ಏನಿದು ರಿಪೊ, ರಿವರ್ಸ್ ರಿಪೊ ಮತ್ತು ಆರ್‌ಬಿಐ ನೀತಿ?
Team Udayavani, Oct 7, 2019, 6:39 AM IST
ಇತ್ತೀಚೆಗಿನ ವ್ಯವಸ್ಥೆ ಪ್ರಕಾರ ಆರ್‌ಬಿಐ ಪ್ರತಿ ಎರಡು ತಿಂಗಳುಗಳಿಗೊಮ್ಮೆ ತನ್ನ ಹಣಕಾಸು ನೀತಿಯ ಪರಾಮರ್ಶೆಯನ್ನು ನಡೆಸಿ ಅಗತ್ಯ ಕಂಡು ಬಂದಲ್ಲಿ ನೀತಿಯಲ್ಲಿ ಬದಲಾವಣೆಯನ್ನು ತರುತ್ತದೆ. ಈ ಸಂದರ್ಭದಲ್ಲಿLAF Rates (repo, reverse repo) ಇತ್ಯಾದಿ ದರಗಳನ್ನು ಆರ್ಥಿಕತೆಯ ಗುರಿ ಮುಟ್ಟುವಲ್ಲಿ ಸಹಕಾರಿಯಾಗುವಂತೆ ಇವುಗಳನ್ನು ಅಗತ್ಯ ಬಂದಂತೆ ಬದಲಾಯಿಸಲಾಗುತ್ತದೆ. ಅಷ್ಟಕ್ಕೂ ಈ ದರಗಳ ಅರ್ಥ ಮತ್ತು ಮಹತ್ವಗಳೇನು?
ಭಾರತೀಯ ರಿಸರ್ವ್ ಬ್ಯಾಂಕು ನಮ್ಮ ದೇಶದೊಳಗಿನ ದುಡ್ಡಿನ ಹರಿವು ಮತ್ತು ವೆಚ್ಚವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಅಂದರೆ ಎಷ್ಟು ದುಡ್ಡು ಆರ್ಥಿಕತೆಯಲ್ಲಿ ಹರಿಯಬೇಕು ಮತ್ತು ಅದು ಯಾವ ಬಡ್ಡಿ ದರದಲ್ಲಿ ಜನರ ಕೈಗೆ ಎಟಕಬೇಕು ಎನ್ನುವ ನಿಯಂತ್ರಣವನ್ನು ಆರ್‌ಬಿಐ ತನ್ನ ಹಣಕಾಸು ನೀತಿಯ (ಮೊನೆಟರಿ ಪಾಲಿಸಿ) ಮೂಲಕ ನಿಯಂತ್ರಿಸುತ್ತದೆ.
ಇತ್ತೀಚೆಗಿನ ವ್ಯವಸ್ಥೆ ಪ್ರಕಾರ ಆರ್‌ಬಿಐ ಪ್ರತಿ ಎರಡು ತಿಂಗಳುಗಳಿಗೊಮ್ಮೆ ತನ್ನ ಹಣಕಾಸು ನೀತಿಯ ಪರಾಮರ್ಶೆಯನ್ನು ನಡೆಸಿ ಅಗತ್ಯ ಕಂಡು ಬಂದಲ್ಲಿ ನೀತಿಯಲ್ಲಿ ಬದಲಾವಣೆಯನ್ನು ತರುತ್ತದೆ. ಈ ಸಂದರ್ಭದಲ್ಲಿ ಮುಖ್ಯವಾದ ದರಗಳು ಅಂದರೆ LAF Rates (repo, reverse repo) MSF Rate, CRR, SLR ಇತ್ಯಾದಿಗಳನ್ನು ಪರಾಮರ್ಶಿ ಸಲಾಗುತ್ತದೆ. ಆರ್ಥಿಕತೆಯ ಗುರಿ ಮುಟ್ಟುವಲ್ಲಿ ಸಹಕಾರಿ ಯಾಗು ವಂತೆ ಇವುಗಳನ್ನು ಅಗತ್ಯ ಬಂದಂತೆ ಬದಲಾಯಿಸಲಾ ಗುತ್ತದೆ. ಅಷ್ಟಕ್ಕೂ ಈ ದರಗಳ ಅರ್ಥ ಮತ್ತು ಮಹತ್ವಗಳೇನು ?
ಸಿ.ಆರ್.ಆರ್.
ಸಿ.ಆರ್.ಆರ್. ಅಂದರೆ ಕ್ಯಾಶ್ ರಿಸರ್ವ್ ರೇಶಿಯೊ. ಒಂದು ಬ್ಯಾಂಕು ತನ್ನ ಒಟ್ಟು ಡೆಪಾಸಿಟ್ಟುಗಳು (ಎಸಿº/ಕರೆಂಟ್ ಹಾಗೂ ಎಫಿx ) ಎಷ್ಟು ಪ್ರಮಾಣವನ್ನು ನಗದು ರೂಪದಲ್ಲಿ ಆರ್‌ಬಿಐಯಲ್ಲಿ ಮೀಸಲು ಠೇವಣಿಯಾಗಿ ಇಟ್ಟಿರಬೇಕು ಎನ್ನುವುದನ್ನು ಸಿಆರ್‌ಆರ್ ಅನುಪಾತ ಸೂಚಿಸುತ್ತದೆ. ಇದು ಬಡ್ಡಿರಹಿತವಾದ ಠೇವಣಿಯಾದ ಕಾರಣ ಅದರ ಮೇಲೆ ಬ್ಯಾಂಕು ಆದಾಯ ಗಳಿಸುವುದಿಲ್ಲ. ಇದು ಬ್ಯಾಂಕುಗಳ ಸುರûಾ ದೃಷ್ಟಿಯಲ್ಲಿ ಒಂದು ಭದ್ರತಾ ಠೇವಣಿಯಾದರೂ ರಿಸರ್ವ್ ಬ್ಯಾಂಕ್ ಈ ಅನುಪಾತವನ್ನು ಹಣದ ಹರಿವನ್ನು ನಿಯಂತ್ರಿಸಲು ಉಪಯೋಗಿಸಿಕೊಳ್ಳುತ್ತದೆ. ಸಿಆರ್‌ಆರ್‌ನಲ್ಲಿ ಏರಿಕೆ ಮಾಡಿದರೆ ಆರ್ಥಿಕತೆಯಲ್ಲಿ ಅಷ್ಟು ದುಡ್ಡಿನ ಹರಿವನ್ನು ಕಡಿಮೆ ಮಾಡಿದಂತೆ ಹಾಗೆಯೇ ಸಿಆರ್‌ಆರ್ ಕಡಿಮೆ ಮಾಡಿದರೆ ಅಷ್ಟು ದುಡ್ಡಿನ ಹರಿವನ್ನು ಜಾಸ್ತಿ ಮಾಡಿದಂತೆ.
ಎಸ್.ಎಲ್.ಆರ್.
ಎಸ್.ಎಲ್.ಆರ್. ಅಂದರೆ ಸ್ಟಾಚ್ಯುಟರಿ ಲಿಕ್ವಿಡಿಟಿ ರೇಶಿಯೊ. ಒಂದು ಬ್ಯಾಂಕಿನ ಒಟ್ಟು ಡೆಪಾಸಿಟ್‌ಗಳ ಎಷ್ಟು ಭಾಗವನ್ನು ಕೇಂದ್ರೀಯ/ರಾಜ್ಯ ಸರಕಾರದ ಸಾಲಪತ್ರಗಳಲ್ಲಿ ಹೂಡಿ ಇಟ್ಟಿರಬೇಕು ಎನ್ನುವುದನ್ನು ಈ ಅನುಪಾತ ಸೂಚಿಸುತ್ತದೆ. ಈ ಸರಕಾರಿ ಸಾಲಪತ್ರಗಳಲ್ಲಿ ಬ್ಯಾಂಕುಗಳು ನಿಗದಿತ ಬಡ್ಡಿ ಪಡೆಯುತ್ತವೆ. ಈ ಅನುಪಾತವನ್ನು ಕೂಡಾ ಬ್ಯಾಂಕುಗಳ ವಿತ್ತೀಯ ಭದ್ರತೆಗಾಗಿ ರೂಪಿಸಲಾಗಿದೆ.
ಎಲ್.ಎ.ಎಫ್.
ಎಲ್.ಎ.ಎಫ್. ಅಂದರೆ ಆರ್‌ಬಿಐ ಬ್ಯಾಂಕುಗಳಿಗೆ ನೀಡುವ ಲಿಕ್ವಿಡಿಟಿ ಅಡೆjಸ್ಟ್‌ಮೆಂಟ್ ಫೆಸಿಲಿಟಿ. ಈ ಸೌಲಭ್ಯದಲ್ಲಿ ಬ್ಯಾಂಕುಗಳು ತಮ್ಮ ಅಲ್ಪಕಾಲಿಕ ನಗದಿನ ಅಗತ್ಯಕ್ಕಾಗಿ (ಲಿಕ್ವಿಡಿಟಿ) 1, 7, 14 ದಿನಗಳ ಲೆಕ್ಕದಲ್ಲಿ ರಿಸರ್ವ್ ಬಾಂಕಿನಿಂದ ಸಾಲ ಪಡೆಯುತ್ತವೆ. ಈ ಕೆಲಸ ರಿಸರ್ವ್ ಬ್ಯಾಂಕು ಇತರ ಬ್ಯಾಂಕುಗಳಿಂದ ಸರಕಾರಿ ಸಾಲಪತ್ರಗಳನ್ನು ದುಡ್ಡುಕೊಟ್ಟು ಮರು ಖರೀದಿ ಮಾಡುವ ಮೂಲಕ ನಡೆಯುತ್ತದೆ. ಇಂತಹ ಮರು ಖರೀದಿಯನ್ನು ರಿಪರ್ಚೇಸ್ ಅಥವಾ ರಿಪೋ ಎಂದು ಚುಟುಕಾಗಿ ಹೇಳುತ್ತಾರೆ.
ಇದರ ತದ್ವಿರುದ್ಧ ಪ್ರಕ್ರಿಯೆಯಲ್ಲಿ ಬ್ಯಾಂಕುಗಳು ತಮ್ಮ ಹೆಚ್ಚುವರಿ ದುಡ್ಡನ್ನು ರಿಸರ್ವ್ ಬ್ಯಾಂಕಿಗೆ ನೀಡಿ ಅಲ್ಲಿಂದ ಸರಕಾರಿ ಸಾಲ ಪತ್ರಗಳನ್ನು ವಾಪಾಸು ಪಡಕೊಳ್ಳುತ್ತವೆ. ಅದನ್ನು ರಿವರ್ಸ್ ರಿಪರ್ಚೇಸ್ ಅಥವಾ ಚುಟುಕಾಗಿ ರಿವರ್ಸ್-ರಿಪೊ ಎನ್ನುತ್ತಾರೆ.
ರಿಸರ್ವ್ ಬ್ಯಾಂಕು, ರಿಪೊ ಮತ್ತು ರಿವರ್ಸ್ ರಿಪೊ ಪ್ರಕ್ರಿಯೆಗಳ ಬಡ್ಡಿ ದರಗಳನ್ನು ನಿಗದಿಪಡಿಸಿ ಬ್ಯಾಂಕುಗಳ ಅಲ್ಪಕಾಲಿಕ ಸಾಲಗಳ ವೆಚ್ಚದ ಮೇಲೆ ಪ್ರಭಾವ ಬೀರುತ್ತದೆ. ಉದ್ಯಮ ಮತ್ತು ಜನಸಾಮಾನ್ಯರಿಗೆ ನೀಡುವ ಸಾಲ ಮತ್ತು ಠೇವಣಿ ದರಗಳು ಈ ದರಗಳನ್ನು ಅನ್ವಯಿಸಿರುತ್ತದೆ.
ಪ್ರತಿ ಬಾರಿ ರಿಸರ್ವ್ ಬ್ಯಾಂಕ್ ತನ್ನ ಸಾಲ ನೀತಿಯ ಸಭೆಯನ್ನು ನಡೆಸುವಾಗಲೂ ಬಡ್ಡಿ ದರಗಳ ಕಡಿತದ ಬೇಡಿಕೆ ಉದ್ಯಮದ ವತಿಯಿಂದ ಇರುತ್ತದೆ. ಇದು ಸರ್ವೇ ಸಾಮಾನ್ಯ. ಏಕೆ ರಿಸರ್ವ್ ಬ್ಯಾಂಕಿನ ಬಡ್ಡಿ ದರ ಅಷ್ಟು ಮುಖ್ಯವಾಗುತ್ತದೆ? ಯಾಕೆ ಉದ್ಯಮಿಗಳು ಬಡ್ಡಿ ದರದ ಕಡಿತದ ಬಗ್ಗೆ ಅಷ್ಟೊಂದು ಆಗ್ರಹ ವ್ಯಕ್ತ ಪಡಿಸುತ್ತಾರೆ? ಆ ಬಗ್ಗೆ ಸ್ವಲ್ಪ ಹಿನ್ನೆಲೆ ಮಾಹಿತಿಯನ್ನು ತಿಳಿದುಕೊಳ್ಳೋಣ:
1.ಬಡ್ಡಿ ದರ ಅಂದರೆ ರಿಪೊ ದರಗಳನ್ನು ಇಳಿಸಿದಾಕ್ಷಣ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಸಾಲದ ಬಡಿªದರ ಇಳಿಯುತ್ತದೆ. ಇದರಿಂದ ಉದ್ಯಮಿಗಳು ಪಡೆಯುವ ಸಾಲದ ವೆಚ್ಚ ಕಡಿಮೆಯಾಗುತ್ತದೆ ಹಾಗೂ ನಾವು ನೀವುಗಳು ಪಡೆಯುವ ಗೃಹ ಸಾಲ, ವಿದ್ಯಾ ಸಾಲ ವಾಹನ ಸಾಲ ಇತ್ಯಾದಿ ಎÇÉಾ ಸಾಲಗಳೂ ಅಗ್ಗವಾಗುತ್ತದೆ. ಈಗಾಗಲೇ ಪಡೆದಿರುವ ಫ್ಲೋಟಿಂಗ್ ರೇಟ್ ಸಾಲಗಳ ಮೆಲೆ ಇಎಂಐ ಮೊತ್ತವನ್ನು ಕಡಿಮೆ ಮಾಡುತ್ತಾರೆ ಅಥವಾ ಅವಧಿ ಕಡಿಮೆ ಮಾಡುತ್ತಾರೆ. ಇದು ಎಲ್ಲರ ಕಿವಿಗೆ ಹೆಜ್ಜೆàನು ಸುರಿವಂತಹ ನ್ಯೂಸ್!
2.ಆದರೆ ರಿಪೊ ಜೊತೆಗೆ ರಿವರ್ಸ್ ರಿಪೊ ಅಂದರೆ ಬ್ಯಾಂಕುಗಳು ಆರ್‌ಬಿಐನಲ್ಲಿ ಠೇವಣಿ ಇಡುವ ಹಣದ ಮೇಲಿನ ಬಡ್ಡಿ ದರವೂ ಇಳಿಯುತ್ತದೆ. ಇದರಿಂದಾಗಿ ನಾವುಗಳು ಬ್ಯಾಂಕಿನಲ್ಲಿಡುವ ದುಡ್ಡಿನ ಮೇಲಿನ ಬಡ್ಡಿ ದರವೂ ಇಳಿಯುತ್ತದೆ ಅಲ್ಲವೇ? ಠೇವಣಿದಾರರಿಗೆ ಮತ್ತು ಠೇವಣಿಯ ಆದಾಯ ಪ್ರಮುಖವಾಗಿರುವ ಜನರಿಗೆ ಬಡ್ಡಿ ದರದ ಇಳಿಕೆ ಒಳ್ಳೆಯದಲ್ಲ. ಹಲವಾರು ಜನರು, ಮುಖ್ಯವಾಗಿ ನಿವೃತ್ತರು ಬ್ಯಾಂಕ್ ಠೇವಣಿಯ ಆಧಾರದ ಮೇಲೆಯೇ ತಮ್ಮ ಜೀವನವನ್ನು ಸಾಗಿಸುತ್ತಾರೆ. ಅವರೆಲ್ಲರಿಗೂ ಉಳಿತಾಯದ/ಭವಿಷ್ಯದ ದೃಷ್ಟಿಯಿಂದ ನೋಡುವುದಾದರೆ ಅಧಿಕ ಬಡ್ಡಿ ದರ ಒಳ್ಳೆಯದೇ. ಬಡ್ಡಿದರದ ವಿಷಯದಲ್ಲಿ ಸಾಲಗಾರರ ಆಸಕ್ತಿ ಮತ್ತು ಠೇವಣಿದಾರರ ಆಸಕ್ತಿ ಎಕªಂ ವಿರುದ್ಧಗತಿಯಲ್ಲಿರುವುದನ್ನು ಗಮನಿಸಬಹುದು.
ಆದರೆ ಈ ಬಾರಿ ರಿವರ್ಸ್ ರಿಪೊ ದರವನ್ನು ಹೆಚ್ಚಳ ಮಾಡುವುದರ ಮೂಲಕ ಬ್ಯಾಂಕುಗಳಿಗೆ ಜಾಸ್ತಿ ದುಡ್ಡನ್ನು ರಿಸರ್ವ್ ಬ್ಯಾಂಕಿನಲ್ಲಿ ಇರಿಸಲು ಉತ್ತೇಜನ ನೀಡಿದಂತಾಯಿತು. ಇದರಿಂದಾಗಿ ಆರ್ಥಿಕತೆಯಲ್ಲಿ ಹಣದ ಹರಿವನ್ನು ಕಡಿತಗೊಳಿಸಿ ಬೆಲೆಯೇರಿಕೆಗೆ ಕಡಿವಾಣ ಹಾಕಿದಂತಾಯಿತು.
3. ಬಡ್ಡಿ ದರದ ಇಳಿಕೆ ಶೇರು ಕಟ್ಟೆಯ ಮೆಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಬಡ್ಡಿ ದರ ಕಡಿಮೆಯಾದಂತೆ ಕಂಪೆನಿಗಳ ಲಾಭವೂ ಜಾಸ್ತಿಯಾಗುತ್ತದೆ. ಅದಕ್ಕಾಗಿ ಶೇರುಕಟ್ಟೆ ಮತ್ತು ಕಾರ್ಪೊರೆಟ್ ವಲಯ ಯಾವ ಕಾಲಕ್ಕೂ ಸರ್ವ ಋತುಗಳಲ್ಲಿಯೂ ಬಡ್ಡಿ ದರದ ಕಡಿತಕ್ಕೆ ರಿಸರ್ವ್ ಬ್ಯಾಂಕನ್ನು ಒತ್ತಾಯಿಸುತ್ತಲೇ ಇರುತ್ತವೆ. ಬಡ್ಡಿ ದರ ಇಳಿದಂತೆÇÉಾ ಕಂಪೆನಿಯ ಲಾಭಾಂಶ ಹಾಗೂ ಶೇರು ಬೆಲೆಗಳು ಏರುವುದು ಸಹಜ.
4. ಬಡ್ಡಿ ದರ ಇಳಿಸಿದಾಗ ಆರ್ಥಿಕ ಪ್ರಗತಿ ಉಂಟಾಗುತ್ತದೆ ಎನ್ನುವುದು ಅರ್ಥ ಶಾಸ್ತ್ರಜ್ಞರ ಮತ್ತು ಸರಕಾರಗಳ ನಂಬಿಕೆ. ಆ ಕಾರಣಕ್ಕಾಗಿ ಸರಕಾರವೂ ಬಡ್ಡಿ ದರದ ಇಳಿಕೆಗಾಗಿ ಆರ್‌ಬಿಐಯನ್ನು ಆಸೆಗಣ್ಣುಗಳಿಂದ ನೋಡುತ್ತಿರುತ್ತದೆ. ಕೆಲವೊಮ್ಮೆ ಬಡ್ಡಿ ದರ ಇಳಿಸದಾಗ ಈ ಆಸೆಗಣ್ಣುಗಳು ಕೆಂಪುಗಣ್ಣುಗಳಾದದ್ದೂ ಇದೆ. ಆರ್‌ಬಿಐಯು ಸರಕಾರದ ಆಧೀನ ಅಂಗವಲ್ಲ. ಅದೊಂದು ಸ್ವತಂತ್ರ ಸಂಸ್ಥೆ. ಆ ಕಾರಣಕ್ಕಾಗಿ ವಿತ್ತ ಮಂತ್ರಾಲಯವು ಆರ್‌ಬಿಐ ಮೇಲೆ ಯಾವುದೇ ಹೇರಿಕೆ ಮಾಡುವಂತಿಲ್ಲ. ಬಡ್ಡಿ ದರ ಇಳಿಸಿದರೆ ಪ್ರಗತಿ (ಜಿಡಿಪಿ) ಉಂಟಾಗುವುದೇನೋ ಹೌದು ಆದರೆ ಅದರ ಒಟ್ಟಿಗೇನೆ ಬೆಲೆಯೇರಿಕೆಯೂ ಉಂಟಾಗುತ್ತದೆ. ಆದ್ದರಿಂದ ಆರ್‌ಬಿಐಯು ಯಾವತ್ತೂ ಹಣದುಬ್ಬರದ ಮೇಲೆ ಒಂದು ಕಣ್ಣಿಟ್ಟೇ ಬಡ್ಡಿ ದರವನ್ನು ನಿಗದಿಪಡಿಸುತ್ತದೆ.
5. ಬಡ್ಡಿ ದರ ಇಳಿಕೆಯಿಂದ ರುಪಾಯಿಯ ಮೌಲ್ಯ ನಿಜವಾಗಿಯೂ ಇಳಿಯಬೇಕು. ಯಾವ ಕರೆನ್ಸಿಯಲ್ಲಿ ಹೂಡಿದರೆ ಜಾಸ್ತಿ ಬಡ್ಡಿ ಬರುತ್ತದೋ ಆ ಕರೆನ್ಸಿಗೆ ಬೆಲೆ ಜಾಸ್ತಿ ಎನ್ನುವುದು ಸಾಮಾನ್ಯ ಜ್ಞಾನ. ಇತ್ತೀಚೆಕೆ ಅಮೇರಿಕಾ ಬಡ್ಡಿ ದರ ಏರಿಸಿದಾಕ್ಷಣ ಡಾಲರ್ ಬೆಲೆ ವೃದ್ಧಿಯಾಯಿತು.
6. ಬಾಂಡು ಮಾರುಕಟ್ಟೆಯಲ್ಲಿ ಬಡ್ಡಿದರದ್ದು ನೇರವಾದ ಪ್ರಭಾವವಿದೆ. ಬಾಂಡು ಎಂದರೆ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಸರಕಾರಿ, ಖಾಸಗಿ – ಯಾವುದೇ ಸಾಲಪತ್ರ/ಡೆಟ್ ಫಂಡ್ ಕೂಡಾ ಆದೀತು. ಅವೆÇÉಾ ಒಂದು ನಿಗದಿತ ಮುಖ ಬೆಲೆಯಲ್ಲಿ ಬಂದರೂ ಮಾರುಕಟ್ಟೆಯಲ್ಲಿ ಅವುಗಳು ಬೇರೆ ಬೇರೆ ಬೆಲೆಗೆ ಬಿಕರಿಯಾಗುತ್ತವೆ. ಇದು ಅದರ ಮೂಲ ಬಡ್ಡಿದರವನ್ನು ಹೊಂದಿಕೊಂಡು ಏರಿಳಿಯುತ್ತದೆ.
– ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.