ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?


Team Udayavani, Dec 6, 2020, 6:32 AM IST

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ಮಕ್ಕಳು ಆಸೆಪಟ್ಟಂತೆಯೇ ನಾನು ಬದುಕಿದ್ದೆ. ಅವರನ್ನು ಚೆನ್ನಾಗಿ ಸಾಕಲು- ಓದಿಸಲು ಇನ್ನಿಲ್ಲದ ರಿಸ್ಕ್ ತೆಗೆದುಕೊಂಡಿದ್ದೆ. ನನಗೆ ಫ್ಯಾಮಿಲಿಯೇ ಮುಖ್ಯ ಅನ್ನುತ್ತಾ ಗೆಳೆಯರು- ಬಂಧುಗಳನ್ನು ದೂರಮಾಡಿದ್ದೆ. ಆದರೀಗ ಆ ಮಕ್ಕಳೇ ನನ್ನಿಂದ ದೂರ ಹೋಗುವ ಹವಣಿಕೆಯಲ್ಲಿದ್ದರು.

ಮಕ್ಕಳು ಜತೆಗಿದ್ದರೆ ಸಾಕು: ಅವರಿಗೆ ಏನಾದರೂ ಬುದ್ಧಿಮಾತು ಹೇಳುವುದು ಅಪ್ಪನಿಗೆ ಅಭ್ಯಾಸ ವಾಗಿಬಿಟ್ಟಿತ್ತು. ಬುದ್ಧಿಮಾತನ್ನಷ್ಟೇ ಹೇಳಿ ಅವರು ಸುಮ್ಮನಾಗುತ್ತಿರಲಿಲ್ಲ, ಅದಕ್ಕೆ ಹೊಂದುವಂಥ ಒಂದು ಉಪಕಥೆಯನ್ನೂ ಹೇಳುತ್ತಿದ್ದರು. “ನಾನು ಹೇಳುವುದನ್ನು ಗಮನ ವಿಟ್ಟು ಕೇಳಿಸ್ಕೊಳ್ಳಿ. ನೀವು ಮುಂದೊಮ್ಮೆ ಕಷ್ಟಕ್ಕೆ ಸಿಕ್ಕಿಕೊಂಡಾಗ ಈ ಮಾತುಗಳ ಮಹತ್ವ ಗೊತ್ತಾಗುತ್ತೆ ನಿಮಗೆ…’ ಎನ್ನುತ್ತಿದ್ದರು.

ಈ ಬಗೆಯ ಮಾತುಗಳು, ನನ್ನನ್ನೂ ಸೇರಿದಂತೆ ಹೆಚ್ಚಿನವರಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ, ಏನಾದರೂ ಕಾರಣ ಹೇಳಿ ಅಪ್ಪನ “ಕೊರೆತದಿಂದ’ ಪಾರಾಗುತ್ತಿದ್ದೆವು. ಮದುವೆಯಾದ ಮೇಲಂತೂ, ಅಪ್ಪನಿಂದ ದೂರ ಉಳಿಯಲು ನನಗೊಂದು ಪ್ರಬಲ ಕಾರಣವೇ ಸಿಕ್ಕಿಬಿಟ್ಟಿತು. ಸದಾ ಹೆಂಡತಿಯ ಹಿಂದೆಯೇ ಅಲೆಯುತ್ತಾ ಅಪ್ಪನನ್ನು ಅವಾಯ್ಡ್ ಮಾಡತೊಡಗಿದೆ. ಕಡೆಗೊಮ್ಮೆ, ಪಕ್ಕದ ಜಿಲ್ಲೆಗೆ ಟ್ರಾನ್ಸ್‌ಫ‌ರ್‌ ಆಗಿದ್ದನ್ನೇ ನೆಪಮಾಡಿಕೊಂಡು ಸಂಸಾರದೊಂದಿಗೆ ಶಿಫ್ಟ್ ಆಗಿಬಿಟ್ಟೆ.ಹೆತ್ತವರ ಜತೆಗೇ ಉಳಿದರೆ, ಯಾವ್ಯಾವುದೋ ಜವಾಬ್ದಾರಿ ಗಳು ಮೈಮೇಲೆ ಬೀಳ್ತಾನೇ ಇರ್ತವೆ. ಪ್ರೈವೆಸಿ ಅನ್ನುವುದೇ ಇರೋದಿಲ್ಲ. ಹೀಗಾದರೆ ನಾನು ಲೈಫ್ನ ಎಂಜಾಯ್‌ ಮಾಡುವುದು ಯಾವಾಗ ಅನ್ನುವುದು ನನ್ನ ನಿಲುವಾಗಿತ್ತು.

ಹೀಗೇ 10 ವರ್ಷಗಳು ಕಳೆದುಹೋದವು. ಈ ಅವಧಿಯಲ್ಲಿ ಇಬ್ಬರು ಮಕ್ಕಳು ಮನೆ ತುಂಬಿದ್ದರು. ಬಿ.ಪಿ. ಜತೆಯಾಗಿತ್ತು. ಸ್ವಲ್ಪ ಹೊಟ್ಟೆ ಬಂದಿತ್ತು. ಅತ್ತ, ಕಾಲನ ಹೊಡೆತದಿಂದ ಅಪ್ಪನೂ ಡಲ್‌ ಆಗಿದ್ದ. ಈ ಸುದೀರ್ಘ‌ ಅವಧಿಯಲ್ಲಿ ವರ್ಷ ವರ್ಷವೂ ಹಬ್ಬ- ಹರಿದಿನ, ಸಂಬಂಧಿಗಳ ಮದುವೆ, ಮತ್ಯಾವುದೋ ಕುಟುಂಬದ ಕಾರ್ಯ ಕ್ರಮದ ನೆಪದಲ್ಲಿ ವರ್ಷಕ್ಕೆ ಐದಾರು ಬಾರಿ ಊರಿಗೆ ಹೋಗಿ¨ªೆನೇನೋ. ಈಗ ಇದ್ದಕ್ಕಿದ್ದಂತೆ, ಅಪ್ಪನನ್ನು ನೋಡಬೇಕು, ಅವನ ಮಾತು ಕೇಳಬೇಕು, ಅವನೊಂದಿಗೆ ಒಂದಷ್ಟು ದಿನಗಳನ್ನು ಕಳೆಯಬೇಕೆಂದು ತೀವ್ರವಾಗಿ ಅನಿಸತೊಡಗಿತು. ಅದೇ ಸಮಯಕ್ಕೆ ಮಕ್ಕಳಿಗೆ ಬೇಸಗೆ ರಜೆಯೂ ಶುರುವಾಯಿತು. ಹೇಗಿದ್ರೂ ರಜೆಯಿದೆ. ಹತ್ತಿಪ್ಪತ್ತು ದಿನ ಊರಲ್ಲಿದ್ದು ಬರೋಣ ಎಂಬ ನಿರ್ಧಾರದೊಂದಿಗೆ ಎಲ್ಲರೂ ಹೊರಟೆವು.

ಅದೊಂದು ಮಧ್ಯಾಹ್ನ ನಿಂಬೆಹಣ್ಣಿನ ಜ್ಯೂಸ್‌ ಕುಡಿದು ಲೋಟವನ್ನು ಕೆಳಗಿಡುತ್ತಾ ಅಪ್ಪ ಹೇಳಿದರು: “ಒಂದು ಬುದ್ಧಿಮಾತು ಹೇಳೆ¤àನೆ ಕಣಯ್ನಾ. ಜೀವನದಲ್ಲಿ ಯಾವತ್ತೂ ಫ್ರೆಂಡ್‌ಗಳನ್ನೂ ಮರೆಯಬೇಡ. ದಿನಕ್ಕೊಮ್ಮೆ ಯಾದ್ರೂ ಅವರನ್ನು ಮಾತಾಡಿಸು. ನಾಳೆಗೆ ಹೇಗೋ ಏನೋ…ಕಷ್ಟಕಾಲದಲ್ಲಿ ಫ್ರೆಂಡ್‌ಗಳು ಬೇಕಾಗ್ತಾರೆ…’

ಈ ಮಾತಲ್ಲಿ ನನಗಂತೂ ನಂಬಿಕೆ ಇರಲಿಲ್ಲ. ಫ್ರೆಂಡ್‌ಗಳಿಂದ ತೊಂದರೆಯೇ ಜಾಸ್ತಿ ಅನ್ನುವುದು ನನ್ನ ನಂಬಿಕೆಯಾಗಿತ್ತು. ಏಕೆಂದರೆ ಒಂದಿಬ್ಬರು ಗೆಳೆಯರು ಸಾಲ ಪಡೆದು ಅದನ್ನು ವಾಪಸ್‌ ಮಾಡದೆ ಸತಾಯಿಸುತ್ತಿದ್ದರು. ಇನ್ನೊಂದಿಬ್ಬರು, ಹೊಟ್ಟೆಕಿಚ್ಚಿನಿಂದ ಕುದಿಯುತ್ತಿದ್ದರು. ಮತ್ತೂಬ್ಬ, ನನ್ನ ಮೇಲೆ ಇಲ್ಲಸಲ್ಲದ ಗಾಸಿಪ್‌ ಹಬ್ಬಿಸಿದ್ದ! ಇವನ್ನೆಲ್ಲ ಅಪ್ಪನಿಗೆ ಹೇಳಿ, ಇಂಥಾ ಫ್ರೆಂಡ್‌ಗಳಿಂದ ಏನಪ್ಪಾ ಉಪಯೋಗ? ಇವರೆಲ್ಲ ಕಾಸಿನ ಅಗತ್ಯ ಇದ್ದಾಗ ಮಾತ್ರ ಬರ್ತಾರೆ. ಇಂಥವರು ಇದ್ರೆಷ್ಟು, ಬಿಟ್ಟರೆಷ್ಟು?ಅಂದೆ.

“ಛೆ ಛೆ, ಅಂಥವರಲ್ಲ ಕಣಯ್ನಾ. ನಿನ್ನ ಬಾಲ್ಯದ ಗೆಳೆಯರು ಅಂತ ಇದ್ದಾರಲ್ಲ, ಅವರಲ್ಲಿ ಎಷ್ಟೋ ಜನ ಈವರೆಗೂ ನಿನ್ನಿಂದ ಯಾವುದೇ ಸಹಾಯ ಕೇಳಿಲ್ಲ. ಆದ್ರೆ ಈಗಲೂ ತುಂಬಾ ಪ್ರೀತಿ-ವಿಶ್ವಾಸ ತೋರಿಸ್ತಾರೆ. ನೀನೇನು ಮಾಡಿದ್ದೀಯಾ ಅಂದ್ರೆ- ನಿನ್ನದೇ ಆಫೀಸ್‌ನ, ನಿನ್ನಂತೆಯೇ ಸಂಬಳ ಪಡೆ ಯುವ ಜನರನ್ನು ಹತ್ತಿರ ಬಿಟ್ಕೊಂಡಿದೀಯ. ಅವ ರನ್ನೇ ಫ್ರೆಂಡ್ಸ್‌ ಅಂತ ತಿಳಿದಿದ್ದೀಯ. ಅದನ್ನೇ ತಪ್ಪು ಅನ್ನೋದು. ಇವರೆಲ್ಲ, ನೀನು ಚೆನ್ನಾಗಿ ರುವಷ್ಟು ದಿನ ಮಾತ್ರ ನಿನ್ನ ಜತೆ ಇರ್ತಾರೆ. ನಾಳೆ ಅಕಸ್ಮಾತ್‌ ನೀನು ಏನಾದರೂ ತೊಂದರೆಗೆ ಸಿಕ್ಕಿಕೊಂಡರೆ- ತತ್‌ಕ್ಷಣ ಮಾಯ ಆಗ್ತಾರೆ. ಅಂಥವರಿಂದ ಪ್ರಯೋಜನವಿಲ್ಲ. ಯಾವುದೇ ಪ್ರತಿಫ‌ಲ ಬಯ ಸದೇ ಬಂದು, ನಾಲ್ಕು ಸಮಾಧಾನದ ಮಾತಾ ಡ್ತಾರಲ್ಲ; ಅಂಥವರು ಬೇಕು. ಅಂಥವರ ಜೊತೆ ಕಾಂಟ್ಯಾಕ್ಟ್ ಇಟ್ಕೊà..’ ಅಂದರು ಅಪ್ಪ. ಅಷ್ಟಕ್ಕೇ ಸುಮ್ಮನಾಗದೆ ನನ್ನದೇ ವಾರಿ ಗೆಯ ಐದಾರು ಜನರ ಹೆಸರನ್ನೂ ಸೂಚಿಸಿದರು.

ಅಪ್ಪ ಹೇಳಿದ್ದಕ್ಕೆಲ್ಲ ತಲೆಯಾಡಿಸಿಕೊಂಡು ಕೂರಲು ಆಗುತ್ತಾ? ಫ್ರೆಂಡ್ಸ್‌ ಅಂತ ಹೊರಟ್ರೆ, ಫ್ಯಾಮಿಲಿನ ಮಿಸ್‌ ಮಾಡ್ಕೊಬೇಕಾಗುತ್ತೆ. ನಮಗೆ ಫ್ಯಾಮಿಲಿ ಮುಖ್ಯ. ಫ್ಯಾಮಿಲಿ ಜತೆ ಲೈಫ್ನ ಎಂಜಾಯ್‌ ಮಾಡಬೇಕು. ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ನಾನು ರಿಟೈರ್ಡ್‌ ಆಗುವ ಮೊದಲೇ ಅವರಿಗೊಂದು ಕೆಲಸ ಸಿಗುವ ಹಾಗೆ ನೋಡ್ಕೊಬೇಕು… ಇಷ್ಟೇ ನನ್ನ ತಲೆಯಲ್ಲಿತ್ತು. ಹಾಗಾಗಿ ನನ್ನಿಷ್ಟದಂತೆಯೇ ಬದುಕಿಬಿಟ್ಟೆ. ಆದರೆ ಅಪ್ಪನ ಮಾತುಗಳು ಮೇಲಿಂದ ಮೇಲೆ ನೆನಪಾ ಗುತ್ತಲೇ ಇದ್ದವು. ಆಗೆಲ್ಲ ಅನಿವಾರ್ಯವಾಗಿ ಬಾಲ್ಯದ ಗೆಳೆಯರಿಗೆ ಫೋನ್‌ ಮಾಡಿ ಅಥವಾ ಎಲ್ಲಾದರೂ ಭೇಟಿ ಮಾಡಿ ನಾಲ್ಕಾರು ಮಾತಾಡಿ ಸುಮ್ಮನಾಗುತ್ತಿದ್ದೆ.

ಓಡುವ ಕಾಲಕ್ಕೆ ಯಾವ ತಡೆ? ಅಪ್ಪನೀಗ ಗೋಡೆಯ ಮೇಲಿನ ಚಿತ್ರವಾಗಿದ್ದರು. ಇನ್ನು ಮುಂದೆ ಮನೆಗೆ ನಾನೇ ಹಿರಿಯ ಅಂದುಕೊಳ್ಳುವ ವೇಳೆಗೆ ನನಗೂ 60 ವರ್ಷ ತುಂಬಿ, ಸೇವೆಯಿಂದ ನಿವೃತ್ತಿಯೂ ಆಯಿತು. “ಕೆಲಸ ಇಲ್ಲ’ ಎಂದು ಗೊತ್ತಾದ ತತ್‌ಕ್ಷಣ, ಅದುವರೆಗೂ ಸುತ್ತಲೂ ಇರುತ್ತಿದ್ದ ಜನ ಇದ್ದಕ್ಕಿದ್ದಂತೆ ಮಾಯವಾದರು. ಈ ಮಧ್ಯೆ ಮತ್ತೆ ಮೂರು ವರ್ಷ ಕಳೆಯುವುದರೊಳಗೆ ಹೆಂಡತಿಗೆ ಏನೇನೋ ದೈಹಿಕ ತೊಂದರೆ ಗಳು ಕಾಣಿಸಿಕೊಂಡವು. ಇನ್ನೊಂದು ಕಡೆ ಮದುವೆ ವಯ ಸ್ಸಿಗೆ ಬಂದ ಮಕ್ಕಳು ನಾನು ಹೇಳಿದ್ದಕ್ಕೆಲ್ಲ ತಕರಾರು ತೆಗೆಯತೊಡಗಿದ್ದರು. ಕೆಲಸ ಹುಡುಕಿಕೊಂಡು ಬೇರೆ ಊರಿಗೆ ಅಥವಾ ಬೇರೆ ದೇಶಕ್ಕೆ ಹೋಗಿಬಿಡುವ ಮಾತನ್ನಾಡಿದರು.

“ಅಲ್ಲಯ್ಯ, ನೀವು ಹೋಗಿಬಿಟ್ರೆ ನಮ್ಮನ್ನು ನೋಡಿಕೊಳ್ಳೋರು ಯಾರು?’ ಅಂದರೆ, ಅದಕ್ಕೆ ಉತ್ತರಿಸಲೇ ಇಲ್ಲ. ಮರುದಿನ ಇದೇ ಪ್ರಶ್ನೆಯನ್ನು ಸ್ವಲ್ಪ ಜೋರಾಗಿ ಕೇಳಿದಾಗ-“ಅದಕ್ಕೆಲ್ಲ ನಾವೇನು ಮಾಡೋಕಾಗುತ್ತೆ? ನಮಗೆ ನಮ್ಮ ಲೈಫ್ ಮುಖ್ಯ’ ಅಂದುಬಿಟ್ಟರು.

ಮಕ್ಕಳು ಆಸೆಪಟ್ಟಂತೆಯೇ ನಾನು ಬದುಕಿದ್ದೆ. ಅವರನ್ನು ಚೆನ್ನಾಗಿ ಸಾಕಲು- ಓದಿಸಲು ಇನ್ನಿಲ್ಲದ ರಿಸ್ಕ್ ತೆಗೆದುಕೊಂಡಿದ್ದೆ. ನನಗೆ ಫ್ಯಾಮಿಲಿಯೇ ಮುಖ್ಯ ಅನ್ನುತ್ತಾ ಗೆಳೆಯರು- ಬಂಧುಗಳನ್ನು ದೂರಮಾಡಿದ್ದೆ. ಆದರೀಗ, ಆ ಮಕ್ಕಳೇ ನನ್ನಿಂದ ದೂರ ಹೋಗುವ ಹವಣಿಕೆಯಲ್ಲಿದ್ದರು. ಒರಟಾಗಿ ಮಾತಾಡಿದ್ದರು. ಇಂಥದೊಂದು ಸಂದರ್ಭದ ಕಲ್ಪನೆಯೂ ನನಗಿರಲಿಲ್ಲ. ಇದೇ ಯೋಚನೆಯಲ್ಲಿ ಹಣ್ಣಾದೆ. ಅವತ್ತೂಮ್ಮೆ ತಲೆಸುತ್ತು ಬಂದಂತಾಗಿ…

ಮತ್ತೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ಯಾಕೋ ವಿಪರೀತ ಮಾತಾಡಬೇಕು ಅನ್ನಿಸಿತು. ಮನಸ್ಸಿನ ನೋವನ್ನೆಲ್ಲ ಯಾರೊಂದಿಗಾದರೂ ಹೇಳಿಕೊಳ್ಳಬೇಕನ್ನಿಸಿತು. ಆದರೆ ನನ್ನ ಮಾತು ಕೇಳಿಸಿಕೊಳ್ಳಲು ಅಲ್ಲಿ ಯಾರೂ ಇರಲಿಲ್ಲ. ಮಕ್ಕಳು ಆಫೀಸ್‌ಗೆ ಹೋಗಿ ಬಿಟ್ಟಿದ್ದರು. ಹೆಂಡತಿ ಊಟ ತರಲೆಂದು ಮನೆಗೆ ಹೋಗಿದ್ದಳು. ಅಪ್ಪನ ಮಾತುಗಳು ನೆನಪಾಗಿದ್ದೇ ಆಗ. ಒಮ್ಮೆ ಕಾಲ್‌ ಮಾಡಿ ನೋಡೋಣ ಅಂದುಕೊಂಡು, ಬಾಲ್ಯದ ಇಬ್ಬರು ಗೆಳೆಯರಿಗೆ ಫೋನ್‌ ಮಾಡಿ ವಿಷಯ ತಿಳಿಸಿದೆ. ಇದಾಗಿ ಎರಡು ಗಂಟೆಗಳು ಕಳೆದಿಲ್ಲ; ನಾಲ್ವರು ಚಡ್ಡಿ ದೋಸ್ತ್ಗಳು ಬಂದೇ ಬಿಟ್ಟರು! ಅವರಿಗೆ ನನ್ನಿಂದ ಯಾವ ಸಹಾಯವೂ ಆಗಿರಲಿಲ್ಲ. ಸಂಸಾರ ಮೊದಲು, ಸಂಬಂಧ ಆಮೇಲೆ ಅನ್ನುವ ಹಮ್ಮಿನಲ್ಲಿ ನಾನು ಅವರೆಲ್ಲರ ಜತೆ ಬೇಕಾಬಿಟ್ಟಿ ಮಾತಾಡಿದ್ದೆ. ಅದೆಲ್ಲ ನೆನಪಾಗಿ ನಾಚಿಕೆಯಾಯಿತು.

ಉಹೂಂ, ಆ ಗೆಳೆಯರು ಅದೇನನ್ನೂ ನೆನಪಿಸಲಿಲ್ಲ. “ನಾವೆಲ್ಲ ನಿನ್ನ ಜತೆಗೆ ಇತೇವೆ. ಏನೂ ಆಗಲ್ಲ ನಿನಗೆ. ಧೈರ್ಯವಾಗಿರು. ನೀನು ಆಸ್ಪತ್ರೆಯಲ್ಲಿ ಇರುವಷ್ಟೂ ದಿನ ಬೆಳಗ್ಗೆ ಇಬ್ಬರು, ಮಧ್ಯಾಹ್ನ ಇಬ್ಬರು ಬಂದು ಕಂಪೆನಿ ಕೊಡ್ತೇವೆ. ನನ್ನ ಮಗನನ್ನು ಕಷ್ಟಕಾಲದಲ್ಲಿ ನೋಡ್ಕೊಳ್ರಪ್ಪಾ ಅಂತ ನಿಮ್ಮ ತಂದೆ ಹಿಂದೊಮ್ಮೆ ಹೇಳಿದ್ರು, ಅದೂ ನೆನಪಿದೆ ನಮಗೆ…’ ಅಂದರು.

ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ಇದ್ದಷ್ಟೂ ದಿನ ತಪ್ಪದೇ ಬಂದರು. ನನ್ನ ಮಾತುಗಳಿಗೆ ಕಿವಿಯಾದರು. ಕಷ್ಟಗಳಿಗೆ ಹೆಗಲಾದರು. ಒಂಟಿತನಕ್ಕೆ ಜತೆಯಾದರು. ಕಡೆಗೊಮ್ಮೆ ಡಿಸ್ಚಾರ್ಜ್‌ ಆದಾಗ, ಆಸ್ಪತ್ರೆಯಿಂದ ಮನೆಗೂ ಅವರೇ ಕರೆತಂದರು. ಅರ್ಧಗಂಟೆ ಜತೆಗಿದ್ದು, ಧೈರ್ಯ ಹೇಳಿ ಎದ್ದು ಹೋದರು.
ಆಗಲೇ ಮತ್ತೂಮ್ಮೆ ಅಪ್ಪ ಹೇಳಿದ್ದ ಮಾತುಗಳು ನೆನಪಿಗೆ ಬಂದವು: “”ಜೀವನದಲ್ಲಿ ಯಾವತ್ತೂ ಫ್ರೆಂಡ್‌ಗಳನ್ನೂ ಮರೆಯಬೇಡ. ಆಗಾಗ ಅವರನ್ನು ಮಾತಾಡಿಸು. ಕಷ್ಟಕಾಲದಲ್ಲಿ ಫ್ರೆಂಡ್‌ಗಳು ಬೇಕಾಗ್ತಾರೆ… ”

ಅಂದಹಾಗೆ, ಫ್ರೆಂಡ್‌ಗಳನ್ನು ಆಗಾಗ ಮಾತಾಡಿಸ್ತಾ ಇದ್ದೀರಿ ತಾನೇ?

ಎ.ಆರ್‌.ಮಣಿಕಾಂತ್‌

ಟಾಪ್ ನ್ಯೂಸ್

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

Postman ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

MUNNA

ಕೆಮರಾ ಕಣ್ಣು ಮಿಟುಕಿಸುತ್ತಾ “ಕಮಾಲ್‌”ಮಾಡಿದ!

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.