ಜಗತ್ತಿಗೆ ಈಗ ಮತ್ತೊಂದು ಯುದ್ಧದ ಅಗತ್ಯವಿಲ್ಲ


Team Udayavani, Aug 4, 2022, 6:00 AM IST

ಜಗತ್ತಿಗೆ ಈಗ ಮತ್ತೊಂದು ಯುದ್ಧದ ಅಗತ್ಯವಿಲ್ಲ

ಅಮೆರಿಕ ಹೌಸ್‌ನ ಸ್ಪೀಕರ್‌ ನ್ಯಾನ್ಸಿ ಅವರ ತೈವಾನ್‌ ಭೇಟಿ ಭಾರೀ ವಿವಾದ ಪಡೆದುಕೊಂಡಿದ್ದು, ಮತ್ತೊಂದು ಯುದ್ಧದ ಮುನ್ಸೂಚನೆ ತೋರಿಸುತ್ತಿದೆ. ಸದ್ಯ ಜಗತ್ತು ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣದಿಂದಾಗಿ ನಲುಗಿ ಹೋಗಿದೆ. ಈಗ ಏನಾದರೂ ತೈವಾನ್‌ ಮೇಲೆ ಚೀನ ಯುದ್ಧ ಸಾರಿದರೆ, ಇಡೀ ವಿಶ್ವದ ಆರ್ಥಿಕತೆ ಮೇಲೇಳಲಾರದಂಥ ಸ್ಥಿತಿಗೆ ಹೋಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ವಿಚಿತ್ರವೆಂದರೆ, ಈಗ ತೈವಾನ್‌ ಚೀನದ ಅಧೀನದಲ್ಲಿಯೇ ಇದ್ದು, ಸ್ವಾಯತ್ತೆಯ ಸರಕಾರ ನಡೆಸುತ್ತಿದೆ. ಚೀನದಲ್ಲಿ ಕಮ್ಯೂನಿಸ್ಟ್‌ ಸರಕಾರವಿದ್ದರೆ, ತೈವಾನ್‌ನಲ್ಲಿ ಪ್ರಜಾಪ್ರಭುತ್ವ ಮಾದರಿ ಸರಕಾರವಿದೆ. ಚೀನಗಿಂತಲೂ ತೈವಾನ್‌ನಲ್ಲಿ ಜನರ ಪರಿಸ್ಥಿತಿ ಉತ್ತಮವಾಗಿದೆ. ಅಲ್ಲದೆ, ತೈವಾನ್‌ ಸ್ವತಂತ್ರವಾಗಿಯೇ ಬೇರೆ ಬೇರೆ ದೇಶಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಕೆಲವು ತಾಂತ್ರಿಕ ಕಂಪೆನಿಗಳು, ತಮ್ಮ ವಸ್ತುಗಳನ್ನು ಜಗತ್ತಿನಾದ್ಯಂತ ರಫ್ತು ಮಾಡುತ್ತಿವೆ.

ಈಗ ಚೀನದ ಕಂಗೆಡಿಸಿರುವ ವಿಚಾರವೆಂದರೆ, ತೈವಾನ್‌ ವಿಚಾರದಲ್ಲಿ ಪದೇ ಪದೆ ಅಮೆರಿಕ ಮೂಗು ತೂರಿಸುತ್ತಿದೆ ಎಂಬುದು. ಅಲ್ಲದೆ, ಯಾವುದೇ ಕಾರಣಕ್ಕೂ ತೈವಾನ್‌ ತನ್ನ ಕೈತಪ್ಪಿ ಹೋಗಬಾರದು ಎಂಬ ನಿಲುವು ಅದರದ್ದು. ಹೀಗಾಗಿಯೇ ಅದು ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳಲು ತಯಾರಾಗಿದೆ.

ಇನ್ನೊಂದು ಆಯಾಮದಲ್ಲಿ ನೋಡುವುದಾದರೆ, ಮೊದಲಿನಿಂದಲೂ ತೈವಾನ್‌ ದೇಶ, ಚೀನದ ಕೈಯಿಂದ ಹೊರಗುಳಿಯಲು ಯತ್ನಿಸುತ್ತಲೇ ಇದೆ. ಇತಿಹಾಸವನ್ನು ನೋಡಿದರೆ, ಈ ಎರಡೂ ಭೂಭಾಗಗಳು ಒಂದಾಗಲೇ ಇಲ್ಲ. ಆದರೆ 1971ರಲ್ಲಿ ಚೀನ ಜಾರಿಗೆ ತಂದಿರುವ “ಒನ್‌ ಚೀನ’ ನೀತಿ, ಇತರ ಭೂಭಾಗಗಳ ಮೇಲೆ ಕಣ್ಣು ಹಾಕುವಂತೆ ಮಾಡಿದೆ. ಅಷ್ಟೇ ಅಲ್ಲ, ಟಿಬೆಟ್‌ ಅನ್ನು ಈಗಾಗಲೇ ನುಂಗಿಕೊಂಡಿರುವ ಅದು, ಭಾರತದ ಭೂಭಾಗಗಳ ಮೇಲೂ ಕಣ್ಣು ಹಾಕಿದೆ ಎಂಬುದು ನಗ್ನಸತ್ಯ.

ಇದೆಲ್ಲ ಸಂಗತಿಗಳನ್ನು ಬದಿಗಿಟ್ಟು ನೋಡುವುದಾದರೆ, ಈಗಾಗಲೇ ಚೀನ ಯುದ್ಧಕ್ಕೆ ಸನ್ನದ್ಧವಾಗಿರುವುದು ಕಾಣುತ್ತಿದೆ. ಮಂಗಳವಾರ ರಾತ್ರಿಯೇ, ತೈವಾನ್‌ ಸುತ್ತಲು ತನ್ನ ನೌಕಾದಳದ ಪರೀಕ್ಷೆ ನಡೆಸಿದೆ. ಒಟ್ಟು ಆರು ಸ್ಥಳಗಳಲ್ಲಿ ತನ್ನ ಸೇನೆಯನ್ನು ಸನ್ನದ್ಧವಾಗಿ ನಿಲ್ಲಿಸಿ ಡ್ರಿಲ್‌ ಮಾಡಿದೆ. ಅತ್ತ ಅಮೆರಿಕವೂ ತನ್ನ ನಾಲ್ಕು ಯುದ್ಧ ನೌಕೆಗಳನ್ನು ದಕ್ಷಿಣ ಚೀನ ಸಮುದ್ರದತ್ತ ಕಳುಹಿಸಿದೆ.

ಅಂದರೆ, ಈಗ ಚೀನ ಮತ್ತು ತೈವಾನ್‌ ನಡುವೆ ಯುದ್ಧವಾಗಲಿದೆ ಎಂಬುದಕ್ಕಿಂತ, ಚೀನ ಮತ್ತು ಅಮೆರಿಕ ಮಧ್ಯೆ ಸಮರವಾಗಲಿದೆ ಎಂಬುದೇ ಆತಂಕದ ವಿಚಾರ. ಏಕೆಂದರೆ ಈಗ ಯುದ್ಧ ಶುರುವಾದರೆ, ತೈವಾನ್‌ ಬೆನ್ನ ಹಿಂದೆ ಅಮೆರಿಕ ಮತ್ತದರ ಮಿತ್ರ ದೇಶಗಳು ಕೂಡಿಕೊಳ್ಳ ಲಿವೆ. ಅತ್ತ ಚೀನಗೆ ರಷ್ಯಾ, ಪಾಕಿಸ್ಥಾನದಂಥ ದೇಶಗಳು ಬೆಂಬಲ ಕೊಡಬಹುದು. ಆಗ, ಯುದ್ಧ ಭೀಕರವಾಗುತ್ತದೆ ಎಂಬುದಂತೂ ಸತ್ಯ.

ಆದರೆ ಈಗ ಜಗತ್ತು ಯುದ್ಧ ನೋಡುವ ಸನ್ನಿವೇಶದಲ್ಲಿ ಇಲ್ಲವೇ ಇಲ್ಲ. ಈಗಾಗಲೇ ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದಿಂದಾಗಿ, ಎಲ್ಲ ಬೇಡಿಕೆ ಮತ್ತು ಪೂರೈಕೆ ವ್ಯವಸ್ಥೆಗಳು ಹದಗೆಟ್ಟು ಹೋಗಿವೆ. ಬೆಲೆ ಏರಿಕೆ ಗಗನಕ್ಕೇರಿದ್ದು, ಪೆಟ್ರೋಲಿಯಂ ವಸ್ತುಗಳು ದುಬಾರಿಯಾಗಿವೆ. ಇಂಥ ಪರಿಸ್ಥಿತಿಯಲ್ಲಿ ಪ್ರಬಲ ದೇಶಗಳ ಮಧ್ಯೆ ಯುದ್ಧವಾದರೆ, ಜಗತ್ತು ಉಳಿಯುವುದು ಅಸಾಧ್ಯ. ಹೀಗಾಗಿ, ಪರಸ್ಪರ ಮಾತುಕತೆಯಿಂದಲೇ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ.

 

ಟಾಪ್ ನ್ಯೂಸ್

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

PM-yojana

Education: ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಬಡ ಪ್ರತಿಭಾನ್ವಿತರಿಗೆ ವರದಾನ

supreme-Court

Supreme Court: ಖಾಸಗಿ ಸಂಪನ್ಮೂಲ ಸ್ವಾಧೀನ ಸುಪ್ರೀಂ ತೀರ್ಪು ಸಮತೋಲಿತ

Canada

Canada Temple Attack: ಕೆನಡಾ ದೇಗುಲ ದಾಳಿ: ಜಾಗತಿಕ ವಿರೋಧ ಪ್ರತಿಧ್ವನಿಸಲಿ

Flight

Hoax Call: ಹುಸಿ ಬಾಂಬ್‌ ಬೆದರಿಕೆ ಮರುಕಳಿಸದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.