ಬ್ಯಾಂಕ್ ಎಫ್.ಡಿ.ಗಿಂತ ಉತ್ತಮ ಪೋಸ್ಟಾಫೀಸಿನ ಸಣ್ಣ ಉಳಿತಾಯ
Team Udayavani, May 28, 2018, 1:10 PM IST
ಚುನಾವಣೆ ಮುಗಿಯಿತು. ಹೈಡ್ರಾಮಾ ಬಳಿಕ ಸರಕಾರ ರಚನೆಯೂ ಆಯಿತು. ಇದೀಗ ಫೈನಾನ್ಸ್ ಖಾತೆ ಯಾರಿಗೆ ಎಂಬ ಜಗ್ಗಾಟ ಶುರುವಾಗಿದೆ. ಅದನ್ನೆÇÉಾ ಅವರಿಗೆ ಬಿಟ್ಟು ಬಿಡಿ. ನಮ್ಮ ನಿಮ್ಮಂತಹ ಹುಲುಮಾನವರು ನಮ್ಮ ನಮ್ಮ ಫೈನಾನ್ಸ್ ಖಾತೆಯ ಬಗ್ಗೆ ಸ್ವಲ್ಪ ಗಂಭೀರವಾಗಿ ಗಮನ ಹರಿಸುವುದು ಒಳಿತು. ಇಳಿಯುತ್ತಿರುವ ಬಡ್ಡಿ ದರದ ಈ ಯುಗದಲ್ಲಿ ಎಲ್ಲರೂ ತಲೆಯಲ್ಲಿ ಜಗ್ಗಾಡ ಬೇಕಾದ ವಿಚಾರ ಏನಪ್ಪಾ ಅಂತಂದ್ರೆ ಎಲ್ಲದಕ್ಕಿಂತ
ಜಾಸ್ತಿ ಪ್ರತಿಫಲ ಯಾವ ಕಡೆ ಸಿಗುತ್ತೆ ಎನ್ನುವುದು, ಎಂಟೆದೆಯ ಬಂಟರಾದ ಗೂಳಿತ್ತಾಯರಂತಹ ಪ್ರಭೃತ್ತಿಗಳು ಶೇರು-ನಾರು ಎನ್ನುವರು. ಹೇಳಲಿ ಬಿಡಿ. ಉಳ್ಳವರು ದೇವಾಲಯ ಕಟ್ಟುವರಯ್ಯ! ಶೇರಿನ ರಿಸ್ಕಾ ಎಲ್ಲರಿಗೂ ಒಗ್ಗಿ ಬರದು. ಹುಲುಮಾನವರು ಯಾವ ಬ್ಯಾಂಕಿನಲ್ಲಿ ಎಫ್ಡಿ ದರ ಎಷ್ಟಿದೆ ಎಂದು ಪೇಪರು ದ್ದಕ್ಕೂ ಕಣ್ಣು ಹಾಯಿಸುವರಯ್ಯ! ಆದರೆ ಸದ್ಯೋಭವಿಷ್ಯತ್ತಿನಲ್ಲಿ ಅಂಚೆಯಣ್ಣನ ಸಣ್ಣ ಉಳಿತಾಯದ ಬಡ್ಡಿ ದರಗಳು
ಬ್ಯಾಂಕು ಎಫ್ಡಿಗಳಿಗಿಂತ ಬೆಟರ್. ಹಾಗಾಗಿ ಇದೀಗ ಪೋಸ್ಟಲ್ ಯೋಜನೆಗಳ ಮೇಲೆ ಏಕ್ ನಜರ್:
1. ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಂ (SCSS)
60 ವರ್ಷ ಮೀರಿದ ಸೀನಿಯರ್ ಸಿಟಿಜನ್‌ಗಳಿಗಾಗಿಯೇ (ವಿ.ಆರ್.ಎಸ್ ನಂತಹ ಕೆಲವು ವಿಶೇಷ ಸಂದರ್ಭಗಳಲ್ಲಿ 55 ವರ್ಷ) ಸರಕಾರವು ಅಂಚೆ ಕಚೇರಿಗಳಲ್ಲಿ ಆರಂಭಿಸಿದ ಈ ನಿಗದಿತ ಆದಾಯದ ಸ್ಕೀಂ ಯಾವುದೇ ರಿಸ್ಕ್ ಇಲ್ಲದೆ ಶೇ. 8.3 ಬಡ್ಡಿ ನೀಡುತ್ತದೆ. ಬಡ್ಡಿಯು ಪ್ರತಿ ತ್ತೈಮಾಸಿಕ ಕೈಸೇರುತ್ತದೆ. ಅಂತಹ ಬಡ್ಡಿಯ ಮೇಲೂ ಬಡ್ಡಿ ಲೆಕ್ಕ ಹಾಕುವುದಾದರೆ ವಾರ್ಷಿಕ ಪ್ರತಿಫಲ ಶೇ.8.5ರ ಆಸುಪಾಸು ಎಂದು ಹೇಳಬ ಹುದು. ಒಬ್ಬ ವ್ಯಕ್ತಿ ಕನಿಷ್ಠ 1,000 ದಿಂದ ಆರಂಭಿಸಿ 15 ಲಕ್ಷ ರೂಪಾಯಿಗಳವರೆಗೆ ಇದರಲ್ಲಿ ಹೂಡಬಹುದು. (ವಿ.ಆರ್.ಎಸ್.ನಂತಹ ವಿಶೇಷ ಸಂದರ್ಭಗಳಲ್ಲಿ ರಿಟೈರ್‌ವೆುಂಟ್ ಮೊತ್ತ ಅಥವಾ 15 ಲಕ್ಷ, ಯಾವುದು ಕಡಿಮೆಯೋ ಅದು) ಇದು 5 ವರ್ಷಗಳ ಸ್ಕೀಂ ಆಗಿದ್ದು, ಅಂತ್ಯದಲ್ಲಿ ಇನ್ನೂ 3 ವರ್ಷಗಳಿಗೆ ಒಂದು ಬಾರಿ ನವೀಕರಿಸಬಹುದಾಗಿದೆ. ಈ ಖಾತೆಯಲ್ಲಿ ಹೂಡಿದ ಮೊತ್ತಕ್ಕೆ ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ವಿನಾಯಿತಿಯನ್ನು ಪಡೆಯಬಹುದಾಗಿದೆ. ಆದರೆ ಇದರಿಂದ ಪಡೆಯುವ ಬಡ್ಡಿ ಸಂಪೂರ್ಣವಾಗಿ ಆದಾಯ ತೆರಿಗೆಗೆ ಒಳಪಡುತ್ತದೆ.
2 ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSS)
ಅಂಚೆಯಣ್ಣನ ಇನ್ನೊಂದು ಭದ್ರ ಯೋಜನೆ. 5 ವರ್ಷಗಳ ಅವಧಿಯ ಈ ಸರ್ಟಿಫಿಕೇಟ್ ಅಂತ್ಯದಲ್ಲಿ ಮಾತ್ರ ದುಡ್ಡು ನೀಡುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ವಾರ್ಷಿಕ ಶೇ.7.6 ಲೆಕ್ಕದಲ್ಲಿ ಬಡ್ಡಿ ಕ್ರೆಡಿಟ್ ಆಗುತ್ತದೆ. ಅಂದರೆ, ಚಕ್ರೀಕರಣದ ನಿಮಿತ್ತ ವಾರ್ಷಿಕ ಪ್ರತಿಫಲ ಶೇ. 7.8ರ ಆಸುಪಾಸು ಆಗುತ್ತದೆ. ಕನಿಷ್ಠ ಮೊತ್ತ ರೂ.500 ಆಗಿದ್ದು ಯಾವುದೇ ಗರಿಷ್ಠ ಮಿತಿ ಇರುವು ದಿಲ್ಲ. ಇದರಲ್ಲಿ ಹೂಡಿದ ಮೊತ್ತ ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ಕರ ವಿನಾಯಿತಿ ಪಡೆಯುತ್ತದಲ್ಲದೆ, ಇದರಿಂದ ಉತ್ಪತ್ತಿಯಾಗುವ ವಾರ್ಷಿಕ ಬಡ್ಡಿ ಕೂಡಾ ಕೈಸೇರದಿದ್ದರೂ ಮರು ಹೂಡಿಕೆಯೆಂಬ ಕಾರಣಕ್ಕೆ ಸೆಕ್ಷನ್ 80 ಸಿ ಅಡಿಯಲ್ಲಿ ವಿನಾಯಿತಿ ಪಡೆಯುತ್ತದೆ. ಆದರೆ ಅಂತಹ ಬಡ್ಡಿಯನ್ನು ಆ ವರ್ಷದ ಆದಾಯಕ್ಕೆ ಸೇರಿಸಿ ತೆರಿಗೆ ಕಟ್ಟತಕ್ಕದ್ದು.
3 ಮಂಥಿÉ ಇನ್ಕಂ ಸ್ಕೀಂ (MIS)
ಪ್ರತಿ ತಿಂಗಳೂ ಬಡ್ಡಿ ನೀಡುವ 5 ವರ್ಷಗಳ ಈ ಸ್ಕೀಂ ವಾರ್ಷಿಕ ಶೇ. 7.3 ಬಡ್ಡಿ ನೀಡುತ್ತದೆ. ಕನಿಷ್ಠ ಡೆಪಾಸಿಟ್ ರೂ 4500 ಆಗಿದ್ದು ಗರಿಷ್ಠ ಮೊತ್ತ ರೂ. 4.5 ಲಕ್ಷ (ಸಿಂಗಲ್ ಎಕೌಂಟ…) ಹಾಗೂ ರೂ. 9 ಲಕ್ಷ (ಜಾಯಿಂಟ್ ಎಕೌಂಟ…). ಇಲ್ಲಿ ಪ್ರತಿ ತಿಂಗಳು ಬರುವ ಮಾಸಿಕ ಬಡ್ಡಿಯನ್ನು ಅದೇ ಅಂಚೆ ಕಛೇರಿಯಲ್ಲಿ ಆರ್.ಡಿ. ಮಾಡಿದರೆ ಒಟ್ಟಾರೆ ಪ್ರತಿಫಲ ಶೇ.7.5 ಅಂದಾಜು ದೊರಕುತ್ತದೆ. ಹಲವಾರು ಅಂಚೆಯ ಏಜೆಂಟರು ಈ ರೀತಿ ಖಾತೆ ಮಾಡಿಸಿಕೊಡುತ್ತಾರೆ. ಉತ್ತಮ ಭದ್ರತೆ, ಬಡ್ಡಿದರ, ಮಾಸಿಕ ಬಡ್ಡಿ ಹರಿವು ಇರುವ ಈ ಯೋಜನೆ ತೆರಿಗೆಯಾರ್ಹ ಆದಾಯ. ಹೂಡಿಕೆಯ ಮೇಲೂ ಪ್ರತಿಫಲದ ಮೇಲೂ ಯಾವುದೇ ರೀತಿಯ ಕರ ವಿನಾಯತಿ ಇರುವುದಿಲ್ಲ.
4. ಕಿಸಾನ್ ವಿಕಾಸ ಪತ್ರ (KVP)
ಅಂಚೆ ಕಚೇರಿಯ ಇನ್ನೊಂದು ಯೋಜನೆ. 118 ತಿಂಗಳುಗಳಲ್ಲಿ ಡಬಲ್ ಆಗುವ ಈ ಸ್ಕೀಂ ವಾರ್ಷಿಕ ಶೇ. 7.3 ಪ್ರತಿಫಲ ನೀಡುತ್ತದೆ. ಕನಿಷ್ಠ ಮೊತ್ತ ರೂ. 100, ಗರಿಷ್ಠ ಮಿತಿಯಿಲ್ಲ. ಬಡ್ಡಿಯ ಮೇಲೆ ತೆರಿಗೆ ಇದೆ. ಇದರಲ್ಲಿ ಭದ್ರತೆಯೂ ಇದೆ, ರಿಟರ್ನೂ ಇದೆ. ಆದರೆ ದಿಢೀರ್ ದುಡ್ಡು ಬೇಕೆಂದಾಗ(ಲಿಕ್ವಿಡಿಟಿ) ಸಿಗಲಿಕ್ಕಿಲ್ಲ ಮತ್ತು ಆದಾಯ ತೆರಿಗೆ ಮಟ್ಟಿಗೆ ಆಕರ್ಷಕವಲ್ಲ.
5. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)
15 ವರ್ಷಗಳ ಸಂಪೂರ್ಣ ತೆರಿಗೆ ವಿನಾಯತಿ ಇರುವ ಶೇ.7.6 ಬಡ್ಡಿ ದರದ ಈ ಸಿಹಿ ಅಂಬಟೆಕಾಯಿಯ ಬಗ್ಗೆ ಸವಿವರವಾಗಿ ಕಾಕುವಿನಲ್ಲಿ ಈ ಹಿಂದೆ ಎರಡೆರಡು ಬಾರಿ ಬರೆದಿದ್ದೇನೆ. ಇದರಲ್ಲಿ ರೂ. 1,50,000 ವರೆಗೆ ಸೆಕ್ಷನ್ 80 ಸಿ ಹಾಗೂ ಪ್ರತಿಫಲ ಸಂಪೂರ್ಣವಾಗಿ ಸೆಕ್ಷನ್ 10 ರ ಅನ್ವಯ ಕರರಹಿತ. ಇದು ಭದ್ರತೆ, ರಿಟರ್ನ್, ತೆರಿಗೆ ವಿನಾಯತಿ ಮಟ್ಟಿಗೆ ಉತ್ತಮವಾದರೂ ಲಿಕ್ವಿಡಿಟಿಯ ಮಟ್ಟಿಗೆ ಅಷ್ಟು ಉತ್ತಮವಲ್ಲ. ಆದರೂ ಈ ಯೋಜನೆಯಲ್ಲಿ ಖಾತೆ ತೆರೆದ 3ನೆಯ ವರ್ಷದಿಂದ ಸಾಲ ಸೌಲಭ್ಯವೂ 7ನೆಯ ವರ್ಷದಿಂದ ಅಂಶಿಕ ಹಿಂಪಡೆತವೂ ಇವೆ.
6. ಪೋಸ್ಟಲ್ ಟೈಮ್ ಡೆಪಾಸಿಟ್ (TD)
ಚಾರಿತ್ರಿಕವಾಗಿ ಒಂದು ಉತ್ತಮ ಹೂಡಿಕಾ ಪದ್ಧತಿಯಾಗಿ ಬೆಳೆದು ಬಂದ ಖಜಿಞಛಿ ಈಛಿಟಟsಜಿಠಿ ಎಂಬ ಈ ಎಫ್ಡಿ ಸ್ಕೀಂ ಸದ್ಯಕ್ಕೆ 5 ವರ್ಷಕ್ಕೆ ಶೇ.7.4 ನೀಡುತ್ತದೆ ಹಾಗೂ 1, 2 ಹಾಗೂ 3 ವರ್ಷಗಳಿಗೆ ತಲಾ ಶೇ.6.6, ಶೇ.6.7 ಹಾಗೂ ಶೇ.6.9 ನೀಡುತ್ತದೆ. 5 ವರ್ಷಗಳ ಟಿ.ಡಿ.ಗಳು ಮಾತ್ರ ಸೆಕ್ಷನ್ 80 ಸಿ ಆದಾಯ ವಿನಾಯಿತಿಗೆ ಅರ್ಹ; ಅದರಿಂದ ಅಲ್ಪಕಾಲಿಕ ಡೆಪಾಸಿಟ್‌ಗಳು ಅಲ್ಲ. ಬ್ಯಾಂಕು ಎಫ್ಡಿಗಳ ಮೇಲಿನ ಬಡ್ಡಿ ಶೇ. 6.5-ಶೇ.6.75 ಆಸುಪಾಸು ಇಳಿದ ವೇಳೆ ಅಂಚೆಯಣ್ಣನೇ ಸದ್ಯಕ್ಕೆ ಉತ್ತಮ ಎನ್ನುವುದರಲ್ಲಿ ಸಂಶಯ ಇಲ್ಲ.
7. ಆರ್.ಡಿ.ಗಳು (R.D)
ಅಂಚೆ ಕಚೇರಿಯ ರಿಕರಿಂಗ್ ಡೆಪಾಸಿಟ್ ಅಥವ ನಿರಂತರ ಠೇವಣಿಯಲ್ಲಿ ಪ್ರತಿ ತಿಂಗಳೂ ಒಂದು ನಿಗದಿತ ಮೊತ್ತ ಕಟ್ಟುವ ಕರಾರು. ಇದು 5 ವರ್ಷಗಳ ಸ್ಕೀಂ ಹಾಗೂ ಇದರಲ್ಲಿ ಶೇ.6.9 ಬಡ್ಡಿದರ ಯಾವುದೇ ಕರ ವಿನಾಯಿತಿಗಳು ಇಲ್ಲದೆ ನೀಡಲಾಗುತ್ತದೆ. ಪ್ರತಿ ತ್ತೈಮಾಸಿಕದಲ್ಲಿ ಚಕ್ರೀಕೃತಗೊಳ್ಳುವ ಕಾರಣ ಈ ಬಡ್ಡಿ ವಾರ್ಷಿಕವಾಗಿ ಶೇ.7 ಆಸುಪಾಸಿನಲ್ಲಿ ಪ್ರತಿಫಲ ನೀಡಿದಂತಾಯಿತು. ಇದು ಭದ್ರ. ಆದರೆ, ಬಡ್ಡಿದರ ಸಾಧಾರಣ ಮತ್ತು ಲಿಕ್ವಿಡಿಟಿ ಚೆನ್ನಾಗಿಲ್ಲ.
8. ಸುಕನ್ಯಾ ಸಮೃದ್ಧಿ ಯೋಜನೆ (SSY)
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗಾಗಿ ಮಾತ್ರ ಇರುವ ಈ ಯೋಜನೆ ಈಗ ಶೇ. 8.1 ಕರಮುಕ್ತ ಪ್ರತಿಫಲ ನೀಡುತ್ತದೆ. ಹೂಡಿಕೆಯ ಮೇಲೆಯೂ ಕರವಿನಾಯಿತಿ ಉಳ್ಳ ಈ ಯೋಜನೆ ನಿಗದಿತ ಆದಾಯದ ಯೋಜನೆಗಳ ಪೈಕಿ ಅತ್ಯುತ್ತಮವಾದ¨ªೆಂದು ಹೇಳಬಹುದು. ಈ ಖಾತೆಯನ್ನು ಹೆತ್ತವರು/ರಕ್ಷಕರು ಅಥವಾ 10 ವರ್ಷ ತುಂಬಿದ ನಂತರ ಹೆಣ್ಣುಮಗು ಸ್ವತಃ ಚಲಾಯಿಸಬಹುದಾಗಿದೆ. ಇದಕ್ಕಾಗಿ ಒಂದು ಪಾಸ್ ಬುಕ್ ನೀಡಲಾಗುತ್ತದೆ. ಖಾತೆಯ ಒಟ್ಟು ಅವಧಿ 21 ವರ್ಷ, ಅಂದರೆ ಖಾತೆ ತೆರೆದ ದಿನಾಂಕದಿಂದ 21 ವರ್ಷ ಗಳವರೆಗೆ. ಆ ಮೊದಲೇ ಹೆಣ್ಣು ಮಗುವಿಗೆ 18 ತುಂಬಿದ್ದು ಮದುವೆಯಾದರೆ ಖಾತೆಯನ್ನು ಅಲ್ಲಿಗೇ ಕ್ಲೋಸ್ ಮಾಡ ಬಹುದು. ಅವಧಿ 21 ವರ್ಷಗಳಾದರೂ ಕಂತು ಕಟ್ಟುವ ಅವಧಿ ಕೇವಲ 14 ವರ್ಷಗಳು ಮಾತ್ರ. 21 ವರ್ಷಗಳ ಬಳಿಕ ಖಾತೆ ಮುಂದುವರಿದರೂ ಅದರ ಮೇಲೆ ಬಡ್ಡಿ ಸಿಗುತ್ತಲೇ ಇರುತ್ತದೆ. ಕನಿಷ್ಠ ರೂ. 1,000ದೊಂದಿಗೆ ಈ ಖಾತೆಯನ್ನು ಆರಂಭಿಸ ಬಹುದು. ಬಳಿಕ ವಾರ್ಷಿಕ ಕನಿಷ್ಠ ರೂ. 1,000 ಅಥವಾ ಗರಿಷ್ಠ ರೂ 1,50,000 ಅನ್ನು ಈ ಖಾತೆಗೆ ಕಟ್ಟಬ ಹುದು. ಕನಿಷ್ಠ ಪಾವತಿ ಮಾಡದ ವರ್ಷ ರೂ.50 ದಂಡ ತಗಲುತ್ತದೆ.
ಗಮನಿಸಿ
ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಪ್ರತಿಬಾರಿ ಪರಿಷ್ಕೃತಗೊಳ್ಳುವ ಹೊಸ ದರಗಳು ಹಳೆಯ ಹಾಗೂ ಹೊಸ ಖಾತೆಗಳೆಲ್ಲವುಗಳಿಗೂ ಸಮಾನವಾಗಿ ಅನ್ವಯಿಸುತ್ತವೆ. ಉಳಿದೆÇÉಾ ಯೋಜನೆಗಳಲ್ಲೂ ಪರಿಷ್ಕರಣೆಯ ಬಳಿಕ ತೆರೆದ ಖಾತೆಗಳಿಗೆ ಮಾತ್ರ ಅನ್ವಯಿಸುತ್ತವೆ. ಅಂದರೆ, ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳೂ ಪ್ರತಿ ವರ್ಷವೂ ಹೂಡಿಕೆ ಮಾಡುತ್ತಾ ಹೋಗುವ ಖಾತೆಗಳು. ಅಂತಹ ಖಾತೆಗಳ ಮೇಲೆ ಪ್ರತಿ ತ್ತೈಮಾಸಿಕಕ್ಕೆ ಆವಾಗ ಪ್ರಚಲಿತವಾಗಿರುವ ಬಡಿª ದರಗಳನ್ನು ಅನ್ವಯಿಸಲಾಗುತ್ತವೆ. ಉಳಿದೆÇÉಾ ಖಾತೆಗಳು ಸಿಂಗಲ್ ಡೆಪಾಸಿಟ್ ಅಥವಾ ಏಕಗಂಟಿನಲ್ಲಿ ಹೂಡಿಕೆ ಮಾಡುವಂತವುಗಳು. ಅವುಗಳ ಮೇಲೆ ಸಿಗುವ ಅಂತ್ಯದವರೆಗಿನ ಬಡ್ಡಿ ದರವು ಹೂಡಿಕೆಯ ಸಮಯದ ದರವನ್ನು ಅನುಸರಿಸುತ್ತವೆ. ಅವು ಪ್ರತಿ ತ್ತೈಮಾಸಿಕದಲ್ಲಿ ಬದಲಾಗುವ ಬಡ್ಡಿ ದರಗಳನ್ನು ಅನುಸರಿಸುವುದಿಲ್ಲ. ಅದಲ್ಲದೆ, ಆರ್.ಡಿ. ಖಾತೆಗಳಲ್ಲೂ ಆರಂಭದ ಬಡ್ಡಿದರ ಕೊನೆಯವರೆಗೆ ಸಿಗುತ್ತದೆ. ಎÇÉಾ ಹೂಡಿಕೆದಾರರೂ ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
– ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.