ವಿಸ್ತರಣಾವಾದದ ಗುಂಗಿನಿಂದ ಚೀನ ಇನ್ನಾದರೂ ಹೊರಬರಲಿ


Team Udayavani, Dec 14, 2022, 6:00 AM IST

ವಿಸ್ತರಣಾವಾದದ ಗುಂಗಿನಿಂದ ಚೀನ ಇನ್ನಾದರೂ ಹೊರಬರಲಿ

ಭಾರತದ ಪಾಲಿಗೆ ಸದಾ “ಹೊರೆ’ಯೇ ಆಗಿರುವ ನೆರೆಯ ರಾಷ್ಟ್ರ ಚೀನದ ಯೋಧರು ವಾಸ್ತವಿಕ ನಿಯಂತ್ರಣ ರೇಖೆಯ ಸನಿಹ ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನಲ್ಲಿ ಭಾರತದ ಯೋಧರೊಂದಿಗೆ ಪರಸ್ಪರ ತಳ್ಳಾಟ ನಡೆಸುವ ಮೂಲಕ ಕಳೆದ ಮೂರ್‍ನಾಲ್ಕು ತಿಂಗಳುಗಳಿಂದೀಚೆಗೆ ಗಡಿ ಪ್ರದೇಶದಲ್ಲಿ ನೆಲೆಸಿದ್ದ ಸೌಹಾರ್ದ ವಾತಾವರಣವನ್ನು ಮತ್ತೆ ಕದಡಿದ್ದಾರೆ.

ಚೀನದ ಯೋಧರು ಗಡಿ ಕಾವಲಿಗೆ ನಿಯೋಜಿತರಾಗಿದ್ದ ಭಾರತೀಯ ಯೋಧರೊಡನೆ ಮಾತಿನ ಚಕಮಕಿ ನಡೆಸಿದ್ದೇ ಅಲ್ಲದೆ ಕೈ-ಕೈ ಮಿಲಾಯಿಸಿದ್ದರ ಪರಿಣಾಮ ಭಾರತೀಯ ಯೋಧರು ಚೀನಿ ಯೋಧರಿಗೆ ಮರ್ಮಾಘಾತವನ್ನೇ ನೀಡಿದ್ದು ಅವರನ್ನು ಗಡಿ ಪ್ರದೇಶದಿಂದ ಒಧ್ದೋಡಿಸಿದ್ದಾರೆ. ಕಾಲುಕೆರೆದು ಭಾರತೀಯ ಸೇನೆಯೊಂದಿಗೆ ಸೆಣಸಾಡಲು ಬಂದ ಚೀನಿ ಪಡೆಗೆ ಮತ್ತೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ಇಡೀ ಘಟನೆ ಚೀನದ ನರಿ ಬುದ್ಧಿಗೆ ಮತ್ತೂಂದು ಸಾಕ್ಷಿ ಒದಗಿಸಿದೆ. 2020ರ ಜೂನ್‌ನಲ್ಲಿ ಗಾಲ್ವಾನ್‌ ಬಳಿ ಭಾರತ ಮತ್ತು ಚೀನ ಯೋಧರ ನಡುವೆ ನಡೆದ ಬಲುದೊಡ್ಡ ಸಂಘರ್ಷದಲ್ಲಿ ಇತ್ತಂಡಗಳಲ್ಲೂ ಸಾವುನೋವುಗಳು ಸಂಭವಿಸಿದ್ದವು. ಅಲ್ಲಿನ ಗಡಿ ಭಾಗದಲ್ಲಿ ಚೀನ ತನ್ನ ಸೇನೆಯನ್ನು ತಿಂಗಳುಗಳ ಕಾಲ ನಿಯೋಜಿಸಿ ಭಾರತದ ಮೇಲೆ ಪ್ರಬಲ ಒತ್ತಡ ಹೇರಿದರೂ ಚೀನಿ ಯೋಧರನ್ನು ಅವರ ಭೂಪ್ರದೇಶಕ್ಕೆ ಹಿಮ್ಮೆಟ್ಟಿಸುವವರೆಗೆ ಭಾರತೀಯ ಸೇನೆ ಅಲ್ಲಿಂದ ಕದಲಿರಲಿಲ್ಲ. ತಿಂಗಳುಗಳ ಹಿಂದೆಯಷ್ಟೇ ಎರಡೂ ದೇಶಗಳು ಎಲ್‌ಎಸಿಯಿಂದ ತಮ್ಮ ಪಡೆಗಳನ್ನು ವಾಪಸು ಕರೆಸಿಕೊಳ್ಳಲು ನಿರ್ಧರಿಸಿದ್ದವು. ಅದರಂತೆ ಚೀನಿ ಯೋಧರು ಗಡಿ ಪ್ರದೇಶದಿಂದ ವಾಪಸಾದ ಬಳಿಕವಷ್ಟೇ ಭಾರತ ತನ್ನ ಯೋಧರನ್ನು ಕೂಡ ಹಿಂದೆಗೆದುಕೊಂಡಿತ್ತು. ಆದರೂ ಚೀನವನ್ನು ನಂಬದ ಭಾರತ ಎಲ್‌ಎಸಿ ಮತ್ತು ತನ್ನ ಭೂಪ್ರದೇಶದುದ್ದಕ್ಕೂ ಹದ್ದುಗಣ್ಣಿರಿಸಿತ್ತು.

ಕೇವಲ ಭಾರತ ಮಾತ್ರವಲ್ಲದೆ ಫೆಸಿಫಿಕ್‌ ವಲಯದ ದೇಶಗಳ ಸಹಿತ ಜಾಗತಿಕ ಸಮುದಾಯದಿಂದ ಚೀನದ ವಿಸ್ತರಣ ನೀತಿಗೆ ಪ್ರಬಲ ವಿರೋಧ ವ್ಯಕ್ತವಾಗುತ್ತಲೇ ಬಂದಿದ್ದರೂ ಚೀನ ಮಾತ್ರ ತನ್ನ ಹಠಮಾರಿತನವನ್ನು ಬಿಡುತ್ತಿಲ್ಲ ಮಾತ್ರವಲ್ಲದೆ ಈ ವಿಚಾರದಲ್ಲಿ ಮಾತ್ರ ಸೋಗಲಾಡಿತನವನ್ನು ಪ್ರದರ್ಶಿಸುತ್ತಲೇ ಬಂದಿದೆ. ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕು ಪ್ರತಿಪಾದಿಸಲು ಇನ್ನಿಲ್ಲದ ಕುತಂತ್ರಗಳನ್ನು ಅನುಸರಿಸುತ್ತ ಬಂದಿರುವ ಚೀನ ಇದರ ಮುಂದಿನ ಭಾಗವಾಗಿ ಗಡಿಯಲ್ಲಿ ಭಾರತೀಯ ಯೋಧರೊಂದಿಗೆ ಸಂಘರ್ಷ ನಡೆಸುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಗಮನವನ್ನು ಇತ್ತ ಸೆಳೆ ಯುವ ಪ್ರಯತ್ನ ಮಾಡಿದೆ. ಭಾರತ ಮತ್ತು ಅಮೆರಿಕದ ಜಂಟಿ ಸಮ ರಾಭ್ಯಾಸ ನಡೆಸುತ್ತಿರುವ ಬೆನ್ನಲ್ಲೇ ಚೀನ ಈ ಪ್ರಯತ್ನ ನಡೆಸಿರುವುದು ಗಡಿಯಲ್ಲಿನ ಸಂಘರ್ಷದ ಉದ್ದೇಶವೇನು ಎಂಬುದು ಸುಸ್ಪಷ್ಟ.

ಚೀನ ಇಂತಹ ಕುಟಿಲ ನೀತಿಗಳನ್ನು ಇನ್ನಾದರೂ ಕೈಬಿಟ್ಟು ನೆರೆ ರಾಷ್ಟ್ರಗಳೊಡನೆ ಸ್ನೇಹ-ಸೌಹಾರ್ದದ ಸಂಬಂಧ ಬೆಸೆಯಲು ಮುಂದಾಗದೇ ಹೋದಲ್ಲಿ ಇಡೀ ಜಾಗತಿಕ ಸಮುದಾಯದ ಅವಗಣನೆಗೆ ತುತ್ತಾಗಲಿರುವುದು ನಿಶ್ಚಿತ. ಭಾರತದೊಂದಿಗಿನ ವಿರಸ ತನ್ನ ಅಸ್ತಿತ್ವಕ್ಕೇ ಕುತ್ತು ತರಲಿದೆ ಎಂಬುದನ್ನು ತನ್ನ ಮಿತ್ರರಾಷ್ಟ್ರ ಪಾಕಿಸ್ಥಾನದಿಂದಲಾದರೂ ಚೀನ ಕಲಿತುಕೊಳ್ಳದೇ ಹೋದಲ್ಲಿ ತನ್ನ ಸ್ವಯಂಕೃತ ಅಪರಾಧಕ್ಕೆ ಪ್ರಾಯಶ್ಚಿತ್ತ ಅನುಭವಿಸಲಿರುವುದಂತೂ ಶತಃಸಿದ್ಧ. ಯುದ್ಧ, ಸಂಘರ್ಷಗಳಿಂದ ಜಗತ್ತನ್ನು ಗೆಲ್ಲಬಹುದೆಂಬ ಹುಂಬತನವನ್ನು ಚೀನ ಇನ್ನಾದರೂ ಬಿಟ್ಟುಬಿಡುವುದು ಒಳಿತು. ಇಲ್ಲವಾದಲ್ಲಿ ಈಗಾಗಲೇ ಸಾಮಾಜಿಕ, ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಚೀನದ ಆಡಳಿತಾರೂಢರು ಸ್ವದೇಶೀಯರ ಆಕ್ರೋಶಕ್ಕೆ ತುತ್ತಾಗುವುದು ನಿಶ್ಚಿತ.

ಟಾಪ್ ನ್ಯೂಸ್

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.