ಈ ವಿತ್ತ ವರ್ಷದ (2017-18) ಕರ ಹೂಡಿಕೆ ಮತ್ತು ಪುರಾವೆ
Team Udayavani, Feb 12, 2018, 11:20 AM IST
ನಮ್ಮ ಈ ವರ್ಷದ ಆದಾಯ ಕರ ತಹಬಂದಿಗೆ ತರುವುದು, ಕರ ಉಳಿತಾಯಕ್ಕಾಗಿ ಮಾಡಿರುವ ಹೂಡಿಕೆ ಪರಿಶೀಲಿಸಿ ಅಗತ್ಯವಿದ್ದಲ್ಲಿ ಹೆಚ್ಚುವರಿ ಹೂಡಿಕೆ ಮಾಡುವುದು, ಈ ಹೂಡಿಕೆಗಳ ಪುರಾವೆಯನ್ನು ಉದ್ಯೋಗದಾತರಿಗೆ ನೀಡುವುದು, ಇತ್ಯಾದಿಗಳು ನಾವೀಗ ಮಾಡಬೇಕಿರುವ ತುರ್ತು ಕೆಲಸಗಳು.
ಬಜೆಟ್ ವಿಚಾರ ಒತ್ತಟ್ಟಿಗಿರಲಿ. ಅದೇ ಗುಂಗನ್ನು ತಲೆಯೊಳಗೆ ತುಂಬಿಸಿ ತಿರುಗಾಡುತ್ತಿದ್ದರೆ ನಮ್ಮ ಸದ್ಯದ ಕತೆ ಕೈಲಾಸವಾಗುವುದು ಗ್ಯಾರಂಟಿ. ಅದು ಏಕೆ ಅಂದರೆ, ಈಗ ಘೋಷಣೆಯಾದ ಬಜೆಟ್ ಮುಂದಿನ ವಿತ್ತ ವರ್ಷಕ್ಕೆ, ಅಂದರೆ 2018-19 ಕ್ಕೆ ಸಲ್ಲುವಂತದ್ದು. ಈ ವಿತ್ತ ವರ್ಷಕ್ಕೆ ಅಂದರೆ 2017-18 ಕ್ಕೆ ಸಲ್ಲುವುದು ಕಳೆದ ವರ್ಷ ಘೋಷಣೆಯಾದ ಬಜೆಟ್. ಮುಂದಿನ ವರ್ಷಕ್ಕೆ ಸಲ್ಲುವ ಈ ಬಜೆಟ್ಟನ್ನು ಹಿಡಿದು ಕೊಂಡು ಮೋದಿ-ಜೈಟಿÉ ಅಂತ ಬಡಿದಾಡುತ್ತಾ ಕುಳಿ
ತರೆ ಈಗಿನ ನಮ್ಮ ತುರ್ತು ಕೆಲಸ ಮಾಡುವುದು ಯಾವಾಗ? ಈಗಿನ ತುರ್ತು ಕೆಲಸ ನಮ್ಮ ಈ ವರ್ಷದ ಆದಾಯ ಕರವನ್ನು ತಹಬಂದಿಗೆ ತರುವುದು, ಕರ ಉಳಿತಾಯಕ್ಕಾಗಿ ಮಾಡಿರುವ ಹೂಡಿಕೆಯನ್ನು ಪರಿಶೀಲಿಸಿ ಅದು ಸಾಕೇ ಸಾಲದೇ ಎಂದು ಪರಿಶೀಲಿಸಿ ಅಗತ್ಯವಿದ್ದಲ್ಲಿ ಹೆಚ್ಚುವರಿ ಹೂಡಿಕೆ ಮಾಡುವುದು, ಕರ ಸಂಬಂಧಿ ಹೂಡಿಕೆಗಳ ಪುರಾವೆಯನ್ನು ಉದ್ಯೋಗದಾತರಿಗೆ ನೀಡುವುದು, ಇತ್ಯಾದಿ.
ಕಾನೂನು ಪ್ರಕಾರ, ಮಾರ್ಚ್ 3ರ ಒಳಗಾಗಿ ಈ ವರ್ಷಕ್ಕೆ (ವಿತ್ತ ವರ್ಷ 2017-18, ಅಸೆಸೆ¾ಂಟ್ ವರ್ಷ 2018-19) ಸಲ್ಲುವಂತೆ ಕರ ಉಳಿತಾಯಕ್ಕೆ ಬೇಕಾದ ಠೇವಣಿ, ಪಾವತಿ ಇತ್ಯಾದಿಗಳನ್ನು ಮಾಡ ಬೇಕು. ಆದರೆ ಬಹುತೇಕ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಇ-ಮೇಲ… ಹಾಕಿ ನಿಮ್ಮ ಹೂಡಿಕೆಯ ಪುರಾವೆಯನ್ನು ಜನವರಿ 15 ಯಾ ಜನವರಿ 31ರ ಒಳಗಾಗಿ ಸಲ್ಲಿಸಿ ಇಲ್ಲವಾದರೆ ನಿಮ್ಮ ಕರ ಕಡಿತ ಆರಂಭ ಮಾಡುತ್ತೇವೆ ಎಂಬ ಮಾಹಿತಿ ನೀಡಿರುತ್ತಾರೆ.
ನೀವು ಮಾಡಿದ ಹೂಡಿಕೆಯನ್ನು ಪರಿಶೀಲಿಸಿ ಆ ಪ್ರಕಾರ ಉಳಿದ ಆದಾಯ ಕರವನ್ನು ಟಿಡಿಎಸ್ ರೂಪದಲ್ಲಿ ಕಡಿತ ಮಾಡುವ ದರ್ದು ಅವರಿಗೆ ಇರುತ್ತದೆ. ಹಾಗಾಗಿ ಅವರು ಸ್ವಲ್ಪ ಅರ್ಜೆಂಟ… ಮಾಡುವುದು ಸಹಜ. ಹಾಗಾಗಿ ವಾಸ್ತವದಲ್ಲಿ ಮಾರ್ಚ್ 31 ಕೊನೆಯ ದಿನಾಂಕವಾದರೂ ನೀವು ಈಗಾಗಲೇ ಹೂಡಿಕೆ ಮಾಡಿ ಅದರ ಪುರಾವೆ ಸಲ್ಲಿಸುವುದು ಅನಿವಾರ್ಯವಾಗುತ್ತದೆ.
ಒಂದು ವೇಳೆ ನೀವು ಸಕಾಲಕ್ಕೆ ಪುರಾವೆ ಸಲ್ಲಿಸದ ಕಾರಣಕ್ಕೆ ಕಂಪೆನಿಯು ನಿಮ್ಮ ಟಿಡಿಎಸ್ ಕಡಿತ ಮಾಡಿ ಸರಕಾರಕ್ಕೆ ಕಟ್ಟಿ ಬಿಟ್ಟರೆ ಏನಾಗುತ್ತದೆ ಎನ್ನುವುದು ಕೆಲವರ ಆತಂಕ. ಕಂಪೆನಿಯು ಟಿಡಿಎಸ್ ಕಡಿತ ಮಾಡಿ ಸರಕಾರಕ್ಕೆ ಪಾವತಿ ಮಾಡಿದ ಬಳಿಕವೂ ನೀವು ಹೂಡಿಕೆ ಮಾಡಬಹುದೇ ಎನ್ನುವುದು ಇನ್ನೊಂದು ಪ್ರಶ್ನೆ. ಖಂಡಿತವಾಗಿ ಮಾಡಬಹುದು.
ಮಾರ್ಚ್ 31ರ ವರೆಗೆ ನಿಮಗೆ ಸಮಯವಿದೆ. ನಿಮ್ಮ ಕಂಪೆನಿಯು ಯಾವುದೇ ಕಾರಣಕ್ಕೆ ಹೆಚ್ಚುವರಿ ಟಿಡಿಎಸ್ ಕಡಿತ ಮಾಡಿದ್ದಲ್ಲಿ ಅದನ್ನು ರಿಟರ್ನ್ ಸಲ್ಲಿಕೆಯ ಮೂಲಕ ನೀವು ಕರ ಇಲಾಖೆಯಿಂದ ಬಡ್ಡಿ ಸಮೇತ ಹಿಂಪಡೆಯಬಹುದು, ವರಿ ಮಾಡಬೇಡಿ.
ಪರಿಸ್ಥಿತಿ ಹೀಗಿರುವಾಗ ಈ ವರ್ಷಕ್ಕೆ ಸಲ್ಲುವಂತೆ ಕರ ಕಡಿತಕ್ಕೆ ಸಂಬಂಧಪಟ್ಟ ಹೂಡಿಕೆ ಮತ್ತು ಪಾವತಿಗಳು ಯಾವ್ಯಾವುವು ಎನ್ನುವುದರ ಬಗ್ಗೆ ಒಂದು ನಜರ್ ಡಾಲೋಣ. ಮೊದಲೇ ಹೇಳಿದಂತೆ ಈ ವರ್ಷಕ್ಕೆ ಸಂಬಂಧಪಟ್ಟ ಕಾನೂನು 2017ರ ಬಜೆಟ್ ಪ್ರಕಾರ ಇರುತ್ತದೆ. ಈಗಿನ ಬಜೆಟ್ ಮುಂದಿನ ವರ್ಷಕ್ಕೆ ಸಲ್ಲುವ ಕಾನೂನು. ಇದನ್ನು ಸಜ್ಜಿಗೆ-ಬಜಿಲ… ಮಾಡದಿರಿ.
ಮೊತ್ತ ಮೊದಲನೆಯದಾಗಿ ನೀವು ಈ ಕೆಳಗಿನ ವಿಚಾರಗಳಲ್ಲಿ ಮಾಡಿದ ಖರ್ಚು/ಹೂಡಿಕೆ ಏನಾದರೂ ಇವೆಯೇ ಎನ್ನುವುದನ್ನು ಹಂತ ಹಂತವಾಗಿ ಪರಿಶೀಲಿಸಿ ಪಟ್ಟಿ ಮಾಡಿಕೊಳ್ಳಿ.
1. ಗೃಹ ಸಾಲದ ಮೇಲಿನ ಬಡ್ಡಿ
ನೀವು ಗೃಹ ಸಾಲದ ಬಡ್ಡಿ ಪಾವತಿಸುವವರಾಗಿದ್ದಲ್ಲಿ ವಾರ್ಷಿಕ ಒಟ್ಟು ರೂ. 2 ಲಕ್ಷದವರೆಗೆ ಸ್ವಂತ ಅಥವಾ ಬಾಡಿಗೆ ನೀಡಿರುವ ಮನೆಯ ಮೇಲೆ ಮಾಡಿದ ಗೃಹಸಾಲದ ಬಡ್ಡಿಯನ್ನು Income from House property ಎಂಬ ಹೆಸರಿನಲ್ಲಿ ಕಳೆಯಬಹು ದಾಗಿದೆ. ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರೆ ಆ ಆದಾಯ ಮತ್ತು ನಿರ್ವಹಣಾ ವೆಚ್ಚಗಳನ್ನೂ ತೋರಿಸಬೇಕು.
2. ಎನ್.ಪಿ.ಎಸ್
ಎನ್.ಪಿ.ಎಸ್ ದೇಣಿಗೆಯು 2 ಬೇರೆ ಬೇರೆ ಸೆಕ್ಷನ್‌ಗಳ ಅಡಿ ಯಲ್ಲಿ ಬರುತ್ತದೆ. ಮೂಲತಃ ಎನ್.ಪಿ.ಎಸ್ ದೇಣಿಗೆ ಸೆಕ್ಷನ್ 80ಇ ಅಡಿಯಲ್ಲಿ PPF, NSC, ELSS, ವಿಮೆ ಇತ್ಯಾದಿ ಬೇರೆ ಇತರ ಹೂಡಿಕೆಗಳ ಒಟ್ಟಿಗೆ ಬರುತ್ತದೆ. ಅದನ್ನು ಆಮೇಲೆ ನೋಡೋಣ. ಆದರೆ ಇತ್ತೀಚೆಗೆ ಅದನ್ನು ಇನ್ನೊಂದು ಸೆಕ್ಷನ್ 80 ಸಿಸಿಡಿ (1ಬಿ) ಅಡಿಯಲ್ಲಿ ಹೆಚ್ಚುವರಿ ದೇಣಿಗೆಯಾಗಿ ರೂ. 50,000 ಮಿತಿಯಲ್ಲಿ ಕೂಡಾ ಸೇರಿಸಲಾಗಿದೆ. ಆ ಹೂಡಿಕೆಗೆ ಪ್ರತ್ಯೇಕವಾದ ಕರ ವಿನಾಯಿತಿ ಲಭ್ಯ. ಹಾಗಾಗಿ ಮೊತ್ತ ಮೊದಲು ಎನ್.ಪಿ.ಎಸ್ ಹೂಡಿಕೆಯನ್ನು 80 ಸಿಸಿಡಿ (1ಬಿ) ಅಡಿಯ ಲ್ಲಿಯೇ ತೆಗೆದುಕೊಳ್ಳೋಣ. (ಮೂರನೆಯದಾಗಿ ಕಂಪೆನಿಯ ದೇಣಿಗೆಯು 80ಸಿಸಿಡಿ (2) ಸೆಕ್ಷನ್ನಿನ ಅಡಿಯಲ್ಲಿ ಬರುತ್ತದೆ. ಅದನ್ನು ಉದ್ಯೋಗಿಗಳು ತಮ್ಮ ಲೆಕ್ಕದಲ್ಲಿ ಮುಟ್ಟುವಂತಿಲ್ಲ, ಅದು ಪ್ರತ್ಯೇಕ)
3 ಮೆಡಿಕಲ… ಇನ್ಶೂರನ್ಸ್ (ಸೆಕ್ಷನ್ 80ಡಿ)
ಇದು ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ ರೂ. 25,000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ. 25,000 ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. ವಿಮಾ ಪ್ರೀಮಿಯಂಗಾಗಿ ಈ ಸೆಕ್ಷನ್ ಇದ್ದರೂ ಕೂಡಾ ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ. 5,000ದ ಒಳಮಿತಿಯನ್ನು ಇದು ಹೊಂದಿರುತ್ತದೆ. 60 ದಾಟಿದ ಹಿರಿಯ ನಾಗರಿಕರಿಗೆ ಒಟ್ಟು ಮಿತಿ ರೂ. 30,000 ಆಗಿದೆ. 80 ವರ್ಷ ದಾಟಿದ ಅತಿ ಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಅವರ ಮಿತಿಯನ್ನು ಸಂಪೂರ್ಣವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು.
4. ಅವಲಂಬಿತರ ಅಂಗವೈಕಲ್ಯ (ಸೆಕ್ಷನ್ 80 ಡಿಡಿ)
ಅವಲಂಬಿತರ ಅಂಗವೈಕಲ್ಯದ ವೈದ್ಯಕೀಯ (ನರ್ಸಿಂಗ್ ಸಹಿತ) ತರಬೇತಿ ಮತ್ತು ಪುನರ್ವಸತಿಗಾಗಿ ಅಥವಾ ಪಾಲನೆಗಾಗಿ ಕರ ವಿನಾಯಿತಿ ಸೌಲಭ್ಯ ನೀಡಲಾಗುತ್ತದೆ. ಶೇ.40-ಶೇ.80 ಅಂಗವೈಕಲ್ಯ ಇದ್ದರೆ ವಾರ್ಷಿಕ ಮಿತಿ ರೂ. 75,000 ಹಾಗೂ ಶೇ.80 ಮೀರಿದ ತೀವ್ರವಾದ ಅಂಗವೈಕಲ್ಯವಿದ್ದರೆ ಈ ಮಿತಿ ರೂ. 1,25,000 ಆಗಿರುತ್ತದೆ.
5. ಗಂಭೀರ ಕಾಯಿಲೆಗಳ ಚಿಕಿತ್ಸೆ (ಸೆಕ್ಷನ್ 80ಡಿಡಿಬಿ)
ಸ್ವಂತ ಹಾಗೂ ಅವಲಂಬಿತರ ಕ್ಯಾನ್ಸರ್, ನ್ಯೂರೋ, ಏಡ್ಸ್, ಥಲಸೇಮಿಯ, ರೀನಲ…, ಹೀಮೋಫಿಲಿಯಾ ಇತ್ಯಾದಿ ಕೆಲ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಈ ಮಿತಿಯನ್ನು ಬಳಸಬಹುದು. ಮಿತಿ ರೂ. 40,000. ಆದರೆ 60 ದಾಟಿದ ವರಿಷ್ಠರಿಗೆ ಈ ಮಿತಿ ರೂ. 60,000 ಹಾಗೂ 80 ದಾಟಿದ ಅತಿ ವರಿಷ್ಠರಿಗೆ ಇದು ರೂ. 80,000.
6. ವಿದ್ಯಾ ಸಾಲದ ಬಡ್ಡಿ (ಸೆಕ್ಷನ್ 80 ಇ)
ಸ್ವಂತ ಹಾಗೂ ಕುಟುಂಬದವರ ಉನ್ನತ ವ್ಯಾಸಂಗಕ್ಕಾಗಿ ಪಡೆದ ವಿದ್ಯಾ ಸಾಲದ ಬಡ್ಡಿ ಯಾವುದೇ ಮಿತಿಯಿಲ್ಲದೆ 8 ವರ್ಷಗಳವರೆಗೆ ತೆರಿಗೆ ವಿನಾಯಿತಿಗೆ ಅರ್ಹತೆ ಪಡೆದಿರುತ್ತದೆ.
7. ಡೊನೇಶನ್ (ಸೆಕ್ಷನ್ 80 ಜಿ)
ನಿಗದಿತ ಸಂಸ್ಥೆಗಳಿಗೆ ನೀಡಿದ ದಾನದ ಶೇ.50 ಅಥವಾ ಶೇ.100 ಸರಕಾರ ನಿಗದಿಪಡಿಸಿದಂತೆ, ಸಂಬಳದ ಶೇ.10 ಮೀರ ದಂತೆ; ನಿಮ್ಮ ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ.
8. ಬಾಡಿಗೆ ರಿಯಾಯಿತಿ (ಸೆಕ್ಷನ್ 80 ಜಿಜಿ)
ಸಂಬಳ ಮೂಲಕ ಎಚ್‌ಆರ್‌ಎ ಪಡೆಯದ ಹಾಗೂ ಸ್ವಂತ ಮನೆಯಿಲ್ಲದೆ ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿದ್ದು ಬಾಡಿಗೆ ನೀಡುತ್ತಿರುವವರಿಗೆ ಗರಿಷ್ಠ ವಾರ್ಷಿಕ ರೂ. 60,000ವರೆಗೆ ವಿನಾ ಯಿತಿ ಸಿಗುತ್ತದೆ. ಇದಕ್ಕೆ ಕೆಲವು ನಿಯಮಗಳು ಅನ್ವಯಿಸುತ್ತದೆ.
9. ಸ್ವಂತ ಅಂಗವೈಕಲ್ಯ (ಸೆಕ್ಷನ್ 80 ಯು)
ಸ್ವಂತ ಅಂಗವೈಕಲ್ಯದ ಚಿಕಿತ್ಸೆಗಾಗಿ ರೂ. 75,000 ಮತ್ತು ಗಂಭೀರ ಊನಕ್ಕೆ ರೂ. 1,25,000 ವಾರ್ಷಿಕ ರಿಯಾಯಿತಿ ಲಭ್ಯವಿದೆ. ಮೇಲ್ಕಾಣಿಸಿದ ರಿಯಾಯಿತಿಗಳನ್ನು ಒಂದೊಂದಾಗಿ ಪರಿಗಣಿಸ ಬೇಕು. ಅದಾದ ಮೇಲೆ, ಪ್ರತ್ಯೇಕವಾಗಿ ಈ ಕೆಳಗಿನ ಸೆಕ್ಷನ್ 80ಸಿ ಅಡಿಯಲ್ಲಿ ಮಾಡಿದ ಹೂಡಿಕೆಗಳಿಗೆ ಒಟ್ಟಾರೆ ಮೊತ್ತ ರೂ. 1.5 ಲಕ್ಷದವರೆಗೆ ಕರ ವಿನಾಯಿತಿಯನ್ನು ನೀಡಲಾಗಿದೆ. ಇವುಗಳಲ್ಲಿ ಹೂಡಿದ ಮೊತ್ತವನ್ನು ಈ ವರ್ಷದ ಆದಾಯದಿಂದ ನೇರವಾಗಿ ಕಳೆಯಬಹುದು
ಸೆಕ್ಷನ್ 80 ಸಿ
ಈ ಸೆಕ್ಷನ್ ಅಡಿಯಲ್ಲಿ ಈ ಕೆಳಗಿನ ಹೂಡಿಕೆ/ಪಾವತಿಗಳು ಬರುತ್ತವೆ. (ಒಟ್ಟು ಮಿತಿ ರೂ. 1.5 ಲಕ್ಷ)
– ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (ಇಪಿಎಸ್) ನಿಮ್ಮ ದೇಣಿಗೆಯಲ್ಲದೆ ಸ್ವಂತ ಇಚ್ಚೆಯಿಂದ (ವಾಲಂಟರಿಯಾಗಿ) ಪಿ.ಎಫ್.ಗೆ ನೀಡಿದ್ದು ಸಹಿತ: (ಕಂಪೆನಿಯ ದೇಣಿಗೆಯನ್ನು ನೀವು ನಿಮ್ಮ ಈ ಕರ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ, ಅದು ಪ್ರತ್ಯೇಕ)
– ಸ್ವಂತ, ಸೌ³ಸ್, ಮಕ್ಕಳ ಜೀವ ವಿಮೆ/ಯುಲಿಪ್‌ನ ವಾರ್ಷಿಕ ಪ್ರೀಮಿಯಂ, ವಿಮಾ ಮೊತ್ತದ ಶೇ.10 ಮಿತಿಯೊಳಗೆ, ಪ್ರತಿ ಪಾಲಿಸಿಗೆ. ಜೀವ ವಿಮೆ ಬಹುತೇಕ ಎಲ್ಲರಲ್ಲೂ ಇದ್ದೇ ಇರುತ್ತದೆ. ಕರ ವಿನಾಯಿತಿಗೆ ಅರ್ಹವಾದ ಆ ಪ್ರೀಮಿಯಂ ಮೊತ್ತವನ್ನು ಮೊದಲು ತೆಗೆದುಕೊಳ್ಳಿ.
– ಗರಿಷ್ಟ ಎರಡು ಮಕ್ಕಳ ಪರವಾಗಿ ಪಾವತಿಸಿದ ನರ್ಸರಿ/ಶಾಲಾ ಟ್ಯೂಶನ್ ಫೀ. (ಬೇರೆ ಯಾವುದೇ ಫೀಸ್ ಆಗಲ್ಲ, ಟ್ಯೂಶನ್ ಫೀ ಹೆಸರಿನಲ್ಲಿರುವ ಫೀ ಮಾತ್ರ)
– ಗೃಹಸಾಲದ ಮರು ಪಾವತಿಯಲ್ಲಿ (ಇಎಮ್ಐನ) ಅಸಲು ಭಾಗ (ಬಡ್ಡಿ ಬಿಟ್ಟು)
– ಈ ವರ್ಷದಲ್ಲಿ ಮನೆ ಖರೀದಿಸಿದ್ದರೆ ಆ ಮನೆ ಖರೀದಿಯ ರಿಜಿಸ್ಟ್ರೇಶನ್, ಸ್ಟಾಂಪ್ ಡ್ನೂಟಿ ವೆಚ್ಚಗಳು
– ಸಾರ್ವಜನಿಕವಾಗಿ ಮಾಡಿದ 15 ವರ್ಷದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ದೇಣಿಗೆ
– ಅಂಚೆ ಕಚೇರಿಯ ಎನ್.ಎಸ್.ಸಿ ಮತ್ತದರ ಬಡ್ಡಿಯ ಮರುಹೂಡಿಕೆ. ಈ ಯೋಜನೆಯ ಮೇಲಿನ ಬಡ್ಡಿಯನ್ನೂ ಕೂಡಾ ಮರು ಹೂಡಿಕೆ ಎಂದು ಪರಿಗಣಿಸಿ ಅದರ ಮೇಲೂ ಕರ ವಿನಾಯಿತಿ ಸೌಲಭ್ಯವಿದೆ.
– ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ELSS) ನಾಮಾಂಕಿತ ಮ್ಯೂಚುವಲ್ ಫಂಡ್. ಇಲ್ಲಿ ಯಾವುದೇ ಈಕ್ವಿಟಿ ಫಂಡುಗಳು ಬರುವುದಿಲ್ಲ. ಇವುಗಳು ಇ.ಎಲ್.ಎಸ್.ಎಸ್ ಅಥವಾ ಟ್ಯಾಕ್ಸ್ ಸೇವರ್ ಇತ್ಯಾದಿ ನಿರ್ದಿಷ್ಟ ಲೇಬಲ್ಗಳೊಂದಿಗೆ ಬಿಡುಗಡೆಯಾಗುತ್ತವೆ.
– ಮ್ಯೂಚುವಲ್ ಫಂಡ್‌ಗಳ ಯುನಿಟ್ ಲಿಂಕ್ ಪೆನ್ಷನ್ ಪ್ಲಾನ್‌ಗಳು (UTI&RBP, Franklin Templeton & TIPP ಮತ್ತು ಇದೀಗ Reliance Retirement Fund)
– ಐದು ವರ್ಷಾವಧಿಯ ಬ್ಯಾಂಕು/ಪೋಸ್ಟಾಫೀಸಿನ ಕರ ನೋಂದಾಯಿತ ಎಫ್.ಡಿ.: ಇಲ್ಲೂ ಕೂಡಾ 80ಸಿ ಸೆಕ್ಷನ್ ಅನ್ವಯ, ಕರ ಉಳಿತಾಯಕ್ಕೆ ಎನ್ನುವ ಲೇಬಲ್ ಅಗತ್ಯ. ಇವುಗಳ ಮೇಲೆ 5 ವರ್ಷಗಳ ಲಾಕ್-ಇನ್ ಇರುತ್ತದೆೆ.
– ಅಂಚೆ ಕಚೇರಿಯ 5 ವರ್ಷದ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಂ (SCSS) ನಲ್ಲಿ ಮಾಡಿದ ಹೂಡಿಕೆ.
– ಸುಕನ್ಯಾ ಸಮೃದ್ಧಿ ಯೋಜನೆ: ಕೇವಲ ಹತ್ತು ವರ್ಷ ಮೀರದ ಹೆಣ್ಮಕ್ಕಳಿಗಾಗಿ ಮಾತ್ರ ಮೀಸಲಾಗಿರುವ ಈ ಯೋಜನೆಯಲ್ಲಿ ಮಾಡಿದ ಹೂಡಿಕೆ.
– ಎಲ್ಲೆ„ಸಿ ಮತ್ತಿತರ ಜೀವ ವಿಮಾ ಕಂಪೆನಿಗಳು ನೀಡುವ ಪೆನ್ಶನ್ ಪ್ಲಾನ್‌ಗಳು
– ನ್ಯಾಶನಲ್ ಪೆನ್ಶನ್ ಸ್ಕೀಂ (NPS): ಮೇಲ್ಕಾಣಿಸಿದಂತೆ ಈ ಯೋಜನೆಯ ದೇಣಿಗೆ 2 ಸೆಕ್ಷನ್ನುಗಳಲ್ಲಿ ಬರುತ್ತವೆ 80ಇ ಮತ್ತು 80CCD(1b). ನಿಮಗೆ ಬೇಕಾದಂತೆ ಬೇಕಾದ ಸೆಕ್ಷನ್ನಿನಲ್ಲಿ ರಿಯಾಯಿತಿ ಪಡಕೊಳ್ಳಬಹುದು. ಇದರಲ್ಲಿ ಲಾಭವನ್ನು ಮೊತ್ತ ಮೊದಲು 80CCD(1b) ಅಡಿಯಲ್ಲಿಯೇ ತೆಗೆದುಕೊಳ್ಳುವುದು ಉತ್ತಮ. ಅದರಡಿಯಲ್ಲಿ ಬೇರೆ ಆಯ್ಕೆಗಳಿಲ್ಲ. 80C ಅಡಿಯಲ್ಲಿ ಬೇರೆ ಹಲವಾರು ಆಯ್ಕೆಗಳಿವೆ. 80CCD(1b) ಮಿತಿ ಮೀರಿದರೆ ಉಳಿದ ಮೊತ್ತವನ್ನು ಇಲ್ಲಿ ತೆಗೆದುಕೊಳ್ಳಬಹುದು.
– ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.