ಬರಲಿವೆ ಏಕರೂಪಿ ಆರೋಗ್ಯ ವಿಮಾ ಪಾಲಿಸಿಗಳು


Team Udayavani, Dec 9, 2019, 5:08 AM IST

INSURANCE

ನನಗೆ ಬರುವ ಪ್ರಶ್ನೆಗಳಲ್ಲಿ ಅತ್ಯಂತ ಜಾಸ್ತಿ ಮತ್ತು ಅತ್ಯಂತ ಕಠಿನವಾದ ಪ್ರಶ್ನೆ ಎಂದರೆ ಯಾವ ಆರೋಗ್ಯ ವಿಮೆ ಬೆಸ್ಟ್‌ ಎಂಬುದು! ಈ ಗೊಂದಲ ನನಗೂ ಇದೆ. ಇರುವ ಪಾಲಿಸಿಗಳಲ್ಲಿ ಒಂದೊಂದು ಕೂಡಾ ಒಂದೊಂದು ರೀತಿಯದ್ದು. ಯಾವ ಎರಡೂ ಪಾಲಿಸಿಗಳೂ ಕೂಡಾ ಒಂದೇ ತೆರನಾಗಿಲ್ಲ. ಒಂದಿದ್ದರೆ ಒಂದಿರುವುದಿಲ್ಲ. ಹಾಗಾಗಿ ಹೋಲಿಸಿ ನೋಡುವುದು ಕಷ್ಟಸಾಧ್ಯ. ಆದಕಾರಣ ಈ ಪ್ರಶ್ನೆಗೆ ಇದಮಿತ್ತಂ ಎಂಬ ಉತ್ತರವನ್ನು ನಾನು ಯಾವತ್ತೂ ನೀಡಿದವನಲ್ಲ. “ಈ ವಿಮಾ ಕಂಪೆನಿಗಳದ್ದು ಎಂತ ಚೊರೆ ಮಾರಾಯೆÅ, ಎಲ್ಲರೂ ಒಂದೇ ರೀತಿಯ ಪಾಲಿಸಿಯನ್ನು ಹೊರತಂದರೆ ರಗಳೆ ಇಲ್ಲ, ಪ್ರೀಮಿಯಂ ಮತ್ತು ಸರ್ವಿಸ್‌ ನೋಡಿ ನಿರ್ಧಾರ ತೆಗೆದುಕೊಂಡರಾಯಿತು’ ಅಂತ ಹಲವು ಬಾರಿ ಪಿರಿಪಿರಿ ಮಾಡಿದ್ದು ಉಂಟು ನಾನು. ಏಕರೂಪಿ ಯುನಿಫಾರ್ಮ್ ಹೆಲ್ತ… ಪಾಲಿಸಿ ಎನ್ನುವ ಪರಿಕಲ್ಪನೆ ಭಾರತದಲ್ಲಿ ಒಂದು ಅತ್ಯಗತ್ಯ ವಿಚಾರವಾಗಿದೆ. ಸದ್ಯದ ಪಾಲಿಸಿಗಳನ್ನು ಹೋಲಿಸಿ ನೋಡಿ ನಿರ್ದಾರ ತೆಗೆದುಕೊಳ್ಳಬೇಕಾದರೆ ಬೃಹಸ್ಪತಿಯೇ ಆಗಬೇಕು. ಆತನಿಂದಲೂ ಅಸಾಧ್ಯ ಏಕೆಂದರೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಾದರೆ ಯಾವಾಗ ಎಲ್ಲಿ ಯಾವ ಕಾಯಿಲೆ ನಿಮಗೆ ಬರುತ್ತದೆ ಎಂದು ನಿಮಗೆ ಗೊತ್ತಿರಲೇ ಬೇಕು. ಅಂತಹ ದಿವ್ಯದೃಷ್ಟಿ ಅವನಿಗೂ ಇರಲಿಕ್ಕಿಲ್ಲ. ಯಾರಾದ್ರು ಜೋಯಿಸರು ಒಂದು ಕೈ ನೋಡಬಹುದು.

ಗುರುಗುಂಟಿರಾಯರ ಶಾಪ ತಟ್ಟದೆಯೇನೋ ಗೊತ್ತಿಲ್ಲ. ಈಗ ಭಾರತದದಲ್ಲಿ ಏಕರೂಪಿ ಆರೋಗ್ಯ ವಿಮಾ ಪಾಲಿಸಿ ಬರುತ್ತಿದೆ. 2016ರಲ್ಲಿ ಐ.ಆರ್‌.ಡಿ.ಎ. ಹೊರತಂದ ಕಾನೂನು ಮತ್ತು ಆ ಬಳಿಕ ಇದೀಗ 2019 ಸೆಪ್ಟೆಂಬರ್‌ನಲ್ಲಿ ಹೊರತಂದ ಇನ್ನೊಂದು ಕಾನೂನು ಆ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದೆ.

ಇನ್ನು ಮುಂದೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಎಲ್ಲ ಹೊಸ ಪಾಲಿಸಿಗಳೂ ಹೊಸ ನಿಯಮದ ಅನುಸಾರವೇ ಇರಬೇಕು. ಸದ್ಯ ಚಾಲ್ತಿಯಲ್ಲಿರುವ ಎÇÉಾ ಪಾಲಿಸಿಗಳೂ ಕೂಡಾ 2010ರ ಅಕ್ಟೋಬರ್‌ 1 ಬಳಿಕ ಆ ಕಾನೂನು ಪ್ರಕಾರ ಬದಲಾಗಬೇಕು. ಆ ಹೊಸ ಕಾನೂನಿನ ಪ್ರಕಾರ ಈ ಕೆಳಗಿನ ಮುಖ್ಯ ಬದಲಾವಣೆಗಳು ಆರೋಗ್ಯ ವಿಮಾ ಪಾಲಿಸಿಗಳಲ್ಲಿ ಬಂದಿವೆ.

12ರ ನೆಗೆಟಿವ್‌ ಲಿಸ್ಟ್‌
ಇದುವರೆಗೆ ಹತ್ತು ಹಲವು ಕಾರಣಗಳಿಗೆ ಆರೋಗ್ಯ ವಿಮೆಯ ಕ್ಲೇಮು ಪಾವತಿ ಮಾಡುವುದನ್ನು ಅಥವಾ ಪಾಲಿಸಿಯನ್ನು ನೀಡುವುದನ್ನೇ ಕಂಪೆನಿಗಳು ನಿರಾಕರಿಸುತ್ತಿವೆ. ಇದರಿಂದಾಗಿ ಗ್ರಾಹಕರಿಗೆ ಅಗತ್ಯ ಬಂದಾಗ ವಿಮಾ ಪಾಲಿಸಿ ಪಡೆಯುವುದು ಸಾಧ್ಯವಾಗುತ್ತಿಲ್ಲ ಹಾಗೂ ಪಾಲಿಸಿ ಇದ್ದವರಿಗೂ ಕೂಡಾ ಅಗತ್ಯ ಬಿ¨ªಾಗ ಕ್ಲೇಮ್‌ ಮಾಡಿದ ದುಡ್ಡು ಕೈಸೇರುತ್ತಿರಲಿಲ್ಲ. ಒಂದು ಪಾಲಿಸಿಯನ್ನು ನೀಡಲು ನಿರಾಕರಿಸುವುದು ಅಥವಾ ಒಂದು ಕ್ಲೇಮನ್ನು ಪಾವತಿ ಮಾಡುವುದು ವಿಮಾ ಕಂಪೆನಿಯ ಕಾನೂನಾತ್ಮಕ ಆಯ್ಕೆಯಾದರೂ ಕೂಡಾ ಇದೀಗ ಐ.ಆರ್‌.ಡಿ.ಎ. ಹನ್ನೆರಡು ನಿರ್ದಿಷ್ಠ ಕಾರಣಗಳಿಗೆ ಪಾಲಿಸಿ/ಕ್ಲೇಮು ನಿರಾಕರಿಸುವಂತಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ನಿರ್ದೇಶಿಸಿದೆ. ಈ 12 ಕಾರಣಗಳ “ನೆಗೆಟಿವ್‌ ಲಿಸ್ಟ್‌’ ಗ್ರಾಹಕರಿಗೆ ಒಂದು ವರದಾನವೇ ಸರಿ. ಆ ಹನ್ನೆರಡರಲ್ಲಿ ಮಾನಸಿಕ ವ್ಯಾಧಿ ಅಥವಾ ಅಸ್ವಸ್ಥತೆ, ಅಪಾಯಕಾರಿ ಪರಿಸರದಲ್ಲಿ ಉದ್ಯೋಗ (ಕಲ್ಲಿದ್ದಲು ಗಣಿ, ಪರಮಾಣು ಕೇಂದ್ರ ಇತ್ಯಾದಿ) ಹುಟ್ಟಿನಿಂದ ಬಂದಂತಹ ಅಸೌಖ್ಯ, ಅನುವಂಶೀಯ ಕಾಯಿಲೆಗಳು ಅಥವಾ ವಯೋಸಹಜ ಸ್ನಾಯು ತೊಂದರೆಗಳು ಇತ್ಯಾದಿಗಳು ಸೇರಿವೆ. ಈ ಕಾರಣಗಳಿಗೆ ಇನ್ನು ಮುಂದೆ ವಿಮಾ ಪಾಲಿಸಿ ಮಂಜೂರು ಮಾಡುವುದಾಗಲಿ ಇರುವ ಪಾಲಿಸಿಗಳ ಮೇಲೆ ಕ್ಲೇಮ್‌ ಪಾವತಿ ಮಾಡುವುದನ್ನು ನಿರಾಕರಿಸುವಂತಿಲ್ಲ.

18ರ ಪಾಸಿಟಿವ್‌ ಲಿಸ್ಟ್‌
ಮೇಲಿನದ್ದು ಯಾವ ಕಾರಣಗಳನ್ನು ಕೊಡಬಾರದು ಎಂದಾದರೆ ಇನ್ನು ಯಾವ ಕಾರಣಗಳನ್ನು ಕೊಡಬಹುದು ಎನ್ನುವುದರ ಬಗ್ಗೆಯೂ ಕಾನೂನಿದೆ. ಒಂದು ಕ್ಲೇಮನ್ನು ತಿರಸ್ಕರಿಸುವಲ್ಲಿ 18 ಒಪ್ಪಿತ ಕಾರಣಗಳನ್ನು ಐ.ಆರ್‌.ಡಿ.ಎ. ನಿರ್ದೇಶಿಸಿದೆ ಹಾಗೂ ಪ್ರತಿಯೊಂದು ಕಾರಣಕ್ಕೂ ಒಂದು ಕೋಡ್‌ ನಂಬರ್‌ ಕೂಡ ಕೊಡಲಾಗಿದೆ. ಯಾವ ಯಾವುದೋ ಸಬೂಬು ಹೇಳಿ ಕ್ಲೇಮನ್ನು ತಿರಸ್ಕರಿಸುವಂತಿಲ್ಲ. ಈ 18 ಒಪ್ಪಿತ ಕಾರಣಗಳ ಪೈಕಿ ಮೊದಲೇ ಇದ್ದ ರೋಗಗಳು (Pre-existing diseases), ವೈದ್ಯರ ಆದೇಶವಿಲ್ಲದ ಕಾಸೆ¾ಟಿಕ್‌ ಸರ್ಜರಿ, ಸಾಹಸ ಕ್ರೀಡೆ, ಮದ್ಯ/ಡ್ರಗ್ಸ್‌ ವ್ಯಸನ, ರಿಫ್ರಾಕ್ಟಿವ್‌ ಎರರ್‌, ಸಂತಾನಶಕ್ತಿ ಹೀನತೆ ಮತ್ತು ಮೆಟರ್ನಿಟಿ ಇತ್ಯಾದಿಗಳು ಸೇರಿವೆ. ಬೊಜ್ಜುತನದ ಕಾರಣಕ್ಕೆ ಕೂಡಾ ಕ್ಲೇಮ್‌ ನಿರಾಕರಿಸುವಂತಿಲ್ಲ. ಆದರೆ ಬೊಜ್ಜುತನದ ಮಾಪನವಾದ ಬಿ.ಎಂ.ಐ40 ರ ಮೇಲಿದ್ದಿರಬೇಕು ಮತ್ತು ವೈದ್ಯರು ಶಸ್ತ್ರಕ್ರಿಯೆಯನ್ನು ಆದೇಶಿಸಿರಬೇಕು.(ಡಯಾಬಿಟಿಸ್‌ ಅಥವಾ ಹೃದ್ರೋಗ ಇದ್ದಲ್ಲಿ ಇದು 35 ಸಾಕು).

16 ಶಾಶ್ವತ ಹೊರತುಗಳು
ಇವು Permanent exclusions, ಇವುಗಳು ಯಾವತ್ತಿಗೂ ವಿಮಾ ಪಾಲಿಸಿಯ ಹೊರಗೇ ಉಳಿಯುತ್ತವೆ. ದೀರ್ಘಾವಧಿ ಕಿಡ್ನಿ/ಲಿವರ್‌ ಕಾಯಿಲೆ, ಎಪಿಲೆಪ್ಸಿ, ಹೆಪಟೈಟಿಸ್‌-ಬಿ ಇತ್ಯಾದಿಗಳು ಈ ಹದಿನಾರರ ಪಟ್ಟಿಯಲ್ಲಿವೆ. ಈ ಹದಿನಾರು ಕಾಯಿಲೆಗಳು ಇನ್ಶೂರ್‌ ಆಗಲ್ಲ; ಆದರೆ ಈ ಕಾಯಿಲೆಗಳನ್ನು ಹೊರತುಪಡಿಸಿ ಬೇರೆ ಕಾಯಿಲೆಗಳಿಗೆ ವಿಮೆ ಆಗುತ್ತದೆ. ಹೊರತುಗಳು ರೋಗಗಳಿಗೇ ಹೊರತು ರೋಗಿಗೆ ಅಲ್ಲ. ಇದು ಈ ಸಂಹಿತೆಯಲ್ಲಿ ಬಂದಿರುವ ಒಂದು ಅತಿ ಮುಖ್ಯ ಬದಲಾವಣೆ. ಈ ವರೆಗೆ ಈ ಕಾಯಿಲೆ ಇರುವವರಿಗೆ ವಿಮೆ ಇಳಿಸಲು ಯಾವುದೇ ಕಂಪೆನಿಗಳೂ ಮುಂದೆ ಬರುತ್ತಿರಲಿಲ್ಲ. ಇನ್ನು ಮುಂದೆ ಈ ರೋಗಿಗಳೂ ಕೂಡಾ ಬೇರೆ ಅಸಂಬಂಧಿತ ಕಾಯಿಲೆಗಳಿಗೆ ವಿಮೆ ಪಡೆಯಬಹುದು. ಈ ಕಾನೂನಿನಿಂದ ಹಲವರಿಗೆ ಲಾಭವಾಗಬಹುದು.

ಪ್ರಿ-ಎಗ್ಸಿಸ್ಟಿಂಗ್‌ ಡಿಸೀಸ್‌
ಈಗಾಗಲೇ ನಿಮ್ಮಲ್ಲಿ ಇರುವ ಕಾಯಿಲೆಗಳ ಮೇಲೆ ತಕ್ಷಣ ವಿಮೆ ಆಗುವುದಿಲ್ಲ. ರೋಗ ಪತ್ತೆಯಾದ ಕೂಡಲೇ ಹೋಗಿ ವಿಮೆ ಇಳಿಸಿ ಕ್ಲೇಮ್‌ ಜಡಿಯುವ ಜಾಯಮಾನವನ್ನು ತಪ್ಪಿಸಲು ಕಂಪೆನಿಗಳು ಈ ಕಾನೂನನ್ನು ಹಾಕಿಕೊಂಡಿವೆ. ಇದರಲ್ಲಿ ಒಂದೊಂದು ಕಂಪೆನಿಯಲ್ಲಿ ಒಂದೊಂದು ಕಾನೂನು; ಒಂದೊಂದು ರೋಗಕ್ಕೆ ಒಂದೊಂದು ಕಾನೂನು. ಈಗ ಏಕರೂಪಿಯಾಗಿ ಪಾಲಿಸಿಯ ದಿನಾಂಕದಿಂದ 4 ವರ್ಷಗಳ ಹಿಂದಿನವರೆಗೆ ಪತ್ತೆಯಾದ ಯೋಗಗಳು ಪ್ರಿ-ಎಗ್ಸಿಸ್ಟಿಂಗ್‌ ಡಿಸೀಸ್‌ ಹಾಗೂ ಪಾಲಿಸಿ ಮಾಡಿ 3 ತಿಂಗಳುಗಳ ಒಳಗೆ ಪತ್ತೆಯಾದವುಗಳೂ ಕೂಡಾ ಪ್ರಿ-ಎಗ್ಸಿಸ್ಟಿಂಗೇ! ಈ 4-3 ಫಾರ್ಮುಲಾ ಹೊರಗಿನ ರೋಗಗಳು ವಿಮೆಯ ವ್ಯಾಪ್ತಿಗೆ ಬರುತ್ತವೆ. ಕ್ಲೇಮು ಸಾಧುವಾಗುತ್ತವೆ. ಉದಾ: ವಿಮೆ ಮಾಡಿಸಿ 90 ದಿನಗಳ ಬಳಿಕ ಆರಂಭವಾದ ಹೈಪರ್‌ ಟೆನÒನ್‌, ಶುಗರ್‌, ಹೃದ್ರೋಗಗಳು ಇನ್ನು ಮುಂದೆ ವಿಮೆಯ ವ್ಯಾಪ್ತಿಯೊಳಗೆ ಬರುತ್ತವೆ. ಹಾಗೆಯೇ, ಈ ರೋಗಗಳು ಆರಂಭವಾಗಿದ್ದಲ್ಲಿ ಪತ್ತೆಯಾದ 4 ವರ್ಷಗಳ ಬಳಿಕವೇ ಅವುಗಳ ಮೇಲೆ ವಿಮೆ ಇಳಿಸಲು ಬರುತ್ತದೆ.

ಕ್ಲೇಮು ವಜಾ ಇಲ್ಲ
ಅಷ್ಟೇ ಅಲ್ಲ, ನಿರಂತರವಾಗಿ 8 ವರ್ಷ ಪ್ರೀಮಿಯಂ ಕಟ್ಟಿದ ಖಾಯಂ ಗಿರಾಕಿಗಳ ಕ್ಲೇಮನ್ನು ವಿಮಾ ಕಂಪೆನಿಗಳು ತಿರಸ್ಕರಿಸುವಂತಿಲ್ಲ. ಇದು ವಂಚನೆಗೆ ಅನ್ವಯವಾಗುವುದಿಲ್ಲ. ಆದರೆ ಕ್ಷುಲ್ಲಕ ಕಾರಣ ಕೊಟ್ಟು ಇನ್ನು ಮುಂದೆ ಕ್ಲೇಮನ್ನು ವಜಾ ಮಾಡುವಂತಿಲ್ಲ. ಇದೂ ಕೂಡಾ ಮಹತ್ತರ ಬದಲಾವಣೆ.

ಗೊಂದಲ, ಲಿಟಿಗೇಶನ್‌ ಕಡಿಮೆಯಾಗಲು ಇವಿಷ್ಟೂ ಮುಖ್ಯ
ಪಾಲಿಸಿ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನೂ ತರಲಾಗಿದೆ. ಅದರಂತೆ, 0ಪಾಲಿಸಿ ಕರಾರಿನಲ್ಲಿ ಕಾಯಿಲೆಗಳನ್ನು ಹೆಸರಿಸುವಾಗ ಸ್ಪಷ್ಟತೆ ಇರಬೇಕು, ತತ್ಸಂಬಂಧಿತ ಕಾಯಿಲೆ, ಇಂತಹ ಇತರ ಕಾಯಿಲೆ, ಇತ್ಯಾದಿ ಎಂಬ ಪದಪುಂಜಗಳ ಬಳಕೆಗೆ ಅನುಮತಿ ಇಲ್ಲ. ಕರಾರಿನಲ್ಲಿ ಸ್ಪಷ್ಟತೆ ಮುಖ್ಯ. ಮುಂದಿನ ಗೊಂದಲ ಮತ್ತು ಕೋರ್ಟ್‌ ಕೇಸುಗಳನ್ನು ತಪ್ಪಿಸಲು ಈ ಯೋಚನೆ. ಈ ಬದಲಾವಣೆಗಳ ಬಳಿಕ ಪಾಲಿಸಿಯಿಂದ ಪಾಲಿಸಿಗಳ ನಡುವೆ ಇರುವ ಗೊಂದಲಗಳು ಹೋಗಿ ಎÇÉಾ ಪಾಲಿಸಿಗಳೂ ಏಕರೂಪಿಯಾಗಿ ಕಾಣಿಸುತ್ತವೆ. ಒಬ್ಬೊಬ್ಬರದ್ದು ಒಂದೊಂದು ಕಾನೂನು ಇರುವುದಿಲ್ಲ. ಪ್ರೀಮಿಯಂ ಮೊತ್ತ ಮತ್ತು ಸೇವಾಮಟ್ಟವನ್ನು ಮಾತ್ರ ತಾಳೆಹಾಕಿ ಅಗ್ಗವಾದ ಪಾಲಿಸಿಯನ್ನು ಖರೀದಿಸುವ ಪ್ರಕ್ರಿಯೆ ಸುಲಭವಾದೀತು. ಎÇÉಾ ಪಾಲಿಸಿಗಳಲ್ಲೂ ಬಳಸುವ ಪದಗಳು ಒಂದೇ ಅರ್ಥವನ್ನು ನೀಡುತ್ತವೆ. ಇದರಿಂದ ಗೊಂದಲ ಮತ್ತು ಲಿಟಿಗೇಶನ್‌ ಕಡಿಮೆಯಾಗಬೇಕು. ಅತಿ ಮುಖ್ಯವಾಗಿ ಗಂಭೀರ ಕಾಯಿಲೆ ಇರುವವರು ಕೂಡಾ ಆ ಕಾಯಿಲೆ ಮತ್ತು ತತ್ಸಂಬಂಧಿತ ರೋಗಗಳನ್ನು ಬಿಟ್ಟು ಉಳಿದ ಕಾಯಿಲೆಗಳ ಮೇಲೆ ವಿಮಾ ಸೌಲಭ್ಯವನ್ನು ಪಡೆಯಬಹುದು. ಈ ಎÇÉಾ ಸೌಲಭ್ಯವನ್ನು ನೀಡುವ ಪಾಲಿಸಿಗಳು ದುಬಾರಿಯಾಗದಿರದು. ಅಕ್ಟೋಬರ್‌ 1, 2020 ಬಳಿಕ ಆರೋಗ್ಯ ವಿಮಾ ಪ್ರೀಮಿಯಂಗಳಲ್ಲಿ ಸಾಕಷ್ಟು ಹೆಚ್ಚಳವನ್ನು ನಿರೀಕ್ಷಿಸಬಹುದು. ಎಷ್ಟು ಅಂದಿರಾ? ಸುಮಾರು ಶೇ.15 ರಿಂದ ಶೇ.25ರ ತನಕ ಇರಬಹುದು. ಇದು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮìಕವಾಗಿ ನಿರ್ಣಯವಾಗುವಂತದ್ದು – ಐ.ಆರ್‌.ಡಿ.ಎ. ಪಾಲಿಸಿಗಳ ಪ್ರೀಮಿಯಂ ನಿಗದಿಪಡಿಸುವುದಿಲ್ಲ.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ  211ಕ್ಕೆ ಆಲೌಟ್‌

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ 211ಕ್ಕೆ ಆಲೌಟ್‌

Test cricket: ಮ್ಯಾಚ್‌ ರೆಫ‌ರಿಯಾಗಿ ನೂರು ಟೆಸ್ಟ್‌ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್

Test cricket: ಮ್ಯಾಚ್‌ ರೆಫ‌ರಿಯಾಗಿ ನೂರು ಟೆಸ್ಟ್‌ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ  211ಕ್ಕೆ ಆಲೌಟ್‌

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ 211ಕ್ಕೆ ಆಲೌಟ್‌

Test cricket: ಮ್ಯಾಚ್‌ ರೆಫ‌ರಿಯಾಗಿ ನೂರು ಟೆಸ್ಟ್‌ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್

Test cricket: ಮ್ಯಾಚ್‌ ರೆಫ‌ರಿಯಾಗಿ ನೂರು ಟೆಸ್ಟ್‌ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

dw

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.