ಪಿಎಂವೈ: ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ
Team Udayavani, Nov 11, 2019, 5:05 AM IST
2022ರ ಒಳಗಾಗಿ ಸರ್ವರಿಗೂ ಮನೆ ಧ್ಯೇಯದೊಂದಿಗೆ 2015,ಜೂನ್ 25 ರಂದು ಮೋದಿ ಸರಕಾರ ಆರಂಭಿಸಿದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ (PMAY& URBAN) ಅಡಿಯಲ್ಲಿ ಒಟ್ಟು ನಾಲ್ಕು ಸ್ಕೀಮುಗಳಿವೆ. ಅದರಲ್ಲಿ ಒಂದು ಸದ್ಯ ಬಹುಶ್ರುತ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (CLSS). ಅದರ ಪ್ರಕಾರ ಗ್ರಾಹಕರು ಪಡಕೊಂಡ ಗೃಹ ಸಾಲದ ಮೇಲಿನ ಬಡ್ಡಿಯ ಮೇಲೆ ಹಲವು ಶರತ್ತುಗಳಿಗೆ ಒಳ ಪಟ್ಟಂತೆ ಸರಕಾರವು ಸಬ್ಸಿಡಿ ನೀಡುತ್ತದೆ. (ಈ ಯೋಜನೆಯು PMAY&RURALಗಿಂತ ಭಿನ್ನವಾಗಿದೆ. (ಎರಡನ್ನೂ ಸಜ್ಜಿಗೆಬಜಿಲ್ ಮಾಡಿ ಮಂಡೆಬೆಚ್ಚ ಮಾಡಬಾರದಾಗಿ ಕಳಕಳಿಯ ವಿನಂತಿ).
ಅರ್ಹತಾ ನಿಯಮ ಈ ಸಬ್ಸಿಡಿ ಯೋಜನೆಗೆ ಅರ್ಜಿ ಹಾಕು ವವರು ಭಾರತದ ಯಾವುದೇ ಭಾಗದಲ್ಲಿ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಒಂದು ಪಕ್ಕಾ ಮನೆ ಯನ್ನು ಹೊಂದಿರಬಾರದು. ಅಲ್ಲದೆ, ಇನ್ನಾವುದೇ ಸರಕಾರಿ ಗೃಹ ಸಂಬಂಧಿ ಸಬ್ಸಿಡಿ ಪಡೆದಿರಬಾರದು. ಪತಿ ಮತ್ತು ಪತ್ನಿ ಪ್ರತ್ಯೇಕ ಪ್ರತ್ಯೇಕವಾಗಿ ಎರಡು ಸಬ್ಸಿಡಿಗೆ ಅರ್ಜಿ ಹಾಕುವಂತಿಲ್ಲ. ಒಂದು ಕುಟುಂಬಕ್ಕೆ ಒಂದೇ ಸಬ್ಸಿಡಿ ಲೆಕ್ಕ. ಇಲ್ಲಿ ಕುಟುಂಬ ಎಂದರೆ ಗಂಡ/ಹೆಂಡತಿ ಹಾಗೂ ಮದುವೆಯಾಗದ ಮಕ್ಕಳು. ಮಕ್ಕಳಲ್ಲೂ ಆದಾಯವಿರುವ ಮೇಜರ್ ಮಕ್ಕಳನ್ನು ಪ್ರತ್ಯೇಕ ಕುಟುಂ ಬವೆಂದು MIG ತರಗತಿಯಲ್ಲಿ ಪರಿಗಣಿಸಬಹುದಾ ಗಿದೆ. ಈ ಸೌಲಭ್ಯ ಸಂಬಳ ಆದಾಯ ಮತ್ತು ಸ್ವ-ಉದ್ಯೋಗ ನಿರತರಿಗೂ ಸಿಗುತ್ತದೆ.
ಈ ಯೋಜನೆಯಲ್ಲಿ ಮನೆಯ ಮತ್ತು ಸಾಲದ ಮೌಲ್ಯಗಳ ಮೇಲೆ ಮಿತಿ ಇಲ್ಲದಿದ್ದರೂ ಸಬ್ಸಿಡಿಗೆ ಅರ್ಹವಾದ ಸಾಲದ ಮೊತ್ತದ ಮೇಲೆ ಮಿತಿ ಇದೆ. ಇದು ಮೂರೂ ವರ್ಗಗಳಿಗೆ ಅನ್ವಯಿಸುವಂತೆ ರೂ 6, 9 ಮತ್ತು 12 ಲಕ್ಷ. ಯಾವುದೇ ಸಾಲದ ಮೇಲಾದರೂ ಒಬ್ಟಾತನಿಗೆ EWS/LIG ವರ್ಗದಲ್ಲಿ ರೂ. 2.67 ಲಕ್ಷದ ಗರಿಷ್ಟ ಮಿತಿಯೊಳಗಷ್ಟೇ ಸಬ್ಸಿಡಿ ಸಿಕ್ಕೀತು. ಉಳಿದ ಎರಡು ವರ್ಗಗಳಿಗೆ ಅದು ರೂ. 2.35 ಹಾಗೂ 2.30 ಲಕ್ಷ. ಗೃಹ ಸಾಲದ ಅವಧಿಯನ್ನು ಬ್ಯಾಂಕು ಮತ್ತು ಗ್ರಾಹಕರು ನಿರ್ಧರಿಸಿಕೊಂಡರೂ ಸಬ್ಸಿಡಿಯ ಸೌಲಭ್ಯ ಮಾತ್ರ ಗರಿಷ್ಟ 20 ವರ್ಷಗಳ ಅವಧಿಗಷ್ಟೇ ಸೀಮಿತವಾಗಿದೆ. ಅಲ್ಲದೆ, EWS ವರ್ಗದಲ್ಲಿ ಮನೆಗೆ ಮಹಿಳಾ ಮಾಲಿಕತ್ವ ಕಡ್ಡಾಯ.
ಸಾಲ/ಸಬ್ಸಿಡಿ ಎಲ್ಲಿ? ಈ ಯೋಜನೆಯಲ್ಲಿ ಗೃಹ ಸಾಲವನ್ನು ಯಾವುದೇ ಬ್ಯಾಂಕ್, ಕೋ-ಆಪರೇಟಿವ್ ಬ್ಯಾಂಕ್, ಆರ್.ಆರ್.ಬಿ, ಹೌಸಿಂಗ್ ಫೈನಾನ್ಸ್ ಕಾರ್ಪೋರೇಶನ್, ಎನ್.ಬಿ.ಎಫ್.ಸಿ ಇತ್ಯಾದಿಗಳಿಂದ ಪಡೆಯಬಹುದಾಗಿದೆ. ಇನ್ನು ಸಬ್ಸಿಡಿ ಎಲ್ಲಿ ಮತ್ತು ಹೇಗೆ ಸಿಗುತ್ತದೆ ಎನ್ನುವುದು ಪ್ರಶ್ನೆ. ಈ ಸಬ್ಸಿಡಿಗೆ ಅರ್ಜಿಯನ್ನು ನಿಮ್ಮ ಗೃಹ ಸಾಲದ ಜೊತೆಗೇನೇ ಅದೇ ಬ್ಯಾಂಕಿನಲ್ಲಿ ಗುಜರಾಯಿಸಬೇಕು. ಬ್ಯಾಂಕಿನವರು ಅದನ್ನು ನ್ಯಾಶನಲ್ ಹೌಸಿಂಗ್ ಬೋರ್ಡಿಗೆ ಕಳುಹಿಸಿ ಅಲ್ಲಿಂದ ಸಬ್ಸಿಡಿಯ ಮೊತ್ತವನ್ನು ನೇರವಾಗಿ ಪಡಕೊಳ್ಳುತ್ತಾರೆ.
ಸಬ್ಸಿಡಿ ಲೆಕ್ಕಾಚಾರ ಹೇಗೆ? ಇದು ಮುಖ್ಯ ಪ್ರಶ್ನೆ. ಶೇ.6.5, ಶೇ.4 ಅಥವಾ ಶೇ.3 ಸಬ್ಸಿಡಿಯು ಬಡ್ಡಿಯ ಮೇಲೆ, ಅಸಲಿನ ಮೇಲಲ್ಲ. ಅದೂ ಕೂಡಾ ನಿರಂತರವಾಗಿ ಗರಿಷ್ಠ 20 ವರ್ಷಗಳವರೆಗೆ. (ಅಂದರೆ 20 ಅಥವಾ ಸಾಲದ ಅವಧಿ – ಯಾವುದು ಕಡಿಮೆಯೋ ಅದು) ಈ ರೀತಿ 20 ವರ್ಷ ಬಡ್ಡಿಯ ಮೇಲೆ ನೀಡಲ್ಪಡುವ ಸಬ್ಸಿಡಿಯ ಒಟ್ಟು ಮೊತ್ತವು ಇವತ್ತಿನ ಮೌಲ್ಯದಲ್ಲಿ (Net Present value) ಎಷ್ಟಾಗುತ್ತದೆ ಎಂದು ಶೇ. 9 ದರದಲ್ಲಿ ಡಿಸ್ಕೌಂಟ್ ಮಾಡಿ ನೋಡಿದಾಗ ಬರುವ ಮೊತ್ತವನ್ನು ನೇರವಾಗಿ ಸಾಲದ ಅಸಲಿನಿಂದಲೇ ಕಳೆಯುತ್ತಾರೆ.
ಉದಾಹರಣೆಗಾಗಿ ರೂ. 6 ಲಕ್ಷದ ಸಾಲವನ್ನು ತೆಗೆದುಕೊಳ್ಳಿ. ಶೇ.6.5 ಸಬ್ಸಿಡಿ, 20 ವರ್ಷಕ್ಕೆ ಸಿಗುತ್ತಾ ಹೋಗುತ್ತದೆ ಎಂದು ತಿಳಿದುಕೊಳ್ಳಿ. ಆ ವಾರ್ಷಿಕ ಸಬ್ಸಿಡಿ ಹರಿವನ್ನು ಶೇ. 9 ದರದಲ್ಲಿ ಡಿಸ್ಕೌಂಟ್ ಮಾಡಿದರೆ ರೂ. 2,67,280 ಸಿಗುತ್ತದೆ. ಈ ಸಬ್ಸಿಡಿ ಮೊತ್ತವನ್ನು 6 ಲಕ್ಷದ ಸಾಲದಿಂದ ನೇರವಾಗಿ ಕಳೆದು ಉಳಿದ ಅಸಲು ಮೊತ್ತವನ್ನು (ರೂ. 3,32,720) ಮಾತ್ರ ಇ.ಎಮ….ಐ. ಆಗಿ ಪರಿವರ್ತಿಸುತ್ತಾರೆ. ಇದೊಂದು ತಲೆಯ ಹಿಂಬಾಗದಿಂದ ಕೈ ಚಾಚಿ ಕಿವಿಯನ್ನು ಸುತ್ತಿ ಬಳಸಿ ಮೂಗನ್ನು ಹಿಡಿಯುವ ಸರ್ಕಸ್! ಹಾಗಾಗಿ ಈ ಸ್ಕೀಮಿನಲ್ಲಿ ಪ್ರತಿ ವರ್ಷ ಎಂಬಂತೆ ಸಬ್ಸಿಡಿ ಜಮೆ ಮಾಡುವ ತಲೆಬಿಸಿ ಇಲ್ಲ. ಎÇÉಾ ವರ್ಷಗಳ ಸಬ್ಸಿಡಿಗಳನ್ನೂ ಒಟ್ಟಾಗಿಸಿ ಸಾಲದ ಅಸಲಿನಿಂದಲೇ ಕಳೆದು ಉಳಿದ ಮೊತ್ತವನ್ನು ಮಾತ್ರ ಇಎಮ್‌ಐ ಆಗಿಸಿ ಮರು ಪಾವತಿ ಮಾಡಿದರೆ ಸಾಕು. ಇದೂ ಒಂದು ರೀತಿ ಮಜಾ ಇರತ್ತೆ, ಬಿಡಿ!
ಸ್ಕೀಮಿನ ವಿವರಗಳು
PMAY(URBAN)&CLSS ಯೋಜನೆಯ ಅನುಸಾರ ಸರಕಾರವು ಒಂದು ಮನೆಯ ಖರೀದಿ/ನಿರ್ಮಾಣ/ವಿಸ್ತರಣೆ/ಅಭಿವೃದ್ಧಿಯ ಸಲುವಾಗಿ ಸರಕಾರವು ಹೌಸಿಂಗ್ ಲೋನಿನ ಬಡ್ಡಿಯ ಮೇಲೆ ಆರ್ಥಿಕವಾಗಿ ದುರ್ಬಲ ವರ್ಗ (EWS) ಮತ್ತು ಕಡಿಮೆ ಆದಾಯ ವರ್ಗ (LIG) ದ ಗ್ರಾಹಕರಿಗೆ ಒಟ್ಟಾಗಿ ಈ ಸಬ್ಸಿಡಿ ಸೌಲಭ್ಯವನ್ನು 2015 ರಲ್ಲಿ ಆರಂಭಿಸಿತು. ಆರಂಭದ ಹಂತದಲ್ಲಿ ಕೆಳವರ್ಗಕ್ಕೆ ಮಾತ್ರ ಸೀಮಿತವಾದ ಈ ಸ್ಕೀಮನ್ನು ಆ ಬಳಿಕ 2107ರಲ್ಲಿ ಮಧ್ಯಮ ವರ್ಗಕ್ಕೂ ಅನ್ವಯಿಸುವಂತೆ ಪರಿಷ್ಕರಿಸಲಾಯಿತು. ಮಧ್ಯಮ ವರ್ಗದಲ್ಲಿ ಎರಡು ಉಪವರ್ಗಗಳಿವೆ. ಹಾಗಾಗ ಈಗ ಒಟ್ಟು EWS/LIG, MIG -1 ಹಾಗೂ MIG – 2 ಎಂಬ ಮೂರು ವರ್ಗಗಳಿವೆ. ಈ ಮೂರೂ ವರ್ಗಗಳನ್ನು ವಾರ್ಷಿಕ ಕೌಟುಂ ಬಿಕ ಆದಾಯದ ಮೇರೆಗೆ ವಿಂಗಡಿಸಲಾಗಿದೆ. (ಟೇಬಲ್ ನೋಡಿ) ಅರ್ಥಿಕ ದುರ್ಬಲ ವರ್ಗ ಅಥವಾ EWSವರ್ಗಕ್ಕೆ ವಾರ್ಷಿಕ ಕೌಟುಂಬಿಕ ವರಮಾನ ರೂ. 3 ಲಕ್ಷ ಮೀರ ಬಾರದು. ಕೆಳ ಆದಾಯ ವರ್ಗ ಅಥವಾ LIGವರ್ಗದ ವರ ಮಾನ ರೂ. 3-6 ಲಕ್ಷ ಇರಬೇಕು. ಮಧ್ಯಮ ಆದಾಯ ವರ್ಗದಲ್ಲಿ ಎರಡು ಭಾಗಗಳಿವೆ. ರೂ. 6-12 ಲಕ್ಷದ ವರ ಮಾನದವರನ್ನು MIG-1 ಹಾಗೂ ರೂ. 12-18 ಲಕ್ಷದ ವರಮಾನದವರನ್ನು MIG-2 ಎಂದು ವಿಂಗಡಿಸಲಾಗಿದೆ.
ಪಕ್ಕದಲ್ಲಿ ನೀಡಿರುವ ಟೇಬಲ್ ನೋಡಿದರೆ ಸ್ಕೀಮಿನ ವಿವರಗಳು ಸ್ಪಷ್ಟವಾಗುತ್ತವೆ. ವಿವಿಧ ವರ್ಗಗಳ ಅಡಿಯಲ್ಲಿ ಮನೆಗೆ ಅರ್ಹ ಕಾಪೆìಟ್ ಏರಿಯ ನಿಗದಿಪಡಿಸಲಾಗಿದೆ. ಇದನ್ನು ಮೀರಿದ ಕಾಪೆìಟ್ ಏರಿಯ ಹೊಂದಿದ ಮನೆಗಳು ಕೂಡಾ ಅರ್ಜಿಗೆ ಅರ್ಹ. ಆದರೆ ಸಬ್ಸಿಡಿ ಮೊತ್ತ ನಮೂದಿಸಿದ ಕಾಪೆìಟ್ ಏರಿಯಾಕ್ಕೆ ಮಾತ್ರ ಸೀಮಿತವಾಗಿರುತ್ತದೆ.
– ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.