ಫ‌ಂಡುಗಳಲ್ಲಿ ಹೂಡಿಕೆಯ ಸಿಪ್‌ ಕಾರ್ಯತಂತ್ರ


Team Udayavani, Feb 27, 2017, 11:07 AM IST

93-mutual-fund.jpg

ಮಾರುಕಟ್ಟೆಯ ಕನಿಷ್ಠ -ಗರಿಷ್ಠಗಳನ್ನು ತಿಳಿಯಲಾರದ ಸಂದರ್ಭದಲ್ಲಿ ಸುಮ್ಮನೇ ಬಿ.ಪಿ. ಏರಿಸಿಕೊಂಡು ಮನೆಯಲ್ಲಿ ಬೈದುಕೊಂಡು; ಆಫೀಸಿನಲ್ಲಿ ಬೈಸಿಕೊಂಡು ಶೇರು ಮೋಹಿನಿಯಾಟ್ಟಂನ ಮೇಲೆ ರಿಸರ್ಚ್‌ ಮಾಡುವುದಕ್ಕಿಂತ ಆರಾಮವಾಗಿ ಕುಳಿತುಕೊಂಡು ಸಿಪ್‌ ಅನುಸರಿಸಿ ಸರಾಸರಿ ವೆಚ್ಚದಲ್ಲಿ ಶೇರು ಖರೀದಿಸುತ್ತಾ ಹೋಗಬಹುದು.

ಮ್ಯೂಚುವಲ್‌ ಫ‌ಂಡು ಒಂದು ಉತ್ತಮ ಹೂಡಿಕಾ ಕ್ಷೇತ್ರ ಎನ್ನುವುದರಲ್ಲಿ ಬಹುತೇಕ ಸಂಶಯ ಉಳಿದಿಲ್ಲ. ಒಂದು ಕಾಲದಲ್ಲಿ ಸಾರ್ವಜನಿಕರ ದುಡ್ಡು ಬಾಚುವ ಕಸುಬು ಇರಿಸಿಕೊಂಡಿದ್ದ ಈ ಫ‌ಂಡುಗಳು ಈಗೀಗ ಕೆಲಸ ಮಾಡಲು ಆರಂಭಿಸಿವೆ. ಅಂದರೆ ಎಲ್ಲ ಫ‌ಂಡುಗಳೂ ಉತ್ತಮವಾಗಿವೆ ಎಂದಲ್ಲ. ಮಾರುಕಟ್ಟೆಯಲ್ಲಿ ಹಲವು ಉತ್ತಮ ಫ‌ಂಡುಗಳು ಈಗೀಗ ಲಭ್ಯ. ಶೇರುಗಳಲ್ಲಿ ರಿಸರ್ಚ್‌ ಮಾಡುವಂತೆ ಮ್ಯೂಚುವಲ್‌ ಫ‌ಂಡುಗಳ ಸಾಧನೆಯ ಬಗ್ಗೆಯೂ ಸ್ವಲ್ಪ ರಿಸರ್ಚ್‌ ಮಾಡಿ ಒಳ್ಳೆಯ ಕೆಲಸ ಮಾಡುವ ಫ‌ಂಡುಗಳನ್ನು ಮಾತ್ರ ಆರಿಸಿ ಅವುಗಳಲ್ಲಿ ಹೂಡಿಕೆ ಮಾಡಬೇಕು. ಬೇಕಾಬಿಟ್ಟಿ ಸಿಕ್ಕ ಸಿಕ್ಕ ಫ‌ಂಡುಗಳಲ್ಲಿ ಹೂಡಿಕೆ ಮಾಡಲು ಹೋಗಬಾರದು.

ಫ‌ಂಡುಗಳಲ್ಲಿ ಹೂಡಿಕೆ ಮಾಡುವ ಕಾರ್ಯತಂತ್ರ ಹೇಗಿರಬೇಕು ಎನ್ನುವುದು ಮುಂದಿನ ಪ್ರಶ್ನೆ.
ಕನಿಷ್ಠ ಮಟ್ಟ: ಶೇರು ಅಥವಾ ಅವುಗಳ ಮ್ಯೂಚುವಲ್‌ ಫ‌ಂಡುಗಳಲ್ಲಿ ಯಾವತ್ತೂ ಮಾರುಕಟ್ಟೆ ಬೆಲೆಗಳು ಅತ್ಯಂತ ಕಡಿಮೆ ಮಟ್ಟದಲ್ಲಿ ಇರುವಾಗ ಹೂಡಿಕೆ ಮಾಡಬೇಕು ಹಾಗೂ ಅತ್ಯಂತ ಗರಿಷ್ಠ ಮಟ್ಟದಲ್ಲಿ ಇರುವಾಗ ಮಾರಾಟ ಮಾಡಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಜ್ಞಾನ. ಮಾರುಕಟ್ಟೆ ಮೇಲಿನ ಮಟ್ಟದಲ್ಲಿ ಇರುವಾಗ ಹೂಡಿಕೆ ಮಾಡಿದರೆ ಆ ಬಳಿಕ ಮಾರುಕಟ್ಟೆ ಇಳಿದರೆ ಲಾಭ ಕಡಿಮೆಯಾದೀತು ಅಥವಾ ನಷ್ಟ ಕೂಡ ಸಂಭವಿಸಬಹುದು. ಈ ಮಾತನ್ನು ಯಾರು ಬೇಕಾದರೂ ಹೇಳಿಯಾರು. ಆದರೆ ಆ ಮೇಲಿನ ಮತ್ತು ಕೆಳಗಿನ ಮಟ್ಟಗಳು ಯಾವುವೆಂದು ಮಾತ್ರ ಯಾವ ಜೋತಿಷಿಯೂ ಹೇಳಲಾರ. 

ಅದಕ್ಕಾಗಿ ಎಲ್ಲ ಮಾರುಕಟ್ಟೆ ಪಂಡಿತರೂ ಸಲಹೆ ನೀಡುವ ಆಧುನಿಕ ಕಾರ್ಯತಂತ್ರವೇ – ಸಿಪ್‌ ಅಥವಾ ಎಸ್‌ಐಪಿ.

ಏನಿದು ಸಿಪ್‌?: SIP ಅಂದರೆ Systematic Investment Plan, ಒಂದು ಕ್ರಮಬದ್ಧವಾದ ಹೂಡಿಕಾ ಕ್ರಮ. ಇಲ್ಲಿಒಂದು ಪೂರ್ವ ನಿಗದಿತ ಸಮಯಾನುಸಾರ ಪ್ರತಿ ತಿಂಗಳು, ಪ್ರತಿ ಪಕ್ಷ,  ಪ್ರತಿ ವಾರ ಅಥವಾ ಪ್ರತಿ ದಿನ ಕೂಡ ಒಂದು ಪೂರ್ವ ನಿಗದಿತ ಮೊತ್ತವನ್ನು ಒಂದು ನಿಗದಿತ ಅವಧಿಯವರೆಗೆ ಒಂದು ಮ್ಯೂಚುವಲ್‌ ಫ‌ಂಡಿನಲ್ಲಿ ಹೂಡುತ್ತಾ ಹೋಗುವುದು. ಅದು ಹೇಗೆ ನಡೆಯುತ್ತದೆ ಎಂದು ಕೆಳಗಿನ ಟೇಬಲ್‌ ನೋಡಿ ತಿಳಿಯೋಣ:

ಸರಾಸರಿ ಮಟ್ಟದಲ್ಲಿ ಹೂಡಿಕೆ: ಈ ಟೇಬಲ್‌ನಲ್ಲಿ ಹತ್ತು ತಿಂಗಳುಗಳಲ್ಲಿ ಪ್ರತಿ ಬಾರಿಯೂ ರೂ.1000 ಕೊಟ್ಟು ಪ್ರಚಲಿತ ಮಾರುಕಟ್ಟೆ ಬೆಲೆಗೆ (Net Asset Value) ಮ್ಯೂಚುವಲ್‌ ಫ‌ಂಡ್‌ ಒಂದರ ಯುನಿಟ್‌ಗಳನ್ನು ಕೊಳ್ಳಲಾಗುತ್ತದೆ. ಪ್ರತಿ ತಿಂಗಳೂ ಆ ಮೂಲಕ ವೆಚ್ಚವು ಸರಾಸರಿ ಆಗುತ್ತಾ ಹೋಗುತ್ತದೆ. ಪ್ರತಿ ಬಾರಿಯೂ ನಿಶ್ಚಿತ ರೂ.1,000ವನ್ನೇ ಹೂಡುವುದರಿಂದ ಆ ಮೊತ್ತಕ್ಕೆ ಬರುವ ಯುನಿಟ್‌ಗಳ ಸಂಖ್ಯೆ Net Asset Value (NAV) ಅಥವಾ ಅದರ ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿಕೊಂಡು ಹೆಚ್ಚು ಕಡಿಮೆಯಾಗುತ್ತದೆ. ಹಾಗಾಗಿ ಯುನಿಟ್‌ಗಳಿಗೆ ಬೆಲೆ ಜಾಸ್ತಿ ಇರುವಾಗ ಕಡಿಮೆ ಯುನಿಟ್‌ಗಳು ಹಾಗೂ ಯುನಿಟ್‌ಗಳಿಗೆ ಬೆಲೆ ಕಡಿಮೆ ಇರುವಾಗ ಜಾಸ್ತಿ ಯುನಿಟ್‌ಗಳು ಖರೀದಿಸಲ್ಪಡುತ್ತವೆ. ಇದರಿಂದಾಗಿ ತೂಕಾದಾರಿತ ಸರಾಸರಿ (Weighted Average) ವೆಚ್ಚ ಕಡಿಮೆಯಾಗುತ್ತದೆ. ಈ ರೀತಿ ಏರಿಳಿಯುತ್ತಿರುವ ಮಾರುಕಟ್ಟೆಯಲ್ಲಿ ವೆಚ್ಚವನ್ನು ಸರಾಸರಿ ಆಗಿಸುವುದೇ ಸಿಪ್‌ ಮಾದರಿಯ ಹೂಡಿಕೆಯ ವೈಶಿಷ್ಟ್ಯ!

ಈಗ ಮೇಲಿನ ಟೇಬಲ್‌ ಅನ್ನು ಇನ್ನೊಮ್ಮೆ ಸರಿಯಾಗಿ ನೋಡಿ. ಇಲ್ಲಿ ಸರಾಸರಿ ವೆಚ್ಚ ರೂ. 15.88 ರಂತೆ ಒಟ್ಟು ರೂ. 10,000 ಹೂಡಲಾಗಿದೆ. ಯುನಿಟ್ಟೊಂದರ ದರ ರೂ.15.88 ಕನಿಷ್ಟವೇನೂ ಅಲ್ಲ. ಹಾಗೆ ನೋಡಿದರೆ ಕನಿಷ್ಟ ದರ ರೂ. 12.77 (3ನೇ ತಿಂಗಳಲ್ಲಿ). ಈ ಸಿಪ್‌ ಬೈ ಸಿಪ್‌ ಮಾಡುವುದರಿಂದ ಗರಿಷ್ಠ ದರದ ತೊಂದರೆ ಹೇಗೆ ಉಂಟಾಗುವುದಿಲ್ಲವೋ ಹಾಗೆಯೇ ಕನಿಷ್ಟ ದರದ ಫ‌ಲವೂ ದೊರೆಯುವುದಿಲ್ಲ! ಇದೊಂದು ಸರಾಸರಿ ಬೆಲೆಯಲ್ಲಿ ಫ‌ಂಡು ಕೊಳ್ಳುವ ಒಂದು ಕಾರ್ಯತಂತ್ರ ಮಾತ್ರ. 

ಸಾಧಕ-ಬಾಧಕಗಳು: ಆದರೆ ಒಂದು ಮಾತ್ರ ಸತ್ಯ. ಮಾರುಕಟ್ಟೆಯ ಕನಿಷ್ಠ ಗರಿಷ್ಠಗಳನ್ನು ತಿಳಿಯಲಾರದ ಸಂದರ್ಭದಲ್ಲಿ ಸುಮ್ಮನೇ ಬಿ.ಪಿ. ಏರಿಸಿಕೊಂಡು ಮನೆಯಲ್ಲಿ ಬೈದುಕೊಂಡು ಆಫೀಸಿನಲ್ಲಿ ಬೈಸಿಕೊಂಡು ಶೇರು ಮೋಹಿನಿಯಾಟ್ಟಂನ ಮೇಲೆ ರಿಸರ್ಚ್‌ ಮಾಡುವುದಕ್ಕಿಂತ ಆರಾಮವಾಗಿ ಕುಳಿತುಕೊಂಡು ಸರಾಸರಿ ವೆಚ್ಚದಲ್ಲಿ ಶೇರು ಖರೀದಿಸುತ್ತಾ ಹೋಗಬಹುದು. ಶೇರು ಬೆಲೆಯ ಸರಾಸರಿ ಹೂಡಿಕೆ ಹಣಕಾಸಿನ ದೃಷ್ಟಿಯಿಂದಲೂ ಮನುಕುಲದ ಆರೋಗ್ಯದೃಷ್ಟಿಯಿಂದಲೂ ಉತ್ತಮ. ಕನಿಷ್ಠ ಮಟ್ಟ ಎಂದು ಹೊರಟು ಟಾರ್ಚ್‌ನಂತೆ ಮುಖದಿಂದ ಟೆನ್ಶನ್‌ ಬೀರುತ್ತಾ ಎದೆಯಲ್ಲಿ ಅವಲಕ್ಕಿ ಮಿಲ್ಲಿನಂತೆ ಗುಡುಗುಡು ಕುಟ್ಟಿಸಿಕೊಳ್ಳುತ್ತಾ ಕೇವಲ ಕನ್ನಡಿಯ ಗಂಟಾದ ಹೆಚ್ಚುವರಿ ಲಾಭಕ್ಕಾಗಿ ಆರೋಗ್ಯ ಹಾಳು ಮಾಡಿಕೊಳ್ಳುವುದು ಯಾವ ಪುರುಷಾರ್ಥಕ್ಕೆ? ರಿಟರ್ನ್ ಸ್ವಲ್ಪ ಕಡಿಮೆಯಾದರೂ ಸರಿ, ಆರಾಮದಲ್ಲಿ ಕುಳಿತಲ್ಲೇ ದುಡ್ಡು ಮಾಡುವುದು ಒಳ್ಳೆಯದಲ್ಲವೇ? ಅಷ್ಟಕ್ಕೂ ಅಂತಹ ಕನಿಷ್ಠ ಮಟ್ಟ ನಮ್ಮ ಕೈಗೆ ಸಿಗುತ್ತದೆಯೇ? ಈ ನಿಟ್ಟಿನಲ್ಲಿ ಸಿಪ್‌ ಅತ್ಯಂತ ಉಪಕಾರಿ.

ಸಿಸ್ಟಮ್ಯಾಟಿಕ್‌ ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌ನಿಂದ ಇನ್ನೊಂದು ಲಾಭವಿದೆ- ಮಾರುಕಟ್ಟೆ ಎಷ್ಟು ಕೆಳಗೆ ಇದೆ ಎಂದು ಗೊತ್ತಿದ್ದರೂ ಆ ಸಂದರ್ಭಗಳಲ್ಲೆಲ್ಲ ಕೈಯಲ್ಲಿ ದುಡ್ಡಿರುವುದಿಲ್ಲ. ಎಷ್ಟೋ ಉಳಿತಾಯ ಮಾಡಿಕೊಳ್ಳುವುದೂ ಕೂಡ ಕಷ್ಟಸಾಧ್ಯವಾಗಿರುತ್ತದೆ. ಹಾಗಾಗಿ ಈ ರೀತಿ ಪ್ರತಿ ತಿಂಗಳೂ/ ವಾರವೂ ಶಿಸ್ತುಬದ್ಧವಾಗಿ ಮ್ಯೂಚುವಲ್‌ ಫ‌ಂಡುಗಳಲ್ಲಿ ಹೂಡುವುದು ಒಂದು ಉತ್ತಮ ಪದ್ಧತಿ. 

ಏಕಗಂಟಿನ ಹೂಡಿಕೆ: ಅಂತೆಯೇ ಏಕಗಂಟಿನಲ್ಲಿ ದೊಡ್ಡ ಮೊತ್ತದ ದುಡ್ಡಿದ್ದವರು ಏನು ಮಾಡಬಹುದು ಎನ್ನುವುದು ಇನ್ನೊಂದು ಪ್ರಶ್ನೆ. ಇದ್ದ ದುಡ್ಡನ್ನೆಲ್ಲ ಒಂದೇ ಸಮಯಕ್ಕೆ ಯಾವುದಾದರೂ ಇಕ್ವಿಟಿ ಫ‌ಂಡಿಗೆ ಪ್ರಚಲಿತ ಮಾರುಕಟ್ಟೆಯ ಮಟ್ಟದಲ್ಲಿ ಹಾಕುವ ಬದಲಾಗಿ ಅದನ್ನು ತಾತ್ಕಾಲಿಕವಾಗಿ ಒಂದು ಒಳ್ಳೆಯ ಲಿಕ್ವಿಡ್‌ ಫ‌ಂಡಿನಲ್ಲಿ ಹಾಕಿಡಬಹುದು. ಲಿಕ್ವಿಡ್‌ ಫ‌ಂಡು ಜಾಸ್ತಿ ರಿಸ್ಕ್ ಇಲ್ಲದೆ ಎಸ್‌ಬಿ/ಎಫ್ಡಿ ಖಾತೆಗಳಿಗಿಂತ ಜಾಸ್ತಿ ಆದಾಯ ತೆರಿಗೆಯ ಬಳಿಕದ ಪ್ರತಿಫ‌ಲವನ್ನು ನಿರಂತರವಾಗಿ ನೀಡುತ್ತದೆ. ಅಲ್ಲಿಂದ ಪ್ರತಿ ವಾರ/ತಿಂಗಳು ಶಿಸ್ತುಬದ್ಧವಾಗಿ ನಿಮಗೆ ಬೇಕೆನಿಸಿದ ಇಕ್ವಿಟಿ ಫ‌ಂಡಿಗೆ ದುಡ್ಡನ್ನು ವರ್ಗಾಯಿಸುತ್ತಾ ಹೋಗಬಹುದು. ಈ ಕಾರ್ಯತಂತ್ರವನ್ನು ಸಿಸ್ಟಮ್ಯಾಟಿಕ್‌ ಟ್ರಾನ್ಸ್‌ಫ‌ರ್‌ ಪ್ಲಾನ್‌ (ಎಸ್‌ಟಿಪಿ) ಅನ್ನುತ್ತಾರೆ. ಈ ಕಾರ್ಯತಂತ್ರ ಮಾರುಕಟ್ಟೆಯ ಏರಿಳಿತಗಳನ್ನು ಮೀರಿ ಸರಾಸರಿ ಮಟ್ಟದಲ್ಲಿ ಹೂಡಿಕೆ ಮಾಡಲು ಸಹಕಾರಿಯಾಗುತ್ತದೆ. 
ಎಸ್‌ಬಿ/ಎಫ್ಡಿಗಳ ಆದಾಯ ಕರಭಾರವನ್ನೂ ತಪ್ಪಿಸಿ ಲಿಕ್ವಿಡ್‌ ಫ‌ಂಡಿನ ಉತ್ತಮ ಪ್ರತಿಫ‌ಲ ಪಡೆದಂತೆಯೂ ಆಗುತ್ತದೆ. 

ಇಕ್ವಿಟಿಯಲ್ಲಿ ಸಿಪ್‌/ಎಸ್‌ಟಿಪಿ: ಮ್ಯೂಚುವಲ್‌ ಫ‌ಂಡುಗಳಲ್ಲಿ ಸುಮಾರು 2.5% ವಾರ್ಷಿಕ ಫ‌ಂಡ್‌ ಮ್ಯಾನೇಜ್‌ಮೆಂಟ್‌ಚಾರ್ಜ್‌ ಇಧಿಸುತ್ತಾರೆ. ಅದಕ್ಕೆ ಸರಿಯಾದ ಪ್ರತಿಫ‌ಲ ಕೆಲವು ಉತ್ತಮ ಆಡಳಿತದ ಮ್ಯೂಚುವಲ್‌ ಫ‌ಂಡುಗಳಲ್ಲಿ ಮಾತ್ರ ಸಿಗಲು ಸಾಧ್ಯ. ಎಲ್ಲ ಮ್ಯೂಚುವಲ್‌ ಫ‌ಂಡುಗಳೂ ಒಂದೇ ರೀತಿಯ ಸಾಧನೆಯನ್ನು ತೋರಿಸುವುದಿಲ್ಲ. ಆದರೂ “ಮಾರುಕಟ್ಟೆಯ ಉಸಾಬರಿ ನಮಗೆ ಬಿಲ್ಕುಲ್‌ಬೇಡಪ್ಪ, ಅದರಲ್ಲಿ ಹೂಡಿಕೆ ಮಾತ್ರ ಬೇಕು’ ಎಂಬವರಿಗೆ ಮ್ಯೂಚುವಲ್‌ ಫ‌ಂಡ್‌ ಒಳ್ಳೆಯ ದಾರಿ. ಅಂಥವರು ಉತ್ತಮ ಫ‌ಂಡ್‌ ಹೌಸಿನ ಉತ್ತಮ ಫ‌ಂಡನ್ನು ಆಯ್ದು ಅದರಲ್ಲಿ ಸಿಪ್‌ ಮಾಡಬಹುದು. ಮ್ಯೂಚುವಲ್‌ ಫ‌ಂಡುಗಳಿಗೆ ಈಗ ಸ್ಟಾರ್‌ ರೇಟಿಂಗ್‌ ಲಭ್ಯ.

ಆದರೆ “ನನಗೆ ಮಾರುಕಟ್ಟೆ ಗೊತ್ತಿದೆ. ನಾನು ಸುಮಾರು 2.5% ವಾರ್ಷಿಕ ಫ‌ಂಡ್‌ ವೆಚ್ಚ ಕೊಡಲು ಇಷ್ಟಪಡುವುದಿಲ್ಲ, ಉತ್ತಮ ರಿಟರ್ನ್ ಕೊಡುವ ಅತ್ಯುತ್ತಮ ಶೇರುಗಳದ್ದು ನನಗೆ ಮುಖ ಪರಿಚಯ ಇದೆ’ ಎಂದು ಹೇಳುವವರು ನೇರವಾಗಿ ಇಕ್ವಿಟಿಯಲ್ಲೂ ಸಿಪ್‌ ಅಥವಾ ಎಸ್‌ಟಿಪಿ ಮಾಡಬಹುದು. ಒಂದು ಉತ್ತಮ ಶೇರು ಒಂದು ಉತ್ತಮ ಮ್ಯೂಚುವಲ್‌ ಫ‌ಂಡಿಗಿಂತ ಜಾಸ್ತಿ ಪ್ರತಿಫ‌ಲ ಕೊಡಬಲ್ಲುದು (ಆದರೆ ಅದು ಯಾವ ಶೇರು ಎಂದು ಗೊತ್ತು ಬೇಕು ಅಷ್ಟೆ). ಆ ರೀತಿ ಇಕ್ವಿಟಿಯಲ್ಲಿ ನೇರವಾಗಿ ಸಿಪ್‌/ಎಸ್‌ಟಿಪಿ ಮಾಡುವ ಕೆಲವರನ್ನು ನಾನು ಬಲ್ಲೆ. ಪ್ರತೀ ತಿಂಗಳೂ ಸಂಬಳ ಬಂದಂತೆ ಒಂದು ಇನ್ಫೋಸಿಸ್‌ ಕೊಳ್ಳುವವರಿದ್ದಾರೆ ಅಥವಾ ಒಂದು  ಎಲ್‌ಆ್ಯಂಡ್‌ಟಿ ಖರೀದಿಸುವವರು ಇದ್ದಾರೆ. ಡಿ-ಮ್ಯಾಟ್‌ ಮತ್ತು ಆನ್‌ಲೈನ್‌ ಟ್ರೇಡಿಂಗ್‌ ಬಂದ ಮೇಲೆ ಇದೆಲ್ಲ ಅತ್ಯಂತ ಸುಲಭವಾಗಿದೆ.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.