ಬಜೆಟ್‌: ಹೊಸ ಕರಪಟ್ಟ ಎಂಬ ಊಟಕ್ಕಿಲ್ಲದ ಉಪ್ಪಿನಕಾಯಿ!


Team Udayavani, Feb 3, 2020, 6:55 AM IST

budget

ಈ “ಆಯ್ಕೆ’ ಕರಪದ್ಧತಿಯನ್ನು ಸರಳಗೊಳಿಸುವ ಬದಲು ಇನ್ನಷ್ಟು ಕ್ಲಿಷ್ಟವಾಗಿಸಿದೆ ಎನ್ನುವುದು ನನ್ನ ಅಭಿಪ್ರಾಯ. ಈಗಿರುವ ಪದ್ಧತಿಯನ್ನೇ ಅರ್ಥ ಮಾಡಿಸಲು ಪಡುವ ಪಾಟಲು ನನಗೇ ಗೊತ್ತು, ಇನ್ನು ಈ ಹೊಸ ಆಯ್ಕೆಯ ಸಮಸ್ಯೆಯನ್ನೂ ಕಟ್ಟಿಕೊಂಡು…ಅಬ್ಬಬ್ಬ!

ನಿರ್ಮಲಾ ಸೀತಾರಾಮನ್‌ ಅವರ ಬಹು ನಿರೀಕ್ಷಿತ ಬಜೆಟ್‌-2020 ಇದೀಗ ಹೊರಬಂದಿದೆ. ಅಭೂತಪೂರ್ವ ಮಾದರಿಯಲ್ಲಿ ಈ ಬಜೆಟ್‌ ನಮ್ಮ ಮುಂದೆ ಎರಡೆರಡು ಕರಪಟ್ಟಿಯನ್ನು ಇರಿಸಿ ಬೇಕಾದ್ದನ್ನು ಆಯ್ದುಕೊಳ್ಳುವಂತೆ ಹೇಳಿದೆ. ಇದು ಭರತ ಖಂಡದಲ್ಲಿಯೇ ಮೊತ್ತ ಮೊದಲ ಬಾರಿ. ಒಂದು ಕರಪಟ್ಟಿ ಇರುವಾಗಲೇ ಅರ್ಥವಾಗದ ಕಬ್ಬಿಣದ ಕಡಲೆಯಂತಿದ್ದ ಕರ ಕಾನೂನು ಇದೀಗ ಎರಡೆರಡು ಪಟ್ಟಿಗಳನ್ನು ಎದುರಿಟ್ಟು ಜನ ಸಾಮಾನ್ಯರ ಗೊಂದಲವನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ ನಮ್ಮಂತಹ ಕುಡಿಕೆ ಪಾರ್ಟಿಗಳಿಗೆ ಒಂದೊಳ್ಳೆಯ ಸುಗ್ಗಿಯ ಕಾಲ. ಎಲ್ಲವೂ ಸರಳವಾಗಿ ಜನ ಸಾಮಾನ್ಯರಿಗೆ ಅರ್ಥವಾದರೆ ಮತ್ತೆ ನಮ್ಮಂತಹ ಕೊರೆಯಪ್ಪಂದಿರಿಗೆ ಮತ್ತೇನು ಕೆಲಸ. ಅಲ್ಲವೇ? ಆಲ್‌ ರೈಟ್‌! ಮುಂದಕ್ಕೆ ಹೋಗೋಣ! ಎರಡೆರಡು ಪಟ್ಟಿಗಳ ಈ ಹೊಸ ಗೊಂದಲವನ್ನು ತುಸು ಸೂಕ್ಷವಾಗಿ ನೋಡೋಣ:

ಚಾಲ್ತಿ ಪದ್ಧತಿ ಕರಪಟ್ಟಿಯಲ್ಲಿ ಆದಾಯ ಕರವನ್ನು ಒಂದು ರೀತಿಯಲ್ಲಿ ಲೆಕ್ಕ ಹಾಕುವುದಾದರೆ ಇದೀಗ ಬಿಡುಗಡೆಯಾದ ನೂತನ ಪದ್ಧತಿಯ ಹೊಸ ಪಟ್ಟಿಯಲ್ಲಿ ಆದಾಯ ತೆರಿಗೆಯನ್ನು ಇನ್ನೊಂದು ರೀತಿಯಲ್ಲಿ ಲೆಕ್ಕ ಹಾಕಲಾಗುತ್ತದೆ. ಮೂಲಭೂತವಾಗಿ, ಚಾಲ್ತಿ ಪಟ್ಟಿಯಲ್ಲಿ ಕರದರಗಳು ಜಾಸ್ತಿ; ಆದರೆ ಸುಮಾರು ನೂರು ರೀತಿಯ ಕರ ವಿನಾಯಿತಿಗಳು ಆ ಪಟ್ಟಿಗೆ ಅನ್ವಯವಾಗುತ್ತವೆ. ಈ ಬಜೆಟ್ಟಿನಲ್ಲಿ ಬಿಡುಗಡೆಯಾದ ಹೊಸ ಕರ ಪಟ್ಟಿಯಲ್ಲಿ ಕರದರಗಳು ಕಡಿಮೆಯಾದರೂ ಯಾವುದೇ ರೀತಿಯ ಕರ ವಿನಾಯಿತಿಗಳು ಅದಕ್ಕೆ ಅನ್ವಯವಾಗುವುದಿಲ್ಲ. ಉದಾ: ಸಂಬಳದವರಿಗೆ ಸ್ಟಾಂಡರ್ಡ್‌ ಡಿಡಕ್ಷನ್‌, ಎಚ್‌.ಆರ್‌.ಎ, ಎಲ್‌.ಟಿ.ಎ ರಿಯಾಯಿತಿಗಳು, ಅಲ್ಲದೆ 80ಸಿ ಅಡಿಯಲ್ಲಿ ಬರುವ ಪಿಪಿಎಫ್, ಜೀವ ವಿಮೆ, ಅಲ್ಲದೆ ಗೃಹ ಸಾಲದ ಬಡ್ಡಿ, ವಿದ್ಯಾ ಸಾಲದ ಬಡ್ಡಿ, ಮೆಡಿಕಲ್‌ ಇನ್ಶೂರ®Õ…, ಬ್ಯಾಂಕ್‌ ಬಡ್ಡಿದರದ ರಿಯಾಯಿತಿ ಇತ್ಯಾದಿ ಇತ್ಯಾದಿ. ಒಟ್ಟು ಜನಪ್ರಿಯ 70 ರಿಯಾಯಿತಿಗಳನ್ನು ಈಗಾಗಲೇ ತೆಗೆದಿ¨ªಾರೆ – ಈ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ಲಭ್ಯವಿಲ್ಲ.

ಇನ್ನೂ 30 ರಿಯಾಯಿತಿಗಳು ಪರಿಶೀಲನೆಯ ಲ್ಲಿದೆಯಂತೆ. ಇದೀಗ ಈ ಬಜೆಟ್ಟಿನಲ್ಲಿ ಪ್ರತಿಯೊಬ್ಬನೂ ತನಗೆ ಬೇಕಾದ ಪಟ್ಟಿಯನ್ನು ಆಯ್ದುಕೊಂಡು ಕರ ಲೆಕ್ಕ ಹಾಕಬಹುದು. ಇವೆರಡರಲ್ಲಿ ಯಾವದು ಹೆಚ್ಚು ಲಾಭಕಾರಿ ಎಂದು ನೋಡಿ ಆ ಪಟ್ಟಿಯನ್ನು ಅನುಸರಿಸಬಹುದು. ಈ ಲೆಕ್ಕಾಚಾರ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಪ್ರತಿ ಯೊಬ್ಬನಿಗೂ ಆತನ ಆದಾಯ ಹೊಂದಿಕೊಂಡು ಮತ್ತೆ ಯಾವ ಕರ ವಿನಾಯಿತಿಯನ್ನು ಪಡಕೊಳ್ಳುತ್ತಾನೆ ಎನ್ನುವು ದನ್ನು ಹೊಂದಿಕೊಂಡು ಆ ಎರಡರಲ್ಲಿ ಒಂದು ಲಾಭದಾ ಯಕವಾದೀತು. ಈ “ಆಯ್ಕೆ’ ಕರಪದ್ಧತಿಯನ್ನು ಸರಳಗೊಳಿ ಸುವ ಬದಲು ಇನ್ನಷ್ಟೂ ಕ್ಲಿಷ್ಟವಾಗಿಸಿದೆ ಎನ್ನುವುದು ನನ್ನ ಅಭಿಪ್ರಾಯ. ಈಗಿರುವ ಪದ್ಧತಿಯನ್ನೇ ಅರ್ಥ ಮಾಡಿಸಲು ಪಡುವ ಪಾಟಲು ನನಗೇ ಗೊತ್ತು, ಇನ್ನೂ ಈ ಹೊಸ ಆಯ್ಕೆಯ ಸಮಸ್ಯೆಯನ್ನೂ ಕಟ್ಟಿಕೊಂಡು.. ಅಬ್ಬಬ್ಬ!

ಯಾವುದು ಸೂಕ್ತ?
(ಟೇಬಲ್‌ ನೋಡಿ) ಸಂಕ್ಷಿಪ್ತವಾಗಿ ಹೇಳುವುದಾದರೆ ರೂ 5 ಲಕ್ಷ ಆದಾಯ ಇರುವವರಿಗೆ ಯಾವ ಪದ್ಧತಿಯಾದರೂ ಒಂದೇ. ಯಾಕೆಂದರೆ ಸೆಕ್ಷನ್‌ 87ಎ ಪ್ರಕಾರ ಎರಡೂ ಪದ್ಧತಿಯಲ್ಲೂ ರೂ 5 ಲಕ್ಷಕ್ಕಿಂತ ಕಡಿಮೆ ಕರಾರ್ಹ ಆದಾಯ ಉಳ್ಳವರಿಗೆ ಯಾವುದೇ ಆದಾಯ ಕರ ಇರುವುದಿಲ್ಲ. ರೂ 7.5 ಲಕ್ಷ ಸಂಪಾದನೆ ಮಾಡುವವರಿಗೆ ಹೊಸ ಪದ್ಧತಿಯಲ್ಲಿ ರೂ 26,000 ಲಾಭ ಎಂದು ತೋರಿದರೂ ರೂ 1,25,000 ಮೀರಿದ ಹೂಡಿಕೆ/ರಿಯಾಯಿತಿ ಉಳ್ಳವರಿಗೆ ಚಾಲ್ತಿ ಪದ್ಧತಿಯೇ ಲಾಭದಾಯಕ. ಇನ್ನು, ರೂ 10 ಲಕ್ಷ ಆದಾಯ ಉಳ್ಳವರು ಹೊಸ ಪದ್ಧತಿಯಲ್ಲಿ ರೂ 39,000 ಉಳಿಸುವಂತೆ ಕಾಣುತ್ತದಾದರೂ ಅವರ ಹೂಡಿಕೆ/ರಿಯಾಯಿತಿಗಳು ರೂ 1,87,500 ದಾಟಿದಲ್ಲಿ ಚಾಲ್ತಿ ಪದ್ಧತಿಯೇ ಲಾಭದಾಯಕ. ಇನ್ನು ರೂ 12.5 ಲಕ್ಷ ಆದಾಯದವರು ಕನಿಷ್ಠ ರೂ 2,08,333 ಲಕ್ಷದ ವಿವಿಧ ಹೂಡಿಕೆ/ರಿಯಾಯಿತಿಗಳ ಮೂಲಕ ಚಾಲ್ತಿ ಪದ್ಧತಿಯಲ್ಲಿಯೇ ಉಳಿದುಕೊಂಡು ಲಾಭ ಗಳಿಸಬಹುದು. ಹಾಗೆಯೇ ರೂ 15 ಲಕ್ಷ ಮೀರಿದ ಆದಾಯ ಇರುವ ಎಲ್ಲರೂ ಕೂಡಾ ಕನಿಷ್ಠ ರೂ 2,50,000 ಹೂಡಿಕೆ/ರಿಯಾಯಿತಿ ಪಡ ಕೊಂಡು ಚಾಲ್ತಿ ಪದ್ಧತಿಯಲ್ಲಿ ಮುಂದುವರಿಯುವುದೇ ಉತ್ತಮ. ಇಲ್ಲಿ ನೀಡಿದ ಹೂಡಿಕಾ/ರಿಯಾಯಿತಿ ಮೊತ್ತ ಈ ಎರಡೂ ಸಿಸ್ಟಮ್‌ಗಳು ಬರಾಬರಿಯಾಗಲು ಬೇಕಾಗುವ ಕನಿಷ್ಠ ಮೊತ್ತಗಳು. ಕನಿಷ್ಠಕ್ಕಿಂತ ಜಾಸ್ತಿ ಹೂಡಿದಂತೆÇÉಾ ಚಾಲ್ತಿ ಪದ್ಧತಿ ಹೊಸ ಪಟ್ಟಿಗಿಂತ ಜಾಸ್ತಿ ಲಾಭದಾಯಕ ವಾಗುತ್ತಾ ಹೋಗುತ್ತದೆ. ಅಲ್ಲದೆ, ವಾಸ್ತವದಲ್ಲಿ ತುಂಬಾ ಜನರು ಅದಕ್ಕೂ ಮೀರಿದ ಹೂಡಿಕೆಗಳನ್ನು ರಿಯಾಯಿತಿ ಗಳನ್ನು ಗಳಿಸುತ್ತಾ ಇ¨ªಾರೆ ಕೂಡಾ.

ಈ ಹೂಡಿಕೆ ರಿಯಾಯಿತಿಗಳಲ್ಲಿ ನಿಮ್ಮ ಸ್ಟಾಂಡರ್ಡ್‌ ಡಿಡಕ್ಷನ್‌, ಪಿಪಿಎಫ್, ವಿಮೆ, ಹೌಸಿಂಗ್‌ ಲೋನ್‌, ಎನ್‌.  ಪಿ.ಎಸ್‌ ಇತ್ಯಾದಿಗಳು ಇರುವ ಕಾರಣ ಸರ್ವರಿಗೂ ಬಹುತೇಕ ಹೂಡಿಕೆ ನಿರಾಯಾಸವಾಗಿ ಆಗುತ್ತದೆ ಮತ್ತು ಅಂಥ‌ವರಿಗೆ ಈಗ ಇರುವ ಚಾಲ್ತಿ ಪದ್ಧತಿಯೇ ಉತ್ತಮ.

ನಿಜವಾಗಿ ಹೇಳುವುದಾದರೆ ಯಾವ ವರ್ಗಕ್ಕೆ ಈ ಹೊಸ ಪಟ್ಟಿ ಸೂಕ್ತವಾಗಲಿದೆ ಮತ್ತು ಯಾವ ಲೆಕ್ಕಾಚಾರ ಇಟ್ಟುಕೊಂಡು ಈ ಪಟ್ಟಿಯನ್ನು ತಯಾರಿಸಲಾಗಿದೆ ಎನ್ನುವುದು ತುಸು ಗೊಂದಲಮಯ ವಾಗಿದೆ. ನಿರ್ಮಲಾ ಸೀತಾರಾಮನ್‌ ಬಜೆಟ್‌ ಭಾಷಣದಲ್ಲಿ ತೋರಿಸಿದ ಲಾಭ (ರೂ 78,000) ಒಂದು ಪೈಸೆ ಹೂಡಿಕೆ/ರಿಯಾಯಿತಿ ಇಲ್ಲದ ವರಿಗೆ ಮಾತ್ರ. ವಾಸ್ತವದಲ್ಲಿ ಅಂತವರು ಯಾರೂ ಇಲ್ಲ. ಹಾಂ! ಸರಿ ಸುಮಾರು ರೂ 5-7 ಲಕ್ಷದ ಆದಾಯ ವರ್ಗದಲ್ಲಿ ಕರವಿನಾಯಿತಿಗಾಗಿ ಇಲ್ಲಿ ಕೊಟ್ಟ ಮೊತ್ತದಷ್ಟು ಹೂಡಿಕೆ ಮಾಡಲಾಗದವರು ಎÇÉಾದರು ಇದ್ದರೆ (ಕೆಲವರಿರಬಹುದು) ಅಂತಹ ಬೆರಳೆಣಿಕೆಯ ಸೀಮಿತ ಮಂದಿಗೆ ಮಾತ್ರ ಹೊಸ ಪಟ್ಟಿ ಸಹಕಾರಿಯಾದೀತು. ಅದಕ್ಕಿಂತ ಜಾಸ್ತಿ ಆದಾಯ ಇರುವವರಿಗೆ ಖಂಡಿತವಾಗಿ ಹೂಡಿಕೆ/ರಿಯಾಯಿತಿ ಅಸಾಧ್ಯವಲ್ಲ.

ಹಾಗಾಗಿ ಬಹುತೇಕ ಸಾರ್ವಜನಿಕರಿಗೆ ಈ ಹೊಸ ಪಟ್ಟಿ ಊಟಕ್ಕೆ ಇಲ್ಲದ ಉಪ್ಪಿನಕಾಯಿಯೇ ಸರಿ. ಅಷ್ಟೇ ಏಕೆ? ಅರಿವಿಲ್ಲದೆ ಹೊಸ ಪಟ್ಟಿಗೆ ಹೋದರೆ ಹೆಚ್ಚುವರಿ ಹೂಡಿಕೆ ರಿಯಾಯಿತಿಗಳ ಲಾಭ ಕಳಕೊಂಡು ತೀವ್ರವಾದ ನಷ್ಟಕ್ಕೆ ಕೈ ಹಾಕುವಿರಿ.

ಇನ್ನೊಂದು ವಿಪರ್ಯಾಸ ಈ ಬಾರಿ ನಡೆದುದೇನೆಂದರೆ ಈ ಪಟ್ಟಿಯ ಆಯ್ಕೆಯನ್ನು ಒಂದೇ ಬಾರಿ ಮಾಡಬಹುದಾಗಿದೆ. ಒಮ್ಮೆ ಆಯ್ದ ಪಟ್ಟಿಯಲ್ಲಿಯೇ ಮುಂದುವರಿಯಬೇಕು. ಮುಂದಕ್ಕೆ ನಮ್ಮ ಆದಾಯದಲ್ಲಿ ವ್ಯತ್ಯಾಸವಾದಂತೆ ಪಟ್ಟಿಯಿಂದ ಪಟ್ಟಿಗೆ ಹಾರುವಂತಿಲ್ಲ. ಮುಂದಕ್ಕೆ ಈ ಎರಡು ಪಟ್ಟಿಗಳಲ್ಲಿ ಯಾವ ಬದಲಾವಣೆಗಳು ಬರುತ್ತವೋ ದೇವನೇ ಬಲ್ಲ.

ನೀವು ಆಯ್ದ ಪಟ್ಟು ಕೆಳಕ್ಕೆ ಹೋಗಿ ಆಯದ ಪಟ್ಟಿಯಲ್ಲಿ ಕಡಿತ ನೀಡಿದರೆ ನಿಮಗೆ ಆ ಲಾಭ ಸಿಗಲಾರದೇನೋ? ಒಟ್ಟಿನಲ್ಲಿ ಈ ಹೊಸ ಪದ್ಧತಿಯ ಮೂಲಕ ನಿರ್ಮಲಾ ಸೀತಾರಾಮನ್‌ ಆದಾಯ ಕರದಲ್ಲಿ ಮತ್ತಷ್ಟೂ ಗೊಂದಲಗಳನ್ನು ಸೃಷ್ಟಿ ಮಾಡಿ¨ªಾರೆ. ಏನೇ ಇರಲಿ ಸದ್ಯಕ್ಕಂತೂ ಚಾಲ್ತಿ ಪಟ್ಟಿಯೇ ಮೇಲು.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.