ಶ್ರೀಮಾನ್‌ ಗುರುಗುಂಟಿರಾಯರ ತಲೆಗೂದಲ ಸೂಚ್ಯಂಕ 


Team Udayavani, Apr 16, 2018, 9:34 AM IST

index.jpg

ಒಂದು ಕ್ಯಾಪಿಟಲ್‌ ಅಸೆಟ್‌ ಅನ್ನು ಖರೀದಿಸಿ ಇಟ್ಟಲ್ಲಿ ದೇಶದಲ್ಲಿ ತಾಂಡವವಾಡುತ್ತಿರುವ ಹಣದು ಬ್ಬರದ ಕಾರಣದಿಂದಲೇ ಅದು ಸಾಕಷ್ಟು ಬೆಲೆಯೇರಿಸಿಕೊಳ್ಳುತ್ತದೆ. ಆದ್ದರಿಂದ ಯಾವುದೇ ನೈಜವಾದ ಲಾಭ ಇಲ್ಲದೆ ಆ ಅಸ್ತಿಯನ್ನು ಮಾರುವಾಗ ಅನ್ಯಾಯವಾಗಿ ನಾವು ಹಣದುಬ್ಬರದ ಮೇಲೆ ಟ್ಯಾಕ್ಸ್‌ ನೀಡಿದಂತಾಗುತ್ತದೆ. 

Market correction – What happens the day after you buy stocks……….. Anonymous
ಮಾರ್ಕೆಟ್‌ ಕರೆಕ್ಷನ್‌- ನೀವು ಶೇರು ಕೊಂಡ ಮರುದಿನ ನಡೆಯುವಂತದ್ದು. . . ಅನಾಮಿಕ.
ಮೊನ್ನೆ ಗುರುವಾರ ಒಂದು ಪತ್ರ ಬಂದಿತ್ತು. . .

ಮಾನ್ಯ ಶ್ರೀ ಜಯದೇವ ಪ್ರಸಾದ ಮೊಳೆಯಾರರಿಗೆ ಈ ಬಿರುಬಿಸಿಲಿನ ಕಾಲದ ಸಕಾಲಿಕ ನಮಸ್ಕಾರ!
ನೀವು ಹಾಸ್ಯಮಯ ಶೈಲಿಯಲ್ಲಿ ಸರಳ ಸುಂದರವಾಗಿ ನಿರೂಪಿಸುತ್ತಿರುವ ಕಾಸು-ಕುಡಿಕೆಯ ಎÇÉಾ ಲೇಖನಗಳೂ ಇಷ್ಟವಾಗುತ್ತವೆ. 

ಆದರೆ ಒಂದು ತಕರಾರು. . . ಹಿಂದೊಮ್ಮೆ ದೀಪ್ತಿಯ ಮೊಗ ವನ್ನು ವರ್ಣಿಸುತ್ತಾ ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ನಲ್ಲಿ ಇಂಡೆಕ್ಸೇಶನ್‌ ಬಗ್ಗೆ ಸಂಕ್ಷಿಪ್ತವಾಗಿ ಟಿಪ್ಪಣಿ ಕೊಟ್ಟು ಕೈತೊಳೆದುಕೊಂಡಿದ್ದೀರಿ. ಬಳಿಕ ಇನ್ನೊಂದು ಕಾಕುನಲ್ಲೂ ಡಿ.ಟಿ.ಸಿ. ಬಗ್ಗೆ ಬರೆಯುತ್ತಾ ಮತ್ತು ಮಗದೊಮ್ಮೆ ಜಗದೀಶರ ಎಫ್.ಎಮ….ಪಿ. ಬಗ್ಗೆ ಬರೆಯುತ್ತಾ ಪದೇ ಪದೇ ಈ ಇಂಡೆಕ್ಸೇಶನ್‌ ಬಗ್ಗೆ ಕೇವಲ ಪ್ರಸ್ತಾಪ ಮಾತ್ರ ಮಾಡಿ ಪುನಃ ಪುನಃ ಕೈತೊಳೆದುಕೊಂಡಿದ್ದೀರಿ. ಈ ರೀತಿ ನೀವು ಕೈತೊಳೆಯುತ್ತಾ ಹೋಗುತ್ತಿದ್ದರೆ ನಿಮ್ಮ ಕೈ ಚೆನ್ನಾಗಿ ಹೊಳೆಯಲು ಆರಂಭಿಸೀತೇ ಹೊರತು ನಮ್ಮ ತಲೆಯಲ್ಲಿ ಇಂಡೆಕ್ಸೇಶನ್‌ ಬಗ್ಗೆ ಮಾತ್ರ ಏನೇನೂ ಐಡಿಯ ಹೊಳೆಯಲಾರದು. ನೀವು ಅಲ್ಲಿ ಕೊಟ್ಟ ಟಿಪ್ಪಣಿಗಳು ತಾರ್ಕಿಕ ನೆಲೆಯಲ್ಲಿ ಅರ್ಥವಾದರೂ, ನಿಮ್ಮ ಆಂಧ್ರದ ಭಾಷೆಯಲ್ಲಿ ಹೇಳುವುದಾದರೆ, ಅದನ್ನು ಇನ್ನೂ ವಿಷದವಾಗಿ ಉದಾಹರಣೆಯೊಂದಿಗೆ ಚೆಪ್ಪಿದರೆ ಮಾತ್ರವೇ ನಮ್ಮಂತಹ ಗಟ್ಟಿತಲೆಯವರಿಗೆ ಇನ್ನೂ ಚೆನ್ನಾಗಿ ಅರ್ಥವಾದೀತು. ಹಾಗಾಗಿ ದಯವಿಟ್ಟು ಇಂಡೆಕ್ಸೇಶನ್‌ ಬಗ್ಗೆ ಇನ್ನೂ ಡಿಟೇಲ್‌ ಆಗಿ ತಾವು ಬರೆಯುವಂತವರಾಗಬೇಕು. 
ನಮಸ್ಕಾರ, ಗುಡ್ಡೆ.
ಇತೀ ನಿಮ್ಮ, 
“ಎಕ್ಸ್‌ ವೈ ಜೆಡ್‌’

(ಹೆಸರು ಹಾಕಲು ಅವರ ಪರ್ಮಿಶನ್‌ ತೆಗೆದುಕೊಳ್ಳಲು ಸಮಯವಾಗದಿದ್ದ ಕಾರಣ “ಎಕ್ಸ್‌ ವೈ ಜೆಡ್‌’ ಎಂದು ಹಾಕಿದ್ದೇನೆಯೇ ಹೊರತು ಅದು ಅವರ ನಿಜ ನಾಮಧೇಯವಲ್ಲ. ಕಾಕುವಿನ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವ ಯಾರನ್ನೂ ಅವರ ಅನುಮತಿಯಿಲ್ಲದೆ ಇಲ್ಲಿ ಹೆಸರಿಸುವುದಿಲ್ಲ. ಇದು ನಾನು ಮೊದಲಿನಿಂದಲೂ ನಡೆಸಿಕೊಂಡು ಬಂದಂತಹ ಪರಿಪಾಠ)

ನನ್ನದೇ ಇರ್ಟಾ„ಲಿನಲ್ಲಿ ಪತ್ರ ಬರೆದ ಶ್ರೀಮಾನ್‌ ಎಕ್ಸ್‌ವೈಜೆಡ್ಡರಿಗೆ ಧನ್ಯವಾದಗಳು. ಕಾಕುವಿನಲ್ಲಿ ಸರಳವಾಗಿ ವಿವರಿಸುವುದರ ಬಗ್ಗೆಯೇ ಜಾಸ್ತಿ ಒತ್ತುಕೊಡುತ್ತೇನೆ. ಆದರೂ ಹಣಕಾಸಿನ ಮೂಲ ಭೂತ ಲೆಕ್ಕಾಚಾರದ ಬಗ್ಗೆ ಅಲ್ಪಸ್ವಲ್ಪ ಕನಿಷ್ಟ ಜ್ಞಾನ ಇಲ್ಲದವರಿಗೆ ಕೆಲವು ಭಾಗಗಳು ಅರ್ಥವಾಗಲಾರದೇನೋ? ಇಂಡೆಕ್ಸೇಶನ್‌ ಕೂಡಾ ಒಂದು ಸ್ವಲ್ಪ ಹಾಗೇನೇ. ಎಕ್ಸ್‌ವೈಜೆಡ್ಡರು ಕೇಳಿಕೊಂಡ ಕಾರಣ ಈ ಬಾರಿ ಇಂಡೆಕ್ಸೇಶನ್‌ ಬಗ್ಗೆ ನನ್ನ ಕೊರೆತವನ್ನು ಸಹಿಸಿಕೊಳ್ಳಿ. . .
***
ಬಾಂಬೆ ಮಾರುಕಟ್ಟೆಯ ಸೂಚ್ಯಂಕ ಯಾನೆ ಸೆನ್ಸಿಟಿವ್‌ ಇಂಡೆಕ್ಸ್‌ ಯಾನೆ ಸೆನ್ಸೆಕ್ಸ್‌, ಹೋಲ್‌ಸೇಲ್‌ ಪ್ರೈಸ್‌ ಇಂಡೆಕ್ಸ್‌ ಯಾನೆ ಸಗಟು ದರ ಸೂಚ್ಯಂಕ, ಕನ್ಸೂ$Âಮರ್‌ ಪ್ರೈಸ್‌ ಇಂಡೆಕ್ಸ್‌ ಯಾನೆ ಗ್ರಾಹಕ ದರ ಸೂಚ್ಯಂಕ, ಆದಾಯ ತೆರಿಗೆ ಕಾನೂನಿನಲ್ಲಿ ಬರುವಂತೆ ಇಂಡೆಕ್ಸೇಶನ್‌ ಬಳಿಕ ಶೇ.20 ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ ಇತ್ಯಾದಿ ಇಂಡೆಕ್ಸ್‌ ಅಥವಾ ಸೂಚ್ಯಂಕದ ಬಗ್ಗೆ ಹಲವಾರು ಕಡೆ ಕೇಳಿರುತ್ತೇವೆ. 

ಏನಿದು ಸೂಚ್ಯಂಕ? ಅಥವ ಇಂಡೆಕ್ಸ್‌?: ಗುರುಗುಂಟಿರಾಯರು 1970ರಲ್ಲಿ ನಾಲ್ಕಾಣೆಗೆ ಹತ್ತರಂತೆ ಅಂಬಟೆಕಾಯಿ ಖರೀದಿಸುತ್ತಿದ್ದುದನ್ನು ಕಾಕುವಿನಲ್ಲಿ ಹಳೆ ತಲೆಗಳಾದ ಓದುಗ ರೆಲ್ಲರೂ ಬಲ್ಲರು. ಅಂದರೆ 1 ಅಂಬಟೆಕಾಯಿಗೆ ಎರಡೂವರೆ ಪೈಸೆ. ಅದೇ ಈಗ ಒಂದು ಅಂಬಟೆಕಾಯಿಗೆ ಎರಡು ರುಪಾಯಿ ಆಗಿದೆ, ಅಂದರೆ ಇನ್ನೂರು ಪೈಸೆ! ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳಬಹುದು. 1970ರಲ್ಲಿ ಅಂಬಟೆಕಾಯಿಗೆ 100 ಅಂಕ (ಸೂಚ್ಯಂಕ)ಗಳಿದ್ದಲ್ಲಿ ಇಂದು 2018ರಲ್ಲಿ ಅದಕ್ಕೆ 200/2.5×100 ಅಂಕಗಳು ಅಂದರೆ 8000 ಅಂಕ (ಸೂಚ್ಯಂಕ)ಗಳು. 

ಹಾಗೆಯೇ ಗುರುಗುಂಟಿರಾಯರಿಗೆ 1970ರಲ್ಲಿ ತಲೆ ತುಂಬಾ ಕೂದಲು! ಸುಮಾರು 5 ಲಕ್ಷ ಇರಬಹುದು! ಅದೇ ಈಗ? ನಾಗಾನಾಥ್‌ ಬಿಡಿಸುವ ರಾಯರ ಚಿತ್ರವನ್ನು ನೋಡಿದರೆ ನಿಮಗೆ ಕೂಡಲೇ ತಿಳಿಯುತ್ತದೆ- ತಲೆಯ ಎಡದಲ್ಲಿಷ್ಟು, ಬಲದಲ್ಲಿಷ್ಟು. . . ಸುಮಾರು 500 ಇರಬಹುದೆನೋ? ಹಾಗಾಗಿ ಇಂದಿನ ತಾರೀಕಿನಲ್ಲಿ ಗುರುಗುಂಟಿರಾಯರ ತಲೆಕೂದಲಿನ ಇಂಡೆಕ್ಸ್‌ ಅಥವಾ ಸೂಚ್ಯಂಕ 500/500000×100= ಬರೇ 0.1!! 

ಅವತ್ತು ಒಂದು ದಿನ ಇದ್ದ ಅಂಕಿಯನ್ನು 100 ಎಂದು ತೆಗೆದುಕೊಂಡರೆ ಇವತ್ತಿನ ಅಂಕಿ ಎಷ್ಟಾಗುತ್ತದೆ ಎಂದು ಲೆಕ್ಕ ಹಾಕಿ ಹೇಳುವ ಸೂತ್ರ ಇದು. ಒಂದು ರೀತಿಯಲ್ಲಿ ಶೇಕಡಾವಾರು ಲೆಕ್ಕದ ತರ. ಈ ರೀತಿ ಸೂಚ್ಯಂಕವನ್ನು ಉಪಯೋಗಿಸಿದರೆ ಬೇಕಾದಂತೆ ಸಂದರ್ಭಾನುಸಾರ ಲೆಕ್ಕಾಚಾರದಲ್ಲಿ ಅದನ್ನು ಬಳಸಿಕೊಳ್ಳ ಬಹುದಾಗಿದೆ. ಕೆಳಗಿನ ಕೆಲವು ವಾಸ್ತವಿಕ ಬಳಕೆಗಳನ್ನು ಗಮನಿಸಿ:

ಶೇರುಕಟ್ಟೆಯ ಸೆನ್ಸಿಟಿವ್‌ ಇಂಡೆಕ್ಸ್‌: 1986ರಲ್ಲಿ 100 ಆಯ್ದ ಶೇರುಗಳ ಸರಾಸರಿ ಬೆಲೆಯನ್ನು 100 ಎಂದು ಇಟ್ಟುಕೊಂಡು ಪ್ರತಿದಿನ ಪ್ರತಿಕ್ಷಣ ಈಗಿನ ಸರಾಸರಿ ಬೆಲೆಯನ್ನು ಬಾಂಬೆ ಸೆನ್ಸಿಟಿವ್‌ ಸೂಚ್ಯಂಕವಾಗಿ ಪ್ರಕಟಿಸಲಾಗುತ್ತದೆ. ನಾವೆಲ್ಲರೂ ಈ ಅಂಕಿಯನ್ನು ಟಿವಿಯ ಕೆಳಗೆ ಒಂದು ನೀಲಿ ಅಥವಾ ಕೆಂಪು ಬಾಣದೊಡನೆ ಗುರುತಿಸುತ್ತೇವೆ.  

ಬೆಲೆಯೇರಿಕೆಯ ಸೂಚ್ಯಂಕ: ಒಬ್ಬ ಸಾಮಾನ್ಯ ವ್ಯಕ್ತಿ ಜೀವನಾವಶ್ಯಕವಾದ ಆಹಾರ, ಇಂಧನ ಹಾಗೂ ತಯಾರಾದ ಸರಕುಗಳನ್ನು ಒಂದು ನೈಜ ಪ್ರಮಾಣದಲ್ಲಿ ಖರೀದಿಸಲು ಬೇಕಾಗುವ ವೆಚ್ಚವನ್ನು ಇಟ್ಟುಕೊಂಡು ಬೆಲೆಯೇರಿಕೆ ಸೂಚ್ಯಂಕ ವನ್ನು ಪ್ರಕಟಿಸುತ್ತದೆ. ಹೊಸ ಪದ್ಧತಿಯ ಪ್ರಕಾರ 676 ಅಂತಹ ವಸ್ತುಗಳ ವೆಚ್ಚವನ್ನು, 2004-05 ಇಸವಿಯ ವೆಚ್ಚವನ್ನು 100 ಅಂಕ ಎಂದು ತಳಹದಿಯಾಗಿ ಇಟ್ಟುಕೊಂಡು ಪ್ರತಿ ತಿಂಗಳು/ವಾರ ಲೆಕ್ಕ ಹಾಕಿ ಸರಕಾರವು ಸಗಟು ಬೆಲೆಯೇರಿಕೆಯ ಸೂಚ್ಯಂಕ (Wholesale Price Index) ಅನ್ನು ಘೋಷಿಸುತ್ತದೆ. ಇದೇ ರೀತಿ ಪ್ರತಿ ತಿಂಗಳೂ ಗ್ರಾಹಕರ ಬೆಲೆಯೇರಿಕೆಯ ಸೂಚ್ಯಂಕವನ್ನೂ (Consumer Price Index)ಪ್ರಕಟಿಸುತ್ತದೆ. ಬೆಲೆಯೇರಿಕೆಯಲ್ಲಿ ಬದಲಾವಣೆಗಳನ್ನು ಇವುಗಳ ಮೂಲಕ ಅಥೆìçಸಿಕೊಳ್ಳಬಹುದು. ಅಲ್ಲದೆ ಸರಕಾರವು ತನ್ನ ನೌಕರರಿಗೆ ಭತ್ತೆಯನ್ನು (Dearness Alllowance) ಈ ಅಂಕಿಗಳ ಆಧಾರದ ಮೇಲೆಯೇ ನಿರ್ಧರಿಸುತ್ತದೆ. 

ಇಂಡೆಕ್ಸ್‌ ಆಧಾರಿತ ಕಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ : ಈಗ ಎಕ್ಸ್‌ ವೈಜೆಡ್ಡರು ಹೇಳಿದಂತಹ ನಾನು ಕೈತೊಳೆಯುವ ಕ್ಯಾಪಿಟಲ್‌ ಗೈನ್ಸ್‌ ಬಗ್ಗೆ ಬರೋಣ. ಯಾವುದೇ ಕ್ಯಾಪಿಟಲ್‌ ಕಾಲಕ್ರಮೇಣ ಬೆಳೆದು ಕೊನೆಗೊಂದು ದಿನ ಮಾರಲ್ಪಟ್ಟಾಗ ಅದರ ಮೇಲೆ ಲಾಭ ಉಂಟಾದರೆ ಕ್ಯಾಪಿಟಲ್‌ ಗೈನ್ಸ್‌ ಎಂದೂ ನಷ್ಟವಾದರೆ ಕ್ಯಾಪಿಟಲ್‌ ಲಾಸ್‌ ಎಂದೂ ಪರಿಗಣಿಸಲಾಗುತ್ತದೆ. ಈ ಆಧಾರದ ಮೇಲೆ ಆದಾಯಕರ ನೀತಿಯಲ್ಲಿ ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ ಕಾನೂನು ಅನ್ವಯವಾಗುತ್ತದೆ.

ಆದರೆ ಕ್ಯಾಪಿಟಲ್‌ ಗೈನ್ಸ್‌ ಬೆಲೆಯೇರಿಕೆಯ ಕಾರಣದಿಂದಲೂ ಉಂಟಾಗುತ್ತದೆ ಅಲ್ಲವೆ? ಒಂದು ಕ್ಯಾಪಿಟಲ್‌ ಅಸೆಟ್‌ ಅನ್ನು ಖರೀದಿಸಿ ಇಟ್ಟಲ್ಲಿ ದೇಶದಲ್ಲಿ ತಾಂಡವವಾಡುತ್ತಿರುವ ಹಣದು ಬ್ಬರದ ಕಾರಣದಿಂದಲೇ ಅದು ಸಾಕಷ್ಟು ಬೆಲೆಯೇರಿಸಿಕೊಳ್ಳುತ್ತದೆ. ಆದ್ದರಿಂದ ಯಾವುದೇ ನೈಜವಾದ ಲಾಭ ಇಲ್ಲದೆ ಆ ಅಸ್ತಿಯನ್ನು ಮಾರುವಾಗ ಅನ್ಯಾಯವಾಗಿ ನಾವು ಹಣದುಬ್ಬರದ ಮೇಲೆ ಟ್ಯಾಕ್ಸ್‌ ನೀಡಿದಂತಾಗುತ್ತದೆ. ಅಲ್ಲವೇ?

ಈ ಸಮಸ್ಯೆಯನ್ನು ನಿವಾರಿಸಲು ಸರಕಾರವು 1992ರಿಂದ ಆರಂಭಿಸಿ ಕ್ಯಾಪಿಟಲ್‌ ಗೈನ್ಸ್‌ನಲ್ಲಿ ಬೆಲೆಯೇರಿಕೆಯ ಪ್ರಭಾವವನ್ನು ತೆಗೆದು ಹಾಕಿ ನೈಜವಾದ ಲಾಭಾಂಶದ ಮೇಲೆ ಮಾತ್ರ ಕರ ಬೀಳುವಂತಹ ಒಂದ್‌ ಇಂಡೆಕ್ಸ್‌ ಪದ್ಧತಿಯನ್ನು ಆರಂಭಿಸಿತು. ಈ ಪದ್ಧತಿಯಲ್ಲಿ ಒಂದು ಅಸೆಟ್‌ ಅನ್ನು ಖರೀದಿಸಿ ಅಭಿವೃದ್ಧಿ ಪಡಿಸಿದ ವೆಚ್ಚಕ್ಕೆ ಅಂತಹ ಸಮಯದಿಂದ ಮಾರಾಟ ಮಾಡಿದ ಸಮಯದವರೆಗಿನ ಹಣದುಬ್ಬರದ ಪ್ರಮಾಣವನ್ನು ಒಂದು ಇಂಡೆಕ್ಸ್‌ ಅಥವಾ ಮಾಪದ ಅನುಸಾರ ಸೇರಿಸಲಾಗುತ್ತದೆ. ಕೊನೆಗೆ ಮಾರಿದ ಬೆಲೆಯಿಂದ ಅಂತಹ ಇಂಡೆಕ್ಸಿತ ವೆಚ್ಚವನ್ನು ಕಳೆಯ ಲಾಗುತ್ತದೆ. ಇದರಿಂದ ಬೆಲೆಯೇರಿಕೆಯ ಅಂಶ ಹೋಗಿ ಬರೇ ನೈಜ ಲಾಭಾಂಶದ ಮೇಲೆ ಮಾತ್ರ ಕರ ನೀಡಿದಂತಾಗುತ್ತದೆ.

ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ಗಾಗಿಯೇ 1982-83ರಿಂದ ಆರಂಭಿಸಿ ಸರಕಾರವು ಅಂತಹ ಒಂದು Cost Inflation Index (CII)ಅನ್ನು ಪ್ರಕಟಿಸಿದೆ ಹಾಗೂ ಪ್ರತೀ ವರ್ಷ ಅದನ್ನು ನವೀಕರಿಸುತ್ತಾ ಬಂದಿದೆ. 

ಈ ಟೇಬಲ್‌ ಬಳಸಿ ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ ಯಾವ ರೀತಿ ಲೆಕ್ಕ ಹಾಕಲಾಗುತ್ತದೆ? ಒಂದು ಉದಾಹರಣೆ ತಗೊಳ್ಳಿ:
ನವಂಬರ್‌ 1997ರಲ್ಲಿ ಒಂದು ಲಕ್ಷಕ್ಕೆ ಕೊಂಡ ಭೂಮಿಯನ್ನು ಡಿಸೆಂಬರ್‌ 2008ರಲ್ಲಿ 3 ಲಕ್ಷಕ್ಕೆ ಮಾರಲಾಗಿದೆ.
1997ರಲ್ಲಿ 1 ಲಕ್ಷ ವೆಚ್ಚಕ್ಕೆ ತೆಗೆದುಕೊಂಡ ಭೂಮಿಯನ್ನು ಇಂಡೆಕ್ಸ್‌ ಆಧಾರಿತ ರೀತಿಯಲ್ಲಿ ನೋಡಿದರೆ, ವೆಚ್ಚ 100000×2008-09ರ ಇಂಡೆಕ್ಸ್‌/1997-98ರ ಇಂಡೆಕ್ಸ್‌= 100000×582/331= 175830 ಆಗುತ್ತದೆ. ಈ ರೀತಿ 1997ರಲ್ಲಿ ಕೊಂಡ ರೂ. 100000 ವೆಚ್ಚವನ್ನು ಬೆಲೆಯೇರಿಕೆಯ ನಿಮಿತ್ತ ರೂ 175830 ಕ್ಕೆ ಹೆಚ್ಚಿಸಲಾಗಿದೆ. ಕೊನೆಗೊಮ್ಮೆ ಡಿಸೆಂಬರ್‌ 2008ರಲ್ಲಿ ಆ ಭೂಮಿಯನ್ನು ರೂ. 3 ಲಕ್ಷಕ್ಕೆ ಮಾರಿದಾಗ ಲಾಭ 300000-100000= ರೂ 200000 ಎಂದು ಸುಲಭವಾಗಿ ಹೇಳಬಹುದಾದರೂ ಇಂಡೆಕ್ಸ್‌ ಆಧಾರಿತ ಲಾಭ ಬರೇ 300000-175830= 124170 ರೂಪಾಯಿ! ಈಗ ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ ಬರೇ ರೂ.124170ರ ಮೇಲೆ ಶೇ.20 ದರದಲ್ಲಿ ಕೊಟ್ಟರೆ ಆಯಿತು.
ಈ ರೀತಿ ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ನಲ್ಲಿ ಬೆಲೆಯೇರಿಕೆಯ ಇಂಡೆಕ್ಸ್‌ ಅನುಸರಿಸಿ ಅದರ ಲಾಭವನ್ನು ಪಡೆಯಬಹುದಾಗಿದೆ. 

ಅಟ್ಯಾಚ್‌ಮೆಂಟ್‌: ಕಾಸು ಕುಡಿಕೆಯಂತಹ ಘನ ಗಂಭೀರ ವಿಷಯದ ಬಗ್ಗೆ ಕಾಲಂ ಬರೆಯ ಬೇಕು ಎಂಬ ವಿಚಾರ ಬಂದಾಗ ನಾನು ಸಾಕಷ್ಟು ಗೊಂದಲಕ್ಕೆ ಸಿಕ್ಕಿ ಬಿದ್ದಿ¨ªೆ. ಇಷ್ಟು ಸೀರಿಯಸ್‌ ವಿಚಾರವನ್ನು ಇನ್ನಷ್ಟು ಸೀರಿಯಸ್‌ ಗ್ರಾಂಥಿಕ ಶೈಲಿಯಲ್ಲಿ ಬರೆದರೆ ಅದನ್ನು ಓದುವವರು ಯಾರು? ಎಂಬ ಚಿಂತೆ ಸುರುವಾಯಿತು. ಯಾರು ಓದದಿದ್ದರೂ ಒಬ್ಬರಂತೂ ಖಂಡಿತಾ ಓದುಲೇ ಬೇಕು, ಬಿಡಿ – ಅದು ಯಾರೆಂದರೆ, ಪತ್ರಿಕೆಯ ಸಂಪಾದಕರು! ಅದರೆ ಅವರಾದರೂ ಎಷ್ಟು ಸಮಯ ಅಂತ ಆ ಶಿಕ್ಷೆ ಅನುಭವಿಸ್ಯಾರು ಪಾಪ ಅಲ್ಲವೇ? ಹಾಗೇ ಒಂದು ನಾಲ್ಕು ಎಪಿಸೋಡು ಪ್ರಿಂಟ್‌ ಹೊಡೆದ ಅನಂತರ ಇತ್ತೀಚೆಗೆ ನಮಗೂ ಕೂಡಾ ಇದನ್ನು ಓದಲು ಹಿಂಸೆಯಾಗುವ ಕಾರಣ ಈ ಕಾಲಂ ಅನ್ನು ಇಲ್ಲಿಗೇ ಮುಕ್ತಾಯಗೊಳಿಸಲಾಗಿದೆ. -ಸಂ’ ಅಂತ ಷರಾ ಬರೆದು ಕಾಲಂ ಅನ್ನು ನಿಲ್ಲಿಸಿಬಿಟ್ಟರೆ ಏನು ಗತಿ? ಎಂಬ ಭಯ ಕಾಡತೊಡಗಿತು.

ಹಾಗಾಗಿ ಪ್ರತೀ ಎಪಿಸೋಡಿನಲ್ಲಿಯೂ ಒಂದು ಸಣ್ಣ ಪುಟ್ಟ ಕತೆಯನ್ನು ಹಾಕಲು ಆರಂಭಿಸಿದೆ- ಓದು ಇಂಟರೆಸ್ಟಿಂಗ್‌ ಆಗಿರಲಿ ಅಂತ. ಕ್ರಮೇಣ ಕತೆಗಳಲ್ಲಿ ನನಗೆ ತುಸು ಸಹಜವಾಗಿಯೇ ಬರುವ ಹಾಸ್ಯ ತನ್ನ ಮೂಗು ತೂರಿಸತೊಡಗಿತು. ಬಳಿಕ ಸೋಮಯಾಜಿಯವರ ಕೃಪೆಯಿಂದ ಗುರುಗುಂಟಿರಾಯರು ಸಿಕ್ಕರು. ರಾಯ ರೊಡಗಿನ ಹಾಸ್ಯಮಯವಾದ ಸನ್ನಿವೇಶಗಳು ಓದುಗರಿಗೆ ಇಷ್ಟವಾಗತೊಡಗಿತು. 

ಹಾಗಾಗಿ ಕಾಸು-ಕುಡಿಕೆಯನ್ನು ಹಾಸ್ಯ ಪ್ರಧಾನವಾಗಿ ನಿರೂಪಿಸುತ್ತಾ ಬಂದಿದ್ದೇನೆ. ಅದು ಬರೇ ಓದುವಿಕೆಯ ಆನಂದಕ್ಕಾಗಿ ಮಾತ್ರ. ಇಲ್ಲಿ ಯಾವುದೇ ವ್ಯಕ್ತಿ, ವರ್ಗ ಅಥವ ಸನ್ನಿವೇಶವನ್ನು ಲೇವಡಿ ಅಥವಾ ವ್ಯಂಗ್ಯ ಮಾಡುವ ಉದ್ದೇಶ ಇರುವುದಿಲ್ಲ. ಇಲ್ಲಿ ಬರುವ ಎÇÉಾ ಪಾತ್ರ/ಸನ್ನಿವೇಶಗಳು ಕಾಲ್ಪನಿಕ ಮತ್ತು ಸುಮ್ನೆ ತಮಾಷೆಗಾಗಿ ಮಾತ್ರ. ಅವೆಲ್ಲವನ್ನೂ ಈ ಕಣ್ಣಿನಿಂದ ಓದಿ ಆ ಕಣ್ಣಿನಿಂದ ಬಿಟ್ಟರಾಯಿತು. ಸೀರಿಯಸ್ಲಿà ನಹೀ ಲೇನೇ ಕಾ; ಸಮ್ಜಾ ಕ್ಯಾ??

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

13-belagavi

ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು

Yasin Malik

SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ

11-uv-fusion

Cold Weather: ಕೊನೆಗೂ ಚಳಿ ಶುರು ಆಯ್ತು ಗುರು

AMit sha BJP

Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ

BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು

BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

13-belagavi

ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

Yasin Malik

SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ

ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.