ವಿದ್ಯಾಗಮ ಪುನರಾರಂಭಕ್ಕೆ ಸಲಹೆ ವಿಘ್ನಗಳ ನಿವಾರಣೆ ಮುಖ್ಯ


Team Udayavani, Dec 9, 2020, 6:00 AM IST

ವಿದ್ಯಾಗಮ ಪುನರಾರಂಭಕ್ಕೆ ಸಲಹೆ ವಿಘ್ನಗಳ ನಿವಾರಣೆ ಮುಖ್ಯ

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ವಿದ್ಯಾರ್ಥಿಗಳ ಕಲಿಕೆಯ ನಿರಂತರತೆ ಕಾಪಾಡಿಕೊಳ್ಳುವುದಕ್ಕಾಗಿ ರೂಪ ಪಡೆದ “ವಿದ್ಯಾಗಮ’ವನ್ನು ಪುನಾರಂಭಿಸಬಹುದೇ ಎಂಬ ಬಗ್ಗೆ ನಿರ್ಧರಿಸಲು ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ವಿದ್ಯಾಗಮವು ನಿಜಕ್ಕೂ ವಿನೂತನ ಶೈಕ್ಷಣಿಕ ಯೋಜನೆ ಎನ್ನುವುದರಲ್ಲಿ ಸಂದೇಹವಿಲ್ಲ. ತಜ್ಞರ ಸಮಿತಿಯ ಸಲಹೆ ಮತ್ತು ಶಿಫಾರಸಿನಂತೆ ಸಾಮಾಜಿಕ, ಆರ್ಥಿಕವಾಗಿ ದುರ್ಬಲರಾದ ಮಕ್ಕಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ವಿದ್ಯಾಗಮ ಹುಟ್ಟಿಕೊಂಡಿತು. ಈ ಯೋಜನೆಯಡಿಯಲ್ಲಿ ಸರಕಾರಿ ಶಾಲೆಗಳಿಗೆ ಸೇರಿದ 47 ಲಕ್ಷ ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಹೇಳಿತ್ತು.

ಮಕ್ಕಳು ಇರುವಲ್ಲಿಗೇ ಶಿಕ್ಷಕರು ಹೋಗಿ ಹತ್ತಿರವಿರುವ ಸಮುದಾಯ ಭವನ, ದೇವಸ್ಥಾನ, ಮರದ ನೆರಳಿನಲ್ಲಿ ತರಗತಿ ಮಾಡಲಾಗುತ್ತಿತ್ತು. ಗಮನಾರ್ಹ ಸಂಗತಿಯೆಂದರೆ, ರಾಜ್ಯ ಸರಕಾರದ ಈ ವಿನೂತನ ಯೋಜನೆ ಕೇಂದ್ರದ ಗಮನವನ್ನೂ ಸೆಳೆದದ್ದು. ವಿದ್ಯಾಗಮದಿಂದ ಆಗುತ್ತಿರುವ ಅನುಕೂಲ ಮತ್ತು ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಹೇಗೆ ಯೋಜನೆಯನ್ನು ವ್ಯವಸ್ಥಿತ ರೀತಿಯಲ್ಲಿ ಅನುಷ್ಠಾನ ಮಾಡ ಲಾಗುತ್ತಿದೆ ಎನ್ನುವ ವಿಸ್ತೃತ ವರದಿಯನ್ನು ಶಿಕ್ಷಣ ಇಲಾಖೆ ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು. ದಿನಗಳೆದಂತೆ ವಿದ್ಯಾಗಮ ಯೋಜನೆಯಡಿ ರಾಜ್ಯಾದ್ಯಂತ ಕೆಲಸ ಮಾಡುತ್ತಿದ್ದ ಕೆಲವು ಶಿಕ್ಷಕರಿಗೆ ಕೋವಿಡ್‌ ಸೋಂಕು ಬಂದದ್ದು, ಅನೇಕರು ಸಾವನ್ನಪ್ಪಿದ್ದು ಹಾಗೂ ಮಕ್ಕಳಲ್ಲೂ ಸೋಂಕು ಕಾಣಿಸಿಕೊಂಡ ಕಾರಣ ಈ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎನ್ನುವ ಕೂಗು ಜೋರಾಯಿತು. ಆದರೆ ಆರಂಭದಲ್ಲಿ ಸಚಿವ ಸುರೇಶ್‌ ಕುಮಾರ್‌, ಈ ಕಾರ್ಯಕ್ರಮದ ಕಾರಣದಿಂದಲೇ ಸೋಂಕು ಹರಡಿದೆಯೆನ್ನುವುದು ಅಧಿಕೃತವಾಗಿ ದೃಢಪಟ್ಟಿಲ್ಲ ಎಂದೇ ಹೇಳಿದರಾದರೂ, ಪೋಷಕರಲ್ಲಿ, ಶಿಕ್ಷಕ ವೃಂದದಲ್ಲಿ ಹುಟ್ಟಿಕೊಂಡ ಆತಂಕದಿಂದಾಗಿ ತಾತ್ಕಾಲಿಕವಾಗಿ ವಿದ್ಯಾಗಮವನ್ನು ನಿಲ್ಲಿಸಲಾಯಿತು.

ಅದಕ್ಕೆ ಪರ್ಯಾಯವಾಗಿ ಅನ್‌ಲೈನ್‌ ಶಿಕ್ಷಣ ನಡೆಸಬಹುದು ಎನ್ನುವುದು ಕನಸಿನ ಮಾತೇ ಸರಿ. ಏಕೆಂದರೆ, ಈಗಲೂ ಅನೇಕ ಕುಟುಂಬಗಳ ಬಳಿ ಲ್ಯಾಪ್‌ಟಾಪ್‌ ಇರಲಿ, ಉತ್ತಮ 4ಜಿ ವೇಗದ ಸ್ಮಾರ್ಟ್‌ಫೋನ್‌ಗಳೂ ಇಲ್ಲದಂಥ ಪರಿಸ್ಥಿತಿ ಇದೆ. ಈ ಕಾರಣಕ್ಕಾಗಿಯೇ, ಸರಕಾರ ಬಡಮಕ್ಕಳಿಗೆ ಆನ್‌ಲೈನ್‌ ಮೂಲಕ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಲ್ಯಾಪ್‌ಟಾಪ್‌, ಇಂಟರ್ನೆಟ್‌ ಮತ್ತು ಮೊಬೈಲ್‌ ಸೇರಿ ಅಗತ್ಯ ತಾಂತ್ರಿಕ ಸೌಲಭ್ಯ ಒದಗಿಸಬೇಕೆಂದು ಕೆಲವು ಸಮಯದ ಹಿಂದೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಆದರೆ ಕೋವಿಡ್‌ ನಿರ್ವಹಣೆಗೆ ಭಾರೀ ಹಣ ಖರ್ಚಾಗಿದ್ದು, ಇಂಥ ಸಂಕಷ್ಟದ ಸಮಯದಲ್ಲಿ ಬಡ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ ಎಂದು ಸರಕಾರ ವಾಸ್ತವ ಎದುರಿಟ್ಟಿದೆ. ಈ ಹಿನ್ನೆಲೆಯಲ್ಲಿಯೇ ಹೈಕೋರ್ಟ್‌ ವಿದ್ಯಾಗಮದ ಪುನಾರಂಭದ ಕುರಿತು ಯೋಚಿಸುವಂತೆ ಸಲಹೆ ನೀಡಿದೆ.

ಇದರನ್ವಯ ಮುಂದಿನ ದಿನಗಳಲ್ಲಿ ವಿದ್ಯಾಗಮ ಯೋಜನೆ ಆರಂಭವಾದರೂ ಸಹ ಅದಕ್ಕೂ ಮುನ್ನ ಹಲವು ಅಡ್ಡಿಗಳು ನಿವಾರಣೆಯಾಗಲೇಬೇಕಿದೆ. ಕುಗ್ರಾಮ ಗಳಿಗೆ ಹೋಗಲು ವಾಹನದ ವ್ಯವಸ್ಥೆ ಇಲ್ಲದೆ ಶಿಕ್ಷಕರು ಪರದಾಡುವಂತಾಗಬಾರದು. ಇನ್ನು ಬಹುತೇಕ ಕಡೆ ಮೂಲ ಸೌಕರ್ಯಗಳಿಲ್ಲದೆ ಮೂತ್ರ ವಿಸರ್ಜಿಸಲು ಸಹ ಶಿಕ್ಷಕರು ಪರದಾಡುವಂಥ ಸ್ಥಿತಿ ಇದೆ. ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯ ಭದ್ರತೆಯೂ ಇರದ ಕಾರಣ ಶಿಕ್ಷಕರು ಆತಂಕಗೊಳ್ಳುವುದು ಸಹಜವೇ.

ಹಲವು ಸಂದರ್ಭಗಳಲ್ಲಿ ಮಕ್ಕಳಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಸಾಧ್ಯವಾಗುವಂತಾಗುತ್ತದೆ. ಈ ಎಲ್ಲ ವಿಘ್ನಗಳು ಮತ್ತೆ ಎದುರಾಗದಂತೆ ಖಾತ್ರಿಯಾಗುವುದು ಅತೀ ಮುಖ್ಯ.

ಟಾಪ್ ನ್ಯೂಸ್

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

school

Karnataka; ಶಾಲಾ ಆಸ್ತಿ ಸಂರಕ್ಷಣೆ ಅಭಿಯಾನ ಎಲ್ಲ ಇಲಾಖೆಗಳಿಗೂ ಮಾದರಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.