ಬಗೆಹರಿಯದ ಭಾಷೆ ವಿವಾದ

ದೇಶಕ್ಕೊಂದು ಭಾಷೆ ಬಗ್ಗೆ ಅಮಿತ್‌ ಶಾ ಹೇಳಿಕೆ

Team Udayavani, Sep 16, 2019, 5:31 AM IST

hindi

ಹಿಂದಿಯನ್ನು ರಾಷ್ಟ್ರೀಯ ಭಾವೈಕ್ಯದ ಭಾಷೆ ಮಾಡಬೇಕು ಎಂದಿರುವ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ಸಹಜವಾಗಿಯೇ ದಕ್ಷಿಣದ ರಾಜ್ಯಗಳಲ್ಲಿ ವಿವಾದದ ಕಿಡಿ ಎಬ್ಬಿಸಿದೆ. ಒಂದು ದೇಶ – ಒಂದು ಭಾಷೆ ಪರಿಕಲ್ಪನೆಯಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅಧಿಕೃತ ಭಾಷೆ ಹಿಂದಿ ಎಂದು ಪರಿಗಣಿಸಲ್ಪಟ್ಟರೆ ಒಳಿತು ಎಂದಿದ್ದಾರೆ ಅಮಿತ್‌ ಶಾ. ಇಡೀ ದೇಶಕ್ಕೆ ಒಂದು ಅಧಿಕೃತ ಭಾಷೆ ಇರಬೇಕೆಂಬ ಅವರ ಹೇಳಿಕೆಯನ್ನು ದಕ್ಷಿಣದಲ್ಲಿ ಹಿಂದಿ ಹೇರಿಕೆಯ ಹುನ್ನಾರ ಎಂದು ವ್ಯಾಖ್ಯಾನಿಸಲಾಗಿದೆ.

ಭಾಷೆ ಈಗ ಬರೀ ಸಂವಹನದ ಮಾಧ್ಯಮವಾಗಿ ಉಳಿದಿಲ್ಲ. ಅದು ರಾಜಕೀಯ ಅಸ್ತ್ರವಾಗಿ, ಭಾವನೆಗಳನ್ನು ಕೆಣಕುವ ಶಸ್ತ್ರವಾಗಿಯೂ ಬಳಕೆಯಾಗುತ್ತದೆ. ಭಾಷೆಯ ಬಗ್ಗೆ ತುಸು ಹೆಚ್ಚೇ ಅಭಿಮಾನ ಇರುವ ತಮಿಳುನಾಡಿನಲ್ಲಂತೂ ಹಿಂದಿ ಎಂಬ ಶಬ್ದ ಕೇಳಿದ ಕೂಡಲೇ ಕಿಡಿ ಹೊತ್ತಿಕೊಳ್ಳುವ ವಾತಾವರಣವಿದೆ. ಈಗೀಗ ಬೆಂಗಳೂರಿನಲ್ಲೂ ಈ ಮಾದರಿಯ ಪ್ರತಿಕ್ರಿಯೆ ವ್ಯಕ್ತವಾಗುವುದನ್ನು ಕಾಣಬಹುದು.

ಭಾರತದಂಥ ಬಹು ಭಾಷೆಗಳಿರುವ ದೇಶದಲ್ಲಿ ಒಂದು ಭಾಷೆಯನ್ನು ರಾಷ್ಟ್ರೀಯ ಭಾಷೆಯೆಂದು ಪರಿಗಣಿಸಲು ಸಾಧ್ಯವೆ? ಇಂಥ ಒಂದು
ರಾಷ್ಟ್ರೀಯ ಭಾಷೆಯ ಅಗತ್ಯ ನಮಗಿದೆಯೇ? ಹಾಗೊಂದು ವೇಳೆ
ರಾಷ್ಟ್ರೀಯ ಭಾಷೆ ಬೇಕೆಂದರೆ ಹಿಂದಿಯೇ ಏಕೆ ಆಗಬೇಕೆಂಬ
ಪ್ರಶ್ನೆಗಳಿಗೆಲ್ಲ ಸರ್ವಸಮ್ಮತವಾದ ಉತ್ತರವನ್ನು ಕಂಡುಕೊಳ್ಳುವುದು
ಅಸಾಧ್ಯ. ಹೆಚ್ಚಿನ ರಾಜ್ಯಗಳಲ್ಲಿ ಹಿಂದಿ ಭಾಷೆ ಬಳಕೆಯಲ್ಲಿದೆ. ಹೆಚ್ಚು ಜನರು ಮಾತನಾಡುವ ಭಾಷೆಯಾಗಿರುವುದರಿಂದ ಅದನ್ನು ರಾಷ್ಟ್ರದ ಅಧಿಕೃತ ಭಾಷೆಯಾಗಿ ಪರಿಗಣಿಸಬೇಕೆಂಬ ವಾದ ಒಪ್ಪತಕ್ಕದ್ದಲ್ಲ. ಏಕೆಂದರೆ ನಮ್ಮ ರಾಜ್ಯಗಳನ್ನು ವಿಂಗಡಿಸಿದ್ದೇ ಭಾಷೆಗಳ ಆಧಾರದ ಮೇಲೆ. ಆಯಾಯ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಭಾಷೆಗೆ ಪ್ರಾಧಾನ್ಯತೆ ನೀಡಬೇಕೆಂಬ ಆಶಯವೂ ರಾಜ್ಯಗಳ ಗಡಿ ನಿರ್ಣಯಿಸುವ ನಿರ್ಧಾರದ ಹಿನ್ನೆಯಲ್ಲಿತ್ತು. ಹೀಗಿರುವಾಗ ಹಿಂದಿಯನ್ನು ಮಾತ್ರ ಎತ್ತಿ ಹಿಡಿಯುವುದು ಏಕೆ ಎಂಬ ಪ್ರಶ್ನೆಯೂ ನ್ಯಾಯ ಸಮ್ಮತವೆ.

ದೇಶದಲ್ಲಿರುವ ವಿವಿಧ ಪ್ರಾದೇಶಿಕ ಭಾಷೆಗಳ ಪರಿಚಯ ಎಲ್ಲರಿಗೂ ಆಗಬೇಕೆಂಬ ಉದ್ದೇಶದಿಂದ ಶಾಲೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಲಾಗಿದೆ. ಈ ಪ್ರಕಾರ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್‌ ಜತೆಗೆ ಆಧುನಿಕ ಭಾರತೀಯ ಭಾಷೆಯಾಗಿ ದಕ್ಷಿಣದ ಒಂದು ಪ್ರಾದೇಶಿಕ ಭಾಷೆಯನ್ನು ಕಲಿಸಬೇಕು. ಅದೇ ರೀತಿ ದಕ್ಷಿಣದ ರಾಜ್ಯಗಳಲ್ಲಿ ಉತ್ತರದ ಒಂದು ಭಾಷೆಯನ್ನು ಕಲಿಸಬೇಕು. ದಕ್ಷಿಣದಲ್ಲಿ ಪ್ರಾಥಮಿಕ ಹಂತದಿಂದಲೇ ಹಿಂದಿಯನ್ನು ಕಲಿಸುತ್ತಾರೆ. ಆದರೆ ಉತ್ತರ ರಾಜ್ಯಗಳಲ್ಲಿ ದಕ್ಷಿಣದ ಭಾಷೆಯನ್ನು ಕಲಿಯುವವರು ಇಲ್ಲವೇ ಇಲ್ಲ ಎಂದರೂ ಸರಿಯಾಗುತ್ತದೆ. ಸಂಸ್ಕೃತ, ಅರೇಬಿಕ್‌ನಂಥ ಭಾಷೆಗಳನ್ನಾದರೂ ಕಲಿಯುತ್ತಾರೆ. ಆದರೆ ದಕ್ಷಿಣದ ಭಾಷೆಗಳನ್ನು ಕಲಿಯುವುದಿಲ್ಲ. ತ್ರಿಭಾಷಾ ಸೂತ್ರದಡಿ ಫ್ರೆಂಚ್‌ ಮತ್ತು ಜರ್ಮನ್‌ನಂಥ ವಿದೇಶಿ ಭಾಷೆಗಳನ್ನು ಕಲಿಸುವ ಶಾಲೆಗಳೂ ಇವೆ. ಹೀಗಾಗಿ ಈ ಸೂತ್ರ ನಿರೀಕ್ಷಿತ ಉದ್ದೇಶವನ್ನು ಸಾಧಿಸಿಕೊಳ್ಳುವಲ್ಲಿ ವಿಫ‌ಲವಾಗಿದೆ ಎಂದು ತಜ್ಞರು ವಾದಿಸುತ್ತಿದ್ದಾರೆ.

ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಹಿಂದಿ ಭಾಷಿಕರ ಪ್ರಾಬಲ್ಯ ಹೆಚ್ಚು ಇರುವುದರಿಂದ ಆ ಭಾಷೆಯೂ ಹೆಚ್ಚು ಪ್ರಭಾವಶಾಲಿಯಾಗಿದೆ. ಸಂಸತ್ತಿನಲ್ಲಿ ಹೆಚ್ಚಿನ ವ್ಯವಹಾರಗಳು ನಡೆಯುವುದು ಹಿಂದಿಯಲ್ಲಿ. ನಮಗೆ ಬೇಕಿರಲಿ, ಬೇಡದಿರಲಿ ರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸುವಾಗ ಹಿಂದಿ ಮತ್ತು ಇಂಗ್ಲೀಷ್‌ ಅನಿವಾರ್ಯವಾಗಿ ಬಿಡುತ್ತದೆ.

ಇನ್ನು ಹಿಂದಿಯಿಂದ ರಾಷ್ಟ್ರೀಯ ಒಗ್ಗಟ್ಟು, ಭಾವೈಕ್ಯತೆ, ಅಭಿವೃದ್ಧಿ ಸಾಧಿಸಲು ಸಾಧ್ಯ ಎಂಬ ವಾದದಲ್ಲಿ ಹುರುಳಿಲ್ಲ. ಹಾಗೊಂದು ವೇಳೆ ಇದು ಸಾಧ್ಯವಾಗಿದ್ದರೆ ಉತ್ತರದ ಹಿಂದಿ ಭಾಷಿಕ ರಾಜ್ಯಗಳೆಲ್ಲ ಈಗ ಅಭಿವೃದ್ಧಿಗೂ, ಭಾವೈಕ್ಯತೆಗೂ ಮಾದರಿಯಾಗಬೇಕಿತ್ತಲ್ಲ. ಈ ರಾಜ್ಯಗಳ ಪರಿಸ್ಥಿತಿ ಪ್ರಸ್ತುತ ಇದಕ್ಕೆ ತದ್ವಿರುದ್ಧವಾಗಿರಲು ಏನು ಕಾರಣ? ಹೀಗೆ ಭಾಷೆಯ ಬಗ್ಗೆ ಮಾತನಾಡಿದರೆ ಉತ್ತರಕ್ಕಿಂತಲೂ ಹೆಚ್ಚು ಪ್ರಶ್ನೆಗಳೇ ಹುಟ್ಟಿಕೊಳ್ಳುತ್ತಿವೆ. ಭಾರತದ ಮಟ್ಟಿಗೆ ಭಾಷಾ ವಿವಾದವೆನ್ನುವುದು ಪರಿಹಾರವೇ ಇಲ್ಲದ ಸಮಸ್ಯೆ.

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಬ್ಬರು ದಿನಕ್ಕೆ ಒಂದರಂತೆ ಪರಭಾಷೆಯ ಶಬ್ದವನ್ನು ಕಲಿಯಬೇಕು. ಇದರಿಂದ ಹೊಸದೊಂದು ಭಾಷೆಯನ್ನು ಕಲಿಯಲು ಸಾಧ್ಯವಾಗುವುದು ಮಾತ್ರವಲ್ಲದೆ ದೇಶದ ಬಹುತ್ವವನ್ನು ಇನ್ನೂ ಉತ್ತಮವಾಗಿ ಅರಿಯಲು ಸಾಧ್ಯ ಎಂದು ಹೇಳಿದ್ದರು. ಈ ಸಲಹೆ ಪಾಲಿಸಿದರೆ ಭಾಷೆಯ ವಿವಾದ ಬಗೆಹರಿದೀತೇನೊ.

ಟಾಪ್ ನ್ಯೂಸ್

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Supreme Court: ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆ ಸುಪ್ರೀಂ ಸಲಹೆಗಳು ಸಮುಚಿತ

Supreme Court: ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆ ಸುಪ್ರೀಂ ಸಲಹೆಗಳು ಸಮುಚಿತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.