ಬಜೆಟ್ 2019 ಮಹಜರು-ಸಣ್ಣ ಮನೆ, ವಿದ್ಯುತ್‌ ಕಾರು ಕೊಳ್ಳಿರೋ…


ಜಯದೇವ ಪ್ರಸಾದ ಮೊಳೆಯಾರ, Jul 8, 2019, 5:00 AM IST

n-37

ಇನ್ನೊಂದು ಬಜೆಟ್ ಬಂದಿದೆ. ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಬಳಿಕ ಇದೀಗ ಪೂರ್ಣ ಬಹುಮತದಿಂದ ಬಂದ ಎನ್‌ಡಿಎ ಸರಕಾರದ ಸಂಪೂರ್ಣ ಬಜೆಟ್. ಈ ಬಜೆಟಿನಲ್ಲಿ ಹೂಡಿಕೆ ಮತ್ತು ಆದಾಯ ಕರ ವಿಚಾರವಾಗಿ ಜನಸಾಮಾನ್ಯರಿಗೆ ಏನೇನಿದೆ? ಇಲ್ಲಿದೆ ಕೆಲ ಮುಖ್ಯಾಂಶಗಳು:

ತೆರಿಗೆಯ ಪ್ರಮಾಣ: ಆದಾಯ ತೆರಿಗೆಯ ಸ್ಲಾಬ್‌ ಮತ್ತು ದರಗಳಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡಲಾಗಿಲ್ಲ. ಫೆಬ್ರವರಿಯಲ್ಲಿ ಗೋಯಲ್ ಘೋಷಿಸಿದ ಮಧ್ಯಂತರ ಬಜೆಟ್ ನಿಯಮಗಳೇ ಮುಂದುವರಿಯಲಿದೆ. 5 ಲಕ್ಷ ರೂ. ವರೆಗಿನ ಕರಾರ್ಹ ಆದಾಯ ಉಳ್ಳವರು ತೆರಿಗೆ ಕಟ್ಟಬೇಕಾಗಿಲ್ಲ. ಆದರೆ ಕೋಟಿ ರೂ. ಮೀರಿದ ವಾರ್ಷಿಕ ಆದಾಯ ಪಡೆಯುವ ಅತಿ ಶ್ರೀಮಂತರಿಗೆ ಅವರು ಪಾವತಿ ಮಾಡುವ ಸರ್ಚಾರ್ಜ್‌ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಸರ್ಚಾರ್ಜ್‌ ಅಂದರೆ ಕರದ ಮೇಲೆ ಕಟ್ಟು ಕರ. ಎಲ್ಲಾ ಆದಾಯ ವರ್ಗಕ್ಕೂ ಸರ್ಚಾರ್ಜ್‌ ಇರುವುದಿಲ್ಲ. ಸದ್ಯದ ಕರ ಕಾನೂನು ಪ್ರಕಾರ ರೂ. 50 ಲಕ್ಷ ಮೀರಿದ ಆದಾಯ ವರ್ಗಕ್ಕೆ ಶೇ.10 ಹಾಗೂ 1 ಕೋಟಿ ರೂ. ಮೀರಿದ ವರ್ಗಕ್ಕೆ ಶೇ.15 ಸರ್ಚಾರ್ಜ್‌ ಇದೆ. ಇದೀಗ 2 ಕೋಟಿ ರೂ. ಮೀರಿದ ವರ್ಗಕ್ಕೆ ಅದನ್ನು ಶೇ.25ಕ್ಕೆ ಹಾಗೂ 5 ಕೋಟಿ ರೂ.ಮೀರಿದ ವರ್ಗಕ್ಕೆ ಅದನ್ನು ಶೇ.37ಕ್ಕೆ ಏರಿಸಲಾಗಿದೆ. ಇದರಿಂದಾಗಿ ಆ ಎರಡು ಹೊಸ ವರ್ಗದವರು ಅಂತಿಮವಾಗಿ ಸೆಸ್‌ ಸಹಿತ ಶೇ.39 ಹಾಗೂ ಶೇ. 42.74 ಕರ ಕಟ್ಟಿದಂತಾಯಿತು. ಇದು ತೀವ್ರವಾದ ಹೆಚ್ಚಳ ಮತ್ತು ಕಪ್ಪುಹಣವನ್ನು ಉತ್ತೇಜಿಸುವಂತಹ ಹಿನ್ನಡೆ. ಈ ರೀತಿಯ ಕರ ಹೇರಿಕೆ ಚರಿತ್ರೆಯಲ್ಲಿ ಪರಿಣಾಮಕಾರಿಯಾಗಿರಲಿಲ್ಲ ಎನ್ನುವುದನ್ನು ಮರೆಯಬಾರದು.

ಗೃಹ ಸಾಲ: ಗೃಹ ನಿರ್ಮಾಣದ ಲೆಕ್ಕದಲ್ಲಿ ನೀವು ಮಾಡಿದ ಸಾಲದ ಮೇಲಿನ ಬಡ್ಡಿ ಪಾವತಿಯ ಅಡಿಯಲ್ಲಿ ರೂ. 2 ಲಕ್ಷದವರೆಗೆ ಆದಾಯದಿಂದ ಕಳೆಯುವ ಸೌಲಭ್ಯ ಸೆಕ್ಷನ್‌ 24 ಅನುಸಾರ ಇರುವುದು ಎಲ್ಲರಿಗೂ ಗೊತ್ತೇ ಇರುವ ವಿಚಾರವಾಗಿದೆ. ಇದು ರೆಗ್ಯುಲರ್‌ ಆಗಿ ಪಡೆಯಬಹುದಾದ ಸೌಲಭ್ಯ. ಅದನ್ನು ಹೊರತುಪಡಿಸಿ Affordable housing ಪರಿಕಲ್ಪನೆಯಲ್ಲಿ ಮಧ್ಯಮ ವರ್ಗಕ್ಕೆ ಅನುಕೂಲವಾಗುವಂತೆ ಒಂದು ಸಣ್ಣ ಮನೆಗೆ ಹೆಚ್ಚುವರಿ ಕರ ವಿನಾಯಿತಿ ನೀಡುವುದು ಅಗಾಗ್ಗೆ ನಡೆದು ಬಂದಿದೆ. ಅಂತಹ ಸೌಲಭ್ಯ ಒಂದು ನಿಗದಿತ ವಾಯಿದೆಗೆ ಮಾತ್ರ ಲಭ್ಯವಾಗಿರುತ್ತದೆ. ಇದೀಗ ಈ ಬಜೆಟ್ಟಿನಲ್ಲಿಯೂ ಅಂತಹ ಹೆಚ್ಚುವರಿ ಕರ ಲಾಭವನ್ನು Affordable housing ಅಡಿಯಲ್ಲಿ ಘೋಷಿಸಲಾಗಿದೆ.

ಇದರಡಿಯಲ್ಲಿ ಒಬ್ಟಾತನಿಗೆ ಪ್ರಥಮ ಬಾರಿ ಮನೆ ಕಟ್ಟುವವರಿಗೆ/ಖರೀದಿಸುವವರಿಗೆ ಮಾತ್ರ ಅನ್ವಯಿಸುವಂತೆ, ಸ್ವಂತ ವಾಸಕ್ಕಿರುವ ಮನೆಗೆ ಮಾತ್ರ ಅನ್ವಯಿಸುವಂತೆ, ಮನೆಯ ಒಟ್ಟು ಮೌಲ್ಯ 45 ಲಕ್ಷ ರೂ. ಒಳಗೆ ಇರುವ ಸಂದರ್ಭಕ್ಕೆ ಮಾತ್ರ ಅನ್ವಯಿಸುವಂತೆ, 2019 ಏ.1ರಿಂದ ಆರಂಭಗೊಂಡು 2020 ಮಾರ್ಚ್‌ 31 ರ ಒಳಗೆ ಪಡಕೊಂಡ ಗೃಹ ಸಾಲಕ್ಕೆ ಮಾತ್ರ ಅನ್ವಯಿಸುವಂತೆ (ಹಳೆ ಸಾಲಕ್ಕೆ ಈ ಸೌಲಭ್ಯ ಸಿಗದು) ಕಟ್ಟುವ ಬಡ್ಡಿಯ ಮೇಲೆ ಹೆಚ್ಚುವರಿ1.5 ಲಕ್ಷ ರೂ.ಗೆ ಆದಾಯದಿಂದ ನೇರವಾಗಿ ಕಳೆಯುವಂತೆ ವಿನಾಯಿತಿ ನೀಡಲಾಗಿದೆ.

ಅಂದರೆ, ಸಾಮಾನ್ಯವಾಗಿ ದಕ್ಕುವ 2 ಲಕ್ಷ ಮತ್ತು ಅಫೋರ್ಡೇಬಲ್ ತರಗತಿಯ 1.5 ಲಕ್ಷ – ಒಟ್ಟಾರೆ 3.5 ಲಕ್ಷದ ಲಾಭ ಸಿಗುತ್ತದೆ. ಆದರೆ, ‘ಅಫೋರ್ಡೇಬಲ್ ಹೌಸಿಂಗ್‌’ ಅಲ್ಲದ ಅಂದರೆ ರೂ. 45 ಮೀರಿದ ಮನೆಗಳಿಗೆ ಮೊದಲಿನಂತೆ ಕೇವಲ ರೂ. 2 ಲಕ್ಷದ ಲಾಭ ಮಾತ್ರ ಸಿಗುತ್ತದೆ.

ಎನ್‌ಪಿಎಸ್‌: ಎನ್‌ಪಿಎಸ್‌ ಅಥವಾ ನ್ಯಾಷನಲ್ ಪೆನ್ಶನ್‌ ಯೋಜನೆಯಲ್ಲಿನ ದುಡ್ಡನ್ನು ನಾವು 60 ವರ್ಷ ಆದಾಗ ಶೇ.60 ಏಕಗಂಟಿನಲ್ಲಿ ಹಿಂಪಡೆಯಬಹುದು ಮತ್ತು ಬಾಕಿ ಶೇ. 40 ಅನ್ನು ಪೆನ್ಶನ್‌ ಅಥವಾ ಆನ್ಯೂಟಿಯಾಗಿ ಪರಿವರ್ತಿಸತಕ್ಕದ್ದು. ಹಿಂಪಡೆಯುವ ಶೇ.60 ದುಡ್ಡಿನಲ್ಲಿ ಕೇವಲ ಶೇ.40 ಮಾತ್ರ ಕರವಿನಾಯಿತಿ ಹೊಂದಿದ್ದು ಉಳಿದ ಶೇ. 20 ಕರಾರ್ಹವಾಗಿತ್ತು. ಇದೀಗ ನಮಗೆ 60 ವರ್ಷ ಆದಾಗ ಹಿಂಪಡೆಯುವ ಶೇ.60 ಸಂಪೂರ್ಣವಾಗಿ ಕರಮುಕ್ತವಾಗಿರುತ್ತದೆ. ಇದು ಎನ್‌ಪಿಎಸ್‌ ಯೋಜನೆಗೆ ಬಹುದೊಡ್ಡ ಉತ್ತೇಜನ ಕೊಟ್ಟಂತಾಗಿದೆ. ಸಾರ್ವಜನಿಕರಿಗೆ ಈಗಾಗಲೇ ಒಂದು ಅತ್ಯುತ್ತಮ ಹೂಡಿಕೆಯಾಗಿರುವ ಎನ್‌ಪಿಎಸ್‌ ಈ ಕರ ವಿನಾಯಿತಿಯೊಂದಿಗೆ ಇನ್ನಷ್ಟು ಆಕರ್ಷಕವಾಗಿದೆ. (ಎನ್‌ಪಿಎಸ್‌ – ಸರ್ಕಾರಿ ಮಾಡೆಲ್ ಬಗ್ಗೆ ಸರ್ಕಾರಿ ನೌಕರರ ದೃಷ್ಟಿಕೋನ ಭಿನ್ನವಾಗಿದೆ; ಅದು ಪ್ರತ್ಯೇಕ ವಿಚಾರ. ದಯವಿಟ್ಟು ವಿಷಯಗಳ ಸಜ್ಜಿಗೆ-ಬಜಿಲ್ ಮಾಡದಿರಿ).

ವಿದ್ಯುತ್‌ ವಾಹನ: ನೀವೊಂದು ವಿದ್ಯುತ್‌ ಚಾಲಿತ ಕಾರು ಕೊಂಡರೆ ಅದರ ಸಾಲದ ಮೇಲಿನ ಬಡ್ಡಿ ಪಾವತಿಗೆ 1.5 ಲಕ್ಷ ರೂ.ವಾರ್ಷಿಕ ತೆರಿಗೆ ವಿನಾಯಿತಿ ನೀಡಲಾಗುವುದು. ಸಾಲವನ್ನು 2019 ಏ.1ರಿಂದ 2023 ಮಾ.31ರ ಒಳಗಾಗಿ ಪಡೆಯತಕ್ಕದ್ದು. ಹಸಿರು ಪರಿಸರ ಮತ್ತು ರುಪಿ ವಾಲ್ಯೂ ಕಾಪಾಡುವಿಕೆಯಲ್ಲಿ ಇದು ಈ ಬಜೆಟಿನ ಒಂದು ಕೊಡುಗೆ.

CPSE-ETF: ಇದುವರೆಗೆ ಸೆಕ್ಷನ್‌ 80ಇಅಡಿಯಲ್ಲಿ ರೂ 1.5 ಲಕ್ಷದವರೆಗೆ Equity Linked savings scheme (ELSS)ನಾಮಾಂಕಿತ ಮ್ಯೂಚುವಲ್ ಫ‌ಂಡುಗಳಲ್ಲಿ ಮಾಡುವ ಹೂಡಿಕೆಯ ಮೇಲೆ ಕರ ವಿನಾಯಿತಿ ಸಿಗುತ್ತಿತ್ತು. ಅದು ಬಿಟ್ಟು ಬೇರೆ ಯಾವುದೇ ಮ್ಯೂಚುವಲ್ ಫ‌ಂಡುಗಳ ಹೂಡಿಕೆಗೆ ಕರ ವಿನಾಯಿತಿ ಇರಲಿಲ್ಲ. ಆದರೆ ಇದೀಗ Central Public Sector Enterprises ಅಥವಾ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ Exchange Traded Funds ಅಥವಾ ಶೇರುಕಟ್ಟೆಯಲ್ಲಿ ಮಾರಾಟವಾಗುವ ಮ್ಯೂಚುವಲ್ ಫ‌ಂಡುಗಳಿಗೆ ಕೂಡಾ ಅದೇ ಸೌಲಭ್ಯ ದೊರಕಲಿದೆ. ಇವಕ್ಕೂ ELSS ನಂತೆ 3 ವರ್ಷಗಳ ಲಾಕ್‌-ಇನ್‌ ಅವಧಿ ಇರುತ್ತವೆ. ಸದ್ಯಕ್ಕೆ ಅಂತಹ 2 ಫ‌ಂಡುಗಳಿವೆ – CPSE ETFಮತ್ತು BHARAT22. ಅದಲ್ಲದೆ ಅಂತಹ CPSE-ETFಗಳ ಮೇಲೆ ಹೂಡುವ ಫ‌ಂಡುಗಳ ಮೇಲೂ ರಿಯಾಯಿತಿ ದರದ ಶಾರ್ಟ್‌ ಟರ್ಮ್ ತೆರಿಗೆ ವಿಧಿಸಲಾಗುವುದು (ವಿವರಗಳು ಅಲಭ್ಯ).

ಶೇರು ಬೈ ಬ್ಯಾಕ್‌: ಶೇರುಗಳನ್ನು ಕಂಪೆನಿಗಳೇ ಮರು ಖರೀದಿಸುವ ಜಾಯಮಾನ ಇತ್ತೀಚೆಗೆ ಜಾಸ್ತಿ ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಅಂತಹ ಬೈ ಬ್ಯಾಕ್‌ ಲಾಭದ ಮೇಲೆ ಶೇ.20 ಆದಾಯ ಕರ ವಿಧಿಸುವ ಹೊಸ ಪ್ರಸ್ತಾಪವನ್ನು ಈ ಬಜೆಟ್ ಒಳಗೊಂಡಿದೆ. ಇಶ್ಯೂ ಬೆಲೆ ಮತ್ತು ಬೈ ಬ್ಯಾಕ್‌ ಬೆಲೆಗಳ ವ್ಯತ್ಯಾಸವನ್ನು ಲಾಭಾಂಶವೆಂದು ಪರಿಗಣಿಸಿ ಅದರ ಮೇಲೆ ಈ ಬೈ ಬ್ಯಾಕ್‌ ಟ್ಯಾಕ್ಸ್‌ (BBT) ಕರವನ್ನು ವಿಧಿಸಲಾಗುವುದು.

ಟಿಡಿಎಸ್‌: ಕಾಂಟ್ರಾಕ್ಟರ್‌ ಅಥವಾ ಪ್ರೊಫೆಶನಲ್ ಸೇವೆಯ ಬಿಲ್ ಆ ವರ್ಷದಲ್ಲಿ50 ಲಕ್ಷ ರೂ. ದಾಟಿದ್ದರೆ ಅಂತಹ ಪಾವತಿಯ ಮೇಲೆ ನೀವು-ನಾವು ವೈಯಕ್ತಿಕ/ಎಚ್ಯುಎಫ್ ನೆಲೆಯಲ್ಲಿ ಶೇ. 5 ಟಿಡಿಎಸ್‌ ಕಡಿತ ಮಾಡಿ ಸರಕಾರಕ್ಕೆ ಕಟ್ಟಬೇಕು. ಇಂತಹ ಟಿಡಿಎಸ್‌ ಇದುವರೆಗೆ ಭೂಮಿಯ ಖರೀದಿಯ ಸಂದರ್ಭದಲ್ಲಿ, ಎನ್ನಾರೈಗಳ ಫ್ಲ್ಯಾಟ್ ಬಾಡಿಗೆಯ ಮೇಲೆ ಲಾಗೂ ಆಗುತ್ತಿತ್ತು.

ಇತರ:
● ಇನ್ನು ಮುಂದೆ ಪ್ಯಾನ್‌ ಕಾರ್ಡ್‌ ಬದಲಿಗೆ ಆಧಾರ್‌ ಕಾರ್ಡ್‌ ಬಳಸಿ ರಿಟರ್ನ್ ಫೈಲಿಂಗ್‌ ಮಾಡಬಹುದಾಗಿದೆ.

● ಸದ್ಯದ ಕರ ಕಾನೂನು ಪ್ರಕಾರ ಕರಾರ್ಹ ಆದಾಯ ಇಲ್ಲದವರು ರಿಟರ್ನ್ ಫೈಲಿಂಗ್‌ ಮಾಡುವ ಅಗತ್ಯ ಇಲ್ಲ. ಆದರೆ ಈಗ ಅಂತಹ ತರಗತಿಯವರೂ ಕೂಡಾ ಕೆಲ ಸಂದರ್ಭಗಳಲ್ಲಿ ರಿಟರ್ನ್ ಫೈಲಿಂಗ್‌ ಮಾಡುವುದು ಕಡ್ಡಾಯ ಎಂಬ ಪ್ರಸ್ತಾಪ ಬಂದಿದೆ. ವಿದೇಶಿ ಯಾನಕ್ಕೆ 2 ಲಕ್ಷ ರೂ. ಮೇಲ್ಪಟ್ಟು ಖರ್ಚು ಮಾಡಿದ್ದರೆ, ಚಾಲ್ತಿ ಖಾತೆಗೆ ವರ್ಷದಲ್ಲಿ 1 ಕೋಟಿ ರೂ. ಮೀರಿ ಹಾಕಿದ್ದರೆ, 1 ಲಕ್ಷ ರೂ. ಮೀರಿ ವರ್ಷಕ್ಕೆ ವಿದ್ಯುತ್‌ ಬಿಲ್ ಪಾವತಿ ಮಾಡಿದ್ದರೆ ಅಂತವರು ರಿಟರ್ನ್ ಫೈಲಿಂಗ್‌ ಮಾಡುವುದು ಕಡ್ಡಾಯ ಎನ್ನುವ ಕಾನೂನು ಇದೀಗ ಬರಲಿದೆ.

● ರಿಟರ್ನ್ ಫೈಲಿಂಗ್‌ ಮಾಡಿದ ಬಳಿಕ ಕರ ಇಲಾಖೆಯು ಮಾಡಬಹುದಾದ ಸುðಟಿನಿ ಅಥವಾ ತಪಾಸಣೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್‌ ಮುಖಾಂತರ ರಾಂಡಮ್‌ ಆಗಿ ಮಾಡಲಾಗುವುದು. ಅಸೆಸ್ಮೆಂಟ್ ಆಫೀಸರರ ಹೆಸರು ಕೂಡಾ ನಮಗೆ ತಿಳಿಯದಂತೆ ತಪಾಸಣೆ ಮಾಡುವ ವ್ಯವಸ್ಥೆ ಬರಲಿದೆ.

● ಎನ್ನಾರೈಗಳು ಇನ್ನು ಮುಂದು ತಮ್ಮ ಪಿಐಎಸ್‌ (Portfolio Investment Scheme) ಮಾರ್ಗದ ಬದಲಾಗಿ ಎಫ್ಪಿಐ (Foreign Portfolio Investment) ಮಾರ್ಗದಲ್ಲಿ ಭಾರತದಲ್ಲಿ ಹೂಡಿಕೆ ಮಾಡಬಹುದಾಗಿದೆ. ಇದರಿಂದಾಗಿ ಟಿಡಿಎಸ್‌ ಕಡಿತದಿಂದ ಮುಕ್ತಿ ದೊರೆಯುತ್ತಲ್ಲದೆ. ಇನ್ನಿತರ ಹಲವು ಆಡಳಿತಾತ್ಮಕ ತೊಡಕುಗಳು ನಿವಾರಣೆಯಾಗಲಿದೆ (ವಿವರಗಳು ಅಲಭ್ಯ)

● ಎನ್ನಾರೈಗಳಿಗೆ ಇನ್ನು ಮುಂದೆ ಅವರು ಭಾರತದಿಂದ ಪಡೆಯುವ ಗಿಫ್ಟ್ ಮೇಲೆ ನಿವಾಸಿಗಳಿಗೆ ಸಲ್ಲುವ ನಿಯಮಗಳೇ ಸಲ್ಲುತ್ತವೆ. ಕೇವಲ ಅನಿವಾಸಿಗಳು ಎನ್ನುವ ಕಾರಣಕ್ಕೆ ಕರವಿನಾಯಿತಿ ಸಿಗಲಾರದು. ಕಾಳಧನ ವರ್ಗಾವಣೆಯನ್ನು ತಡೆಗಟ್ಟಲು ಮಾಡಿದ ಉಪಾಯ ಇದು ಎನ್ನಲಾಗಿದೆ.

ಟಾಪ್ ನ್ಯೂಸ್

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Sullia: Airavata bus stopped

Sullia: ಕೆಟ್ಟು ನಿಂತ ಐರಾವತ ಬಸ್‌

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

Puttur: ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.