ಜಲಕ್ಷಾಮವನ್ನು ಮೆಟ್ಟಿ ನಿಂತ ಮಹಾ ಜಲಯಾನ
Team Udayavani, Dec 14, 2017, 12:45 PM IST
ಈ ಮಹಾ ಜಲಯಾನಕ್ಕೆ ಫೌಂಡೇಶನ್ ವ್ಯವಸ್ಥಿತವಾಗಿ ಅಡಿ ಗಟ್ಟು ಹಾಕಿದೆ. ಜಲದ ಅರಿವು, ತಿಳುವಳಿಕೆ ನೀಡುವ ಕಿರುಚಿತ್ರಗಳನ್ನು ನಿರ್ಮಾಣ ಮಾಡಿದೆ. ನೋಡಿ ಕಲಿಯಲು ಸಹಾಯ ವಾಗುವ ವೀಡಿಯೋಗಳನ್ನು ನಿರ್ಮಿಸಿದೆ. ಸುಸಜ್ಜಿತ ತಂಡವು ಹಳ್ಳಿಗಳಲ್ಲಿ ಸುತ್ತಾಡಿ ಯಶೋಗಾಥೆಗಳನ್ನು ದಾಖಲಿಸುತ್ತದೆ.
ಮಹಾರಾಷ್ಟ್ರದ ಹದಿಮೂರು ಬರಪೀಡಿತ ಜಿಲ್ಲೆಗಳ ಮೂವತ್ತು ತಾಲೂಕುಗಳಲ್ಲಿ ನೀರಿನ ಆಂದೋಲನ. ಮಳೆಯ ನೀರನ್ನು ತಡೆಯುವುದೆಂತು? ಇಂತಹ ಪ್ರಶ್ನೆಗಳ ಸ್ರೋತವನ್ನು ಜನಮನದೊಳಗೆ ಪಾನಿ ಫೌಂಡೇಶನ್ ಇಳಿಸುತ್ತಿದೆ. ಜನರೊಳಗೆ ಪ್ರಶ್ನೆ ಮೂಡಿಸುತ್ತಾ, ಅವರಿಂದಲೇ ಉತ್ತರ ಪಡೆದು, ಕೆಲಸಕ್ಕೆ ಹಚ್ಚುವ ದೂರಗಾಮಿ ಪರಿಣಾಮದ ತನು ಶ್ರಮಗಳು ಯಶದ ಮೆಟ್ಟಲೇರಿವೆ. ಜನ ಶಕ್ತಿಯನ್ನು ಮಾನಸಿಕವಾಗಿ, ಶಾರೀರಿಕವಾಗಿ ಫೌಂಡೇಶನ್ ಸಜ್ಜುಗೊಳಿಸಿದೆ. ಸರಕಾರಿ ಸಹಾಯ ಇಲ್ಲದೆ ಜಲಕ್ಷಾಮವನ್ನು ದೂರಮಾಡುವ ದೂರದೃಷ್ಟಿ. ಫೌಂಡೇಶನ್ನಿನ ರೂವಾರಿಗಳು ನಟ ಅಮಿರ್‌ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್.
ಜಲ ಸಂರಕ್ಷಣೆಯ ಜ್ಞಾನ ಪ್ರಸಾರ ಮತ್ತು ಪ್ರೇರಣೆಗೆ ಧನಾತ್ಮಕ ವಾಗಿ ಪೈಪೋಟಿ ಮೂಡಿಸುವ ಮೂಲಕ ಬರ ಗೆಲ್ಲುವ ಯೋಚನೆ. ನೂರಕ್ಕೂ ಮಿಕ್ಕಿ ಹಳ್ಳಿಗಳು ಈ ತಂತ್ರಗಳನ್ನು ಅನುಷ್ಠಾನಗೊಳಿಸಿವೆ. ಏಪ್ರಿಲ್ ತಿಂಗಳಿನ ಮೊದಲ ವಾರ ರಾಜ್ಯದ ಒಂದು ಸಾವಿರದ ಮುನ್ನೂರು ಹಳ್ಳಿಗಳು ಜಲ ಕಾಯಕಕ್ಕೆ ಎದ್ದು ನಿಂತಿವೆ. ಬಾನಿನಿಂದ ಬೀಳುವ ಮಳೆ ನೀರನ್ನು ಬಂಧಿಸಲು ಬೇಕಾದ ಪಾರಂಪರಿಕ ವ್ಯವಸ್ಥೆಗಳಿಗೆ ಆದ್ಯತೆ.
ಈ ಕೆಲಸಗಳಿಗೆ ಸ್ಫೂರ್ತಿ ನೀಡಲು ಮತ್ತೂಂದು ಹೆಜ್ಜೆ “ಸತ್ಯಮೇವ ಜಯತೆ ವಾಟರ್ ಕಪ್’ ಹೆಸರಿನಲ್ಲಿÉ ಆಯ್ದ ಬರಪೀಡಿತ ಪ್ರದೇಶಗಳಲ್ಲಿ ಸ್ಪರ್ಧೆಗಳ ಆಯೋಜನೆ. ಸ್ಪರ್ಧೆಯಲ್ಲಿ ಗೆದ್ದ ಹಳ್ಳಿಗೆ ನಗದು ಬಹುಮಾನ. ಪ್ರಥಮ ಐವತ್ತು ಲಕ್ಷ ರೂಪಾಯಿ, ದ್ವಿತೀಯ ಇಪ್ಪತ್ತು ಲಕ್ಷ ಹಾಗೂ ತೃತೀಯ ಹತ್ತು ಲಕ್ಷ ರೂಪಾಯಿಗಳು. ಈ ವರ್ಷದ ವಾಟರ್ ಕಪ್ ಸ್ಪರ್ಧೆಗಾಗಿ ಎರಡು ಸಾವಿರಕ್ಕೂ ಮಿಕ್ಕಿ ಹಳ್ಳಿಗಳು ನೋಂದಾಯಿಸಿದ್ದುವು.
ಸ್ಪರ್ಧೆಯ ನಿಯಮಗಳಲ್ಲೂ ಜಲಾಕ್ಷರ-ನೋಂದಾಯಿಸಿದ ಹಳ್ಳಿಯ ಐವರು ಪ್ರತಿನಿಧಿಗಳಿಗೆ ತರಬೇತಿ. ಇವರಲ್ಲಿ ಇಬ್ಬರು ಮಹಿಳೆಯರು. ತರಬೇತಿ ಪಡೆದ ಹಳ್ಳಿಯು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆಯುತ್ತದೆ. ಹೀಗೆ ಆಯ್ಕೆಯಾದ ಹಳ್ಳಿಗಳು ಒಂದು ಸಾವಿರದ ಮುನ್ನೂರು. ಇಪ್ಪತ್ತು ಕೇಂದ್ರಗಳಲ್ಲಿ ನಾಲ್ಕು ದಿವಸದ ಜಲಾನಯನ ತರಬೇತಿ. ನೆಲಜಲ ಸಮೀûಾ ವಿಧಾನ, ಮಣ್ಣು,ನೀರು ಸಂರಕ್ಷಣೆಯ ಅಗತ್ಯ ಮತ್ತು ಅನಿವಾರ್ಯ ಗಳು, ಅನುಷ್ಠಾನಿಸುವ ವಿಧಾನಗಳು ಈ ಎಲ್ಲಾ ವಿಚಾರಗಳಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ತಂತಮ್ಮ ಊರಿನಲ್ಲಿ ಮಾಡಬೇಕಾದ ಕೆಲಸಗಳು ಜವಾಬ್ದಾರಿಯುಳ್ಳದ್ದು.
ಗ್ರಾಮಸಭೆಯ ಸಂಘಟನೆ, ಫೌಂಡೇಶನ್ನಿನ ಕೆಲಸ ಮತ್ತು ಜಲ ಸಂರಕ್ಷಣೆಯ ಅಗತ್ಯಗಳ ಬಗ್ಗೆ ಚರ್ಚೆ, ವಿಚಾರ ವಿಮರ್ಶೆ ಜತೆಗೆ ಪ್ರಯೋಜನಗಳ ಪ್ರಸ್ತುತಿ. ಶ್ರಮದಾನಕ್ಕೆ ಪ್ರೇರೇಪಣೆ. ಸಮೀಕ್ಷೆಗಾಗಿ ಗ್ರಾಮಗಳಿಗೆ ಭೇಟಿ. ಸಮಗ್ರ ಜಲಾನಯನ ಅಭಿವೃದ್ಧಿಯ ಕಾರ್ಯ ಯೋಜನೆ ತಯಾರಿ. ಇದಕ್ಕೆ ನೆರವು ನೀಡಲು ತಾಂತ್ರಿಕ ತರಬೇತಿದಾರರು. ಜತೆಗೆ ಜಲ ಕಾಯಕದ ತಿಳುವಳಿಕೆಗಳಿಗಾಗಿ ಮೂವರು ಅನುಭವಿಗಳು.
ಈ ಮಹಾ ಜಲಯಾನಕ್ಕೆ ಫೌಂಡೇಶನ್ ವ್ಯವಸ್ಥಿತವಾಗಿ ಅಡಿ ಗಟ್ಟು ಹಾಕಿದೆ. ಜಲದ ಅರಿವು, ತಿಳುವಳಿಕೆ ನೀಡುವ ಕಿರುಚಿತ್ರಗಳನ್ನು ನಿರ್ಮಾಣ ಮಾಡಿದೆ. ನೋಡಿ ಕಲಿಯಲು ಸಹಾಯ ವಾಗುವ ವೀಡಿಯೋಗಳನ್ನು ನಿರ್ಮಿಸಿದೆ. ಸುಸಜ್ಜಿತ ತಂಡವು ಹಳ್ಳಿಗಳಲ್ಲಿ ಸುತ್ತಾಡಿ ಯಶೋಗಾಥೆಗಳನ್ನು ದಾಖಲಿಸುತ್ತದೆ. ಮಳೆಕೊಯ್ಲು, ಮಣ್ಣಿನ ಕಟ್ಟ, ಪ್ಲಾಸ್ಟಿಕ್ ಚೀಲದ ವನರಾಯ್ ಬಂಧಾರ, ಕೃಷಿ ಹೊಂಡ, ಬಿಡಿ ಕಲ್ಲಿನ ಕಟ್ಟ ಮೊದಲಾದ ಪ್ರತ್ಯಕ್ಷ ವಿಚಾರಗಳ ವೀಡಿಯೊಗಳಿವೆ. ಜರುಗಿದ ಸ್ಪರ್ಧೆಗಳ ಮಾಹಿತಿಗಳು, ನೀರಿನ ಸುತ್ತ ಹೆಣೆದ ಕಥಾಮಾಲಿಕೆಗಳೂ ಸೇರಿವೆ.
ಜಮೀನಿನ ಇಳಿಜಾರು ಲೆಕ್ಕಹಾಕಲು, ಕಂಟೂರು ಸಾಲು ಗುರು ತಿಸಲು ಜಲ ಮಾಪಕ ಅವಶ್ಯ. ಕಂಪೆನಿಯ ಮಾಪಕದ ಬೆಲೆಯು ದುಬಾರಿ. ಅಲ್ಪವೆಚ್ಚದಲ್ಲಿ ಜಲ ಮಾಪಕವನ್ನು ಹೇಗೆ ಮಾಡಬ ಹುದು ಎನ್ನುವ ಬಗೆಗಾಗಿ ಒಂದು ವೀಡಿಯೋವನ್ನು ಫೌಂಡೇಶನ್ ಮಾಡಿದೆ. ಇದು ಹಳ್ಳಿಗರ ಸ್ವೀಕೃತಿ ಪಡೆದಿದೆ. ಮೊಬೈಲ್ ಆ್ಯಪ್ ರೂಪಿಸಿದ್ದು, ಇದರಲ್ಲಿ ಜಲಾನಯನ ಅಭಿವೃದ್ಧಿಯ ಸಚಿತ್ರ ಮಾಹಿತಿಗಳಿವೆ. ಸ್ಪರ್ಧೆಯ ಅವಧಿಯಲ್ಲಿ ಬೇರೆಡೆ ನಡೆದ ನೀರಿನ ಕೆಲಸಗಳ ವೀಡಿಯೋಗಳನ್ನು ತೋರಿಸಲಾಗುತ್ತದೆ.
ಡಾ| ಅವಿನಾಶ್ ಪೋಲ್ ಪೌಂಡೇಶನ್ನಿನ ಟ್ರಸ್ಟಿ. ಹಳ್ಳಿಗರನ್ನು ಮಾನಸಿಕವಾಗಿ ರೂಪುಗೊಳಿಸಲು ಬೇಕಾದ ಸ್ಯಾಟಲೈಟ್ ಸಹಾಯದ ವೀಡಿಯೋ ಕಾನ್ಫರೆನ್ಸ್ ಗ್ರಾಮಸಭಾ ಮಾಡುತ್ತಿದ್ದಾರೆ. ಒಂದು ಗಂಟೆಯಲ್ಲಿ ಸಾವಿರಾರು ಮಂದಿಯ ಜತೆ ಮಾತುಕತೆ ನಡೆಸಿ ಹಳ್ಳಿಗರನ್ನು ಉತ್ತೇಜಿಸುತ್ತಾರೆ. ಅವರೊಂದಿಗೆ ಸಂವಹನವನ್ನು ಮಾಡುತ್ತಿದ್ದಾರೆ. ಸಂಶಯಗಳನ್ನು ಪರಿಹರಿಸುತ್ತಾರೆ. ಈ ರೀತಿಯ ಗ್ರಾಮಸಭಾಕ್ಕೆ ವಿವಿಧ ಸಂಸ್ಥೆಗಳು ಹೆಗಲೆಣೆ ನೀಡುತ್ತಿವೆ. ನಿಮ್ಮೂರ ಸಂಕಟಕ್ಕೆ ನೀವು ಕೆಲಸ ಮಾಡಿ. ಫಲಿತಾಂಶ ನಿಚ್ಚಳ ಎಂಬ ನಂಬಿಕೆಯನ್ನು ಮೂಡಿಸುತ್ತಿದ್ದಾರೆ.
ವಿಜಯಿ ತಂಡದ ಆಯ್ಕೆಯ ಮಾನದಂಡ ಹೇಗೆ? ಶ್ರಮದಾನಕ್ಕೆ ಮೂವತ್ತೆçದು ಅಂಕ, ಜನಸಹಭಾಗಿತ್ವಕ್ಕೆ ಹತ್ತು, ಹೊಸ ಹೊಳಹಿಗೆ ಐದು ಹೀಗೆ ಐವತ್ತು ಅಂಕಗಳು. ಮಳೆ ಸುರಿಯುವ ಲೆಕ್ಕ, ಯಾವ ಬೆಳೆಗೆ ಎಷ್ಟು ನೀರು, ಜನ-ಜಾನುವಾರುಗಳಿಗೆ ಎಷ್ಟು ಮೊದಲಾದ ವಾಟರ್ ಬಜೆಟ್‌ಗೆ ಹತ್ತು ಅಂಕಗಳು. ಕಳೆದ ವರ್ಷ ಸ್ಪರ್ಧೆಯು ಮೂರು ತಾಲೂಕುಗಳಿಗೆ ಸೀಮಿತವಾಗಿತ್ತು. ನೂರ ಹದಿನಾರು ಬರಪೀಡಿತ ಗ್ರಾಮಗಳು ಭಾಗವಹಿಸಿದ್ದವು. ವೇಲು ಗ್ರಾಮಕ್ಕೆ ಮೊದಲ ಪ್ರಶಸ್ತಿ ಐವತ್ತು ಲಕ್ಷ ರೂಪಾಯಿಯ ಬಾಗಿನ. ಬಹುಮಾನ ಪ್ರದಾನಿಸಿದ ಮುಖ್ಯಮಂತ್ರಿಗಳಿಂದ ಇಪ್ಪತ್ತೆçದು ಲಕ್ಷ ಮತ್ತು ಸರಕಾರೇತರ ಸಂಸ್ಥೆಯೊಂದರಿಂದ ಐದು ಲಕ್ಷ ರೂಪಾಯಿ ನೀಡಿ ವೇಲು ಗ್ರಾಮವನ್ನು ಪುರಸ್ಕರಿಸಿದ್ದರು.
ವೇಲು ಒಂದು ಕುಗ್ರಾಮ. ಹಿಂದಿನ ವರ್ಷ ಜೂನಿನಲ್ಲಿ ಬಿದ್ದ ಮಳೆ ಮೂರು ಸೆಂಟಿಮೀಟರ್. ಜಲಸಂರಕ್ಷಣೆಯ ಕಾಯಕದ ಪರಿಣಾಮವಾಗಿ ಬತ್ತಿದ ಬಾವಿಗಳಲ್ಲಿ ನೀರು ಜಿನುಗಿತ್ತು. ಎರಡು ದಶಕದ ನೀರಿನ ಬವಣೆಗೆ ತಿಲಾಂಜಲಿ. ಜನರೇ ತಂದುಕೊಂಡ ಸ್ವಾತಂತ್ರÂ. ಡಾ|ಅವಿನಾಶ್ ಹೇಳುತ್ತಾರೆ, “”ಸ್ಪರ್ಧೆಯಲ್ಲಿ ಭಾಗವ ಹಿಸಿದ ಹಳ್ಳಿಗಳಲ್ಲಿ ಶೇ. 80ರಷ್ಟು ನೀರಿನ ನಿರ್ವಹಣೆಯನ್ನು ಟ್ಯಾಂಕರ್ ಇಲ್ಲದೆ ಮಾಡಿಕೊಂಡಿವೆ. ಅಲ್ಲಿನ ರಚನೆಗಳಿಂದ ಒಂದು ಸಾವಿರದ ಮುನ್ನೂರ ಅರುವತ್ತೆಂಟು ಕೋಟಿ ಲೀಟರ್ ನೀರು ಹಿಡಿದಿಟ್ಟುಕೊಳ್ಳಲು ಸಾಧ್ಯವಾಯಿತು. ಅಂದರೆ 13,68,000 ಟ್ಯಾಂಕರ್. ಇಷ್ಟು ನೀರಿನ ಆರ್ಥಿಕ ಮೌಲ್ಯ 272 ಕೋಟಿ ರೂಪಾಯಿ!”
“”ಕರ್ನಾಟಕ ಇಂದು ಸಾಮೂಹಿಕ ಜಲ ಸಾಕ್ಷರತೆಯಲ್ಲಿ ದಕ್ಷಿಣ ಭಾರತದಲ್ಲೇ ಅತ್ಯಂತ ಹಿಂದಿದೆ. ಕನ್ನಾಡು ಜಲ ಸಾಕ್ಷರವಾದರೆ ಅದೆಷ್ಟೋ ಬವಣೆ ಕಳೆಯಲು ಸಾಧ್ಯ. ನಾನೂರು ಮಿಲ್ಲಿಮೀಟರ್ ಮಳೆಯಲ್ಲೂ ನೆಮ್ಮದಿ ಉಳಿಸುವ ದಾರಿಯನ್ನು ನೆರೆಯ ಮಹಾ ರಾಷ್ಟ್ರದಲ್ಲಿ ಪಾನಿ ಪೌಂಡೇಶನ್ ಮಾಡಿ ತೋರಿಸುತ್ತಿದೆ. ನೀರ ನೆಮ್ಮದಿಯ ಮಾದರಿಗೆ ನಮ್ಮ ಆಡಳಿತ ಒಮ್ಮೆ ಅತ್ತ ಕಡೆ ಕತ್ತು ತಿರುಗಿಸಿ ನೋಡುವಂತಾಗಲಿ ” ಎನ್ನುವ ಆಶಯ ಜಲ ತಜ್ಞ ಶ್ರೀ ಪಡ್ರೆಯವರದು. ಪಾನಿ ಫೌಂಡೇಶನ್ನಿನ ಟ್ರಸ್ಟಿ ಡಾ|ಅವಿನಾಶ್ ಪೋಲ್ ಜತೆಗೆ ಮಹಾರಾಷ್ಟ್ರದ ಜಲಸಂರಕ್ಷಣೆಯ ಕಾಯಕವನ್ನು ಸ್ವತಃ ವೀಕ್ಷಿಸಿದ್ದಾರೆ.
“”ಇದು ತಳಮಟ್ಟದ ಆಂದೋಲನ. ಪಾನಿ ಫೌಂಡೇಶನಿನ ಪ್ರಯೋಗದಲ್ಲಿ ಮಿತಿಗಳಿವೆ. ಪ್ರಶ್ನೆ ಹುಟ್ಟಿಸುವ ಅಂಶ ಇಲ್ಲವೆಂದಲ್ಲ. ಜವಾಬ್ದಾರಿ ಹೊತ್ತಿರುವವರ ಆತ್ಮಾರ್ಥತೆ, ಯೋಜನೆ ರೂಪಿಸಿದ ಅನನ್ಯ ರೀತಿಗಳ ಎದುರು ಅವುಗಳು ನಗಣ್ಯ. ಇವರಿಂದಾಗಿ ದೇಶ ಕ್ಕೊಂದು ಹೊಚ್ಚ ಹೊಸ, ಫಲಿತಾಂಶ ನಿರ್ದೇಶಿತ, ಜನ ಕೇಂದ್ರಿತ ಜಲಾನಯನ ಮಾದರಿ ಸಿಕ್ಕಂತಾಗಿದೆ” ಎನ್ನುತ್ತಾರೆ ಶ್ರೀಪಡ್ರೆ.
ಎರಡು ದಶಕದ ಹಿಂದೆಯೇ ಅಡಿಕೆ ಪತ್ರಿಕೆಯ ಮೂಲಕ ಜಲಕ್ಕೆ ದನಿಯೆತ್ತಿದವರು. ಅದನ್ನು ಆಲಿಸಿದ ಅನೇಕ ಜಲಪ್ರಿಯರು ಕನ್ನಾಡಿನಾದ್ಯಂತ ಜಲಸಾಕ್ಷರತೆಯನ್ನು ಹಬ್ಬಿಸುತ್ತಿದ್ದಾರೆ. “”ಪ್ರತಿ ಜಿಲ್ಲೆಯಲ್ಲೊಂದು ಮಳೆ ಕೇಂದ್ರ ತೆರೆಯಿರಿ. ಇದು ಆಯಾಯ ಜಿಲ್ಲೆಯ ನಗರ ಹಳ್ಳಿಗಳಲ್ಲಿ ಜಲಸಂರಕ್ಷಣೆ ಮಾಡುವ ಪರಿಯನ್ನು ಮನದಟ್ಟು ಮಾಡಿಕೊಡುವ ಮಾಹಿತಿ ಕೇಂದ್ರವಾಗಲಿ,” ಕನ್ನಾಡ ಜಲಕಾರ್ಯಕರ್ತರು ಸರಕಾರದೊಂದಿಗೆ ಮಾಡುತ್ತಾ ಬಂದಿರುವ ವಿನಂತಿಯಿದು. ಜಲಕ್ಷಾಮದಿಂದ ಕನ್ನಾಡಿನ ಹಳ್ಳಿ, ನಗರಗಳು ತತ್ತರಿಸುತ್ತಿದ್ದರೂ ನಮ್ಮ ನಾಯಕರಿಗೆ ಸ್ಪಂದಿಸುವ ಔದಾರ್ಯ ಯಾಕೋ ಕಡಿಮೆ. ಅವರಿಗೆ ಗ್ರಾಮೀಣ ಭಾರತದ ಸುಸ್ಥಿರತೆ ಬೇಕಾಗಿಲ್ಲ. ಕರಾವಳಿಯ ಪಶ್ಚಿಮ ವಾಹಿನಿಯನ್ನು ತಿರುಗಿಸುವ, ಪಾತಾಳ ಗಂಗೆಗೆ ಕನ್ನ ಹಾಕುವ, ಮೋಡ ಬಿತ್ತನೆ ಮಾಡಲು ಬೇಕಾದ ಒಳ ಸುರಿಗಳನ್ನು ಹೊಂದಿದ ಯೋಜನೆಗಳಿಗೆ ಅನುಮೋದನೆಯನ್ನು ತಕ್ಷಣ ಕೊಡಿಸುವತ್ತ ಧಾವಂತ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.