ರಿಟರ್ನ್ ಫೈಲಿಂಗ್‌ಗೆ ಕೊನೆಯ ವಾರ್ನಿಂಗ್
Team Udayavani, Jul 15, 2019, 5:17 AM IST
ಒಂದು ಪ್ರಸ್ತುತ ವರ್ಷದ ರಿಟರ್ನ್ ಫೈಲಿಂಗ್ ಮಾಡುವಾಗ ಯಾವ ವರ್ಷದ ಬಜೆಟ್ಟಿನ ನಿಯಮಗಳನ್ನು ಅನುಸರಿಸಬೇಕು ಎನ್ನುವುದು. ಈ ವರ್ಷದ (2018-19) ಕರ ಮತ್ತು ಹೂಡಿಕೆ ಇತ್ಯಾದಿ ಎÇÉಾ ವಿತ್ತ ವಿಚಾರಕ್ಕೆ ಲೆಕ್ಕ ಹಾಕಲು ಬಳಸುವುದು 2018ರಲ್ಲಿ ಘೋಷಿತ ಬಜೆಟ್. ಮೊನ್ನೆ 2019 ಫೆಬ್ರವರಿಯಲ್ಲಿ ಘೋಷಿತವಾದ ಇಂಟರಿಮ್ ಬಜೆಟ್ ಅಲ್ಲ! ಮೊನ್ನೆ 5ನೇ ತಾರೀಖೀಗೆ ಘೋಷಣೆಯಾದ ಈ ವರ್ಷದ ಫೈನಲ್ ಬಜೆಟ್ ಕೂಡಾ ಅಲ್ಲ.
ಮೊತ್ತ ಮೊದಲು ಒಂದೆರಡು ಸ್ಪಷ್ಟೀಕರಣಗಳು:
ವಿತ್ತ ವರ್ಷ ಮತ್ತು ಅಸೆಸೆ¾ಂಟ್ ವರ್ಷ ಬೇರೆ ಬೇರೆ. ಪ್ರತಿ ವಿತ್ತ ವರ್ಷಕ್ಕೂ ಅದರ ಮುಂದಿನ ವರ್ಷವೇ ಅಸೆಸೆ¾ಂಟ್ ವರ್ಷ. ಅಂದರೆ 2018-19 ವಿತ್ತ ವರ್ಷಕ್ಕೆ ಅದರ ಮುಂದಿನ ಅಂದರೆ 2019-20 ವರ್ಷವೇ ಅಸೆಸೆ¾ಂಟ್ ವರ್ಷ. ಯಾವುದೇ ಕಾನೂನಾತ್ಮಕ ಮಾಹಿತಿಯನ್ನು ಓದುವಾಗ ವಿತ್ತ ವರ್ಷ ಎಂದು ಬರೆದಿ¨ªಾರೋ ಅಥವಾ ಅಸೆಸೆ¾ಂಟ್ ವರ್ಷ ಎಂದು ಬರೆದಿ¨ªಾರೋ ಎಂದು ಸರಿ ಕಣ್ಣು ಬಿಟ್ಟು ನೋಡಿಕೊಂಡು ಓದ ತಕ್ಕದ್ದು. ಅವರಡನ್ನೂ ಸಜ್ಜಿಗೆ-ಬಜಿಲ್ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ.
ಕಳೆದ ವಿತ್ತ ವರ್ಷದ (ಎಪ್ರಿಲ್ 2018- ಮಾರ್ಚ್ 2019) ಎÇÉಾ ಕರ ಲೆಕ್ಕಾಚಾರಗಳ ಹೇಳಿಕೆ ಅಥವಾ ಟ್ಯಾಕ್ಸ್ ರಿಟರ್ನ್ ಫೈಲಿಂಗ್ ಮಾಡಬೇಕಾದದ್ದು ಈ ಅಸೆಸೆ¾ಂಟ್ ವರ್ಷದಲ್ಲಿ (ಎಪ್ರಿಲ್ 2019-ಮಾರ್ಚ್ 2020) ಮತ್ತು ಹಾಗೆ ಮಾಡಲು ಕೊನೆಯ ದಿನಾಂಕ ಜುಲೈ 31, 2019. (ಕಡ್ಡಾಯ ಆಡಿಟ್ ಇರುವ ಬಿಸಿನೆಸ್ ವರ್ಗಕ್ಕೆ ಕೊನೆಯ ದಿನಾಂಕ ಸೆಪ್ಟೆಂಬರ್ 30).
ಇದೇ ರೀತಿ ಇನ್ನೊಂದು ಗೊಂದಲ ಹಲವರನ್ನು ಕಾಡು ವುದಿದೆ. ಅದೇನೆಂದರೆ ಒಂದು ಪ್ರಸ್ತುತ ವರ್ಷದ ರಿಟರ್ನ್ ಫೈಲಿಂಗ್ ಮಾಡುವಾಗ ಯಾವ ವರ್ಷದ ಬಜೆಟ್ಟಿನ ನಿಯ ಮಗಳನ್ನು ಅನುಸರಿಸಬೇಕು ಎನ್ನುವುದು. ಈ ವರ್ಷದ (2018-19) ಕರ ಮತ್ತು ಹೂಡಿಕೆ ಇತ್ಯಾದಿ ಎÇÉಾ ವಿತ್ತ ವಿಚಾರಕ್ಕೆ ಲೆಕ್ಕ ಹಾಕಲು ಬಳಸುವುದು 2018ರಲ್ಲಿ ಘೋಷಿತ ಬಜೆಟ್. ಮೊನ್ನೆ 2019 ಫೆಬ್ರವರಿಯಲ್ಲಿ ಘೋಷಿತವಾದ ಇಂಟರಿಮ್ ಬಜೆಟ್ ಅಲ್ಲ ! ಮೊನ್ನೆ 5ನೇ ತಾರೀಖೀಗೆ ಘೋಷಣೆಯಾದ ಈ ವರ್ಷದ ಫೈನಲ್ ಬಜೆಟ್ ಕೂಡಾ ಅಲ್ಲ.
ಮೂರು-ಮೂರು ಬಜೆಟ್ಟುಗಳನ್ನು ಇಟ್ಟುಕೊಂಡು ಸಜ್ಜಿಗೆ-ಬಜಿಲ್ ಮಾಡಿಕೊಂಡು ತಪ್ಪು ತಪ್ಪು ಲೆಕ್ಕ ಹಾಕಿ ಆ ಬಳಿಕ ಪರಿತಪಿಸುವುದು ಬೇಡ. ಹಾಗಾಗಿ ಒಂದು ಅಂತಿಮ ಬಾರಿ ಈ ಬಾರಿಯ ರಿಟರ್ನ್ ಫೈಲಿಂಗಿಗೆ ಅನ್ವಯವಾಗುವ ವಿವರಗಳನ್ನು ಕೊಡುತ್ತಿದ್ದೇನೆ. ಇದು ಬಜೆಟ್- 2018 ಅನುಸಾರ; ಈ ಬಗ್ಗೆ ಸ್ಪಷ್ಟತೆ ಇರಲಿ.
1.ಸ್ಟಾಂಡರ್ಡ್ ಡಿಡಕ್ಷನ್
ಸಂಬಳ ಪಡೆಯುವ ಉದ್ಯೋಗಿಗಳು ಹಾಗೂ ಪೆನ್ಶನ್ ಪಡೆಯುವ ನಿವೃತ್ತರು ಈ ವರ್ಷದ ಮಟ್ಟಿಗೆ ತಮ್ಮ ಸಂಬಳ/ಪೆನ್ಶನ್ ಮೊತ್ತದಿಂದ ರೂ. 40,000ವನ್ನು ನೇರವಾಗಿ ಸ್ಟಾಂಡರ್ಡ್ ಡಿಡಕ್ಷನ್ ಹೆಸರಿನಲ್ಲಿ ಕಳೆಯಬಹುದಾಗಿದೆ.
2.ಗೃಹ ಸಾಲದ ಮೇಲಿನ ಬಡ್ಡಿ (ಸೆಕ್ಷನ್ 24/ಸೆಕ್ಷನ್ 80ಇಇ)
ನೀವು ಗೃಹ ಸಾಲದ ಬಡ್ಡಿ ಪಾವತಿಸುವವರಾಗಿದ್ದಲ್ಲಿ ವಾರ್ಷಿಕ ಒಟ್ಟು ರೂ.2 ಲಕ್ಷದವರೆಗೆ ಸ್ವಂತ ಅಥವಾ ಬಾಡಿಗೆ ನೀಡಿರುವ ಮನೆಯ ಮೇಲೆ ಮಾಡಿದ ಗೃಹಸಾಲದ ಬಡ್ಡಿಯನ್ನು “ಇನ್‌ಕಮ್ ಫÅಮ್ ಹೌಸ್ ಪ್ರಾಪರ್ಟಿ’ ಎಂಬ ಹೆಸರಿನಲ್ಲಿ ಕಳೆಯಬಹುದಾಗಿದೆ. ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರೆ ಆ ಆದಾಯ ತೋರಿಸಿ ಹೌಸ್ ಟ್ಯಾಕ್ಸ್ ಹಾಗೂ ಮತ್ತು ಬಾಡಿಗೆಯ ಶೇ.30 ನಿರ್ವಹಣಾ ವೆಚ್ಚಗಳನ್ನೂ ಕಳೆಯಬಹುದು.
ಇದಲ್ಲದೆ, ಸೆಕ್ಷನ್ 80ಇಇ ಅನುಸಾರ ತಮ್ಮ ಪ್ರಪ್ರಥಮ ಮನೆಗಾಗಿ ಹಿಂದೊಮ್ಮೆ 2016-17 ಅವಧಿಯಲ್ಲಿ ಸಾಲ ಮಾಡಿದ್ದಲ್ಲಿ ಅದರ ಬಡ್ಡಿಯ ಮರುಪಾವತಿಗಾಗಿ ವಾರ್ಷಿಕ ರೂ. 50,000 ವರೆಗೆ ಹೆಚ್ಚುವರಿ ವಿನಾಯಿತಿ ನೀಡಲಾಗುತ್ತದೆ. ಮನೆಯ ಒಟ್ಟು ವೆಚ್ಚ ರೂ. 50 ಲಕ್ಷ ಮಿತಿಯೊಳಗೆ ಹಾಗೂ ಸಾಲದ ಒಟ್ಟು ಮೊತ್ತ ರೂ. 35 ಲಕ್ಷದ ಮಿತಿಯೊಳಗೆ ಇದ್ದಿರಬೇಕು. ಈ ಸೌಲಭ್ಯ ಎಪ್ರಿಲ್ 1, 2017 ಬಳಿಕ ಮಾಡಿದ ಗೃಹ ಸಾಲಕ್ಕೆ ಲಭ್ಯವಿಲ್ಲ.
3. ಎನ್.ಪಿ.ಎಸ್./ಅಟಲ್ ಪೆನ್ಶನ್ (ಸೆಕ್ಷನ್ 80 ಸಿಸಿಡಿ ಘ1ಬಿ])
ಎನ್.ಪಿ.ಎಸ್. ದೇಣಿಗೆಯು ಎರಡು ಬೇರೆ ಬೇರೆ ಸೆಕ್ಷನ್‌ಗಳ ಅಡಿಯಲ್ಲಿ ಬರುತ್ತದೆ. ಮೂಲತಃ ಎನ್.ಪಿ.ಎಸ್. ದೇಣಿಗೆ ಸೆಕ್ಷನ್ 80ಸಿ ಅಡಿಯಲ್ಲಿ ಪಿ.ಪಿ.ಎಫ್, ಎನ್.ಎಸ್.ಸಿ, ಇ.ಎಲ….ಎಸ್.ಎಸ್, ವಿಮೆ ಇತ್ಯಾದಿ ಬೇರೆ ಇತರ ಹೂಡಿಕೆಗಳ ಒಟ್ಟಿಗೆ ಬರುತ್ತದೆ. ಅದನ್ನು ಆಮೇಲೆ ನೋಡೋಣ. ಆದರೆ, ಇತ್ತೀಚೆಗೆ ಅದನ್ನು ಇನ್ನೊಂದು ಸೆಕ್ಷನ್ 80 ಸಿಸಿಡಿ (1ಬಿ) ಅಡಿಯಲ್ಲಿ ಹೆಚ್ಚುವರಿ ದೇಣಿಗೆಯಾಗಿ ರೂ. 50,000 ಮಿತಿಯಲ್ಲಿ ಕೂಡಾ ಸೇರಿಸಲಾಗಿದೆ. ಆ ಹೂಡಿಕೆಗೆ ಪ್ರತ್ಯೇಕವಾದ ಕರವಿನಾಯಿತಿ ಲಭ್ಯ. ಹಾಗಾಗಿ ಮೊತ್ತ ಮೊದಲು ಎನ್.ಪಿ.ಎಸ್. ಹೂಡಿಕೆಯನ್ನು 80 ಸಿಸಿಡಿ (1ಬಿ) ಅಡಿಯಲ್ಲಿಯೇ ತೆಗೆದುಕೊಳ್ಳೋಣ. ಉಳಿದ ಮೊತ್ತವನ್ನು ಅಗತ್ಯ ಬಂದಲ್ಲಿ 80ಸಿ ಅಡಿಯಲ್ಲಿ ತೆಗೆದುಕೊಳ್ಳಬಹುದು. (ಮೂರನೆಯದಾಗಿ, ಎನ್.ಪಿ.ಎಸ್. ಖಾತೆಯಲ್ಲಿ ಕಂಪೆನಿಯು ಮಾಡಿದ ದೇಣಿಗೆಯು 80ಸಿಸಿಡಿ(2) ಸೆಕ್ಷನ್ನಿನಲ್ಲಿ ಬರುತ್ತದೆ. ಅದನ್ನು ಉದ್ಯೋಗಿಗಳು ತಮ್ಮ ಲೆಕ್ಕದಲ್ಲಿ ಮುಟ್ಟುವಂತಿಲ್ಲ. ಅದು ಪ್ರತ್ಯೇಕವಾಗಿ ಕರವಿನಾಯಿತಿಯೊಂದಿಗೆ ಬರುತ್ತದೆ).
4.ಮೆಡಿಕಲ್ ಇನ್ಶೂರೆನ್ಸ್ (ಸೆಕ್ಷನ್ 80ಡಿ)
ಇದು ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ ರೂ.25,000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ.25,000 ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. ವಿಮಾ ಪ್ರೀಮಿಯಂ ಗಾಗಿ ಈ ಸೆಕ್ಷನ್ ಇದ್ದರೂ ಕೂಡಾ ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ. 5,000ದ ಒಳಮಿತಿಯನ್ನು ಇದು ಹೊಂದಿರುತ್ತದೆ. 60 ದಾಟಿದ ಹಿರಿಯ ನಾಗರಿಕರಿಗೆ ಒಟ್ಟು ಮಿತಿ ರೂ.50,000 ಆಗಿದೆ. 60 ವರ್ಷ ದಾಟಿದ ಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಅವರ ಮಿತಿಯನ್ನು ಸಂಪೂರ್ಣವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು.
5.ಅವಲಂಬಿತರ ಅಂಗವೈಕಲ್ಯ (ಸೆಕ್ಷನ್ 80 ಡಿಡಿ)
ಅವಲಂಬಿತರ ಅಂಗವೈಕಲ್ಯದ ವೈದ್ಯಕೀಯ (ನರ್ಸಿಂಗ್ ಸಹಿತ) ತರಬೇತಿ ಮತ್ತು ಪುನರ್ವಸತಿಗಾಗಿ ಅಥವಾ ಪಾಲನೆಗಾಗಿ ಕರವಿನಾಯಿತಿ ಸೌಲಭ್ಯ ನೀಡಲಾಗುತ್ತದೆ. ಶೇ.40-ಶೇ.80 ಅಂಗವೈಕಲ್ಯ ಇದ್ದರೆ ವಾರ್ಷಿಕ ಮಿತಿ ರೂ.75,000 ಹಾಗೂ ಶೇ.80 ಮೀರಿದ ತೀವ್ರವಾದ ಅಂಗವೈಕಲ್ಯವಿದ್ದರೆ ಈ ಮಿತಿ ರೂ. 1,25,000 ಆಗಿರುತ್ತದೆ.
6.ಗಂಭೀರ ಕಾಯಿಲೆಗಳ ಚಿಕಿತ್ಸೆ (ಸೆಕ್ಷನ್ 80ಡಿಡಿಬಿ)
ಸ್ವಂತ ಹಾಗೂ ಅವಲಂಬಿತರ ಕ್ಯಾನ್ಸರ್, ನ್ಯೂರೋ, ಏಡ್ಸ್, ಥಲಸೇಮಿಯ, ರೀನಲ…, ಹೀಮೋಫಿಲಿಯಾ ಇತ್ಯಾದಿ ಕೆಲ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಈ ಮಿತಿಯನ್ನು ಬಳಸಬಹುದು. ಮಿತಿ ರೂ.40,000. ಆದರೆ 60 ದಾಟಿದ ವರಿಷ್ಠರಿಗೆ ಈ ಮಿತಿ ರೂ. 1,00,000.
7.ವಿದ್ಯಾ ಸಾಲದ ಬಡ್ಡಿ (ಸೆಕ್ಷನ್ 80 ಇ)
ಸ್ವಂತ ಹಾಗೂ ಕುಟುಂಬದವರ ಉನ್ನತ ವ್ಯಾಸಂಗಕ್ಕಾಗಿ ಪಡೆದ ವಿದ್ಯಾ ಸಾಲದ ಬಡ್ಡಿ ಯಾವುದೇ ಮಿತಿಯಿಲ್ಲದೆ 8 ವರ್ಷಗಳವರೆಗೆ ತೆರಿಗೆ ವಿನಾಯಿತಿಗೆ ಅರ್ಹತೆ ಪಡೆದಿರುತ್ತದೆ. ಇಲ್ಲಿ ಅಸಲಿನ ಮರುಪಾವತಿಗೆ ವಿನಾಯಿತಿ ಇಲ್ಲ. ನಿಮ್ಮ ಮಾಸಿಕ ಉMಐನಲ್ಲಿ ಅಸಲು ಬಡ್ಡಿ ಎರಡೂ ಮಿಶ್ರಿತವಾಗಿರುತ್ತದೆ. ಬ್ಯಾಂಕ್ ಸರ್ಟಿಫಿಕೇಟಿನಲ್ಲಿ ಇದರ ವಿವರಗಳು ಲಭ್ಯ.
8.ಡೊನೇಶನ್ (ಸೆಕ್ಷನ್ 80 ಜಿ)
ನಿಗದಿತ ಸಂಸ್ಥೆಗಳಿಗೆ ನೀಡಿದ ದಾನದ ಶೇ.50 ಅಥವಾ ಶೇ.100 – ಸರಕಾರ ನಿಗದಿಪಡಿಸಿದಂತೆ, ಸಂಬಳದ ಶೇ.10% ಮೀರದಂತೆ ನಿಮ್ಮ ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ.
9.ಬಾಡಿಗೆ ರಿಯಾಯಿತಿ (ಸೆಕ್ಷನ್ 80 ಜಿಜಿ):
ಸಂಬಳ ಮೂಲಕ ಎಚ….ಆರ್.ಎ ಪಡೆಯದ ಹಾಗೂ ಸ್ವಂತ ಮನೆಯಿಲ್ಲದೆ ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿದ್ದು ಬಾಡಿಗೆ ನೀಡುತ್ತಿರುವವರಿಗೆ ಗರಿಷ್ಠ ವಾರ್ಷಿಕ ರೂ. 60,000ವರೆಗೆ ವಿನಾಯಿತಿ ಸಿಗುತ್ತದೆ. ಇದಕ್ಕೆ ಕೆಲವು ನಿಯಮಗಳು ಅನ್ವಯಿಸುತ್ತದೆ.
10.ಸ್ವಂತ ಅಂಗವೈಕಲ್ಯ (ಸೆಕ್ಷನ್ 80 ಯು)
ಸ್ವಂತ ಅಂಗವೈಕಲ್ಯದ ಚಿಕಿತ್ಸೆಗಾಗಿ ರೂ.75,000 ಮತ್ತು ಗಂಭೀರ ಊನಕ್ಕೆ ರೂ.1,25,000 ವಾರ್ಷಿಕ ರಿಯಾಯಿತಿ ಲಭ್ಯವಿದೆ.
11.ಸೆಕ್ಷನ್ 80 ಸಿ/ಸಿಸಿಸಿ/ಸಿಸಿಡಿ
ಈ ಮೂರು ಸೆಕ್ಷನ್ ಅಡಿಯಲ್ಲಿ ಈ ಕೆಳಗಿನ ಹೂಡಿಕೆ/ಪಾವತಿಗಳು ಬರುತ್ತವೆ. (ಒಟ್ಟು ಮಿತಿ ರೂ. 1.5 ಲಕ್ಷ)
– ಎಂಪ್ಲಾಯೀಸ್ ಫ್ರಾವಿಡೆಂಟ್ ಫಂಡ್ (ಇಪಿಎಸ್) – ನಿಮ್ಮ ದೇಣಿಗೆಯಲ್ಲದೆ ಸ್ವಂತ ಇಚ್ಚೆಯಿಂದ ಪಿಎಫ್ಗೆ ನೀಡಿದ್ದು ಸಹಿತ: (ಕಂಪೆನಿಯ ದೇಣಿಗೆಯನ್ನು ನೀವು ನಿಮ್ಮ ಈ ಕರ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ. ಅದು ಪ್ರತ್ಯೇಕ)
– ಸ್ವಂತ, ಸೌ³ಸ್, ಮಕ್ಕಳ ಜೀವ ವಿಮೆ/ಯುಲಿಪ್‌ನ ವಾರ್ಷಿಕ ಪ್ರೀಮಿಯಂ
– ವಿಮಾ ಮೊತ್ತದ ಶೇ.10 ಮಿತಿಯೊಳಗೆ, ಪ್ರತಿ ಪಾಲಿಸಿಗೆ. ಎÇÉಾ ಜೀವ ವಿಮಾ ಪಾಲಿಸಿಗಳಿಗೆ ಕರ ವಿನಾಯಿತಿ ಇರುವುದಿಲ್ಲ.
– ಗರಿಷ್ಟ ಎರಡು ಮಕ್ಕಳ ಪರವಾಗಿ ಪಾವತಿಸಿದ ನರ್ಸರಿ/ಶಾಲಾ/ಕಾಲೇಜು ಟ್ಯೂಶನ್’ ಫೀ. (ಡೊನೇಶನ್, ಬಿಲ್ಡಿಂಗ್ ಫಂಡ್, ಕ್ಯಾಪಿಟೇಶನ್ ಇತ್ಯಾದಿ ಆಗಲ್ಲ)
– ಗೃಹಸಾಲದ ಮರುಪಾವತಿಯಲ್ಲಿ (ಇಎಮ…ಐನ) ಅಸಲು ಭಾಗ (ಬಡ್ಡಿ ಬಿಟ್ಟು)
– ಈ ವಿತ್ತ ವರ್ಷದಲ್ಲಿ ಮನೆ ಖರೀದಿಸಿದ್ದರೆ ಆ ಮನೆ ಖರೀದಿಯ ರಿಜಿಸ್ಟ್ರೇಶನ್, ಸ್ಟಾಂಪ್ ಡ್ನೂಟಿ ವೆಚ್ಚಗಳು.
– ಸಾರ್ವಜನಿಕವಾಗಿ ಮಾಡಿದ 15 ವರ್ಷದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ದೇಣಿಗೆ:
– ಅಂಚೆ ಕಚೇರಿಯ ಎನ್.ಎಸ್.ಸಿ ಮತ್ತದರ ಬಡ್ಡಿಯ ಮರುಹೂಡಿಕೆ: ಈ ಯೋಜನೆಯ ಮೇಲಿನ ಬಡ್ಡಿಯನ್ನು ಕೂಡಾ ಮರು ಹೂಡಿಕೆ ಎಂದು ಪರಿಗಣಿಸಿ ಅದರ ಮೇಲೂ ಕರ ವಿನಾಯಿತಿ ಸೌಲಭ್ಯವಿದೆ.
– ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಉಔಖಖ) ನಾಮಾಂಕಿತ ಮ್ಯೂಚುವಲ್ ಫಂಡ್. ಇಲ್ಲಿ ಯಾವುದೇ ಈಕ್ವಿಟಿ ಫಂಡುಗಳು ಬರುವುದಿಲ್ಲ. ಇವುಗಳು ಇ.ಎಲ….ಎಸ್.ಎಸ್ ಅಥವಾ ಟ್ಯಾಕ್ಸ್ ಸೇವರ್ ಎಂಬ ನಿರ್ದಿಷ್ಟ ಲೇಬಲ್‌ಗಳೊಂದಿಗೆ ಬಿಡುಗಡೆಯಾಗುತ್ತವೆ.
– ಮ್ಯೂಚುವಲ್ ಫಂಡ್‌ಗಳ ಯುನಿಟ್ ಲಿಂಕ್ಡ್ ಪೆನ್ಶನ್ ಪ್ಲಾನ್‌ಗಳು (UTI&RBP, Franklin Templeton&TIPP and Reliance Retirement Fund):
– ಐದು ವರ್ಷಾವಧಿಯ ಬ್ಯಾಂಕು/ಪೋಸ್ಟಾಫೀಸಿನ ಕರ ನೋಂದಾಯಿತ ಎಫ್.ಡಿ: ಇಲ್ಲೂ ಕೂಡಾ 80ಸಿ ಸೆಕ್ಷನ್ ಅನ್ವಯ, ಕರ ಉಳಿತಾಯಕ್ಕೆ ಎನ್ನುವ ಲೇಬಲ್ ಅಗತ್ಯ. ಇವುಗಳ ಮೇಲೆ 5 ವರ್ಷಗಳ ಲಾಕ್-ಇನ್ ಇರುತ್ತವೆ.
– ಅಂಚೆ ಕಚೇರಿಯ 5 ವರ್ಷದ ಸೀನಯರ್ ಸಿಟಿಜನ್ ಸೇವಿಂಗ್ ಸ್ಕೀಂ (SCSS) ನಲ್ಲಿ ಮಾಡಿದ ಹೂಡಿಕೆ.
– ಸುಕನ್ಯಾ ಸಮೃದ್ಧಿ ಯೋಜನೆ: ಕೇವಲ ಹತ್ತು ವರ್ಷ ಮೀರದ ಹೆಣ್ಮಕ್ಕಳಿಗಾಗಿ ಮಾತ್ರ ತೆರೆಯಬಹುದಾದ ಈ ಯೋಜನೆಯಲ್ಲಿ ಮಾಡಿದ ಹೂಡಿಕೆ.
– ಎಲ್ಲೆ„ಸಿ ಮತ್ತಿತರ ಜೀವ ವಿಮಾ ಕಂಪೆನಿಗಳು ನೀಡುವ ಪೆನ್ಶನ್ ಪ್ಲಾನುಗಳು (ಸೆಕ್ಷನ್ 80ಸಿಸಿಸಿ)
– ನ್ಯಾಶನಲ್ ಪೆನ್ಶನ್ ಸ್ಕೀಂ (NPS)/ಅಟಲ್ ಪೆನ್ಶನ್ (ಸೆಕ್ಷನ್ 80ಸಿಸಿಡಿ): ಮೇಲ್ಕಾಣಿಸಿದಂತೆ ಈ ಯೋಜನೆಯ ದೇಣಿಗೆ 2 ಸೆಕ್ಷನ್ನುಗಳಲ್ಲಿ ಬರುತ್ತವೆ
– 80CCD(1) ಮತ್ತು 80ಇಇಈ(1b). ಮೊದಲೇ ಹೇಳಿದಂತೆ ನಿಮಗೆ ಬೇಕಾದಂತೆ ಬೇಕಾದ ಸೆಕ್ಷನ್ನಿನಲ್ಲಿ ರಿಯಾಯಿತಿ ಪಡಕೊಳ್ಳಬಹುದು. ಇದರಲ್ಲಿ ಲಾಭವನ್ನು ಮೊತ್ತ ಮೊದಲು 80ಇಇಈ(1b) ಅಡಿಯಲ್ಲಿಯೇ ತೆಗೆದುಕೊಳ್ಳುವುದು ಉತ್ತಮ. ಅದರಡಿಯಲ್ಲಿ ಬೇರೆ ಆಯ್ಕೆಗಳಿಲ್ಲ.
80ಇಇಈ(1) ಸೆಕ್ಷನ್, 80ಸಿ ಸೆಕ್ಷನ್ ಜೊತೆಯಲ್ಲಿ ಬರುವ ಕಾರಣ ಅಲ್ಲಿ ಇತರ ಆಯ್ಕೆಗಳಿವೆ. ಹಾಗಾಗಿ 80ಇಇಈ(1b) ಮಿತಿ ಮೀರಿದರೆ ಉಳಿದ ಮೊತ್ತವನ್ನು 80ಇಇಈ(1) ಅಡಿಯಲ್ಲಿ ತೆಗೆದುಕೊಳ್ಳಬಹುದು.
12.ಎಸ್.ಬಿ./ಎಫ್.ಡಿ./ಆರ್.ಡಿ ಬಡ್ಡಿಗೆ ಕರವಿನಾಯಿತಿ (ಸೆಕ್ಷನ್ 80 ಟಿಟಿಎ/ಟಿಟಿಬಿ)
ಸೆಕ್ಷನ್ 80TTಅಅನುಸಾರ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಕೇವಲ ಎಸ್‌ಬಿ ಖಾತೆಯಲ್ಲಿ ಬರುವ ಬಡ್ಡಿಗೆ ರೂ. 10,000ದ ವರೆಗೆ ಬಡ್ಡಿಯ ಮೊತ್ತದಲ್ಲಿ ಸೆಕ್ಷನ್ 80ಟಿಟಿಎ ಅನುಸಾರ ಕರ ವಿನಾಯಿತಿ ಇದೆ.
ಅಲ್ಲದೆ ಕೇವಲ ಹಿರಿಯ ನಾಗರಿಕರಿಗೆ ಮಾತ್ರವೇ (ಎಲ್ಲರಿಗೂ ಅಲ್ಲ) ಅನ್ವಯಿಸುವಂತೆ ಒಂದು ಹೊಸ ಸೆಕ್ಷನ್ 80ಖಖಆ ಅನುಸಾರ ರೂ. 50,000ದವರೆಗೆ ಬ್ಯಾಂಕ್ ಬಡ್ಡಿಯ ಮೇಲೆ ಕರ ವಿನಾಯಿತಿ ನೀಡಲಾಗಿದೆ.
(ಹಿರಿಯ ನಾಗರಿಕರಿಗೆ 80ಖಖಅಅನ್ವಯವಾಗುವುದಿಲ್ಲ). ಈ ರೂ.50,000 ದಲ್ಲಿ ಎಸ್.ಬಿ. ಬಡ್ಡಿಯ ಜೊತೆಗೆ ಎಫ್ಡಿ ಮತ್ತು ಆರ್.ಡಿ.ಗಳ ಬಡ್ಡಿಯನ್ನೂ ಇದೀಗ ಸೇರಿಸಬಹುದಾಗಿದೆ.
– ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.