ಸುವರ್ಣ ಯುಗಕ್ಕೆ ಇಚ್ಛಾಶಕ್ತಿಯೇ ಇಂಧನ


Team Udayavani, Aug 25, 2022, 6:15 AM IST

ಸುವರ್ಣ ಯುಗಕ್ಕೆ ಇಚ್ಛಾಶಕ್ತಿಯೇ ಇಂಧನ

ಬ್ರಿಟಿಷರಿಂದ ನಮ್ಮ ದೇಶ ಸ್ವತಂತ್ರಗೊಂಡ ತರುವಾಯ ಹಳ್ಳಿ-ನಗರಗಳ ಅಭಿವೃದ್ಧಿಯ ದೆಸೆಯಲ್ಲಿ ಅಧಿಕಾರ ವಿಕೇಂದ್ರೀಕರಣ ಪರಿಕಲ್ಪನೆ ವಿವಿಧ ಹಂತಗಳಲ್ಲಿ ಸಾಗಿದೆ. ಹೊಸ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್‌ಗಳ ರಚನೆಯೂ ಅದರ ಒಂದು ಭಾಗ. ಪ್ರತಿ ಪ್ರದೇಶಗಳ ಸಮಗ್ರ ಅಭಿವೃದ್ಧಿಯೇ ಮೂಲ ಉದ್ದೇಶ.

ಸಣ್ಣ ಜಿಲ್ಲೆಗಳು ಆಡಳಿತ ಹಾಗೂ ಅಭಿವೃದ್ಧಿಗೂ ಪೂರಕ ಎಂಬ ಆಲೋಚನೆಯಲ್ಲೇ 1984ರಲ್ಲಿ ನ್ಯಾಯವಾದಿ ಟಿ.ಎಂ. ಹುಂಡೇಕರ್‌ ಅಧ್ಯಕ್ಷತೆಯಲ್ಲಿ ಜಿಲ್ಲಾ ಪುನರ್‌ ವಿಂಗಡಣೆ ಸಮಿತಿಯನ್ನು ನೇಮಿಸಿತು. ಸಮಿತಿಯು 1986ರಲ್ಲಿ ವರದಿ ನೀಡಿ ದ್ದರೂ ಜಾರಿಗೆ ಬಂದದ್ದು 11 ವರ್ಷಗಳ ಬಳಿಕ. 1997ರ ಆಗಸ್ಟ್‌ 25ರಂದು ಉಡುಪಿ ಸಹಿತ ಹೊಸ 7 ಜಿಲ್ಲೆಗಳನ್ನು ಆಗಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲರು ಘೋಷಿಸಿದರು. ಇಂದು (ಆ. 25) ಉಡುಪಿ ಜಿಲ್ಲೆಗೆ 25 ವರ್ಷ. ರಜತ ಕ್ಷಣಗಳಿಂದ ಸುವರ್ಣ ಕಾಲಕ್ಕೆ ಅಭಿವೃದ್ಧಿಯ ಮುನ್ನುಡಿ ಬರೆಯಲೂ ಇದು ಸಕಾಲ.

ಹಾಗೆ ನೋಡುವುದಾದರೆ ಉಡುಪಿ ಸ್ವತಂತ್ರ ಗೊಳ್ಳುವಾಗಲೂ ಕರ್ನಾಟಕದ ಇತರ ಭಾಗದ ಕೆಲವು ಜಿಲ್ಲೆ  ಗಳಂತೆ ದಕ್ಷಿಣ ಕನ್ನಡ ಜಿಲ್ಲೆ ಹಿಂದುಳಿದ ಪಟ್ಟಿ ಯನ್ನೇನೂ ಅಂಟಿಸಿಕೊಂಡಿರಲಿಲ್ಲ. ಆದರೆ ಹೊಸ ಜಿಲ್ಲೆ ಸೃಷ್ಟಿಯಾದದ್ದು ಭವಿತವ್ಯಕ್ಕಾಗಿ. ಈ ದೃಷ್ಟಿಯಲ್ಲಿ 25 ವರ್ಷದ ಪಯಣವನ್ನು ನಿಷ್ಕರ್ಷಿಸ ಬೇಕಾದುದು ಮುಂದಿನ ಪಯಣಕ್ಕೆ ಅನುಕೂಲ.

ಆಡಳಿತವನ್ನಾಗಲೀ, ಆದರ್ಶ ಪರಿ ಕಲ್ಪನೆ ಯನ್ನಾ ಗಲೀ ಪರರಿಂದ ಹೇಳಿಸಿ ಕೊಂಡು ಅನು ಷ್ಠಾನ ಮಾಡುವಂಥ ಸ್ಥಿತಿ ಜಿಲ್ಲೆಯ ಆಡ ಳಿತಗಾರ ರಿಗಾಗಲೀ, ಜನಪ್ರತಿನಿಧಿ ಗಳಿ ಗಾಗಲೀ ಇರಲಿಲ್ಲ. ತಲೆಯ ಮೇಲೆ ಮಲ ಹೊರು ವಂಥ ಅನಿಷ್ಠ ಪದ್ಧತಿಯನ್ನು ದೇಶದಲ್ಲೇ ಮೊದಲು ನಿಷೇಧಿಸಿದ್ದು ಉಡುಪಿ ಸ್ಥಳೀಯ ಆಡ ಳಿತ. ಇದಕ್ಕಿಂತ ದೊಡ್ಡ ಆದರ್ಶ ಕಲ್ಪನೆ ಇನ್ನೆಲ್ಲಿಂದ ಸಿಕ್ಕೀತು?

ಇವೆಲ್ಲವನ್ನೂ ತೂಗಿ ನೋಡುವಾಗ 25 ವರ್ಷ ಗಳ ಸಾಧನೆ ಸಮ್ಮಿಶ್ರ ಭಾವ. ಒಂದಿಷ್ಟು ರಸ್ತೆಗಳು ಹೆದ್ದಾರಿ ಗಳಾ ಗಿವೆ, ಮತ್ತೊಂದಿಷ್ಟು ಕಟ್ಟಡಗಳು, ಕಚೇರಿಗಳು ಬಂದಿವೆ, ಬಂದರು ಅಭಿವೃದ್ಧಿ, ಜವುಳಿ ಪಾರ್ಕ್‌ ಉದ್ಯಮ, ಪಾದೂರು ತೈಲಾಗಾರದಂಥ ಯೋಜನೆಗಳು ಜಾರಿಗೊಂಡಿವೆ. ಇವಿಷ್ಟೇ ಸಮಗ್ರ ಅಭಿ ವೃದ್ಧಿಯ ಪರಿಕಲ್ಪನೆಯೇ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಿಕೊಳ್ಳಬೇಕಿದೆ.

ಒಂದು ನಗರ, ಜಿಲ್ಲೆಗೆ ಬೇಕಾದ ಪ್ರಾಥಮಿಕ ಸೌಕರ್ಯ ಒಳಚರಂಡಿ ಯೋಜನೆ ಇನ್ನೂ ಶೈಶವಾ ವಸ್ಥೆ ಯಲ್ಲಿದೆ. ಪ್ರವಾಸೋದ್ಯಮದ ಮೂಲ  ನೆಲೆಗಳಾದ ನದಿ, ಸಾಗರ, ಪರಿಸರದ ಸುಸ್ಥಿರತೆಯ ಮೌಲ್ಯವನ್ನು ಅರಿತಿಲ್ಲ, ಸ್ಥಳೀಯ ಆರ್ಥಿಕತೆಯ ಬೇರನ್ನು ಗಟ್ಟಿಗೊಳಿಸಲು ವಿಶೇಷ ಆಸಕ್ತಿ ಕಂಡು ಬರುತ್ತಿಲ್ಲ, ಪ್ರವಾ ಸೋದ್ಯಮ, ಉದ್ಯಮಕ್ಕೆ ಪೂರಕ ವಾದ ವಿಮಾನ ನಿಲ್ದಾಣ ಇನ್ನೂ ಈಡೇರ ಬೇಕಾದ ಬೇಡಿಕೆಯ ಪಟ್ಟಿಯಲ್ಲಿದೆ. ಘನ ತ್ಯಾಜ್ಯವನ್ನೂ ಆದಾ ಯವನ್ನಾಗಿಸಿಕೊಳ್ಳುವ ಸಮರ್ಪಕ ವಿಲೇವಾರಿ ವಿಧಾನಕ್ಕೆ ಮುಂದಾಗಿಲ್ಲ. 1980ರಲ್ಲಿ ಶಂಕು ಸ್ಥಾಪನೆ ಗೊಂಡ ವಾರಾಹಿ ಕುಡಿಯುವ ನೀರಿನ ಯೋಜನೆ ಇನ್ನೂ ಪೂರ್ಣಗೊಳ್ಳುವ ಲೆಕ್ಕಾಚಾರದಲ್ಲೇ ಇದೆ.

ವ್ಯವಸ್ಥೆಯ ಶುದ್ಧೀಕರಣದಲ್ಲೂ ಬಹಳ ದೂರ ಸಾಗಬೇಕಿದೆ. ಸರಕಾರಿ ಕಚೇರಿಗಳ ಕಾರ್ಯ ವಿಳಂಬ, ಭ್ರಷ್ಟಾಚಾರದ ಬಗ್ಗೆ ಜನರ ಆಕ್ರೋಶ ಹೆಚ್ಚುತ್ತಿದೆ. ಕೆಲವು ಭ್ರಷ್ಟರು ಕರಾವಳಿ ಭಾಗವನ್ನು “ತಕರಾರಿಲ್ಲದ ವಲಯ’ ಹಾಗೂ ಸುರಕ್ಷಿತ ಪ್ರದೇಶ  ಎಂದು ಭಾವಿಸಿದ್ದಾರೆ. ಈ ಸ್ಥಿತಿಗೆ ನಾಗರಿಕರು ಹಾಗೂ ಜನ ಪ್ರತಿನಿಧಿಗಳು ಕಾರಣರು. ಜನರು ದಕ್ಷ ಸೇವೆಗೆ ಪಟ್ಟು ಹಿಡಿಯಬೇಕು. ಜನಪ್ರತಿನಿಧಿಗಳು ಅದನ್ನು ನೀಡಲು ಅಧಿಕಾರಶಾಹಿಯನ್ನು ಹುರಿಗೊಳಿಸಬೇಕು.

ಇನ್ನೇನಿದ್ದರೂ ನಮ್ಮ ಪಯಣ ಸುವರ್ಣಯುಗದ ಕಡೆಗೆ. ಇಲ್ಲಿ ಇಂಧನವೇ ಇಚ್ಛಾಶಕ್ತಿ. ಹಾಗಾಗಿ ಜಿಲ್ಲೆ ಯನ್ನು ಎಲ್ಲ ಪರಿಸ್ಥಿತಿಗೆ ಸಜ್ಜುಗೊಳಿಸಿ ಅಭಿವೃದ್ಧಿ ಸಾಧಿಸುವುದೇ ಗುರುತರ ಸವಾಲು. ಜಿಲ್ಲೆಯ ಪಟ್ಟಣ ಗಳೆಲ್ಲ ನಗರಗಳಾಗುತ್ತಿವೆ. ಅವು ಕೊಂಪೆಗಳಾಗದಂತೆ ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಜಿಲ್ಲೆಯಲ್ಲಿ ಸಂಪನ್ಮೂಲಗಳಿಗೆ ಕೊರತೆಯಿಲ್ಲ. ಅವುಗಳ ಮೌಲ್ಯವನ್ನು ಅರಿತು ಸದ್ಬಳಕೆಗೆ ಅಣಿ ಯಾಗುವ ದೃಷ್ಟಿ ಮತ್ತು ನಾಯಕತ್ವ ಬೇಕು. ಆಡಳಿತ ಗಾರರ ಕ್ರಿಯಾಶಕ್ತಿ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಪ್ರಗತಿಯ ದಿಸೆಯನ್ನು ನಿರ್ಧರಿಸುತ್ತದೆ. ಪ್ರತಿ ನಾಗರಿಕನ ಸಕ್ರಿಯ ಪಾಲ್ಗೊಳ್ಳುವಿಕೆ ಪ್ರಗತಿಯ ಪರಿಣಾಮವನ್ನು ನಿರ್ಧರಿಸಬಲ್ಲದು. ಹಾಗಾಗಿ ಜಿಲ್ಲೆಯ ಭವಿತವ್ಯದ ಪಯಣದಲ್ಲಿ ನಾಗರಿಕರು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಸಾಗುವುದು ತುರ್ತು ಅಗತ್ಯ. ಅದು ಪ್ರಾಮಾಣಿಕವಾಗಿ ಸಾಧ್ಯವಾದರೆ ಅಭಿವೃದ್ಧಿಯ ಪುಟಗಳಲ್ಲಿ ಹೊಸ ಸಾಧ್ಯತೆಗಳನ್ನು ಸಾಧಿಸುವ ಮೂಲಕ ದೇಶಕ್ಕೆ ಮಾದರಿಯಾಗುವ ಅವಕಾಶ ಉಡುಪಿ ಜಿಲ್ಲೆಗಿದೆ. ನಮ್ಮೆಲ್ಲರ ಆ ನಿರೀಕ್ಷೆ ಈಡೇರಲಿ.
– ಸಂಪಾದಕ

ಟಾಪ್ ನ್ಯೂಸ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.