ಅಮೆರಿಕನ್‌ ಚುನಾವಣೆಯ ಪ್ರಭಾವ; ಎಚ್‌-1ಬಿ ವೀಸಾ ವಿಚಾರ


Team Udayavani, Oct 10, 2020, 6:00 AM IST

ಅಮೆರಿಕನ್‌ ಚುನಾವಣೆಯ ಪ್ರಭಾವ; ಎಚ್‌-1ಬಿ ವೀಸಾ ವಿಚಾರ

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಜನಪ್ರಿಯ ಕಾರ್ಯಕ್ರಮಗಳು, ಭರವಸೆಗಳ ಮೂಲಕ ಮತದಾರರನ್ನು ಸೆಳೆದು ಕೊಳ್ಳುವ ಪ್ರಯತ್ನ ಎಗ್ಗಿಲ್ಲದೇ ಸಾಗಿದೆ. ಈ ಬಾರಿಯೂ ರಿಪಬ್ಲಿಕನ್‌ ಪಕ್ಷದ ಪ್ರಮುಖ ಚಹರೆಯಾಗಿರುವ ಡೊನಾಲ್ಡ್‌ ಟ್ರಂಪ್‌, ಮತ್ತೆ 4 ವರ್ಷ ಆಡಳಿತಾವಕಾಶ ಪಡೆಯಲು ಕೋವಿಡ್‌ ಸೋಂಕಿನ ನಡುವೆಯೂ ತಮ್ಮ ಪ್ರಯತ್ನಗಳಿಗೆ ವೇಗ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಅವರೀಗ ಎಚ್‌-1ಬಿ ವೀಸಾಗೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸುವ ಘೋಷಣೆ ಮಾಡಿದ್ದಾರೆ. ಎಚ್‌-1ಬಿ ವೀಸಾ ವಿಚಾರದಲ್ಲಿ 4 ತಿಂಗಳುಗಳ ಹಿಂದೆಯೇ ಟ್ರಂಪ್‌ ಹಲವು ನಿರ್ಬಂಧಗಳನ್ನು ಜಾರಿ ಮಾಡಿದ್ದರು. ಈಗ ಅದನ್ನು ಮತ್ತಷ್ಟು ಬಿಗಿಗೊಳಿಸುತ್ತಿರುವುದು ಔದ್ಯಮಿಕ ವಲಯದಿಂದ ತೀವ್ರ ಟೀಕೆ ಎದುರಿಸುತ್ತಿದೆ.

ಅಮೆರಿಕದಲ್ಲಿ ನವೆಂಬರ್‌ 3ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಚುನಾವಣ ದಿನಾಂಕ ಸಮೀಪಿಸುತ್ತಿರುವಂತೆಯೇ ಟ್ರಂಪ್‌ ಮತ್ತಷ್ಟು ಜನಪ್ರಿಯ ಧೋರಣೆಗಳತ್ತ ವಾಲುವುದು ನಿಶ್ಚಿತ. ಅಮೆರಿಕದ ಆರ್ಥಿಕತೆ ಕೋವಿಡ್‌ನ‌ ಹೊಡೆತದಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿದೆಯಾದರೂ ಆರ್ಥಿಕತೆಗೆ ಆರಂಭಿಕ ಸಮಯದಲ್ಲಿ ಬಿದ್ದ ಪೆಟ್ಟು ಲಕ್ಷಾಂತರ ಜನರ ಉದ್ಯೋಗ ನಷ್ಟಕ್ಕೆ ಕಾರಣವಾಯಿತು. ಈ ನಿರುದ್ಯೋಗದ ಸಮಸ್ಯೆಯನ್ನು ತಮ್ಮ ಚುನಾವಣ ಪ್ರಚಾರದ ಪ್ರಮುಖ ಅಸ್ತ್ರವಾಗಿಸಿಕೊಂಡಿದೆ ಜೋ ಬೈಡನ್‌ ನೇತೃತ್ವದ ಡೆಮಾಕ್ರಟಿಕ್‌ ಪಕ್ಷ. ಅಮೆರಿಕನ್‌ ಕೆಲಸಗಳು ಅಮೆರಿಕನ್ನರಿಗೇ ಸಿಗುವಂತೆ ಮಾಡುತ್ತೇನೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಟ್ರಂಪ್‌ ಅವರಿಗೆ ತಮ್ಮ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಸಮಸ್ಯೆ ಸವಾಲಾಗಿದ್ದು, ಕೊನೆಯ ಅಸ್ತ್ರವಾಗಿ ಅವರು ಎಚ್‌-1ಬಿ ವೀಸಾವನ್ನು ಬಳಸುತ್ತಿದ್ದಾರೆ. ನವ ನಿರ್ಬಂಧಗಳು ಅಮೆರಿಕನ್ನರ ನೌಕರಿಗಳನ್ನು ಉಳಿಸಲು ಮತ್ತು ಅರ್ಥವ್ಯವಸ್ಥೆಯನ್ನು ಹಳಿಯೇರಿಸಲು ಸಹಕರಿಸಲಿವೆ ಎನ್ನುವುದು ಶ್ವೇತಭವನದ ವಾದ.

ಅನ್ಯ ದೇಶದವರು ಅಮೆರಿಕನ್ನರ ಕೆಲಸಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎನ್ನುವ ಅಸಮಾಧಾನ ಅಲ್ಲಿನ ಜನರಿಗೆ ದಶಕಗಳಿಂದ ಇದ್ದು, ಈಗಿನ ಸಂಕಷ್ಟವು ಅವರಲ್ಲಿ ಅಸಮಾಧಾನ ಹೆಚ್ಚುವಂತೆ ಮಾಡಿದೆ. ಇದು ಎಷ್ಟು ಸೂಕ್ಷ್ಮ ವಿಚಾರವಾಗಿ ಬದಲಾಗಿದೆಯೆಂದರೆ, ವಿಪಕ್ಷ ಡೆಮಾಕ್ರಟಿಕ್‌ ಪಾರ್ಟಿ ಸಹ ಕಳೆದ ಬಾರಿ ಮಾಡಿದಂತೆ ಈ ಬಾರಿ ಎಚ್‌-1ಬಿ ವೀಸಾ ಮೇಲೆ ವಿಧಿಸಲಾದ ನಿರ್ಬಂಧಗಳ ವಿಚಾರದಲ್ಲಿ ಜೋರಾಗಿ ಧ್ವನಿಯೆತ್ತುತ್ತಿಲ್ಲ.

ಈ ಹಿಂದೆಯೇ ಅಮೆರಿಕನ್‌ ಕಂಪೆನಿಗಳಲ್ಲಿನ ವಿದೇಶಿ ಕೆಲಸಗಾರರ ನೌಕರಿಯ ವಿಚಾರದಲ್ಲಿ ಹಾಗೂ ಭತ್ಯೆಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಐಟಿ ಕಂಪೆನಿಗಳಿಗೆ ಸ್ಥಳೀಯ ನೌಕರರನ್ನು ನೇಮಿಸಿಕೊಳ್ಳಲು ಹೆಚ್ಚು ಖರ್ಚು ಆಗುತ್ತಿದೆ. ಸಹಜವಾಗಿಯೇ, ಟ್ರಂಪ್‌ ಆಡಳಿತದ ಇಂಥ ನಿರ್ಧಾರಗಳಿಂದಾಗಿ ಅಮೆರಿಕನ್ನರಿಗೆ ಖುಷಿಯಾಗಲಿದೆಯಾದರೂ ಭಾರತೀಯ ಮೂಲದ ಮತದಾರರ ಭಾವನೆ ಹೇಗಿರಲಿದೆಯೋ ತಿಳಿಯದು. ಅಮೆರಿಕನ್‌ ಚುನಾವಣೆಯಲ್ಲಿ ಫ್ಲೊರಿಡಾ ಸೇರಿದಂತೆ 14 ರಾಜ್ಯಗಳು ಫ‌ಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರಾಜ್ಯಗಳಲ್ಲಿ ಭಾರತೀಯ ಮೂಲದ ಮತದಾರರ ಸಂಖ್ಯೆಯೂ ಅಧಿಕವಿದೆ. ಹೀಗಾಗಿ ಎಚ್‌-1ಬಿ ವೀಸಾ ವಿಚಾರದಲ್ಲಿನ ಟ್ರಂಪ್‌ರ ನಡೆಗಳು, ಈ ಮತವರ್ಗಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಲಿವೆಯೋ ನೋಡಬೇಕು.

ಟಾಪ್ ನ್ಯೂಸ್

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-national-emblem

National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ

MM-Singh

ದೇಶದ ಆರ್ಥಿಕತೆಗೆ ಹೊಸ ಭಾಷ್ಯ ಬರೆದ ಡಾ. ಮನಮೋಹನ್‌ ಸಿಂಗ್‌

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.