ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌


Team Udayavani, Mar 16, 2020, 6:40 AM IST

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರಾರ್ಹ ಆದಾಯದ ಬಗ್ಗೆ ಅರಿವಿದ್ದರೂ ಅದಕ್ಕೆಲ್ಲ ಮಂಡೆ ಬಿಸಿ ಮಾಡುವ ಅಗತ್ಯವೇ ಇಲ್ಲ ಅಂದುಕೊಂಡು ಎಂಟೆದೆಯ ಬಂಟರಂತೆ ತಿರುಗಾಡುತ್ತಾರೆ. ಕೇಳಿದರೆ ಯಾವನಿಗೆ ಗೊತ್ತಾಗುತ್ತದೆ? ಎನ್ನುವ ಭಂಗಿ. ಸಿಕ್ಕಿ ಬಿದ್ರೆ ಅಲ್ವಾ? ಆಮೇಲೆ ನೋಡೋಣ ಎನ್ನುವ ಹಾರಿಕೆಯ ಉತ್ತರ. ಇದು ಶುದ್ಧ ಅಪರಾಧ ಹಾಗೂ ಭ್ರಷ್ಟಾಚಾರದ ಮೇಲೆ ನಾವುಗಳು ಇಟ್ಟಿರುವ ನಂಬಿಕೆಗೆ ಸಾಕ್ಷಿ.

ಈ ವಿತ್ತ ವರ್ಷ (2019-20) ಮಾರ್ಚ್‌ 31ಕ್ಕೆ ಮುಗಿಯುತ್ತದೆ. ಈ ವಿತ್ತ ವರ್ಷದ ಆದಾಯ ಕರವನ್ನು ಸರಿಯಾಗಿ ಲೆಕ್ಕ ಹಾಕಿ ಮಾರ್ಚ್‌ 31, 2020ರ ಒಳಗಾಗಿಯೇ ಕಟ್ಟ ಬೇಕು ಹಾಗೂ ತತ್ಸಂಬಂಧಿ ಕರ ಉಳಿತಾಯದ ಹೂಡಿಕೆಗಳಿದ್ದರೆ ಅವನ್ನೂ ಕೂಡಾ ಮಾರ್ಚ್‌ 31ರ ಒಳಗಾಗಿಯೇ ಮಾಡಿ ಮುಗಿಸಬೇಕು. ಮಾರ್ಚ್‌ 31ರ ಒಳಗಾಗಿ ಕಟ್ಟದ ಕರಕ್ಕೆ ಬಡ್ಡಿ ಬೀಳುತ್ತದೆ ಹಾಗೂ ಮಾರ್ಚ್‌ 31 ರ ಒಳಗಾಗಿ ಮಾಡದ ಹೂಡಿಕೆ ಲೆಕ್ಕಕ್ಕಿಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಅಷ್ಟೆಲ್ಲಾ ಮಾಡಿದ ಬಳಿಕ ಕೇವಲ ರಿಟರ್ನ್ ಫೈಲಿಂಗ್‌ ಮಾಡಲು ಮಾತ್ರವೇ ಜುಲೈ 31 ರವರೆಗೆ ಕಾಲಾವಕಾಶ ನೀಡಲಾಗಿದೆ.

ಈ ರೀತಿ ಈ ವಿತ್ತ ವರ್ಷದ ಲೆಕ್ಕ ಚುಕ್ತ ಮಾಡಬೇಕು ಎಂದರೆ ಎಲ್ಲ ಆದಾಯ ಮತ್ತು ಹೂಡಿಕೆಗಳ ಸಂಪೂರ್ಣ ವಿವರ ನಮ್ಮ ಕೈಯಲ್ಲಿ ಇರಬೇಕು. ಹಲವಾರು ಜನರು ಸಂಬಳದ ಆದಾಯ ಮಾತ್ರ ಕರಾರ್ಹ ಅದರ ಮೇಲೆ ಕರ ಕಡಿತ ಹೇಗೂ ಕಂಪೆನಿಯವರೇ ಮಾಡುತ್ತಾರಲ್ಲವೆ? ಇನ್ನು ನಮಗೆ ಮಾಡುವುದು ಏನೂ ಇಲ್ಲ ಎಂದೇ ತಿಳಿದಿದ್ದಾರೆ. ಅಂತವರಿಗೆ ಎಫ್.ಡಿ. ಇನ್ನಿತರ ಬೇರೆ ಮೂಲಗಳ ಕರಾರ್ಹ ಆದಾಯವೂ ಇರುತ್ತವೆ. ಇನ್ನು ಕೆಲವರಿಗೆ ಅಂತಹ ಕರಾರ್ಹ ಆದಾಯದ ಬಗ್ಗೆ ಅರಿವಿದ್ದರೂ ಅದಕ್ಕೆಲ್ಲ ಮಂಡೆ ಬಿಸಿ ಮಾಡುವ ಅಗತ್ಯವೇ ಇಲ್ಲ; “ದಾಲಾ ಆಪುಜಿ’ ಅಂದುಕೊಂಡು ಎಂಟೆದೆಯ ಬಂಟರಂತೆ ಆರಾಮವಾಗಿ ತಿರುಗಾಡುತ್ತಾರೆ. ಕೇಳಿದರೆ ಯಾವನಿಗೆ ಗೊತ್ತಾಗುತ್ತದೆ? ಎನ್ನುವ ಭಂಗಿ; ಸಿಕ್ಕಿ ಬಿದ್ರೆ ಅಲ್ವಾ? ಆಮೇಲೆ ನೋಡೋಣ ಎನ್ನುವ ಹಾರಿಕೆಯ ಉತ್ತರ. ಇದು ಶುದ್ಧ ಅಪರಾಧ ಹಾಗೂ ಭ್ರಷ್ಟಾಚಾರದ ಮೇಲೆ ನಾವುಗಳು ಇಟ್ಟಿರುವ ನಂಬಿಕೆಗೆ ಸಾಕ್ಷಿ. ಸ್ವಿಸ್‌ ಬ್ಯಾಂಕಿನಲ್ಲಿ ಇಟ್ಟಿದ್ದು ಮಾತ್ರ ಕಾನೂನುಬಾಹಿರ ಕಪ್ಪು ಹಣ ನಾವು ಕರ ತಪ್ಪಿಸಿ ಮನೆಯೊಳಗೆ ಇಟ್ಟಿದ್ದು ಜಾಣ್ಮೆಯ ಉಳಿತಾಯ ಎನ್ನುವ ಭೂಪರು ನಮ್ಮಲ್ಲಿ ಹಲವರಿದ್ದಾರೆ.

ಸರಿಯೊ ತಪ್ಪೊ ಎನ್ನುವ ಪ್ರಶ್ನೆ ಆ ಬಳಿಕ, ಆದರೆ ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ಬಹುತೇಕ ಎಲ್ಲರ ಆಸೆಯೂ ಆಗಿದೆ. ಕರ ಕಾನೂನು ತೆರಿಗೆಯನ್ನು ತಪ್ಪಿಸುವ ಕೆಲವು ಕಾನೂನೀಯ ಹಾದಿಗಳನ್ನು ಕೊಟ್ಟಿದೆ. ಆದರೆ ಕಾನೂನಿನ ಚೌಕಟ್ಟಿನ ಹೊರಗೆ ಹೋಗಿ ತಪ್ಪಿಸಲು ಹವಣಿಸುವುದು ಶುದ್ಧ ತಪ್ಪು ಮತ್ತು ಅದು ಕರಕಳ್ಳತನ.

ಅದೇನೇ ಇರಲಿ, ಕರ ಇಲಾಖೆ ಲಾಗಾಯ್ತಿನಿಂದ ಕರಚೋರರನ್ನು ಹಿಡಿಯಲು ಬಹುಕೃತ ವೇಷವನ್ನು ಹಾಕುತ್ತಲೇ ಇದೆ. ವಿದ್ಯುನ್ಮಾನ ಮಾಧ್ಯಮ ಬಂದ ಮೇಲೆ ಈ ಕೆಲಸ ತುಂಬಾ ಸುಲಭವಾಗಿಯೂ ನಡೆಯುತ್ತದೆ. ಈ ಮೊಳೆ ಯಾರುÅ ಗುರುಗುಂಟಿರಾಯರನ್ನು ಹಿಡ್ಕೊಂಡು ನಮ್ಮನ್ನೆಲ್ಲ ಸುಮ್ಮನೆ ಹೆದರಿಸುತ್ತಿದ್ದಾರೆ ಮಾರಾಯೆÅ ಅಂತ ವ್ಯಂಗ್ಯವಾಡಿದವರಿಗೆಲ್ಲಾ ವರ್ಷಕ್ಕೊಂದರಂತೆ ಕರ ಇಲಾಖೆಯಿಂದ ನೋಟೀಸುಗಳು ಬರಲಾರಂಭಿಸಿವೆ.

ಎÇÉೆಲ್ಲಿ ಆದಾಯವನ್ನು ಅಡಗಿಸಿ ಕರವಂಚನೆ ಮಾಡಿದ್ದಾರೋ ಅವನ್ನೆಲ್ಲಾ ಕರಾರುವಕ್ಕಾಗಿ ನೋಟೀಸಿನಲ್ಲಿ ತೋರಿಸಿ ಅದರ ಬಗ್ಗೆ ವಿವರಣೆಗಳನ್ನು ಕೇಳುತ್ತಲಿದ್ದಾರೆ. ಎಫ್.ಡಿ. ಬಡ್ಡಿ ಇತರ ಆದಾಯ ಅಲ್ಲದೆ ಬ್ಯಾಂಕುಗಳಲ್ಲಿ ಮಾಡಿದ ದೊಡ್ಡ ಮೊತ್ತದ ಡೆಪಾಸಿಟ್‌, ಹೊರಗಡೆ ಮಾಡಿದ ದೊಡ್ಡ ಮೊತ್ತದ ವ್ಯವಹಾರ/ವೆಚ್ಚ ಇತ್ಯಾದಿಗಳನ್ನು ದಿನಾಂಕ ಸಮೇತ ಉÇÉೇಖೀಸಿ ವಿವರಣೆ ಕೇಳುವ ನೊಟೀಸುಗಳು ಹಲವರಿಗೆ ಬಂದಿವೆ, ಬರುತ್ತಲೇ ಇವೆ.

ಇಷ್ಟು ಹೇಳಿದ ಮೇಲೆ ಕರ ಇಲಾಖೆ ನಿಮ್ಮ ಬಗ್ಗೆ ಮಾಹಿತಿಯನ್ನು ಯಾವ ರೀತಿ ಸಂಗ್ರಹಿಸಿ ಎಲ್ಲಿ ಕೂಡಿಡುತ್ತದೆ ಅನ್ನುವುದನ್ನೂ ಹೇಳಲೇ ಬೇಕು. ಕರ ಇಲಾಖೆಯು ನಿಮ್ಮ ಬಗ್ಗೆ ಕಲೆ ಹಾಕಿದ ಮಾಹಿತಿಯನ್ನು ಫಾರ್ಮ್ 26 ರಲ್ಲಿ ಶೇಖರಿಸಿಡುತ್ತದೆ ಮತ್ತದು ಪಾರದರ್ಶಕವಾಗಿ ನಿಮಗೂ ನೋಡಲು ಜಾಲತಾಣದಲ್ಲಿ ಲಭ್ಯ. ಎಲ್ಲಾ ವಿವರಗಳು ಅದರಲ್ಲಿ ಸಿಗದಿದ್ದರೂ ಬಹುತೇಕ ವಿವರಗಳನ್ನು ಅಲ್ಲಿ ಕಾಣಬಹುದು. ಅಲ್ಲಿರುವ ವಿವರಗಳಂತೂ ಕರ ಇಲಾಖೆಗೆ ನೂರಕ್ಕೆ ನೂರು ಶತಮಾನ ತಿಳಿದಿರುತ್ತದೆಯೇ! ಹಾಗಾಗಿ ಕನಿಷ್ಟ ಆ ವಿವರಗಳನ್ನಂತೂ ನಿಮ್ಮ ಲೆಕ್ಕಕ್ಕೆ ತೆಗೆದುಕೊಳ್ಳದೆ ಇರಲು ಸಾಧ್ಯವೇ ಇಲ್ಲ.

26ಎಎಸ್‌
ಹೌದು, ಫಾರ್ಮ್ 26ಎಎಸ್‌! ಕರಕಟ್ಟುವವರೂ ಹಾಗೂ ಕರಕಳ್ಳತನ ಮಾಡುವವರೂ ಅತ್ಯಗತ್ಯವಾಗಿ ತಿಳಿದುಕೊಳ್ಳಲೇ ಬೇಕಾದ ವಿಚಾರ ಇದು. ಆದಾಯ ತೆರಿಗೆ ಇಲಾಖೆ ಪ್ಯಾನ್‌ ಕಾರ್ಡ್‌ ಮುಖಾಂತರ ಎಲ್ಲಾ ವ್ಯವಹಾರಗಳ ಮೇಲೆ ಕಣ್ಣಿಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ಯಾನ್‌ ಕಾರ್ಡ್‌ ಮುಖಾಂತರ ಸಂಗ್ರಹಿಸಿದ ಮಾಹಿತಿಗಳನ್ನು ವಿಶ್ಲೇಷಿಸಿ ಪ್ರತಿಯೊಬ್ಬರೂ ಕಟ್ಟಿದ ಆದಾಯ ಕರದ ಪಟ್ಟಿಯನ್ನು ಫಾರ್ಮ್ 26 ಎಎಸ್‌ ಎಂಬ ವೈಯಕ್ತಿಕ ಪಟ್ಟಿಯಲ್ಲಿ ನೋಂದಾಯಿಸುತ್ತಾ ಹೋಗುತ್ತದೆ. ನಿಮ್ಮ ಸಂಬಳದಿಂದ, ಬ್ಯಾಂಕ್‌ ಬಡ್ಡಿಯಿಂದ, ಕಮಿಷನ್‌ ಪಾವತಿಯಿಂದ ಕಡಿತವಾದ ಟಿಡಿಎಸ್‌ (ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌) ಅಲ್ಲದೆ ನೀವು ಸ್ವತಃ ಕಟ್ಟಿದ ಅಡ್ವಾನ್ಸ್‌ ಟ್ಯಾಕ್ಸ್‌ ಮತ್ತು ಸೆಲ#… ಅಸೆಸ್ಸೆ$¾ಂಟ್‌ ಟ್ಯಾಕ್ಸ್‌ ವಿವರಗಳು ಈ ಫಾರ್ಮ್ 26 ಎಎಸ್‌ನಲ್ಲಿ ದಾಖಲಾಗುತ್ತಾ ಹೋಗುತ್ತದೆ.

ಕರ ಇಲಾಖೆ ಈ ಪಟ್ಟಿಯನ್ನು ಹಿಡಿದುಕೊಂಡು ನೀವು ತುಂಬುವ ಟ್ಯಾಕ್ಸ್‌ ರಿಟರ್ನ್ಸ್ ಅನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ಫಾರ್ಮ್ 26 ಎಎಸ್‌ ಪ್ರಕಾರ ಟಿಡಿಎಸ್‌ ಮೂಲಕ ದಾಖಲಾದ ಎಲ್ಲಾ ಆದಾಯಗಳೂ ನಿಮ್ಮ ಟ್ಯಾಕ್ಸ್‌ ರಿಟರ್ನ್ ಫೈಲಿಂಗ್‌ನಲ್ಲಿ ಬಂದಿರಬೇಕು ಹಾಗೂ ಟಿಡಿಎಸ್‌ ಅಲ್ಲದೆ ಬಾಕಿ ಉಳಿದ ತೆರಿಗೆಯನ್ನು – ನಿಮ್ಮ ಸ್ಲಾಬ್‌ಗ ಅನ್ವಯವಾಗುವಂತೆ – ಕಟ್ಟಿರಬೇಕು. ಈ ರೀತಿ ತಾಳೆಯಾಗದ ಎಲ್ಲಾ ವ್ಯವಹಾರಗಳನ್ನೂ ಆದಾಯ ತೆರಿಗೆ ಇಲಾಖೆ ತನ್ನ ಬೃಹತ್‌ ಕಂಪ್ಯೂಟರಿನ ಸಹಾಯದಿಂದ ಪತ್ತೆ ಹಚ್ಚಿ ವೈಯಕ್ತಿಕ ನೊಟೀಸುಗಳನ್ನು ಕಳೆದ ಕೆಲ ವರ್ಷಗಳಿಂದ ಜಾರಿ ಮಾಡುತ್ತಿದೆ.

15ಜಿ/15ಎಚ್‌
26 ಎಎಸ್‌ ಫಾರ್ಮು ಟಿಡಿಎಸ್‌ ಕಡಿತವಾದಾಗ ಮಾತ್ರವೇ ಆದಾಯವನ್ನು ದಾಖಲಿಸಿ ಪಟ್ಟಿಮಾಡುತ್ತದೆ ಎನ್ನುವ ಮೂಲಭೂತ ತತ್ವ ಹಲವು ಬುದ್ಧಿವಂತರು ಮನನ ಮಾಡಿಕೊಂಡಿದ್ದಾರೆ. ಹಾಗಾದರೆ ಟಿಡಿಎಸ್‌ ಕಡಿತವಾಗದಂತೆ ನೋಡಿಕೊಂಡರೆ ಸಾಕು ಕರ ಇಲಾಖೆಯ ದೃಷ್ಟಿಯಿಂದ ತಪ್ಪಿಸಿಕೊಂಡಂತೆಯೇ ಸರಿ ಎನ್ನುವ ಮಹಾ ಸಂಶೋಧನೆಯನ್ನು ಹಲವರು ಮಾಡಿಕೊಂಡರು. ಆ ಪ್ರಕಾರ ಬ್ಯಾಂಕುಗಳಲ್ಲಿ ಇಟ್ಟ ಡೆಪಾಸಿಟ್ಟುಗಳಿಗೆ ಟಿಡಿಎಸ್‌ ಕಡಿತವಾಗದಂತೆ ಫಾರ್ಮ್ 15ಜಿ ಅಥವಾ 15ಜಿ ತುಂಬಿ ಕೊಡಲು ಆರಂಭಿಸಿದರು. ಈ ಫಾರ್ಮು ತುಂಬಿ ಕೊಟ್ಟರೆ ಟಿಡಿಎಸ್‌ ಕಡಿತ ಆಗುವುದಿಲ್ಲ ಎನ್ನುವುದೇನೋ ಸರಿ ಆದರೆ ಮೂಲಭೂತವಾಗಿ ಕರಾರ್ಹರು ಈ ಫಾರ್ಮನ್ನು ತಮ್ಮ ಕೈಯಿಂದ ಮುಟ್ಟುವಂತೆಯೇ ಇಲ್ಲ.

ಈ ಫಾರ್ಮಿನಲ್ಲಿ ನಾನು ಕರಾರ್ಹನಲ್ಲ, ಆದಕಾರಣ ನನ್ನ ಬಡ್ಡಿಯ ಮೇಲೆ ಟಿಡಿಎಸ್‌ ಕಡಿತ ಮಾಡಬೇಡಿ ಎಂದು ಬರೆದಿರುತ್ತದೆ. ಅದನ್ನು ಗಾಳಿಗೆ ತೂರಿ ಲಕ್ಷಾಂತರ ಜನರು ಬೇಕಾಬಿಟ್ಟಿ ಈ ಫಾರ್ಮುಗಳನ್ನು ತುಂಬಿ ಬ್ಯಾಂಕುಗಳಲ್ಲಿ ನೀಡಿದ್ದಾರೆ. ಕೆಲವೆಡೆ ಬ್ಯಾಂಕು ಸಿಬ್ಬಂದಿಗಳೇ ಅರಿತೋ ಅರಿಯದೆಯೋ ಈ ರೀತಿ ಮಾಡಲು ಠೇವಣಿದಾರರನ್ನು ಪ್ರೇರೇಪಿಸಿದ್ದಾರೆ. ಯಾರು ಏನೇ ಹೇಳಿದರೂ ಸಹಿ ಹಾಕಿದವನೇ ಅಂತಿಮ ಹೊಣೆಗಾರನಾಗುತ್ತಾನೆ ಎನ್ನುವುದನ್ನು ಜನರು ಮರೆಯಬಾರದು. ಈ ರೀತಿ ಟಿಡಿಎಸ್‌ ತಪ್ಪಿಸಿ ಫಾರ್ಮ್ 26 ಎಎಸ್‌ನ ಜಾಲದಿಂದ ತಪ್ಪಿಸಿಕೊಂಡೆ ಎಂದು ಬೀಗುತ್ತಿದ ಲಕ್ಷಾಂತರ ಜನರಿಗೆ ಕೂಡಾ ಒಂದು ಸಣ್ಣ ಆಘಾತ ಕಾದಿದೆ.

26 ಎಎಸ್‌ನ ಹೊಸ ಅವತಾರ
ಯಾವುದೇ ಸದ್ದು ಗದ್ದಲವಿಲ್ಲದೆ ಈ ಫಾರ್ಮ್ 26 ಎಎಸ್‌ನಲ್ಲಿ ಇಂತಹ ಅತಿಜಾಣ್ಮೆಯನ್ನು ಹಿಡಿದು ಹಾಕಲು ಇನ್ನೂ ಒಂದು ಅಂಶ ಅಡಕವಾಗಿದೆ. ಕಳ್ಳ ಚಾಪೆಯ ಕೆಳಗೆ ನುಸುಳಿಕೊಂಡರೆ ಪೊಲೀಸರು ರಂಗೋಲೆಯ ಕೆಳಗೆ ನುಸುಳಿಕೊಂಡಿದ್ದಾರೆ.

ಆ ಪ್ರಯುಕ್ತ ಇತ್ತೀಚೆಗಿನ ದಿನಗಳಲ್ಲಿ 26 ಎಎಸ್‌ ಫಾರ್ಮಿನಲ್ಲಿ ಈವರೆಗೆ ಅಷ್ಟೊಂದು ಗಂಭೀರವಾಗಿ ಮಾಡಿರದ ಹೊಸತೊಂದು ಮಾಹಿತಿ ನಿಖರಾಗಿ ದಾಖಲಾಗುತ್ತಿದೆ. ಯಾರು ಎಲ್ಲೆಲ್ಲಾ 15ಜಿ ಅಥವಾ 15 ಎಚ್‌ ಫಾರ್ಮ್ ನೀಡಿ ಟಿಡಿಎಸ್‌ ತಪ್ಪಿಸಿಕೊಂಡಿದ್ದಾರೋ ಆ ಎಲ್ಲಾ ವ್ಯವಹಾರಗಳ ಸಂಪೂರ್ಣ ವಿವರಗಳನ್ನು ಫಾರ್ಮ್ 26 ಎಎಸ್‌ ಕಟ್ಟುನಿಟ್ಟಾಗಿ ಹಿಡಿದಿಡಲು ಆರಂಭಿಸಿದೆ.
ಈ ಮೊದಲು ಅದರಲ್ಲಿ ಆ ಕಾಲಂ ಇದ್ದರೂ ಸಹ ಅದು ಅಷ್ಟೊಂದು ಸರಿಯಾಗಿ ಭರ್ತಿಯಾಗಿದ್ದಿಲ್ಲ. ಅಂದರೆ ಟಿಡಿಎಸ್‌ ಕಡಿತವಾಗದಿದ್ದರೂ ನಿಮ್ಮ ಎಲ್ಲಾ ಎಫ್ಡಿ ಹಾಗೂ ಅವುಗಳ ಬಡ್ಡಿಗಳ ವಿವರ ಈಗ ಕರ ಇಲಾಖೆಯ ಕಂಪ್ಯೂಟರಿನಲ್ಲಿ ಶೇಖರವಾಗಿದೆ. ಅಷ್ಟೇ ಅಲ್ಲದೆ ನಿಮ್ಮ ದೊಡ್ಡ ಮೊತ್ತದ ವ್ಯವಹಾರಗಳು, ಕರ ಇಲಾಖೆಯಿಂದ ಹಿಂಪೆಡದ ಬಡ್ಡಿ ಇತ್ಯಾದಿಗಳೂ ಸಹ ಸ್ಪಷ್ಟವಾಗಿ ದಾಖಲಾಗುತ್ತಿದೆ. ನೀವು ರಿಟರ್ನ್ ಫೈಲ್‌ ಮಾಡುವ ಹೊತ್ತಿಗೆ ಅದನ್ನು ತಾಳೆಹಾಕಿ ನೀವು ಕಟ್ಟಬೇಕಾದ ತೆರಿಗೆಯ ಸರಿಯಾದ ಲೆಕ್ಕವನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ಅದರ ಮೇಲೆ ಪೆನಾಲ್ಟಿ, ಬಡ್ಡಿ ಹಾಗೂ ಕರಾರ್ಹನಲ್ಲವೆಂದು ಸುಳ್ಳು ಡೆಕ್ಲರೇಶನ್‌ ಕೊಟ್ಟ ಕಾರಣಕ್ಕೆ ಒಂದು ಶೋ ಕಾಸ್‌ ನೋಟೀಸ್‌ ಬರಲಿದೆ.

ಎಲ್ಲಿದೆ ಫಾರ್ಮ್ 26 ಎಎಸ್‌?
26AS ಎಂಬ ಹೆಸರುಳ್ಳ ಈ ಸೌಲಭ್ಯಕ್ಕೆ www.tdscpc.gov.in ಜಾಲತಾಣಕ್ಕೆ ಹೋಗಿ ರಿಜಿಸ್ಟರ್‌ ಮಾಡಿಕೊಳ್ಳಿ ಹಾಗೂ ನಿಮ್ಮ ವೈಯಕ್ತಿಕ ಫಾರ್ಮ್ 26 ಎಎಸ್‌ ಅನ್ನು ಪರಿಶೀಲಿಸಿಕೊಳ್ಳಿ. ಪರ್ಯಾಯವಾಗಿ ಆದಾಯ ತೆರಿಗೆಯ ಜಾಲತಾಣವಾದ www.incometaxindiaefiling.gov.in ಮೂಲಕ ಅಥವಾ ನಿಮ್ಮ ಬ್ಯಾಂಕುಗಳ ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕವೂ ಈ ತಾಣಕ್ಕೆ ಭೇಟಿ ನೀಡಿ 26 ಎಎಸ್‌ ಅನ್ನು ನೋಡಬಹುದು. ನಿಮ್ಮ ಕರ ಲೆಕ್ಕ ಹಾಗೂ ರಿಟರ್ನ್ ಫೈಲಿಂಗ್‌ ಈ ಫಾರ್ಮ್ನೊಂದಿಗೆ ತಾಳೆಯಾಗಲೇ ಬೇಕು. ನಿಮ್ಮ ಟಿಡಿಎಸ್‌, ನೀವು ಕೊಟ್ಟ 15 ಜಿ/ಎಚ್‌ ವಿವರಗಳೂ ಹಾಗೂ ಇತರ ಎಲ್ಲಾ ಆದಾಯಗಳ ಲಭ್ಯ ವಿವರಗಳೂ ಅಲ್ಲಿರುತ್ತವೆ.

ಎಚ್ಚೆತ್ತುಕೊಳ್ಳಿ
ಮಾರ್ಚ್‌ 31ರ ಮೊದಲು ಪ್ರತಿಯೊಬ್ಬರೂ ತಮ್ಮ ಎಲ್ಲಾ ಕರಾರ್ಹ ಆದಾಯವನ್ನೂ ತೋರಿಸಿ ಕರಕಟ್ಟುವುದು ಒಳಿತು. ಫಾರ್ಮ್ 26 ಎಎಸ್‌ನಲ್ಲಿ ನಮೂದಿತ ಎಲ್ಲಾ ಆದಾಯಗಳನ್ನು ಖಂಡಿತವಾಗಿಯೂ ತೋರಿಸಲೇ ಬೇಕು. ಇಲ್ಲವಾದಲ್ಲಿ ಇಲಾಖೆಯ ಕಂಪ್ಯೂಟರ್‌ ನೊಟೀಸು ಇಶ್ಯೂ ಮಾಡುವುದು ಶತಸ್ಸಿದ್ಧ.

ಸುಮ್ಮನೆ 15 ಜಿ/ಎಚ್‌ ನೀಡಿದವರು ಆ ಬಾಬ್ತು ಸರಿಯಾದ ಕರ ಲೆಕ್ಕ ಹಾಕಿ ಈಗಲಾದರೂ ಕರಕಟ್ಟುವುದು ಒಳ್ಳೆಯದು. ಕೊನೆ ದಿನಾಂಕ ಕಳೆದರೆ ಬಡ್ಡಿ/ಪೆನಾಲ್ಟಿಗಳ ಭಾರ ಜಾಸ್ತಿಯಾದೀತು. ಕರ ಉಳಿತಾಯಕ್ಕೆ ಹೂಡಿಕೆಯ ಅಗತ್ಯವಿದ್ದರೆ ಅದನ್ನು ಮಾರ್ಚ್‌ 31 ರ ಬಳಿಕ ಮಾಡಲು ಬರುವುದೇ ಇಲ್ಲ.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

Mother-in-law gives HIV injection to daughter-in-law for not giving much dowry

ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್‌ ನೀಡಿದ ಅತ್ತೆ ಮಾವ

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

T-20

20-ಟ್ವೆಂಟಿ ಬಜೆಟ್‌ : ಡಿಡಿಟಿ,ಹೂಡಿಕೆ ವಿಮೆ,ಎನ್ನಾರೈ ಇತ್ಯಾದಿ

MUST WATCH

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

ಹೊಸ ಸೇರ್ಪಡೆ

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

6-gundlupete

Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು

1

Bantwal: ಕೃಷಿಕರ ತೋಟಗಳಿಗೆ ನುಗ್ಗಿದ ಜಕ್ರಿಬೆಟ್ಟು ಅಣೆಕಟ್ಟು ನೀರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.