ಈ ಮಹಾತಾಯಿ, ಮಗನ ಕೊಂದವನನ್ನೂ ಕ್ಷಮಿಸಿದಳು!


Team Udayavani, Oct 27, 2019, 5:28 AM IST

mahatayi

ಆಕೆಯ ಹೆಸರು ಲಿನ್‌ ಮೇ ಯುಮ…. ಅವಳಿಗೆ, ಎದೆಯೆತ್ತರ ಬೆಳೆದ ಮಗನಿದ್ದ. ಅವನ ಹೆಸರು ಟಿಂಗ್‌ ದೆ. ಅವನಿಗೆ ಎಂಟು ವರ್ಷವಿ¨ªಾಗಲೇ ಲಿನ್‌ ಮೇ ಳ ಗಂಡ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದ. ಅವತ್ತಿನಿಂದ, ಅಮ್ಮನಿಗೆ ಮಗನೇ ಗೆಳೆಯ. ಮಗನಿಗೆ ಅಮ್ಮನೇ ಆತ್ಮಬಂಧು! ಈ ಅಮ್ಮ, ಉಳಿದೆಲ್ಲ ತಾಯಂದಿರಂತೆಯೇ ಮಗನನ್ನು ಚೆನ್ನಾಗಿ ಓದಿಸಿ, ದೊಡ್ಡ ಆಫೀಸರ್‌ ಮಾಡುವ ಕನಸು ಕಂಡಿದ್ದಳು. ಆದರೆ ಈ ಹುಡುಗ, ಬೇಗ ಕೆಲಸಕ್ಕೆ ಸೇರಿ ಸಂಪಾದನೆ ಮಾಡುವ ಮೂಲಕ, ಅಮ್ಮ ಕೂಲಿಗೆ ಹೋಗುವುದನ್ನು ತಪ್ಪಿಸಬೇಕು ಎಂದು ಆಸೆಪಟ್ಟಿದ್ದ. ಅಷ್ಟೇ ಅಲ್ಲ, 17ನೇ ವಯಸ್ಸಿಗೇ ಓದಿಗೆ ಶರಣು ಹೊಡೆದು, ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡ.

ಅವತ್ತು 2000ನೇ ಇಸವಿಯ ಡಿಸೆಂಬರ್‌ 24ನೇ ತಾರೀಖು. ಮರುದಿನ ಕ್ರಿಸ್ಮಸ್‌. ಫ್ಯಾಕ್ಟರಿಯ ಕೆಲಸ ಮುಗಿದ ನಂತರ, ಹತ್ತಿರದÇÉೇ ಇದ್ದ ಮೈದಾನದಲ್ಲಿ ಗೆಳೆಯರೊಂದಿಗೆ ಹರಟೆ ಹೊಡೆಯುವುದು ಟಿಂಗ್‌ ದೆ ಯ ದಿನಚರಿಯಾಗಿತ್ತು. ಡಿಸೆಂಬರ್‌ 24ರಂದು ಬೋನಸ್‌ ಕೊಟ್ಟ ಫ್ಯಾಕ್ಟರಿ ಮಾಲೀಕರು, ಒಂದಿಷ್ಟು ಹೆಚ್ಚುವರಿ ಕೆಲಸವನ್ನೂ ಹೇಳಿದರು. ಆ ಕೆಲಸ ಮುಗಿಸಿ ಗೆಳೆಯರ ಹಿಂಡು ಸೇರಿಕೊಂಡಾಗ ಆಗಲೇ ಸಂಜೆಯಾಗಿತ್ತು. ಗೆಳೆಯರು- ತಡವಾಗಿ ಬಂದ ತಪ್ಪಿಗೆ, ಹತ್ತು ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದರು. ಅದಕ್ಕೆ ಒಪ್ಪಿದ‌ ಟಿಂಗ್‌ ದೆ, ಮೈದಾನದ ಒಂದು ಬದಿಗೆ ಬಂದು ಬಸ್ಕಿ ಹೊಡೆಯತೊಡಗಿದ.

ಟಿಂಗ್‌ ದೆ ನಿಂತಿದ್ದನಲ್ಲ? ಅಲ್ಲಿಂದ ಕೆಲವೇ ಗಜಗಳ ದೂರದಲ್ಲಿ ಪಡ್ಡೆ ಹುಡುಗರ ಗುಂಪೊಂದಿತ್ತು. ಆ ಕಡೆಗೂ ಈ ಕಡೆಗೂ ವಾಲಾಡುತ್ತಾ, ಬಸ್ಕಿ ಹೊಡೆಯುತ್ತಿದ್ದ ಟಿಂಗ್‌ ದೆ, ತಮ್ಮನ್ನು ಅಣಕಿಸುತ್ತಿ¨ªಾನೆ ಎಂದೇ ಅವರು ಭಾವಿಸಿದರು. ಅದೇ ಕಾರಣ ಹೇಳಿ ಜಗಳಕ್ಕೆ ಬಂದರು. ನಮ್ಮನ್ನು ಆಡಿಕೊಂಡಿದ್ದಕ್ಕೆ ಕ್ಷಮೆ ಕೇಳು ಎಂದು ಟಿಂಗ್‌ ದೆ ನನ್ನು ಒತ್ತಾಯಿಸಿದರು. ಮಾತಿಗೆ ಮಾತು ಬೆಳೆದು, ಜಗಳ ಶುರುವಾಗಿ, ಹೊಡೆದಾಟವೂ ಆರಂಭವಾಗಿ ಹೋಯಿತು. ಈ ಹಣಾಹಣಿಯಲ್ಲಿ, ಯಾಂಗ್‌ ಎಂಬ ಹುಡುಗ, ಟಿಂಗ್‌ ದೆ ಗೆ ತೊಡರುಗಾಲು ಹಾಕಿ ಬೀಳಿಸಿದ. ನಂತರ, ಎಲ್ಲರೂ ನೋಡುತ್ತಿದ್ದಂತೆಯೇ ಚಾಕು ತೆಗೆದು ಟಿಂಗ್‌ ದೇ ಯ ಎದೆಗೆ ಬಲವಾಗಿ ಚುಚ್ಚಿಬಿಟ್ಟ!

ಇತ್ತ ಲಿನ್‌ ಮೇ – ಮಗನ ನಿರೀಕ್ಷೆಯಲ್ಲಿ ರಾತ್ರಿ ಕಳೆದಳು. ಬಹುಶಃ ಗೆಳೆಯರ ಮನೇಲಿ ಉಳಿದಿರಬೇಕು ಎಂದುಕೊಂಡಳು. ಆದರೆ, ಬೆಳಗಿನ ಜಾವಕ್ಕೇ ಅವನ ಸಾವಿನ ಸುದ್ದಿ ಬಂತು. ತನ್ನ ಬದುಕಿಗೆ ಆಧಾರವಾಗಿದ್ದ, ಭವಿಷ್ಯವಾಗಿದ್ದ ಮಗ ಕೊಲೆಯಾಗಿ ಹೋದ ಎಂದು ತಿಳಿದಾಗ, ಲಿನ್‌ ಮೇ ಯುಮ್‌ ಪ್ರಜ್ಞೆ ತಪ್ಪಿಬಿದ್ದಳು. ಎಷ್ಟೋ ಹೊತ್ತಿನ ಬಳಿಕ ಎಚ್ಚರವಾದಾಗ, ಹಣೆ ಹಣೆ ಚಚ್ಚಿಕೊಂಡು, ಹುಚ್ಚಿಯಂತೆ ಚೀರುತ್ತಾ, ಮಗನ ಶವ ಇರಿಸಲಾಗಿದ್ದ ಆಸ್ಪತ್ರೆಗೆ ಓಡಿದಳು.

ಅಲ್ಲಿ, ಜಗತ್ತಿನ ಗೊಡವೆಯೇ ಇಲ್ಲದವನಂತೆ ಟಿಂಗ್‌ ದೆ ಮಲಗಿದ್ದ. ಚಾಕುವಿನಿಂದ ಚುಚ್ಚಿದಾಗ ಮಗನಿಗೆ ಅದೆಷ್ಟು ನೋವಾಯಿತೋ, ಹೇಗೆಲ್ಲ ಒ¨ªಾಡಿಹೋದನೊ ಎಂದೆÇÉಾ ಅಂದಾಜು ಮಾಡಿಕೊಂಡು ಲಿನ್‌ ಮೇ ಯೂಮ್‌ ಕಣ್ಣೀರು ಸುರಿಸುತ್ತಿದ್ದಳು. ಅಲ್ಲಿಯೇ ಇದ್ದ ಟಿಂಗ್‌ ದೆ ಗೆಳೆಯ ಒಂದು ಪುಟ್ಟ ಕವರ್‌ ನೀಡಿ ಹೇಳಿದ- ತಗೋಮ್ಮಾ, ಇದು ಟಿಂಗ್‌ ದೆ ಗೆ ಬೋನಸ್‌ ರೂಪದಲ್ಲಿ ಬಂದ ಹಣ . ಇದನ್ನು ಅಮ್ಮನಿಗೆ ತಲುಪಿಸಿ ಎಂದು ಹೇಳಿದ್ದೇ ಅವನ ಕಡೆಯ ಮಾತಾಯ್ತು…
***
ಕೆಲವು ದಿನಗಳ ನಂತರ ಕೋರ್ಟಿನಲ್ಲಿ ವಿಚಾರಣೆ ಶುರುವಾಯಿತು. ಕೊಲೆಗಾರ ಎಂಬ ಹಣೆಪಟ್ಟಿ ಹೊಂದಿದ್ದ 15 ವರ್ಷದ ಯಾಂಗ್‌ನನ್ನು, ಎಲ್ಲರೂ ಅಚ್ಚರಿಯಿಂದ ನೋಡಿದರು. ಇಷ್ಟು ಚಿಕ್ಕವಯಸ್ಸಿಗೇ ಕೊಲೆ ಮಾಡು ವಂಥ ಕ್ರೌರ್ಯ ಹೇಗಾದ್ರೂ ಜೊತೆಯಾಯ್ತು ಅಂದುಕೊಂಡರು. ಇಂಥದೇ ಭಾವ, ಲಿನ್‌ ಮೇ ಗೂ ಬಂತು. ನ್ಯಾಯಾಧೀಶರ ಮುಂದೆ ಯಾಂಗ್‌ ಹೊಸ ವರಸೆ ತೆಗೆದ. ಜಗಳವಾದಾಗ, ಟಿಂಗ್‌ ದೆಗೆ ಒಂದೇಟು ಹೊಡೆದೆನೇ ವಿನಃ ಚಾಕುವಿನಿಂದ ಚುಚ್ಚಲಿಲ್ಲ ಎಂದು ಹಸೀ ಸುಳ್ಳು ಹೇಳಿದ. ಅವನ ವಾದವನ್ನು ತಳ್ಳಿಹಾಕಿದ ಕೋರ್ಟು, ಹತ್ತು ವರ್ಷಗಳ ಜೈಲುಶಿಕ್ಷೆ ವಿಧಿಸಿತು. ಇಷ್ಟಲ್ಲದೆ, ಟಿಂಗ್‌ ನ ತಾಯಿಗೆ ಶಾಶ್ವತ ಪರಿಹಾರ ಕೊಡಬೇಕು ಹಾಗೂ ಕೋರ್ಟಿನ ವಿಚಾರಣೆಗೆ ಬರುವ ಎಲ್ಲ ಸಂದರ್ಭದಲ್ಲೂ ಪ್ರಯಾಣಭತ್ಯೆ ನೀಡಬೇಕೆಂದು ಆದೇಶಿಸಿತು.

ಯಾಂಗ್‌ಗೆ ಮರಣದಂಡನೆ ಆಗಬಹುದೆಂದು ಲಿನ್‌ ಮೇ ಭಾವಿಸಿದ್ದಳು. ಹಾಗಾಗಲಿಲ್ಲವಲ್ಲ, ಆ ಕ್ಷಣವೇ ಅವಳಲ್ಲಿ ಸೇಡಿನ ಕಿಡಿ ಹೊತ್ತಿಕೊಂಡಿತು. ಮಗನನ್ನು ಕೊಂದವನನ್ನು ಕೊಲ್ಲಬೇಕು. ಸೇಡಿಗೆ ಸೇಡು, ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತವೇ ಉತ್ತರ ಆಗಬೇಕು ಎಂದು ಆಕೆ ನಿರ್ಧರಿಸಿಬಿಟ್ಟಳು. ಯಾಂಗ್‌ಗೆ ಮರಣದಂಡನೆ ಆಗಬೇಕು ಎಂದು ಒತ್ತಾಯಿಸಿ ಮೇಲ್ಮನವಿ ಸಲ್ಲಿಸಿದಳು. ಅಷ್ಟೇ ಅಲ್ಲ: ವಿಚಾರಣೆಗೆಂದು ಯಾಂಗ್‌ ಕೋರ್ಟ್‌ಗೆ ಬರುತ್ತಾನಲ್ಲ? ಆಗ ಅವನಿಗೂ ಚೂರಿ ಹಾಕಿಬಿಡಬೇಕು ಎಂದು ನಿಶ್ಚಯಿಸಿದಳು. ಒಂದು ಗೊಂಬೆ ತಯಾರಿಸಿ, ಅದನ್ನೇ ಯಾಂಗ್‌ ಎಂದು ಕಲ್ಪಿಸಿಕೊಂಡು ಅದನ್ನು ಒಂದು ಬದಿಯಲ್ಲಿ ನಿಲ್ಲಿಸಿ, ಅದಕ್ಕೆ ಎರಡು ಮೂರು ಕಡೆಯಿಂದ ಹೇಗೆಲ್ಲಾ ಚಾಕು ಹಾಕಬಹುದು ಎಂದೆಲ್ಲ ರಿಹರ್ಸಲ್‌ ಮಾಡಿಕೊಂಡಳು.

ಮುಂದೆ ಒಂದೆರಡಲ್ಲ, ಎಂಟು ಬಾರಿ ವಿಚಾರಣೆ ನಡೆಯಿತು. ಪ್ರತಿ ಬಾರಿಯೂ, ಚಿಕ್ಕದೊಂದು ಬ್ಯಾಗ್‌ನೊಳಗೆ ಚಾಕು ಇಟ್ಟುಕೊಂಡೇ ಕೋರ್ಟಿಗೆ ಬಂದಳು ಲಿನ್‌ ಮೇ. ಆದರೆ, ಪೊಲೀಸರ ಪಹರೆಯ ಮಧ್ಯೆ ಇರುತ್ತಿದ್ದ ಯಾಂಗ್‌ನ°ನ್ನು ಸಮೀಪಿಸಲು ಅವಳಿಗೆ ಸಾಧ್ಯವಾಗಲೇ ಇಲ್ಲ. ಅಕಸ್ಮಾತ್‌ ಅವನಿಗೆ ಚಾಕು ಹಾಕಿದರೂ, ಆ ಗಜಿಬಿಜಿಯ ಮಧ್ಯೆ ಗಟ್ಟಿಯಾಗಿ ಇರಿಯುವುದಕ್ಕೆ ಆಗುವುದಿಲ್ಲ, ಹಾಗೊಂದು ವೇಳೆ ದಾಳಿ ನಡೆದರೂ, ತಕ್ಷಣವೇ ಅವನನ್ನು ಆಸ್ಪತ್ರೆಗೆ ಒಯ್ಯುತ್ತಾರೆ, ಆತ ಬದುಕಿಬಿಡುತ್ತಾನೆ ಎಂಬ ಸಂಗತಿಯೂ ಲಿನ್‌ ಮೇಗೆ ಗ್ಯಾರಂಟಿಯಾಗಿ ಹೋಯಿತು. ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲೇಬೇಕು ಎಂದು ಕುದಿಯುತ್ತಿದ್ದ ಆಕೆ, ಈಗ ಬೇರೊಂದು ರೀತಿ ಯೋಚಿಸಿದಳು.

ಯಾಂಗ್‌ನ ಸುತ್ತಲೂ ಪೊಲೀಸರಿರುತ್ತಾರೆ. ಹಾಗಾಗಿ, ಅವನನ್ನು ಕೊಲ್ಲಲು ಸಾಧ್ಯವಿಲ್ಲ. ಅವನ ಬದಲಿಗೆ ಅವನ ತಾಯಿ- ತಂದೆಯನ್ನೇ ಯಾಕೆ ಕೊಲ್ಲಬಾರದು? ಮಗನನ್ನು ಕಳೆದುಕೊಂಡು ನನಗೆ ಆಗಿದೆಯಲ್ಲ? ಅಂಥದೇ ದುಃಖ ಹೆತ್ತವರನ್ನು ಕಳೆದುಕೊಂಡಾಗ ಯಾಂಗ್‌ಗೂ ಆಗಲಿ!

ಹೀಗೆ ನಿರ್ಧರಿಸಿದ ದಿನವೇ ಲಿನ್‌ ಮೇಯ ರೂಟೀನ್‌ ಬದಲಾಯಿತು. ವಿಚಿತ್ರ ಅನ್ನುವಂತೆ, ವಿಚಾರಣೆ ನಡೆವ ಸಂದರ್ಭದಲ್ಲಿ ಯಾಂಗ್‌ನ ಹೆತ್ತವರು ಕೋರ್ಟ್‌ಗೆ ಬರುತ್ತಿರಲಿಲ್ಲ. ಅವರು ಎಲ್ಲಿ ಸಿಗಬಹುದು? ಒಂದೊಂದೇ ತಿವಿತಕ್ಕೆ ಇಬ್ಬರನ್ನೂ ಮುಗಿಸುವುದು ಹೇಗೆ ಎಂದು ಪ್ಲ್ರಾನ್‌ ಮಾಡಿಕೊಂಡಳು. ಅವಳಿಗೆ ಟಿಂಗ್‌ ದೆ ಮುದ್ದು ಮುಖವೇ ಕಾಣುತ್ತಿತ್ತು. ಮರುಕ್ಷಣವೇ, ಮಗನ ಜೊತೆಗೆ ಕಳೆದ ದಿನಗಳ ನೆನಪಾಗಿ, ಕಣ್ಣೀರು, ಸಂಕಟ ಜೊತೆಯಾಗುತ್ತಿತ್ತು. ಹೀಗೆ ಕ್ಷಣಕ್ಷಣವನ್ನೂ ಸೇಡು, ಸಂಕಟ, ನೋವು, ಖನ್ನತೆಯ ಮಧ್ಯೆಯೇ ಕಳೆದ ಕಾರಣದಿಂದ, ಅದೊಂದು ದಿನ ಲಿನ್‌ ಮೇಗೆ ಲಘು ಹೃದಯಾ ಘಾತವಾಯಿತು. ಬಂಧುಗಳು, ತಕ್ಷಣವೇ ಆಸ್ಪತ್ರೆಗೆ ಒಯ್ದರು.

ಹದಿನೈದು ದಿನಗಳ ಚಿಕಿತ್ಸೆಯ ನಂತರ ಡಿಸಾcರ್ಜ್‌ ಆಗಿ ಮನೆಯ ಹಾದಿ ಹಿಡಿದ ಲಿನ್‌ ಮೇ ಕೃಶಳಾಗಿದ್ದಳು. ಇಂಥ ನಿಃಶಕ್ತಿಯ ಮಧ್ಯೆ, ಮಗನ ಕೊಲೆಗೆ ಸೇಡು ತೀರಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಆಕೆಗೆ ಗೊತ್ತಾಗಿ ಬಿ ಟ್ಟಿತು. ತನ್ನ ಅಸಹಾಯಕತೆಗಾಗಿ ಮರು ಗುತ್ತಾ, ರಸ್ತೆ ದಾಟಲು ಹೆಜ್ಜೆ ಎತ್ತಿಟ್ಟವಳಿಗೆ, ಅನತಿ ದೂರದಲ್ಲಿ ಅವರು ಕಾಣಿಸಿದರು!

ಕೊಲೆಗಾರ ಯಾಂಗ್‌ನ ತಂದೆ-ತಾಯಿ!!
ಅವರನ್ನೇ ದಿಟ್ಟಿಸಿ ನೋಡಿದಳು ಲಿನ್‌ ಮೇ. ಯಾಂಗ್‌ನ ತಂದೆಗೆ ಒಂದು ಕೈ ಇರಲಿಲ್ಲ. ತಾಯಿಗೆ, ನಿಲ್ಲಲು ತ್ರಾಣವೂ ಇರಲಿಲ್ಲ. ಅವರೂ ತನ್ನಂತೆಯೇ ಕಡುಬಡವರು ಎಂಬುದು, ಲಿನ್‌ ಮೇಗೆ ಅದುವರೆಗೂ ಗೊತ್ತಿರಲಿಲ್ಲ. ಅಪಘಾತದಲ್ಲಿ ಒಂದು ಕೈ ಕಳೆದುಕೊಂಡಿದ್ದ ಯಾಂಗ್‌ನ ತಂದೆ, ಬೆಳಗಿಂದ ಸಂಜೆಯವರೆಗೂ ರಸ್ತೆ ಬದಿಯಲ್ಲಿ ಹೂ ಮಾರುತ್ತಿದ್ದ. ಅವನ ಪತ್ನಿ, ತರಕಾರಿ ಮಾರುತ್ತಿದ್ದಳು. ಹೀಗೆ ದುಡಿದೇ ಅವರು ಕೋರ್ಟ್‌ ಫೀಗೆ ಹಣ ಹೊಂದಿಸುತ್ತಿದ್ದರು ಎಂಬ ಸಂಗತಿ, ಅವತ್ತಷ್ಟೇ ಲಿನ್‌ ಮೇಗೆ ಗೊತ್ತಾಯಿತು. ಈ ವೃದ್ಧ ದಂಪತಿಯನ್ನು ಕಂಡದ್ದೇ,ಅವಳ ಮನಸ್ಸು ಬದಲಾಯಿತು. “”ಅವರೂ ನನ್ನಂತೆಯೇ ಬಡವರು. ಅಸಹಾಯಕರು. ಅವರನ್ನು ಕೊಂದು ಸಾಧಿಸುವುದೇನಿದೆ? ಅವರನ್ನು ಮಾತ್ರವಲ್ಲ, ಯಾಂಗ್‌ನನ್ನು ಕೊಂದರೂ, ಸತ್ತುಹೋಗಿರುವ ನನ್ನ ಮಗ ಮರಳಿ ಬರಲಾರ. ಹೀಗಿರುವಾಗ, ಸೇಡಿನಿಂದ ಆಗುವ ಸಾಧನೆ ಏನು?” ಇಂಥದೊಂದು ಯೋಚನೆ ಬಂದಾಕ್ಷಣ, ಎಲ್ಲರನ್ನೂ ಕ್ಷಮಿಸಿಬಿಡಲು ನಿರ್ಧರಿಸಿದಳು ಲಿನ್‌ ಮೇ. ಅಷ್ಟೇ ಅಲ್ಲ, ಯಾಂಗ್‌ನ ಹೆತ್ತ ವ ರನ್ನೂ ಮಾತಾ ಡಿಸಿ, ಮನೆಗೆ ಬರುವಂತೆ ಆಹ್ವಾನ ನೀಡಿದಳು.
***
ಲಿನ್‌ಳ ದೊಡ್ಡ ಮನಸ್ಸು ಕಂಡು ಯಾಂಗ್‌ನ ತಂದೆ ಮೂಕನಾಗಿ ನಿಂತುಬಿಟ್ಟ. ಅವನ ಹೆಂಡತಿ ಓಡಿ ಬಂದು ಲಿನ್‌ಳನ್ನು ತಬ್ಬಿಕೊಂಡಳು. ನಮ್ಮ ಮಗನ ತಪ್ಪನ್ನು ದೇವರೂ ಕ್ಷಮಿಸಲಾರ. ಆದ್ರೆ ನೀವು ಕ್ಷಮಿಸಿದ್ದೀರಿ. ಬದುಕಿಡೀ ನಾವು ಋಣಿಗಳು ಎಂದೆÇÉಾ ಬಡಬಡಿಸಿ ದಳು. ಆನಂತರ ಅಲ್ಲಿ ನೀರವ ಮೌನವಿತ್ತು. ಆಗ ಮನಸುಗಳು ಮಾತಾಡಿಕೊಂಡವು. ಕಣ್ಣುಗಳು ಕಥೆ ಹೇಳಿಕೊಂಡವು.

ಬೀಳ್ಕೊಡುವ ಮುನ್ನ ಲಿನ್‌ ಹೇಳಿದಳು: ನನ್ನ ಮಗ ಇಲ್ಲ ಎಂಬುದು ಎಷ್ಟು ನಿಜವೋ, ನಿಮ್ಮ ಮಗ ಇದ್ದಾನೆ ಎಂಬುದೂ ಅಷ್ಟೇ ನಿಜ. ಇನ್ನು ಮುಂದೆ ಯಾಂಗ್‌ ನಲ್ಲಿಯೇ ನಾನು ಮಗನನ್ನೂ ಕಾಣ್ತೆàನೆ. ಆಗದೆ?
ಲಿನ್‌ ಮೇಯ ಹೃದಯವಂತಿಕೆ ಬಗ್ಗೆ ಪೋಷಕರಿಂದ ತಿಳಿದ ಯಾಂಗ್‌, ಮಾತು ಹೊರಡದೆ ನಿಂತುಬಿಟ್ಟ. ನಂತರದ ಕೆಲವೇ ದಿನಗಳಲ್ಲಿ, ಯಾಂಗ್‌ಗೆ ಮರಣದಂಡನೆ ವಿಧಿಸಿ ಎಂಬ ಅರ್ಜಿಯನ್ನು ಲಿನ್‌ ಮೇ ಹಿಂತೆಗೆದುಕೊಂಡಳು. ನಡೆಯುತ್ತಿರು ವುದೆÇÉಾ ನಿಜವಾ, ಕನಸಾ ಎಂದು ಯಾಂಗ್‌ ಯೋಚಿಸುತ್ತಿ¨ªಾಗಲೇ, ಜೈಲಿಗೇ ಬಂದುಬಿಟ್ಟಳು ಲಿನ್‌ ಮೇ.
ಆಗ ಮಾತ್ರ ಯಾಂಗ್‌ ತಡೆಯಲಾರದೆ ಹೇಳಿಬಿಟ್ಟ: “”ನಿಮ್ಮನ್ನು ಮುಟ್ಟಲಿಕ್ಕೂ ನನಗೆ ಯೋಗ್ಯತೆ ಇಲ್ಲ ಅಮ್ಮಾ, ಅಂಥಾ ತಪ್ಪು ಮಾಡಿರುವ ಪಾಪಿ ನಾನು. ಆದರೂ, ನಿಮ್ಮನ್ನು ಒಂದೇ ಒಂದು ಸಲ ತಬ್ಬಿಕೊಂಡು ಅಮ್ಮಾ ಅನ್ನಬೇಕು ಅಂತ ಆಸೆ ಆಗಿದೆ. ಒಂದು ನಿಮಿಷದ ಮಟ್ಟಿಗೆ ನಿಮ್ಮನ್ನು ತಬ್ಬಿಕೊಳ್ಳಬಹುದಾ?”

ಲಿನ್‌ ಮಾತಾಡಲಿಲ್ಲ: ಒಮ್ಮೆ ಮುಗುಳ್ನಕ್ಕಳು. ಆ ಕ್ಷಣಕ್ಕೇ ಕಾದಿದ್ದವನಂತೆ,ಯಾಂಗ್‌ ತಲೆ ತಗ್ಗಿಸಿಕೊಂಡು ಲಿನ್‌ಳನ್ನು ಬಿಗಿದಪ್ಪಿ – “”ನನ್ನನ್ನು ಕ್ಷಮಿಸ್ತೀರಾ ಅಮ್ಮ? ಕ್ಷಮಿಸಿಬಿಡಿ ಅಮ್ಮಾ. ನಾನು ಪಾಪಿ ಅಮ್ಮಾ” ಎಂದೆÇÉಾ ಬಡಬಡಿಸಿದ. ಆಕೆಯ ಕೈಗಳಿಂದ ತನ್ನ ಕೆನ್ನೆಗೆ ರಪರಪನೆ ಹೊಡೆದು ಕೊಂಡ. ಆಗ, ಮಗನ ನೆನಪಾಗಿ, ಉಕ್ಕಿ ಬಂದ ಕಂಬನಿ ತಡೆಹಿಡಿದು, ಲಿನ್‌ ಅಂದಳು- “”ಹಳೆಯದೆÇÉಾ ಮರೆತುಬಿಡು”.
ಆನಂತರದಲ್ಲಿ ಯಾಂಗ್‌, ಜೈಲಿನಿಂದ ವಾರಕ್ಕೆರಡು ಪತ್ರ ಬರೆಯತೊಡಗಿದ. ಪ್ರತಿ ಪತ್ರದಲ್ಲೂ: “”ಅಮ್ಮಾ, ನನ್ನನ್ನು ಕ್ಷಮಿಸ್ತೀಯಾ? ಈ ಪಾಪಿಯ ತಪ್ಪನ್ನು ಮನ್ನಿಸ್ತೀಯಾ? ನಿನ್ನನ್ನು ಅಮ್ಮಾ ಎಂದು ಕರೆವ ಯೋಗ್ಯತೆ ಖಂಡಿತ ನನಗಿಲ್ಲ. ಆದ್ರೂ ಕರೀತಿದೀನಿ. ಅಮ್ಮಾ… ಅಮ್ಮಾ… ನನ್ನನ್ನು ಕ್ಷಮಿಸು…” ಎಂದು ಬರೆಯುತ್ತಿದ್ದ.

ಲಿನ್‌ ಮೇ ಯ ನಡೆ, ಬಂಧುಗಳಿಗೆ ಇಷ್ಟವಾಗಲಿಲ್ಲ. ಕೊಲೆ ಮಾಡಿದವನನ್ನೂ ಕ್ಷಮಿಸಿಬಿಟ್ಟೆಯಲ್ಲ, ಅವನು ಸಾಯುವವರೆಗೂ ಜೈಲಲ್ಲಿ ಕೊಳೆಯುವಂತೆ ಮಾಡಬೇಕಿತ್ತು ಅಂದರು. ಆಗ ಲಿನ್‌ ಮೇ
ಹೇಳಿದಳು: “ಏನೇ ಶಿಕ್ಷೆ ಕೊಟ್ರೂ, ನನ್ನ ಮಗ ಮರಳಿ ಬರಲಾರ.
ಅಕಸ್ಮಾತ್‌ ಮರಣದಂಡನೆಯ ಕಾರಣಕ್ಕೆ ಯಾಂಗ್‌ ಸತ್ತೇ ಹೋದರೆ, ಅವನ ಹೆತ್ತವರು ಪುತ್ರ ಶೋಕದಿಂದ ನರಳುತ್ತಾರೆ. ಇದರಿಂದ ನನಗೆ ಸಿಗುವುದೇನು? ಅದರ ಬದಲು, ಯಾಂಗ್‌ನನ್ನು ಕ್ಷಮಿಸಿದರೆ, ಅವನ ಇಡೀ ಕುಟುಂಬ ಸಂತೋಷದಿಂದ ಇರುವುದನ್ನು ನೋಡಬಹುದಲ್ಲವಾ? ಅಂಥದೊಂದು ಧನ್ಯತೆ ಸಾಕು ನನಗೆ…’

ಅಂದ ಹಾಗೆ, ಇದು ತೈವಾನ್‌ನಲ್ಲಿ ನಡೆದ ಕಥೆ. ಮುಂದೆ, ಜೈಲಿನಲ್ಲಿ ಒಳ್ಳೆಯ ನಡತೆ ತೋರಿದನೆಂಬ ಕಾರಣಕ್ಕೆ, ಯಾಂಗ್‌ಗೆ ಅವಧಿಗೂ ಮುನ್ನ ಬಿಡುಗಡೆಯಾಯಿತು. ಈ ಹುಡುಗ, ಜೈಲಿಂದ ಬಿಡುಗಡೆಯಾದ ತಕ್ಷಣ ಲಿನ್‌ಳ ಮನೆಗೆ ಓಡೋಡಿ ಬಂದು, ಅಮ್ಮಾ ಎನ್ನುತ್ತಲೇ ಕಣ್ಣೀರಾದ. ಅವನ ತಲೆ ನೇವರಿಸಿ, ಸಮಾಧಾನ ಹೇಳಿ, “”ಹಳೇದೆಲ್ಲ ಮರೆತುಬಿಡು. ಇನ್ಮೆàಲೆ ನೀನು, ಒಳ್ಳೆಯ ಮಗ ಆಗಬೇಕು!” ಎಂದಳು ಲಿನ್‌ ಮೇ.

ಮರುಕ್ಷಣ ಇಬ್ಬರಿಗೂ ಕಣ್ತುಂಬಿ ಬಂತು; ಸಂತೋಷಕ್ಕೆ-ಸಂಕಟಕ್ಕೆ…

– ಎ.ಆರ್‌.ಮಣಿಕಾಂತ್‌

ಟಾಪ್ ನ್ಯೂಸ್

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

Postman ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

MUNNA

ಕೆಮರಾ ಕಣ್ಣು ಮಿಟುಕಿಸುತ್ತಾ “ಕಮಾಲ್‌”ಮಾಡಿದ!

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.