ಥರ್ಡ್‌ ಪಾರ್ಟಿ ವಿಮೆ ಕಂತು ಏರಿಕೆ ಬರೆ ಹೊರೆ ಆದರೂ ಪ್ರಯೋಜನಕರ

Team Udayavani, Mar 7, 2017, 3:45 AM IST

car-1.jpg

ವಾಹನಗಳು ಮತ್ತು ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಥರ್ಡ್‌ ಪಾರ್ಟಿ ವಿಮಾ ಪ್ರೀಮಿಯಂ ಏರಿಸುವ ಪ್ರಸ್ತಾವ ಉತ್ತಮವಾಗಿದೆ. ವಾಹನ ಮಾಲಕರಿಗೆ ಇದು ಹೊರೆ ನಿಜ. ಆದರೆ ಇದರಿಂದ ಅಪಘಾತದಲ್ಲಿ ಒಳಗೊಂಡ ತೃತೀಯ ವ್ಯಕ್ತಿಗೂ ವಾಹನ ಮಾಲಕರಿಗೂ ಹೆಚ್ಚು ಪ್ರಯೋಜನ ಉಂಟಾಗುವ ಸಾಧ್ಯತೆ ಇದೆ.

ಜಿಎಸ್‌ಟಿ ಜಾರಿಯಾದ ಬಳಿಕ ವಾಹನಗಳ ಬೆಲೆ ತುಸು ಇಳಿಯುವ ನಿರೀಕ್ಷೆಯಿತ್ತು. ಆದರೆ ಇದೇ ವೇಳೆ ಸರಕಾರ ಥರ್ಡ್‌ ಪಾರ್ಟಿ ಇನ್ಶೂರೆನ್ಸ್‌ ಪ್ರೀಮಿಯಂ ಮೊತ್ತವನ್ನು ಶೇ. 50ರಷ್ಟು ಹೆಚ್ಚಿಸುವ ಪ್ರಸ್ತಾವ ಮುಂದಿರಿಸುವ ಮೂಲಕ ಈ ಇಳಿಕೆಯ ಖುಷಿಯನ್ನು ಕಸಿದುಕೊಂಡಿದೆ. ಮೋಟಾರು ವಾಹನ ಕಾಯಿದೆಯಡಿಯಲ್ಲಿ ಥರ್ಡ್‌ ಪಾರ್ಟಿ ವಿಮೆ ಕಡ್ಡಾಯ. ಇದರ ಲಾಭ ಸಿಗುವುದು ವಾಹನದ ಮಾಲಕನಿಗೂ ಅಲ್ಲ, ವಿಮೆ ಕಂಪೆನಿಗೂ ಅಲ್ಲ; ಬದಲಾಗಿ ಅಪಘಾತದಲ್ಲಿ ಒಳಗೊಂಡಿರುವ ಮೂರನೇ ವ್ಯಕ್ತಿಗೆ. ಹೀಗಾಗಿ ಇದು ಥರ್ಡ್‌ ಪಾರ್ಟಿ ವಿಮೆ. ಅಪಘಾತದಲ್ಲಿ ಯಾರಾದರೂ ಮೃತಪಟ್ಟರೆ ಅಥವಾ ಅಂಗವಿಕಲರಾದರೆ ವಾಹನ ಮಾಲಕನ ಪರವಾಗಿ ಪರಿಹಾರ ನೀಡುವ ಬಾಧ್ಯತೆಯನ್ನು ವಿಮೆ ಕಂಪೆನಿಗಳು ವಹಿಸಿಕೊಳ್ಳುತ್ತವೆ. ವಾಹನ ಹೊಂದಿದವರು ತಮ್ಮ ವಾಹನಗಳಿಗೆ ವಿಮೆ ಮಾಡಿಸದಿದ್ದರೂ ಥರ್ಡ್‌ ಪಾರ್ಟಿ ವಿಮೆ ಹೊಂದಿರಲೇ ಬೇಕು. ಫ‌ಸ್ಟ್‌ ಪಾರ್ಟಿ ವಿಮೆ ಅಥವಾ ಕಾಂಪ್ರಹೆನ್ಸಿವ್‌ (ಸಮಗ್ರ) ಇನ್ಶೂರೆನ್ಸ್‌ ಆದರೆ ಅಪಘಾತಕ್ಕೀಡಾದ ವಾಹನ ಹಾಗೂ ಅಪಘಾತದಿಂದ ಸಂತ್ರಸ್ತರಾದವರಿಗೂ ವಿಮಾ ಪರಿಹಾರ ಸಿಗುತ್ತದೆ. ಆದರೆ ಭಾರತದಲ್ಲಿ ಸಾಮಾನ್ಯವಾಗಿ ವಾಹನ ಹಳತಾದ ಕೂಡಲೇ ಮಾಲಕರು ಥರ್ಡ್‌ ಪಾರ್ಟಿ ಇನ್ಶೂರೆನ್ಸ್‌ ಮಾತ್ರ ಮಾಡಿಸಿಕೊಳ್ಳುತ್ತಾರೆ. 

ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ 2017-18ನೇ ಸಾಲಿನಿಂದ ಜಾರಿಗೆ ಬರುವಂತೆ ಥರ್ಡ್‌ ಪಾರ್ಟಿ ವಿಮೆ ಕಂತನ್ನು ಸರಾಸರಿಯಾಗಿ ಶೇ. 50ರಷ್ಟು ಏರಿಸುವ ಪ್ರಸ್ತಾವ ಸಲ್ಲಿಸಿದೆ. ಇದು ಶೇ.15ರಿಂದ ಶೇ. 20ರಷ್ಟು ಹೆಚ್ಚಳವಾಗುವುದು ವಾಡಿಕೆಯಾಗಿತ್ತು. ಆದರೆ ಈ ಸಲ ಏಕಾಏಕಿ ಶೇ.50 ಹೆಚ್ಚಿಸುವ ಮೂಲಕ ವಾಹನ ಮಾಲಕರಿಗೆ ಬರೆ ಹಾಕಲು ಐಆರ್‌ಡಿಎ ಹೊರಟಿದೆ. ಈ ಪ್ರಸ್ತಾವವನ್ನು ಶಾಸನ ರೂಪದಲ್ಲಿ ಜಾರಿಗೆ ತರುವ ಸಲುವಾಗಿ ಕಾನೂನಿಗೆ ತಿದ್ದುಪಡಿ ಮಾಡಲು ಕೇಂದ್ರ ತಯಾರಿ ನಡೆಸಿದೆ. ಹಾಗೆಂದು ಇದರಿಂದ ಕೆಳ ಮಧ್ಯಮ ವರ್ಗದವರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಏಕೆಂದರೆ ಈ ವರ್ಗದವರು ಹೆಚ್ಚಾಗಿ ಹೊಂದಿರುವುದು 1000 ಸಿಸಿ ಸಾಮರ್ಥ್ಯದೊಳಗಿನ ಕಾರು. 1000 ಸಿಸಿ ಸಾಮರ್ಥ್ಯದ ಖಾಸಗಿ ಕಾರುಗಳಿಗೆ ವಿಮೆ ಕಂತನ್ನು ಐಆರ್‌ಡಿಎ ಯಥಾಸ್ಥಿತಿಯಲ್ಲಿಟ್ಟಿದೆ. ಅಂತೆಯೇ ಕೆಲವು ವರ್ಗದ ಗೂಡ್ಸ್‌ ವಾಹನಗಳಿಗೂ ಏರಿಕೆಯಿಂದ ವಿನಾಯಿತಿ ನೀಡಲಾಗಿದೆ. ದ್ವಿಚಕ್ರ ವಾಹನ ವರ್ಗದಲ್ಲಿ 75 ಸಿಸಿ ತನಕ ಮಾತ್ರ ವಿಮೆ ಕಂತು ಹೆಚ್ಚಳವಾಗುವುದಿಲ್ಲ. ಇದು ಎಲ್ಲ ವರ್ಗದ ಜನರಿಗೆ ಹೊರೆಯಾಗುವ ಪ್ರಸ್ತಾವ.  

ಥರ್ಡ್‌ ಪಾರ್ಟಿ ವಿಮೆಯಿಂದ ವಾಹನ ಮಾಲಕನಿಗೆ ಯಾವ ಪ್ರಯೋಜನವೂ ಇಲ್ಲ. ಅಂತೆಯೇ ಅಪಘಾತದಲ್ಲಿ ಗಾಯಗೊಂಡಿದ್ದರೆ ತನ್ನ ಹಣದಿಂದಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಕಾರು ಕಳ್ಳತನವಾದರೆ ಅಥವಾ ಬೆಂಕಿಯಿಂದ ಹಾನಿ ಸಂಭವಿಸಿದರೆ ಇದರ ಬಾಧ್ಯತೆಯನ್ನು ವಿಮೆ ಕಂಪೆನಿ ವಹಿಸಿಕೊಳ್ಳುವುದಿಲ್ಲ. ಹೀಗಾಗಿ ಥರ್ಡ್‌ ಪಾರ್ಟಿ ವಿಮೆ ಕಡಿಮೆ ಬೆಲೆಯ ವಾಹನಗಳಿಗೆ ಮತ್ತು ಹಳೆಯ ವಾಹನಗಳಿಗೆ ಮಾತ್ರ ಸೂಕ್ತವಾಗಿದೆ. ಭಾರತದಲ್ಲಿ ವಾಹನಗಳಿಗೆ ವಿಮೆ ಮಾಡಿಸಿಕೊಳ್ಳುವುದೇ ಕಾನೂನು ಪ್ರಕಾರ ಅದು ಕಡ್ಡಾಯವಾಗಿರುವುದರಿಂದ. ಇಂತಹ ಮನೋಧರ್ಮವಿರುವ ದೇಶದಲ್ಲಿ ಕಡಿಮೆ ಕಂತಿನ ಥರ್ಡ್‌ಪಾರ್ಟಿ ವಿಮೆ ಇರುವಾಗ ಹೆಚ್ಚಿನವರು ಅದನ್ನೇ ಆಯ್ದುಕೊಳ್ಳುತ್ತಾರೆ. ಇದೀಗ ಥರ್ಡ್‌ ಪಾರ್ಟಿ ವಿಮೆ ಕಂತು ಹೆಚ್ಚಾಗುವುದರಿಂದ ವಾಹನ ಮಾಲಕರು ಥರ್ಡ್‌ ಪಾರ್ಟಿ ಬದಲು ಫ‌ಸ್ಟ್‌ ಪಾರ್ಟಿ ವಿಮೆಯನ್ನು ಆಯ್ದುಕೊಳ್ಳಬಹುದು. ಎರಡೂ ವಿಮೆಗಳ ಕಂತಿನಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲದಿದ್ದರೆ ಫ‌ಸ್ಟ್‌ ಪಾರ್ಟಿ ಅಥವಾ ಸಮಗ್ರ ವಿಮೆ ಹೆಚ್ಚು ಪ್ರಯೋಜನಕಾರಿ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಥರ್ಡ್‌ ಪಾರ್ಟಿ ವಿಮೆ ಕಂತು ಹೆಚ್ಚಿಸುವುದೆಂದರೆ ಪರೋಕ್ಷವಾಗಿ ವಾಹನ ಮಾಲಕರಿಗೆ ಅವರ ವಾಹನದ ಸುರಕ್ಷೆಯನ್ನು ಖಾತರಿಪಡಿಸಿದಂತೆ. ವಿಮೆ ಕಂಪೆನಿಗಳು ಥರ್ಡ್‌ ಪಾರ್ಟಿ ಬದಲು ಸಮಗ್ರ ವಿಮೆಗೆ ಹೆಚ್ಚಿನ ಪ್ರೋತ್ಸಾಹ ಕೊಡುವ ಸ್ಕೀಂಗಳನ್ನು ರೂಪಿಸಿ ಜನರನ್ನು ಆಕರ್ಷಿಸಬೇಕು. ಇದೇ ವೇಳೆ ಐಆರ್‌ಡಿಎ ವಾಹನ ವಿಮೆಯಲ್ಲಿರುವ ಗೊಂದಲಗಳನ್ನು ನಿವಾರಿಸುವತ್ತಲೂ ಗಮನಹರಿಸಬೇಕು. 

ವಾಹನ ಮಾಲಕರಿಗೆ ಹೊರೆ ಹೌದಾಗಿದ್ದರೂ ವಾಹನಗಳು ಮತ್ತು ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 
ಅಪಘಾತಗಳಲ್ಲಿ ಹಾನಿ ಅನುಭವಿಸುವ ತೃತೀಯ ವ್ಯಕ್ತಿಗೆ ಶೀಘ್ರ ಸಮಾಧಾನ ಮತ್ತು ಪ್ರಯೋಜನ ಒದಗಿಸುವ ದೃಷ್ಟಿಯಿಂದ ಈ ಪ್ರಸ್ತಾವ ಉತ್ತಮವಾಗಿದೆ.

ಟಾಪ್ ನ್ಯೂಸ್

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

2025; May the mantra of peace and coexistence resonate throughout the world

Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ

Exam

ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ

JAmmu

Jammu-Kashmir: ಉಗ್ರರನ್ನು ಮಟ್ಟ ಹಾಕಿದ‌ ಭದ್ರತಾ ಪಡೆಗಳು

6-national-emblem

National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.