ವೈದ್ಯಕೀಯ ವೆಚ್ಚ ಮತ್ತು ಕರ ವಿನಾಯಿತಿ


Team Udayavani, Aug 6, 2018, 1:02 PM IST

tax-deduct.jpg

ಬದುಕು ಎಂದರೆ ನೀರ ಮೇಲಣ ಗುಳ್ಳೆ. ಒಂದು ದಿನ ಟಪ್‌ ಅಂತ ಒಡೆದು ಆವಿಯಾಗುವುದು ಎಂಬುದೇನೋ ಸರಿ. ಆದರೆ ಹಾಗೆ ಹರಿಕತೆ ಮಾಡಿಕೊಂಡು ಕೈ ಕಟ್ಟಿ ಕುಳಿತಿರಬಾರದಲ್ಲ? ಗುಳ್ಳೆ ಒಡೆಯುವ ತನಕ ಬದುಕಲ್ಲಿ ಬರುವ ಕಷ್ಟ ನಷ್ಟಗಳನ್ನು ಆಗುವ ಅರ್ಥ ಅನರ್ಥಗಳನ್ನು ಹೇಗೋ ಸಂಭಾಳಿಸಿಕೊಂಡು ಹೋಗಬೇಕಲ್ಲ? ಜೀವನವೇ ಒಂದು ಸವಾಲಾಗಿ ಬರುವಾಗ ಒದಗಿ ಬರುವ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕು. ರೋಗರುಜಿನಗಳಿಗೆ ಸೂಕ್ತ ಶುಶ್ರೂಷೆ ನೀಡಿ ಜೀವನ ಮೌಲ್ಯವನ್ನು ಎತ್ತರಿಸಬೇಕು. ಅನಾರೋಗ್ಯ, ವೈಕಲ್ಯತೆ ಇತ್ಯಾದಿ ತೊಂದರೆಗಳನ್ನು ಸಶಕ್ತವಾಗಿ ಎದುರಿಸಲು ಮಾಡುವ ವೆಚ್ಚಕ್ಕೆ ಆದಾಯ ಕರ ಇಲಾಖೆಯ ವತಿಯಿಂದಲೂ ಬೆಂಬಲವಿದೆ ಎಂಬುದು ಹಲವರಿಗೆ ಗೊತ್ತಿಲ್ಲ.

ಮೆಡಿಕಲ್‌ ವೆಚ್ಚಕ್ಕೆ ಹಲವಾರು ರೀತಿಯಲ್ಲಿ ಆದಾಯ ಕರ ಇಲಾಖೆ ರಿಯಾಯಿತಿ ನೀಡುತ್ತದೆ. ಇದನ್ನು ಅರಿಯದೆ ಒಂದೆಡೆ ಅವಲಂಬಿತರ ಮೆಡಿಕಲ್‌ ವೆಚ್ಚವನ್ನೂ ಭರಿಸಿ ಇನ್ನೊಂದೆಡೆ ತಮ್ಮ ಕರ ವಿನಾಯಿತಿಗಾಗಿ 1.5 ಲಕ್ಷ ರೂ. ಡೆಪಾಸಿಟ್‌ ಮಾಡಲೂ ಹೆಣಗಾಡುತ್ತಾ ದಿನ ದೂಡುವವರಿದ್ದಾರೆ. ಇದು ಹಲವರನ್ನು ವಿಪರೀತ ಆರ್ಥಿಕ ಸಂಕಷ್ಟಕ್ಕೆ ಗುರಿ ಮಾಡುತ್ತದೆ. ಅಂತಹ ವಿಶೇಷ ಸಂದರ್ಭಗಳಲ್ಲಿ ಮೆಡಿಕಲ್‌ ಕಾರಣಕ್ಕೆ ಸಿಗುವ ಕರ ವಿನಾಯಿತಿಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಬಹುತೇಕರಿಗೆ ಯಾವ ಡೆಪಾಸಿಟ್ಟೂ ಮಾಡುವ ಅಗತ್ಯ ಬರುವುದಿಲ್ಲ.

ಈ ಕೆಳಗಿನ ಸೆಕ್ಷನ್ನುಗಳನ್ನು ಸ್ವಲ್ಪ ಕೂಲಂಕಷವಾಗಿ ಅಧ್ಯಯನ ಮಾಡಿ:
ವೈದ್ಯಕೀಯ ಸಂಬಂಧಿತ ಸೆಕ್ಷನ್ನುಗಳು: (ವಿತ್ತ ವರ್ಷ 2017-18,ಅಂದರೆ ಪ್ರಸ್ತುತ ಫೈಲಿಂಗ್‌ ಮಾಡುವ ಅಸೆಸ್ಮೆಂಟ್‌ ವರ್ಷ 2018-19ಕ್ಕೆ ಸಂಬಂಧ ಪಟ್ಟಂತೆ)
1)ಆರೋಗ್ಯ ವಿಮಾ ಪ್ರೀಮಿಯಂ ಮೇಲೆ ವಿನಾಯಿತಿ
(ಸೆಕ್ಷನ್‌ 80 ಈ) ಸ್ವಂತ, ಪತಿ/ಪತ್ನಿ ಮತ್ತು ಅವಲಂಬಿತ ಮಕ್ಕಳ ಆರೋಗ್ಯ ವಿಮೆ ಗಾಗಿ ಕಟ್ಟಿದ ಪ್ರೀಮಿಯಂ ಮೊತ್ತಕ್ಕೆ ವಾರ್ಷಿಕ ರೂ. 25,000 ಮಿತಿಯೊಳಗೆ ಕರ ವಿನಾಯಿತಿ ದೊರಕುತ್ತದೆ. ಇವರೊಳಗೆ ಯಾರೊಬ್ಬರೂ 60 ವಯಸ್ಸು ಮೀರಿದ ಹಿರಿಯ ನಾಗರಿಕರಾಗಿದ್ದಲ್ಲಿ ಈ ಮಿತಿ ವಾರ್ಷಿಕ ರೂ. 30,000 ಆಗಿರುತ್ತದೆ.

ಅದಲ್ಲದೆ ತೆರಿಗೆದಾರನ ಹೆತ್ತವರ ಆರೋಗ್ಯ ವಿಮಾ ಪ್ರೀಮಿ ಯಂಗೆ ಕೂಡಾ ಪ್ರತ್ಯೇಕ ರೂ. 25,000 ಮಿತಿಯೊಳಗೆ ಕರ ವಿನಾಯಿತಿ ಇದೆ. ವಿಮೆಗೊಳಗಾದ ಹೆತ್ತವರಲ್ಲಿ ಒಬ್ಬರಾದರೂ 60 ವಯಸ್ಸು ಮೀರಿದ ಹಿರಿಯ ನಾಗರಿಕರಾಗಿದ್ದಲ್ಲಿ ಈ ಮಿತಿ ವಾರ್ಷಿಕ ರೂ. 30,000 ಆಗಿರುತ್ತದೆ. ಹೆತ್ತವರು ತೆರಿಗೆ ದಾರನ ಮೇಲೆ ಅವಲಂಬಿತರಾಗಿರಬೇಕೆಂಬ ಯಾವುದೇ ಅಗತ್ಯ ಇಲ್ಲಿ ಇರುವುದಿಲ್ಲ. ಮೇಲ್ಕಾಣಿಸಿದ ಒಬ್ಟಾತನ 80ಈ ಒಟ್ಟಾರೆ ಮಿತಿಗಳೊಳಗೆ ರೂ. 5,000 ಮೊತ್ತದ ಒಳಮಿತಿಯನ್ನು ವೈದ್ಯಕೀಯ ತಪಾಸಣೆಗಾಗಿ ((Preventive Health Check-up) ಬಳಸಬಹುದು. ಈ ಮೂಲಕ ಕೇವಲ ಆರೋಗ್ಯ ವಿಮೆಯಲ್ಲದೆ ವಾರ್ಷಿಕ ವೈದ್ಯಕೀಯ ತಪಾಸಣೆ ನಡೆಸುವಲ್ಲಿ ಕೂಡಾ ಕರ ವಿನಾಯಿತಿ ದೊರಕುತ್ತದೆ.

ವಿಮಾ ಪ್ರೀಮಿಯಂ ಪಾವತಿ ಮಾಡದ 80 ದಾಟಿದ ಹಿರಿಯ ನಾಗರಿಕರಿಗೆ (ಅಂದರೆ ಮೆಡಿಕಲ್‌ ವಿಮೆ ಇಲ್ಲದವರು) ಅವರ ಸಂಪೂರ್ಣ ಮಿತಿಯನ್ನು ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು. ಈ ರೀತಿ ಸ್ವಂತ ಕುಟುಂಬ ಹಾಗೂ ಹೆತ್ತವರನ್ನು ವಿಮೆಗೆ ಒಳಪಡಿಸಿ ವಾರ್ಷಿಕ ರೂ.50,000-60,000ದ ವರೆಗೆ ಕರ ವಿನಾಯಿತಿ ಪಡಕೊಳ್ಳಬಹುದು. ಸಂಬಂಧಿತ ಬಿಲ್/ರಶೀದಿಗಳನ್ನು ತೆಗೆದಿರಿಸಿ.

2) ವಿಭಿನ್ನ ಸಾಮರ್ಥ್ಯದ ಅವಲಂಬಿತರ ವೈದ್ಯಕೀಯ ಚಿಕಿತ್ಸೆ ಸಹಿತ ಪಾಲನೆ (ಸೆಕ್ಷನ್‌ 80DD)
ಈ ಸೆಕ್ಷನ್ನಿನಲ್ಲಿ ತೆರಿಗೆ ನೀಡುವ ವ್ಯಕ್ತಿಗೆ ತನ್ನ ಮೇಲೆ ಅವಲಂಬಿತರಾಗಿ ಯಾರಾದರು ವಿಭಿನ್ನ ಸಾಮರ್ಥ್ಯದವರು ಇದ್ದಲ್ಲಿ ತಾನು ಕಟ್ಟುವ ತೆರಿಗೆಯಲ್ಲಿ ವಿನಾಯಿತಿ ಸಿಗುತ್ತದೆ. ಇಲ್ಲಿ ಡಿಸೆಬಿಲಿಟಿ ಅವಲಂಬಿತರಿಗೆ ಆದರೆ ತೆರಿಗೆ ವಿನಾಯಿತಿ ಅವರ ಪಾಲಕರಿಗೆ ಲಭಿಸುತ್ತದೆ.

ಅವಲಂಬಿತರ ವೈದ್ಯಕೀಯ (ನರ್ಸಿಂಗ್‌ ಸಹಿತ), ತರಬೇತಿ ಮತ್ತು ಪುನರ್ವಸತಿಗಾಗಿ ಖರ್ಚು ಮಾಡಿದ ಮೊತ್ತ ಅಥವಾ ಅವರ ಪಾಲನೆಯ ಉದ್ದೇಶದಿಂದಲೇ ಚಾಲ್ತಿಯಲ್ಲಿರುವ ವಿಮಾ ಪಾಲಿಸಿಗಳಿಗೆ ಕಟ್ಟಿದ ಮೊತ್ತ – ಇವುಗಳು ಪಾಲಕರ ಕರ ವಿನಾಯತಿಗೆ ಅರ್ಹವಾಗಿರುತ್ತದೆ. ಈ ಸಲುವಾಗಿಯೇ ಜೀವನ್‌ ಆಧಾರ್‌ ಎಂಬ ಪಾಲಿಸಿಯನ್ನು ಎಲ್ಲೆ„ಸಿಯು ಮಾರುಕಟ್ಟೆಗೆ ತಂದಿದೆ.

ಈ ಸೆಕ್ಷನ್‌ ಸೌಲಭ್ಯವು ಅಂಗವಿಕಲತೆಯಲ್ಲದೆ ಆಟಿಸಂ, ಸೆರೆಬ್ರಲ್‌ ಪಾಲ್ಸಿ ಮತ್ತು ಮಲ್ಟಿಪಲ್‌ ಡಿಸೇಬಿಲಿಟಿ ಪೀಡಿತ ಅವಲಂಬಿಗಳುಳ್ಳವರಿಗೂ ಈಗ ಲಭ್ಯ. ಈ ಸೆಕ್ಷನ್‌ ಪ್ರಕಾರ ಶೇ.40-ಶೇ.80 ಊನ ಉಳ್ಳವರ ಸಂದರ್ಭದಲ್ಲಿ ವಾರ್ಷಿಕ ರೂ. 75,000ವನ್ನು ನೇರವಾಗಿ ಪಾಲಕರ
ಆದಾಯದಿಂದ ಕಳೆಯಬಹುದಾಗಿದೆ. ಶೇ.80 ಕ್ಕೂ ಜಾಸ್ತಿ ಊನವುಳ್ಳ ಅವಲಂಬಿತರು ಇರುವವರಿಗೆ ವಿನಾಯತಿಯ ಈ ಮೊತ್ತ ವಾರ್ಷಿಕ ರೂ. 1,25,000 ಆಗಿದೆ. ಅರ್ಹ ತೆರಿಗೆದಾರರ ನಿಜವಾದ ವೆಚ್ಚ ಈ ಮಿತಿಗಿಂತ ಎಷ್ಟೇ ಕಡಿಮೆ/ಜಾಸ್ತಿ ಆಗಿದ್ದರೂ ಪರವಾಗಿಲ್ಲ; ಈ ಪರಿಸ್ಥಿತಿ ಇದ್ದರೆ ಆಯಿತು, ಶೇಕಡಾವಾರು ಊನತೆಯ ಅನುಸಾರ ವಿನಾಯತಿಯ ಸಂಪೂರ್ಣ ಮಿತಿಯನ್ನು ಅವರು ಪಡಕೊಳ್ಳಬಹುದು. ಅವಲಂಬಿತರ ಪಾಲನೆಯೂ ಸೇರಿರುವ ಕಾರಣ ವಾಸ್ತವಿಕ ಖರ್ಚಿನ ಮಿತಿ ಈ ಸೆಕ್ಷನ್ನಿಗೆ ಇಲ್ಲ ಎನ್ನುವುದು ಅತ್ಯಂತ ಗಮನಾರ್ಹ ವಿಚಾರ. 

ಇಂತಹ ಪರಿಸ್ಥಿತಿಯನ್ನು ಪ್ರಮಾಣಪಡಿಸಲು ನಿಗದಿತ ನಮೂನೆಯಲ್ಲಿ ಜಿಲ್ಲಾ ಸರ್ಜನ್‌ (ಸರಕಾರಿ) ಅವರ ಪ್ರಮಾಣ ಪತ್ರ ಕಡ್ಡಾಯವಾಗಿ ಅಗತ್ಯ. ಅದರ ಜೊತೆಗೆ ಚಿಕಿತ್ಸೆಯ ಬಿಲ್, ಇನ್ಶೂರನ್ಸ್‌ ರಶೀದಿಗಳನ್ನು ಇಟ್ಟುಕೊಂಡರೆ ಉತ್ತಮ, ಬೇಕೇಂದೇನೂ ಕಡ್ಡಾಯವಿಲ್ಲ. ಒಂದು ಪ್ರಮಾಣ ಪತ್ರದ ವಾಯಿದೆ/ಅರ್ಹತೆ ತೀರಿಹೋದಲ್ಲಿ ಇನ್ನೊಂದು ಹೊಸ ಪ್ರಮಾಣ ಪತ್ರ ಪಡಕೊಳ್ಳುವುದು ಅಗತ್ಯ. ವಾಯಿದೆ ಕಳೆದ
ಪ್ರಮಾಣ ಪತ್ರದ ಮೇರೆಗೆ ಕರ ವಿನಾಯಿತಿ ಸಿಗಲಾರದು. 

ಈ ಸೌಲಭ್ಯಕ್ಕಾಗಿ ಅವಲಂಬಿತರು ಎಂದರೆ ತೆರಿಗೆದಾರನ/ಳ ಪತ್ನಿ/ಪತಿ, ಮಕ್ಕಳು, ಹೆತ್ತವರು, ಸಹೋದರ/ಸಹೋದರಿಯರು ಎಂದು ಕಟ್ಟುನಿಟ್ಟಾಗಿ ನಿರ್ದೇಶಿಸಲಾಗಿದೆ. ಬೇರಾವುದೇ ರೀತಿಯ ಸಂಬಂಧಿಗಳು ಅವಲಂಬಿತರಾದರೂ (ಉದಾ: ಅಜ್ಜ/ಅಜ್ಜಿ, ಸೊಸೆ/ಅಳಿಯ, ಮೊಮ್ಮಕ್ಕಳು) ಈ ಸೌಲಭ್ಯಕ್ಕೆ ಅನರ್ಹರಾಗುತ್ತಾರೆ. ಆದರೆ ಒಂದು ಹಿಂದೂ ಅವಿಭಕ್ತ ಕುಟುಂಬದ ((HUF) ಸಂದರ್ಭದಲ್ಲಿ ಯಾವುದೇ ಅವಲಂಬಿತ ಸದಸ್ಯರ ಸಲುವಾಗಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

3)ಸ್ವಂತ ವಿಭಿನ್ನ ಸಾಮರ್ಥ್ಯವುಳ್ಳವರಿಗೆ ರಿಯಾಯಿತಿ(ಸೆಕ್ಷನ್‌ 80 U)
ಮೇಲೆ ತಿಳಿಸಿದ ಊನತೆಗಳು ಸ್ವತಃ ತೆರಿಗೆದಾರನಿಗೇ ಇದ್ದಲ್ಲಿ ಈ ಸೆಕ್ಷನ್‌ ಅಡಿಯಲ್ಲಿ ಮೇಲೆ ತಿಳಿಸಿದ ಮೊತ್ತಗಳ ರಿಯಾಯತಿಯನ್ನು ಸಿಗುತ್ತವೆ. ವಿಮಾ ಪಾಲಿಸಿಗಳ ಸೌಲಭ್ಯ ಇಲ್ಲಿ ಲಾಗೂ ಆಗುವುದಿಲ್ಲ. ಜಿಲ್ಲಾ ಸರ್ಜನ್‌ ಪ್ರಮಾಣ ಪತ್ರ ಅಗತ್ಯ.

4) ಸ್ವಂತ ಮತ್ತು ಅವಲಂಬಿತರ ವೈದ್ಯಕೀಯ ಚಿಕಿತ್ಸೆ(ಸೆಕ್ಷನ್‌ 80DDB)
ತೆರಿಗೆದಾರನ ಸ್ವಂತಕ್ಕೆ ಮತ್ತು ಮೇಲೆ ತಿಳಿಸಿದಂತಹ ಸಂಬಂಧವುಳ್ಳ ಅವಲಂಬಿತರಿಗೆ ಕೆಲವು ನಿರ್ದಿಷ್ಟ ಕಾಯಿಲೆಗಳಿದ್ದರೆ ಅದರ ಚಿಕಿತ್ಸೆಗಾಗಿ ಮಾಡಿದ ವಾಸ್ತವಿಕ ಖರ್ಚು – ಅಥವಾ ರೂ. 40,000 ಯಾವುದು ಕಡಿಮೆಯೋ ಅದು ತೆರಿಗೆ ವಿನಾಯತಿಗೆ ಒಳಪಡುತ್ತದೆ. ಖರ್ಚು 60 ವರ್ಷ ಮೀರಿದ ಓರ್ವ ಹಿರಿಯ  ನಾಗರಿಕರ ಮೇಲೆ ಮಾಡಿದ್ದಾದರೆ ಈ ಮಿತಿಯು ರೂ. 60,000 ಆಗಿರುತ್ತದೆ, ಹಾಗೂ 80 ದಾಟಿದ ಅತಿ ವರಿಷ್ಠರಿಗೆ ರೂ. 80,000. ಈ ಸೌಲಭ್ಯಕ್ಕೆ ಮಾಡಿದ ಖರ್ಚಿನ ಪುರಾವೆಯಾಗಿ ಬಿಲ್ಲುಗಳನ್ನು ತೆಗೆದಿರಿಸುವುದು ಅತ್ಯಗತ್ಯ ಮತ್ತು ಜೊತೆಗೆ ಅನಾರೋಗ್ಯದ ಪುರಾವೆಯಾಗಿ ಒಬ್ಬ ಸರಕಾರಿ ಆಸ್ಪತ್ರೆಯ ತತ್ಸಂಬಂಧಿತ ಸ್ಪೆಷಲಿಸ್ಟ್‌ ವೈದ್ಯರ ಪ್ರಮಾಣ ಪತ್ರವೂ ಅಗತ್ಯ.

ಈ ಸೆಕ್ಷನ್‌ ಕೆಲವು ನಿಗದಿತ ಗಂಭೀರ ಕಾಯಿಲೆಗಳಿಗೆ ಮಾತ್ರ ಲಭ್ಯ. ಈ ಪಟ್ಟಿಯಲ್ಲಿ ಶೇ.40 ಮೀರಿದ ನರ ಸಂಬಂಧಿ 
(ಡಿಮೆನ್ಶಿಯ, ಪಾರ್ಕಿನ್ಸನ್‌, ಇತ್ಯಾದಿ) ಕಾಯಿಲೆಗಳು, ಕ್ಯಾನ್ಸರ್‌, ಉಲ್ಬಣಗೊಂಡ ಏಡ್ಸ್‌, ಕ್ರೋನಿಕ್‌ ರೀನಲ್‌ ಸಮಸ್ಯೆ, ರಕ್ತ ಸಂಬಂಧಿ
ಹಿಮೋಫಿಲಿಯ, ಥಲಸೇಮಿಯಾ ಇತ್ಯಾದಿ ಖಾಯಿಲೆಗಳು ಸೇರಿಸಲ್ಪಟ್ಟಿವೆ. 

5) ನೌಕರರ ವೈದ್ಯಕೀಯ ಸೌಲಭ್ಯ (ಸೆಕ್ಷನ್‌ 17(2))
ಹೆಚ್ಚಿನ ಕಂಪೆನಿಗಳು ತಮ್ಮ ನೌಕರರಿಗೆ ಮೆಡಿಕಲ್‌ ಅಲೋವನ್ಸ್‌ ನೀಡುತ್ತವೆ. ಅಂತಹ ಸಂದರ್ಭಗಳಲ್ಲಿ ಒಬ್ಬ ನೌಕರ ತನ್ನ ಸ್ವಂತ ಮತ್ತು ಕುಟುಂಬಕ್ಕಾಗಿ ಖರ್ಚು ಮಾಡಿದ ವಾಸ್ತವಿಕ ವೆಚ್ಚಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಇದರ ವಾರ್ಷಿಕ ಮಿತಿ ಗರಿಷ್ಠ ರೂ. 15,000. ಇದಕ್ಕಾಗಿ ಮೆಡಿಕಲ್‌ ಬಿಲ್ಲುಗಳನ್ನು ತೆಗೆದಿರಿಸಿ ಕಂಪೆನಿಗೆ ತೋರಿಸತಕ್ಕದ್ದು. ಇದು ನೌಕರಿಯಲ್ಲಿರುವವರಿಗೆ ನೀಡಿರುವ ವಿಶೇಷ ಸೌಲಭ್ಯ.
ಈ ರೀತಿ ಅನಾರೋಗ್ಯದ ಮತ್ತು ವಿಭಿನ್ನ ಸಾಮರ್ಥ್ಯದ ವ್ಯಕ್ತಿಗಳಿಗೆ ಕೊಡಮಾಡಿದ ಸವಲತ್ತುಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಂಡರೆ ಕರ ಯೋಜನೆ ಸಫ‌ಲವಾದೀತು.

ಮೇಲೆ ಕಾಣಿಸಿದ ಎಲ್ಲಾ ಸಂದರ್ಭಗಳಲ್ಲೂ ಕರ ವಿನಾಯಿತಿ ಎಂದರೆ ಅರ್ಹ ಮೊತ್ತವನ್ನು ಆದಾಯದಿಂದ ನೇರವಾಗಿ ಕಳೆಯುವುದು. ನೌಕರರು ಈ ವಿವರಗಳನ್ನು ಸಂಸ್ಥೆಗೆ ನೀಡಿದರೆ ಸಂಬಳದಿಂದ ಟಿಡಿಎಸ್‌ ಕಡಿತವಾಗುವ ಮುನ್ನವೇ ಈ ರಿಯಾಯಿತಿ ಪಡೆದುಕೊಳ್ಳುವುದು ಉತ್ತಮ. ಆ ರೀತಿ ಮಾಡಲಾಗದವರು ಮತ್ತು ಸಂಬಳೇತರ ಇತರ ವರ್ಗದವರು ಈ ಕೆಲ ರಿಯಾಯಿತಿಯನ್ನು ರಿಟರ್ನ್ ಫೈಲ್‌ ಮಾಡುವ ಸಂದರ್ಭದಲ್ಲೂ ಪಡಕೊಳ್ಳಬಹುದು.

ರಿವೈಸ್ಡ್ ಫೈಲಿಂಗ್‌ ಮತ್ತದರ ವಿಧಾನ
ಆದಾಯ ಕರ ರಿಟರ್ನ್ ಫೈಲಿಂಗ್‌ನ ಕೊನೆಯ ದಿನಾಂಕವನ್ನು ಒಂದು ತಿಂಗಳ ಮಟ್ಟಿಗೆ ಅಂದರೆ ಆಗಸ್ಟ್‌ 31ರವರೆಗೆ ಮುಂದೂಡಿದ್ದು ಹಲವರಿಗೆ ನಿರಾಳವಾಗಿದೆ. ಈಗಾಗಲೇ ಕರಹೇಳಿಕೆ ಸಲ್ಲಿಕೆ ಮಾಡದವರು ಈಗ ಮಾಡಬಹುದು ಮತ್ತು ಈಗಾಗಲೇ ಮಾಡಿದವರು ಕೂಡಾ ತಮ್ಮ ಹೇಳಿಕೆಯಲ್ಲಿ ತಪ್ಪಿದ್ದರೆ ಅದನ್ನು ತಿದ್ದಿಕೊಂಡು ರಿವೈಸ್ಡ್ ಫೈಲಿಂಗ್‌ ಮಾಡಬಹುದು. ಹಾಗೆ ನೋಡಿದರೆ ರಿವೈಸ್ಡ್ ಫೈಲಿಂಗ್‌ ಮಾರ್ಚ್‌ 31, 2019ರ ಒಳಗೆ ಯಾವಾಗ ಬೇಕಾದರೂ ಮಾಡಬಹುದು. ಆದರೆ ಇಲಾಖೆಯು ನಿಮ್ಮ ಫೈಲಿಂಗ್‌ ಅನ್ನು ಪರಿಶೀಲಿಸಿ ಅಸೆಸ್ಮೆಂಟ್‌ ಆರ್ಡರ್‌ ಪಾಸ್‌ ಮಾಡಿದರೆ ಆ ಬಳಿಕ ಮಾಡಲು ಬರುವುದಿಲ್ಲ. ಹಾಗಾಗಿ ಯಾರಾದರು ಯಾವುದಾದರು ಅಂಶವನ್ನು ಹೇಳಿಕೆಯಲ್ಲಿ ಹೇಳಲು ಬಿಟ್ಟುಹೋಗಿದ್ದಿದ್ದಲ್ಲಿ ಅದನ್ನು ಈ ಕೂಡಲೇ ಸರಿ  ಪಡಿಸಿಕೊಂಡು ಒಂದು ರಿವೈಸ್ಡ್ ಫೈಲಿಂಗ್‌  ಮಾಡುವುದೊಳಿತು. ಇಲಾಖೆಯು ನಿಮ್ಮ ಹಳೆಯ ಹೇಳಿಕೆಯನ್ನು ಬಿಟ್ಟು ಹೊಸತನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ರಿವೈಸ್ಡ್ ಫೈಲಿಂಗ್‌ ವಿಧಾನ ಅತ್ಯಂತ ಸರಳ. ನೀವು ಈ ಮೊದಲು ಮಾಡಿದಂತೆಯೇ ಎಲ್ಲಾ ಎಂಟ್ರಿಗಳನ್ನು ಇನ್ನೊಮ್ಮೆ ಮಾಡಬೇಕು. ಪ್ರಥಮ ಪುಟದಲ್ಲಿ ಮಾತ್ರ “ರಿವೈಸ್ಡ್ ಫೈಲಿಂಗ್‌’ ಎಂಬ ಆಯ್ಕೆಯನ್ನು ಒತ್ತಬೇಕು. (ಮೊದಲ ಬಾರಿ “ಒರಿಜಿನಲ್’ ಎಂಬ ಆಯ್ಕೆ ಒತ್ತಿರುತ್ತೀರಿ) ಜೊತೆಗೆ ಅಲ್ಲೇ ಬಳಿಯಲ್ಲಿ ಹಳೆಯ ಫೈಲಿಂಗಿನ ಅಕ್ನೋಲೆಜ್ಮೆಂಟ್‌ ನಂಬರ್‌ ಹಾಗೂ ದಿನಾಂಕವನ್ನು ದಾಖಲಿಸಬೇಕು. ಅಷ್ಟು ಮಾಡಿದರೆ ಸಾಕು. ಬೇರೆಲ್ಲ ಪ್ರಕ್ರಿಯೆ ಡಿಟ್ಟೋ ಮೊದಲಿನ ಹಾಗೆಯೇ.

ಟಾಪ್ ನ್ಯೂಸ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

6

Malpe ಬೀಚ್‌ ಸ್ವಚ್ಛತೆ: 3 ದಿನದಲ್ಲಿ 26 ಲೋಡ್‌ ಕಸ ಸಂಗ್ರಹ

5

Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ

4

Kaup: ಬೆಳಪು ಆಸ್ಪತ್ರೆಗೆ ವಿಟಮಿನ್‌ಎಂ ಕೊರತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.