ಎನ್‌ಪಿಎಸ್‌ ಎಂಬ ಅಗೆದಷ್ಟೂ ಮುಗಿಯದ ಬೆಟ್ಟ


Team Udayavani, Jan 7, 2019, 12:30 AM IST

nps-s.jpg

ಕಳೆದ ವಾರ ಎನ್‌.ಪಿ.ಎಸ್‌. ಬಗ್ಗೆ ಬರೆದದ್ದು ಹಲವರ ಕುತೂಹಲವನ್ನು ಕೆರಳಿಸಿದೆ. ನ್ಯಾಶನಲ್‌ ಪೆನ್ಶನ್‌ ಸ್ಕೀಮ್‌ (ಎನ್‌ಪಿಎಸ್‌) ಎನ್ನುವುದು ಒಂದು ಉತ್ತಮ ಯೋಜನೆಯೇ ಆದರೂ ಅದಕ್ಕೆ 3 ವಿಭಿನ್ನ ಮುಖಗಳಿವೆ. ಕೇಂದ್ರ ಸರಕಾರದ ಮಾದರಿ, ರಾಜ್ಯ ಸರಕಾರದ ಮಾದರಿ ಹಾಗೂ ಸಾರ್ವಜನಿಕರ ಮಾದರಿ. ಈ ಮೂರೂ ಮಾದರಿಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿವೆ. ಹಿಂದೆ ಜಾಸ್ತಿ ವ್ಯತ್ಯಾಸಗಳಿದ್ದು ಈಗೀಗ ಆ ವ್ಯತ್ಯಾಸಗಳು ಕಡಿಮೆಯಾಗಿವೆ ಆದರೂ ವ್ಯತ್ಯಾಸಗಳಿವೆ. ಬಹುತೇಕ ವ್ಯತ್ಯಾಸಗಳು ದೇಣಿಗೆ ಮತ್ತು ಹೂಡಿಕೆಯ ಶೈಲಿಗೆ ಸಂಬಂಧಪಟ್ಟವುಗಳು. ಆದರೂ ಬಹುತೇಕ ಅವುಗಳ ಮಧ್ಯೆ ಹೋಲಿಕೆಯೂ ಇವೆ.
 
ಆದರೂ ಸರಕಾರಿ ಮಾದರಿಯನ್ನು ಯಾವತ್ತಿಗೂ ಒಂದು ಬೇರೆಯೇ ದೃಷ್ಟಿಕೋನದಲ್ಲಿ ನೋಡಲಾಗುತ್ತದೆ. ಅದು ಏಕೆಂದರೆ, ಮಾದರಿಗಳ ನಡುವೆ ಇರುವ ವ್ಯತ್ಯಾಸಗಳಿಗಿಂತ ಜಾಸ್ತಿಯಾಗಿ ಸರಕಾರಿ ಮಾದರಿಯು ಎನ್‌ಪಿಎಸ್‌ ಜಾರಿಗೆ ಬರುವ ಹಿಂದಿನ (ಸುಮಾರು 10-15 ವರ್ಷ ಹಿಂದಿನ) ಸರಕಾರಿ ಪೆನ್ಶನ್‌ ಯೋಜನೆಯ ಜೊತೆಗೆ ಇವತ್ತಿಗೂ ಹೋಲಿಸಲಾಗುತ್ತದೆ. ಆ ಹೋಲಿಕೆಯಲ್ಲಿ ಎನ್‌ಪಿಎಸ್‌ ಯೋಜನೆಯು ಹಿಂದಿನ ಸರಕಾರಿ ಪೆನ್ಶನ್‌ ಯೋಜನೆಗಳಿಗಿಂತ ಕಡಿಮೆ ಪ್ರತಿಫ‌ಲ ನೀಡುವ ಕಾರಣ ಎನ್‌ಪಿಎಸ್‌ ಯೋಜನೆಗೆ ಸರಕಾರಿ ನೌಕರರ ವರ್ಗದಲ್ಲಿ ಉತ್ತಮ ಅಭಿಪ್ರಾಯ ಇರುವುದಿಲ್ಲ. ಅಷ್ಟೇ ಅಲ್ಲದೆ ಹಲವಾರು ರಾಜ್ಯಗಳ ಸರಕಾರಿ ನೌಕರರು ತಮ್ಮ ಸರಕಾರಿ ಎನ್‌ಪಿಎಸ್‌ ಮಾದರಿಯನ್ನು ರದ್ದುಗೊಳಿಸಿ ತಮಗೆ ಹಿಂದಿನ ಪಿಂಚಣಿ ವ್ಯವಸ್ಥೆಯನ್ನೇ ಖಾಯಂಗೊಳಿಸಬೇಕು ಎನ್ನುವ ಆಗ್ರಹದೊಂದಿಗೆ ಮುಷ್ಕರಕ್ಕೂ ಇಳಿದಿದ್ದಾರೆ. ಕರ್ನಾಟಕದಲ್ಲೂ ಈ ನಿಟ್ಟಿನಲ್ಲಿ ಮುಷ್ಕರ ಜಾರಿಯಲ್ಲಿದೆ. 

ಆದರೆ ಕಾಸು-ಕುಡಿಕೆಯಲ್ಲಿ ಬಹುತೇಕ ಲೇಖನಗಳನ್ನು ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಬರೆಯಲಾಗುತ್ತದೆ ಮತ್ತು ಸಾರ್ವಜನಿಕರಿಗೆ ಯಾವುದೇ ಸರಕಾರಿ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿ ಇಲ್ಲದ ಕಾರಣ ಹಳೆಯ ಸರಕಾರಿ ಪಿಂಚಣಿ ವ್ಯವಸ್ಥೆಯೊಂದಿಗೆ ಮಡಬಹುದಾದ ಹೋಲಿಕೆ ಕೂಡಾ ಅಪ್ರಸ್ತುತವಾಗುತ್ತದೆ. ಸಾರ್ವಜನಿಕರ ಎನ್‌ಪಿಎಸ್‌ ಯೋಜನೆಯು ಕೇವಲ ಪಿಪಿಎಫ್, ಇ.ಎಲ್‌ಎಸ್‌.ಎಸ್‌., ಯುಲಿಪ್‌., ಸುಕನ್ಯಾ ಸಮೃದ್ಧಿ, ಬ್ಯಾಂಕ್‌ ಎಫ್.ಡಿ., ಆರ್‌.ಡಿ., ಪೋಸ್ಟಾಫೀಸಿನ ಉಳಿತಾಯ ಯೋಜನೆಗಳು ಇತ್ಯಾದಿ ಸಾರ್ವಜನಿಕರ ಉಳಿತಾಯ ಹೂಡಿಕೆಗಳೊಡನೆ ಮಾತ್ರವೇ ಹೋಲಿಸಲಾಗುತ್ತದೆ. 

ಎನ್‌.ಪಿ.ಎಸ್‌. ಬಗ್ಗೆ ಯಾವುದೇ ಲೇಖನವನ್ನು ಓದುವಾಗಲೂ ಕೂಡಾ ಯಾವ ಮಾದರಿಯ ಬಗ್ಗೆ ಬರೆಯಲಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ಗಮನಿಸತಕ್ಕದ್ದು – ಸರಕಾರಿ ಯಾ ಸಾರ್ವಜನಿಕ? ಸರಕಾರಿ ಯೋಜನೆಯ ಬಗ್ಗೆ ಬರೆದಾಗಲೂ ಕೂಡಾ ಎನ್‌.ಪಿ.ಎಸ್‌. ನಲ್ಲಿ ಇವತ್ತಿನಿಂದ ನಾಳೆಗೆ ಬರಲಿರುವ ಉತ್ತಮ ಬದಲಾವಣೆಗಳ ಗುಣಾಂಶಗಳನ್ನು ಎತ್ತಿ ಹೇಳಿದರೆ ಅದು ಹಿಂದಿನ ಸರಕಾರಿ ಯೋಜನೆಗಿಂತಲೂ ಶ್ರೇಷ್ಠ ಎನ್ನುವ ಅರ್ಥ ಬರುವುದಿಲ್ಲ ಎನ್ನುವುದನ್ನೂ ಕೂಡಾ ಓದುಗರು ತಾಳ್ಮೆ ವಹಿಸಿ ಅರ್ಥಮಾಡಿಕೊಳ್ಳಬೇಕು. ಗಡಿಬಿಡಿಯಲ್ಲಿ ಎನ್‌.ಪಿ.ಎಸ್‌. ಯೋಜನೆಯ ವಿಭಿನ್ನ ಮುಖಗಳನ್ನು “ಸಜ್ಜಿಗೆ-ಬಜಿಲ್‌’ ಮಾಡಬಾರದಾಗಿ ವಿನಂತಿ. 

ಇದೀಗ ‘ಸಾರ್ವಜನಿಕ ಮಾದರಿ’ಯ ಎನ್‌.ಪಿ.ಎಸ್‌. ಬಗ್ಗೆ ಒಂದಿಷ್ಟು ಪ್ರಾಥಮಿಕ ಮಾಹಿತಿ:

ಖಾತೆ ತೆರೆಯುವುದು ಹೇಗೆ?
ನ್ಯಾಶನಲ್‌ ಪೆನ್ಶನ್‌ ಫ‌ಂಡ್‌ ಅಥವಾ ಎನ್‌ಪಿಎಸ್‌ ಅನ್ನು ಓರ್ವ ಅನಿವಾಸಿ ತನ್ನ ಬ್ಯಾಂಕ್‌ ಮುಖಾಂತರ ತೆರೆಯಬಹುದು. ಪೊಯಿಂಟ್‌ ಆಫ್ ಪ್ರಸೆನ್ಸ್‌ ಅಥವಾ ಪಿಓಪಿ ಎಂದು ಕರೆಯಲ್ಪಡುವ ಈ ಸೇವಾ ಕೇಂದ್ರಗಳು ದೇಶದ ಬಹುತೇಕ ಎಲ್ಲಾ ಸರಕಾರಿ/ಖಾಸಗಿ ಬ್ಯಾಂಕುಗಳಲ್ಲಿ, ಪೋಸ್ಟಾಫೀಸಿನಲ್ಲಿ, ಕಾರ್ವಿ/ಕ್ಯಾಮಸ್‌ನಂತಹ ಸೇವಾ ಕೇಂದ್ರಗಳಲ್ಲಿ ಇವೆ. ಈ ಸಂಸ್ಥೆಗಳು ತಮ್ಮ ಎಲ್ಲಾ
ಬ್ರಾಂಚುಗಳಲ್ಲೂ ಸೇವಾ ಕೇಂದ್ರಗಳನ್ನು ತೆರೆದಿರದಿದ್ದರೂ ಮುಖ್ಯ ಪಟ್ಟಣಗಳ ಮುಖ್ಯ ಬ್ರಾಂಚುಗಳಲ್ಲಿ ಎನ್‌.ಪಿ.ಎಸ್‌. ಖಾತೆಯನ್ನು ತೆರೆಯುವ ಸೌಲಭ್ಯವನ್ನು ನೀಡುತ್ತವೆ. ಈ ಬಗ್ಗೆ ವಿಚಾರಿಸಿ ನಿಮಗೆ ಅನುಕೂಲವಾದೆಡೆ ಎನ್‌.ಪಿ.ಎಸ್‌. ಖಾತೆಗೆ ಅರ್ಜಿ ಗುಜರಾಯಿಸಬಹುದು. ಎನ್‌.ಪಿ.ಎಸ್‌. ಖಾತೆಯನ್ನು ಆನ್‌ಲೈನ್‌ ಮುಖಾಂತರವೂ ಕೂಡಾ ತೆರೆಯಬಹುದು. 

ಫಾರ್ಮ್/ದಾಖಲೆಗಳು 
ಎನ್‌.ಪಿ.ಎಸ್‌.ಖಾತೆಗೆ ಅಗತ್ಯವಾದ ಎಲ್ಲಾ ಫಾರ್ಮುಗಳು ಬ್ಯಾಂಕುಗಳ ವೆಬ್‌ಸೈಟ್‌ ಅಥವಾ ಎನ್‌ಪಿಎಸ್‌ಸಿಆರ್‌ಐ ವೆಬ್‌ಸೈಟಿನಲ್ಲಿ ಪಡೆಯಬಹುದು. ಖಾತೆ ತೆರೆಯಲು ಸಿಎಸ್‌ಆರ್‌-1 ಫಾರ್ಮ್ ಅನ್ನೂ ಹೂಡಿಕೆಗೆ ಎನ್‌ಸಿಐಎಸ್‌ ಫಾರ್ಮನ್ನೂ ಬಳಸಬೇಕು. ಖಾತೆ ತೆರೆಯಲು ಈ ಕೆಳಗಿನ ದಾಖಲೆಗಳು ಅಗತ್ಯ: 
1.    ಸೂಕ್ತವಾಗಿ ತುಂಬಿದ ಅರ್ಜಿ ನಮೂನೆ, ಫೋಟೋ ಸಹಿತ
2.    ಗುರುತು ಪುರಾವೆ
3.    ವಿಳಾಸ ಪುರಾವೆ 
ಯಾರು ಅರ್ಹರು? 
ಇದೀಗ 18-65 ವರ್ಷ ವಯಸ್ಸಿನ ಎಲ್ಲಾ ಭಾರತಿಯರೂ (ಅನಿವಾಸಿಗಳೂ ಕೂಡಾ) ಈ ಖಾತೆಯನ್ನು ತೆರೆಯಬಹುದು. ಹಿಂದೆಲ್ಲಾ ಇದು 18-60 ಇತ್ತು. ಒಬ್ಟಾತ ಒಂದೇ ಖಾತೆಯನ್ನು ಮಾತ್ರ ಹೊಂದಿರಬಹುದು. ಅಲ್ಲದೆ ಜಂಟಿ ಹೆಸರುಗಳಲ್ಲಿ ಖಾತೆಗಳನ್ನು ತೆರೆಯಲಾಗುವುದಿಲ್ಲ. 

ಪ್ರಾಣ್‌ 
ಒಂದು ಎನ್‌.ಪಿ.ಎಸ್‌ ಖಾತೆ ಒಂದು ವಿಶಿಷ್ಟವಾದ ಪರ್ಮನೆಂಟ್‌ ರಿಟೈರ್ಮೆಂಟ್‌ ಅಕೌಂಟ್‌ ನಂಬರ್‌ ಅಥವಾ ಪಿಆರ್‌ಎಎನ್‌ ಸಂಖ್ಯೆಯಿಂದ ಗುರುತಿಸಲ್ಪಡುತ್ತದೆ. ನಿಮ್ಮ ಖಾತೆ ತೆರೆದೊಡನೆ ನಿಮಗೆ ಒಂದು “ಪ್ರಾಣ್‌’ ಕಿಟ್‌ ಬರುತ್ತದೆ. ಅದರಲ್ಲಿ ನಿಮ್ಮ “ಪ್ರಾಣ್‌’ ಕಾರ್ಡ್‌ ಹಾಗೂ ಎಲ್ಲಾ ಮಾಹಿತಿಗಳ ಕರಪತ್ರಗಳು ಇರುತ್ತವೆ. ಇದು ನಿಮ್ಮ ಖಾತೆಯ ಯುನಿಕ್‌ ನಂಬರ್‌. ಆಜೀವ ಪರ್ಯಂತ ಈ ಒಂದು ನಂಬರನ್ನೇ ಹೊತ್ತು ತಿರುಗಾಡಬೇಕು. ಒಬ್ಟಾತ ಇನ್ನೊಂದು ಖಾತೆಯನ್ನು ತನ್ನ ಹೆಸರಿನಲ್ಲಿ ತೆರೆಯುವಂತಿಲ್ಲ. ಆದರೆ ಈ “ಪ್ರಾಣ್‌’ ನಂಬರ್‌ ಮೂಲಕ ದೇಶದ ಎಲ್ಲೆಡೆ ಯಾವ ಪಿಓಪಿಯ ಮೂಲಕವಾದರೂ ಪೆನ್ಶನ್‌ ಖಾತೆಯನ್ನು ಬಳಸಬಹುದು, ವರ್ಗಾಯಿಸಬಹುದು. 

ವಾರ್ಷಿಕ ದೇಣಿಗೆ 
ಎನ್‌ಪಿಎಸ್‌ನಲ್ಲಿ ಎರಡು ಉಪ ಖಾತೆಗಳಿರುತ್ತವೆ. ಕಡ್ಡಾಯವಾದ ಟೈರ್‌-1 ಖಾತೆಯಲ್ಲಿ ಕನಿಷ್ಟ ರೂ. 500 ಕಟ್ಟಿ ತೆರೆಯಬಹುದು. ವಾರ್ಷಿಕ ಕನಿಷ್ಟ ರೂ. 1000 ಅನ್ನು ಕಟ್ಟುತ್ತಾ ಮುಂದುವರಿಯಬೇಕು. ಒಂದು ಕಂತಿಗೆ ಕನಿಷ್ಠ ಮಿತಿ ರೂ. 500. ವಾರ್ಷಿಕ ದೇಣಿಗೆಗೆ ಗರಿಷ್ಟ ಮಿತಿ ಇಲ್ಲ ಆದರೆ ಕರ ವಿನಾಯಿತಿಗೆ ಮಾತ್ರ ವಿನಾಯಿತಿ ಇರುತ್ತದೆ.

ಐಚ್ಛಿಕವಾದ ಒಂದು ಎಸ್‌ಬಿ ಖಾತೆಯನ್ನು ಹೋಲುವ ಟೈರ್‌- 2 ಖಾತೆಯನ್ನು ತೆರೆಯುವಾಗ ರೂ. 1000 ಕಟ್ಟಿ ಆರಂಭಿಸಬೇಕು. ಆದರೆ ಆ ಬಳಿಕ ಅದರಲ್ಲಿ ಕನಿಷ್ಟ ವಾರ್ಷಿಕ ದೇಣಿಗೆ ಅಥವಾ ವಾರ್ಷಿಕ ಬ್ಯಾಲನ್ಸ್‌ ಎಂಬ ಷರತ್ತುಗಳಿಲ್ಲ. ಆದರೆ ಒಂದು ಬಾರಿಗೆ ಕಂತು ಕಟ್ಟುವಾಗ ಕನಿಷ್ಠ ರೂ. 250 ಕಟ್ಟಬೇಕು. (ಹಿಂದೆಲ್ಲಾ ವಾರ್ಷಿಕ ಕನಿಷ್ಠ 1 ದೇಣಿಗೆ ಮತ್ತು ವರ್ಷಾಂತ್ಯದಲ್ಲಿ ಕನಿಷ್ಠ ಉಳಿಕೆ ರೂ. 2,000 ಹೊಂದಿರಬೇಕು ಎನ್ನುವ ನಿರ್ಬಂಧವಿತ್ತು. ಅದನ್ನೀಗ ಹಿಂತೆಗೆಯಲಾಗಿದೆ) ಅಲ್ಲದೆ, ಟೈರ್‌-2 ಖಾತೆಯಲ್ಲಿರುವ ಮೊತ್ತವನ್ನು ಯಾವಾಗ ಬೇಕಾದರೂ ಟೈರ್‌-1 ಖಾತೆಗೆ ವರ್ಗಾಯಿಸಬಹುದು. ಆದರೆ ಟೈರ್‌-1 ಖಾತೆಯಿಂದ ಬೇಕಾದಂತೆ ಟೈರ್‌-2 ಖಾತೆಗೆ ವರ್ಗಾಯಿಸುವಂತಿಲ್ಲ.  ಕನಿಷ್ಠ ವಾರ್ಷಿಕ ದೇಣಿಗೆ ನೀಡದ ಟೈರ್‌-1 ಖಾತೆಗಳನ್ನು “ಫ್ರೀಜ್‌’ ಮಾಡಲಾಗುತ್ತದೆ. ಆಮೇಲೆ ಬಾಕಿ ಪಾವತಿ ಮತ್ತು ಪೆನಾಲ್ಟಿ ತೆತ್ತು ಅಂತಹ ಖಾತೆಗಳನ್ನು ಪುನಃ ಓಪನ್‌ ಮಾಡಬೇಕಾಗುತ್ತದೆ. 

ಫ‌ಂಡ್‌ ನಿರ್ವಹಣೆ
ಇದರಲ್ಲಿ ಶೇಖರಗೊಂಡ ದುಡ್ಡಿನ ಹೂಡಿಕೆಯ ಜವಾಬ್ದಾರಿ ಮಾತ್ರ ಒಟ್ಟು 8 ಪೆನ್ಶನ್‌ ಫ‌ಂಡ್‌ ಮ್ಯಾನೇಜರ್‌ಗಳ ಕೈಯಲ್ಲಿ ನೀಡಲಾಗಿದೆ. ನೀವು ಈ ಎಂಟರಲ್ಲಿ ಯಾವುದಾದರೂ ಒಂದು ಫ‌ಂಡ್‌ ಮ್ಯಾನೇಜರ್‌ ಅನ್ನು ಖಾತೆ ತೆರೆಯುವ ಸಮಯದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಅದನ್ನು ಆಮೇಲೆ ಬದಲಿಸಲೂಬಹುದು; ಆದರೆ ವರ್ಷಕ್ಕೆ ಒಂದೇ ಬಾರಿ.
1) HDFC Pension Management Co. Ltd. 2) ICICI Prudential Pension Fund Management Co. Ltd. 
3)Kotak Mahindra Pension Fund Ltd. 4) LIC Pension Fund Ltd. 5) Reliance Capital Pension Fund Ltd. 6) SBI Pension Funds Pvt. Ltd 7) UTI Retirement Soluti ons Ltd 8) Birla Sun Life Pension Management Ltd

ವೆಚ್ಚ
ಈ ಸ್ಕೀಮಿನಲ್ಲಿ ಪಿಓಪಿ, ಸಿಆರ್‌ಎ , ಕಸ್ಟೊಡಿಯನ್‌ ಹಾಗೂ ಫ‌ಂಡ್‌ ನಿರ್ವಾಹಕರು – ಈ ರೀತಿ 4 ಸಂಸ್ಥೆಗಳು ವಿವಿಧ ಹಂತಗಳಲ್ಲಿ ನಿಮಗೆ ಸೇವೆ ಒದಗಿಸುತ್ತಾರೆ. ಇವರೆಲ್ಲರ ವೆಚ್ಚಗಳನ್ನು ಟೇಬಲ್‌ನಲ್ಲಿ ನೀಡಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ವಹಣೆಗೊಳ್ಳುವ ಸ್ಕೀಮ್‌ ಅಂದರೆ ಅದು ನ್ಯಾಶನಲ್‌ ಪೆನ್ಶನ್‌ ಸ್ಕೀಮೇ ಸರಿ. 

ಸ್ಕೀಮುಗಳು
ಸಾರ್ವಜನಿಕ ಎನ್‌.ಪಿ.ಎಸ್‌. ನಲ್ಲಿ ನಾಲ್ಕು ಆಯ್ಕೆಗಳಿವೆ. ನಿಮ್ಮ ಹೂಡಿಕೆಯ ಗರಿಷ್ಠ ಶೇ.50 ಇಂಡೆಕ್ಸ್‌ ಶೇರುಗಳಲ್ಲೂ (ಉ), ಉಳಿದದ್ದನ್ನು ಸ್ಥಿರ ಆದಾಯದ ಕಾರ್ಪೋರೇಟ್‌ ಸಾಲಪತ್ರ (ಇ) ಹಾಗೂ ಸರಕಾರಿ ಸಾಲಪತ್ರಗಳಲ್ಲಿ (ಎ) ನೀವು ನಿರ್ದೇಶಿಸಿದ ಪ್ರಮಾಣದಲ್ಲಿ ಹೂಡುತ್ತಾರೆ. ಇತ್ತೀಚೆಗೆ ಅ ಅಥವಾ ಆಲ್ಟರ್‌ನೆàಟಿವ್‌ ಇನ್ವೆಸ್ಟ್‌ಮೆಂಟ್‌ ಆಯ್ಕೆಯೂ ಕೂಡಾ ಇದರಲ್ಲಿ ಸೇರಿಸಲಾಗಿದೆ. ಅ ನಲ್ಲಿ ಗರಿಷ್ಟ ಶೇ.5 ಹೂಡಿಕೆ ಮಾಡಲು ಅವಕಾಶ ಇದೆ. ಖಾತೆ ತೆರೆಯುವ ವ್ಯಕ್ತಿ ತನ್ನ ರಿಸ್ಕ್ ಧಾರಣೆಯನ್ನು ಆಧರಿಸಿ ಬೇಕೆನಿಸಿದ ಅನುಪಾತವನ್ನು ಆಯ್ದುಕೊಳ್ಳಬೇಕು. ಇವೆಲ್ಲವನ್ನೂ ಬಳಿಕ ಬೇಕಾದಂತೆ ಬದಲಾಯಿಸಲೂ ಬಹುದು. ಉ ಆಯ್ಕೆಯಲ್ಲಿ ಇಂಡೆಕ್ಸ್‌ ಶೇರುಗಳಲ್ಲಿ ಅದೇ ಅನುಪಾತದಲ್ಲಿ ಹೂಡಿಕೆ ಮಾಡಲಾಗುತ್ತದೆ ಎನ್ನುವುದನ್ನು ಗಮನಿಸಬೇಕು. ಮ್ಯೂಚುವಲ್‌ ಫ‌ಂಡುಗಳಂತೆ ತಮಗೆ ಬೇಕಾದ ಶೇರುಗಳಲ್ಲಿ ತೊಡಗಿಸುವ ಸ್ವಾತಂತ್ರ್ಯ ಎನ್‌.ಪಿ.ಎಸ್‌. ನಿರ್ವಾಹಕರಿಗೆ ಇರುವುದಿಲ್ಲ. 

ನಿಮ್ಮ ಆಯ್ಕೆಯ ಬದಲಾಗಿ ಸ್ವಯಂಚಾಲಿತ ಆಯ್ಕೆಯನ್ನು ನಮೂದಿಸಿದರೆ ನಿಮ್ಮ ವಯೋಮಾನವನ್ನು ಅನುಸರಿಸಿ ಅವರೇ ಒಂದು ಪೂರ್ವ ನಿಗದಿತ ಕೋಷ್ಟಕದ ಪ್ರಕಾರ ಮೊದಲ ಮೂರು ಆಯ್ಕೆಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತಾರೆ. ವಯಸ್ಸು ಏರಿದಂತೆ ಈಕ್ವಿಟಿ ಕಡಿಮೆಯಾಗಿ ಡೆಟ್‌ ಜಾಸ್ತಿಯಾಗುವ ಸೂತ್ರವನ್ನು ಇದರಲ್ಲಿ ಪಾಲಿಸುತ್ತಾರೆ. ಇದರಡಿಯಲ್ಲಿ ಇನ್ನು 3 ಉಪ ಆಯ್ಕೆಗಳು. ಎಗ್ರೆಸ್ಸಿವ್‌, ಮಾಡರೇಟ್‌ ಮತ್ತು ಕನ್ಸರ್ವೆಟಿವ್‌ ಎನ್ನುವ ಈ ಆಯ್ಕೆಗಳಲ್ಲಿ ಈಕ್ವಿಟಿಯ ಗರಿಷ್ಟ ಮೊತ್ತ 35 ವಯಸ್ಸಿನವರಿಗೆ ತಲಾ ಶೇ. 75, ಶೇ. 50 ಹಾಗೂ ಶೇ. 25 ಇರುತ್ತವೆ. ಬಳಿಕ ವಯಸ್ಸು ಏರಿದಂತೆಲ್ಲಾ ಕೋಷ್ಟಕದ ಅನುಸಾರ ಈಕ್ವಿಟಿಯ ಪ್ರಮಾಣ ಕಡಿಮೆಯಾಗಿ ಡೆಟ್‌ ಪ್ರಮಾಣ ಏರುತ್ತದೆ. ಈ ಹೂಡಿಕಾ ಆಯ್ಕೆಗಳನ್ನು ಟೈರ್‌-1 ಮತ್ತು ಟೈರ್‌-2 ಖಾತೆಗಳಲ್ಲಿ ಭಿನ್ನ ಭಿನ್ನವಾಗಿ ನಿರ್ವಹಿಸುವ ಆಯ್ಕೆಯೂ ಚಂದಾದಾರರಿಗೆ ಇರುತ್ತದೆ.

ಸೆಂಟ್ರಲ್‌ ರೆಕಾರ್ಡ್‌ ಕೀಪಿಂಗ್‌ 
ನಿಮ್ಮ ಖಾತೆಯನ್ನು ಡಿಮ್ಯಾಟ್‌ ಸ್ವರೂಪದಲ್ಲಿ ಸೆಂಟ್ರಲ್‌ ರೆಕಾರ್ಡ್‌ ಕೀಪಿಂಗ್‌ ಸಂಸ್ಥೆ ನೋಡಿಕೊಳ್ಳುತ್ತದೆ. ನಿಮ್ಮ ಖಾತೆಯನ್ನು ನೋಡಿಕೊಳ್ಳುವವರು ಇವರು ಹಾಗೂ ನಿಮ್ಮ ಸಂಪರ್ಕೆ ಈ ಸಂಸ್ಥೆಯೊಂದಿಗೆ ಮಾತ್ರ ಅಗತ್ಯ.  https://cra&nsdl.com/CRA  ಎಂಬ ವಿಳಾಸದಲ್ಲಿ ನಿಮ್ಮ ಎನ್‌ಪಿಎಸ್‌ ಖಾತೆಗೆ ಪ್ರಾಣ್‌ ನಂಬರ್‌ ಬಳಸಿಕೊಂಡು ಲಾಗಿನ್‌ ಆಗಬಹುದು. ನಿಮ್ಮ ಖಾತೆಯನ್ನು ಆನ್‌ಲೈನ್‌ ಆಗಿ ಪರಿಶೀಲಿಸಬಹುದು. ಇಲ್ಲಿ ನಿಮ್ಮ ದೇಣಿಗೆ ಪಾವತಿಯನ್ನು ಕೂಡಾ ಮಾಡಬಹುದು. ವರ್ಷಕ್ಕೊಂದು ಬಾರಿ ಈ ಸಂಸ್ಥೆ ನಿಮಗೆ ನಿಮ್ಮ ಖಾತೆಯ ಬಗ್ಗೆ ಸ್ಟೇಟೆಟ್‌ ಒಂದನ್ನು ಕಳುಹಿಸುತ್ತದೆ. ಅದಲ್ಲದೆ ಪ್ರತ್ಯೇಕವಾದ ಪಾಸುºಕ್‌ ಸೌಲಭ್ಯ 
ಎನ್‌ಪಿಎಸ್‌ನಲ್ಲಿ ಇರುವುದಿಲ್ಲ.              
 (ಮುಂದುವರಿಯುವುದು) 

ಟಾಪ್ ನ್ಯೂಸ್

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.