ಛೋಟಾ ಬಿಸಿನೆಸ್‌ ಮತ್ತು ಪ್ರೊಫೆಶನಲ್‌ ಆದಾಯಕ್ಕೆ ಸುಗಮ ತೆರಿಗೆ 


Team Udayavani, Jul 16, 2018, 8:46 AM IST

chota-business.jpg

ಗುರುಗುಂಟಿರಾಯರು ತಮ್ಮ ಪೆನ್ಶನ್‌ ಆದಾಯದ ಒಂದೊಂದು ಪೈಯನ್ನೂ ಕ್ಯಾಲಿಕ್ಯುಲೇಟರಿನಲ್ಲಿ ಬಟನ್‌ ಒತ್ತೀ ಒತ್ತೀ ಒಳ ದಬ್ಬುತ್ತಾ ಟ್ಯಾಕ್ಸ್‌ ಲೆಕ್ಕ ಹಾಕುತ್ತಾ ದಿನಗಳೆಯುತ್ತಿದ್ದರೆ ಪಕ್ಕದ್ಮನೆ ಬಿಸ್ನೆಸ್‌ ಹುಡುಗ ದಿನಾ ಬೆಳಗ್ಗೆ ಎಂಬಂತೆ ಬೈಕ್‌ ಏರಿ ಆರಾಮವಾಗಿ ತಿರುಗಾಡುತ್ತಿದ್ದ. ಅಂದರೆ, ಜುಲೈ ಮಾಸದ ಕರಬಿಸಿ ಆತನಿಗಿನ್ನೂ ತಟ್ಟಿದಂತೆ ಕಾಣಿಸುತ್ತಿರಲಿಲ್ಲ. ಇದನ್ನು ನೋಡಿ ರಾಯರಿಗೆ ತಕ್ಕಮಟ್ಟಿಗೆ ಕನೂ#éಶನ್‌ ಉಂಟಾಯಿತು. ಬಹೂರಾಣಿಯೇ ಅಗಾಗ್ಗೆ ಹೇಳುತ್ತಿದ್ದಂತೆ ಪಕ್ಕದ್ಮನೆ ಹುಡುಗ ಅದೇನೋ ಹೊಸ ಬಿಸಿನೆಸ್‌ ಆರಂಭಿಸಿ ಒಳ್ಳೆ ಸಂಪಾದನೆಯನ್ನೂ ಮಾಡಿಕೊಳ್ತಾ ಇ¨ªಾನಂತೆ. ಬುದ್ಧಿವಂತ ಹುಡ್ಗ, ನೋಡಲೂ ಯಶ್‌ ಥರ ಇರುವವನಿಗೆ ತನ್ನದೇ ಊರಿನ ಒಂದು ಹುಡುಗಿಯನ್ನು ಗಂಟು ಹಾಕಿದರೆ ತನಗೂ ಒಂದು ಕಂಪೆನಿ ಅಂತ ಇರುತ್ತೆ; ಅಲ್ಲದೆ, ಪಕ್ಕದ್ಮನೆ ಪೊಲಿಟಿಕ್ಸ್‌ ಮೇಲೂ ಒಂದು ನಿಯಂತ್ರಣ ಸಾಧಿಸಿದಂತಾಗುತ್ತದೆ ಎನ್ನುವ ಹುನ್ನಾರದಲ್ಲಿ ಬಹೂರಾಣಿ ಸ್ಕೆಚ್‌ ಹಾಕುತ್ತಿರುವುದು ಅವರಿಗೂ ಗೊತ್ತಿತ್ತು. ಅಷ್ಟೆÇÉಾ ಸಕ್ಸೆಸ್‌ಫ‌ುಲ್‌ ಅಗಿದ್ದು ಉತ್ತಮ ಆದಾಯವಿರುವ ಆ ಬೈಕ್‌ ಮೇಲಿನ ಕೂಲಿಂಗ್ಲಾಸಿಗೆ ಆದಾಯ ತೆರಿಗೆಯ ಬಿಸಿ ಇನ್ನೂ ಯಾಕೆ ತಟ್ಟಿಲ್ಲ ಎನ್ನುವುದೇ ಅವರ ಕನೂ#éಶನ್‌. 

ಕುತೂಹಲ ತಡೆಯಲಾರದೆ ಸಕಲಕಲಾವಲ್ಲಭೆ, ಸರ್ವಜ್ಞೆ, ಕರಕಾನೂನು ಕರತಲಾಮಲಕೆ ಬಹೂರಾಣಿಯನ್ನು ನಿನ್ನೆಯ ಸಂಡೆ ದಿನ ಕೇಳಿಯೇ ಬಿಟ್ಟರು. “ಬಹೂ, ಆ ನಿನ್ನ ಪಕ್ಕದ್ಮನೆ ಹುಡುಗನಿಗೆ ಟ್ಯಾಕ್ಸ್‌ ಭೀತಿ ತಟ್ಟಿದಂತಿಲ್ಲ. ಏಕೆ? ಬಹೂರಾಣಿ ಮದಸ್ಮಿತಳಾದಳು, ಮಾವಾ ಅವನಿಗೆ ಸುಗಮ ತೆರಿಗೆ; ಸೆಕ್ಷನ್‌ ಫಾರ್ಟಿಫೋರ್‌ ಅಂದಳು.
ಕರಾವಳಿಯಲ್ಲಿ ಗಲಭೆ ಉಂಟಾದಾಗ ಡಿಸಿಗಳು ಜಡಿಯುವ ಸೆಕ್ಷನ್‌ ವನ್‌ ಫಾರ್ಟಿಫೋರ್‌ ಮಾತ್ರ ಬಲ್ಲ ರಾಯರ ಕನೂ#$Âಶನ್‌ ಮಟ್ಟ ಇನ್ನೂ ಒಂದಿಂಚು ಏರಿತು. ಏನಿದು ಸೆಕ್ಷನ್‌ ಫಾರ್ಟಿ ಫೋರ್‌? ಮತ್ತೆ ಅದೇನು ಸುಗಮ? ಬಸ್‌ ಕಂಪೆನಿಯಂತೂ ಅಲ್ಲ ತಾನೇ? 

ಇದೀಗ, ಕನೂ#$Âಶನ್‌ ತೀರ್ಕಣಮೇ……….
*** 
ಸಂಬಳದ ಆದಾಯವನ್ನು ಹೊರತುಪಡಿಸಿ ಬೇರೆ ಉಳಿದ ಆದಾಯಗಳಿಂದ ಬರಬೇಕಾದ ಆದಾಯಕರ ನಮ್ಮ ಘನ ಭಾರತ ಸರಕಾರಕ್ಕೆ ಸಂಪೂರ್ಣವಾಗಿ ಸಿಗುವುದೇ ಇಲ್ಲ. ಅತ್ಯಂತ ಹೆಚ್ಚು ಕರವಸೂಲಿ ಮಾಡುವ ಗುರಿ ಸರಕಾರ¨ªಾದರೆ ಅತ್ಯಂತ ಕಡಿಮೆಯಲ್ಲಿ ಹೇಗೆ ಸುಧಾರಿಸಬಹುದು ಎಂಬುದು ಜನರ ಪ್ರಯತ್ನ. ಜನ ತೆರಿಗೆ ಕಟ್ಟದೆ ವಂಚಿಸುತ್ತಾರೆ ಎಂಬುದು ಸರಕಾರದ ಆರೋಪವಾದರೆ ನಾವು ಕಟ್ಟಿದರೆ ಅದು ಸರಿಯಾಗಿ ವಿನಿಯೋಗ ಎಲ್ಲಿ ಆಗುತ್ತದೆ, ಅವರೇ ಅದನ್ನು ತಿಂದು ಹಾಕುವುದಿಲ್ಲವೇ ಎನ್ನುವುದು ಜನತೆಯ ಪ್ರತ್ಯಾರೋಪ. ಇನ್ನೊಬ್ಬನ ಭ್ರಷ್ಟಾಚಾರ ಮಾತ್ರ ಭ್ರಷ್ಟಾಚಾರ,ತಾನು ಮಾಡುವುದನ್ನು ಸಣ್ಣ ಮಟ್ಟಿನ ಜೀವನದ ಜಾಣ್ಮೆಯೆಂದೇ ಪ್ರತಿಪಾದಿಸುವ ನಮ್ಮ ಜನರ ದೆಸೆಯಿಂದ ಇಂದು ನಮ್ಮ ದೇಶದೊಳಗೆ ಶೇಕಡಾ ಐವತ್ತಕ್ಕೂ ಮೀರಿ ಕಪ್ಪುಹಣ ಹರಿದಾಡುತ್ತಿದೆ. ಆದರೂ ರಾಜಕಾರಣಿಗಳು ಸ್ವಿಸ್‌ ಬ್ಯಾಂಕಿನಲ್ಲಿಟ್ಟಿರಬಹುದಾದ ದುಡ್ಡನ್ನು ಮಾತ್ರ ಕಪ್ಪುಹಣವೆಂದು ನಾವು ವಾದಿಸಿ ಅನಕ್ಷರಸ್ಥರಂತೆ ಫೇಸುºಕ್ಕಿನಲ್ಲಿ ಶೇರ್ಡ್‌ ಮೆಸೇಜುಗಳಿಗೆ ಹೆಬ್ಬೆಟ್ಟು ಒತ್ತುತ್ತೇವೆ.
ಈ ಕಪ್ಪುಹಣ ನಮ್ಮ ದೇಶದ ಪ್ರಾಬಲ್ಯವೂ ಹೌದು, ದೌರ್ಬಲ್ಯವೂ ಹೌದು. ಆದಷ್ಟು ಮಟ್ಟಿಗೆ ಸರಕಾರ ತೆರಿಗೆ ಸಂಗ್ರಹಕ್ಕಾಗಿ ತನಿಖೆ, ರೈಡು, ಇತ್ಯಾದಿಗಳನ್ನು ಮಾಡುತ್ತಲೇ ಇದ್ದರೂ ಅದರಲ್ಲಿ ಸಂಪೂರ್ಣ ಸಫ‌ಲವಾಗಲಾರದೆ ಕೆಲವೊಮ್ಮೆ ಜನತೆಯ ಕೈಕಾಲು ಹಿಡಿದು ಅಪ್ಪಾ ಗುರುವೇ, ಒಂದು ಸ್ವಲ್ಪಾನಾದ್ರೂ ಟಾಕ್ಸ್‌ ಕೊಡ್ರಪ್ಪ ಎಂದು ಗೋಗರೆಯುವುದೂ ಇದೆ’. ಅಮ್ನೆಸ್ಟಿ ಸ್ಕೀಮ್‌ ಎಂಬ ಪ್ರಾಮಾಣಿಕರ ಮೇಲೆ ಬಗೆದ ಪರಮ ಅನ್ಯಾಯದ ಸ್ಕೀಮು ಅವುಗಳಲ್ಲಿ ಒಂದಾದರೆ ಕೆಲವು ವರ್ಷಗಳ ಹಿಂದೆ ಆರಂಭಿಸಿದ ಪ್ರಿಸಂಪ್ಟಿವ್‌ ಟ್ಯಾಕ್ಸೇಶನ್‌ ಸ್ಕೀಮು ಕೈಕಾಲು ಹಿಡಿಯುವ ಸ್ಕೀಮುಗಳಲ್ಲಿ ಇನ್ನೊಂದು ಬಗೆಯದ್ದು.

ಏನಿದು ಪ್ರಿಸಂಪ್ಟಿವ್‌ ಟ್ಯಾಕ್ಸ್‌?
ಪ್ರಿಸಂಪ್ಟಿವ್‌ ಟ್ಯಾಕ್ಸ್‌ ಅಥವಾ ಪ್ರಕಲ್ಪಿತ ತೆರಿಗೆ ಎಂಬುದು ಒಂದು ಸಣ್ಣ ಬಿಸಿನೆಸ್ನಿಂದ ಬಿಸಿನೆಸ್‌ ಆದಾಯ ಇರುವವರಿಗಿರುವ ಆದಾಯ ತೆರಿಗೆ ಕಾನೂನು. ದೇಶದಾದ್ಯಂತ ಪಸರಿಸಿರುವ ಕೋಟ್ಯಂತರ ಛೋಟಾ ಬಿಸಿನೆಸ್‌ ಹಾಗೂ ಪ್ರೊಫೆಶನಲ್ಸ… ಮೇಲೆ ಯಾವುದೇ ಲೆಕ್ಕ ಪತ್ರದ, ಆಯ-ವ್ಯಯಗಳ ಲೆಕ್ಕಾಚಾರವಿಲ್ಲದೆ ಕೇವಲ ಬಿಸಿನೆಸ್‌ ಗಾತ್ರ ಅಥವ ಟರ್ನೋವರ್‌ ಮೇಲೆ ಇಂತಿಷ್ಟು ಅಂತ ತೆರಿಗೆ ಲೆಕ್ಕ ಹಾಕುವ ಒಂದು ಸುಲಭ ಯೋಜನೆ. ಕೇವಲ ನಿಗದಿತ ಊಹ್ಯ ಆದಾಯದ ಅನುಸಾರ ಟ್ಯಾಕ್ಸ್‌ ಕಟ್ಟಿದರೆ ಆಯಿತು, ಬೇರಾವುದೇ ಲೆಕ್ಕಾಚಾರಗಳು, ಲೆಕ್ಕ ಪತ್ರಗಳು ಅಗತ್ಯವೇ ಇರುವುದಿಲ್ಲ. ಇದು ಸುಲಭ ಸರಳ ಹಾಗೂ ಸಂಪೂರ್ಣ ಪಾರದರ್ಶಕ. ಅದಲ್ಲದೆ ಈ ಪದ್ಧತಿಯ ಮೂಲಕ ಹೋಗುವುದು ಒಂದು ಆಯ್ಕೆಯೇ ಹೊರತು ಕಡ್ಡಾಯವೇನಲ್ಲ. ಈ ಪದ್ಧತಿ ಸೂಕ್ತವೆನಿಸದವರಿಗೆ ಯಥಾ ಪ್ರಕಾರ ಲೆಕ್ಕ ಪತ್ರಗಳನ್ನು ತಯಾರಿಸಿ ಆ ಪ್ರಕಾರ ಕಾಣುವ ಆದಾಯದ ಮೇಲೆ ತೆರಿಗೆ ಕಟ್ಟುವ ಹಕ್ಕು ಇರುತ್ತದೆ. ಬದಲಾಗಿ ಈ ಪದ್ಧತಿಯೇ ಲಾಭದಾಯಕವೆಂದು ಕಾಣುವವರು ಇದರ ಪ್ರಯೋಜನ ಪಡೆಯಬಹುದು.

ಯಾರಿಗೆ ಅನ್ವಯ ಈ ಆಯ್ಕೆ?
ಮೊದಮೊದಲು ಸಿವಿಲ್‌ ಮತ್ತು ರಿಟೇಲ್‌ ಕ್ಷೇತ್ರಕ್ಕೆ ಅನ್ವಯವಾಗುವಂತೆ ಆರಂಭಗೊಂಡ ಈ ಪ್ರಿಸಂಪ್ಟಿವ್‌ ಆದಾಯದ ತೆರಿಗೆ ಪದ್ಧತಿ ಈಗ ಎÇÉಾ ಸಣ್ಣ ಸೈಜಿನ ಬಿಸಿನೆಸ್ಸುಗಳಿಗೂ ಅನ್ವಯವಾಗುತ್ತದೆ. ಅದರಲ್ಲಿ ಬಜೆಟ್‌-2016 ಬಳಿಕ ಡಾಕ್ಟರ್‌,ಲಾಯರ್‌, ಇತ್ಯಾದಿ ವೃತ್ತಿಪರರು (ಬಿಸಿನೆಸ್‌ ಅಲ್ಲದವರು) ಕೂಡಾ ಇದರೊಳಗೆ ಬರುವಂತೆ ಅವಕಾಶ ಮಾಡಿಕೊಡಲಾಗಿದೆ. ಈ ಪದ್ಧತಿಯಲ್ಲಿ ಕಮಿಶನ್‌ ಆದಾಯ ಪಡೆಯುವವರು, ಏಜೆನ್ಸಿ ಬಿಸಿನೆಸ್‌ನವರು ಬರುವುದಿಲ್ಲ. ಇದರ ಮುಖ್ಯ ಭೂಮಿಕೆ ವೈಯಕ್ತಿಕ ಸಣ್ಣ ಬಿಸಿನೆಸ್‌ ಹಾಗೂ ಪ್ರೊಫೆಷನಲ್ಸ…. ಈ ಎÇÉಾ ಛೋಟಾ ಬಿಸಿನೆಸ್ಸು ಗಳನ್ನೂ ಎರಡು ಮುಖ್ಯ ವಿಭಾಗಗಳನ್ನಾಗಿ ವಿಂಗಡಿಸಿ¨ªಾರೆ ಅಲ್ಲದೆ, ಪ್ರೊಫೆಶನಲ್ಸ…ಗೆ ಇನ್ನೊಂದು ಪ್ರತ್ಯೇಕ ವಿಭಾಗವನ್ನು ಸೃಷ್ಟಿಸಲಾಗಿದೆ. 

ಸರಕು ಸಾಗಾಣೆಯ ವಾಹನಗಳನ್ನು ಓಡಿಸುವ/ಬಾಡಿಗೆಗೆ ನೀಡುವ/ಲೀಸಿಗೆ ಕೊಡುವ ಬಿಸಿನೆಸ್‌ ಒಂದು ವಿಭಾಗವಾದರೆ (ಸೆಕ್ಷನ್‌44ಎಇ) ಉಳಿದ ಎÇÉಾ ಬಿಸಿನೆಸ್ಸುಗಳೂ ಇನ್ನೊಂದು ವಿಭಾಗದಲ್ಲಿ (ಸೆಕ್ಷನ್‌ 44ಎಡಿ) ಬರುತ್ತವೆ. (ಸರಕು ಸಾಗಣೆಯ ಉದ್ದಿಮೆ ಮಾತ್ರ ಇನ್ನೊಂದು ಸೆಕ್ಷನ್ನಿನಲ್ಲಿ ಬರುವುದರ ಲಾಜಿಕ್‌ ಏನೆಂಬುದು ನನಗೆ ಇನ್ನೂ ತಿಳಿಯಲಿಲ್ಲ. ಬಲ್ಲವರು ದಯವಿಟ್ಟು ತಿಳಿಸಿಕೊಡಿ) ಅದೇನೇ ಇರಲಿ, ಈ ಎರಡು ಸೆಕ್ಷನ್ನುಗಳು ಈ ರೀತಿ ಲಾಗೂ ಆಗುತ್ತವೆ. 

44ಎಡಿ
ಇದರಡಿಯಲ್ಲಿ ರೂ.2 ಕೋಟಿ ಮೀರದಂತೆ ಟರ್ನೋವರ್‌ ಇರುವ ಎÇÉಾ ಬಿಸಿನೆಸ್‌ಗಳನ್ನೂ ಅಳವಡಿಸಲಾಗಿದೆ. ಇದರಲ್ಲಿ ನಿವಾಸಿ ಭಾರತೀಯ, ವೈಯಕ್ತಿಕ, ಹಿಂದು ಅವಿಭಕ್ತ ಕುಟುಂಬ, ಎಲ…ಎಲ್ಪಿ ಹೊರತಾದ ಪಾಟ್ನìರ್‌ಶಿಪ್‌ ಇವರೆಲ್ಲರೂ ಬರುತ್ತಾರೆ. (ಸೆಕ್ಷನ್‌ 10, 80 ಇತ್ಯಾದಿಗಳಡಿಯಲ್ಲಿ ವಿನಾಯಿತಿ ಪಡೆಯದೇ ಇರು ವುದು ಇಲ್ಲಿ ಮುಖ್ಯ). ಕಂಪೆನಿಗ ಳು ಇದರಡಿಯಲ್ಲಿ ಬರುವುದಿಲ್ಲ.

44ಎಇ
ಸರಕು ಸಾಗಾಣಿಕೆ ವಾಹನಗಳ ಓಡಾಟ, ಬಾಡಿಗೆಗೆ ನೀಡುವ ಅಥವಾ ಲೀಸ್‌ ಮಾಡುವ ಬಿಸಿನೆಸ್‌ಗಳು ಇದರಡಿಯಲ್ಲಿ ಬರುತ್ತವೆ. ಇಲ್ಲಿ ಟರ್ನೋವರ್‌ ಮಿತಿ ಇರುವುದಿಲ್ಲ, ಬದಲಾಗಿ ಆ ಬಿಸಿನೆಸ್‌ನಲ್ಲಿ ಇರುವ ವಾಹನಗಳ ಸಂಖ್ಯೆ 10ನ್ನು ಮೀರಬಾರದು ಎಂಬ ಮಾನದಂಡ ಮಾತ್ರವೇ ಇದೆ. ಅದಲ್ಲದೆ ಇದರಲ್ಲಿ ವೈಯಕ್ತಿಕ, ಹಿಂದು ಅವಿಭಕ್ತ ಕುಟುಂಬ, ಪಾಟ್ನìರ್‌ಶಿಪ್‌, ನಿವಾಸಿ, ಇತ್ಯಾದಿ ಎÇÉಾ ತರಗತಿಯ ತೆರಿಗೆದಾರರೂ ಬರುತ್ತಾರೆ.

44ಎಡಿಎ
ವೃತ್ತಿಪರ ಅಥವಾ ಪ್ರೊಫೆಶನಲ್‌ ಸೇವೆಯನ್ನು ನೀಡುವ ಡಾಕ್ಟರ್‌, ಇಂಜಿನಿಯರ್‌, ಲೀಗಲ…, ಅಕೌಂಟಿಂಗ್‌, ಟೆಕ್ನಿಕಲ…, ಇಂಟೀರಿಯರ್‌ ಡಿಸೈನಿಂಗ್‌, ಸಿನೆಮಾ ವೃತ್ತಿಪರರು, ಕಂಪೆನಿ ಸೆಕ್ರೆಟರಿ ಇತ್ಯಾದಿ ವರ್ಗದಲ್ಲಿ ವಾರ್ಷಿಕ ರೂ. 50 ಲಕ್ಷಕ್ಕೆ ಒಳಗಿನ ಆದಾಯವಿರುವವರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಇದರಲ್ಲಿ ನಿವಾಸಿ ಭಾರತೀಯ- ವೈಯಕ್ತಿಕ, ಹಿಂದು ಅವಿಭಕ್ತ ಕುಟುಂಬ, ಎಲ…ಎಲ್ಪಿ ಹೊರತಾದ ಪಾಟ್ನìರ್‌ಶಿಪ್‌ ಇವರೆಲ್ಲರೂ ಬರುತ್ತಾರೆ. 

ತೆರಿಗೆ ಎಷ್ಟು?
ಈ ಪದ್ದತಿಯ ಪ್ರಕಾರ ಸೆಕ್ಷನ್‌ 44ಎಡಿ ಅಡಿಯಲ್ಲಿ ಬರುವ ಎÇÉಾ ಬಿಸಿನೆಸ್ಸುಗಳಿಗೂ ಒಟ್ಟು ಟರ್ನೋವರ್‌ ಅಥವಾ ಸೇಲ್ಸ… ಮೌಲ್ಯದ ಶೇ. 8 ಅನ್ನು ಆದಾಯ ಎಂದು ಪರಿಭಾವಿಸಿ ಅದರ ಮೇಲೆ ತೆರಿಗೆ ನೀಡಬೇಕು. ದುಡ್ಡು ಡಿಜಿಟಲ್‌ ಪಾವತಿಯಲ್ಲಿ ಬಂದರೆ ಇದನ್ನು ಶೇ.6 ಎಂದು ಪರಿಭಾವಿಸಬಹುದು. ಸರಕು ಸಾಗಾಣಿಕೆಯ ಸೆಕ್ಷನ್‌ 44ಎಇ ಬಿಸಿನೆಸ್‌ ಆದರೆ ವಾಹನ ಒಂದರ ತಿಂಗಳಿಗೆ ರೂ.7,500 ಎಂದು ಪರಿಭಾವಿಸಿ ಆ ಆದಾಯದ ಮೇಲೆ ತೆರಿಗೆ ನೀಡಬೇಕು. 44ಎಡಿಎ ಅಡಿಯಲ್ಲಿ ಬರುವ ಪ್ರೊಫೆಶನಲ್ಸ… ತಮ್ಮ ಆದಾಯವನ್ನು ಒಟ್ಟು ಸ್ವೀಕೃತಿಯ ಶೇ. 50 ಎಂದು ಪರಿಭಾವಿಸಬೇಕು. ಇದು ಕನಿಷ್ಟ ಮಟ್ಟ. ಇದರಿಂದ ಜಾಸ್ತಿ ಆದಾಯ ಘೋಷಣೆ ಮಾಡಿ ಜಾಸ್ತಿ ತೆರಿಗೆ ಕಟ್ಟಲಿಚ್ಚುಕ ಧಾರಾಳ ಹೃದಯಿಗಳಿಗೆ ಸರಕಾರದ ವತಿಯಿಂದ ಸದಾ ಸ್ವಾಗತವಿದೆ! (ಅದೇ ರೀತಿ ಕಡಿಮೆ ಆದಾಯ ತೋರಿಸಲು ಇಚ್ಚಿಸುವವರು ಸೂಕ್ತ ಕಾಗದ ಪತ್ರಗಳನ್ನು ಅನುಸರಿಸಿ ಈ ಯೋಜನೆಯ ಹೊರಗೆ ಇದ್ದುಕೊಂಡು ಸಾಮಾನ್ಯ ರೀತಿಯಲ್ಲಿ ರಿಟರ್ನ್ ಫೈಲಿಂಗ್‌ ಮಾಡಬಹುದು.) 

ಈ ಆದಾಯಗಳಿಂದ ಯಾವುದೇ ರೀತಿಯ ಖರ್ಚುವೆಚ್ಚಗಳನ್ನು ಕಳೆಯುವ ಹಾಗಿಲ್ಲ. ಆದರೆ 44 ಎಇ ಅಡಿಯಲ್ಲಿ ಪಾಟ್ನìರ್‌ಶಿಪ್‌ ಸಂಸ್ಥೆಗಳಲ್ಲಿ ಮಾತ್ರ ಪಾಟ್ನìರ್‌ ಸಂಬಳ ಮತ್ತು ಪಾಟ್ನìರ್‌ ಸಾಲದ ಮೇಲಿನ ಬಡ್ಡಿ ವೆಚ್ಚಗಳನ್ನು ಒಂದು ಮಿತಿಯವರೆಗೆ ಕಳೆಯ ಬಹುದಾಗಿದೆ. 

ಮುಂಗಡ ತೆರಿಗೆ ವಿನಾಯತಿ 
ಈ ಪದ್ಧತಿಯಡಿಯಲ್ಲಿ ಬರಲಿಚ್ಚಿಸುವವರಿಗೆ ಮೇಲೆ ಹೇಳಿದ ಸೆಕ್ಷನ್‌ 44 ಎಡಿ ಹಾಗೂ ಎಡಿಎ ಅಡಿಯಲ್ಲಿ ಮುಂಗಡ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ವರ್ಷಾಂತ್ಯದಲ್ಲಿ (ಅಂದರೆ ಮಾರ್ಚ್‌ 15ರ ಒಳಗಾಗಿ) ಎÇÉಾ ತೆರಿಗೆಯನ್ನೂ ಒಟ್ಟಿಗೆ ಕಟ್ಟಿದರಾಯಿತು. ಆದರೆ ಮೇಲೆ ಹೇಳಿದ 44ಎಇಯವರಿಗೆ ಈ ವಿನಾಯಿತಿ ಲಭ್ಯವಿಲ್ಲ. ಅವರು ಯಥಾಪ್ರಕಾರ 4 ಕಂತುಗಳಲ್ಲಿ ಮುಂಗಡ ತೆರಿಗೆ ಕಟ್ಟಬೇಕು. 

ರಿಟರ್ನ್ ಫೈಲಿಂಗ್‌ 
ಪ್ರಿಸಂಪ್ಟಿವ್‌ ಟ್ಯಾಕ್ಸೇಶನ್‌ ಅಡಿಯಲ್ಲಿ ಬರಲು ಇಚ್ಚಿಸುವವರು ಆದಾಯ ಕರ ಇಲಾಖೆಯ ಫಾರ್ಮ್ 4 ಅಥವಾ ಸುಗಮ್‌ ಫಾರ್ಮ್ ಅನ್ನು ಬಳಸಬೇಕು. (ಈ ಹಿಂದೆ ಅದು 4ಎಸ್‌ ಆಗಿತ್ತು). ಮೇಲ್ಕಾಣಿಸಿದ ಆದಾಯ (ಶೆ.8 ಯಾ ಶೇ.6, ರೂ. 7,500) ಇತ್ಯಾದಿಗಳು ತಮ್ಮ ನೈಜ ಆದಾಯಕ್ಕಿಂತ ಜಾಸ್ತಿಯೆನಿಸಿದವರು ಈ ಪದ್ಧತಿಯಿಂದ ಹೊರಗುಳಿಯಬಹುದು. ಅಂಥವರು ಲಾಗಾಯ್ತಿ ನಂತೆ ಎÇÉಾ ಲೆಕ್ಕ ಪತ್ರಗಳನ್ನು/ಪುಸ್ತಕಗಳನ್ನು ಇಟ್ಟುಕೊಂಡು ನೈಜ ಆದಾಯದ ಮೇಲೆ ಯಥಾಪ್ರಕಾರ ತೆರಿಗೆ ಕಟ್ಟಿ ರಿಟರ್ನ್ ಫೈಲಿಂಗ್‌ ಮಾಡಬೇಕು. ಫೈಲಿಂಗ್‌ಗೆ ಕೊನೆಯ ದಿನ ಜುಲೈ 31.

ಸುಗಮದ ಬಳಕೆ ಹೇಗೆ? 
ಈ ಫಾರ್ಮನ್ನು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟಿನಿಂದ ಡೌನೊÉàಡ್‌ ಮಾಡಿ ಕರ ಇಲಾಖೆಯ ಆಫೀಸಿಗೆ ಹೋಗಿ ಫೈಲ್‌ ಮಾಡಬಹುದು. ಅಥವಾ ಸೈಟಿನÇÉೇ ಇ-ಫೈಲಿಂಗ್‌ ಕೂಡಾ ಮಾಡಬಹುದು. ಆನ್‌ಲೈನ್‌ ಆಗಿ ಫೈಲಿಂಗ್‌ ಮಾಡುವ ವಿಧಾನದ ಬಗ್ಗೆ ಮಾಹಿತಿ ಅÇÉೇ ಲಭ್ಯವಿದೆ. ಅದೇ ವಿಧಾನವನ್ನು ಬಳಸಿದರಾಯಿತು.
ವಿ.ಸೂ: ಈ ಲೇಖನ ಪ್ರಿಸಂಪ್ಟಿವ್‌ ಟ್ಯಾಕ್ಸೇಶನ್‌ ಕಾಯ್ದೆಯ ಒಂದು ಸಾರಾಂಶ ಮಾತ್ರ. ಕಾನೂನಿನ ಯಥಾ ನಕಲು ಅಲ್ಲ. ಅಸಕ್ತಿದಾಯಕ ಅಂಶಗಳನ್ನು ಓದುಗರ ಮಾಹಿತಿಗಾಗಿ ಇಲ್ಲಿ ಹೈಲೈಟ್‌ ಮಾಡಲಾಗಿದೆ ಹಾಗೂ ಕಾಯ್ದೆಯ ಎÇÉಾ ವಿವರಗಳು ಇಲ್ಲಿ ಬಂದಿಲ್ಲ. ಆಸಕ್ತರು ತಮ್ಮ ಬಿಸಿನೆಸ್‌ ಬಗ್ಗೆ ಓರ್ವ ನುರಿತ ಸಿಎ ಜೊತೆ ಕೂಲಂಕಷ‌ ಚರ್ಚೆ ಮಾಡಿಯೇ ಮುಂದುವರಿಯಬೇಕು. ಕೇವಲ ಒಂದು ಲೇಖನವನ್ನು ನಂಬಿಕೊಂಡು ಮಹತ್ತರ ನಿರ್ಧಾರಗಳನ್ನು ಯಾವತ್ತೂ ತೆಗೆದುಕೊಳ್ಳಬಾರದು. 
ಆಲ್‌ ದಿ ಬೆಸ್ಟ್‌ !

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.