ಸರಕಾರಿ ಶಾಲೆಗಳಿಗೆ ಕಾಯಕಲ್ಪ ಯಾವಾಗ?


Team Udayavani, Jun 8, 2022, 6:00 AM IST

ಸರಕಾರಿ ಶಾಲೆಗಳಿಗೆ ಕಾಯಕಲ್ಪ ಯಾವಾಗ?

ಇತ್ತೀಚಿನ ಕೆಲವು ವರ್ಷಗಳಲ್ಲಿ ಸರಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿದ್ದರೆ ಫ‌ಲಿತಾಂಶದಲ್ಲೂ ಸರಕಾರಿ ಶಾಲೆಗಳು ಸಾಕಷ್ಟು ಪ್ರಗತಿಯನ್ನು ಕಂಡಿವೆ. ಈ ಆಶಾದಾಯಕ ವರದಿಗಳ ನಡುವೆಯೇ ಸರಕಾರಿ ಶಾಲೆಗಳು ಮೂಲಸೌಕರ್ಯಗಳ ಸಮಸ್ಯೆಯಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ ಎಂಬುದು ತೀರಾ ಬೇಸರದ ಸಂಗತಿ.

ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳ ಸಾಧನಾ ಟ್ರ್ಯಾಕಿಂಗ್‌ ವ್ಯವಸ್ಥೆ ನೀಡಿರುವ ಅಂಕಿಅಂಶಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ರಾಜ್ಯದಲ್ಲಿನ ಸರಕಾರಿ ಶಾಲೆಗಳ ವಾಸ್ತವ ಚಿತ್ರಣದ ಅರಿವಾಗುತ್ತದೆ. ಕುಡಿಯುವ ನೀರು, ಶೌಚಾಲಯ, ಸುವ್ಯವಸ್ಥಿತ ಕಟ್ಟಡ, ಕಾಂಪೌಂಡ್‌, ವಿದ್ಯುತ್‌ ಸಂಪರ್ಕ ಆದಿಯಾಗಿ ಮೂಲ ಸೌಕರ್ಯಗಳ ಕೊರತೆಯ ದೊಡ್ಡ ಪಟ್ಟಿಯೇ ಈ ಶಾಲೆಗಳಲ್ಲಿ ಕಾಣಸಿಗುತ್ತಿವೆ. ಬಹುತೇಕ ಶಾಲೆಗಳು ಒಂದಲ್ಲ ಒಂದು ಮೂಲಸೌಕರ್ಯದ ಕೊರತೆಯನ್ನು ಎದುರಿಸುತ್ತಿವೆ. ಇದು ಇಂದು-ನಿನ್ನೆಯ ಸಮಸ್ಯೆಯಲ್ಲ. ಪ್ರತೀ ವರ್ಷ ಕೂಡ ಶೈಕ್ಷಣಿಕ ವರ್ಷ ಆರಂಭವಾದಾಗ ಈ ಬಗ್ಗೆ ಒಂದಿಷ್ಟು ಚರ್ಚೆಗಳು ನಡೆಯುತ್ತವೆ. ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎನ್ನುವಾಗ ಆ ಶಾಲೆಗೆ ಸೀಮಿತವಾಗಿ ಸಮಸ್ಯೆಯನ್ನು ನಿವಾರಿಸುವ ಕೆಲಸಕಾರ್ಯಗಳು ನಡೆಯುತ್ತವೆ.

ದಶಕಗಳ ಹಿಂದೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದ ಸಂದರ್ಭದಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಆ ಶಾಲೆಗಳಿಗೆ ಸೇರ್ಪಡೆಗೊಳಿಸಲು ಮುಗಿಬೀಳುತ್ತಿದ್ದರು. ಶುಲ್ಕ ಹೆಚ್ಚಾ ಗಿದ್ದರೂ ತಮ್ಮ ಮಕ್ಕಳಿಗೆ ಸುರಕ್ಷಿತ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ಲಭಿಸಲಿದೆ ಎಂಬ ವಿಶ್ವಾಸ ಅವರದಾಗಿತ್ತು. ಇದರ ಪರಿಣಾಮವಾಗಿ ಸರಕಾರಿ ಶಾಲೆಗಳಿಗೆ ಮಕ್ಕಳ ಸೇರ್ಪಡೆ ಕಡಿಮೆಯಾದಾಗ ಸರಕಾರ ಈ ಸಮಸ್ಯೆಯ ಮೂಲಕ್ಕೆ ಔಷಧ ಕೊಡುವ ಬದಲು ತಾನೂ ಆಂಗ್ಲ ಮಾಧ್ಯಮ ತರಗತಿ ಗಳನ್ನು ಆರಂಭಿಸಿ ಒಂದಿಷ್ಟು ಸಂಖ್ಯೆಯ ಮಕ್ಕಳನ್ನು ಸರಕಾರಿ ಶಾಲೆ ಗಳತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.

ಸರಕಾರಿ ಶಾಲೆಗಳಲ್ಲಿ ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಲಭಿಸುತ್ತದೆ ಎಂದಾದಾಗ ಮಧ್ಯಮ ವರ್ಗದ ಮಂದಿ ತಮ್ಮ ಮಕ್ಕಳನ್ನು ಈ ಶಾಲೆಗಳಿಗೆ ಸೇರ್ಪಡೆ ಗೊಳಿಸಿದರು. ಇದರಿಂದ ಸರಕಾರಿ ಶಾಲೆಗಳಲ್ಲೂ ಮಕ್ಕಳ ದಾಖಲಾತಿ ಹೆಚ್ಚಿದ್ದೇ ಅಲ್ಲದೆ ಶಿಕ್ಷಣದ ಗುಣಮಟ್ಟದಲ್ಲೂ ಸುಧಾರಣೆಯಾಯಿತು. ಆದರೆ ಸರಕಾರಿ ಶಾಲೆಗಳು ಈ ಹಿಂದಿನಿಂದಲೂ ಎದುರಿಸುತ್ತ ಬಂದಿರುವ ಮೂಲ ಸೌಕರ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಯಿಂದಾಗಲಿ, ಸರಕಾರದಿಂದಾಗಲಿ ಪ್ರಯತ್ನಗಳು ನಡೆ ಯಲೇ ಇಲ್ಲ. ಮಕ್ಕಳು ಸುರಕ್ಷೆಗೆ ಅಪಾಯ ತಂದೊಡ್ಡಬಲ್ಲ ಕಟ್ಟಡಗಳಲ್ಲಿ ಇಂದಿಗೂ ಸರಕಾರಿ ಶಾಲೆಗಳು ನಡೆಯುತ್ತಿವೆ ಎಂಬುದು ತೀರಾ ವಿಪ ರ್ಯಾಸವೇ ಸರಿ. ಆಧುನಿಕತೆಗೆ ಸರಕಾರಿ ಶಾಲೆಗಳು ತೆರೆದುಕೊಂಡಿವೆ ಯಾದರೂ ಮೂಲಸೌಕರ್ಯಗಳ ಕೊರತೆ ಇನ್ನೂ ಭಾದಿಸುತ್ತಿದೆ.

ಇನ್ನಾದರೂ ಸರಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಶಾಲಾ ಕಟ್ಟಡಗಳ ನಿರ್ವಹಣೆ, ಮೂಲಸೌಕರ್ಯಗಳ ಕಲ್ಪಿಸುವಿಕೆ ಆದಿಯಾಗಿ ಸರಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಲು ಸಮಗ್ರವಾದ ಕಾರ್ಯಸೂಚಿ ರಚಿಸಿ, ಅನುಷ್ಠಾನಗೊಳಿಸಬೇಕು. ಇಲ್ಲವಾದಲ್ಲಿ ಸರಕಾರಿ ಶಾಲೆಗಳು ಮತ್ತೆ ಹಿನ್ನೆಲೆಗೆ ಸರಿಯುವ ಸಾಧ್ಯತೆ ಅಧಿಕ. ಕಲಿಕೆಗೆ ಪೂರಕ ವಾತಾವರಣ, ವ್ಯವಸ್ಥೆಗಳು ಇದ್ದಲ್ಲಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿ ಸುವುದು ಸವಾಲಿನ ಕಾರ್ಯವೇನಲ್ಲ. ಈ ದಿಸೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು, ಜನಪ್ರತಿನಿಧಿಗಳು ಮತ್ತು ಜನಸಮುದಾಯ ಕೈಜೋಡಿಸಬೇಕು.

ಟಾಪ್ ನ್ಯೂಸ್

Game Changer: Shankar – Ram Charan’s ‘Game Changer’ will be coming to OTT on this day

Game Changer : ಈ ದಿನ ಒಟಿಟಿಗೆ ಬರಲಿದೆ ಶಂಕರ್‌ – ರಾಮ್‌ಚರಣ್‌ರ ʼಗೇಮ್‌ ಚೇಂಜರ್ʼ

Mystery: ಒಂದೇ ರಾತ್ರಿಯಲ್ಲಿ ಸಾವಿರಾರು ಕುಟುಂಬಗಳು ಕಣ್ಮರೆಯಾದ ನಿಗೂಢ ಗ್ರಾಮ ಇದು…

Mystery: ಒಂದೇ ರಾತ್ರಿಯಲ್ಲಿ ಸಾವಿರಾರು ಕುಟುಂಬಗಳು ಕಣ್ಮರೆಯಾದ ನಿಗೂಢ ಗ್ರಾಮ ಇದು…

Maharashtra: Shinde absent from Fadnavis meeting again; rift gets a boost for discussion

Maharashtra: ಮತ್ತೆ ಫಡ್ನವೀಸ್‌ ಸಭೆಗೆ ಗೈರಾದ ಶಿಂಧೆ; ಬಿರುಕು ಚರ್ಚೆಗೆ ಸಿಕ್ತು ಪುಷ್ಟಿ

3-wadi

Wadi: ನಾಲವಾರ ಮಠದಲ್ಲಿ ತೋಟೇಂದ್ರ ಸ್ವಾಮೀಜಿ ಅಳಿಯ ಆತ್ಮಹತ್ಯೆ

8

Indore: ಎರಡು ಶಾಲೆಗಳಿಗೆ ಬಾಂಬ್‌ ಬೆದರಿಕೆ; ವಿದ್ಯಾರ್ಥಿಗಳ ಸ್ಥಳಾಂತರ

2025ರ ಸಿನಿಮಾ, ಸಿರೀಸ್‌, ಶೋಗಳನ್ನು ಅನೌನ್ಸ್‌ ಮಾಡಿದ ನೆಟ್‌ಫ್ಲಿಕ್ಸ್‌ – ಇಲ್ಲಿದೆ ಪಟ್ಟಿ

2025ರ ಸಿನಿಮಾ, ಸಿರೀಸ್‌, ಶೋಗಳನ್ನು ಅನೌನ್ಸ್‌ ಮಾಡಿದ ನೆಟ್‌ಫ್ಲಿಕ್ಸ್‌ – ಇಲ್ಲಿದೆ ಪಟ್ಟಿ

Dimuth Karunaratne announced farewell to international cricket with 100th Test match

SL: ನೂರನೇ ಟೆಸ್ಟ್‌ ಪಂದ್ಯದೊಂದಿಗೆ ಅಂತಾರಾಷ್ಟೀಯ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಕರುಣರತ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರಕಾರಿ ಶಿಕ್ಷಣ ಸಂಸ್ಥೆಗಳ ಬಗೆಗಿನ ಸಮಾಜದ ದೃಷ್ಟಿಕೋನ ಬದಲಾಗಲಿ

ಸರಕಾರಿ ಶಿಕ್ಷಣ ಸಂಸ್ಥೆಗಳ ಬಗೆಗಿನ ಸಮಾಜದ ದೃಷ್ಟಿಕೋನ ಬದಲಾಗಲಿ

1

Editorial: ಬೇಸಗೆಯಲ್ಲಿ ಹೆಚ್ಚುತ್ತಿರುವ ಬೆಂಕಿ ಆಕಸ್ಮಿಕ; ಈಗಿನಿಂದಲೇ ಮುನ್ನೆಚ್ಚರಿಕೆ ಇರಲಿ

6

Editorial: ಗ್ರಾಮೀಣ ಭಾಗದಲ್ಲಿ ಪಶು ವೈದ್ಯರ ಸೇವೆ ನಿರಂತರ ಸಿಗಲಿ

4

Editorial: ಜಲಜೀವನ್‌ ಕಾಮಗಾರಿ ಚುರುಕುಗೊಳ್ಳಲಿ…

1

Editorial: ಪಂಚಾಯತ್‌ ವ್ಯಾಪ್ತಿಯ ಅರೆ ಪಟ್ಟಣಗಳಲ್ಲೂ ಎಸ್‌.ಟಿ.ಪಿ. ಅಗತ್ಯ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

ನರೇಗಾ ಯೋಜನೆ ಸದ್ಬಳಕೆ: ಗೋವಿನಜೋಳ ಬೆಳೆಯುತ್ತಿದ್ದವರು ಕುರಿದೊಡ್ಡಿ ಕಟ್ಟಿದರು…

ನರೇಗಾ ಯೋಜನೆ ಸದ್ಬಳಕೆ: ಗೋವಿನಜೋಳ ಬೆಳೆಯುತ್ತಿದ್ದವರು ಕುರಿದೊಡ್ಡಿ ಕಟ್ಟಿದರು…

Game Changer: Shankar – Ram Charan’s ‘Game Changer’ will be coming to OTT on this day

Game Changer : ಈ ದಿನ ಒಟಿಟಿಗೆ ಬರಲಿದೆ ಶಂಕರ್‌ – ರಾಮ್‌ಚರಣ್‌ರ ʼಗೇಮ್‌ ಚೇಂಜರ್ʼ

Mystery: ಒಂದೇ ರಾತ್ರಿಯಲ್ಲಿ ಸಾವಿರಾರು ಕುಟುಂಬಗಳು ಕಣ್ಮರೆಯಾದ ನಿಗೂಢ ಗ್ರಾಮ ಇದು…

Mystery: ಒಂದೇ ರಾತ್ರಿಯಲ್ಲಿ ಸಾವಿರಾರು ಕುಟುಂಬಗಳು ಕಣ್ಮರೆಯಾದ ನಿಗೂಢ ಗ್ರಾಮ ಇದು…

10

Dandeli: ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ದ್ವಿಚಕ್ರ ವಾಹನ ಡಿಕ್ಕಿ; ಮಹಿಳೆಗೆ ಗಾಯ

9(1

Dandeli: ನಗರ ಸಭೆಯ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿದ್ದ ಮನೆಗಳ ತೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.