ಪೋಸ್ಟಾಫೀಸಿನ ಹೂಡಿಕೆಗಳಲ್ಲಿ 0.1%ಸಾಂಕೇತಿಕ ದರ ಕಡಿತ


Team Udayavani, Apr 3, 2017, 6:52 PM IST

Indian-Postal-Department-Logo-75.jpg

ಜನಸಾಮಾನ್ಯರ ಆಪತ್ಭಾಂದವನೆಂದೇ ಪ್ರಸಿದ್ಧವಾಗಿರುವ ಅಂಚೆಯಣ್ಣನ ಸಣ್ಣ ಉಳಿತಾಯ ಯೋಜನೆಯಲ್ಲಿ ಮಗದೊಮ್ಮೆ ಬಡ್ಡಿ ದರ ಇಳಿಕೆಯಾಗಿದೆ. ಇದೇ ಎಪ್ರಿಲ್‌ 1ರಿಂದ ಆರಂಭಗೊಂಡಂತೆ ಜೂನ್‌ 30ರವರೆಗಿನ ಬಡ್ಡಿ ದರಗಳಲ್ಲಿ 0.1% ಕಡಿತವನ್ನು ಸರಕಾರ ಇದೀಗ ಘೋಷಿಸಿದೆ. 

ಫೆಬ್ರವರಿ 2016ರಲ್ಲಿ ತೆಗೆದುಕೊಂಡ ನಿರ್ಣಯದಂತೆ ಸಣ್ಣ ಉಳಿತಾಯದ ಬಡ್ಡಿ ದರಗಳು ಪ್ರತಿ ತ್ತೈಮಾಸಿಕಕ್ಕೊಮ್ಮೆ ಬದಲಾಗುತ್ತವೆ. ಆ ಮೊದಲು ಅವು ವರ್ಷಕ್ಕೊಮ್ಮೆ ಬದಲಾಗುತ್ತಿದ್ದವು ಮತ್ತು ಅದಕ್ಕೂ ಮೊದಲು ಯಾವಾಗಾದರೊಮ್ಮೆ ಬಡ್ಡಿ ದರಗಳು ಬದಲಾಗುತ್ತಿದ್ದವು. ಸದ್ಯದ ಪದ್ಧತಿಯಲ್ಲಿ ಮಾರುಕಟ್ಟೆ ದರಕ್ಕೆ ಅನುಸಾರವಾಗಿ ಪ್ರತಿ ಜನವರಿ, ಎಪ್ರಿಲ್‌, ಜುಲೈ ಹಾಗೂ ಅಕ್ಟೋಬರ್‌ 1ನೆಯ ತಾರೀಕಿನಿಂದ ಅನ್ವಯವಾಗುವಂತೆ ಬಡ್ಡಿ ದರಗಳು ಪರಿಷ್ಕೃತಗೊಳ್ಳುತ್ತವೆ. 

ಅತಿ ಮುಖ್ಯವಾಗಿ ಪಿಪಿಎಫ್ ಖಾತೆಯ ಬಡ್ಡಿದರವನ್ನು 8%ದಿಂದ 7.9%ಕ್ಕೆ ಇಳಿಸಲಾಗಿದೆ. ಅಲ್ಲದೆ, ಸುಕನ್ಯಾ ಸಮೃದ್ಧಿ ಹಾಗೂ ಸೀನಿಯರ್‌ ಸಿಟಿಜನ್‌ ಯೋಜನೆಗಳ ಬಡ್ಡಿ ದರಗಳನ್ನು ಕೂಡ 8.5%ದಿಂದ 8.4%ಕ್ಕೆ ಇಳಿಸಲಾಗಿದೆ. ಅಷ್ಟೇ ಅಲ್ಲದೆ ಕಿಸಾನ್‌ ವಿಕಾಸ ಪತ್ರದ ದರವನ್ನು 7.7%ದಿಂದ 7.6%ಕ್ಕೂ (112 ಮಾಸ ಅವಧಿ), ರಾಷ್ಟ್ರೀಯ ಉಳಿತಾಯ ಪತ್ರದ ದರವನ್ನು 8.0%ದಿಂದ 7.9%ಕ್ಕೂ, ಮಂತ್ಲಿ ಇನ್‌ಕಂ ಸ್ಕೀಮ್‌ ದರವನ್ನು 7.7%ದಿಂದ 7.6%ಕ್ಕೂ ಇಳಿಸಲಾಗಿದೆ. ಉಳಿದಂತೆ ವಿವಿಧ ಅವಧಿ ಠೇವಣಿಗಳ ದರಗಳನ್ನೂ ಇಳಿಸಲಾಗಿದೆ (ಟೇಬಲ್‌ ನೋಡಿ). ಅಂಚೆ ಇಲಾಖೆಯ ಸೇವಿಂಗ್ಸ್‌ ಖಾತೆಯ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ.ಅದು ಈವರೆಗೆ 4% ಇದ್ದಿದ್ದು ಇನ್ನು ಮುಂದೆಯೂ 4% ಇರಲಿದೆ. ಈ ದರ ಕಡಿತದಿಂದ ವಿಶೇಷವಾದ ಯಾವ ವ್ಯತ್ಯಾಸವೂ ಉಂಟಾಗಲಾರದು. ಅದು ಯಾಕೆಂದರೆ ಈ ಬಾರಿ ದರ ಕಡಿತ ಕೇವಲ 0.1%ಕ್ಕೆ ಸೀಮಿತವಾಗಿದೆ. ಇದೊಂದು ರೀತಿಯ ಸಾಂಕೇತಿಕ ದರ ಕಡಿತ ಎನ್ನಬಹುದು. ಈ ಸಂದರ್ಭದಲ್ಲಿ ಪೋಸ್ಟಾಫೀಸಿನ ಕೆಲ ಮುಖ್ಯ ಹೂಡಿಕೆಗಳ ಬಗ್ಗೆ ಸ್ಥೂಲವಾಗಿ ತಿಳಿದುಕೊಳ್ಳೋಣ:

1. ಸೀನಿಯರ್‌ ಸಿಟಿಜನ್‌ ಸೇವಿಂಗ್‌ ಸ್ಕೀಂ (SCSS): 60 ವರ್ಷ ಮೀರಿದ ಸೀನಿಯರ್‌ ಸಿಟಿಜನ್‌ಗಳಿಗಾಗಿಯೇ ಸರಕಾರವು ಅಂಚೆ ಕಚೇರಿಗಳಲ್ಲಿ ಆರಂಭಿಸಿದ ಈ ನಿಗದಿತ ಆದಾಯದ ಸ್ಕೀಂ ಯಾವುದೇ ರಿಸ್ಕ್ ಇಲ್ಲದೆ 8.4% ಬಡ್ಡಿ ನೀಡುತ್ತದೆ. ಬಡ್ಡಿಯು ಪ್ರತಿ ತ್ತೈಮಾಸಿಕ ಕೈಸೇರುತ್ತದೆ. ಒಬ್ಬ ವ್ಯಕ್ತಿ ಕನಿಷ್ಠ 1000ದಿಂದ ಆರಂಭಿಸಿ 15 ಲಕ್ಷ ರೂಪಾಯಿಗಳವರೆಗೆ ಇದರಲ್ಲಿ ಹೂಡಬಹುದು. ಇದು 5 ವರ್ಷಗಳ ಸ್ಕೀಂ ಆಗಿದ್ದು, ಅಂತ್ಯದಲ್ಲಿ ಇನ್ನೂ 3 ವರ್ಷಗಳಿಗೆ ಒಂದು ಬಾರಿ ನವೀಕರಿಸಬಹುದಾಗಿದೆ. ಈ ಖಾತೆಯಲ್ಲಿ ಹೂಡಿದ ಮೊತ್ತಕ್ಕೆ ಸೆಕ್ಷನ್‌ 80 ಸಿ ಅಡಿಯಲ್ಲಿ ಆದಾಯ ವಿನಾಯಿತಿ ಪಡೆಯಬಹುದಾಗಿದೆ. ಆದರೆ ಇದರಿಂದ ಪಡೆಯುವ ಬಡ್ಡಿ ಸಂಪೂರ್ಣವಾಗಿ ಆದಾಯ ತೆರಿಗೆಗೆ ಒಳಪಡುತ್ತದೆ. 

2. ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ (NSC): ಅಂಚೆಯಣ್ಣನ ಇನ್ನೊಂದು ಭದ್ರ ಯೋಜನೆ. 5 ವರ್ಷಗಳ ಅವಧಿಯ ಈ ಸರ್ಟಿಫಿಕೇಟ್‌ ಅಂತ್ಯದಲ್ಲಿ ಮಾತ್ರ ದುಡ್ಡು ನೀಡುತ್ತದೆ. ಆದರೆ, ವಾರ್ಷಿಕ 7.9% ಲೆಕ್ಕದಲ್ಲಿ ಬಡ್ಡಿ ಕ್ರೆಡಿಟ್‌ ಆಗುತ್ತದೆ. ಕನಿಷ್ಠ ಮೊತ್ತ ರೂ. 500 ಆಗಿದ್ದು, ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಇದರಲ್ಲಿ ಹೂಡಿದ ಮೊತ್ತ ಸೆಕ್ಷನ್‌ 80 ಸಿ ಅಡಿಯಲ್ಲಿ ಆದಾಯ ವಿನಾಯಿತಿ ಪಡೆಯುತ್ತದಲ್ಲದೆ, ಇದರಿಂದ ಉತ್ಪತ್ತಿಯಾಗುವ ವಾರ್ಷಿಕ ಬಡ್ಡಿ ಕೂಡ ಕೈಸೇರದಿದ್ದರೂ ಮರುಹೂಡಿಕೆಯ ಹೆಸರಿನಲ್ಲಿ ಸೆಕ್ಷನ್‌ 80 ಸಿ ಅಡಿಯಲ್ಲಿ ವಿನಾಯಿತಿ ಪಡೆಯುತ್ತದೆ. ಆದರೆ ಅಂತಹ ಬಡ್ಡಿಯನ್ನು ಆ ವರ್ಷದ ತೆರಿಗೆಯಾರ್ಹ ಆದಾಯಕ್ಕೆ ಸೇರಿಸಿ ತೆರಿಗೆ ಕಟ್ಟತಕ್ಕದ್ದು. 

3. ಮಂತ್ಲಿ ಇನ್‌ಕಂ ಸ್ಕೀಂ (MIS): ಪ್ರತಿ ತಿಂಗಳೂ ಬಡ್ಡಿ ನೀಡುವ 5 ವರ್ಷಗಳ ಈ ಸ್ಕೀಂ ವಾರ್ಷಿಕ 7.6% ಬಡ್ಡಿ ನೀಡುತ್ತದೆ. ಗರಿಷ್ಠ ಮೊತ್ತ ರೂ. 4.5 ಲಕ್ಷ (ಸಿಂಗಲ್‌ ಎಕೌಂಟ್‌), ರೂ. 9 ಲಕ್ಷ (ಜಾಯಿಂಟ್‌ ಎಕೌಂಟ್‌)ಆಗಿರುತ್ತದೆ. ಇಲ್ಲಿ ಪ್ರತಿ ತಿಂಗಳು ಬರುವ ಮಾಸಿಕ ಬಡ್ಡಿಯನ್ನು ಅದೇ ಅಂಚೆ ಕಚೇರಿಯಲ್ಲಿ ಆರ್‌ಡಿ ಮಾಡಿದರೆ ಒಟ್ಟಾರೆ ಪ್ರತಿಫ‌ಲ 8% ಅಂದಾಜು ದೊರಕುತ್ತದೆ. ಹಲವಾರು ಏಜೆಂಟರು ಈ ರೀತಿ ಖಾತೆ ಮಾಡಿಸಿಕೊಡುತ್ತಾರೆ. ಉತ್ತಮ ಭದ್ರತೆ, ಬಡ್ಡಿದರ, ಮಾಸಿಕ ಬಡ್ಡಿಹರಿವು ಇರುವ ಈ ಯೋಜನೆ ತೆರಿಗೆಯಾರ್ಹ ಆದಾಯ. ಹೂಡಿಕೆ ಮೇಲೂ ಪ್ರತಿಫ‌ಲದ ಮೇಲೂ ಯಾವುದೇ ರೀತಿ ಕರವಿನಾಯತಿ ಇರುವುದಿಲ್ಲ.

4. ಕಿಸಾನ್‌ ವಿಕಾಸ ಪತ್ರ (KVP): ಅಂಚೆ ಕಚೇರಿಯ ಇನ್ನೊಂದು ಯೋಜನೆ. 112 ತಿಂಗಳುಗಳಲ್ಲಿ ಡಬಲ್‌ ಆಗುವ ಈ ಸ್ಕೀಂ ವಾರ್ಷಿಕ 7.6% ಪ್ರತಿಫ‌ಲ ನೀಡುತ್ತದೆ. ಕನಿಷ್ಠ ಮೊತ್ತ ರೂ. 100, ಗರಿಷ್ಠ ಮಿತಿಯಿಲ್ಲ. ಬಡ್ಡಿಯ ಮೇಲೆ ತೆರಿಗೆ ಇದೆ. ಇದರಲ್ಲಿ ಭದ್ರತೆ, ಪ್ರತಿಫ‌ಲವೂ ಇದೆ. ಆದರೆ ದಿಢೀರ್‌ ದುಡ್ಡು ಬೇಕೆಂದಾಗ (ಲಿಕ್ವಿಡಿಟಿ), ತೆರಿಗೆಯ ಮಟ್ಟಿಗೆ ಆಕರ್ಷಕವಲ್ಲ.

5. ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌(PPF): 15 ವರ್ಷಗಳ ತೆರಿಗೆ ವಿನಾಯಿತಿ ಇರುವ, 7.9% ಬಡ್ಡಿದರದ ಈ ಸಿಹಿ ಅಂಬಟೆಕಾಯಿಯ ಬಗ್ಗೆ ಸವಿವರವಾಗಿ ಕಾಕುವಿನಲ್ಲಿ ಈ ಹಿಂದೆ ಬರೆದಿದ್ದೇನೆ. ಇದರಲ್ಲಿ ರೂ. 1,50,000ವರೆಗೆ ಸೆಕ್ಷನ್‌ 80 ಸಿ ಹಾಗೂ ಪ್ರತಿಫ‌ಲ ಸಂಪೂರ್ಣವಾಗಿ ಸೆಕ್ಷನ್‌ 10ರ ಅನ್ವಯ ಕರರಹಿತ. ಇದು ಭದ್ರತೆ, ರಿಟರ್ನ್, ತೆರಿಗೆ ವಿನಾಯಿತಿ ಮಟ್ಟಿಗೆ ಉತ್ತಮವಾದರೂ ಲಿಕ್ವಿಡಿಟಿಯ ಮಟ್ಟಿಗೆ ಅಷ್ಟು ಉತ್ತಮವಲ್ಲ. ಆದರೂ ಈ ಯೋಜನೆಯಲ್ಲಿ ಖಾತೆ ತೆರೆದ 3ನೆಯ ವರ್ಷದಿಂದ ಸಾಲ ಸೌಲಭ್ಯವೂ 7ನೆಯ ವರ್ಷದಿಂದ ಆಂಶಿಕ ಹಿಂಪಡೆತವೂ ಇವೆ. 

6. ಪೋಸ್ಟಲ್‌ ಟೈಮ್‌ ಡೆಪಾಸಿಟ್‌ (TD): ಚಾರಿತ್ರಿಕವಾಗಿ ಒಂದು ಉತ್ತಮ ಹೂಡಿಕಾ ಪದ್ಧತಿಯಾಗಿ ಬೆಳೆದು ಬಂದ ಟೈಮ್‌ ಡೆಪಾಸಿಟ್‌ ಎಂಬ ಈ ಎಫ್ಡಿ ಸ್ಕೀಂ ಇನ್ನು ಮುಂದೆ 5 ವರ್ಷಕ್ಕೆ 7.7% ನೀಡುತ್ತದೆ ಹಾಗೂ 1, 2 ಹಾಗೂ 3 ವರ್ಷಗಳಿಗೆ 6.7%, 7.0%, 7.2% ನೀಡುತ್ತದೆ. 5 ವರ್ಷಗಳ ಟಿಡಿಗಳು ಮಾತ್ರ ಸೆಕ್ಷನ್‌ 80 ಸಿ ಆದಾಯ ವಿನಾಯಿತಿಗೆ ಅರ್ಹ; ಅದರಿಂದ ಅಲ್ಪಕಾಲಿಕ ಡೆಪಾಸಿಟ್‌ಗಳು ಅಲ್ಲ. ಬ್ಯಾಂಕು ಎಫ್ಡಿಗಳ ಮೇಲಿನ ಬಡ್ಡಿ 7.0% ಆಸುಪಾಸು ಇಳಿದ ಸಂದರ್ಭದಲ್ಲಿ ಅಂಚೆಯಣ್ಣನೇ ಉತ್ತಮ ಅನ್ನಿಸುತ್ತದೆ.

7. ಸುಕನ್ಯಾ ಸಮೃದ್ಧಿ ಯೋಜನೆ (SSS): 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗಾಗಿ ಮಾತ್ರ ಇರುವ ಈ ಯೋಜನೆ ಈಗ 8.4% ಕರಮುಕ್ತ ಪ್ರತಿಫ‌ಲ ನೀಡುತ್ತದೆ. ಹೂಡಿಕೆಯ ಮೇಲೆಯೂ ಬಡ್ಡಿಯ ಮೇಲೂ ಹಿಂಪಡೆತದ ಮೇಲೂ ಕರವಿನಾಯಿತಿ ಉಳ್ಳ ಈ ಯೋಜನೆ ನಿಗದಿತ ಆದಾಯದ ಯೋಜನೆಗಳ ಪೈಕಿ ಅತ್ಯುತ್ತಮವಾದದ್ದೆಂದು ಹೇಳಬಹುದು.  

8. ಆರ್‌ಡಿಗಳು (RD): ಅಂಚೆ ಕಚೇರಿಯ ರಿಕರಿಂಗ್‌ ಡೆಪಾಸಿಟ್‌ ಅಥವಾ ನಿರಂತರ ಠೇವಣಿಯಲ್ಲಿ ಪ್ರತಿ ತಿಂಗಳೂ ಒಂದು ನಿಗದಿತ ಮೊತ್ತ ಕಟ್ಟುವ ಕರಾರು. ಇದು 5 ವರ್ಷಗಳ ಸ್ಕೀಂ ಹಾಗೂ ಇದರಲ್ಲಿ 7.2% ಬಡ್ಡಿದರ ಯಾವುದೇ ಕರವಿನಾಯಿತಿಗಳು ಇಲ್ಲದೆ ನೀಡಲಾಗುತ್ತದೆ. ಪ್ರತಿ ತ್ತೈಮಾಸಿಕದಲ್ಲಿ ಚಕ್ರೀಕೃತಗೊಳ್ಳುವ ಕಾರಣ ಈ ಬಡ್ಡಿ ವಾರ್ಷಿಕವಾಗಿ ಸುಮಾರು 7.4% ಪ್ರತಿಫ‌ಲ ನೀಡಿದಂತಾಯಿತು. ಇದು ಭದ್ರ. ಆದರೆ, ಬಡ್ಡಿದರ ಸಾಧಾರಣ ಮತ್ತು ಲಿಕ್ವಿಡಿಟಿ ಚೆನ್ನಾಗಿಲ್ಲ.

ಗಮನಿಸಿ: ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಈ ಹೊಸ ದರಗಳು ಹಳೆ ಹಾಗೂ ಹೊಸ ಖಾತೆಗಳಿಗೂ ಅನ್ವಯಿಸುತ್ತವೆ. ಉಳಿದೆಲ್ಲ ಖಾತೆಗಳಲ್ಲಿ ಬಡ್ಡಿ ದರಗಳು ಎಪ್ರಿಲ್‌ 1ರ ಬಳಿಕ ತೆರೆಯಲ್ಪಡುವ ಹೊಸ ಖಾತೆಗಳಿಗೆ ಮಾತ್ರ ಅನ್ವಯವಾಗಲಿವೆ. ಅಂದರೆ, ಪಿಪಿಎಫ್ ಗೂ ಸುಕನ್ಯಾ ಸಮೃದ್ಧಿ ಯೋಜನೆಗಳು ಪ್ರತಿ ವರ್ಷವೂ ಹೂಡಿಕೆ ಮಾಡುತ್ತಾ ಹೋಗುವ ಖಾತೆಗಳು. ಅಂತಹ ಖಾತೆಗಳ ಮೇಲೆ ಪ್ರತಿ ತ್ತೈಮಾಸಿಕಕ್ಕೆ ಆವಾಗ ಪ್ರಚಲಿತವಾಗಿರುವ ಬಡ್ಡಿ ದರಗಳನ್ನು ಅನ್ವಯಿಸಲಾಗುತ್ತವೆ. ಉಳಿದೆಲ್ಲ ಖಾತೆಗಳು ಸಿಂಗಲ್‌ ಡೆಪಾಸಿಟ್‌ ಅಥವಾ ಏಕಗಂಟಿನಲ್ಲಿ ಹೂಡಿಕೆ ಮಾಡುವಂಥವುಗಳು. ಅವುಗಳ ಮೇಲೆ ಸಿಗುವ ಅಂತ್ಯದವರೆಗಿನ ಬಡ್ಡಿ ದರವು ಹೂಡಿಕೆಯ ಸಮಯದ ದರವನ್ನು ಅನುಸರಿಸುತ್ತದೆ. ಅವು ಪ್ರತಿ ತ್ತೈಮಾಸಿಕದಲ್ಲಿ ಬದಲಾಗುವ ಬಡ್ಡಿ ದರಗಳನ್ನು ಅನುಸರಿಸುವುದಿಲ್ಲ. ಇದಕ್ಕೆ ಅಪವಾದವೆಂಬಂತೆ ಆರ್‌ಡಿ ಖಾತೆಗಳಲ್ಲಿ ಆರಂಭದ ಬಡ್ಡಿದರ ಕೊನೆಯವರೆಗೆ ಸಿಗುತ್ತದೆ. ಎಲ್ಲ ಹೂಡಿಕೆದಾರರೂ ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

– ಜಯದೇವ ಪ್ರಸಾದ ಮೊಳೆಯಾರ ; [email protected]

ಟಾಪ್ ನ್ಯೂಸ್

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.