United Nations Climate Summit ;ಒಪ್ಪಂದ ಅನುಷ್ಠಾನ: ಬಲಾಡ್ಯ ರಾಷ್ಟ್ರಗಳು ಮಾದರಿಯಾಗಲಿ


Team Udayavani, Dec 15, 2023, 12:50 AM IST

1-sadsadsa

ಜಾಗತಿಕ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವಾಗಿರುವ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಪರ್ಯಾಯ ಇಂಧನ ಮೂಲಗಳ ಬಳಕೆಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ದುಬಾೖ ಯಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಶೃಂಗದಲ್ಲಿ ಮಹತ್ತರ ನಿರ್ಣಯ ಕೈಗೊಳ್ಳಲಾಗಿದೆ. ವಿಶ್ವ ರಾಷ್ಟ್ರಗಳು ಇಂತಹ ನಿರ್ಧಾರ, ಘೋಷಣೆಗಳನ್ನು ಹೊರಡಿಸುವುದು ಹೊಸದೇನಲ್ಲವಾದರೂ ಈ ಬಾರಿಯ ಶೃಂಗದುದ್ದಕ್ಕೂ ನಡೆದಿರುವ ಚರ್ಚೆ, ವಿಚಾರ ವಿಮರ್ಶೆಗಳು ಜಾಗತಿಕವಾಗಿ ಒಂದಿಷ್ಟು ಆಶಾವಾದವನ್ನು ಮೂಡಿಸಿವೆ.

ಎರಡು ವಾರಗಳ ಕಾಲ ನಡೆದ ಶೃಂಗದಲ್ಲಿ ಹವಾಮಾನ ಬದಲಾವಣೆ, ತಾಪಮಾನ ಹೆಚ್ಚಳದ ಕುರಿತಂತೆ ಈ ಹಿಂದೆ ಜಾಗತಿಕವಾಗಿ ಕೈಗೊಳ್ಳಲಾದ ಒಪ್ಪಂದ, ನಿರ್ಧಾರಗಳ ಅನುಷ್ಠಾನಕ್ಕೆ ಮುಂದುವರಿದ ದೇಶಗಳು ಅಷ್ಟೊಂದು ಆಸಕ್ತಿ ತೋರದಿರುವ ಬಗೆಗೆ ಅಭಿವೃದ್ಧಿಶೀಲ ಮತ್ತು ಬಡರಾಷ್ಟ್ರಗಳಿಂದ ಅಸಮಾ ಧಾನ ವ್ಯಕ್ತವಾದವು. ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಗೊಳಿಸಲು ಪರ್ಯಾಯ ಇಂಧನ ಮೂಲಗಳನ್ನು ಕಂಡುಕೊಳ್ಳುವುದು ಬಡ ರಾಷ್ಟ್ರಗಳಿಗೆ ಬಲುದೊಡ್ಡ ಸವಾ ಲಾಗಿದೆ. ಇದಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸಬೇಕಿದ್ದು, ಇಷ್ಟೊಂದು ಸಾಮ ರ್ಥ್ಯವನ್ನು ಅವು ಹೊಂದಿಲ್ಲ. ಈ ಹಿನ್ನೆಲೆ ಯಲ್ಲಿ ಈ ಹಿಂದೆ ಮಾಡಿ ಕೊಳ್ಳಲಾದ ಒಪ್ಪಂದದಂತೆ ಬಲಾಡ್ಯ ರಾಷ್ಟ್ರ ಗಳು, ಬಡ ರಾಷ್ಟ್ರಗಳಿಗೆ ಹಣಕಾಸು ನೆರವು ನೀಡಬೇಕು ಎಂದು ಈ ರಾಷ್ಟ್ರಗಳು ಪ್ರಬಲವಾಗಿ ಪ್ರತಿಪಾದಿಸಿದವು. ಹವಾಮಾನ ಬದಲಾವಣೆಯು ಮಳೆ, ತಾಪಮಾನ, ನೀರಿನ ಲಭ್ಯತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಇದು ಕೃಷಿ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರುವುದರ ಜತೆಯಲ್ಲಿ ಆರ್ಥಿಕತೆಗೂ ಬಲುದೊಡ್ಡ ಹೊಡೆತ ನೀಡುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳೇ ಗರಿಷ್ಠ ಪ್ರಮಾಣದಲ್ಲಿ ಹಸುರುಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗಿವೆ. ಆದರೆ ಇದರ ಪರಿಣಾಮವನ್ನು ವಿಶ್ವದ ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳು ಅನುಭವಿಸುತ್ತಿವೆ. ಈ ಕಾರಣದಿಂದಾಗಿ ಈ ಬಾರಿಯ ಶೃಂಗದಲ್ಲಿ ಈ ಬಗ್ಗೆ ಈ 2 ವರ್ಗಗಳಿಗೆ ಸೇರಿದ ರಾಷ್ಟ್ರಗಳು ಒಂದಿಷ್ಟು ಗಟ್ಟಿ ದನಿಯಲ್ಲಿಯೇ ವಿಷಯ ವನ್ನು ಪ್ರಸ್ತಾವಿಸಿ, ಅಭಿವೃದ್ಧಿ ಹೊಂದಿದ ದೇಶಗಳು ಹವಾಮಾನ ಬದಲಾ ವಣೆಗೆ ಕಾರಣ ವಾಗುತ್ತಿರುವ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ವ್ಯಯಿಸಬೇಕೆಂದು ಆಗ್ರಹಿಸಿದವು.

ಒಟ್ಟಿನಲ್ಲಿ ಈ ಬಾರಿಯ ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಶೃಂಗದಲ್ಲಿ ಬಡ ರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳ ಬಗೆಗೆ ಜಾಗತಿಕ ಸಮು ದಾಯದ ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ಪಳೆಯುಳಿಕೆ ಇಂಧನಗಳ ಬಳಕೆ  ಯನ್ನು ಕಡಿಮೆ ಮಾಡಲು ಶೃಂಗದಲ್ಲಿ ಒಮ್ಮತದ ನಿರ್ಣಯವನ್ನು ಕೈಗೊ ಳ್ಳಲಾಗಿದೆ. ಈ ನಿರ್ಣಯದ ಅನುಷ್ಠಾನದಲ್ಲಿ ಬಲಾಡ್ಯ ರಾಷ್ಟ್ರಗಳು ಮುಂಚೂ ಣಿ ಯಲ್ಲಿ ನಿಂತು ವಿಶ್ವದ ಇತರ ದೇಶಗಳಿಗೆ ಮಾದರಿಯಾಗಬೇಕಿದೆ. ಈ ಹಿಂದಿನಂತೆ ಯುಎಇ ಒಪ್ಪಂದವೂ ಕೇವಲ ದಾಖಲೆ, ಘೋಷಣೆಗೆ ಸೀಮಿತ ವಾಗದೆ ಪಳೆಯುಳಿಕೆ ಇಂಧನಗಳ ಬಳಕೆಗೆ ಕಡಿವಾಣ ಹಾಕುವ ದಿಸೆ ಯಲ್ಲಿ ಎಲ್ಲ ರಾಷ್ಟ್ರಗಳೂ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಹವಾಮಾನ ಬದಲಾವಣೆ, ತಾಪಮಾನ ಹೆಚ್ಚಳದ ಸಮಸ್ಯೆಯನ್ನು ನಿಯಂತ್ರಣ ದಲ್ಲಿರಿಸಿಕೊಳ್ಳುವ ದಿಸೆಯಲ್ಲಿ ಪ್ರತಿಯೊಂದೂ ರಾಷ್ಟ್ರವೂ ತನ್ನ ಪ್ರಯತ್ನವನ್ನು ನಡೆಸಬೇಕು. ಅಷ್ಟು ಮಾತ್ರವಲ್ಲದೆ ಸಾಂಪ್ರದಾಯಿಕ ಇಂಧನ ಮೂಲಗಳು ಬರಿದಾಗುತ್ತಿರುವ ಈ ಸಂದರ್ಭದಲ್ಲಿ ಪರ್ಯಾಯ ಇಂಧನ ಮೂಲಗಳತ್ತ ವಿಶ್ವ ರಾಷ್ಟ್ರಗಳು ತಮ್ಮ ಲಕ್ಷ್ಯ ವನ್ನು ಕೇಂದ್ರೀ ಕರಿಸುವ ಅನಿವಾರ್ಯತೆ ಎದುರಾಗಿದೆ ಎಂಬುದನ್ನು ಮರೆಯಬಾರದು.

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

12

Uv Fusion: ತ್ಯಾಗಜೀವಿಗಳಾಗೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.