ಮಹಿಳೆಯರ ಮದ್ಯ ಚಟ


Team Udayavani, Feb 12, 2018, 12:05 PM IST

drink.jpg

ಗೋವಾದ ಮುಖ್ಯಮಂತ್ರಿ ಮನೋಹರ್‌ ಪಾರಿಕರ್‌ ಹೆಣ್ಣು ಮಕ್ಕಳು ಬಿಯರ್‌ ಕುಡಿಯುವ ಕುರಿತು ನೀಡಿರುವ ಹೇಳಿಕೆ ಈಗ ಭಾರೀ ಟೀಕೆಗೆ ಗುರಿಯಾಗಿದೆ. ಅವರ ಹೇಳಿಕೆಯನ್ನು ಮಹಿಳಾ ವಿರೋಧಿ, ಲಿಂಗ ತಾರತಮ್ಯ ಎಂದೆಲ್ಲ ಖಂಡಿಸಲಾಗಿದೆ. ವಿಧಾನಸಭೆಯ ವತಿಯಿಂದ ಏರ್ಪಡಿಸಿದ್ದ ಯುವ ಸಂಸತ್‌ನಲ್ಲಿ ಯುವ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ ಪಾರಿಕರ್‌ ಯುವತಿಯರು ಗಂಡು ಹುಡುಗರ ಜತೆಗೆ ಸೇರಿ ಮದ್ಯಪಾನ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಈ ಮಾತು ಹೇಳಿದ್ದರು. ಗೋವಾದಲ್ಲಿ ಮದ್ಯ ಮತ್ತು ಡ್ರಗ್ಸ್‌ ಮಾಫಿಯಾ ಆಳವಾಗಿ ಬೇರೂರಿರುವ ವಿಚಾರದಲ್ಲಿ ಈ ಅವರು ಈ ಮಾತನ್ನು ಹೇಳಿದ್ದಾರೆ. ಆದರೆ ಯಥಾಪ್ರಕಾರ ಪ್ರತಿ ನಡೆಯಲ್ಲೂ ವಿವಾದವನ್ನು ಹುಡುಕುವವರಿಗೆ ಪಾರಿಕರ್‌ ಇಡೀ ಮಹಿಳಾ ಸಮುದಾಯವನ್ನು ಅವಮಾನಿಸಲು ಈ ಹೇಳಿಕೆ ನೀಡಿದ್ದಾರೆಂದು ನಂಬಿಸಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪಾರಿಕರ್‌ ಅವರನ್ನು ಮಹಿಳಾ ವಿರೋಧಿ ಬೆಂಬಲಿಸುವ ನೂರಾರು ಸಂದೇಶಗಳು ಹರಿದಾಡುತ್ತಿವೆ. ಹೆಣ್ಮಕ್ಕಳು ಮದ್ಯಪಾನ ಮಾಡುವ ಬಗ್ಗೆ ಮುಖ್ಯಮಂತ್ರಿಯೊಬ್ಬರು ಭಯ ಪಡುವ ಅಗತ್ಯವಿಲ್ಲ ದಿದ್ದರೂ, ಅದು ಕಳವಳಕಾರಿ ಸಂಗತಿ ಎನ್ನುವುದು ನಿಜವಲ್ಲವೆ? 

ಇತ್ತೀಚೆಗೆ ನಡೆಸಿದ ಅಧ್ಯಯನವೊಂದು ಭಾರತೀಯ ಮಹಿಳೆಯರಲ್ಲಿ ಮದ್ಯಪಾನ ಚಟ ತೀವ್ರವಾಗಿ ಹೆಚ್ಚುತ್ತಿರುವ ಕುರಿತು ಬೆಳಕು ಚೆಲ್ಲಿದೆ. ಪ್ರಸ್ತುತ ಶೇ. 5ರಷ್ಟು ಮಹಿಳೆಯರು ಮದ್ಯದ ದಾಸರಾಗಿದ್ದರೂ ಇನ್ನು ಐದಾರು ವರ್ಷಗಳಲ್ಲಿ ಅವರ ಸಂಖ್ಯೆ ಶೇ. 25 ಆಗಬಹುದು ಎಂದು ಈ ಸಮೀಕ್ಷೆ ಎಚ್ಚರಿಸಿದೆ. ಇದು ಭಯವುಂಟು ಮಾಡುವುದಿಲ್ಲವೆ? ಹಾಗೆಂದು ಮಹಿಳೆಯರು ಮದ್ಯಪಾನ ಮಾಡಬಾರದು ಅಥವಾ ಮಾಡುತ್ತಿರಲಿಲ್ಲವೇ ಎನ್ನುವುದು ಪ್ರಶ್ನೆಯಲ್ಲ. ಆದರೆ ಮಹಿಳೆಯರು ಬಹಿರಂಗವಾಗಿ ಮದ್ಯಪಾನ ಮಾಡುವುದು ಮತ್ತು ಅದು ಸಾಮಾಜಿಕ ಪ್ರತಿಷ್ಠೆ ಎಂದು ಭಾವಿಸುವ ಪ್ರವೃತ್ತಿ ಪ್ರಾರಂಭವಾಗಿರುವುದು ಸುಮಾರು ಒಂದೂವರೆ ದಶಕದಿಂದೀಚೆಗಿನ ಬೆಳವಣಿಗೆ. ನಿರ್ದಿಷ್ಟವಾಗಿ ಕಾರ್ಪೋರೇಟ್‌ ಸಂಸ್ಕೃತಿಕ ದೇಶಕ್ಕೆ ಕಾಲಿಟ್ಟ ಬಳಿಕದ ಪಿಡುಗು ಇದು. ಕಾರ್ಪೋರೇಟ್‌ ಸಂಸ್ಥೆಗಳ ಪಾರ್ಟಿಗಳಲ್ಲಿ ಮದ್ಯ ಹೊಳೆಯಾಗಿ ಹರಿಯು ವುದು ಹೊಸತೇನಲ್ಲ. ಈ ಹೊಳೆಯಲ್ಲಿ ಮಿಂದೇಳಲು ಪುರುಷರಷ್ಟೇ ಮಹಿಳೆಯರು ಕೂಡ ಹಾತೊರೆಯುತ್ತಿರುವುದು ಈಗಿನ ಫ್ಯಾಷನ್‌. 

ಹಿಂದೆ ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಈ ಫ್ಯಾಷನ್‌ ಈಗ ಚಿಕ್ಕಪುಟ್ಟ ನಗರ ಮತ್ತು ಹಳ್ಳಿಗಳಿಗೂ ಹರಡಿದೆ. ಹೈಫೈ ಪರಿವಾರಗಳಲ್ಲಿ ಗಂಡ ಹೆಂಡತಿ ಇಬ್ಬರೂ ಜತೆಗೆ ಕುಳಿತು ಕುಡಿಯುವುದು ಆಧುನಿಕತೆ. ಇಂತಹ ಪರಿವಾರಗಳ ಮಕ್ಕಳು ಕೂಡ ಕುಡಿಯುವುದು ತಪ್ಪು ಅಲ್ಲ ಎಂದು ಭಾವಿಸಿಕೊಂಡರೆ ಅದು ಅವರ ತಪ್ಪಲ್ಲ. 

ಮಹಿಳೆಯರು ಪುರುಷರಿಗಿಂತ ಕಡಿಮೆ ಕುಡಿಯುತ್ತಾರೆ, ಕುಡಿದರೂ ಮಿತಿ ತಪ್ಪುವುದಿಲ್ಲ ಎಂದೆಲ್ಲ ವಾದಿಸುವವರಿದ್ದಾರೆ. ಇವೆಲ್ಲ ಬರೀ ಭ್ರಮೆ ಮಾತ್ರ. ಪುರುಷರಿಗಿಂತ ಹೆಚ್ಚು ಕುಡಿಯುವವ ಮಹಿಳೆಯರಿದ್ದಾರೆ ಮತ್ತು ಕುಡಿದರೆ ಅವರು ಪುರುಷರಿಗಿಂತಲೂ ಹೆಚ್ಚು ಕೆಟ್ಟವರಾಗುತ್ತಾರೆ ಎನ್ನುವುದಕ್ಕೆ ಹತ್ತಾರು ಉದಾಹರಣೆಗಳು ಸಿಗುತ್ತಿವೆ. ಮುಂಬಯಿ, ಬೆಂಗಳೂರಿನಂತಹ ನಗರಗಳ ರಾತ್ರಿ ಪಾಳಿಯ ಟ್ರಾಫಿಕ್‌ ಪೊಲೀಸರ ಬಳಿ ಕೇಳಿದರೆ ಮಹಿಳೆಯರು ಕುಡಿದ ಮತ್ತಿನಲ್ಲಿ ಮಾಡಿದ ಎಡವಟ್ಟುಗಳ ನೂರಾರು ಘಟನೆಗಳು ಸಿಗುತ್ತವೆ. 

ಮದ್ಯ ಪುರುಷ ಮತ್ತು ಮಹಿಳೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿಯೇ ಬೀರುತ್ತದೆ. ಆದರೆ ಮದ್ಯ, ಪುರುಷರಿಗಿಂತಲೂ ಮಹಿಳೆಯರಿಗೆ ಹೆಚ್ಚು ಅಪಾಯಕಾರಿ ಎನ್ನುವುದು ವೈದ್ಯರ ಅಭಿಮತ. ಮದ್ಯದ ದೈಹಿಕ ಮತ್ತು ಮಾನಸಿಕ ಪರಿಣಾಮಗಳು ಮಹಿಳೆಯರ ಮೇಲೆ ಹೆಚ್ಚು ಇರುತ್ತದೆ. ಮಹಿಳೆಯರ ಯಕೃತ್ತುಗಳು ಪುರುಷರಿಗಿಂತ ಚಿಕ್ಕದಿರುತ್ತದೆ. ಕೊಬ್ಬು ಮತ್ತು ನೀರು ಅನುಪಾತ ಮಹಿಳೆಯರಲ್ಲಿ ಹೆಚ್ಚಿರುತ್ತದೆ. ಅಂದರೆ ನೀರಿನ ಪ್ರಮಾಣ ಕಡಿಮೆ ಮತ್ತು ಕೊಬ್ಬಿನ ಪ್ರಮಾಣ ಹೆಚ್ಚು ಇರುತ್ತದೆ. ಇಂತಹ ದೈಹಿಕ ರಚನೆ ಹೊಂದಿರುವುದರಿಂದ ಮಹಿಳೆ ಯರಲ್ಲಿ ಮದ್ಯ ಜೀರ್ಣವಾಗಲು ಹೆಚ್ಚು ಸಮಯ ಹಿಡಿಯುತ್ತದೆ. ನಿಯಮಿತವಾಗಿ ಮದ್ಯಪಾನ ಮಾಡುವ ಮಹಿಳೆಯರು ಕ್ರಮೇಣ ಖನ್ನತೆ ಹಾಗೂ ಇತರ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಬಲಿಯಾಗಳು ಇದು ಕಾರಣವಾಗುತ್ತದೆ. ಈ ಕಾರಣಕ್ಕಾದರೂ ಪಾರಿಕರ್‌ ಹೇಳಿದ ಮಾತನ್ನು ಒಪ್ಪಬಹುದಲ್ಲವೆ?

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

school

Karnataka; ಶಾಲಾ ಆಸ್ತಿ ಸಂರಕ್ಷಣೆ ಅಭಿಯಾನ ಎಲ್ಲ ಇಲಾಖೆಗಳಿಗೂ ಮಾದರಿ

Forest

Forest: ಅರಣ್ಯದಲ್ಲಿ ನಿರಂತರ ಗಣಿಗಾರಿಕೆ: ಸರಕಾರ ಚರ್ಚಿಸಿ ನಿರ್ಧರಿಸಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.