ಗೊಂದಲಪುರದ ಸಾಮಾನ್ಯ ಕರ ಗೊಂದಲಗಳು 


Team Udayavani, Jul 9, 2018, 10:31 AM IST

webtaxconfusedistock000009013053large.png

ನಾವು ಈಗ ರಿಟರ್ನ್ ಫೈಲಿಂಗ್‌ ಮಾಡುವುದು ವಿತ್ತ ವರ್ಷ 2017-18. ಅದರ ಪರಿಶೀಲನಾ ವರ್ಷ ಅಥವಾ ಅಸ್ಸೆಸ್ಮೆಂಟ್  ವರ್ಷ 2018-19 ಆಗಿರುತ್ತದೆ. ನಾವು ಇಲ್ಲಿ ಈಗ ಆಯ್ಕೆ ಮಾಡಬೇಕಾಗಿರುವುದು ಅಸ್ಸೆಸ್ಮೆಂಟ್  ವರ್ಷ, ವಿತ್ತ ವರ್ಷ ಅಲ್ಲ. ಒಂದು ನಿರ್ದಿಷ್ಟ ವಿತ್ತ ವರ್ಷಕ್ಕೆ ಅದರ ಮುಂದಿನ ವರ್ಷವೇ ಅಸ್ಸೆಸ್ಮೆಂಟ್ ವರ್ಷ ಆಗಿರುತ್ತದೆ. ಈ ಬಗ್ಗೆ ಗೊಂದಲ ಮಾಡಿಕೊಂಡು ಹೋಗಿ ಸಮಸ್ಯೆಗಳಿಗೆ ಸಿಕ್ಕು ಹಾಕಿಕೊಂಡವರಿ¨ªಾರೆ.
ಈ ಕರ ಸೀಸನ್‌ ಆರಂಭವಾದಂದಿನಿಂದ ಇ-ಮೈಲ್‌ ಗಳ ಸುರಿಮಳೆ. ಹತ್ತು ಜನರಿಗೆ ಹನ್ನೊಂದು ಗೊಂದಲ. ಒಂದು ರೀತಿ ಗೊಂದಲಪುರದ ನಿವಾಸಿಗಳಂತೆ ನಾವೆ ಬದುಕುತ್ತಿದ್ದೇವೆ. ಎಲ ಇ-ಮೈಲ್‌ ಗಳಿಗೆ ಉತ್ತರಿಸುವುದು ಸಾಧ್ಯವಾಗುತ್ತಿಲ್ಲ. ಕೆಲವು ಅತ್ಯಂತ ದೀರ್ಘ‌ ವಿವರಣೆಗಳನ್ನು ಬೇಡುತ್ತವೆ. ಕೆಲವದರ ಬಗ್ಗೆ ಹಳೆಯ ಕಾಕುಗಳಲ್ಲಿ ಆ ಬಗ್ಗೆ ಅವಾಗಲೇ ಬರೆದಾಗಿರುತ್ತದೆ. ಇನ್ನು ಕೆಲವದರಲ್ಲಿ ಅಗತ್ಯ ವಿವರಗಳಿರುವುದಿಲ್ಲ. ಇನ್ನು ಸ್ವಲ್ಪ ಸಮಯದ ಅಭಾವ. ಈ ಬಾರಿ ಕೆಲ ಅತ್ಯಂತ ಸಾಮಾನ್ಯ ಗೊಂದಲಗಳನ್ನು ಮತ್ತು ಅದರ ಪರಿಹಾರಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ. ಇದು ಈ ವಾರದ ಮಸಾಲೆ. 

ಗೊಂದಲ 1: ಫಾರ್ಮ್ ಯಾವುದಯ್ನಾ? 
ಆದಾಯ ತೆರಿಗೆ ಇಲಾಖೆ ಪ್ರತಿ ವರ್ಷವೂ ಹೊಸ ರಿಟರ್ನ್ ಫಾರ್ಮುಗಳನ್ನು ಪ್ರಕಟಿಸುತ್ತದೆ. ಆದಾಯ ತೆರಿಗೆಯ ಹೇಳಿಕೆ ಅಥವಾ ರಿಟರ್ನ್ಸ್ ಸಲ್ಲಿಕೆ ಮಾಡುವವರು ಆಯಾ ವರ್ಷ ಬಿಡುಗಡೆ ಮಾಡಿದ ಫಾರ್ಮುಗಳನ್ನೇ ಉಪಯೋಗಿಸತಕ್ಕದ್ದು. ಅವು ಇಲಾಖೆಯ ಜಾಲತಾಣದಲ್ಲಿ ಲಭ್ಯವಿದೆ. ಫಾರ್ಮಿನ ನಂಬರ್‌ ಅನುಸಾರ ಆಯ್ಕೆ ಅವರವರ ಆದಾಯದ ಮೂಲವನ್ನು ಅವಲಂಬಿಸಿ ಈ ಕೆಳಗಿನಂತೆ: 
ಐಟಿಆರ್‌-1/ಸಹಜ್‌: ವ್ಯಕ್ತಿಗತ – ಸಂಬಳ/ಪೆನ್ಶನ್‌ ಆದಾಯ, ಒಂದು ಮನೆಯ ಗೃಹಸಂಬಂಧಿ ಆದಾಯ, ಇತರ ಆದಾಯ, ಹಾಗೂ ರೂ. 50 ಲಕ್ಷ ಮೀರದ ಒಟ್ಟು ಆದಾಯ ಉಳ್ಳವರು ಈ ಫಾರ್ಮನ್ನು ಉಪಯೋಗಿಸಬಹುದು. 
ಐಟಿಆರ್‌- 2: ವ್ಯಕ್ತಿಗತ ಹಾಗೂ ಹಿಂದು ಅವಿಭಕ್ತ ಕುಟುಂಬದವರಿಗಾಗಿ ಹಾಗೂ ಇದು ಸ್ವಂತ ಬಿಸಿನೆಸ್‌/ಪ್ರೊಫೆಶನ್‌ ಆದಾಯ ಇಲ್ಲದವರಿಗಾಗಿ ಮಾತ್ರ ಸೀಮಿತ. 
ಐಟಿಆರ್‌- 3: ಇದು ಸ್ವಂತ ಬಿಸಿನೆಸ್‌/ಪ್ರೊಫೆಶನ್‌ ಆದಾಯ ಉಳ್ಳವರಿಗಾಗಿ. ಇಲ್ಲಿ ನಿಮ್ಮ ಆದಾಯ ವೆಚ್ಚ ಮತ್ತು ಲಾಭಾಂಶದ ಸಂಪೂರ್ಣ ವಿವರಗಳನ್ನು ನೀಡಬೇಕಾಗುತ್ತದೆ. ಎಲ ಲೆಕ್ಕ ಪತ್ರಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.
ಐಟಿಆರ್‌- 4/ಸುಗಮ…: ಇದು ಮೇಲಿನಂತೆ ಬಿಸಿನೆಸ್‌/ಪ್ರೊಫೆಶನ್‌ ಆದಾಯಕ್ಕೆ ಸಂಬಂಧಪಟ್ಟದ್ದು. ಆದರೆ ಲಾಭಾಂಶವನ್ನು ಕೇವಲ ಬಿಸಿನೆಸ್‌/ಪ್ರೊಫೆಶನ್‌ ಟರ್ನ್ ಓವರ್‌ ಅನುಸರಿಸಿ ಅದರ ಮೇಲೆ ಯಾವುದೇ ಖರ್ಚು-ವೆಚ್ಚ, ಲೆಕ್ಕಪತ್ರಗಳ ಅಗತ್ಯವಿಲ್ಲದೆ ಒಂದು ನಿಗದಿತ ಶೇಕಡಾ ಲಾಭಾಂಶವನ್ನು ಊಹಿಸಿ ಅದರ ಮೇಲೆ ತೆರಿಗೆ ಕಟ್ಟುವಂತಹ ಪ್ರಿಸಂಪ್ಟಿವ್‌ ಟ್ಯಾಕ್ಸ್‌ ಪದ್ಧತಿಯಲ್ಲಿ ಕರಕಟ್ಟುವವರಿಗಾಗಿ ಈ ಫಾರ್ಮ್. 

ಗೊಂದಲ 2: ಕರ ಉಳಿತಾಯಕ್ಕೆ ಹೂಡಿಕೆ ಈಗ ಮಾಡುತ್ತೇನೆ 
ಮಾರ್ಚ್‌ ಕಳೆದು ಜಲೈ ಬಂದರೂ ಹಲವರು ಈಗಲೂ ಹೇಳುತ್ತಾರೆ. ಕರ ಎಷ್ಟಾಗುತ್ತದೆ ಎಂದು ನೋಡಿಕೊಂಡು ಬೇಕಾದ ಕರ ವಿನಾಯತಿಗಾಗಿ ಹೂಡಿಕೆ ಮಾಡುತ್ತೇನೆ ಅಂತ. ಆದರೆ ಇದು ಈಗ ಅಸಾಧ್ಯ. ಒಂದು ವಿತ್ತ ವರ್ಷದ ಕರವನ್ನು ಉಳಿಸಲಿಕ್ಕಾಗಿ ಉಳಿತಾಯದ ಹೂಡಿಕೆಯನ್ನು ಅದೇ ವಿತ್ತ ವರ್ಷ ಮುಗಿಯುವುದರ ಒಳಗೇನೇ ಮಾಡಬೇಕು. ಅಂದರೆ ಏಪ್ರಿಲ…-ಮಾರ್ಚ್‌ ಅವಧಿಯ ವಿತ್ತ ವರ್ಷಕ್ಕೆ ಅದೇ ವರ್ಷಾಂತ್ಯದ ಮಾರ್ಚ್‌ 31ರ ಒಳಗಾಗಿ. ಆ ಗಡು ದಾಟಿದರೆ ಆ ವರ್ಷಕ್ಕಾಗಿ ಕರ ವಿನಾಯತಿಯ ಹೂಡಿಕೆಯನ್ನು ಮಾಡಲು ಸಾಧ್ಯವಿಲ್ಲ. ಎಪ್ರಿಲ್‌ 1ರ ಬಳಿಕ ಮಾಡಿದ ಹೂಡಿಕೆ ಹೊಸ ವಿತ್ತ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ. ಮಾರ್ಚ್‌ ಬಳಿಕದ ಈ ಅವಧಿಯಲ್ಲಿ ಕಟ್ಟಲು ಬಾಕಿ ಕರ ಇದ್ದಲ್ಲಿ ಅದನ್ನು ಬಡ್ಡಿ ಸಹಿತ ಪಾವತಿ ಮಾಡಬಹುದಾಗಿದೆ. ಅದೊಂದೇ ಕೆಲಸ ಈ ಅವಧಿಯಲ್ಲಿ ಮಾಡಲು ಸಾಧ್ಯ.
ಹಾಗಾದ್ರೆ ಜುಲೈ 31ರ ವರೆಗೆ ಟೈಮ್‌ ಉಂಟಲ್ವಾ ಅದೆಂತದ್ದು ಮತ್ತೆ? ಅಂತ ಮರು ಪ್ರಶ್ನೆ ಹಾಕುತ್ತಾರೆ. ವಿಷಯ ಏನು ಅಂತಂದ್ರೆ, ಜುಲೈ 31 ಎಂಬುದು ಕರಹೇಳಿಕೆ ಅಥವಾ ಟ್ಯಾಕ್ಸ್‌ ರಿಟರ್ನ್ಸ್ ಫೈಲ್‌ ಮಾಡುವ ಕೊನೆ ದಿನಾಂಕ. (ಬಿಸಿನೆಸ್‌ ಮತ್ತು ಪ್ರೊಫೆಶನ್‌ ಆದಾಯವಿದ್ದು ಕಡ್ಡಾಯ ಆಡಿಟ್‌ ಉಳ್ಳವರಿಗೆ ಇದು ಸೆಪ್ಟೆಂಬರ್‌ 30) 

ಗೊಂದಲ 3: ವಿತ್ತ ವರ್ಷ ವರ್ಸಸ್‌ ಅಸ್ಸೆಸ್ಮೆಂಟ್  ವರ್ಷ 
ಆನ್‌ಲೈನ್‌ ಫೈಲಿಂಗ್‌ ಕೆಲಸ ಆರಂಭಿಸಿದ ಒಡನೆಯೇ ಅಸ್ಸೆಸ್ಮೆಂಟ್  ವರ್ಷ ಯಾವುದು ಎಂಬುದಕ್ಕೆ ಆಯ್ಕೆಯ ಮೆನು ಸಿಗುತ್ತದೆ. ಇಲ್ಲಿ ಹಲವಾರು ವರ್ಷಗಳಿವೆ: 2016-17, 2017-18 ಅಲ್ಲದೆ 2018-19 ಕೂಡಾ ಇದೆ. ನಾವು ರಿಟರ್ನ್ ಫೈಲಿಂಗ್‌ ಮಾಡುವುದು ಕಳೆದ ವರ್ಷದ್ದು ಅಂದರೆ, 2017-18. ಈ 2018-19 ಎಲ್ಲಿಂದ ಬಂತು? ಈ ದೇಶದಲ್ಲಿ ಎಡ್ವಾನ್ಸ್‌ ಟ್ಯಾಕ್ಸ್‌ನಂತೆ ಎಡ್ವಾನ್ಸ್‌ ರಿಟರ್ನ್ ಫೈಲಿಂಗ್‌ ಪದ್ಧತಿಯೂ ಇದೆಯೇ? 
ಈ ವಿಷಯವನ್ನು ಸ್ಪಷ್ಟವಾಗಿ ಹಲವು ಬಾರಿ ನಾನು ಬರೆದಿದ್ದೇನೆ. ನಾವು ಈವಾಗ ರಿಟರ್ನ್ ಫೈಲಿಂಗ್‌ ಮಾಡುವುದು ವಿತ್ತ ವರ್ಷ 2017-18. ಅದರ ಪರಿಶೀಲನಾ ವರ್ಷ ಅಥವಾ ಅಸ್ಸೆಸ್ಮೆಂಟ್  ವರ್ಷ 2018-19 ಆಗಿರುತ್ತದೆ. ನಾವು ಇಲ್ಲಿ ಈಗ ಆಯ್ಕೆ ಮಾಡಬೇಕಾಗಿರುವುದು ಅಸ್ಸೆಸ್ಮೆಂಟ್  ವರ್ಷ, ವಿತ್ತ ವರ್ಷ ಅಲ್ಲ. ಒಂದು ನಿರ್ದಿಷ್ಟ ವಿತ್ತ ವರ್ಷಕ್ಕೆ ಅದರ ಮುಂದಿನ ವರ್ಷವೇ ಅಸ್ಸೆಸ್ಮೆಂಟ್  ವರ್ಷ ಆಗಿರುತ್ತದೆ. ಈ ಬಗ್ಗೆ ಗೊಂದಲ ಮಾಡಿಕೊಂಡು ಹೋಗಿ ಹತ್ತು ಹಲವು ಸಮಸ್ಯೆಗಳಿಗೆ ಸಿಕ್ಕು ಹಾಕಿಕೊಂಡವರಿರೆ; ನನ್ನ ಬಳಿ ಜಗಳಾಡಿದವರಿರೆ. ಉದಾಹರಣೆಗೆ 2017-18 ಆಯ್ಕೆ ಮಾಡಿಕೊಂಡವರಿಗೆ ಹಳೆಯ ತೆರಿಗೆ ಕಾನೂನೇ ತಪ್ಪು ತಪ್ಪಾಗಿ ಅನ್ವಯವಾಗುತ್ತದೆ. ನಿಮ್ಮ ರಿಟರ್ನ್ ಫೈಲಿಂಗ್‌ ಸಂಪೂರ್ಣವಾಗಿ ಹಳ್ಳ ಹಿಡಿಯುತ್ತದೆ. ಹಾಗಾಗಿ ಸರಿಯಾದ ಅಸೆಸೆoಟ್‌ ವರ್ಷವನ್ನು ಆಯ್ಕೆ ಮಾಡುವುದು ಅತ್ಯಗತ್ಯ ಮತ್ತು ಈ ಬಾರಿ ಅದು 2018-19.

ಗೊಂದಲ 4: ಹೌಸಿಂಗ್‌ ಲೋನ್‌ ಬಡ್ಡಿಯನ್ನು ಹೇಗೆ ನಮೂದಿಸಬೇಕು? 
ಈ ಹೌಸಿಂಗ್‌ ಲೋನಿನ ಬಡ್ಡಿಯ ಉಲ್ಲೇಖ ಇಡೀ ಆದಾಯ ಕರ ಆನ್‌ಲೈನ್‌ ನಮೂನೆಯಲ್ಲಿ ಮೊದಲು ಬರುತ್ತಿರಲಿಲ್ಲ. ಈ ಬಾರಿ ಅದನ್ನು ಅಳವಡಿಸಿರೆ. ಬಡ್ಡಿಯ ಅಂಶವನ್ನು income from house property ಕಾಲಮ್ಮಿನಲ್ಲಿ ಹಾಕಿ ನಮೂದಿಸಬೇಕು. ಇದು ಗೃಹ ಸಾಲದ ಬಡ್ಡಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಕ್ರಮ. ಆದರೆ ಹಲವರು ತಾವು ಕಟ್ಟುವ ವಾರ್ಷಿಕ ಇ.ಎಂ.ಐ ಮೊತ್ತವನ್ನು ಅಲ್ಲಿ ತುಂಬುತ್ತಾರೆ. ಇದು ತಪ್ಪು. ನಾವು ಕಟ್ಟುವ ಸಮಾನ ಮಾಸಿಕ ಕಂತುಗಳು ಅಥವಾ ಇ.ಎಂ.ಐ ಎರಡು ಭಾಗಗಳನ್ನು ಹೊಂದಿರುತ್ತದೆ. ಅದರಲ್ಲಿ ಬಡ್ಡಿ ಹಾಗೂ ಅಸಲು ಎರಡೂ ಮಿಳಿತವಾಗಿರುತ್ತದೆ. ಅದನ್ನು ಬೇರ್ಪಡಿಸಿ ಬಡ್ಡಿಯೆಷ್ಟು ಅಸಲೆಷ್ಟು ಎಂಬ ಮಾಹಿತಿಯನ್ನು ಬ್ಯಾಂಕಿನವರು ನೀಡುತ್ತಾರೆ. ಈ ವಿಭಾಗದಲ್ಲಿ ಬಡ್ಡಿಯ ಮೊತ್ತ ಮಾತ್ರವೇ ನಮೂದಿಸಬೇಕು. ಇನ್ನು, ಗೃಹಸಾಲದ ಅಸಲು ಪಾವತಿಯನ್ನು ಕೆಳಗೆ ಕೊಟ್ಟಿರುವ 80ಸಿ ಸೆಕ್ಷನ್‌ ಒಳಗೆ ಲೆಕ್ಕಕ್ಕೆ ತೆಗೆದುಕೊಳ್ಳಬೇಕು.
 
ಗೊಂದಲ 5: ಮೆಡಿಕಲ್‌ ಇನ್ಶೂರೆನ್ಸ್‌ ಪ್ರೀಮಿಯಂ ಎಲ್ಲಿ ಬರುತ್ತದೆ? 
ಮೆಡಿಕಲ್‌ ಇನ್ಶೂರೆನ್ಸ್‌ ಬರುವುದು ಸೆಕ್ಷನ್‌ 80ಡಿ ಅಡಿಯಲ್ಲಿ, 80ಸಿ ಅಡಿಯಲ್ಲಿ ಅಲ್ಲ. ಹಾಗೂ ಅದಕ್ಕೆ 80ಸಿ ಮೀರಿದ ವಿನಾಯಿತಿ ಇದೆ. ಸೆಕ್ಷನ್‌ 80ಸಿ ಅಡಿಯಲ್ಲಿ ಒಂದಷ್ಟು ಹೂಡಿಕೆ/ವೆಚ್ಚಗಳಿಗೆ ವಾರ್ಷಿಕ ರೂ. 1,50,000 ತೆರಿಗೆ ವಿನಾಯಿತಿ ಇದೆಯಾದರೆ, ಇಲ್ಲಿ 80ಡಿ ಅಡಿಯಲ್ಲಿ ಅದಕ್ಕೆ ಹೊರತಾಗಿ ಪ್ರತ್ಯೇಕವಾಗಿ ರೂ. 25,000 ತೆರಿಗೆ ವಿನಾಯಿತಿ ಇದೆ. ಹಿರಿಯ ನಾಗರಿಕರಿಗೆ ಈ ಮಿತಿ ರೂ. 30,000. 

ಗೊಂದಲ 6: SD/FD ಖಾತೆಗಳ ಬಡ್ಡಿಯನ್ನು ಎಲ್ಲಿ ತೋರಿಸಬೇಕು?
ಎಸಿ, ಎಫಿ- ಇವೆರಡೂ ಬಡ್ಡಿಗಳನ್ನು ಒಟ್ಟು ಸೇರಿಸಿ other income ಅಡಿಯಲ್ಲಿ ತೋರಿಸಬೇಕು. ಅದರಲ್ಲಿ ಎಸಿº ಖಾತೆಯ ಬಡ್ಡಿಯನ್ನು  ಕೆಳಗೆ ವಿನಾಯಿತಿ ಪಟ್ಟಿಯಲ್ಲಿ ಸೆಕ್ಷನ್‌ 80ಟಿಟಿಎನಲ್ಲಿ ಪುನಃ ತೋರಿಸಬೇಕು. ಅದಕ್ಕೆ ವಾರ್ಷಿಕ ರೂ. 10,000 ದವರೆಗೆ ವಿನಾಯಿತಿ ಇದೆ. ಎಫಿx ಖಾತೆಯ ಬಡ್ಡಿಯ ಮೇಲೆ ಯಾವುದೇ ವಿನಾಯಿತಿ ಇಲ್ಲ. 

ಗೊಂದಲ 7: ಟ್ಯಾಕ್ಸ್‌ ಪೇಜಿನಲ್ಲಿ ಈಗಾಗಲೇ ತುಂಬಿರುವ ಮಾಹಿತಿಗಳು 
ಟ್ಯಾಕ್ಸ್‌ ಪುಟಕ್ಕೆ ಹೋದರೆ ಅಲ್ಲಿ ಯಾವ್ಯಾವುದೋ ಬ್ಯಾಂಕ್‌ ಹೆಸರಿನಲ್ಲಿ ಬಡ್ಡಿ ಹಾಗೂ ಟ್ಯಾಕ್ಸ್‌ ಪಾವತಿಯ ವಿವರಗಳು ಕಾಣಿಸಿಕೊಳ್ಳುತ್ತದಲ್ವಾ? ಅದೆಲ್ಲಿಂದ ಬಂತು? ಅದರ ಬಗ್ಗೆ ನಾವೇನು ಮಾಡೋಣ? ಇದೂ ಒಂದು ಗೊಂದಲ. ಅವು ಇಲಾಖೆಯ ಕಂಪ್ಯೂಟರಿಗೆ ಬ್ಯಾಂಕುಗಳಿಂದ ನೇರವಾಗಿ ಸಿಕ್ಕ ಮಾಹಿತಿ. ಟಿಡಿಎಸ್‌ ಕಡಿತಗೊಂಡ ಬಡ್ಡಿ ಆದಾಯ ಮತ್ತು ಟಿಡಿಎಸ್‌ ಕಡಿತಗೊಂಡ ಸ್ಯಾಲರಿ/ಪೆನ್ಶನ್‌ ಆದಾಯ ಇತ್ಯಾದಿಗಳ ಮಾಹಿತಿ ಆ ಪುಟದಲ್ಲಿ ಸ್ವಯಂ ತುಂಬಿರುತ್ತವೆ. ಅಂತಹ ಆದಾಯದ ವಿವರವನ್ನು ನಿಮ್ಮ ಲೆಕ್ಕದಲ್ಲೂ ತೋರಿಸಲು ಮರೆಯದಿರಿ. ತೋರಿಸದೆ ಹೋದರೂ ಇಲಾಖೆಯ ಕಂಪ್ಯೂಟರ್‌ ಅದನ್ನು ತೆಗೆದುಕೊಂಡೇ ಅಸೆಸಟ್‌ ನಡೆಸುತ್ತದೆ ಮತ್ತು ಅಗತ್ಯ ಬಂದಲ್ಲಿ ಹೆಚ್ಚುವರಿ ಕರಕ್ಕೆ ಡಿಮಾಂಡ್‌ ನೋಟಿಸು ಜಾರಿ ಮಾಡುತ್ತದೆ. 

ಗೊಂದಲ 8: ಇಲಾಖೆಯ ಕಂಪ್ಯೂಟರಿಗೆ  ಗೊತ್ತಾಗುತ್ತೆ? 
ನೀವು ಪ್ಯಾನ್‌ ನಂಬರ್‌ ಕೊಟ್ಟು ಊರೆ ಮಾಡಿದ ವ್ಯವಹಾರಗಳೆ ಅದಕ್ಕೆ ಗೊತ್ತಾಗುತ್ತೆ. ಅದರಲ್ಲಿ ಕರಾರ್ಹ ವ್ಯವಹಾರಗಳಿದ್ದರೆ ಅದನ್ನು ತೋರಿಸದೆ ಬೇರೆ ದಾರಿ ಇಲ್ಲ. ಅಡಗಿಸಿದರೆ ಒಂದಲ್ಲ ಒಂದು ದಿನ ಬಡ್ಡಿ/ದಂಡ ಸಮೇತ ಕರ ಕಟ್ಟಲು ತಯಾರಾಗಿರಿ. ನಿಮ್ಮ ಖಾತೆಯ ಒಳಗಡೆ ಫಾರ್ಮ್ 26ಎಎಸ್‌ ಎನ್ನುವ ಗುಂಡಿ ಒತ್ತಿದರೆ ಅದು ನಿಮ್ಮ ಬಹಳಷ್ಟು ಆದಾಯ/ಟಿಡಿಎಸ್‌ ವಿವರಗಳನ್ನು ತೋರಿಸುತ್ತದೆ. ಅವೆÇÉಾ ನಿಮ್ಮ ಆದಾಯ ಸಲ್ಲಿಕೆಯಲ್ಲಿ ಸೇರಿರಲೇ ಬೇಕು. ಅಡಗಿಸಿದರೆ ನೋಟಿಸ್‌ ಬರುವುದು ಗ್ಯಾರಂಟಿ. ಅದೂ ಅಲ್ಲದೆ ಬ್ಯಾಂಕುಗಳಲ್ಲಿ ನಡೆಸಿದ ದೊಡ್ಡ ಮೊತ್ತದ ವ್ಯವಹಾರಗಳೆಲ್ಲವೂ ನಿಮ್ಮ ಪ್ಯಾನ್‌ ನಂಬರ್‌ ಮೂಲಕ ಇಲಾಖೆಗೆ ತಿಳಿದಿರುತ್ತದೆ. ಅದರಲ್ಲಿ ಕರಾರ್ಹ ವ್ಯವಹಾರ ಇದ್ದಲ್ಲಿ 3-4 ವರ್ಷಗಳ ಬಳಿಕ ನಿಮಗೆ ಇಲಾಖೆಯಿಂದ “ಲವ್‌ ಲೆಟರ್‌’ ಬರುವುದು ಗ್ಯಾರಂಟಿ. ಈಗಾಗಲೇ ಊರಿಡೀ ನೋಟಿಸ್‌ ಹಂಚಿಕೆಯಾಗಿದೆ. ಮಂದಿ ಬಡ್ಡಿ ಸಹಿತ ಕರ ಕಟ್ಟುತ್ತಿರೆ. 

ಗೊಂದಲ 9: ಕರಕಟ್ಟುವುದು ಹೇಗೆ?
ಕೊನೆಯ ಪುಟದಲ್ಲಿtax payable ಅಂತ ಬರುತ್ತಲ್ವಾ? ಈಗ ಅದನ್ನು ಹಿಡ್ಕೊಂಡು ಎಂತ ಮಾಡುವುದು? ಇದು ಕೆಲವರ ಪ್ರಶ್ನೆ. ಕರ ಬಾಕಿ ಇದ್ದಲ್ಲಿ ಮಾತ್ರ ಅದು ಬರುತ್ತದೆ. ಅಷ್ಟು ಮೊತ್ತದ ಕರ ಈವಾಗ ಕಟ್ಟಬೇಕು. ಬ್ಯಾಂಕಿಗೆ ಹೋಗಿ ಚಲನ್‌ ತುಂಬಿ ಕಟ್ಟಬಹುದು ಅಥವಾ ಕರ ಇಲಾಖೆಗೆ ನೇರವಾಗಿ ಇ-ಪಾವತಿ ಮಾಡಬಹುದು. ಅದಕ್ಕಾಗಿ ಈ ಕೊಂಡಿ ಬಳಸಬಹುದು.
https//onlineservices.tin.egov-nsdl.com/etaxnew/tdsnontds.jap
ಅಲ್ಲಿ ಚಲನ್‌ ನಂ ಐಖR 280ಬಳಸಿ. ಕರ ಕಟ್ಟಿದ ಬಳಿಕ ಅದರ ಬಿಎಸ್‌ಆರ್‌ ಕೋಡ್‌ ಹಾಗೂ ಸೀರಿಯಲ್‌ ನಂಬರನ್ನು ಸೆಲ#… ಅಸ¾ಟ್‌ ಟ್ಯಾಕ್ಸ್‌ ಎಂಬುದಾಗಿ ಟ್ಯಾಕ್ಸ್‌ ಡಿಟೈಲ್ಸ… ಪುಟದಲ್ಲಿ ತುಂಬಬೇಕು. ಆ ಬಳಿಕ ರಿಟರ್ನ್ ಫೈಲಿಂಗ್‌ ಸಬಿಟ್‌ ಮಾಡಬೇಕು. ಅದು ಪ್ರೊಸೀಜರ್‌. 

 ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.