ಸಂಧಾನ ಉತ್ತಮ ನಡೆ

ಅಮೆರಿಕ-ಇರಾನ್‌ ಸಂಘರ್ಷ

Team Udayavani, Jun 25, 2019, 5:00 AM IST

25

ಅಮೆರಿಕ ಮತ್ತು ಇರಾಕ್‌ ನಡುವಿನ ಸಂಘರ್ಷ ಉಲ್ಬಣಿಸಿದೆ. ತೈಲ ಟ್ಯಾಂಕರ್‌ ಸ್ಫೋಟಿಸಿದ ಮತ್ತು ಅಮೆರಿಕ ಡ್ರೋನ್‌ ಅನ್ನು ಇರಾನ್‌ ಹೊಡೆದುರುಳಿಸಿದ ಬಳಿಕ ಉಭಯ ದೇಶಗಳು ಯುದ್ಧ ಸನ್ನದ್ಧವಾಗಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಡ್ರೋನ್‌ ಹೊಡೆದುರುಳಿಸಿದ ಘಟನೆಯ ಬಳಿಕ ಯುದ್ಧಕ್ಕೆ ಆದೇಶ ನೀಡಿದರೂ ಕೊನೆ ಕ್ಷಣದಲ್ಲಿ ಅದನ್ನು ಹಿಂದೆಗೆದುಕೊಂಡರು. ಬಹಳ ಕಾಲದಿಂದ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಇರಾನ್‌ ಮತ್ತು ಅಮೆರಿಕ ನಡುವೆ ತಿಕ್ಕಾಟ ನಡೆಯುತ್ತಿತ್ತು. ಡ್ರೋನ್‌ ಹೊಡೆದುರುಳಿಸಿದ ಘಟನೆ ಅದು ಇನ್ನಷ್ಟು ತೀವ್ರಗೊಳ್ಳಲು ಒಂದು ನೆಪವಾಗಿತ್ತಷ್ಟೆ.

ಇರಾನ್‌ ಮೇಲೆ ಯುದ್ಧ ಸಾರಲು ಅಮೆರಿಕ ಹೊಂಚು ಹಾಕಿ ಕುಳಿತಿದೆ. ಅದಾಗ್ಯೂ ಡ್ರೋನ್‌ ಹೊಡೆದುರುಳಿಸಿದ ಘಟನೆ ಬಳಿಕ ಟ್ರಂಪ್‌ ತೋರಿಸಿದ ಸಂಯಮ ಅನೇಕರಿಗೆ ಆಶ್ಚರ್ಯ ಉಂಟು ಮಾಡಿದೆ.ಇದಕ್ಕೆ ಹಲವು ಕಾರಣಗಳಿವೆ. ಮಧ್ಯ ಪೂರ್ವದಲ್ಲಿ ಈಗ ಪರಿಸ್ಥಿತಿ ಅಮೆರಿಕಕ್ಕೆ ಪೂರಕವಾಗಿಲ್ಲ. ಸೌದಿ ಅರೇಬಿಯ ಹೊರತುಪಡಿಸಿದರೆ ಉಳಿದ ದೇಶಗಳು ಅಮೆರಿಕ ಜೊತೆಗೆ ನಿಕಟ ಬಾಂಧವ್ಯ ಹೊಂದಿಲ್ಲ. ಅಲ್ಲದೆ ಅಫ್ಘಾನ್‌ನಂಥ ದೇಶಗಳಲ್ಲಿ ನಿಷ್ಪ್ರಯೋಜಕ ಯುದ್ಧಗಳನ್ನು ಮಾಡಿ ಯೋಧರನ್ನು ಬಲಿಗೊಡುವುದಕ್ಕೆ ಅಮೆರಿಕದಲ್ಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅದೇ ಮಾದರಿಯ ಇನ್ನೊಂದು ಯುದ್ಧಕ್ಕೆ ಮುಂದಾದರೆ ದೇಶದೊಳಗಿನ ವಿರೋಧಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಜಾಗತಿಕ ಆರ್ಥಿಕತೆ ಬಲಹೀನವಾಗಿದ್ದು, ಈ ಸಂದರ್ಭದಲ್ಲಿ ಯುದ್ಧವೇನಾ ದರೂ ಸಂಭವಿಸಿದರೆ ಅದನ್ನು ತಾಳಿಕೊಳ್ಳುವುದು ಅಮೆರಿಕದಂಥ ದೇಶಕ್ಕೂ ಕಷ್ಟ. ಈ ಎಲ್ಲ ಕಾರಣಗಳಿಗೆ ಟ್ರಂಪ್‌ ಯುದ್ಧಕ್ಕೆ ಆದೇಶ ನೀಡಿಯೂ ಅನಂತರ ಸಂಯಮ ತೋರಿಸಿದ್ದಾರೆ.

ಅಮೆರಿಕ, ರಷ್ಯಾ, ಚೀನ ಸೇರಿದಂತೆ ಎಲ್ಲ ದೈತ್ಯ ರಾಷ್ಟ್ರಗಳಿಗೆ ಕಣ್ಣಿರುವುದು ಮಧ್ಯ ಪೂರ್ವದ ಸಮೃದ್ಧ ತೈಲ ಸಂಪತ್ತಿನ ಮೇಲೆ. ರಷ್ಯಾ ಬಂದರು ಅಭಿವೃದ್ಧಿ ಮತ್ತಿತರ ಕಾರ್ಯಕ್ರಮಗಳ ಮೂಲಕ ಈಗಾಗಲೇ ಇರಾನ್‌ ಜತೆಗೆ ಉತ್ತಮ ಸಂಬಂಧ ಸ್ಥಾಪಿಸಿದೆ. ಚೀನ ಕೂಡಾ ಬೆಲ್r ಆ್ಯಂಡ್‌ ರೋಡ್‌ ಯೋಜನೆಯ ಮೂಲಕ ಮಧ್ಯ ಪೂರ್ವಕ್ಕೆ ನಿಕಟವಾಗಲು ಪ್ರಯ ತ್ನಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಇರಾನ್‌ ಜತೆಗೆ ನೇರ ಕದನಕ್ಕಿಳಿದರೆ ತಕ್ಷಣ ಅಲ್ಲದಿದ್ದರೂ ದೀರ್ಘಾವಧಿ ಯಲ್ಲಿ ಅದರಲ್ಲಿ ಇತರ ದೇಶಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸೇರಿಕೊಳ್ಳುವ ಸಾಧ್ಯತೆ ಇರು ವುದರಿಂದ ಸದ್ಯಕ್ಕೆ ಅಮೆರಿಕ ಯುದ್ಧದ ಯೋಜನೆಯನ್ನು ಕೈಬಿಟ್ಟಿರುವಂತೆ ಕಾಣಿಸುತ್ತದೆ. ಮಧ್ಯ ಪೂರ್ವದಲ್ಲಾಗುವ ಯಾವುದೇ ಅಸ್ಥಿರತೆ ತೈಲ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಸದ್ಯ ಯಾವ ದೇಶವೂ ತೈಲ ಬೆಲೆ ಏರಿಕೆ ಯ ಹೊರೆಯನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇರಾನ್‌ ಸೇನೆಯೂ ತೀರಾ ದುರ್ಬಲವೇನಲ್ಲ. ಇದಕ್ಕೂ ಮಿಗಿಲಾಗಿ ಜಗತ್ತಿನ ಬಹುತೇಕ ತೈಲ ಸಾಗಾಟ ಹಡಗುಗಳು ಹಾದು ಹೋಗುವ ಹೊರ್ಮುಜ್‌ ಜಲಸಂಧಿಯನ್ನೇನಾದರೂ ಇರಾನ್‌ ತಡೆದರೆ ಇಡೀ ಜಗತ್ತು ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ.

ಈ ಎಲ್ಲ ಹಿನ್ನೆಲೆಯಲ್ಲಿ ಅಮೆರಿಕ ಅದ್ಯಕ್ಷರು ಯುದ್ಧ ಕೈಬಿಟ್ಟು ಇರಾನ್‌ ಮೇಲೆ ಇನ್ನಷ್ಟು ಒತ್ತಡ ಹೇರುವ ಹಾದಿಯನ್ನು ಆಯ್ದುಕೊಂಡಿದ್ದಾರೆ ಮತ್ತು ಈ ಸಂದರ್ಭದಲ್ಲಿ ಇದು ಸಮುಚಿತವಾದ ನಿರ್ಧಾರವೂ ಆಗಿತ್ತು. ಇರಾನ್‌ ಅಣು ಬಾಂಬ್‌ ತಯಾರಿಸುವುದನ್ನು ತಡೆಯಬೇಕೆಂದಿದ್ದರೆ ಅದರ ಮೇಲೆ ಇನ್ನಷ್ಟು ರಾಜತಾಂತ್ರಿಕ ಒತ್ತಡಗಳನ್ನು ಹೇರುವುದು ಅಗತ್ಯ. ಜಗತ್ತಿಗೆ ಈಗ ಬೇಕಿರುವುದು ಶಾಂತಿಯೇ ಹೊರತು ಯುದ್ಧವಲ್ಲ. ಈ ವಿಚಾರವನ್ನು ಜಾಗತಿಕ ನಾಯಕರು ಅರ್ಥ ಮಾಡಿಕೊಳ್ಳಬೇಕು.

ಅಮೆರಿಕ ಹೇರಿದ ಆರ್ಥಿಕ ದಿಗ್ಬಂಧನಗಳಿಂದಾಗಿ ಈಗಾಗಲೇ ಇರಾನ್‌ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರಿಯಲ್ ಮೌಲ್ಯ ಪಾತಾಳಕ್ಕಿಳಿದು ಜನರ ಪ್ರತಿರೋಧವನ್ನು ಎದುರಿಸಲಾಗಿದೆ ಸರ್ಕಾರ ಹೈರಣಾಗಿದೆ. ಅಲ್ಲದೆ ಅಣು ಬಾಂಬು ತಯಾರಿಸಲೇ ಬೇಕೆಂದು ಹಠಕ್ಕೆ ಬಿದ್ದಿರುವಂತೆ ವರ್ತಿಸುತ್ತಿರುವ ಇರಾನ್‌ ಕ್ರಮೇಣ ಅಂತರಾಷ್ಟ್ರೀಯ ಸಮುದಾಯದ ಬೆಂಬಲವನ್ನೂ ಕಳೆದುಕೊಳ್ಳುವ ಭೀತಿಯಲ್ಲಿದೆ.

ಅಮೆರಿಕ-ಇರಾನ್‌ ನಡುವಿನ ಪ್ರಕ್ಷುಬ್ಧತೆ ತನ್ನದೇ ಆದ ರೀತಿಯಲ್ಲಿ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಇರಾನ್‌ನಲ್ಲಿ ಭಾರತದ ಕೆಲವು ಲಕ್ಷ ಮಂದಿ ನೌಕರಿ ಮಾಡುತ್ತಿದ್ದು, ಯುದ್ಧವೇನಾದರೂ ಸಂಭವಿಸಿದರೆ ಇವರನ್ನು ವಾಪಸು ಕರೆತರುವುದು ಅನಿವಾರ್ಯವಾಗಬಹುದು. ಅಲ್ಲದೆ ಈಗಲೂ ತೈಲಕ್ಕಾಗಿ ನಾವು ಇರಾನ್‌ ಅನ್ನು ಅವಲಂಬಿಸಿದ್ದೇವೆ. ಕಚ್ಚಾತೈಲ ಬೆಲೆ ಏರಿಕೆಯಾದರೆ ಅದರ ಪರಿಣಾಮ ಏನಾಗುತ್ತದೆ ಎನ್ನುವ ಧಾರಾಳ ಅನುಭವ ನಮಗಿದೆ. ಹೀಗಾಗಿ ಇರಾನ್‌-ಅಮೆರಿಕ ಸಂಘರ್ಷ ಉಲ್ಬಣವಾಗದಂತೆ ನೋಡಿಕೊಳ್ಳಲು ಭಾರತದ ತನ್ನದೇ ಆದ ಪಾತ್ರವನ್ನು ನಿಭಾಯಿಸುವ ಅನಿವಾರ್ಯತೆ ಇದೆ. ಉಭಯ ದೇಶಗಳನ್ನು ಸಂಧಾನಕ್ಕೆ ಮನವೊಲಿಸುವ ಕೆಲಸವನ್ನು ಈ ಸಂದರ್ಭದಲ್ಲಿ ಮೋದಿ ಸರ್ಕಾರ ಮಾಡಬಹುದು.

ಅಮೆರಿಕ, ರಷ್ಯಾ, ಚೀನ ಸೇರಿದಂತೆ ಎಲ್ಲ ದೈತ್ಯ ರಾಷ್ಟ್ರಗಳಿಗೆ ಕಣ್ಣಿರುವುದು ಮಧ್ಯ ಪೂರ್ವದ ಸಮೃದ್ಧ ತೈಲ ಸಂಪತ್ತಿನ ಮೇಲೆ. ರಷ್ಯಾ ಬಂದರು ಅಭಿವೃದ್ಧಿ ಮತ್ತಿತರ ಕಾರ್ಯಕ್ರಮಗಳ ಮೂಲಕ ಈಗಾಗಲೇ ಇರಾನ್‌ ಜತೆಗೆ ಉತ್ತಮ ಸಂಬಂಧ ಸ್ಥಾಪಿಸಿದೆ. ಚೀನ ಕೂಡಾ ಬೆಲ್r ಆ್ಯಂಡ್‌ ರೋಡ್‌ ಯೋಜನೆಯ ಮೂಲಕ ಮಧ್ಯ ಪೂರ್ವಕ್ಕೆ ನಿಕಟವಾಗಲು ಪ್ರಯತ್ನಿಸುತ್ತಿದೆ.

ಟಾಪ್ ನ್ಯೂಸ್

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Jammu and Kashmir: Vehicle falls into gorge

Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

Vavar Mosque: Sabarimala pilgrims should not go to Vavar Mosque: BJP MLA

Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ

Sydney Test: Virat reminds Australian audience of sandpaper case

Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್‌ ಕೇಸ್‌ ನೆನಪು ಮಾಡಿದ ವಿರಾಟ್‌|Video

Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!

Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-editorial

Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ

8

Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

2025; May the mantra of peace and coexistence resonate throughout the world

Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ

Exam

ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

shreyas manju’s Vishnupriya movie releasing on Feb 21

ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ

2(1

Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್‌

1(1

Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.