ಕೋಲು ಮುರಿಯಲಿಲ್ಲ,ಹಾವೂ ಸಾಯಲಿಲ್ಲ,ಜನಪ್ರಿಯ ಬಜೆಟ್‌ ನಿರೀಕ್ಷೆ ಸಾಕಾರ


Team Udayavani, Mar 16, 2017, 3:50 AM IST

15-ras-7.jpg

ಸಿದ್ದರಾಮಯ್ಯ ಎಲ್ಲ ವರ್ಗದವರನ್ನು ಖುಷಿಪಡಿಸುವ ಬಜೆಟ್‌ ಮಂಡಿಸಿದ್ದಾರೆ. ಕೇಂದ್ರವಾಗಲಿ, ರಾಜ್ಯವಾಗಲಿ ಜನರನ್ನು ಓಲೈಸುವ ಬಜೆಟ್‌ ಮಂಡಿಸುವುದು ಅತ್ಯಂತ ಸಹಜ. ಆದರೆ ಘೋಷಣೆಗಳಲ್ಲಿ ಎಷ್ಟು ಅನುಷ್ಠಾನವಾಗುತ್ತದೆ ಎಂಬುದೇ ಪ್ರಶ್ನೆ.

ಯಾವುದೇ ಸರಕಾರ ಚುನಾವಣೆ ಎದುರಿಗಿರುವಾಗ ಮಂಡಿಸುವ ಬಜೆಟ್‌ನಲ್ಲಿ ಜನರನ್ನು ಓಲೈಸುವ ಭರಪೂರ ಕೊಡುಗೆಗಳಿರುತ್ತವೆ ಎನ್ನುವ ಸಹಜ ವಿದ್ಯಮಾನಕ್ಕೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2017-18ನೇ ಸಾಲಿನ ರಾಜ್ಯ ಬಜೆಟ್‌ ಹೊರತಾಗಿಲ್ಲ. ಮುಂದಿನ ಚುನಾವಣೆಗೂ ಮೊದಲು ಬಜೆಟ್‌ ಮಂಡನೆಗೆ ಅವಕಾಶವಿದ್ದರೂ, ಈಗಲೇ ಚುನಾವಣೆ ಮನಸ್ಸಿನಲ್ಲಿಟ್ಟು ಜನರನ್ನು ಖುಷಿಪಡಿಸುವ ಪ್ರಯತ್ನ ಮಾಡಿದ್ದಾರೆ. ತನ್ನದು ಸಾಮಾಜಿಕ ನ್ಯಾಯ ಪರಿಕಲ್ಪನೆಯ ಬಜೆಟ್‌ ಎಂದು ಸಿಎಂ ಹೇಳಿ ಕೊಂಡಿದ್ದರೂ ಇದು ಸಂಪೂರ್ಣ ನಿಜವಲ್ಲ ಎನ್ನುವುದನ್ನು ಬಜೆಟ್‌ನ ಜನಪ್ರಿಯ ಕೊಡುಗೆಗಳೇ ಹೇಳುತ್ತಿವೆ. 

ರಾಜ್ಯ ಭೀಕರ ಬರಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಬರದ ಬವಣೆಯನ್ನು ತಪ್ಪಿಸುವ ತತ್‌ಕ್ಷಣದ ಮತ್ತು ದೀರ್ಘಾವಧಿ ಯೋಜನೆಗಳಿಗೆ ಆದ್ಯತೆ ನೀಡಬಹುದು ಎನ್ನುವ ನಿರೀಕ್ಷೆಯೂ ಇತ್ತು. ಇದು ಮಾತ್ರ ಸಂಪೂರ್ಣ ಹುಸಿಯಾಗಿದೆ. ರೈತರ ಸಾಲ ಮನ್ನಾ ಮಾಡಬೇಕೆಂಬ ಬಲವಾದ ಆಗ್ರಹ ಇದ್ದರೂ ಇದನ್ನು ಈಡೇರಿಸಿಲ್ಲ. ಬದಲಾಗಿ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುವ ಪ್ರಸ್ತಾವವಿದೆ.  

ವಿವಾದಿತ ಎತ್ತಿನಹೊಳೆ ಯೋಜನೆಯಿಂದಾಗಿ  ಸಿಟ್ಟಿಗೆ ದ್ದಿರುವ ಕರಾವಳಿಯ ಜನರನ್ನು ಸಮಾಧಾನಿಸಲು ಪಶ್ಚಿಮ ವಾಹಿನಿ ಯೋಜನೆಯನ್ನು ಜಾರಿಗೊಳಿಸಲಿದ್ದಾರೆಂಬ ನಿರೀಕ್ಷೆ ನಿಜವಾಗಿದೆ. ಬಜೆಟ್‌ನಲ್ಲಿ ಇದಕ್ಕಾಗಿ 100 ಕೋ. ರೂ. ಅನುದಾನ ಘೋಷಿಸಲಾಗಿದೆ. ಪಶ್ಚಿಮ ವಾಹಿನಿ ಕಡಿಮೆಯೆಂದರೂ 1000 ಕೋ. ರೂ. ವೆಚ್ಚ ಬೇಡುವ ಯೋಜನೆ. ಈ ದೃಷ್ಟಿಯಲ್ಲಿ ಹೇಳುವುದಾದರೆ ಯೋಜನೆಗೆ ಒದಗಿಸಿರುವ ಅನುದಾನ ಏನೇನೂ ಸಾಲದು. ಇದೇ ರೀತಿ ವೃದ್ಧಾಪ್ಯ ಪಿಂಚಣಿ ಮೊತ್ತ ಏರಿಕೆಯೂ ಹೆಚ್ಚಿನ ಪ್ರಯೋಜನಕಾರಿಯಲ್ಲ. 

ತಮಿಳುನಾಡಿನ ಅಮ್ಮ ಕ್ಯಾಂಟೀನ್‌ ಮಾದರಿಯಲ್ಲಿ ರಾಜ್ಯದಲ್ಲೂ ಅಗ್ಗದ ದರದ ನಮ್ಮ ಕ್ಯಾಂಟೀನ್‌ ಈ ಬಜೆಟ್‌ನಲ್ಲಿ ಸಾಕಾರವಾಗಿದೆ. ಖಾಸಗಿ ಉದ್ಯಮಗಳ ಸಿ ಮತ್ತು ಡಿ ದರ್ಜೆಯ ನೌಕರಿಗಳನ್ನು ಸಂಪೂರ್ಣವಾಗಿ ಕನ್ನಡಿಗರಿಗೆ ಮೀಸಲಿಡುವುದು, ಮಲ್ಟಿಪ್ಲೆಕ್ಸ್‌ಗಳ ಟಿಕೆಟ್‌ ದರಕ್ಕೆ ಲಗಾಮು ಹಾಕುವಂತಹ ಪ್ರಸ್ತಾವಗಳು ಯುವ ಜನತೆಯನ್ನು ಆಕರ್ಷಿಸುವ ಗುರಿಯಿರಿಸಿಕೊಂಡಿವೆ. ಲ್ಯಾಪ್‌ಟಾಪ್‌, ಟ್ಯಾಬ್‌, ಆ್ಯಪ್‌ ಮತ್ತಿತರ ಕೊಡುಗೆಗಳ ಮೂಲಕ ತಾನು ಟೆಕ್‌ ಪ್ರಿಯ ಎಂದು ತೋರಿಸಲು ಪ್ರಯತ್ನಿಸಿದ್ದಾರೆ. 

ಬಹುಕಾಲದಿಂದ ಚರ್ಚೆಯಲ್ಲಿದ್ದ ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಕಲಿಸುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಘೋಷಿಸಿರುವುದು ಸ್ವಾಗತಾರ್ಹ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಮುಖ್ಯಮಂತ್ರಿಗಳು ಹೆಚ್ಚಿನ ಒತ್ತು ನೀಡಿರುವಂತೆ ಕಾಣಿಸುತ್ತಿದೆ. ಆದರೆ ನಿರುದ್ಯೋಗ ನಿವಾರಣೆಗೆ ಕೈಗಾರಿಕೋದ್ಯಮ ಪ್ರೋತ್ಸಾಹಿಸುವಂತಹ ಪರಿಣಾಮಕಾರಿ ಕ್ರಮಗಳು ಕಾಣಿಸುತ್ತಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಕೋಲೂ ಮುರಿಯದೆ ಹಾವೂ ಸಾಯದಂತೆ ಸರ್ಕಸ್‌ ಮಾಡಿರುವ ಬಜೆಟ್‌ ಇದು. ಬಜೆಟ್‌ನಲ್ಲಿ ಘೋಷಣೆಗಳನ್ನು ಮಾಡುವುದು ಸುಲಭ. ಚುನಾವಣೆಗೆ ಇರುವುದು ಒಂದೇ ವರ್ಷ. ಇಷ್ಟು ಕಡಿಮೆ ಅವಧಿಯಲ್ಲಿ ಇವುಗಳಲ್ಲಿ ಎಷ್ಟನ್ನು ಅನುಷ್ಠಾನಕ್ಕೆ ತರಲು ಸಾಧ್ಯ ಎಂಬುದೇ ಪ್ರಶ್ನೆ. ಅದು ಅಸಾಧ್ಯವಾದಾಗ ಸರಕಾರವೇ ವಿಪಕ್ಷಗಳಿಗೆ ಚುನಾವಣಾ ಕಾಲಕ್ಕೆ ಅಸ್ತ್ರವೊಂದನ್ನು ಕೊಟ್ಟ ಹಾಗಾಗುತ್ತದೆ.

ಟಾಪ್ ನ್ಯೂಸ್

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

vital

Vitla: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

MUST WATCH

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

ಹೊಸ ಸೇರ್ಪಡೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.