ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು
Team Udayavani, Oct 26, 2024, 6:00 AM IST
ಕಳೆದ 2-3 ವಾರಗಳಿಂದ ರಾಜ್ಯದ ರಾಜಧಾನಿ ಬೆಂಗಳೂರು ಸುತ್ತಮುತ್ತ ವ್ಯಾಪಕ ಮಳೆ ಯಾಗಿದೆ. ಇದರ ಪರಿಣಾಮವಾಗಿ ನಗರದ ಹಲವೆಡೆ ಮಳೆ ನೀರು ನುಗ್ಗಿ ಸಮಸ್ಯೆಯನ್ನು ಸೃಷ್ಟಿಸಿದ್ದರೆ ಮತ್ತೆ ಹಲವೆಡೆ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಭಾರೀ ಅಡಚಣೆಯುಂಟಾಗಿತ್ತು. ಇದೇ ವೇಳೆ ಕೆಲವೊಂದು ಅವಘಡ ಸಂಭವಿಸಿ ಜೀವಹಾನಿ, ಆಸ್ತಿಪಾಸ್ತಿಗೆ ನಷ್ಟ ಸಂಭವಿಸಿದೆ.
ಪ್ರತೀ ವರ್ಷವೂ ಈ ಸಮಸ್ಯೆ ತಲೆದೋರುತ್ತಿದ್ದು ಇದರ ನಿವಾರಣೆಗಾಗಿ ಸರಕಾರ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ನಿರಂತರ ಪ್ರಯತ್ನ ನಡೆಸುತ್ತಲೇ ಬಂದಿದೆಯಾದರೂ ಇವೆಲ್ಲವೂ ನಿರೀಕ್ಷಿತ ಫಲಿತಾಂಶವನ್ನು ತಂದುಕೊಟ್ಟಿಲ್ಲ ಎನ್ನುವುದು ವಾಸ್ತವ. ಬೆಂಗಳೂರಿನಲ್ಲಿ ಮಳೆಯಿಂದಾದ ಅವಾಂತರದ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಕಂಪೆನಿಯ ನಿವೃತ್ತ ಅಧಿಕಾರಿಯೋರ್ವರು ಮಾಡಿದ ಟ್ವೀಟ್ ಅನ್ನು ಮುಂದಿಟ್ಟು ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್, ಬೆಂಗಳೂರಿನಲ್ಲಿರುವ ಎಲ್ಲ ಬಹುರಾಷ್ಟ್ರೀಯ ಕಂಪೆನಿಗಳು ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು.
ಈ ಕಂಪೆನಿಗಳಿಗೆ ಅಗತ್ಯವಿರುವ ವಿಶ್ವದರ್ಜೆಯ ಮೂಲಸೌಕರ್ಯವನ್ನು ಒದಗಿಸಲು ನಮ್ಮ ಸರಕಾರ ಸಿದ್ಧ ಎಂದು ಹೇಳಿದ್ದಾರೆ. ಆಂಧ್ರ ಸಚಿವರ ಈ ಆಹ್ವಾನ ತೀರಾ ಬಾಲಿಶ ಮತ್ತು ಅಪ್ರಬುದ್ಧವೇ ಸರಿ.
ಇದೇ ಮಾರ್ಚ್ ಮಾಸಾಂತ್ಯದಲ್ಲಿ ಕೇರಳದ ಕೈಗಾರಿಕ ಸಚಿವರು ಬೆಂಗಳೂರಿನಲ್ಲಿನ ನೀರಿನ ಸಮಸ್ಯೆಯನ್ನು ಮುಂದಿಟ್ಟು ಐಟಿ ಕಂಪೆನಿಗಳು ಕೇರಳಕ್ಕೆ ಸ್ಥಳಾಂತರಗೊಳ್ಳುವಂತೆ ಆಹ್ವಾನ ನೀಡುವ ಮೂಲಕ ನಗೆಪಾಟಲಿಗೀಡಾಗಿದ್ದರು. ಜುಲೈಯಲ್ಲಿ ಉದ್ಯೋಗ ಮೀಸಲು ವಿಷಯವಾಗಿ ಚರ್ಚೆ ಏರ್ಪಟ್ಟಾಗ ಆಂಧ್ರದ ಸಚಿವ ನಾರಾ ಲೋಕೇಶ್ ಅವರು ಇಂತಹುದೇ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದರು. ಈ ಎರಡೂ ಸಂದರ್ಭಗಳಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಾಗಲೀ, ಐಟಿಬಿಟಿ ಕಂಪೆನಿಗಳಾಗಲೀ ಈ ನಾಯಕರ ಹೇಳಿಕೆಗಳಿಗೆ ಸೊಪ್ಪು ಹಾಕಿರಲಿಲ್ಲ ಎನ್ನುವುದು ಬೇರೆ ಮಾತು. ಆದರೆ ಈ ನಾಯಕರು ಮತ್ತದೇ ಚಾಳಿಯನ್ನು ಮುಂದುವರಿಸಿರುವುದು ವಿಪರ್ಯಾಸ.
ರಾಜ್ಯ ಸರಕಾರಗಳು ತಮ್ಮ ರಾಜ್ಯದ ಪ್ರಗತಿಯ ದೃಷ್ಟಿಯಿಂದ ಬಂಡವಾಳ ಆಕರ್ಷಿಸಲು ಹಾಗೂ ಕಂಪೆನಿಗಳು ಮತ್ತು ಬೃಹತ್ ಉದ್ಯಮಗಳನ್ನು ಸಳೆಯಲು ವಿವಿಧ ಮೂಲಸೌಕರ್ಯಗಳ ಒದಗಣೆ, ಉತ್ತೇಜನದಾಯಕ ಕ್ರಮಗಳನ್ನು ಕೈಗೊಳ್ಳುವುದು ಹೊಸದೇನಲ್ಲ. ತನ್ಮೂಲಕ ಆಯಾಯ ರಾಜ್ಯದಲ್ಲಿ ಉದ್ಯಮಗಳು ಸ್ಥಾಪನೆಯಾಗಿ, ರಾಜ್ಯದ ಬೊಕ್ಕಸಕ್ಕೆ ಆದಾಯ ಹರಿದುಬರುವುದರ ಜತೆಯಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇದು ಸಹಜ ಪ್ರಕ್ರಿಯೆ ಕೂಡ. ಆದರೆ ನೈಸರ್ಗಿಕ ಸಮಸ್ಯೆ, ಲೋಪದೋಷಗಳನ್ನು ಮುಂದಿಟ್ಟು ಇನ್ನೊಂದು ರಾಜ್ಯದಲ್ಲಿರುವ ಕಂಪೆನಿಗಳನ್ನು ನಮ್ಮ ರಾಜ್ಯಕ್ಕೆ ಸ್ಥಳಾಂತರಗೊಳ್ಳಿ ಎನ್ನುವುದು ದಾಷ್ಟéìವಲ್ಲದೆ ಇನ್ನೇನು?. ಇಂತಹ ಕಾರಣಗಳನ್ನೇ ಮುಂದಿಟ್ಟು ನಮ್ಮ ರಾಜ್ಯಕ್ಕೆ ಸ್ಥಳಾಂತರಗೊಳ್ಳಿ ಎಂದು ಪ್ರತಿಯೊಂದು ರಾಜ್ಯವೂ ಬೇರೆ ರಾಜ್ಯದಲ್ಲಿನ ಕಂಪೆನಿಗಳಿಗೆ ಸ್ಥಳಾಂತರ ಗೊಳ್ಳುವಂತೆ ಆಹ್ವಾನ ನೀಡಲಾರಂಭಿಸಿದರೆ ರಾಜ್ಯಗಳ ನಡುವೆ ಬಲುದೊಡ್ಡ ಕಾದಾಟವೇ ನಡೆದೀತು. ರಾಜ್ಯ-ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆಯನ್ನು ಆಳುವವರು ಅರ್ಥಮಾಡಿಕೊಳ್ಳಬೇಕು. ಇಲ್ಲದೇ ಇದ್ದರೆ ಸದೃಢ ಗಣತಂತ್ರಕ್ಕೆ ಅಪಾಯ ಎದುರಾಗಬಹುದು.
ರಾಜಕೀಯ ಧುರೀಣರ ಬಾಲಿಶತನದ ಹೇಳಿಕೆಗಳೇನೇ ಇರಲಿ, ಅವೆಲ್ಲವನ್ನು ಪಕ್ಕಕ್ಕಿರಿಸಿ, ಆ ಹೇಳಿಕೆಗೆ ಕಾರಣವಾದ ವಿಷಯ, ಅಂಶಗಳತ್ತ ನಮ್ಮ ಸರಕಾರ ಒಂದಿಷ್ಟು ಗಮನ ಹರಿಸಬೇಕು. ಮಳೆ ಬಂದಾಕ್ಷಣ ಇಡೀ ನಗರದಲ್ಲಿನ ಜನಜೀವನ ಅಸ್ತವ್ಯಸ್ತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದನ್ನು ನಿವಾರಿಸಬೇಕಾದ ಅನಿವಾ ರ್ಯತೆಯಂತೂ ಇದ್ದೇ ಇದೆ. ನಗರ ಬೆಳೆದಂತೆ ಈ ಸಮಸ್ಯೆಗಳೆಲ್ಲ ಮಾಮೂಲು ಎಂಬ ಉಡಾಫೆಯ ಮಾತಿಗಿಂತ ದೂರದೃಷ್ಟಿಯಿಂದ ಕೂಡಿದ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಅತ್ಯಗತ್ಯ. ಇತ್ತ ರಾಜ್ಯ ಸರಕಾರ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ತುರ್ತು ಗಮನ ಹರಿಸಬೇಕೆಂಬುದರಲ್ಲಿ ಎರಡು ಮಾತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.