ದುಡ್ಡಿನ ಹರಿವು, ವೆಚ್ಚ ನಿಯಂತ್ರಣಕ್ಕೆ ಆರ್‌ಬಿಐ ಸೂತ್ರಗಳು
Team Udayavani, Apr 10, 2017, 12:25 PM IST
ಎಪ್ರಿಲ್ 6ರಂದು ನಡೆದ ಈ ವರ್ಷದ ಮೊಟ್ಟ ಮೊದಲ ದ್ವೆ„ಮಾಸಿಕ ಹಣಕಾಸು ನೀತಿಯ ಪರಿಶೀಲನ ಸಭೆಯ ನಿರ್ಣಯದಂತೆ ರಿಸರ್ವ್ ಬ್ಯಾಂಕ್ ರಿಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ರಿವರ್ಸ್ ರಿಪೋ ದರದಲ್ಲಿ ಶೇ. 0.25 ಹೆಚ್ಚಳ ಮಾಡಿದೆ. ಅಷ್ಟೇ ಅಲ್ಲದೆ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರದಲ್ಲಿ ಶೇ.0.25 ಕಡಿತ ಮಾಡಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕು ನಮ್ಮ ದೇಶದೊಳಗಿನ ದುಡ್ಡಿನ ಹರಿವು ಮತ್ತು ವೆಚ್ಚವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಅಂದರೆ ಎಷ್ಟು ದುಡ್ಡು ಆರ್ಥಿಕತೆಯಲ್ಲಿ ಹರಿಧಿಯಬೇಕು ಮತ್ತು ಅದು ಯಾವ ಬಡ್ಡಿದರದಲ್ಲಿ ಜನರ ಕೈಗೆ ಎಟುಕಬೇಕು ಎನ್ನುವ ನಿಯಂತ್ರಣವನ್ನು ಆರ್‌ಬಿಐ ತನ್ನ ಹಣಕಾಸು ನೀತಿಯ (ಮಾನಿಟರಿ ಪಾಲಿಸಿ) ಮೂಲಕ ನಿರ್ವಹಿಸುತ್ತದೆ.
ಇತ್ತೀಚೆಗಿನ ವ್ಯವಸ್ಥೆ ಪ್ರಕಾರ ಆರ್‌ಬಿಐ ಪ್ರತಿ ಎರಡು ತಿಂಗಳುಗಳಿಗೊಮ್ಮೆ ತನ್ನ ಹಣಕಾಸು ನೀತಿಯ ವಿಮಶೆೆìಯನ್ನು ನಡೆಸಿ ಅಗತ್ಯ ಕಂಡುಬಂದಲ್ಲಿ ನೀತಿಯಲ್ಲಿ ಬದಲಾವಣೆಯನ್ನು ತರುತ್ತದೆ. ಈ ಸಂದರ್ಭದಲ್ಲಿ ಮುಖ್ಯವಾದ ದರಗಳು ಅಂದರೆ LAF rates (repo, reverse repo) MSF rate, CRR, SLR ಇತ್ಯಾದಿಗಳನ್ನು ವಿಮರ್ಶಿಸಲಾಗುತ್ತದೆ. ಆರ್ಥಿಕತೆಯ ಗುರಿ ಮುಟ್ಟುವಲ್ಲಿ ಸಹಕಾರಿಯಾಗುವಂತೆ ಇವುಗಳನ್ನು ಅಗತ್ಯ ಬಂದಂತೆ ಬದಲಾಯಿಸಲಾಗುತ್ತದೆ.
ಅಷ್ಟಕ್ಕೂ ಈ ದರಗಳ ಅರ್ಥ ಮತ್ತು ಮಹತ್ವಗಳೇನು ?
ಸಿಆರ್‌ಆರ್: CRR ಅಂದರೆ Cash reserve ratio. ಒಂದು ಬ್ಯಾಂಕು ತನ್ನ ಒಟ್ಟು ಡೆಪಾಸಿಟ್ಟುಗಳಲ್ಲಿ (ಎಸ್‌ಬಿ/ಕರೆಂಟ್ ಹಾಗೂ ಎಫ್ಡಿ) ಎಷ್ಟು ಪ್ರಮಾಣವನ್ನು ನಗದು ರೂಪದಲ್ಲಿ ಆರ್‌ಬಿಐಯಲ್ಲಿ ಮೀಸಲು ಠೇವಣಿಯಾಗಿ ಇಟ್ಟಿರಬೇಕು ಎನ್ನುವುದನ್ನು ಸಿಆರ್‌ಆರ್ ಅನುಪಾತ ಸೂಚಿಸುತ್ತದೆ. ಇದು ಬಡ್ಡಿರಹಿತವಾದ ಠೇವಣಿಯಾದ ಕಾರಣ ಅದರ ಮೇಲೆ ಬ್ಯಾಂಕು ಆದಾಯ ಗಳಿಸುವುದಿಲ್ಲ. ಇದು ಬ್ಯಾಂಕುಗಳ ಸುರಕ್ಷಾ ದೃಷ್ಟಿಯಲ್ಲಿ ಒಂದು ಭದ್ರತಾ ಠೇವಣಿಯಾದರೂ ರಿಸರ್ವ್ ಬ್ಯಾಂಕ್ ಈ ಅನುಪಾತವನ್ನು ಹಣದ ಹರಿವನ್ನು ನಿಯಂತ್ರಿಸಲು ಉಪಯೋಗಿಸಿಕೊಳ್ಳುತ್ತದೆ. ಸಿಆರ್‌ಆರ್‌ನಲ್ಲಿ ಏರಿಕೆ ಮಾಡಿದರೆ ಆರ್ಥಿಕತೆಯಲ್ಲಿ ಅಷ್ಟು ದುಡ್ಡಿನ ಹರಿವನ್ನು ಕಡಿಮೆ ಮಾಡಿದಂತೆ, ಹಾಗೆಯೇ ಸಿಆರ್‌ಆರ್ ಕಡಿಮೆ ಮಾಡಿದರೆ ಅಷ್ಟು ದುಡ್ಡಿನ ಹರಿವನ್ನು ಜಾಸ್ತಿ ಮಾಡಿದಂತೆ.
ಎಸ್‌ಎಲ್‌ಆರ್: SLR ಅಂದರೆ Statutory Liquidity Ratio. ಒಂದು ಬ್ಯಾಂಕಿನ ಒಟ್ಟು ಡೆಪಾಸಿಟ್‌ಗಳ ಎಷ್ಟು ಭಾಗಧಿವನ್ನು ಕೇಂದ್ರೀಯ/ರಾಜ್ಯ ಸರಕಾರದ ಸಾಲಪತ್ರಗಳಲ್ಲಿ ಹೂಡಿಟ್ಟಿಧಿರಧಿಬೇಕು ಎನ್ನುವುದನ್ನು ಈ ಅನುಪಾತ ಸೂಚಿಸುತ್ತದೆ. ಈ ಸರಕಾರಿ ಸಾಲಪತ್ರಗಳಲ್ಲಿ ಬ್ಯಾಂಕುಗಳು ನಿಗದಿತ ಬಡ್ಡಿ ಪಡೆಯುತ್ತವೆ.
ಈ ಅನುಪಾತವನ್ನು ಕೂಡ ಬ್ಯಾಂಕುಗಳ ವಿತ್ತೀಯ ಭದ್ರತೆಗಾಗಿ ರೂಪಿಸಲಾಗಿದೆ.
ಎಲ್‌ಎಎಫ್: LAF ಅಂದರೆ ಆರ್‌ಬಿಐ ಬ್ಯಾಂಕುಗಳಿಗೆ ನೀಡುವ Liquidity adjustment facility. ಈ ಸೌಲಭ್ಯದಲ್ಲಿ ಬ್ಯಾಂಕುಗಳು ತಮ್ಮ ಅಲ್ಪಕಾಲಿಕ ನಗದಿನ ಅಗತ್ಯಕ್ಕಾಗಿ (ಲಿಕ್ವಿಡಿಟಿ) 1, 7, 14 ದಿನಗಳ ಲೆಕ್ಕದಲ್ಲಿ ರಿಸರ್ವ್ ಬಾಂಕಿನಿಂದ ಸಾಲ ಪಡೆಧಿಯುತ್ತವೆ. ಈ ಕೆಲಸ ರಿಸರ್ವ್ ಬ್ಯಾಂಕು ಇತರ ಬ್ಯಾಂಕುಗಳಿಂದ ಸರಕಾರಿ ಸಾಲಪತ್ರಗಳನ್ನು ದುಡ್ಡುಕೊಟ್ಟು ಮರುಖರೀದಿ ಮಾಡುವ ಮೂಲಕ ನಡೆಯುತ್ತದೆ. ಇಂತಹ ಮರುಖರೀದಿಯನ್ನು ರಿಪರ್ಚೇಸ್ ಅಥವಾ ರಿಪೋ ಎಂದು ಚುಟುಕಾಗಿ ಹೇಳುತ್ತಾರೆ.
ಇದರ ತದ್ವಿರುದ್ಧ ಪ್ರಕ್ರಿಯೆಯಲ್ಲಿ ಬ್ಯಾಂಕುಗಳು ತಮ್ಮ ಹೆಚ್ಚುವರಿ ದುಡ್ಡನ್ನು ರಿಸರ್ವ್ ಬ್ಯಾಂಕಿಗೆ ನೀಡಿ ಅಲ್ಲಿಂದ ಸರಕಾರಿ ಸಾಲ ಪತ್ರಗಳನ್ನು ವಾಪಾಸು ಪಡಕೊಳ್ಳುತ್ತವೆ. ಅದನ್ನು ರಿವರ್ಸ್ ರಿಪರ್ಚೇಸ್‌ಅಥವಾ ಚುಟುಕಾಗಿ ರಿವರ್ಸ್-ರಿಪೋ ಎನ್ನುತ್ತಾರೆ.
ರಿಸರ್ವ್ ಬಾಂಕು, ರಿಪೋ ಮತ್ತು ರಿವರ್ಸ್ ರಿಪೋ ಪ್ರಕ್ರಿಯೆಗಳ ಬಡ್ಡಿ ದರಗಳನ್ನು ನಿಗದಿಪಡಿಸಿ ಬ್ಯಾಂಕುಗಳ ಅಲ್ಪಕಾಲಿಕ ಸಾಲಗಳ ವೆಚ್ಚದ ಮೇಲೆ ಪ್ರಭಾವ ಬೀರುತ್ತದೆ. ಉದ್ಯಮ ಮತ್ತು ಜನಸಾಮಾನ್ಯರಿಗೆ ನೀಡುವ ಸಾಲ ಮತ್ತು ಠೇವಣಿ ದರಗಳು ಈ ದರಗಳನ್ನು ಅನ್ವಯಿಸಿರುತ್ತದೆ.
ಎಂಎಸ್‌ಎಫ್: MSF ಅಂದರೆ marginal standing facility. ಮೇಲೆ ತಿಳಿಸಿದ ಕಡಿಮೆ ವೆಚ್ಚದ ಎಲ್‌ಎಎಫ್ ಸೌಲಭ್ಯವನ್ನು ಮೀರಿ ಕೂಡ ದುಡ್ಡು ಬೇಕಾದಲ್ಲಿ ಈ ಹಾದಿಯಲ್ಲಿ ಸಾಲ ಪಡೆಧಿಯಧಿಬೇಕಾಗುತ್ತದೆ. ಇದಕ್ಕೆ ಎಲ್‌ಎಎಫ್ಗಿಂತ ಜಾಸ್ತಿ ಬಡ್ಡಿದರ ತಗಲುತ್ತದೆ. ಹಾಗಾಗಿ ಬಾಂಕುಗಳು ತಮಲ್ಲಿ ಸರಕಾರಿ ಸಾಲ ಪತ್ರಗಳು ಲಭ್ಯವಿದ್ದಲ್ಲಿ ಅವನ್ನೇ ಕೊಟ್ಟು ರಿಪೋ ದರದಲ್ಲಿಯೇ ಸಾಲ ಪಡೆಯುತ್ತವೆ. ಅಂತಹ ಪತ್ರಗಳು ಕೈಯಲ್ಲಿ ಇಲ್ಲದೇ ಹೋದಲ್ಲಿ ಹೆಚ್ಚುವರಿ ಬಡ್ಡಿಯ ಈ ಎಂಎಸ್‌ಎಫ್ ಸೌಲಭ್ಯದ ಮೂಲಕ ಬರಬೇಕಾಗುತ್ತದೆ.
ಬ್ಯಾಂಕ್ ರೇಟ್: ಬ್ಯಾಂಕ್‌ರೇಟ್ ಅಂದರೆ ಆರ್‌ಬಿಐ ಬ್ಯಾಂಕುಧಿಗಳಿಗೆ ದೀರ್ಘಕಾಲಿಕ ಸಾಲ ಕೊಡುವ ಬಡ್ಡಿದರ. ಈ ಮೂಲಕ ಆರ್‌ಬಿಐ ದೀರ್ಘಕಾಲಿಕ ಹಣದ ಹರಿವು ಮತ್ತದರ ವೆಚ್ಚವನ್ನು ನಿಯಂಧಿತ್ರಿಸುತ್ತದೆ. ಇದರ ಬಡ್ಡಿದರ ಎಂಎಸ್‌ಎಫ್ನಷ್ಟೇ ಇದೆ.
ಸದ್ಯದ ದರಗಳು: ಸದ್ಯದ ಪರಿಸ್ಥಿತಿಯಲ್ಲಿ ಆರ್‌ಬಿಐ ದರಗಳು ಈ ಕೆಳಗಿನಂತಿವೆ.
CRR – 4%, SLR – 20.5%, LAF – Repo 6.25% , Reverse Repo 6.00%, MSF – 6.50%, Bank rate – 6.50%
ಪ್ರತಿ ಬಾರಿ ರಿಸರ್ವ್ ಬ್ಯಾಂಕ್ ತನ್ನ ಸಾಲ ನೀತಿಯ ಸಭೆಯನ್ನು ನಡೆಸುವಾಗಲೂ ಬಡ್ಡಿ ದರಗಳ ಕಡಿತದ ಬೇಡಿಕೆ ಉದ್ಯಮದ ವತಿಯಿಂದ ಇರುತ್ತದೆ. ಇದು ಸರ್ವೇ ಸಾಮಾನ್ಯ. ಯಾಕೆ ರಿಸರ್ವ್ ಬ್ಯಾಂಕಿನ ಬಡ್ಡಿ ದರ ಅಷ್ಟು ಮುಖ್ಯವಾಗುತ್ತದೆ? ಯಾಕೆ ಉದ್ಯಮಿಗಳು ಬಡ್ಡಿ ದರದ ಕಡಿತದ ಬಗ್ಗೆ ಅಷ್ಟೊಂದು ಆಗ್ರಹ ವ್ಯಕ್ತ ಪಡಿಸುತ್ತಾರೆ? ಆ ಬಗ್ಗೆ ಸ್ವಲ್ಪ ಹಿನ್ನೆಲೆ ಮಾಹಿತಿಯನ್ನು ತಿಳಿದುಕೊಳ್ಳೋಣ.
ಮೂಲ ತತ್ವ: ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿದರ ಎಲ್ಲ ಬಿಸಿಧಿನೆಸ್ ಚಟುವಟಿಗೆಗಳನ್ನೂ ಬಾಧಿಸುತ್ತದೆ. ಉದ್ದಿಮೆಯ ವೆಚ್ಚಗಳನ್ನು ಕಡಿಮೆಯಾಗಿಸಲು ಉದ್ದಿಮೆಗಳು ಬಡ್ಡಿ ದರಗಳ ಇಳಿಕೆಗೆ ಸದಾ ಒತ್ತಾಯಿಸುತ್ತಲೇ ಇರುತ್ತವೆ. ಕಡಿಮೆ ಬಡ್ಡಿದರಗಳಿದ್ದರೆ ಸರಕಿನ ಬೆಲೆಯೂ ಕಡಿಮೆಯಾಗಿ ಗ್ರಾಹಕರ ಸಾಲದ ದರಗಳು ಕಡಿಮೆಯಾಗಿ ಮಾರಾಟ ಹಾಗೂ ಲಾಭ ಜಾಸ್ತಿಯಾಗುವುದು ಎನ್ನುವುದು ಇದರ ಹಿಂದಿರುವ ತತ್ವ.
ಪರಿಣಾಮ: ಬಡ್ಡಿದರದ ಇಳಿಕೆಯಿಂದಾಗಿ ಈ ಕೆಳಗಿನ ಪರಿಣಾಮವನ್ನು ನಿರೀಕ್ಷಿಸಬಹುದು
1. ಬಡ್ಡಿದರ ಅಂದರೆ ರಿಪೋ ದರಗಳನ್ನು ಇಳಿಸಿದಾಕ್ಷಣ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಸಾಲದ ಬಡ್ಡಿದರ ಇಳಿಯುತ್ತದೆ. ಇದರಿಂದ ಉದ್ಯಮಿಗಳು ಪಡೆಯುವ ಸಾಲದ ವೆಚ್ಚ ಕಡಿಮೆಯಾಗುತ್ತದೆ. ಹಾಗೂ ನಾವು ನೀವುಗಳು ಪಡೆಯುವ ಗೃಹ ಸಾಲ, ವಿದ್ಯಾ ಸಾಲ ವಾಹನ ಸಾಲ ಇತ್ಯಾದಿ ಎಲ್ಲ ಸಾಲಗಳೂ ಅಗ್ಗವಾಗುತ್ತವೆ. ಈಗಾಗಲೇ ಪಡೆದಿರುವ ಫ್ಲೋಟಿಂಗ್ ರೇಟ್ ಸಾಲಗಳ ಮೆಲೆ ಇಎಂಐ ಮೊತ್ತವನ್ನು ಕಡಿಮೆ ಮಾಡುತ್ತಾರೆ ಅಥವಾ ಅವಧಿ ಕಡಿಮೆ ಮಾಡುತ್ತಾರೆ. ಇದು ಎಲ್ಲರ ಕಿವಿಗೆ ಹೆಜ್ಜೆàನು ಸುರಿವಂತಹ ನ್ಯೂಸ್!
2. ಆದರೆ ರಿಪೋ ಜತೆಗೆ ರಿವರ್ಸ್ ರಿಪೋ ಅಂದರೆ ಬ್ಯಾಂಕುಗಳು ಆರ್‌ಬಿಐಯಲ್ಲಿ ಠೇವಣಿ ಇಡುವ ಹಣದ ಮೇಲಿನ ಬಡ್ಡಿದರವೂ ಇಳಿಯುತ್ತದೆ. ಇದರಿಂದಾಗಿ ನಾವುಗಳು ಬ್ಯಾಂಕಿನಲ್ಲಿಡುವ ದುಡ್ಡಿನ ಮೇಲಿನ ಬಡ್ಡಿದರವೂ ಇಳಿಯುತ್ತದೆ ಅಲ್ಲವೇ? ಠೇವಣಿದಾರರಿಗೆ ಮತ್ತು ಠೇವಣಿಯ ಆದಾಯ ಪ್ರಮುಖವಾಗಿರುವ ಜನರಿಗೆ ಬಡ್ಡಿದರದ ಇಳಿಕೆ ಒಳ್ಳೆಯದಲ್ಲ. ಹಲವಾರು ಜನರು, ಮುಖ್ಯವಾಗಿ ನಿವೃತ್ತರು ಬ್ಯಾಂಕ್ ಠೇವಣಿಯ ಆಧಾರದ ಮೇಲೆಯೇ ತಮ್ಮ ಜೀವನವನ್ನು ಸಾಗಿಸುತ್ತಾರೆ. ಅವರೆಲ್ಲರಿಗೂ ಉಳಿತಾಯದ/ಭವಿಷ್ಯದ ದೃಷ್ಟಿಯಿಂದ ನೋಡುವುದಾದರೆ ಅಧಿಕ ಬಡ್ಡಿದರ ಒಳ್ಳೆಯದೇ. ಬಡ್ಡಿದರದ ವಿಷಯದಲ್ಲಿ ಸಾಲಗಾರರ ಆಸಕ್ತಿ ಮತ್ತು ಠೇವಣಿದಾರರ ಆಸಕ್ತಿ ಏಕªಂ ವಿರುದ್ಧ ದಿಕ್ಕಿನಲ್ಲಿರುವುದನ್ನು ಗಮನಿಸಬಹುದು. ಆದರೆ ಈ ಬಾರಿ ರಿವರ್ಸ್ ರಿಪೋ ದರವನ್ನು ಹೆಚ್ಚಳ ಮಾಡುವುದರ ಮೂಲಕ ಬ್ಯಾಂಕುಗಳಿಗೆ ಜಾಸ್ತಿ ದುಡ್ಡನ್ನು ರಿಸರ್ವ್ ಬ್ಯಾಂಕಿನಲ್ಲಿ ಇರಿಸಲು ಉತ್ತೇಜನ ನೀಡಿದಂತಾಯಿತು. ಇದರಿಂದಾಗಿ ಆರ್ಥಿಕತೆಯಲ್ಲಿ ಹಣದ ಹರಿವನ್ನು ಕಡಿತಗೊಳಿಸಿ ಬೆಲೆಯೇರಿಕೆಗೆ ಕಡಿವಾಣ ಹಾಕಿದಂತಾಯಿತು.
3. ಬಡ್ಡಿದರದ ಇಳಿಕೆ ಶೇರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಬಡ್ಡಿದರ ಕಡಿಮೆಯಾದಂತೆ ಕಂಪೆನಿಗಳ ಲಾಭವೂ ಜಾಸ್ತಿಧಿಯಾಗುತ್ತದೆ. ಅದಕ್ಕಾಗಿ ಶೇರುಕಟ್ಟೆ, ಕಾರ್ಪೊàರೇಟ್ ವಲಯ ಯಾವ ಕಾಲಕ್ಕೂ ಸರ್ವ ಋತುಗಳಲ್ಲಿಯೂ ಬಡ್ಡಿದರದ ಕಡಿತಕ್ಕೆ ರಿಸರ್ವ್‌ಬ್ಯಾಂಕನ್ನು ಒತ್ತಾಯಿಸುತ್ತಲೇ ಇರುತ್ತವೆ. ಬಡ್ಡಿದರ ಇಳಿಧಿದಂತೆಲ್ಲ ಕಂಪೆನಿಗಳ ಲಾಭಾಂಶ, ಶೇರು ಬೆಲೆಗಳೇರುವುದು ಸಹಜ.
4. ಬಡ್ಡಿದರ ಇಳಿಸಿದಾಗ ಆರ್ಥಿಕ ಪ್ರಗತಿ ಉಂಟಾಗುತ್ತದೆ ಎನ್ನುಧಿವುದು ಅರ್ಥಶಾಸ್ತ್ರಜ್ಞರ ಮತ್ತು ಸರಕಾರಗಳ ನಂಬಿಕೆ. ಆ ಕಾರಣಕ್ಕಾಗಿ ಸರಕಾರವೂ ಬಡ್ಡಿದರದ ಇಳಿಕೆಗಾಗಿ ಆರ್‌ಬಿಐಯನ್ನು ಆಸೆಗಣ್ಣುಗಳಿಂದ ನೋಡುತ್ತಿರುತ್ತದೆ. ಕೆಲವೊಮ್ಮೆ ಬಡ್ಡಿದರ ಇಳಿಸದಿದ್ದಾಗ ಈ ಆಸೆಗಣ್ಣುಗಳು ಕೆಂಪುಗಣ್ಣುಗಳಾದದ್ದೂ ಇದೆ. ಆರ್‌ಬಿಐಯು ಸರಕಾರದ ಅಧೀನ ಅಂಗವಲ್ಲ. ಅದೊಂದು ಸ್ವತಂತ್ರ ಸಂಸ್ಥೆ. ಆ ಕಾರಣಕ್ಕಾಗಿ ವಿತ್ತ ಮಂತ್ರಾಲಯವು ಆರ್‌ಬಿಐ ಮೇಲೆ ಯಾವುದೇ ಹೇರಿಕೆ ಮಾಡುವಂತಿಲ್ಲ. ಬಡ್ಡಿದರ ಇಳಿಸಿದರೆ ಪ್ರಗತಿ (ಜಿಡಿಪಿ) ಉಂಟಾಗುವುದೇನೋ ಹೌದು. ಆದರೆ ಅದರ ಒಟ್ಟಿಗೇನೇ ಬೆಲೆಯೇರಿಕೆಯೂ ಉಂಟಾಗುತ್ತದೆ. ಆದ್ದರಿಂದ ಆರ್‌ಬಿಐಯು ಯಾವತ್ತೂ ಹಣದುಬ್ಬರದ ಮೇಲೆ ಒಂದು ಕಣ್ಣಿಟ್ಟೇ ಬಡ್ಡಿದರವನ್ನು ನಿಗದಿಪಡಿಸುತ್ತದೆ.
5. ಬಡ್ಡಿದರ ಇಳಿಕೆಯಿಂದ ರೂಪಾಯಿಯ ಮೌಲ್ಯ ನಿಜವಾಗಿಯೂ ಇಳಿಯಬೇಕು. ಯಾವ ಕರೆನ್ಸಿಯಲ್ಲಿ ಹೂಡಿದರೆ ಜಾಸ್ತಿ ಬಡ್ಡಿ ಬರುತ್ತದೋ ಆ ಕರೆನ್ಸಿಗೆ ಬೆಲೆ ಜಾಸ್ತಿ ಎನ್ನುವುದು ಸಾಮಾನ್ಯಜ್ಞಾನ. ಇತ್ತೀಚೆಗೆ ಅಮೆರಿಕ ಬಡ್ಡಿದರ ಏರಿಕೆಯ ಮುನ್ಸೂಚನೆ ಕೊಟ್ಟಾಕ್ಷಣ ಡಾಲರ್ ಬೆಲೆ ವೃದ್ಧಿಯಾಯಿತು.
6. ಬಾಂಡು ಮಾರುಕಟ್ಟೆಯಲ್ಲಿ ಬಡ್ಡಿದರದ್ದು ನೇರವಾದ ಪ್ರಭಾವವಿದೆ. ಬಾಂಡು ಎಂದರೆ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಸರಕಾರಿ, ಖಾಸಗಿ ಯಾವುದೇ ಸಾಲಪತ್ರ/ ಡೆಟ್ ಫಂಡ್‌ಕೂಡ ಆದೀತು. ಅವೆಲ್ಲ ಒಂದು ನಿಗದಿತ ಮುಖ ಬೆಲೆಯಲ್ಲಿ ಬಂದರೂ ಮಾರುಕಟ್ಟೆಯಲ್ಲಿ ಅವುಗಳು ಬೇರೆ ಬೇರೆ ಬೆಲೆಗೆ ಬಿಕರಿಯಾಗುತ್ತವೆ. ಇದು ಅದರ ಮೂಲ ಬಡ್ಡಿದರವನ್ನು ಹೊಂದಿಕೊಂಡು ಏರಿಳಿಯುತ್ತದೆ.
– ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.