತ್ತಾರೆಂದು ಮೊನ್ನೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಕೇಳಲು ಇಡೀ ದೇಶ ಕಾತುರವಾಗಿತ್ತು. ಅದರಲ್ಲೂ, 50 ದಿನಗಳ ಹಿಂದೆ ಹೀಗೇ ದೇಶವನ್ನುದ್ದೇಶಿಸಿ ಮಾತನಾಡಿ ದಿಢೀರನೆ ನೋಟು ನಿಷೇಧದ ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ಕೆಲವರಲ್ಲಿ ಮೊನ್ನೆಯ ಭಾಷಣದ ಬಗ್ಗೆ ಆತಂಕವೂ ಇತ್ತು. ಆದರೆ, ಅಂತಹ ಯಾವುದೇ ನಿರ್ಧಾರ ಪ್ರಕಟಿಸದೆ ಹೊಸವರ್ಷಕ್ಕೆ ಕೆಲ ಕೊಡುಗೆಗಳ ರೂಪದ ಕ್ರಮಗಳನ್ನು ಪ್ರಕಟಿಸಿ ಹೊಸ ಸಂಪ್ರದಾಯವನ್ನು ಅವರು ಆರಂಭಿಸಿದರು.

ಪ್ರಧಾನಿಯವರ ಭಾಷಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಮೂರ್‍ನಾಲ್ಕು ದಿನದಿಂದ ಭಾರಿ ಪ್ರಚಾರ ಸಿಕ್ಕಿತ್ತಾದ್ದರಿಂದ ಅವರು ಕೊನೆಗೆ ಭಾಷಣದಲ್ಲಿ ಪ್ರಕಟಿಸಿದ ಘೋಷಣೆಗಳು ಕೆಲವರಿಗೆ ಸಪ್ಪೆಯೆನಿಸಿರಬಹುದು. ಆದರೆ, ಪ್ರಕಟಿಸಿದ ಐದು ಪ್ರಮುಖ ನಿರ್ಧಾರಗಳು ನಿಸ್ಸಂಶಯವಾಗಿ ಸಕಾರಾತ್ಮಕವಾಗಿವೆ ಮತ್ತು ದೂರಗಾಮಿ ಸತ್ಪರಿಣಾಮಗಳನ್ನೂ ಹೊಂದಿವೆ.

ಬಡ ಹಾಗೂ ಮಧ್ಯಮ ವರ್ಗದವರು ಮಾಡುವ ಕಡಿಮೆ ಮೊತ್ತದ ಗೃಹ ಸಾಲಕ್ಕೆ ಬಡ್ಡಿ ರಿಯಾಯ್ತಿ ನೀಡಿರುವುದು ಸರ್ವರಿಗೂ ವಸತಿ ನೀಡುವ ಕೇಂದ್ರ ಸರಕಾರದ ಯೋಜನೆಯ ಮುಂದುವರಿದ ಭಾಗದಂತಿದೆ. ಸದ್ಯ ನೋಟು ನಿಷೇಧದಿಂದಾಗಿ ಸಂಕಷ್ಟದಲ್ಲಿರುವ ಸಣ್ಣಪುಟ್ಟ ಬಿಲ್ಡರ್‌ಗಳಿಗೂ ಇದರಿಂದ ಲಾಭವಿದೆ. ಒಂದೆರಡು ಲಕ್ಷ ರೂ. ಹೊಂದಿಸುವುದಕ್ಕೂ ಕಷ್ಟಪಡುವ ವರ್ಗಕ್ಕೆ ಇದು ಸಾಕಷ್ಟು ಪ್ರಯೋಜನಕಾರಿ ಕೊಡುಗೆಯೇ.

ನೋಟು ನಿಷೇಧದಿಂದಾಗಿ ರೈತರು ಸಹಕಾರಿ ಸಾಲ ಮರುಪಾವತಿ ಮಾಡಲು ಕಷ್ಟಪಡುತ್ತಿದ್ದರು. ಅದನ್ನು ಪರಿಹರಿಸಲು ಈಗಾಗಲೇ 60 ದಿನಗಳ ವಿನಾಯ್ತಿಯನ್ನು ಸರಕಾರ ಘೋಷಿಸಿತ್ತು. ಅದರ ಬೆನ್ನಲ್ಲೇ ಈಗ ಆ 60 ದಿನಗಳ ಬಡ್ಡಿಯನ್ನು ಮನ್ನಾ ಮಾಡುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಕೇಂದ್ರ ಸರಕಾರ ಬಂದಿದೆ. ಹಾಗೆಯೇ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ರುಪೇ ಕಾರ್ಡ್‌ಗಳಾಗಿ ಪರಿವರ್ತಿಸುವುದು ಮತ್ತು ರೈತಾಪಿ ವರ್ಗದಲ್ಲಿ ಕಾರ್ಡ್‌ ಬಳಕೆಗೆ ಉತ್ತೇಜನ ನೀಡುವುದು ಡಿಜಿಟಲ್‌ ಭಾರತದಲ್ಲಿ ಹಳ್ಳಿಗರು ಹಿಂದುಳಿದಿರಬಾರದು ಎಂಬ ಆಶಯ ಹೊಂದಿದೆ.

ಸದ್ಯ ದೇಶದಲ್ಲಿ ನಿರೀಕ್ಷೆಯಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಇನ್ನೊಂದೆಡೆ, ಕೃಷಿಯಲ್ಲಿ ಹಾಗೂ ಉದ್ದಿಮೆಗಳಲ್ಲಿ ಯಾಂತ್ರೀಕರಣದಿಂದ ಉದ್ಯೋಗಗಳು ನಷ್ಟವಾಗುತ್ತಿವೆ. ಮತ್ತೂಂದೆಡೆ, ಅಪನಗದೀಕರಣದಿಂದಲೂ ಉದ್ಯೋಗ ಸೃಷ್ಟಿಗೆ ಹೊಡೆತ ಬಿದ್ದಿದೆ. ಇದನ್ನು ಎದುರಿಸುವ ಹಾಗೂ ದೀರ್ಘಾವಧಿಯಲ್ಲಿ ಇದನ್ನು ಆರ್ಥಿಕತೆಗೆ ಪ್ರೇರಕವಾಗಿ ಬಳಸಿಕೊಳ್ಳುವ ವಿಧಾನವೆಂದರೆ ಸಣ್ಣ ಉದ್ದಿಮೆಗಳನ್ನು ಪ್ರೋತ್ಸಾಹಿಸುವುದು. ಸಾಲದ ಮಿತಿ ಹೆಚ್ಚಳ ಹಾಗೂ ಖಾತರಿರಹಿತವಾಗಿ 2 ಕೋಟಿ ರೂ. ಸಾಲ ನೀಡುವ ಕ್ರಮಗಳು ಸಣ್ಣ ಉದ್ದಿಮೆಗಳನ್ನು ಸ್ಥಾಪಿಸುವವರಿಗೆ ಉತ್ತೇಜನ ನೀಡಿ, ಗ್ರಾಮೀಣ ಹಾಗೂ ಸಣ್ಣಪುಟ್ಟ ಪಟ್ಟಣಗಳ ಪ್ರದೇಶದಲ್ಲಿ ಹೊಸ ಉದ್ಯೋಗ ಸೃಷ್ಟಿಸುವ ಸಾಧ್ಯತೆಯಿದೆ.

ಇನ್ನು, ಬ್ಯಾಂಕುಗಳಲ್ಲಿ ಠೇವಣಿಗಳ ಮೇಲಿನ ಬಡ್ಡಿ ದರಗಳು ಇಳಿಯುತ್ತಿರುವ ಹೊತ್ತಿನಲ್ಲಿ ಪಿಂಚಣಿ ಅಥವಾ ತಮ್ಮ ಜೀವಮಾನದ ಗಳಿಕೆಯಿಂದ ಬರುವ ಬಡ್ಡಿಯಲ್ಲೇ ಜೀವನ ಮಾಡುವ ವೃದ್ಧರು ಸಂಕಷ್ಟಕ್ಕೆ ಸಿಲುಕಿದ್ದರು. ಅವರಿಗೆ ಶೇ.8ರಷ್ಟು ಬಡ್ಡಿಯ ಗ್ಯಾರಂಟಿ ನೀಡುವ ಮೂಲಕ ಬಾಳ ಮುಸ್ಸಂಜೆಯಲ್ಲಿರುವ ಹಿರಿಯ ಜೀವಗಳಿಗೆ ಸರಕಾರ ದೊಡ್ಡ ಕೊಡುಗೆ ನೀಡಿದಂತಾಗಿದೆ. ಗರ್ಭಿಣಿಯರಿಗೆ 6 ಸಾವಿರ ರೂ. ನೀಡುವ ಯೋಜನೆಯು ಅಪೌಷ್ಟಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇರಿಸಿದ ಪ್ರಮುಖ ಹೆಜ್ಜೆ.

ಅಪನಗದೀಕರಣದಿಂದ ಆಗಿರುವ ಅಥವಾ ಆಗುತ್ತಿರುವ ತೊಂದರೆಯನ್ನಷ್ಟೇ ಈಗಲೂ ಜಪ ಮಾಡುತ್ತ ಕುಳಿತಿರುವ ಅಗತ್ಯವಿಲ್ಲ, ಅದರ ಬದಲಿಗೆ ಹೊಸ ಉಪಕ್ರಮಗಳ ಮೂಲಕ ಪರೋಕ್ಷವಾಗಿ ಆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಿದೆ ಎಂಬ ಸಂದೇಶ ಕೂಡ ಈ ಕೊಡುಗೆಗಳಲ್ಲಿದೆ.

ಟಾಪ್ ನ್ಯೂಸ್

1-fish

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-national-emblem

National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ

MM-Singh

ದೇಶದ ಆರ್ಥಿಕತೆಗೆ ಹೊಸ ಭಾಷ್ಯ ಬರೆದ ಡಾ. ಮನಮೋಹನ್‌ ಸಿಂಗ್‌

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-fish

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.